ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಅಕ್ಕಸಾಲಿಗ: ಹೊಳೆವುದೆಲ್ಲಾ ಚಿನ್ನವಲ್ಲ, ಲೇಖಕ ಹೊಳೆವುದೆಲ್ಲಾ ಐಡಿಯಾ ಅಲ್ಲ

ಪ್ರತಿವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರಮಂದಿರಗಳಿಂದ ಮಾಯ ವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೊಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ

ಅಕ್ಕಸಾಲಿಗ: ಹೊಳೆವುದೆಲ್ಲಾ ಚಿನ್ನವಲ್ಲ, ಲೇಖಕ ಹೊಳೆವುದೆಲ್ಲಾ  ಐಡಿಯಾ ಅಲ್ಲ

ಹರಿ ಪರಾಕ್‌ ಹರಿ ಪರಾಕ್‌ Jul 13, 2025 11:07 AM

ತುಂಟರಗಾಳಿ

ಸಿನಿಗನ್ನಡ

ಫೇಸ್‌ಬುಕ್‌ನಲ್ಲಿ ಯಾರೋ ಪೋ ಹಾಕಿದ್ರು, ಅವರು ಪ್ರತಿದಿನ ಮಾಲ್ ಗೆ ಸಿನಿಮಾ ನೋಡೋಕೆ ಹೋಗೋದ್ ನೋಡಿ, ಅಲ್ಲಿನ ಸೆಕ್ಯುರಿಟಿ, “ಸರ್, ನೀವು ಇ ಕೆಲಸ ಮಾಡೋದಾ?" ಅಂತ ಕೇಳಿ ದ್ನಂತೆ. ಕೇಳೋಕೆ ತಮಾಷೆಯಾಗಿದ್ದರೂ ಇದು ಸತ್ಯ. ಸಿನಿಮಾ ಪ್ರಿಯರ ಬಳಿ ಈಗ ನೋಡ್ಬೇಕು ಅಂತಿರೋ ಸಿನಿಮಾಗಳ ಪಟ್ಟಿಗಿಂತ, ನೋಡಿ ರುವ ಸಿನಿಮಾಗಳ ಪಟ್ಟಿಗಿಂತ, ನೋಡಬೇಕಾಗಿತ್ತು ಆದ್ರೆ ಆಗ್ಲಿಲ್ಲ ಅನ್ನೋ ಸಿನಿಮಾಗಳ ಪಟ್ಟಿಯೇ ದೊಡ್ಡದಾಗಿದೆ.

ಪ್ರತಿವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರಮಂದಿರ ಗಳಿಂದ ಮಾಯವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೊಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ. ಹಾಗಾಗಿ ಅಪ್ಪಟ ಚಿತ್ರಪ್ರೇಮಿಗಳು, “ಅಯ್ಯೋ, ಆ ಸಿನಿಮಾ ನೋಡೋಕಾಗ್ಲಿಲ್ಲ, ಈ ಸಿನಿಮಾ ನೋಡೋಕಾಗ್ಲಿಲ್ಲ" ಅಂತ ಕೊರಗೋದು ತಪ್ಪುತ್ತಿಲ್ಲ. ಬರೀ ಸಿನಿಮಾ ಪ್ರೇಮಿಗಳು ಯಾಕೆ, ಸ್ವತಃ ಸಿನಿಮಾ ಪತ್ರಕರ್ತರು ಮತ್ತು ವಿಮರ್ಶಕರಿಗೇ ಎಲ್ಲ ಸಿನಿಮಾಗಳನ್ನು ನೋಡೋಕೆ ಆಗ್ತಿಲ್ಲ. ಹಾಗೊಂದು ವೇಳೆ ಹಠಕ್ಕೆ ಬಿದ್ದು ದಿನಕ್ಕೆರಡು ಸಿನಿಮಾ ನೋಡಿದರೂ ಕೊನೆಯ ಸಿನಿಮಾ ವಿಮರ್ಶೆ ಮಾಡುವ ಹೊತ್ತಿಗೆ ಮುಂದಿನ ವಾರದ ಸಿನಿಮಾಗಳು ಬಿಡುಗಡೆ ಆಗಿರುತ್ತವೆ.

