Roopa Gururaj Column: ಬದುಕಿಗೆ ಮರು ಉಡುಗೊರೆ ನೀಡಿದ ಗ್ರೇಸ್ ಗ್ರೋನರ್
ಗ್ರೇಸ್ ಗ್ರೋನರ್ ಕಥೆ ನಮಗೆ ಕಲಿಸುವುದು ಕೇವಲ ಹಣದ ಹೂಡಿಕೆಯನ್ನಲ್ಲ; ಬದಲಾಗಿ ಸಂಸ್ಕಾರದ ಹೂಡಿಕೆಯನ್ನು. ಶ್ರೀಮಂತಿಕೆ ಎಂದರೆ ಪ್ರದರ್ಶನವಲ್ಲ, ಅದು ನಮ್ಮ ಅಂತ ರಂಗದ ನೆಮ್ಮದಿ. ಅವರು ಕೊನೆಗೆ ತಮ್ಮ ಷೇರುಗಳು, ತಮ್ಮ ಸರಳತೆ ಹೀಗೆ ಯಾವುದನ್ನೂ ಮಾರಾಟ ಮಾಡಲಿಲ್ಲ. ಇಂದು ಗ್ರೇಸ್ ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಸಾವಿರಾರು ವಿದ್ಯಾರ್ಥಿಗಳ ಕಣ್ಣಿನ ಹೊಳಪಿನಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ.
-
ಒಂದೊಳ್ಳೆ ಮಾತು
1920ರ ದಶಕದ ಅಮೆರಿಕದಲ್ಲಿ ಗ್ರೇಸ್ ಗ್ರೋನರ್ ಒಬ್ಬ ಅನಾಥ ಬಾಲಕಿಯಾಗಿದ್ದಳು. ಅಪ್ಪ-ಅಮ್ಮನಿಲ್ಲದ ಆಕೆಗೆ ಜಗತ್ತು ದೊಡ್ಡದಾಗಿ, ಭಯಾನಕವಾಗಿ ಕಂಡಿರಬಹುದು. ಆದರೆ, ಒಂದು ಪುಟ್ಟ ಕರುಣೆಯ ಕಿರಣ ಆಕೆಯ ಜೀವನದ ದಿಕ್ಕನ್ನೇ ಬದಲಿಸಿತು. ಒಂದು ಸಹೃದಯಿ ಕುಟುಂಬ ಆಕೆಯನ್ನು ದತ್ತು ಪಡೆದು, ಲೇಕ್ ಫಾರೆಸ್ಟ್ ಕಾಲೇಜಿನಲ್ಲಿ ಓದಲು ನೆರವಾಯಿತು.
ಅಂದು ಸಿಕ್ಕ ಆ ಅವಕಾಶ ಗ್ರೇಸ್ ಪಾಲಿಗೆ ಬರಿಯ ಶಿಕ್ಷಣವಾಗಿರಲಿಲ್ಲ; ಅದು ಅವಳು ಮುಂದೆ ಜಗತ್ತಿಗೆ ನೀಡಲಿರುವ ಅಪಾರ ಕೊಡುಗೆಯ ಬೀಜವಾಗಿತ್ತು.
1931ರಲ್ಲಿ ಪದವಿ ಮುಗಿಸಿದ ಗ್ರೇಸ್, ಆರ್ಥಿಕ ಕುಸಿತದ (Great Depression) ಕರಾಳ ದಿನ ಗಳಲ್ಲಿ ಅಬಾಟ್ ಲ್ಯಾಬೊರೇಟರೀಸ್‌ನಲ್ಲಿ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿದರು. ಸುತ್ತಲೂ ಹಸಿವು, ನಿರುದ್ಯೋಗ ಮತ್ತು ಹತಾಶೆ ಮನೆ ಮಾಡಿದ್ದ ಕಾಲವದು.
