Vishweshwar Bhat Column: ಸಂಸದರಿಗೆ ಸವಲತ್ತು
ಪ್ರತಿ ವರ್ಷ, ಸಂಸದರು 50 ರಿಂದ 60 ಬಿಲ್‌ಗಳನ್ನು ಪರಿಗಣಿಸಬೇಕು. 65 ಹೆಚ್ಚುವರಿಯಾಗಿ, ಅವರು ಸದನ ಸಮಿತಿಯ ವರದಿಗಳು, ವಾರ್ಷಿಕ ವರದಿಗಳು ಮತ್ತು ಸಿಎಜಿ ವರದಿಗಳಲ್ಲಿ ಮಂಡಿಸಲಾದ ವಿವಿಧ ವರದಿಗಳನ್ನು ಅಧ್ಯಯನ ಮಾಡಬೇಕು, ಈ ಪೈಕಿ ವರ್ಷಕ್ಕೆ ಒಟ್ಟು 4000 ದಾಖಲೆಗಳನ್ನು ನೋಡಬೇಕು. ಸಂಸದೀಯ ಸಮಿತಿಗಳಲ್ಲಿ ಇರುವವರು ಅನೇಕ ವರದಿಗಳನ್ನು ಪರಿಶೀಲಿಸುವ ಮತ್ತು ಸಭೆಗಳಿಗೆ ಹಾಜರಾಗುವ ಹೆಚ್ಚುವರಿ ಕರ್ತವ್ಯವನ್ನು ಹೊಂದಿರುತ್ತಾರೆ.
-
ಸಂಪಾದಕೀಯ ಸದ್ಯಶೋಧನೆ
ಸೋಮನಾಥ ಚಟರ್ಜಿಯವರು ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಸಂಸದರಲ್ಲಿ ಒಬ್ಬರು. ಲೋಕಸಭೆ ಚುನಾವಣೆಯಲ್ಲಿ ಹತ್ತು ಬಾರಿ ಗೆದ್ದವರು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ದ ಧೀಮಂತರಲ್ಲಿ ಒಬ್ಬರು. 2004ರಿಂದ 2009 ರವರೆಗೆ, ಅವರ ಪಕ್ಷವು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಹೊರಗಿನ ಬೆಂಬಲವನ್ನು ನೀಡಿತು. ಅವರ ಪಕ್ಷವು ಮಂತ್ರಿಗಿರಿಗೆ ಸೇರದಿದ್ದರೂ, ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು.
ಕೇಂದ್ರದ ಸಮ್ಮಿಶ್ರ ಸರಕಾರ ಅಮೆರಿಕದೊಂದಿಗೆ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ಆರಂಭಿಸಿದಾಗ ಉದ್ವಿಗ್ನತೆ ಶುರುವಾಯಿತು. ಅಮೆರಿಕದ ಪ್ರಾಬಲ್ಯದ ಬಗ್ಗೆ ಯಾವಾಗಲೂ ಸಂಶಯ ವ್ಯಕ್ತಪಡಿಸುವ ಕಮ್ಯುನಿಸ್ಟರು ಈ ಒಪ್ಪಂದವನ್ನು ನಿರಂತರವಾಗಿ ವಿರೋಧಿಸಿದರು. ಆದರೆ ಆ ಮಾತುಕತೆಯನ್ನು ಹೇಗಾದರೂ ಮಾಡಿ ಮುಂದುವರಿಸಲು ಕೇಂದ್ರ ಸರಕಾರ ನಿರ್ಧರಿಸಿದಾಗ ವಿಷಯ ಮತ್ತಷ್ಟು ಜಟಿಲವಾಯಿತು.