ಇದನ್ನೂ ಓದಿ: Hari Paraak Column: ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್‌ ಹೌಸ್:‌ ಸೋಪ್‌ ಫ್ಯಾಕ್ಟರಿ

ಒಟ್ಟಿನಲ್ಲಿ ಕೆಲವು ಸಿನಿಮಾಗಳು ತಮ್ಮ ಕಳಪೆ ಕ್ವಾಲಿಟಿಯಿಂದ ಜನರನ್ನು ತಲುಪಲು ವಿಫಲವಾಗು ತ್ತಿದ್ದರೆ, ಹಲವು ಸಿನಿಮಾಗಳು ಎಲ್ಲಾ ಇದ್ದರೂ ಓವರ್ ಕಾಂಪಿಟೇಶನ್ ನಿಂದ ಜನರಿಗೆ ತಲುಪುತ್ತಿಲ್ಲ ಅನ್ನೋದಂತೂ ನಿಜ.

ಲೂಸ್‌ ಟಾಕ್-‌ ರಶ್ಮಿಕಾ ಮಂದಣ್ಣ

ಏನ್ರೀ, ಕೊಡವರ ಊರಿಗೆ ನಾನೊಬ್ಳೇ ಪದ್ಮಾವತಿ ಅಂತ ಹೇಳಿ ವಿವಾದ ಮೈಮೇಲೆ ಎಳೆದುಕೊಂಡ್ರ?

- ರೀ, ನಾನು ಊರಿನ ಬಗ್ಗೆ ಮಾತಾಡೇ ಇಲ್ಲ, ನಾನು ಮಾತಾಡಿದ್ದು ಕೇರಿ ಬಗ್ಗೆ, ಮಡಿಕೇರಿ ಬಗ್ಗೆ

ಅಯ್ಯೋ, ಅದೇ ಕಣ್ರೀ.. ನಮ್ ಕೇರಿಯಿಂದ ಸಿನಿಮಾಗೆ ಬಂದಿದ್ದು ನಾನೇ - ಅಂದು ಮುಖ ಕೆಡಿಸಿಕೊಂಡ್ರಲ್ಲ ಬೇಕಿತ್ತಾ?

- ಹಂಗಾ, ಇರ್ಲಿ, ಈ ಕೊಡವ ಅನ್ನೋ ವಿವಾದಗಳೆಲ್ಲ ನನಗೆ ಯಾವ ಲೆಕ್ಕ, ಸುಲಭವಾಗಿ ಕೊಡವಿಕೊಂಡು ಮೇಲೆದ್ದು ಬರ್ತೀನಿ ಬಿಡಿ.

ಸರಿ, ಈಗ್ಲಾದ್ರೂ ನಿಮ್ಮ ಕೇರಿಯಿಂದ, ಐ ಮೀನ್ ಮಡಿಕೇರಿಯಿಂದ ಯಾರ‍್ಯಾರು ಚಿತ್ರರಂಗಕ್ಕೆ ಬಂದಿದ್ದಾರೆ ಅಂತ ಗೊತ್ತಾಯ್ತಾ?

Rashmika Mandanna (1)

- ಹೋಗ್ರೀ ನಾನ್ ಅದಕ್ಕೆ ಕೇರ್ ಮಾಡಲ್ಲ. ಚಿತ್ರರಂಗಕ್ಕೆ ಬರೋದು ಮುಖ್ಯ ಅಲ್ಲ, ನನ್ ಥರ ಪ್ಯಾನ್ ಇಂಡಿಯಾ ಸ್ಟಾರ್ ಆಗೋದು ಮುಖ್ಯ

ಓ ಸಮಾಧಾನ, ನಿಮ್ ಥರ ಪ್ಯಾನ್ ಇಂಡಿಯಾ ‘ಸ್ಟಾರ್’ ಆದೋರೆ ಪಾನ್ ಇಂಡಿಯಾ ಸ್ಟಾರ್‌ಗಳ ಥರ ವಿಮಲ, ಸ್ಟಾರ್ ಮಾರ್ತಾ ಇದ್ದಾರೆ ಗೊತ್ತಾ?

