ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಕೃತಕ ಬುದ್ದಿಮತ್ತೆ ಹಾಗೂ ಜಾಗತಿಕ ಹಿಂಜರಿತದ ಸುತ್ತಮುತ್ತ

ಬದಲಾವಣೆ ಜಗದ ನಿಯಮ. ಕಾಲಾನುಕ್ರಮದಲ್ಲಿ ಆಗಿರುವ ಆವಿಷ್ಕಾರ-ಅನ್ವೇಷಣೆಗಳ, ತಂತ್ರ ಜ್ಞಾನದ ನಿರಂತರ ಅಭಿವೃದ್ಧಿಯ ಪರಿಣಾಮವಾಗಿ ಹಲವಾರು ಸಾಧನಗಳು ಮತ್ತು ಕಂಪನಿ ಗಳು ಆ ಓಟದಲ್ಲಿ ನಿಲ್ಲಲಾಗದೆ, ಸ್ಪರ್ಧೆ ಎದುರಿಸಲಾಗದೆ, ತಮ್ಮನ್ನು ತಾವು ಅಪ್ ಗ್ರೇಡ್ ಮಾಡಿ ಕೊಳ್ಳಲಾಗದೆ ಮೂಲೆಗುಂಪಾದ ಹಲವು ನಿದರ್ಶನಗಳಿವೆ. ನಿರಂತರ ಉನ್ನತಿಗೆ ಒಡ್ಡಿಕೊಳ್ಳ ಲಾಗದೆ-ಒಗ್ಗಿಕೊಳ್ಳಲಾಗದೆ ಮಾರುಕಟ್ಟೆ ಮತ್ತು ಗ್ರಾಹಕರನ್ನು ಕಳೆದುಕೊಂಡ ಪರಿಣಾಮ ನಷ್ಟ ಅನುಭವಿಸಿ, ಉತ್ಪಾದನೆ/ ಸೇವೆಯನ್ನು ನಿಲ್ಲಿಸಿ ಅಥವಾ ಕಡಿತಗೊಳಿಸಿ, ಕೊನೆಗೆ ಕಂಪನಿಯು ಮುಚ್ಚಲ್ಪಟ್ಟ ಪರಿಣಾಮ ಹಲವರು ಕೆಲಸ ಕಳೆದು ಕೊಂಡ ಉದಾಹರಣೆಗಳೂ ಇವೆ

ಕೃತಕ ಬುದ್ದಿಮತ್ತೆ ಹಾಗೂ ಜಾಗತಿಕ ಹಿಂಜರಿತದ ಸುತ್ತಮುತ್ತ

ಅಂಕಣಕಾರ ರವೀ ಸಜಂಗದ್ದೆ

Profile Ashok Nayak Mar 25, 2025 6:29 AM

ಕರೋನಾ ಕಾಲಘಟ್ಟದ ನಂತರ ಸುಧಾರಿಸಿದ್ದ ಜಾಗತಿಕ ಅಭಿವೃದ್ಧಿ ಸೂಚ್ಯಂಕ ಈಗ ಮತ್ತೆ ಒಂದಿಷ್ಟು ನಿಶ್ಚಲವಾಗಿದ್ದು, ಮುಂದಿನ ದಿನಗಳಲ್ಲಿ ಅದು ಕುಸಿಯುವ ಲಕ್ಷಣಗಳು ಕಾಣು ತ್ತಿವೆ. ನಮ್ಮೆದುರು ಇರುವ ಅಂಕಿ-ಅಂಶಗಳು ಮತ್ತು ಮುನ್ಸೂ ಚನಾ ವಿವರಗಳು, ಎಲ್ಲ ಕ್ಷೇತ್ರಗಳಲ್ಲೂ ಜಾಗತಿಕವಾಗಿ ಒಂದಷ್ಟು ಹಿಂಜರಿತ, ಕುಸಿತ ಮೂಡುವ ಮುನ್ಸೂಚನೆ ನೀಡಿವೆ. ‘ಎಐ’ ತಂತ್ರಜ್ಞಾನ ಪರಿಣತರಿಗೆ ಇದ ರಿಂದ ಶುಕ್ರದೆಸೆಯಾದರೆ, ಉಳಿದ ವಲಯ ಗಳಲ್ಲಿ ಕೆಲಸ ಮಾಡುವವರ ಪಾಲಿಗಿದು ‘ಸಾಡೇಸಾತ್’!

