Vishweshwar Bhat Column: ಪರಿಪೂರ್ಣತೆಗೊಂದು ನೆಪ
ಕೆಲವರು ಅರವತ್ತು ವರ್ಷಗಳಿಂದ ಒಂದೇ ಬ್ರಾಂಡಿನ ಕನ್ನಡಕ, ಬೆಲ್ಟ್, ಶೂ, ವಾಚ್, ಪೆನ್ನು ಗಳನ್ನು ಬಳಸುವುದು ಈ ಕಾರಣಕ್ಕೆ. ಜಗತ್ಪ್ರಸಿದ್ಧ ಪೇಂಟರ್ (ಚಿತ್ರ ಕಲಾವಿದ) ಪ್ಯಾಬ್ಲೋ ಪಿಕಾಸೋ ಈ ವಿಷಯದಲ್ಲಿ ಮಹಾ ತಿಕ್ಕಲನಾಗಿದ್ದನಂತೆ. ಫ್ರಾನ್ಸಿನಲ್ಲಿ ಆತನಿಗೆ ಕ್ಯಾನ್ವಾ ಸುಗಳನ್ನು ಸರಬರಾಜು ಮಾಡುವ ಒಂದು ಅಂಗಡಿಯಿತ್ತು.


ಸಂಪಾದಕರ ಸದ್ಯಶೋಧನೆ
ನನಗೆ ಎಲ್ಲ ಬಿಳಿ ಕಾಗದದ ಮೇಲೆ ಬರೆಯಲು ಬರುವುದಿಲ್ಲ. ಬಿಳಿ ಕಾಗದದಲ್ಲೂ ಒಂದು ವರ್ಗವಿದೆ. ಕರೆನ್ಸಿ ನೋಟನ್ನು ಬೆಳಕಿಗೆ ಹಿಡಿದರೆ, ಬರಿಗಣ್ಣಿಗೆ ಅಗೋಚರವಾದ ಒಂದು ಗೆರೆ ಕಾಣುತ್ತದಲ್ಲ, ಹಾಗೆಯೇ ಪ್ರತಿ ಕಾಗದಕ್ಕೂ ಇಂಥದೇ ಕಣ್ಣಿಗೆ ಕಾಣದ ಎಳೆಗಳಿರುತ್ತವೆ. ಈ ಎಳೆಗಳು ಅಡ್ಡವಾಗಿರಬೇಕು. ಆಗ ಬರೆಯಲು ಸುಲಭವಾಗಿರುತ್ತವೆ. ಅಕ್ಷರಗಳು ನೀವು ಹೇಳಿ ದಂತೆ ಸುಲಲಿತವಾಗಿ ಓಡುತ್ತಾ ಮೂಡುತ್ತವೆ. ಅದೇ ಈ ಎಳೆಗಳು ಹಾಳೆಗಳಿಗೆ ಉದ್ದವಾಗಿ ದ್ದರೆ ( vertical) ಅಕ್ಷರ ನೀವು ಅಂದುಕೊಂಡ ಹಾಗೆ ಮೂಡುವುದಿಲ್ಲ. ಕಾಗದಲ್ಲಿರುವ ಈ ಅಗೋಚರ ಎಳೆಗಳು ನಮ್ಮ ಹಸ್ತಾಕ್ಷರಗಳಿಗೆ ಒಂದು base ಕಟ್ಟಿಕೊಡುತ್ತವೆ.
ಹೀಗಾಗಿ ಕಾಗದಗಳನ್ನು ಖರೀದಿಸುವಾಗ, ಈ ಎಳೆಗಳು ಉದ್ದವಾಗಿಯೋ, ಅಡ್ಡವಾಗಿ ವೆಯೋ ಎಂಬುದನ್ನು ಪಕ್ಕಾ ಮಾಡಿಕೊಳ್ಳಬೇಕು. ಒಮ್ಮೆ ಈ ಹದ ಸಿಕ್ಕರೆ, ನಮಗೆ ಅರಿವಿಲ್ಲ ದಂತೆ, ಕೈಬರಹ ಸರಾಗವಾಗುತ್ತದೆ. ಇದನ್ನು ಸೂಕ್ಷವಾಗಿ ಗಮನಿಸಿದರೆ ನಿಮಗೆ ಗೊತ್ತಾಗು ತ್ತದೆ.