ಕಮ್ಯುನಿಸ್ಟ್ ಪಕ್ಷಗಳು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡವು. ಕೇಂದ್ರ ಸರಕಾರವನ್ನು ಉರುಳಿಸಲು ಮತ್ತು ಒಪ್ಪಂದದ ಔಪಚಾರಿಕತೆಯನ್ನು ತಡೆಯಲು ಆಶಿಸಿದವು. ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಚಟರ್ಜಿ ಅವರಿಗೆ ಪಕ್ಷ ಸೂಚಿಸಿತು. ಆದರೆ ಸ್ಪೀಕರ್ ಹುದ್ದೆಯು ರಾಜಕೀಯೇತರವಾದುದು ಮತ್ತು ಇತರ ಸಂಸದರ ಪಕ್ಷಪಾತದ ಹಿತಾಸಕ್ತಿಗಳಿಂದ ನಡೆಯುವಂಥದ ಲ್ಲ ಎಂದು ಚಟರ್ಜಿ ಅಭಿಪ್ರಾಯಪಟ್ಟರು. ಹೀಗಾಗಿ ಅವರು ತಮ್ಮ ಪಕ್ಷದ ನಿರ್ದೇಶನವನ್ನು ಧಿಕ್ಕರಿಸಿದರು ಮತ್ತು ಬದಲಿಗೆ, ಸರಕಾರ ಅಂತಿಮವಾಗಿ ಗೆದ್ದ ವಿಶ್ವಾಸಮತ ನಿರ್ಣಯದ ಅಧ್ಯಕ್ಷತೆ ವಹಿಸಿದರು. ಇದಕ್ಕೆ ಪ್ರತೀಕಾರವಾಗಿ ಚಟರ್ಜಿಯವರನ್ನು ಅವರ ಪಕ್ಷದಿಂದ ಹೊರಹಾಕಲಾಯಿತು.
ಇದನ್ನೂ ಓದಿ: Vishweshwar Bhat Column: ಸ್ನಾನ ಮಾಡುವುದು ಹೇಗೆ?
ಅವರು ತಮ್ಮ ಉಚ್ಚಾಟನೆಯನ್ನು ‘ನನ್ನ ಜೀವನದ ಅತ್ಯಂತ ದುಃಖಕರ ದಿನ’ ಎಂದು ಹೇಳಿದರು. ಆದರೂ, ಅವರು ತಮ್ಮ ಹುದ್ದೆಯಿಂದ ಸರಿ ಎಂದು ಭಾವಿಸಿದ್ದನ್ನು ಮಾಡಿದರು. ಸಂಸದರು ಮತ್ತು ಶಾಸಕರ ಪಾತ್ರಗಳ ನಿರ್ವಹಣೆ ಅಷ್ಟು ಸುಲಭವಲ್ಲ. ಅವುಗಳನ್ನು ಪೂರೈಸಲು ಅವರು ಎಷ್ಟು ಕಡಿಮೆ ಬೆಂಬಲವನ್ನು ಪಡೆಯುತ್ತಾರೆ ಎಂಬುದನ್ನು ನಾವು ಆಗಾಗ್ಗೆ ಮರೆತು ಬಿಡುತ್ತೇವೆ.
ಪ್ರತಿ ವರ್ಷ, ಸಂಸದರು 50 ರಿಂದ 60 ಬಿಲ್‌ಗಳನ್ನು ಪರಿಗಣಿಸಬೇಕು. 65 ಹೆಚ್ಚುವರಿಯಾಗಿ, ಅವರು ಸದನ ಸಮಿತಿಯ ವರದಿಗಳು, ವಾರ್ಷಿಕ ವರದಿಗಳು ಮತ್ತು ಸಿಎಜಿ ವರದಿಗಳಲ್ಲಿ ಮಂಡಿಸಲಾದ ವಿವಿಧ ವರದಿಗಳನ್ನು ಅಧ್ಯಯನ ಮಾಡಬೇಕು, ಈ ಪೈಕಿ ವರ್ಷಕ್ಕೆ ಒಟ್ಟು 4000 ದಾಖಲೆಗಳನ್ನು ನೋಡಬೇಕು. ಸಂಸದೀಯ ಸಮಿತಿಗಳಲ್ಲಿ ಇರುವವರು ಅನೇಕ ವರದಿಗಳನ್ನು ಪರಿಶೀಲಿಸುವ ಮತ್ತು ಸಭೆಗಳಿಗೆ ಹಾಜರಾಗುವ ಹೆಚ್ಚುವರಿ ಕರ್ತವ್ಯವನ್ನು ಹೊಂದಿರುತ್ತಾರೆ.