ಬದಲಾವಣೆ ಜಗದ ನಿಯಮ. ಕಾಲಾನುಕ್ರಮದಲ್ಲಿ ಆಗಿರುವ ಆವಿಷ್ಕಾರ-ಅನ್ವೇಷಣೆಗಳ, ತಂತ್ರಜ್ಞಾನದ ನಿರಂತರ ಅಭಿವೃದ್ಧಿಯ ಪರಿಣಾಮವಾಗಿ ಹಲವಾರು ಸಾಧನಗಳು ಮತ್ತು ಕಂಪನಿಗಳು ಆ ಓಟದಲ್ಲಿ ನಿಲ್ಲಲಾಗದೆ, ಸ್ಪರ್ಧೆ ಎದುರಿಸಲಾಗದೆ, ತಮ್ಮನ್ನು ತಾವು ಅಪ್ ಗ್ರೇಡ್ ಮಾಡಿಕೊಳ್ಳಲಾಗದೆ ಮೂಲೆಗುಂಪಾದ ಹಲವು ನಿದರ್ಶನಗಳಿವೆ. ನಿರಂತರ ಉನ್ನ ತಿಗೆ ಒಡ್ಡಿಕೊಳ್ಳಲಾಗದೆ-ಒಗ್ಗಿಕೊಳ್ಳಲಾಗದೆ ಮಾರುಕಟ್ಟೆ ಮತ್ತು ಗ್ರಾಹಕರನ್ನು ಕಳೆದು ಕೊಂಡ ಪರಿಣಾಮ ನಷ್ಟ ಅನುಭವಿಸಿ, ಉತ್ಪಾದನೆ/ ಸೇವೆಯನ್ನು ನಿಲ್ಲಿಸಿ ಅಥವಾ ಕಡಿತ ಗೊಳಿಸಿ, ಕೊನೆಗೆ ಕಂಪನಿಯು ಮುಚ್ಚಲ್ಪಟ್ಟ ಪರಿಣಾಮ ಹಲವರು ಕೆಲಸ ಕಳೆದು ಕೊಂಡ ಉದಾಹರಣೆಗಳೂ ಇವೆ.

ಇದನ್ನೂ ಓದಿ: Ravi Sajangadde Column: ವಿವಿ ಮುಚ್ಚಲಿ ಬಿಡಲಿ; ಶಿಕ್ಷಣದ ಗುಣಮಟ್ಟ ಹೆಚ್ಚಲಿ !

ಕಾರಿನ ವಿನ್ಯಾಸ ಮತ್ತು ಮಾದರಿಯನ್ನು ಅಭಿವೃದ್ಧಿಪಡಿಸದ ಪರಿಣಾಮ ‘ಅಂಬಾಸಡರ್’ ಕಾರು ತಯಾರಕ ಸಂಸ್ಥೆ ಮುಚ್ಚಿತು; ತಂತ್ರಜ್ಞಾನವನ್ನು ಉನ್ನತೀಕರಿಸದಿದ್ದುದಕ್ಕೆ ಕ್ಯಾಮರಾ ಮತ್ತು ಫೋಟೋಫಿಲ್ಮ್ ಸಂಸ್ಥೆ ‘ಕೊಡಾಕ್’ಗೂ ಇದೇ ಗತಿ ಒದಗಿತು; ಒಂದು ಕಾಲಕ್ಕೆ ವಿಶ್ವದ ಪಾಲಿಗೆ ದೈತ್ಯ ಮೊಬೈಲ್ ಉತ್ಪಾದಕ ಎನಿಸಿದ್ದ ‘ನೋಕಿಯಾ’ ಕಂಪನಿಯು ತನ್ನ ಗ್ರಾಹಕರನ್ನು ಕಳೆದುಕೊಂಡು, ನಷ್ಟ ಅನುಭವಿಸಿ, ಹಲವಾರು ಘಟಕಗಳನ್ನು ಮುಚ್ಚಬೇಕಾಯಿತು.

