ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Hari Paraak Column: Founded ಮತ್ತು Found dead

ಎರಡೂ ಗಿಳಿಗಳ ಕೈಯಲ್ಲಿ ರುದ್ರಾಕ್ಷಿ ಮಾಲೆ ಇತ್ತು. ಎರಡೂ ಧ್ಯಾನದಲ್ಲಿ ಮಗ್ನವಾಗಿದ್ದವು. ಅದನ್ನು ತೋರಿಸಿ ಸ್ವಾಮೀಜಿ, “ಒಂದು ಕೆಲಸ ಮಾಡು. ನಿನ್ನ ಗಿಳಿಗಳನ್ನ ಕರೆದುಕೊಂಡು ಬಂದು ಈ ಗಿಳಿಗಳ ಜತೆ ಒಂದೆರಡು ದಿನ ಬಿಡು. ಅವು ತಾವಾಗೇ ಸರಿ ಹೋಗ್ತವೆ" ಅಂದ್ರು. ಸರಿ ಅಂತ ಖೇಮು ಮರುದಿನ ತನ್ನ ಎರಡೂ ಗಿಳಿಗಳನ್ನು ತಂದು ಆಶ್ರಮದ ಗಿಳಿಗಳ ಪಂಜರ ದೊಳಕ್ಕೆ ಬಿಟ್ಟ

Hari Paraak Column: Founded ಮತ್ತು Found dead

-

ಹರಿ ಪರಾಕ್‌
ಹರಿ ಪರಾಕ್‌ Nov 16, 2025 8:21 AM

ತುಂಟರಗಾಳಿ

ನೆಟ್‌ಪಿಕ್ಸ್

ಖೇಮು ತನ್ನ ಮನೆಗೆ ಗಿಳಿಗಳನ್ನು ತರಬೇಕು ಅಂತ ಹೊರಟ. ಸರಿ, ಮಾರ್ಕೆಟ್‌ಗೆ ಹೋಗಿ ಎರಡು ಒಳ್ಳೆ ಹೆಣ್ಣು ಗಿಳಿಗಳನ್ನು ಆರಿಸಿ ತಗೊಂಡ್ ಬಂದ. ಖೇಮುಶ್ರೀ, ಮರಿಖೇಮು ಗಿಳಿಗಳನ್ನು ನೋಡಿ ಖುಷಿಪಟ್ಟರು. ಮರಿಖೇಮು “ಈ ಗಿಳಿಗಳು ಮಾತಾಡ್ತಾವಾ ಅಪ್ಪ ?" ಅಂತ ಕೇಳಿದ. ಅದಕ್ಕೆ ಖೇಮು, “ಗೊತ್ತಿಲ್ಲ, ಮಾತಾಡಿಸಿ ನೋಡು" ಅಂದ. ‌

ಮರಿಖೇಮು “ಹಾಯ್, ಹೇಗಿದೀರ? ಹ್ಯಾವಿಂಗ್ ಫನ್?" ಅಂತ ಗಿಳಿಗಳನ್ನ ಕೇಳಿದ. ಅದಕ್ಕೆ ಅವೆರಡೂ ಹೆಣ್ಣು ಗಿಳಿಗಳು ಹೇಳಿದವು, “ನಿನ್ನಜ್ಜಿ, ಇಲ್ಲಿ ಬಾಯ್ ಫ್ರೆಂಡ್ ಇಲ್ದೆ ಬರಗೆಟ್ಟಿ ದೀವಿ ನಾವು. ಹ್ಯಾವಿಂಗ್ ಫನ್ ಅಂತೆ! ನಿನ್ ಮುಖಾ ಮುಚ್ಚಾ" ಅಂದವು. ಎಲ್ಲರಿಗೂ ಗಾಬರಿ ಆಯ್ತು.

ಏನಪ್ಪಾ ಇದು ಈ ಗಿಳಿಗಳು ಹಿಂಗೆ ಮಾತಾಡ್ತಾವೆ ಅಂತ ಯೋಚನೆ ಮಾಡತೊಡಗಿದರು. ಒಂದೆರಡು ದಿನ ಹೀಗೇ ಆಯ್ತು. ಮನೆಗೆ ಯಾರೇ ಬಂದ್ರೂ, ಯಾರೇ ಮಾತಾಡಿಸಿದ್ರೂ ಗಿಳಿಗಳು ಬಾಯ್ ಫ್ರೆಂಡ್ ಇಲ್ಲ ಅನ್ನೋ ಸಿಟ್ಟಲ್ಲಿ ಕೆಟ್ಟ ಕೆಟ್ಟ ಮಾತಾಡ್ತಾ ಇದ್ದು. ಇದಕ್ಕೇ ನಾದರೂ ಉಪಾಯ ಮಾಡಬೇಕು ಅಂತ ಖೇಮು ಒಬ್ಬ ಸ್ವಾಮೀಜಿಗಳ ಬಳಿ ಹೋದ.

