Roopa Gururaj Column: ಸಿಟ್ಟು ಎರಡು ಬದಿಯ ಗರಗಸದಂತೆ
ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗು ತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗು ತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾ ಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೂ ಕೂಡ ಗಾಯವಾಗುತ್ತದೆ
![anger ok](https://cdn-vishwavani-prod.hindverse.com/media/images/anger_ok.max-1280x720.jpg)
![ರೂಪಾ ಗುರುರಾಜ್](https://cdn-vishwavani-prod.hindverse.com/media/images/Roopa-G.2e16d0ba.fill-100x100.jpg)
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗು ತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗು ತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೂ ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾ ಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿ ಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸ ದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ. ಮರದ ಕೆಲಸ ಮಾಡುವವನಿಗೆ ಆಘಾತ ವಾದರೂ ಒಂದೆರಡು ನಿಮಿಷ ಗಮನಿಸಿದಾಗ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು ಎಂದು ಅರ್ಥವಾಯಿತು.
ಇದನ್ನೂ ಓದಿ: Roopa Gururaj Column: ಭಕ್ತಿಯಿಂದ ಸಮರ್ಪಿಸಿಕೊಂಡಾಗ ಮುಕ್ತಿ ನೀಡುವ ಭಗವಂತ
ಚಿಕ್ಕದಾದರೂ ಜೀವನದಲ್ಲಿ ಬಹುದೊಡ್ಡ ಪಾಠವನ್ನು ನಮಗೆ ಈ ಕಥೆ ನೀಡುತ್ತದೆ. ಜೀವನದಲ್ಲಿ ಸಿಟ್ಟು, ಕೋಪ, ಮನಸ್ತಾಪ ಮನುಷ್ಯ ಸಹಜವಾಗಿ ನಮಗೆ ಮೂಡುತ್ತದೆ. ಬಾಲ್ಯದಿಂದಲೂ ನಮ್ಮ ಹಿರಿಯರು ಮತ್ತೆ ನಮ್ಮ ವಿದ್ಯಾಭ್ಯಾಸ , ನಮ್ಮ ಸಂಸ್ಕಾರ ನಮಗೆ ಈ ಕ್ರೋಧ, ಅನುಮಾನ, ಸಿಟ್ಟು ಇವುಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಬೋಧಿಸುತ್ತಾ ಇರುತ್ತದೆ.
ಅದು ಜೀವನದಲ್ಲಿ ವಿವಿಧ ಹಂತಗಳಲ್ಲಿ ಅನೇಕರಿಂದ ನಮಗೆ ತಿಳಿಯುತ್ತಾ ಹೋಗುತ್ತದೆ. ಬಾಲ್ಯ ದಲ್ಲಿ ಅಥವಾ ಸರಿಯಾದ ಸಮಯದಲ್ಲಿ ನಾವು ಈ ಸಿಟ್ಟನ್ನು ನಮ್ಮ ಅಂಕೆಯಲ್ಲಿ ಇಟ್ಟುಕೊಳ್ಳದೆ ಹೋದರೆ, ಏನೆಲ್ಲಾ ಅವಘಡಗಳಾಗಬಹುದು ಎನ್ನುವುದಕ್ಕೆ ಮೇಲಿನ ಕಥೆ ಒಂದು ಸೂಚ್ಯ ಉದಾಹರಣೆ ಅಷ್ಟೇ.
ಸಿಟ್ಟಿನಿಂದ ಮಾಡಿದ ಕೆಲಸಗಳು ಎಂದು ಸರಿಯಾಗಿ ಆಗುವುದಿಲ್ಲ. ಅನಗತ್ಯವಾಗಿ ಸಿಟ್ಟು ಮಾಡಿ ಕೊಳ್ಳುವುದು ಕೂಗಾಡುವುದು, ಮತ್ತೊಬ್ಬರ ಮೇಲೆ ಹರಿ ಹಾಯುವುದು ಇದರಿಂದ ನಮ್ಮ ಮಾನ ಸಿಕ ದೈಹಿಕ ಆರೋಗ್ಯ ಹಾಳಾಗುತ್ತದೆಯೇ ಹೊರತು, ಹೆಚ್ಚಿನ ಪ್ರತಿಫಲ ಸಿಗುವುದಿಲ್ಲ. ಇದರೊಟ್ಟಿಗೆ ನಮ್ಮ ಸಂಬಂಧಗಳು ಕೂಡ ಹಾಳಾಗುತ್ತಾ ಹೋಗುತ್ತದೆ.