ಒಂದು ಕಾಲಕ್ಕೆ ಅತ್ಯಂತ ಜನಪ್ರಿಯವಾಗಿದ್ದ ಪೇಜರ್ ತಂತ್ರಜ್ಞಾನ ಹಾಗೂ ವಿಶ್ವಾದ್ಯಂತ ಆ ಸೇವೆಯನ್ನು ಒದಗಿಸುವ ಸಂಸ್ಥೆಗಳು, ಮೊಬೈಲ್ ತಂತ್ರಜ್ಞಾನದ ಆಗಮನದಿಂದಾಗಿ ಹೇಳ ಹೆಸರಿಲ್ಲದಂತಾದವು. ಹೀಗೆ ಬದಲಾವಣೆಗೆ ಸ್ಪಂದಿಸದೆ ಅಸ್ತಿತ್ವ ಕಳೆದುಕೊಂಡವರ ಹಲವು ನಿದರ್ಶನಗಳಿವೆ.

ಈ ಎಲ್ಲಾ ಘಟನೆಗಳ ಒಟ್ಟು ಪರಿಣಾಮವಾಗಿ, ಒಂದೆಡೆ ಆಯಾ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟವಾದರೆ, ಮತ್ತೊಂದೆಡೆ ವಿಶ್ವಾದ್ಯಂತ ಆ ಸಂಸ್ಥೆಗಳಲ್ಲಿನ ಲಕ್ಷಾಂ ತರ ಮಂದಿಗೆ ಉದ್ಯೋಗ ನಷ್ಟವಾಗಿ ಯಾತನೆ ಅನುಭವಿಸುವಂತಾಯಿತು.

ಹೊಸತನಕ್ಕೆ ಸದಾ ಹಾತೊರೆಯುವ ಜಗತ್ತು, ಹೊಸ ತಂತ್ರಜ್ಞಾನಗಳು ಮತ್ತು ಅವನ್ನು ಆಧರಿಸಿದ ಸಾಧನಗಳು ಬಂದಾಗ, ಒಂದು ಕಾಲಕ್ಕೆ ನವನವೀನವಾಗಿದ್ದುದನ್ನು ನೀವಾಳಿಸಿ ಇಂಥ ಹೊಚ್ಚ ಹೊಸತನ್ನು ಅಪ್ಪಿ ಸಾಗುತ್ತದೆ. ಮತ್ತೊಂದು ಅನನ್ಯ ಹೊಸತನ ಬರುವ ವರೆಗೆ ಇದು ನಿರಂತರ ಸಾಗುವ ಪ್ರಕ್ರಿಯೆ! ಕಳೆದ ಕೆಲವು ವರ್ಷಗಳಿಂದ ಮುನ್ನೆಲೆಗೆ ಬಂದಿ ರುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು, ಈವರೆಗೆ ಬಂದ ಹೊಸ ಆವಿಷ್ಕಾರಗಳ ಪೈಕಿಯ ದೈತ್ಯ ಮತ್ತು ಸಂಹಾರಿ ತಂತ್ರಜ್ಞಾನ; ಏಕೆಂದರೆ, ಇದು ಯಾರನ್ನೆಲ್ಲ, ಎಷ್ಟೆಲ್ಲ ವಲಯಗಳನ್ನು ಆಪೋಶನ ತೆಗೆದುಕೊಂಡೀತು? ಎಷ್ಟೆಲ್ಲ ಜನರ ಉದ್ಯೋಗವನ್ನು ಕಸಿ ದೀತು? ಎಷ್ಟು ನಷ್ಟವನ್ನು ತಂದೊಡ್ಡೀತು? ಪ್ರಪಂಚದಲ್ಲಿ ಎಷ್ಟು ಅಲ್ಲೋಲ-ಕಲ್ಲೋಲ ವನ್ನು ಸೃಷ್ಟಿಸೀತು? ಎಂಬುದರ ಸ್ಪಷ್ಟ ಪರಿಕಲ್ಪನೆ ಸದ್ಯಕ್ಕಿಲ್ಲ.

