Vishweshwar Bhat Column: ಫುಟ್ಬಾಲ್ ಆಟಗಾರನ ದಾರುಣ ಅಂತ್ಯ
ಪಂದ್ಯ ಮುಗಿದ ಬಳಿಕ ನನ್ನ ಮೊಬೈಲಿನಲ್ಲಿದ್ದ ಆ ಅಧ್ಯಾಯವನ್ನು ಓದಿದೆ. ಯಾಕೋ ಬೇಸರ ವಾಯಿತು. ಅದು ಲೂಸಿಯಾನೊ ರೇ ಚೆಕ್ಕಾನಿ ಎಂಬ ಒಬ್ಬ ಪ್ರತಿಭಾವಂತ ಫುಟ್ಬಾಲ್ ಆಟಗಾ ರನ ದುರಂತ ಕತೆ. ಆತ ಇಟಲಿಯ ಲಾಜಿಯೋ ಎಂಬ ಫುಟ್ಬಾಲ್ ತಂಡದ ಪರವಾಗಿ ಆಡುತ್ತಿದ್ದ. ಆ ತಂಡದ ಪ್ರಮುಖ ಆಟಗಾರರ ಪೈಕಿ ಒಬ್ಬನಾಗಿದ್ದ ಲೂಸಿಯಾ ನೊ, ಬಿರುಸಿನ ನಿರಂತರ ಓಟಕ್ಕೆ ಹೆಸರುವಾಸಿಯಾಗಿದ್ದ


ನಾನು ಕತಾರಿನಲ್ಲಿ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯ ನೋಡಲು ಹೋಗಿದ್ದಾಗ, ನನ್ನ ಪಕ್ಕದಲ್ಲಿ ಕುಳಿತಿದ್ದ ಹಾಂಗ್‌ಕಾಂಗ್ ಫುಟ್ಬಾಲ್ ಪ್ರೇಮಿಯೊಬ್ಬ, ಆ ಜನಜಂಗುಳಿಯಲ್ಲೂ ಕೈಯಲ್ಲಿ ಒಂದು ಪುಸ್ತಕ ಹಿಡಿದು ಕುಳಿತಿದ್ದ. ಪಂದ್ಯ ಆರಂಭವಾಗಲು ಇನ್ನೂ ಒಂದು ಗಂಟೆ ಸಮಯವಿತ್ತು. ಪ್ರೇಕ್ಷಕರೆಲ್ಲ ಬಂದು ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಳ್ಳು ತ್ತಿದ್ದರು. ನನ್ನ ಪಕ್ಕದಲ್ಲಿ ಕುಳಿತ ಆ ಕುಡುಮಿ, “ನಾನು ರೆಸ್ಟ್ ರೂಮಿಗೆ ಹೋಗಿ ಬರ್ತೇನೆ, ದಯವಿಟ್ಟು ಈ ಪುಸ್ತಕವನ್ನು ಇಟ್ಟುಕೊಂಡಿರಿ" ಎಂದು ಹೇಳಿದ. ಆತ ಆ ಪುಸ್ತಕವನ್ನು ಕೊಡದಿದ್ದರೂ, ನಾನೇ ಅವನಿಂದ ಕೇಳಿ ಪಡೆದು, ಪುಟ ತಿರುವದೇ ಬಿಡುತ್ತಿರಲಿಲ್ಲ. ಆತ ನಾಗಿಯೇ ಕೊಟ್ಟಿದ್ದು ಒಳ್ಳೆಯದೇ ಆಯಿತು ಎಂದುಕೊಂಡೆ.
ಇದನ್ನೂ ಓದಿ: Vishweshwar Bhat Column: ಇಳಿದು ಬಾ ತಾಯಿ ಇಳಿದು ಬಾ, ಸಂತೇಶಿವರಕ್ಕೆ ಹರಿದು ಬಾ !