ಇದನ್ನೂ ಓದಿ: Roopa Gururaj Column: ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುವ ತಂದೆ-ತಾಯಿ
ಅಂಥ ಸಂದರ್ಭದಲ್ಲಿ, 1935ರಲ್ಲಿ ಗ್ರೇಸ್ ಒಂದು ಮಹತ್ವದ ತೀರ್ಮಾನ ಮಾಡಿದರು. ತಮ್ಮ ಬಳಿಯಿದ್ದ ಕೇವಲ 180 ಡಾಲರ್ ಹಣವನ್ನು ಹೂಡಿಕೆ ಮಾಡಿ ಅಬಾಟ್ ಕಂಪನಿ ಯ ಮೂರು ಷೇರುಗಳನ್ನು ಖರೀದಿಸಿದರು. ಆಗ ಅವರಿಗೆ ತಿಳಿದಿರಲಿಲ್ಲ, ಆ 180 ಡಾಲರ್ ಗಳು ಒಂದು ದಿನ ಕೋಟ್ಯಂತರ ಪಟ್ಟು ಹೆಚ್ಚಾಗಿ ಮಾರ್ಪಟ್ಟು ನೂರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುತ್ತವೆ ಎಂದು. ನಂತರದ 75 ವರ್ಷಗಳಲ್ಲಿ ಪ್ರಪಂಚ ಎಷ್ಟೋ ಬದಲಾ ಯಿತು. ಯುದ್ಧಗಳು ನಡೆದವು, ಆರ್ಥಿಕ ಏರಿಳಿತಗಳಾದವು.
ಜನರು ಆತುರದಿಂದ ಷೇರುಗಳನ್ನು ಮಾರಿದರು, ಲಾಭ ಮಾಡಿಕೊಂಡರು, ನಷ್ಟ ಅನು ಭವಿಸಿದರು. ಆದರೆ ಗ್ರೇಸ್ ಮಾತ್ರ ಆ ಷೇರುಗಳನ್ನು ಮುಟ್ಟಲೇ ಇಲ್ಲ. ಬಂದ ಲಾಭಾಂಶ ವನ್ನೆಲ್ಲಾ (Dividend) ಮತ್ತೆ ಹೂಡಿಕೆ ಮಾಡುತ್ತಾ ಹೋದರು.
ಆಕೆಯ ಶ್ರೀಮಂತಿಕೆ ಬೆಳೆಯುತ್ತಿದ್ದರೂ, ಜೀವನ ಮಾತ್ರ ಅತ್ಯಂತ ಸರಳವಾಗಿತ್ತು. ಗ್ರೇಸ್ ವಾಸಿಸುತ್ತಿದ್ದುದು ಒಂದು ಪುಟ್ಟ ಮನೆಯಲ್ಲಿ. ಅವರು ದುಬಾರಿ ಕಾರುಗಳನ್ನು ಖರೀದಿಸ ಲಿಲ್ಲ, ಬ್ರಾಂಡೆಡ್ ಬಟ್ಟೆಗಳ ಹಿಂದೆ ಬೀಳಲಿಲ್ಲ. ಹರಿದ ಬಟ್ಟೆಗಳನ್ನು ಸರಿಪಡಿಸಿ ತೊಡು ತ್ತಿದ್ದರು, ಎಡೆ ನಡೆದುಕೊಂಡೇ ಹೋಗುತ್ತಿದ್ದರು.
ತಮ್ಮ 90ರ ಹರೆಯದಲ್ಲೂ ವಾಕರ್ ಸಹಾಯದಿಂದ ರಸ್ತೆಯಲ್ಲಿ ಸಾಗುತ್ತಿದ್ದ ಈ ವೃದ್ಧೆ ಯನ್ನು ನೋಡಿ ಯಾರಿಗೂ ಈಕೆ ಒಬ್ಬ ಕೋಟ್ಯಧಿಪತಿ ಎಂದು ಊಹಿಸಲೂ ಸಾಧ್ಯ ವಾಗಲಿಲ್ಲ.
2010ರಲ್ಲಿ, ತಮ್ಮ 100ನೇ ವಯಸ್ಸಿನಲ್ಲಿ ಗ್ರೇಸ್ ಇಹಲೋಕ ತ್ಯಜಿಸಿದರು. ಗ್ರೇಸ್ ನಿಧನ ರಾದಾಗ ಆಕೆಯ ಆಸ್ತಿಯ ಮೌಲ್ಯ ತಿಳಿದು ಇಡೀ ಜಗತ್ತೇ ಬೆರಗಾಯಿತು. ಅನಾಥ ಹುಡುಗಿ ಯಾಗಿದ್ದಾಗ ಆಕೆ 180 ಡಾಲರ್‌ನಿಂದ ಆರಂಭಿಸಿದ ಹೂಡಿಕೆ 7 ಮಿಲಿಯನ್ ಡಾಲರ್ (ಅಂದಾಜು 58 ಕೋಟಿ ರುಪಾಯಿ) ಆಗಿ ಬೆಳೆದಿತ್ತು!