ಇದು ಜಗದಗಲ ಎಲ್ಲಾ ವಲಯಗಳ ಮೇಲೆ ನೇರವಾಗಿ ಒಂದಷ್ಟು ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವ ಬೀರುವ, ಹಲವರ ಕೆಲಸಕ್ಕೆ ಸಂಚಕಾರ ತರುವ ಸಾಧ್ಯತೆ ನಿಚ್ಚಳ ವಾಗಿ ಗೋಚರಿಸುತ್ತಿದೆ. ಕೆಲವರು ನೌಕರಿಗೆ ಗುಡ್‌ಬೈ ಹೇಳುವ ಪ್ರಕ್ರಿಯೆ ಈಗಾಗಲೇ ಆರಂಭ ವಾಗಿದೆ!

ಕಳೆದ ಕೆಲ ವರ್ಷಗಳಲ್ಲಿ ವಿಶ್ವಾದ್ಯಂತ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆಗಿಂತ ಉದ್ಯೋಗ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು. ಇದಕ್ಕೆ ನೇರಕಾರಣ ‘ಎಐ’ ತಂತ್ರಜ್ಞಾನ ಮತ್ತು ಜಾಗತಿಕ ಹಿಂಜರಿತ. ‘ಎಐ’ ತಂತ್ರಜ್ಞಾನ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ, ಬಹುತೇಕ ಎಲ್ಲಾ ವಲಯಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ.

ಪರಿಸ್ಥಿತಿ ಹೇಗಾಗಿದೆಯೆಂದರೆ, ವಿಶ್ವದ ಎಲ್ಲಾ ಮಧ್ಯಮ ಮತ್ತು ಬೃಹತ್ ಗಾತ್ರದ ಸಂಸ್ಥೆ ಗಳಲ್ಲಿ ‘ಎಐ ವಿಭಾಗ’ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ ಹಾಗೂ ಆ ವಿಭಾಗದ ಮೇಲೆ ಗಮನ, ಹೂಡಿಕೆ ಮತ್ತು ಕುತೂಹಲ ಅತ್ಯಂತ ಗರಿಷ್ಠವಾಗಿದೆ. ಹಲವಾರು ಖಾಸಗಿ ಸಂಸ್ಥೆಗಳು ಈಗಾ ಗಲೇ ‘ಎಐ’ ತಂತ್ರಜ್ಞಾನವನ್ನು ಬಳಸಲು ಶುರುಮಾಡಿ, ಉದ್ಯೋಗಿಗಳ ಸಂಖ್ಯೆ ಯನ್ನು ಪ್ರತಿ ತ್ರೈಮಾಸಿಕದಲ್ಲಿ ಪರಾಮರ್ಶಿಸಿ ಕಡಿಮೆ ಮಾಡುತ್ತಿವೆ- ಅಂದರೆ ಸಾಧ್ ವಿರುವೆಡೆ ಯೆಲ್ಲಾ ತಮ್ಮ ದೈನಂದಿನ ಕೆಲಸಗಳಲ್ಲಿ ಈ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿಕೊಳ್ಳು ತ್ತಾ, ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ.