ಅವರು ಖೇಮು ಹೇಳಿದ್ದನ್ನೆ ಕೇಳಿಸಿಕೊಂಡು ಹೇಳಿದರು, “ಇ ಮಗು, ಅದು ಸಹವಾಸ ದೋಷ. ಅದೇ ನಮ್ಮ ಆಶ್ರಮದ ಪಂಜರದಲ್ಲಿರೋ ಎರಡು ಗಂಡು ಗಿಳಿಗಳನ್ನು ನೋಡು; ಅವುಗಳಿಗೆ ಇಂಥದ್ದೇನೂ ಗೊತ್ತಿಲ್ಲ, 24 ಗಂಟೆ ಜಪಮಾಲೆ ಹಿಡ್ಕೊಂಡು ದೇವರ ಧ್ಯಾನ ಮಾಡ್ತಿರ್ತಾವೆ" ಅಂತ ಹೇಳಿ ಕರ್ಕೊಂಡು ಹೋಗಿ ತೋರಿಸಿದರು.

ಇದನ್ನೂ ಓದಿ: ‌Hari Paraak Column: ತಾಜಾ ಖಬರ್‌ ಕೊಡುವ ನ್ಯೂಸ್‌ ಚಾನೆಲ್:‌ ಖಬರಿಸ್ತಾನ್

ಎರಡೂ ಗಿಳಿಗಳ ಕೈಯಲ್ಲಿ ರುದ್ರಾಕ್ಷಿ ಮಾಲೆ ಇತ್ತು. ಎರಡೂ ಧ್ಯಾನದಲ್ಲಿ ಮಗ್ನವಾಗಿದ್ದವು. ಅದನ್ನು ತೋರಿಸಿ ಸ್ವಾಮೀಜಿ, “ಒಂದು ಕೆಲಸ ಮಾಡು. ನಿನ್ನ ಗಿಳಿಗಳನ್ನ ಕರೆದುಕೊಂಡು ಬಂದು ಈ ಗಿಳಿಗಳ ಜತೆ ಒಂದೆರಡು ದಿನ ಬಿಡು. ಅವು ತಾವಾಗೇ ಸರಿ ಹೋಗ್ತವೆ" ಅಂದ್ರು. ಸರಿ ಅಂತ ಖೇಮು ಮರುದಿನ ತನ್ನ ಎರಡೂ ಗಿಳಿಗಳನ್ನು ತಂದು ಆಶ್ರಮದ ಗಿಳಿಗಳ ಪಂಜರದೊಳಕ್ಕೆ ಬಿಟ್ಟ. ಈ ಎರಡೂ ಹೆಣ್ಣು ಗಿಳಿಗಳು ಒಳಕ್ಕೆ ಹೋದೊಡನೆ “ನಮಗಿಲ್ಲಿ ಬಾಯ್ ಫ್ರೆಂಡ್ ಇಲ್ಲ ಅಂತ ಸಾಯ್ತಾ ಇದ್ರೆ, ಈ ನನ್ ಮಕ್ಕು ಜಪ ಮಾಡ್ತಾ ಕುಂತವ್ರೆ" ಅಂತ ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದವು. ಅದನ್ನು ಕೇಳಿದ ಆಶ್ರಮದ ಆ ಎರಡು ಗಂಡು ಗಿಳಿಗಳಲ್ಲಿ ಒಂದು, ತನ್ನ ಕೈಯಲ್ಲಿದ್ದ ಜಪಮಾಲೆಯನ್ನು ಪಕ್ಕಕ್ಕಿಡುತ್ತಾ ಇನ್ನೊಂದು ಗಿಳಿಗೆ ಹೇಳಿತು “ಬ್ರದರ್, ಕೊನೆಗೂ ಆ ದೇವರು ನಮ್ಮ ಪ್ರಾರ್ಥನೆಗೆ ಪ್ರತಿಫಲ ಕೊಟ್ಟ".

ಲೂಸ್‌ ಟಾಕ್‌ -ರಾಹುಲ್‌ ಗಾಂಧಿ

ಏನ್ ಸರ್, ಬಿಹಾರದ ಜನ ಕಾಂಗ್ರೆಸ್‌ಗೆ ಗುಟ್ಕಾ ಹಾಕ್ಕೊಂಡು ಉಗಿದು ಹಾಕಿ ಬಿಟ್ರಲ್ಲ?