- ಮಾರ್ಲಿ ಬಿಡಿ. ನಂಗೆ ಅವಕಾಶ ಸಿಕ್ರೆ ನಾನೂ ಮಾರ್ತೀನಿ. ‘ನಾರಿ ಮುನಿದರೆ ಮಾರಿ’ ಗೊತ್ತಲ್ಲ

ಮಾರಿದ್ರೂ ಮಾರ್ತೀರಾ ಬಿಡಿ. ಆದ್ರೆ ಆಗಾಗ ನೀವು ಕನ್ನಡತಿ ಅನ್ನೋದನ್ನ ಮರೀತೀರಲ್ಲ ಯಾಕೆ?

- ಏನ್ ಮಾಡೋದು, ನಾನು ಒಂಥರಾ ಸೇಂಟ್ ಜೋಸೆಫ್‌ ಹುಡುಗಿ ಇದ್ದಂಗೆ, ಜತೆಗೆ ಮೊದಲನೇ ಸಿನಿಮಾದಲ್ಲಿ ಸಾನ್ವಿ ಜೋಸೆಫ್ ಅಂತ ಬೇರೆ‌ ಹೆಸರಿಟ್ಟುಬಿಟ್ಟಿದ್ರು. ಅದಕ್ಕೇ ಈಗ ‘ಕನ್ನಡ ರಕ್ಷತಿ ರಕ್ಷಿತಃ’ ಅನ್ನೋದು ಮರೆತುಹೋಗಿದೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್‌

ಖೇಮು ಟ್ರೈನಲ್ಲಿ ಟಿಸಿ ಆಗಿದ್ದ. ಅವತ್ತು ಟ್ರೈನ್ ಫುಲ್ ರಷ್ ಇತ್ತು. ಟ್ರೈನ್ ತುಂಬಾ ಗಿಜಿಗುಡುವಷ್ಟು ಜನ. ಹೇಗೋ ಟ್ರೈನ್ ಒಳಗೆ ಹತ್ತಿ ಬಂದು ತನ್ನ ಸೀಟಿನಲ್ಲಿ ಕೂರುವಷ್ಟರಲ್ಲಿ ಖೇಮು ಫುಲ್ ಸುಸ್ತು. ಖೇಮು ಪಕ್ಕದಲ್ಲಿ ಒಬ್ಬ ಸರ್ದಾರ್ಜಿ ಕೂತಿದ್ದ. ಟಿಸಿ ತನ್ನ ಪಕ್ಕದ ಬಂದು ಕೂತಿದ್ದನ್ನು ನೋಡಿದ ಸರ್ದಾರ್ಜಿ ಖುಷಿಯಾಗಿ, ಸದ್ಯ ಅಂದುಕೊಂಡು, “ಸರ್, ನಾನು ಜಲಂಧರ್‌ನಲ್ಲಿ ಇಳಿಯಬೇಕು, ಈಗ ನಿದ್ದೆ ಬರ್ತಿದೆ. ನಾನು ಮಲಗಿರ್ತೀನಿ. ಜಲಂಧರ್ ಬಂದ ಕೂಡ್ಲೇ ಎಬ್ಬಿಸ್ತೀರಾ?" ಅಂತ ಕೇಳಿದ.

ಅದಕ್ಕೆ ಖೇಮು, “ಆಯ್ತು ಬಿಡಿ, ಅದಕ್ಕೇನು ಎಬ್ಬಿಸ್ತೀನಿ" ಅಂದ. ಅಲ್ಲಿಗೇ ಸುಮ್ಮನಾಗದ ಸರ್ದಾರ್ಜಿ, “ಸರ್, ಇನ್ನೊಂದು ಮಾತು, ನಾನು ಪೂರ್ತಿ ನಿದ್ದೆಯಲ್ಲಿದ್ದಾಗ ಯಾರಾದ್ರೂ ಎಚ್ಚರಿಸಿದ್ರೆ ಸ್ವಲ್ಪ ಕೋಪ ಬರುತ್ತೆ, ನಾನು ಏನೇ ಅಂದ್ರೂ ಬೇಜಾರು ಮಾಡ್ಕೊಬೇಡಿ, ನಾನು ಇಳಿಯಲ್ಲ ಅಂತ ಏನೇ ಹಠ ಮಾಡಿದ್ರೂ ಬಲವಂತವಾಗಿಯಾದ್ರೂ ನನ್ನನ್ನ ಜಲಂಧರ್‌ನಲ್ಲಿ ಇಳಿಸಿ" ಅಂದ.