ಮನುಷ್ಯ ಮಾಡುವ ಕೆಲಸವನ್ನು ಅಷ್ಟೇ ಕರಾರುವಾಕ್ಕಾಗಿ ಮತ್ತು ಕೆಲವೊಮ್ಮೆ ಮನುಷ್ಯ ನಿಗಿಂತ ಹೆಚ್ಚು ನಿಖರವಾಗಿ, ತ್ವರಿತವಾಗಿ ಮಾಡುತ್ತಿರುವುದು ‘ಎಐ’ ತಂತ್ರಜ್ಞಾನದ ಹೆಚ್ಚು ಗಾರಿಕೆ. ಇದು ಹುಟ್ಟುಹಾಕಿರುವ ಟ್ರೆಂಡ್‌ನ ಪಾರ್ಶ್ವ ಪರಿಣಾಮವೆಂಬಂತೆ ಹಲವರ ನೌಕರಿಗೆ ಕುತ್ತು ಬಂದಿದೆ, ಬರುತ್ತಿದೆ. ಲಭ್ಯ ವಿವರಗಳ ಪ್ರಕಾರ, ಭಾರತದಲ್ಲಿ ಕಳೆದೆರಡು ವರ್ಷಗಳಲ್ಲಿ ಉದ್ಯೋಗ ಕಳೆದು ಕೊಂಡವರ ಸಂಖ್ಯೆ ಗಾಬರಿ ಹುಟ್ಟಿಸುವಂತಿದ್ದು, ಇವ ರಲ್ಲಿ ಹೆಚ್ಚಿನವರು ‘ಎಐ‘ ತಂತ್ರ ಜ್ಞಾನದ ನೇರ ಹೊಡೆತಕ್ಕೆ ಸಿಕ್ಕವರೇ ಆಗಿದ್ದಾರೆ!

2023ರ ವರ್ಷದಲ್ಲಿ 1193 ಟೆಕ್ ಕಂಪನಿಗಳು 264220 ನೌಕರರನ್ನು ಕೆಲಸದಿಂದ ವಜಾ ಗೊಳಿಸಿದ್ದರೆ, 2024ರಲ್ಲಿ 549 ಟೆಕ್ ಕಂಪನಿಗಳು 152472 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿವೆ.

ಹೆಚ್ಚಿನ ಕಂಪನಿಗಳು ಇಂಥ ವಿವರಗಳನ್ನು ಅಧಿಕೃತವಾಗಿ ಹಂಚಿಕೊಳ್ಳುವುದಿಲ್ಲ; ಹಾಗಾಗಿ ಕಳೆದ ವರ್ಷ ಹೀಗೆ ಕೆಲಸ ಕಳೆದುಕೊಂಡವರ ಸಂಖ್ಯೆ ಇನ್ನೂ ಹೆಚ್ಚಿರಲಿಕ್ಕೆ ಸಾಧ್ಯವಿದೆ. ಇನ್ನು 2025ರ ಮಾರ್ಚ್ 15ರವರೆಗಿನ ಅಂಕಿ-ಅಂಶಗಳ ಪ್ರಕಾರ, 88 ಟೆಕ್ ಕಂಪನಿಗಳು 37054 ನೌಕರರನ್ನು ವಜಾಗೊಳಿಸಿವೆ. ಇದು ಕೇವಲ, ಮಾಹಿತಿ ತಂತ್ರಜ್ಞಾನ ಮತ್ತು ಪೂರಕ ಸೇವೆಗಳ ವಲಯದಿಂದ ಭಾರತದಲ್ಲಿ ಕೆಲಸ ಕಳೆದುಕೊಂಡವರ ಅಂಕಿ-ಸಂಖ್ಯೆ ಅಷ್ಟೇ!

2025 ಜಾಗತಿಕವಾಗಿ ಒಂದಷ್ಟು ಏರುಪೇರುಗಳನ್ನು ತಂದೊಡ್ಡುವ ವರ್ಷದಂತೆ ಭಾಸವಾ ಗುತ್ತಿದೆ. ಮೊದಲ ತ್ರೈಮಾಸಿಕ ಅಂತ್ಯವಾಗುವ ವೇಳೆಗೆ ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಬಹುಪಾಲು ಹೆಚ್ಚುವ ಆತಂಕ ಮೂಡಿದೆ. ಈ ಸಂಖ್ಯೆಯು ಎರಡನೇ ತ್ರೈಮಾಸಿಕದಲ್ಲಿ ಇನ್ನೂ ಹೆಚ್ಚಾಗಲಿದೆ.