- ಬರೀ ಉಗಿದು ಹಾಕಿಲ್ಲ, ಕಾಂಗ್ರೆಸ್‌ನ ಅಗಿದು ಹುಗಿದು ಹಾಕಿಬಿಟ್ರು, ಮಣ್ಣಲ್ಲಿ ಹುದು ಗಿರೋ ನಮ್ಮ ಪಕ್ಷನಾ ಈಗ ನಾವೇ ಹುಡುಕಬೇಕಿದೆ.

ಮತ್ತೆ, ಈಗ ಅದೇ ಹಳೇ ಡೈಲಾಗಾ- ‘ಮತದಾರನ ಆಯ್ಕೆಯನ್ನ ಗೌರವಿಸ್ತೀವಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸ್ಟ್ರಾಂಗ್ ಆಗಿ ವಾಪಸ್ ಬರ್ತೀವಿ...’

- ಅರೇ, ನಿಮಗೆ ಹೇಗೆ ಗೊತ್ತು?

ಅಯ್ಯೋ, ನಂಗೇನು ನಿಮ್ ಬಗ್ಗೆ ಎಲ್ಲರಿಗೂ ಗೊತ್ತು. ಹೋಗ್ಲಿ ಬಿಹಾರದ ಜನರ ಬಗ್ಗೆ ಏನ್ ಹೇಳ್ತೀರಿ?

- ಅಯ್ಯೋ, ಅವ್ರ್ ಬಿಡಿ; ಅಲ್ಲಿರೋರ ಜೀವನ ಹಾಳಾಗ್ ಹೋಗ್ಲಿ ಅಂತ ಅವ್ರ್ ಊರಲ್ಲಿ ಬಿಜೆಪಿನ ಗೆಲ್ಲಿಸಿ, ಅವ್ರ್ ಮಾತ್ರ ಬೆಂಗಳೂರಿಗೆ ಹೋಗಿ ಆರಾಮಾಗಿ ಜೀವನ ಮಾಡ್ತಾರೆ.

ಅದೂ ಸರೀನೇ. ಆದ್ರೆ, ನೀವು ಬಿಜೆಪಿ ಮೇಲೆ ಮಾಡಿದ ಮತಗಳ್ಳತನದ ಆರೋಪ ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲವಲ್ಲ?

- ಅಯ್ಯೋ, ಬಿಹಾರದ ಜನ ಅವ್ರು. ಹೆಂಗಸರು, ಮಕ್ಕಳನ್ನ ಕದ್ಕೊಂಡು ಹೋದಾಗ್ಲೇ ಕೇರ್ ಮಾಡಲ್ಲ, ಇನ್ನು ಮತ ಕದೀತಾರೆ ಅಂದಕೂಡ್ಲೇ ಬಿಜೆಪಿನ ಸೋಲಿಸಿಬಿಡ್ತಾರಾ?

ಸರಿ ಬಿಡಿ, ನಿಮ್ಮ ಮುಂದಿನ ಪ್ಲ್ಯಾನ್ ಏನು ?

- ಏನಿಲ್ಲ, ಎಲ್ಲಿ ಎಲೆಕ್ಷನ್ ಇರುತ್ತೋ ಅ ಹೋಗಿ ಯಾತ್ರೆ ಮಾಡ್ಕೊಂಡು ಬರೋದು; ಹೆಂಗಿದ್ರೂ ಜನ ವೋಟ್ ಹಾಕಲ್ಲ ಅಂತ ಗೊತ್ತು, ಟೈಮ್ ಪಾಸ್‌ಗೆ ಟೂರ್ ಮಾಡಿದ ಹಾಗಾದ್ರೂ ಆಗುತ್ತೆ.

(ಕಾಲ್ಪನಿಕ ಸಂದರ್ಶನ)

ಲೈನ್‌ ಮ್ಯಾನ್

ಖೇಮು: ಗುರೂ, ಇವತ್ತು ಟಿವಿ ನ್ಯೂಸ್‌ನಲ್ಲಿ ‘ಎ ಗ್ರೂಪ್ ಆಫ್ ಟೆರರಿಸ್ಟ್ ವಾಸ್ Founded by Indian police’ ಅಂತ ಹೇಳಿದ್ರು. ನಮ್ಮ ಇಂಡಿಯಾದ ಪೊಲೀಸ್‌ ನವರೂ ಟೆರರಿಸ್ಟ್ ಆಗ್ತಿದಾರಾ?