ಅದು ಫುಟ್ಬಾಲ್ ಆಟದ ರೋಮಾಂಚಕ, ಮರೆಯಲಾಗದ ಘಟನೆ, ಪ್ರಸಂಗಗಳನ್ನೊಳ ಗೊಂಡ ಒಂದು ಆಸಕ್ತಿದಾಯಕ ಪುಸ್ತಕ. ಆತ ಬರುವುದರೊಳಗೆ ನಾನು ಒಂದು ಪ್ರಸಂಗ ವನ್ನೊಳಗೊಂಡ ಕೆಲವು ಪುಟಗಳನ್ನು, ನಂತರ ಓದಲೆಂದು, ನನ್ನ ಮೊಬೈಲ್‌ನಲ್ಲಿ ಫೋಟೋ ಹಿಡಿದಿಟ್ಟುಕೊಂಡೆ. The tragic story of Lazio's Luciano Re Cecconi ಎಂಬ ಶೀರ್ಷಿಕೆಯೇ ನನ್ನಲ್ಲಿ ಕುತೂಹಲವನ್ನು ಕೆರಳಿಸಿತ್ತು.
ಪಂದ್ಯ ಮುಗಿದ ಬಳಿಕ ನನ್ನ ಮೊಬೈಲಿನಲ್ಲಿದ್ದ ಆ ಅಧ್ಯಾಯವನ್ನು ಓದಿದೆ. ಯಾಕೋ ಬೇಸರವಾಯಿತು. ಅದು ಲೂಸಿಯಾನೊ ರೇ ಚೆಕ್ಕಾನಿ ಎಂಬ ಒಬ್ಬ ಪ್ರತಿಭಾವಂತ ಫುಟ್ಬಾ ಲ್ ಆಟಗಾರನ ದುರಂತ ಕತೆ. ಆತ ಇಟಲಿಯ ಲಾಜಿಯೋ ಎಂಬ ಫುಟ್ಬಾಲ್ ತಂಡದ ಪರವಾಗಿ ಆಡುತ್ತಿದ್ದ. ಆ ತಂಡದ ಪ್ರಮುಖ ಆಟಗಾರರ ಪೈಕಿ ಒಬ್ಬನಾಗಿದ್ದ ಲೂಸಿಯಾ ನೊ, ಬಿರುಸಿನ ನಿರಂತರ ಓಟಕ್ಕೆ ಹೆಸರುವಾಸಿಯಾಗಿದ್ದ. ಮೈದಾನದ ಮಧ್ಯದಿಂದ ಚೆಂಡನ್ನು ಒಬ್ಬನೇ ಬೆನ್ನಟ್ಟಿ, ರಕ್ಷಣೆಯನ್ನು ಭೇದಿಸಿ, ಏಕಾಂಗಿಯಾಗಿ ಗೋಲ್ ತಲುಪಿಸುವ ಅಸಾಧಾರಣ ಸಾಮರ್ಥ್ಯ ಹೊಂದಿದ್ದ. ಆತ ತನ್ನ ತಂಡದ ಪ್ರಮುಖ ಮಿಡ್ ಫೀಲ್ಡರ್ ಕೂಡ ಆಗಿದ್ದ.
ವಿಶಿಷ್ಟ ಕೇಶ ವಿನ್ಯಾಸದಿಂದ ‘ದಿ ಬ್ಲಾಂಡ್ ಏಂಜಲ್’ ಎಂದು ಕರೆಯಿಸಿಕೊಂಡಿದ್ದ. ಆತ ಮಹಾವಾಚಾಳಿ ಮತ್ತು ಹಾಸ್ಯ ಸ್ವಭಾವದವನಾಗಿದ್ದ. ಎದುರಾಳಿ ಆಟಗಾರ ಕುಪಿತ ನಾದಾಗ, ಒಂದು ಹಾಸ್ಯೋಕ್ತಿ, ಚಟಾಕಿ ಸಿಡಿಸಿ ವಾತಾವರಣ ತಿಳಿಗೊಳಿಸುತ್ತಿದ್ದ ಅಥವಾ ನಗೆಯುಕ್ಕಿಸುತ್ತಿದ್ದ. ಹೀಗಾಗಿ ಆತ ಆಟಗಾರರು ಮತ್ತು ಅಭಿಮಾನಿಗಳ ಮಧ್ಯೆ ಜನಪ್ರಿಯ ನಾಗಿದ್ದ.
