Vishweshwar Bhat Column: ಪದಕ ವಿಜೇತರ ಮನಸ್ಥಿತಿ
ಬೆಳ್ಳಿ ಪದಕ ವಿಜೇತರು ಮತ್ತು ಕಂಚಿನ ಪದಕ ವಿಜೇತರ ಮನಸ್ಥಿತಿ ಬಗ್ಗೆ ನಡೆಸಿದ ಸಮೀಕ್ಷೆಯೂ ಈ ಸಂಗತಿಯನ್ನು ಸಾಬೀತುಪಡಿಸಿದೆ. ಸ್ವಾಭಾವಿಕವಾಗಿ, ಮೂರನೇ ಸ್ಥಾನ ಪಡೆದವರಿಗಿಂತ, ಎರಡನೇ ಸ್ಥಾನ ಪಡೆದವರು ಹೆಚ್ಚು ಖುಷಿಯಲ್ಲಿರಬೇಕು ತಾನೇ? ಕಂಚಿನ ಪದಕ ಪಡೆದವರಿಗಿಂತ, ಬೆಳ್ಳಿ ಪದಕ ಪಡೆದವರು ಹೆಚ್ಚು ಖುಷಿಯಲ್ಲಿರಬೇಕಾದುದು ಸಹಜ ತಾನೇ? ಆದರೆ ಮನುಷ್ಯನ ಮನಸ್ಸು ಗಣಿತದ ಲೆಕ್ಕಾಚಾರದಂತೆ ಕೆಲಸ ಮಾಡುವುದಿಲ್ಲ
ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಕೆಲ ದಿನಗಳ ಹಿಂದೆ ಯೋಗೀಶ್ ಎಂಬುವವರು ನನಗೊಂದು ಚಿಕ್ಕ ಮೆಸೇಜ್ ಕಳಿಸಿದ್ದರು. ಅದರ ಲ್ಲಿದ್ದ ಸಂದೇಶ ಮತ್ತು ಪಾಠ ಮಾತ್ರ ಬಹಳ ದೊಡ್ಡದಾಗಿತ್ತು, ಪರಿಣಾಮಕಾರಿಯಾಗಿತ್ತು. ಒಲಿಂ ಪಿಕ್ ಗೇಮ್ಸ್ ನಲ್ಲಿ ಯಾವತ್ತೂ ಬೆಳ್ಳಿ ಪದಕ (ಎರಡನೇ ಸ್ಥಾನ) ಪಡೆದವಳಿಗಿಂತ, ಕಂಚಿನ ಪದಕ (ಮೂರನೇ ಸ್ಥಾನ) ಪಡೆದವಳು ಹೆಚ್ಚು ಖುಷಿಯಲ್ಲಿರುತ್ತಾಳಂತೆ.
ಇದನ್ನು ನೀವು ಗಮನಿಸಿರಬಹುದು. ಇದು ಕೇವಲ ಗೆದ್ದ ಕ್ರೀಡಾಪಟುಗಳ ನಗುವಿನ ಫೋಟೋ ನೋಡಿ ನಿರ್ಧಾರಕ್ಕೆ ಬಂದಿದ್ದಲ್ಲ. ಈ ವಿಷಯದ ಬಗ್ಗೆ ಮಾಡಿದ ಸಂಶೋಧನೆಯಿಂದಲೂ ಈ ಸಂಗತಿ ದೃಢಪಟ್ಟಿದೆ. ಬೆಳ್ಳಿ ಪದಕ ವಿಜೇತರು ಮತ್ತು ಕಂಚಿನ ಪದಕ ವಿಜೇತರ ಮನಸ್ಥಿತಿ ಬಗ್ಗೆ ನಡೆ ಸಿದ ಸಮೀಕ್ಷೆಯೂ ಈ ಸಂಗತಿಯನ್ನು ಸಾಬೀತುಪಡಿಸಿದೆ. ಸ್ವಾಭಾವಿಕವಾಗಿ, ಮೂರನೇ ಸ್ಥಾನ ಪಡೆ ದವರಿಗಿಂತ, ಎರಡನೇ ಸ್ಥಾನ ಪಡೆದವರು ಹೆಚ್ಚು ಖುಷಿಯಲ್ಲಿರಬೇಕು ತಾನೇ? ಕಂಚಿನ ಪದಕ ಪಡೆ ದವರಿಗಿಂತ, ಬೆಳ್ಳಿ ಪದಕ ಪಡೆದವರು ಹೆಚ್ಚು ಖುಷಿಯಲ್ಲಿರಬೇಕಾದುದು ಸಹಜ ತಾನೇ? ಆದರೆ ಮನುಷ್ಯನ ಮನಸ್ಸು ಗಣಿತದ ಲೆಕ್ಕಾಚಾರದಂತೆ ಕೆಲಸ ಮಾಡುವುದಿಲ್ಲ.