ಇದನ್ನೂ ಓದಿ: Vishweshwar Bhat Column: ಫುಟ್ಬಾಲ್ ಆಟಗಾರನ ದಾರುಣ ಅಂತ್ಯ
ವಿರಾಟ್ ಕೊಹ್ಲಿಗೆ ಎಲ್ಲ ಬ್ಯಾಟುಗಳನ್ನು ಕೊಟ್ಟರೆ ಆಡಲಾಗುವುದಿಲ್ಲ. ಅವರಿಗೆ ಬ್ಯಾಟಿ ನೊಂದಿಗೆ ಒಂದು ಹಿಡಿತ ಏರ್ಪಟ್ಟಿರುತ್ತದೆ. ಆ ಬ್ಯಾಟಿನೊಂದಿಗೆ ಮಾತ್ರ ಅವರಿಗೆ comfort ಏರ್ಪಟ್ಟಿರುತ್ತದೆ. ಹೀಗಾಗಿ ಪ್ರತಿ ಆಟಗಾರರು ತಮ್ಮ ಬ್ಯಾಟಿನೊಂದಿಗೆ ಮಾತ್ರ ಆಡುವು ದನ್ನು ಗಮನಿಸಿರಬಹುದು. ಒಂದೇ ಇನ್ನಿಂಗ್ಸ್ ನಲ್ಲಿ ಕೆಲವು ಸಲ ಬ್ಯಾಟ್ ಬದಲಿಸುವು ದನ್ನು ನೋಡಿರಬಹುದು.
ಕ್ರಿಸ್ ಗೇಯ್ಲರ ಬ್ಯಾಟ್ ಹಿಡಿದು ಆಡು ಅಂದರೆ ರಿಷಬ್ ಪಂತ್‌ಗೆ ಆಗಲಿಕ್ಕಿಲ್ಲ. ತಮ್ಮ ಬ್ಯಾಟಿ ನೊಂದಿಗೆ ಪ್ರತಿ ಆಟಗಾರನಿಗೂ ಒಂದು ಬಂಧ ಏರ್ಪಟ್ಟಿರುತ್ತದೆ. ಟೇಲರ್ ವಿಷಯದಲ್ಲೂ ಅನೇಕರದು ಇದೇ ಅಭಿಪ್ರಾಯ. ನಾವು ಧರಿಸುವ ಬಟ್ಟೆಯನ್ನು ನಮಗೆ ಇಷ್ಟದ ಟೇಲರ್ ನಿಂದ ಹೊಲಿಸಿ, ಧರಿಸಿದರೇ ಸಮಾಧಾನ. ಡಾ.ಕರಣ್ ಸಿಂಗ್ ಕಳೆದ ಐವತ್ತು ವರ್ಷಗಳಿಂದ ದಿಲ್ಲಿಯ ‘ದಿವಾನ್ ಸಾಹೇಬ’ ಎಂಬ ಟೇಲರ್ ಹೊಲಿದ ಉಡುಪುಗಳನ್ನೇ ಧರಿಸುತ್ತಾರಂತೆ.
ಬೇರೆ ಯಾರೇ ಹೊಲಿದರೂ ಅವರಿಗೆ ಸಮಾಧಾನವಾಗುವುದಿಲ್ಲವಂತೆ. ಸಿನಿಮಾ ನಟ, ನಟಿಯರೂ ಈ ವಿಷಯದಲ್ಲಿ ಹೀಗೆ. ಅವರೂ ಟೇಲರ್ ಪಕ್ಷಪಾತಿ. ಕೆಲವರಂತೂ ತಮಗೆ ಬೇಕಾದ ಫ್ಯಾಷನ್ ಡಿಸೈನರ್ ಗಳನ್ನು ಇಟ್ಟುಕೊಂಡಿರುತ್ತಾರೆ. ಕಾರಣ ಇಷ್ಟೇ, ಅವರಿಗೆ ಆ ದಿರಿಸು ಹಾಕಿದಾಗ ಕಂಫರ್ಟ್ ಅನಿಸುತ್ತದೆ.