ಒಮ್ಮೆ ಆತ ತನ್ನ ತಂಡದ ಸಹ ಆಟಗಾರನ ಜತೆ ರೋಮ್ ನಗರದಲ್ಲಿರುವ ಪ್ರಸಿದ್ಧ ಆಭರಣ ಮಳಿಗೆಗೆ ಹೋದ. ಹಾಗಂತ ಆಭರಣವನ್ನು ಖರೀದಿಸುವುದು ಅವರ ಉದ್ದೇಶ ವಾಗಿರಲಿಲ್ಲ. ಸಾಯಂಕಾಲವಾಗುವ ತನಕ ಕಾಲಕ್ಷೇಪ ಮಾಡಬೇಕಿತ್ತು. ತಮಾಷೆ ಪ್ರವೃತ್ತಿ ಯವನಾದ ಲೂಸಿಯಾನೊ, ಆ ಆಭರಣ ಮಳಿಗೆಯಲ್ಲಿ, ತನ್ನ ಜಾಕೆಟನ್ನು ಮುಖಕ್ಕೆ ಎಳೆದುಕೊಂಡು, “ಹ್ಯಾಂಡ್ಸಪ್! ಕದಲಿದರೆ ಹುಷಾರ್! ನಾವು ನಿಮ್ಮ ಮಳಿಗೆಯನ್ನು ದೋಚಲು ಬಂದಿದ್ದೇವೆ" ಎಂದು ಜೋರಾಗಿ ಕೂಗಿದ.
ಅದಕ್ಕಿಂತ ಒಂದು ವಾರ ಮುನ್ನ, ಅದೇ ಆಭರಣ ಮಳಿಗೆ ಮೇಲೆ ದರೋಡೆಕೋರರು ದಾಳಿ ಮಾಡಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಆ ಘಟನೆ ಮರೆಯುವ ಮೊದಲೇ ಮತ್ತೊಂದು ಅಂಥದೇ ಘಟನೆ. ಆ ಮಳಿಗೆಯ ಮಾಲೀಕ ಕಂಗಾಲಾಗಿ ಹೋದ. ತಕ್ಷಣ ಜಾಗೃತನಾದ ಆತ ಪಿಸ್ತೂಲ್ ಹೊರ ತೆಗೆದ. ಇದನ್ನು ಗಮನಿಸಿದ ಲೂಸಿಯಾನೊ ಸ್ನೇಹಿತ, ಎರಡೂ ಕೈಗಳನ್ನು ಮೇಲಕ್ಕೆತ್ತಿ ಶರಣಾಗತಿ ಸೂಚನೆ ನೀಡಿದ. ಆದರೆ ಲೂಸಿಯಾನೊ ಮಾತ್ರ ತನ್ನ ಮಂಗಾಟ ಮುಂದುವರಿಸಿದ. ಇದರಿಂದ ತಲೆಕೆಟ್ಟ ಆ ಮಳಿಗೆಯ ಮಾಲೀಕ, ಲೂಸಿಯಾನೊ ಸನಿಹ ಧಾವಿಸಿದ.
“ಇದು ತಮಾಷೆ! ಇದು ಜೋಕ್!" ಎಂದು ಲೂಸಿಯಾನೊ ಕೂಗಿಕೊಳ್ಳುತ್ತಿರುವುದನ್ನೂ ಲೆಕ್ಕಿಸದೇ ಆ ಮಳಿಗೆಯ ಮಾಲೀಕ, -ಟ್ಬಾಲ್ ಆಟಗಾರನ ಎದೆಗೆ ಸನಿಹದಿಂದ ಗುಂಡು ಹಾರಿಸಿಬಿಟ್ಟ. ಲೂಸಿಯಾನೊ ಅ ಕುಸಿದುಬಿದ್ದು ಅಸುನೀಗಿದ. ತಮಾಷೆ ಮಾಡಲು ಹೋದ 29 ವರ್ಷದ ಭರವಸೆಯ ಫುಟ್ಬಾಲ್ ಆಟಗಾರನೊಬ್ಬನ ಬದುಕು ಯಕಃಶ್ಚಿತವಾಗಿ ಕೊನೆ ಗೊಂಡಿತು.