ಇದನ್ನೂ ಓದಿ: Vishweshwar Bhat Column: ಜಪಾನಿನಲ್ಲಿ ಅಕ್ಕಿ- ಮೀನು
ಆದರೆ ಮನುಷ್ಯನ ಮಿದುಳು ’ಪ್ರತಿವಾಸ್ತವ ರೂಪ’ದಲ್ಲಿ ಕೆಲಸ ಮಾಡುತ್ತದೆ. ಬೆಳ್ಳಿ ಪದಕಗಳಿಸಿದ ಕ್ರೀಡಾಪಟು ಸದಾ ಒಂದು ರೀತಿಯ ಕೊರಗು, ಖಿನ್ನತೆಯಲ್ಲಿರುತ್ತಾನೆ. ಅವರಲ್ಲಿ ಸೋತ ಭಾವ ಯಾವತ್ತೂ ಮಡುಗಟ್ಟಿರುತ್ತದೆ. ‘ನನಗೆ ಬಂಗಾರದ ಪದಕ ಪಡೆಯಲು ಆಗಲಿಲ್ಲವ’ ಎಂಬ ಬೇಸರ ಅವರನ್ನು ಯಾವತ್ತೂ ಕಾಡುತ್ತಲೇ ಇರುತ್ತದೆ. ತಾನು ಬಂಗಾರದ ಪದಕ ಪಡೆದ ಕ್ರೀಡಾಪಟುವಿನ ಮುಂದೆ ಸೋತವ ಎಂಬ ಭಾವನೆ ಇನ್ನೂ ಗಾಢವಾಗಿ ಕಾಡುತ್ತಲೇ ಇರುತ್ತದೆ.
ಆದರೆ ಕಂಚಿನ ಪದಕ ಗೆದ್ದು ಮೂರನೇ ಸ್ಥಾನ ಪಡೆದವರಿಗೆ, ತಾನು ಕೊನೆಗೂ ಗೆದ್ದವನು ಎಂಬ ಸಂತೋಷ ಮನಸ್ಸಿನಲ್ಲಿ ಮನೆ ಮಾಡಿರುತ್ತದೆ. ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದವರಿಗೆ, ಎಷ್ಟೆಂದರೂ ತಾನು ಬಂಗಾರದ ಪದಕ ವಿಜೇತ ಕ್ರೀಡಾಪಟುವಿನ ಮುಂದೆ ಪರಾಭವ ಹೊಂದಿದವ ಎಂಬ ಕೀಳರಿಮೆ ಸದಾ ಕಾಡುತ್ತಲೇ ಇರುತ್ತದೆ. ಇಲ್ಲಿ ಗಮನಿಸಿದ ಬೇಕಾದ ಮುಖ್ಯ ಸಂಗತಿಯೇ ನೆಂದರೆ, ಒಲಿಂಪಿಕ್ ಗೇಮ್ಸನಲ್ಲಿ, ಸೋತು ಬೆಳ್ಳಿ ಪದಕ ಪಡೆಯುತ್ತಾರೆ ಮತ್ತು ಗೆದ್ದು ಕಂಚಿನ ಪದಕ ಪಡೆಯುತ್ತಾರೆ.