ವರ್ಷದ ದ್ವಿತೀಯಾರ್ಧದಲ್ಲಿ ಬಂದೆರಗಬಹುದಾದ ಜಾಗತಿಕ ಹಿಂಜರಿತದ ಆತಂಕವೂ ಇದಕ್ಕೆ ಕಾರಣ. ಅಮೆರಿಕದ ಸುಂಕ ನೀತಿಯಲ್ಲಿನ ಬದಲಾವಣೆ, ಅಲ್ಲಿ ನೆಲೆಸಿರುವ ವಿದೇಶಿ ಯರ ಮೇಲಿನ ತೂಗುಗತ್ತಿ, ಅಲ್ಲಿನ ಸರಕಾರಿ ನೌಕರರನ್ನು ತಂಡತಂಡವಾಗಿ ವಜಾಗೊಳಿ ಸುವ ನಿರ್ಧಾರ, ಮುಗಿಯದ ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ಕದನಗಳು, ಚೀನಾದಿಂದ ನಿರಂತರವಾಗಿ ಹೊಸ ಹೊಸ ಅಗ್ಗದ ತಂತ್ರಜ್ಞಾನಗಳ ಪರಿಚಯ ಹಾಗೂ ‘ದುರ್ಭಿಕ್ಷದಲ್ಲಿ ಅಧಿಕಮಾಸ’ ಎಂಬಂತೆ ‘ಎಐ’ ತಂತ್ರ್ಞಾನದ ವ್ಯಾಪಕ ಬಳಕೆ ಹಾಗೂ ವಿಸ್ತರಣೆ ಬಹುತೇಕರ ನಿದ್ರೆ ಮತ್ತು ನೆಮ್ಮದಿಯನ್ನು ಕಸಿದಿವೆ, ಜಾಗತಿಕ ಮಟ್ಟದಲ್ಲಿ ಸದ್ದುಮಾಡಿ ಇರಿಸಿ-ಮುರಿಸು ಸೃಷ್ಟಿಸಿವೆ.

ವಿಶ್ವಾದ್ಯಂತ ನೌಕರ ವರ್ಗದ ಆತ್ಮವಿಶ್ವಾಸ ಕುಗ್ಗಿದ್ದು, ಆತಂಕ ಮನೆಮಾಡಿದೆ. ಕರೋನಾ ಕಾಲಘಟ್ಟದ ನಂತರ ಸುಧಾರಿಸಿದ್ದ ಜಾಗತಿಕ ಅಭಿವೃದ್ಧಿ ಸೂಚ್ಯಂಕ ಈಗ ಮತ್ತೆ ಒಂದಿಷ್ಟು ನಿಶ್ಚಲವಾಗಿದ್ದು, ಮುಂದಿನ ದಿನಗಳಲ್ಲಿ ಅದು ಕುಸಿಯುವ ಲಕ್ಷಣಗಳು ಕಾಣುತ್ತಿವೆ. ನಮ್ಮೆದುರು ಇರುವ ಅಂಕಿ-ಅಂಶಗಳು ಮತ್ತು ಮುನ್ಸೂಚನಾ ವಿವರಗಳು, ಎಲ್ಲ ಕ್ಷೇತ್ರ ಗಳಲ್ಲೂ ಜಾಗತಿಕವಾಗಿ ಒಂದಷ್ಟು ಹಿಂಜರಿತ, ಕುಸಿತ ಮೂಡುವ ಮುನ್ಸೂಚನೆ ನೀಡಿವೆ.