- ಸೋಮು: ಲೋ ಖೇಮು, ಅದು Founded ಅಲ್ಲ ಕಣೋ, Found dead

ಇಂಗ್ಲಿಷ್‌ನಲ್ಲಿ ರೋಡ್ ಮೂವೀಸ್ ಅಂತಲೇ ಫೇಮಸ್ ಆಗಿರೋ, ರೋಡ್‌ನಲ್ಲಿ ನಡೆಯುವ ಕಥೆ ಇರೋ ಚಿತ್ರಗಳಿಗೆ ಕನ್ನಡ ಚಿತ್ರರಂಗ ಕೊಟ್ಟ ಹೊಸ ಹೆಸರು

- ‘ರೋಡಿಸಂ’ ಚಿತ್ರಗಳು

ಲೈಫಲ್ಲಿ ಜಾಸ್ತಿ ಜನ ಹುಡುಗೀರನ್ನ ಲವ್ ಮಾಡೋದರ ಅಪಾಯ

- ಮುಂದೆ ಮದುವೆ ಆದಮೇಲೆ ಸ್ಯಾಡ್ ಸಾಂಗ್ ಕೇಳುವಾಗ ಯಾವ ಗರ್ಲ್ ಫ್ರೆಂಡ್‌ನ ನೆನಪಿಸ್ಕೊಬೇಕು ಅಂತ ಕನ್ ಫ್ಯೂಸ್ ಆಗುತ್ತೆ.

ಎಲ್ಲರೂ ಆಗಾಗ ಇವತ್ತಿಂದ ಬಿಡ್ತೀನಿ, ಬಿಟ್ಟೇ ಬಿಡ್ತೀನಿ ಅನ್ನೋದು, ಆದ್ರೆ ಬಿಡದೇ ಇರೋದು

- ಸಿಗರೇಟು, ಗುಂಡು ಮತ್ತು ಫೇಸ್‌ಬುಕ್

ಇವತ್ತಿಂದ ಶುರು ಮಾಡ್ತೀನಿ, ಮಾಡೇ ಮಾಡ್ತೀನಿ ಅನ್ನೋದು, ಆದ್ರೆ ಮಾಡದೇ ಇರೋದು

- ಬೆಳಗ್ಗೆ ಮುಂಚೆ ಎದ್ದು ಜಿಮ್ ಗೆ, ಜಾಗಿಂಗ್‌ಗೆ ಹೋಗೋದು

ಬಿಡ್ಬೇಕು ಅಂತ ಆಸೆ ಇದ್ರೂ ಎಲ್ಲೂ ಹೇಳಿಕೊಳ್ಳೋಕೆ ಆಗದೇ ಇರೋದು

- ಹೆಂಡತಿ

ನೆಚ್ಚಿನ ನಾಯಕ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಅಭಿಮಾನಿಗಳಿಗೆ ಆಗುವ ಭಯ

- ಫ್ಯಾನಿಕ್

ಕಾಬೂಲ್‌ನಿಂದ ಯಾರಾದ್ರೂ ಖರ್ಜೂರ ತಂದುಕೊಟ್ರೆ ಏನು ಹೇಳಬೇಕು?

- ಕಬೂಲ್ ಹೈ

ಕಾಫಿ ಕುಡಿಯೋನು ಪರೀಕ್ಷೆಯಲ್ಲಿ ಕಾಪಿ ಹೊಡೀತಾನೆ ಅಂತಾದ್ರೆ, ಟೀ ಕುಡಿ ಯೋನು?

- ಅವನೂ ಕಾಪಿ ಹೊಡೀತಾನೆ. ಟೀ ಕುಡಿಯೋರು ಕಾಪಿ ಹೊಡೆಯಲ್ಲ ಅಂತ ಯಾರ್ ಹೇಳಿದ್ರು?

ಅಶ್ಲೀಲ ವಿಷಯಗಳಿರೋ, ಹಿಂದಿ ಭಾಷೆಯಲ್ಲಿರೋ ಒಂದು ಇ-ಮೇಲ್ ಬಂದ್ರೆ ಅದನ್ನು ಏನಂತಾರೆ?

- ಮೈಲೀ

ಪುಟಗಟ್ಟಲೇ ಉದ್ದ ಇರುವ ಮೇಲ್ ಅನ್ನು ಏನಂತಾರೆ?

- ಮೈಲು

ಮುಖದಲ್ಲಿ ಎದ್ದು ಕಾಣುವಂಥ ಮೂಗು ಇರುವ ಹುಡುಗಿಯನ್ನು ಏನಂತಾರೆ?

- ಮೂಗಿ

ಕ್ರಿಕೆಟ್ ಕಾಮೆಂಟರಿ:

ಆಟಡ್ಝಿಛ್ಟಿo Zಛಿ ಟಠಿ

ಜಜಿqಜ್ಞಿಜ ಟಟಞ.

- ಖೇಮು: ಅವ್ರೇನ್ ಓಯೋ ಓನರ‍್ಸಾ?

ಕಪ್ಪು ಹಣ ಕೂಡಿಟ್ಟವನು ಸತ್ತರೆ

- ಅದು ಬ್ಲ್ಯಾಕ್ ‘ಟಿಕೆಟ್