ಉದಾಹರಣೆಗೆ, 2010-11ರಲ್ಲಿ, ಕೃಷಿ ಸಮಿತಿಯು ಒಟ್ಟು 83 ಗಂಟೆಗಳ 40 ಸಭೆಗಳನ್ನು ನಡೆಸಿತು ಮತ್ತು ಅವರಿಗೆ ಪ್ರಸ್ತುತಪಡಿಸಿದ ವಿಷಯವು ಒಟ್ಟು 4300 ಪುಟಗಳನ್ನು ಹೊಂದಿತ್ತು. ಈ ಕೆಲಸ ವನ್ನು ಶ್ರದ್ಧೆಯಿಂದ ಮಾಡುವುದು ಒಬ್ಬನೇ ವ್ಯಕ್ತಿಗೆ ಬಹುತೇಕ ಅಸಾಧ್ಯ. ಇದಕ್ಕಾಗಿಯೇ ಇತರ ದೇಶಗಳಲ್ಲಿನ ಸರಕಾರಗಳು ಈ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಶಾಸಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತವೆ.
ಅಮೆರಿಕದಲ್ಲಿ ಪ್ರತಿ ಸೆನೆಟರ್ 30-40 ಸಿಬ್ಬಂದಿ ಸದಸ್ಯರನ್ನು ನೇಮಿಸಿಕೊಳ್ಳಲು ಸಾಕಷ್ಟು ಹಣ ವನ್ನು ಪಡೆಯುತ್ತಾರೆ. ಬ್ರಿಟನ್‌ನಲ್ಲಿ ಪ್ರತಿ ಸಂಸದರು ನಾಲ್ಕರಿಂದ ಐದು ಸಹಾಯಕ ಸಿಬ್ಬಂದಿ ಯನ್ನು ಹೊಂದಿರುತ್ತಾರೆ. ಭಾರತದಲ್ಲಿ ಒಬ್ಬ ಸಂಸದ ಸರಾಸರಿ ಹದಿನೈದರಿಂದ-ಇಪ್ಪತ್ತೈದು ಲಕ್ಷ ಜನರನ್ನು ಪ್ರತಿನಿಧಿಸುತ್ತಾನೆ. ತನ್ನ ಸಿಬ್ಬಂದಿಗೆ ತಿಂಗಳಿಗೆ ಕೇವಲ 30 ಸಾವಿರ ರುಪಾಯಿ ಪಡೆಯು ತ್ತಾನೆ. ಆ ಸಂಬಳದಲ್ಲಿ ಒಬ್ಬ ಹೆಚ್ಚು ಸಮರ್ಥ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಕಷ್ಟ.
ಒಬ್ಬ ಸಂಸದನಿಗೆ ಬರುವ ಫೋನ್ ಕರೆಗಳನ್ನು ಸ್ವೀಕರಿಸಲು ಕನಿಷ್ಠ ಮೂವರು ಸಿಬ್ಬಂದಿ ಬೇಕು. ತನ್ನ ಕಚೇರಿಗೆ ಬರುವ ಜನರಿಗೆ ಕಾಫಿ-ತಿಂಡಿ ನೀಡಿದರೆ ತಿಂಗಳಿಗೆ ಎರಡು ಲಕ್ಷ ರುಪಾಯಿ ಬೇಕು. ಸೋಮನಾಥ ಚಟರ್ಜಿ ಅವರು ಸಂಸದರಿಗೆ ನೀಡುವ ಸೌಲಭ್ಯ-ಸವಲತ್ತುಗಳನ್ನು ಹೆಚ್ಚಿಸದೇ ಸಂಸತ್ತಿನಲ್ಲಿ ಗುಣಮಟ್ಟದ ಸಂವಾದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಈ ಸವಲತ್ತುಗಳನ್ನು ಕುರಿತು ಮಾತಾಡುವಾಗ, ನಮ್ಮ ಸಂಸದರ ಅರ್ಹತೆಯ ಬಗ್ಗೆಯೂ ಯೋಚಿಸ ಬೇಕಾದುದು ಇಂದಿನ ಅಗತ್ಯ.