ಸರಿ, ಟ್ರೈನ್ ಹೊರಟಿತು. ಖೇಮು ತನ್ನ ಕೆಲಸದಲ್ಲಿ ಬ್ಯುಸಿ ಆದ. ಎಲ್ಲರೂ ನಿದ್ದೆ ಹೋದರು. ಸರ್ದಾರ್ಜಿ ಎದ್ದು ನೋಡುವಾಗ ಬೆಳಗಾಗಿತ್ತು. ಇನ್ನೂ ಜಲಂಧರ್ ಬಂದಿಲ್ವಾ ಅಂತ ಹೊರಗೆ ನೋಡಿದಾಗ, ಅದು ಆಗ್ಲೇ ಹಿಂದೆ ಹೋಗಿದೆ ಅಂತ ಗೊತ್ತಾಗಿ ಅವನಿಗೆ ಬೇಜಾರು, ಸಿಟ್ಟು ಎರಡೂ ಬಂತು. ಟಿಸಿ ಖೇಮು ಹತ್ರ ಸೀದಾ ಬಂದವನೇ, “ನಾನು ಜಲಂಧರ್‌ನಲ್ಲಿ ಇಳಿಸಿ ಅಂತ ಹೇಳಿರಲಿಲ್ವಾ ನಿಮಗೆ, ಆಗಲ್ಲ ಅಂದ್ರೆ ಮೊದ್ಲೇ ಹೇಳಬೇಕಿತ್ತು. ನಾನು ಬೇರೆಯವರಿಗೆ ಹೇಳ್ತಾ ಇದ್ದೆ.

ಹಿಂಗಾ ನೀವು ಕೆಲ್ಸ ಮಾಡೋದು?" ಅಂತ ಕೆಟ್ಟ ಕೆಟ್ಟ ಪದಗಳನ್ನೆ ಪ್ರಯೋಗಿಸಿ ಹಿಗ್ಗಾಮುಗ್ಗಾ ಝಾಡಿಸತೊಡಗಿದ. ಅವನನ್ನು ನೋಡಿ ಖೇಮು ಗರಬಡಿದವನಂತೆ ನಿಂತಿದ್ದನೇ ಹೊರತು ಒಂದು ಮಾತೂ ಆಡಲಿಲ್ಲ. ಪಕ್ಕದಲ್ಲಿದ್ದ ಜನ ಖೇಮುವನ್ನು ನೋಡಿ “ಅಲ್ರೀ, ಅವನು ನಿಮಗೆ ಅಷ್ಟೊಂದು ಬಯ್ತಾ ಇzನೆ. ಸ್ವಲ್ಪ ಸಮಾಧಾನ ಮಾಡೋದ್ ಬಿಟ್ಟು ಏನ್ ಯೋಚ್ನೆ ಮಾಡ್ತಾ ಇದ್ದೀರ?" ಅಂತ ಕೇಳಿದ್ರು. ಅದಕ್ಕೆ ಖೇಮು ಮೆಲ್ಲಗೆ ಹೇಳಿದ “ಇವಂದು ಹೋಗ್ಲಿ ಬಿಡಿ, ಆವಾಗ್ಲೇ ನಾನು ಜಲಂಧರ್ ನಲ್ಲಿ ಒಬ್ಬ ಸರ್ದಾರ್ಜಿಯನ್ನ, ‘ಬೇಡ ನಾನ್ ಇಳಿಯಲ್ಲ, ಇಳಿಸಬೇಡಿ’ ಅಂತ ಆತ ಎಷ್ಟು ಬೇಡಿಕೊಂಡ್ರೂ ಕೇಳದೆ, ಒದ್ದು ಒದ್ದು ಟ್ರೈನಿಂದ ಕೆಳಗೆ ಇಳಿಸಿದ್ದೆ. ಆಕ್ಚುಯಲಿ ನಾನು ಅವನ ಪರಿಸ್ಥಿತಿ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ".

ಲೈನ್‌ ಮ್ಯಾನ್

ಇಂದಿನ ಸರಕಾರಗಳಲ್ಲಿ ಚೀಫ್ ಮಿನಿಸ್ಟರ್ ಆಗೋಕೆ ಬರೀ ಸಜ್ಜನ‌ ಆಗಿದ್ರೆ ಆಗಲ್ಲ

- ಅವ್ರ್ ‘ಯಾವ್ ಜನ’ ಅನ್ನೋದೂ ಮುಖ್ಯ ಆಗುತ್ತೆ.