‘ಎಐ’ ತಂತ್ರಜ್ಞಾನ ಪರಿಣತರಿಗೆ ಇದರಿಂದ ಶುಕ್ರದೆಸೆಯಾದರೆ, ಉಳಿದ ವಲಯಗಳಲ್ಲಿ ಕೆಲಸ ಮಾಡುವವರ ಪಾಲಿಗಿದು ‘ಸಾಡೇಸಾತ್’! ಇದನ್ನು ಎದುರಿಸದೆ ನಮಗೆ ಅನ್ಯ ಮಾರ್ಗವಿಲ್ಲ. ಪರಿಸ್ಥಿತಿ ಹೀಗಿರುವಾಗ ಅನಪೇಕ್ಷಿತ ಖರ್ಚುಗಳನ್ನು ನಿಲ್ಲಿಸಿ, ಅಗತ್ಯವಾಗಿ ಮಾಡಬೇಕಾದ ವೆಚ್ಚಗಳನ್ನು ಕಡಿಮೆ ಮಾಡಿಕೊಂಡು ಒಂದಷ್ಟು ‘ಉಳಿತಾಯ ವಿಧಾನ’ದ ಕಡೆಗೆ ಸಾಗಬೇಕು. ಅದುವೇ ಸದ್ಯದ ಜಾಣನಡೆ.

ಒಂದೊಮ್ಮೆ ಈಗಿರುವ ಕೆಲಸವನ್ನು ಕಳೆದುಕೊಂಡು ಬದುಕಬೇಕಾದ ಅತ್ಯಂತ ಕೆಟ್ಟ ಮತ್ತು ಅನಪೇಕ್ಷಿತ ಸಂದರ್ಭ ಒದಗಿದಲ್ಲಿ, ಹೀಗೆ ಉಳಿಸಿಕೊಂಡ ಹಣವು ದಿನದೂಡಲು ಉಪಯುಕ್ತವಾಗಬಹುದು. ಒಂದು ವೇಳೆ ದೇವರ ದಯೆಯಿಂದ ಕೆಲಸಕ್ಕೆ ಏನೂ ತೊಂದರೆ ಯಾಗದಿದ್ದಲ್ಲಿ, ಹೀಗೆ ಉಳಿಸಿಕೊಂಡ ಹಣವು ಒಂದೊಳ್ಳೆಯ ಉಳಿತಾಯದ ಮೊತ್ತವಾಗಿ ನಮ್ಮ ಆಸ್ತಿಯಾಗುವುದು. ಹಾಗಾಗಲಿ!

ಇವೆಲ್ಲದರ ನಡುವೆ. ‘ಎಐ’ ತಂತ್ರಜ್ಞಾನ ಮತ್ತು ಜಾಗತಿಕ ಹಿಂಜರಿತಗಳು ಕೃಷಿ ಕ್ಷೇತ್ರಕ್ಕೆ ಪರೋಕ್ಷವಾಗಿ ತಮ್ಮದೇ ಆದ ಕೊಡುಗೆ ಕೊಡುವುದು ನಿಸ್ಸಂಶಯ! ಕರೋನಾ ಕಾಲಘಟ್ಟ ದಲ್ಲಿ ಊರಿನ ಮನೆಯಿಂದ ಕೆಲಸ ಮಾಡಿದ ಯುವಪಡೆಯು, ಕೃಷಿಯಲ್ಲಿ ತೊಡಗಿಸಿ ಕೊಂಡು ಯಶಸ್ಸು ಪಡೆದ ಹಲವಾರು ಉದಾಹರಣೆಗಳಿವೆ. ತದನಂತರ, ಕಳೆದ 2-3 ವರ್ಷ ಗಳಿಂದ ಮತ್ತೆ ಕಚೇರಿಗೆ ಬರಬೇಕಾದ ಅನಿವಾರ್ಯತೆಯಿಂದಾಗಿ ಯುವಮುಖಗಳು ಹಳ್ಳಿ ಬಿಟ್ಟು ಮತ್ತೆ ನಗರಕ್ಕೆ ಬಂದಿವೆ. ಜಾಗತಿಕ ಹಿಂಜರಿತದ ಕಾರಣ ಈಗ ಮತ್ತೆ ಹಳ್ಳಿ ಗಳೆಡೆಗೆ, ಕೃಷಿಯತ್ತ ಅನಿವಾರ್ಯವಾಗಿ ತೆರಳಬೇಕಾದೀತು.