ಕೆಲವರು ಅರವತ್ತು ವರ್ಷಗಳಿಂದ ಒಂದೇ ಬ್ರಾಂಡಿನ ಕನ್ನಡಕ, ಬೆಲ್ಟ್, ಶೂ, ವಾಚ್, ಪೆನ್ನು ಗಳನ್ನು ಬಳಸುವುದು ಈ ಕಾರಣಕ್ಕೆ. ಜಗತ್ಪ್ರಸಿದ್ಧ ಪೇಂಟರ್ (ಚಿತ್ರ ಕಲಾವಿದ) ಪ್ಯಾಬ್ಲೋ ಪಿಕಾಸೋ ಈ ವಿಷಯದಲ್ಲಿ ಮಹಾ ತಿಕ್ಕಲನಾಗಿದ್ದನಂತೆ. ಫ್ರಾನ್ಸಿನಲ್ಲಿ ಆತನಿಗೆ ಕ್ಯಾನ್ವಾ ಸುಗಳನ್ನು ಸರಬರಾಜು ಮಾಡುವ ಒಂದು ಅಂಗಡಿಯಿತ್ತು.
ಆತ ಪಿಕಾಸೋಗಾಗಿ ವಿಶೇಷ ಕ್ಯಾನ್ವಾಸುಗಳನ್ನು ಮಾಡಿ ಕಳುಹಿಸುತ್ತಿದ್ದ. ಒಮ್ಮೆ ಕ್ಯಾನ್ವಾಸ್ ಅಂಗಡಿಯವ ಕಾಯಿಲೆ ಬಿzಗ, ಸುಮಾರು ಆರು ತಿಂಗಳ ತನಕ ಪಿಕಾಸೋ ಚಡಪಡಿಸಿದ್ದ. ಒಂದು ವೇಳೆ ತನಗೆ ಕ್ಯಾನ್ವಾಸ್ ಪೂರೈಸುವವ ಸತ್ತೇ ಹೋದರೆ, ಮುಂದೆ ಪೇಂಟಿಂಗ್ ಮಾಡುವುದು ಹೇಗೆ ಎಂದು ಪಿಕಾಸೋ ಚಿಂತಿಸುತ್ತಿದ್ದನಂತೆ.
ಅದೃಷ್ಟವಶಾತ್ ಆತ ಚೇತರಿಸಿಕೊಂಡ. ಪಿಕಾಸೋ ನಿಟ್ಟುಸಿರುಬಿಟ್ಟ. ಇವೆಲ್ಲ ಹೆಚ್ಚು ಗಾರಿಕೆಯಲ್ಲ. ಇದೂ ಒಂದು ರೀತಿಯ ಮಾನಸಿಕತೆ. ತಮ್ಮ ಕೆಲಸದಲ್ಲಿ ಪರಿಪೂರ್ಣತೆ ತಂದುಕೊಳ್ಳಲು ಬಯಸುವವರು ಕಂಡುಕೊಳ್ಳುವ ಒಂದು ನೆಪ. ಒಂದು ವೇಳೆ ಆ ಕ್ಯಾನ್ವಾಸ್ ಬಟ್ಟೆಗಳನ್ನು ಪೂರೈಸುತ್ತಿದ್ದ ವ್ಯಾಪಾರೀ ಸತ್ತೇ ಹೋಗಿದ್ದರೆ, ಪಿಕಾಸೋ ಚಿತ್ರ ಬಿಡಿಸುವುದನ್ನು ನಿಲ್ಲಿಸಿಬಿಡುತ್ತಿದ್ದನಾ? ಸಾಧ್ಯವೇ ಇಲ್ಲ. ಇಂಥ ನೆಪಗಳು ಇರಬೇಕು. ಇವು ನಮ್ಮಂದು ಶಿಸ್ತು, ಮಾನಸಿಕ ಹದವನ್ನು ರೂಪಿಸುತ್ತವೆ.