ನಗರದ ಹೊರವಲಯದಲ್ಲಿ ಸೈಟ್ ತಗೊಂಡೋರು ಆಗಾಗ ಹೋಗಿ ನೋಡ್ಕಂಡ್ ಬರೋದು

- ಸೈಟ್ ಸೀಯಿಂಗ್

ಮಕ್ಕಳ ಭಾಷೆ ಖೇಮು: ಕೊಳಿ ಕೊಯ್ದರೇನೋ?

ಮರಿಖೇಮು: ಇನ್ನೂ ಇಲ್ಲಾ ಪಪ್ಪಾ, ಬರೀ ಡ್ರೆಸ್ ಬಿಚ್ಚವ್ರೇ

ಕೆಲವು ನಾಯಿಗಳನ್ನ ಓನರ್‌ಗಳು ಯಾವ್ ರೇಂಜ್‌ಗೆ ಸಾಕಿರ್ತಾರೆ ಅಂದ್ರೆ, ಅವಕ್ಕೆ ತಾನು ನಾಯಿ ಅನ್ನೋದೇ ಮರೆತು ಹೋಗಿರುತ್ತೆ. ಮೊನ್ನೆ ಹಿಂಗೇ ಫ್ರೆಂಡ್ ಜತೆ ಕಾರಲ್ಲಿ ಹೋಗ್ತಾ ಇದ್ದೆ. ಜತೆಗೆ ಅವನ ನಾಯಿನೂ ಇತ್ತು. ಬೀದಿನಾಯಿಗಳು ಅದನ್ನ ನೋಡಿ ಬೊಗಳ್ತಾ ಇದ್ರೆ ಇದು ಮಾತ್ರ ಗಂಭೀರವಾಗಿ ಕೂತಿತ್ತು. ‘ಯಾಕಪ್ಪಾ, ಅವು ನಿನ್ನ ನೋಡಿ ಬೊಗಳ್ತಾ ಇವೆ, ನೀನ್ ಬೊಗಳಲ್ವಾ?’ ಅಂದಿದ್ದಕ್ಕೆ ಏನ್ ಹೇಳ್ತು ಗೊತ್ತಾ?

- “ಅಯ್ಯೋ, ಹೋಗ್ಲಿ ಬಿಡಿ, ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತಾ?"

ಆಧುನಿಕ ಹೋಲಿಕೆ

ಬುದ್ಧಿ ಇಲ್ಲದೇ ಇರೋ ಸೌಂದರ್ಯ, ರೆಸಲ್ಯೂಶನ್ ಇಲ್ದೇ ಇರೋ ಫೋಟೋ, ವಿಡಿಯೋ ಎರಡೂ ಒಂದೇ..

Uninteresting

ಅನುಭವದ ಮಾತು

ಅಕ್ಕಸಾಲಿಗ: ಹೊಳೆಯುವುದೆ ಚಿನ್ನವಲ್ಲ

ಬರಹಗಾರ: ಹೊಳೆಯುವುದೆ ಐಡಿಯಾ ಅಲ್ಲ

ಬೋರಿಂಗ್ ವಿಷ್ಯ

“ನಮ್ ಹೊಲದಲ್ಲಿ 3 ಸಲ ಬೋರ್ ಹಾಕಿಸಿದೆ, ಆದ್ರೂ ನೀರ್ ಬೀಳಲಿಲ್ಲ, ಇನ್ನೊಂದ್ಸಲ

ಹಾಕಿಸ್ಬೇಕು". “3 ಸಲ ಹಾಕ್ಸಿನೂ ಬೋರ್ ಆಗಿಲ್ವಾ".

ಪ್ರಶ್ನೋತ್ತರ

“ನಿಮ್ಮತ್ರ ಕಾರಿಲ್ವಾ ಸರ್?"

“ಇಲ್ಲಪ್ಪ, ಲೈಫಲ್ಲಿ ಇನ್ನೂ ಸೈಕಲ್ ಹೊಡೀತಾ ಇದೀನಿ".