ಆದರೆ ಗ್ರೇಸ್ ಬಗ್ಗೆ ನಿಜವಾಗಿ ಗೌರವ ಮೂಡುವುದು ಆ ಹಣದ ವಿಚಾರದಿಂದ ಅಲ್ಲ. ಆ ಹಣವನ್ನು ತಮಗಾಗಿ ಆಕೆ ಬಳಸಿಕೊಳ್ಳಲಿಲ್ಲ ಎಂದು ತಿಳಿದಾಗ. ತಮಗೆ ಬದುಕು ಕೊಟ್ಟ ಅದೇ ಲೇಕ್ ಫಾರೆಸ್ಟ್ ಕಾಲೇಜಿಗೆ ಆ ಸಂಪೂರ್ಣ ಹಣವನ್ನು ದಾನವಾಗಿ ನೀಡಿದರು ಗ್ರೇಸ್. ತಾವು ಅನುಭವಿಸಿದ ಶಿಕ್ಷಣದ ಸುಖ, ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ಗೂ ಸಿಗಲಿ ಎಂಬುದು ಅವರ ಕನಸಾಗಿತ್ತು. ಗ್ರೇಸ್ ಗ್ರೋನರ್ ವಾಸಿಸುತ್ತಿದ್ದ ಆ ಪುಟ್ಟ ಮನೆ ಇಂದು ಕಾಲೇಜಿನ ವಿದ್ಯಾರ್ಥಿನಿಯರ ವಸತಿಗೃಹವಾಗಿದೆ. ಅವರ ಹೆಸರಿನ ಪ್ರತಿಷ್ಠಾನವು ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ನೀರೆರೆಯುತ್ತಿದೆ.
ಗ್ರೇಸ್ ಗ್ರೋನರ್ ಕಥೆ ನಮಗೆ ಕಲಿಸುವುದು ಕೇವಲ ಹಣದ ಹೂಡಿಕೆಯನ್ನಲ್ಲ; ಬದಲಾಗಿ ಸಂಸ್ಕಾರದ ಹೂಡಿಕೆಯನ್ನು. ಶ್ರೀಮಂತಿಕೆ ಎಂದರೆ ಪ್ರದರ್ಶನವಲ್ಲ, ಅದು ನಮ್ಮ ಅಂತ ರಂಗದ ನೆಮ್ಮದಿ. ಅವರು ಕೊನೆಗೆ ತಮ್ಮ ಷೇರುಗಳು, ತಮ್ಮ ಸರಳತೆ ಹೀಗೆ ಯಾವುದನ್ನೂ ಮಾರಾಟ ಮಾಡಲಿಲ್ಲ. ಇಂದು ಗ್ರೇಸ್ ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಸಾವಿರಾರು ವಿದ್ಯಾರ್ಥಿಗಳ ಕಣ್ಣಿನ ಹೊಳಪಿನಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ.
ಅನಗತ್ಯವಾಗಿ ಶಾಪಿಂಗ್ ಮಾಡುತ್ತಾ, ಮೊಬೈಲ್ ಫೋನ್‌ನ ಒಂದು ‘ಕ್ಲಿಕ್’ನಲ್ಲಿ ಸಾವಿರಾರು ರು. ಖರ್ಚು ಮಾಡಿ ಬಿಡುವ ಅನೇಕರಿಗೆ ಇಂಥವರ ಜೀವನದ ಕಥೆಗಳು ಜೀವನಪಾಠವಾಗ ಬೇಕು. ದೇವರು ನಮಗೆ ಅನುಕೂಲ ಕೊಟ್ಟಾಗ ಅಗತ್ಯವಿರುವ ಬೇರೆ ಜನರೊಡನೆ ಅದನ್ನು ಹಂಚಿಕೊಳ್ಳುವ ದೊಡ್ಡ ಗುಣವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಸಾವಿರ ದಾರಿಗಳಿವೆ, ಆದರೆ ಮನಸ್ಸು ಮಾತ್ರ ನಾವೇ ಮಾಡಬೇಕು...