‘ಕೃಷಿ ಕೆಲಸಗಳಿಗೆ ಜನ ಸಿಗುತ್ತಿಲ್ಲ’ ಎಂಬ ಕೂಗಿನ ನಡುವೆ, ಕಲಿತ ಯುವಪಡೆ ಊರಿನ ಕೃಷಿಯಲ್ಲಿ ತೊಡಗಿಸಿಕೊಂಡು ಲಭ್ಯವಿರುವ ತಂತ್ರಜ್ಞಾನ ಬಳಸಿ ಕೆಲಸ ಮಾಡಿದರೆ, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗುವುದು ಖಂಡಿತ. ತಂತ್ರಜ್ಞಾನದ ಬಳಕೆಯ ಅಂಗ ವಾಗಿ ಈಗಾಗಲೇ ಹಲವಾರು ಯಂತ್ರಗಳನ್ನು, ರೋಪ್‌ವೇ ಮುಂತಾದ ಸಾಧನಗಳನ್ನು ಬಳಸಿ ಕೃಷಿಯನ್ನು ಜಾಣ್ಮೆಯಿಂದ ನಿರ್ವಹಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯೋಗಗಳು ನಡೆಯಲಿ. ಹೀಗೆ ಯುವಕರು ಊರಿನೆಡೆಗೆ ಹೋದ ರೆ ಅಲ್ಲಿರುವ ಹಿರಿಜೀವಗಳಿಗೂ ಬಹಳ ಸಂತಸವಾದೀತು. ಸದ್ಯದ ಏರುಪೇರಿನ/ಅಭದ್ರ ಜಾಗತಿಕ ವಾತಾವರಣದಲ್ಲಿ ಕೆಲಸ ಕಳೆದುಕೊಂಡರೂ, ನಮ್ಮ ಬದುಕನ್ನು ಸಮರ್ಪಕ ವಾಗಿ ಸಾಗಿಸಲೇಬೇಕಾದ ಅನಿವಾರ್ಯತೆಯಿದೆ. ಇರುವ ಎಲ್ಲ ಅವಕಾಶಗಳನ್ನೂ ಜಾಣ್ಮೆ ಯಿಂದ ಬಳಸಿಕೊಳ್ಳಬೇಕಿದೆ. ‘ಎಐ’ ತಂತ್ರಜ್ಞಾನದ ದಾಂಗುಡಿ ಮತ್ತು ಜಾಗತಿಕ ಹಿಂಜರಿತ ದಿಂದಾಗಿ ಒದಗಿರುವ ಕೆಲಸದ ಅಭದ್ರತೆಯ ನಡುವೆ ಒಂದಿಷ್ಟು ನವೀನ ಸಾಧ್ಯಾಸಾಧ್ಯತೆ ಗಳು ಚಿಗುರಿ ಪುಟಿದೇಳಲಿ.

ಕೃಷಿ ಕ್ಷೇತ್ರ ಮತ್ತು ಸ್ಟಾರ್ಟಪ್ ಕಂಪನಿಗಳು ಈ ಪರಿಸ್ಥಿತಿಯ ಗರಿಷ್ಠ ಲಾಭವನ್ನು ಪಡೆಯು ವಂತಾಗಲಿ. This too shall pass! ಎಂಬುದೊಂದು ಭರವಸೆಯ ಮಾತಿದೆ; ನಮಗೆ ಬೇಕಾ ದಂತೆ ಬದುಕನ್ನು ಆಸ್ವಾದಿಸುವ ನಿರಂತರ ಪ್ರಕ್ರಿಯೆಯಲ್ಲಿ ಈ ನಲ್ನುಡಿ ಸದಾ ನೆನಪಿನಲ್ಲಿ ರಲಿ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)