ಸದಾ ಸಿಟ್ಟಿನಲ್ಲಿ ಇರುವವರನ್ನು ಯಾರೂ ಇಷ್ಟಪಡುವುದಿಲ್ಲ. ಹಣ ಅಧಿಕಾರ ಏನೇ ಇದ್ದರೂ ಸಹ ಅದರೊಡನೆ ಸಿಟ್ಟು ಸಹ ಇದ್ದರೆ ನಾವು ಬೇರೆಯ ವರನ್ನು ಹೆದರಿಸಲು ಸಾಧ್ಯ ಆದರೆ ಅವರ ಪ್ರೀತಿ ಯನ್ನು ಗಳಿಸಲು ಸಾಧ್ಯವಿಲ್ಲ. ಮತ್ತೊಬ್ಬರ ಮೇಲೆ ಅನಗತ್ಯವಾಗಿ ಮಾಡಿಕೊಳ್ಳುವ ಸಿಟ್ಟು ನಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಹೆಚ್ಚು ವಿವರಿಸುತ್ತಾ ಹೋಗುತ್ತದೆ.
ಯಾರು ಮಾನಸಿಕವಾಗಿ ಬಹಳ ಕುಗ್ಗಿರುತ್ತಾರೋ, ಅವರ ಜೀವನವನ್ನು ನಿಭಾಯಿಸಲು ಸಾಧ್ಯ ವಿಲ್ಲದೆ ಒದ್ದಾಡುತ್ತಿರುತ್ತಾರೋ ಅಂತಹವರಿಗೆ ಸಿಟ್ಟು ನಿಯಂತ್ರಣಕ್ಕೆ ಸಿಗುವುದಿಲ್ಲ. ಒಳ್ಳೆಯ ದೈಹಿಕ ಮಾನಸಿಕ ಆರೋಗ್ಯ ಇಟ್ಟುಕೊಂಡವರು ಎಂತದ್ದೇ ಪರಿಸ್ಥಿತಿಯಲ್ಲೂ ಕೂಡ ಸಮಾಧಾನದಿಂದ ನಿಭಾಯಿಸುತ್ತಾರೆ. ಸಿಟ್ಟಿನಿಂದ ಆ ಕ್ಷಣದಲ್ಲಿ ನಾವು ಮತ್ತೊಬ್ಬರಿಗೆ ನೋವುಂಟು ಮಾಡಬಹುದು, ಆದರೆ ನಂತರ ಆ ಸಿಟ್ಟು ನಮ್ಮನ್ನೇ ಬಲಿ ತೆಗೆದು ಕೊಳ್ಳುತ್ತದೆ.
ನಮಗೂ ಸಿಟ್ಟು ಬಂದಾಗ ನಾವು ಸಹಿತ ಆ ಹಾವಿನ ಹಾಗೆ, ಸಿಟ್ಟು ಮತ್ತು ಹಗೆಯಿಂದ ಎದುರಾಳಿಗೆ ನಷ್ಟ ಮಾಡಲು ಪ್ರಯತ್ನ ಪಡುತ್ತೇವೆ. ಆದರೆ ಸ್ವಲ್ಪ ಸಮಯದ ನಂತರ ಅದರಿಂದಾಗಿ ನಮಗೆ ಹೆಚ್ಚು ಹಾನಿಯಾದದ್ದು ಗಮನಕ್ಕೆ ಬರುತ್ತದೆ. ನಾವು ಸಂತೋಷದಿಂದ ಜೀವಿಸಲು ಕೆಲವೊಂದು
ವಸ್ತು, ಜನರು, ಘಟನೆ ಹಾಗು ವಿಷಯಗಳನ್ನು ಕಡೆಗಣಿಸಬೇಕಾಗುತ್ತದೆ. ನಾವು ಪ್ರತಿಕ್ರಿಯೆ ತೋರಿ ಸುವ ಅಗತ್ಯತೆ ಇದ್ದಲ್ಲಿ ಮಾತ್ರ ಪ್ರತಿಕ್ರಿಯೆ ತೋರಿಸಬೇಕೇ ವಿನಹ ಎಲ್ಲದಕ್ಕೂ ಪ್ರತಿಕ್ರಿಯೆ ತೋರಿ ಸಲು ಹೋದಲ್ಲಿ ಅನವಶ್ಯಕವಾಗಿ ನಾವೇ ಹಾನಿಗೊಳಬೇಕಾಗುವ ಪ್ರಸಂಗಗಳೂ ಬರಬಹುದು.