ಬೆಳ್ಳಿ ಪದಕ ಪಡೆದರೂ, ಮೊದಲ ಸ್ಥಾನ ಪಡೆದವರ ಮುಂದೆ ಸೋತವ ಎಂಬ ಕಹಿ ಭಾವ ಯಾವ ತ್ತೂ ಸುಡುತ್ತಲೇ ಇರುತ್ತದೆ. ಆದರೆ ಕಂಚಿನ ಪದಕ ಪಡೆದವರಿಗೆ, ಮೂರನೇ ಸ್ಥಾನ ಬಂದರೇ ನಂತೆ, ತಾನು ಗೆದ್ದವ ಎಂಬ ಹಿರಿಮೆ, ಗರ್ವ ಇರುತ್ತದೆ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ನಮಗೆ ಚೆಂದದ ಮನೆ, ಸಂಸಾರ, ಆಸ್ತಿ, ಹಣ, ಕಾರು, ಸೌಕರ್ಯಗಳಿದ್ದರೂ ನಾವು ಖುಷಿ ಯಾಗಿರುವುದಿಲ್ಲ.
ನಮ್ಮಲ್ಲಿ ಇಲ್ಲದಿರುವುದನ್ನು ನೆನೆದು ಬೇಸರ ಪಡುತ್ತೇವೆ. ಕನಿಷ್ಠ ಒಂದು ಕಾರು ಇರುವುದಕ್ಕೆ ಸಂತಸಪಡುವುದಿಲ್ಲ. ನನ್ನಲ್ಲಿ ಬೆಂಜ್ ಕಾರು ಇಲ್ಲವಲ್ಲ ಎಂದು ಕೊರಗುತ್ತೇವೆ. ಎರಡು ಕಾಲುಗಳು ಇಲ್ಲದವರನ್ನು ನೋಡಿ ಮರುಗುತ್ತೇವೆ. ಆದರೆ ನನಗೆ ದೇವರು ಎರಡು ಕಾಲುಗಳನ್ನು ಸಶಕ್ತವಾಗಿ ಕೊಟ್ಟಿದ್ದೇನಲ್ಲ ಎಂದು ಸಂತಸ ಪಡುವುದಿಲ್ಲ. ತಾನು ಕಾಲಿಲ್ಲದವರಿಗಿಂತ ಉತ್ತಮ ಸ್ಥಿತಿಯಲ್ಲಿ ಇದ್ದೇನೆ ಎಂಬ ಸಮಾಧಾನ ಭಾವ ಎಂದೂ ಅವರಲ್ಲಿ ಮನೆ ಮಾಡಿರುವುದಿಲ್ಲ.
ನಮ್ಮಲ್ಲಿರುವ ಉತ್ತಮ ಸಂಗತಿಗೆ ಖುಷಿಪಡುವುದಕ್ಕಿಂತ, ಇಲ್ಲದಿರುವ ಒಂದೆರಡು ನ್ಯೂನತೆಗಳಿಗೆ ತಲೆಕೆಡಿಸಿಕೊಳ್ಳುತ್ತೇವೆ. ದೊಡ್ಡ ಸೋಲುಗಳಿಗಿಂತ, ಜೀವನದಲ್ಲಿ ಯಾವತ್ತೂ ಸಣ್ಣ ಸಣ್ಣ ಗೆಲುವು ಗಳು ಹೆಚ್ಚು ಖುಷಿ ಕೊಡುತ್ತವೆ. ಜೀವನದಲ್ಲಿ ಯಾವತ್ತೂ ಸೋಲು ಸೋಲೇ ಮತ್ತು ಗೆಲುವು ಗೆಲುವೇ.