Narada Sanchara: ಇಲ್ಲೂ ‘ಬಿಲ್-ವಿದ್ಯಾ’ ಪ್ರವೀಣರು!
ರತ್ಲಂನ ನಿವಾಸಿಯೊಬ್ಬ ಗಾಯಗೊಂಡು, ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಯ ಮೊರೆ ಹೋದ. ತಪಾಸಣೆ ಮಾಡಿದ ವೈದ್ಯರು ಅವನನ್ನು ಉಪಾಯವಾಗಿ ಐಸಿಯು ಘಟಕಕ್ಕೆ ದಾಖಲಿಸಿ, ನಂತರ ಅಲ್ಲಿಂದ ಹೊರಬಂದು ಆತನ ಕುಟುಂಬಿಕರಿಗೆ, “ನೋಡೀಪ್ಪಾ, ನಿಮ್ಮವರಿಗೆ ಬೆನ್ನುಮೂಳೆ ಮುರಿದುಹೋಗಿರೋದ್ರಿಂದ ಕೋಮಾಗೆ ಜಾರಿಬಿಟ್ಟಿದ್ದಾರೆ, ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ವಿದೆ


ನಾರದ ಸಂಚಾರ
ಕಲಹ ಪ್ರಿಯ
ಖೋಟಾ ಬಿಲ್ ಸೃಷ್ಟಿಸಿ ಸರಕಾರಕ್ಕೆ ಸಲ್ಲಿಸಿ ಹಣವನ್ನು ಮನಸೋ ಇಚ್ಛೆ ‘ಗುಳುಂ’ ಮಾಡುವ ‘ಬಿಲ್-ವಿದ್ಯಾ’ ಪ್ರವೀಣರು ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಆಸ್ಪತ್ರೆಗಳಲ್ಲೂ ಇಂಥವರು ಇರುವುದು ಜನಸಾಮಾನ್ಯರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಮಧ್ಯಪ್ರದೇಶದ ರತ್ಲಂನ ಒಂದು ಖಾಸಗಿ ಆಸ್ಪತ್ರೆಯವರು ತಾವು ಕೂಡ ಈ ವಿದ್ಯೆಯಲ್ಲಿ ಪರಿಣತರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಒಂದು ಪುಟ್ಟ ವ್ಯತ್ಯಾಸವೇನಪ್ಪಾ ಅಂದ್ರೆ, ಇವರು ಇಲ್ಲದ ಕಾಯಿಲೆಯನ್ನು ಇದೆ ಎಂದು ಬಂಡಲ್ ಬಿಟ್ಟು, ರೋಗಿಯ ಕುಟುಂಬಸ್ಥರಿಂದ ಹಣ ಪೀಕಿಸಲು ಸರ್ಕಸ್ ಮಾಡಿದ್ದಾರೆ, ಅಷ್ಟೇ.
ನಡೆದಿದ್ದು ಇಷ್ಟೇ. ರತ್ಲಂನ ನಿವಾಸಿಯೊಬ್ಬ ಗಾಯಗೊಂಡು, ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಯ ಮೊರೆ ಹೋದ. ತಪಾಸಣೆ ಮಾಡಿದ ವೈದ್ಯರು ಅವನನ್ನು ಉಪಾಯವಾಗಿ ಐಸಿಯು ಘಟಕಕ್ಕೆ ದಾಖಲಿಸಿ, ನಂತರ ಅಲ್ಲಿಂದ ಹೊರಬಂದು ಆತನ ಕುಟುಂಬಿಕರಿಗೆ, “ನೋಡೀಪ್ಪಾ, ನಿಮ್ಮವರಿಗೆ ಬೆನ್ನುಮೂಳೆ ಮುರಿದುಹೋಗಿರೋದ್ರಿಂದ ಕೋಮಾಗೆ ಜಾರಿ ಬಿಟ್ಟಿದ್ದಾರೆ,
ಇದನ್ನೂ ಓದಿ: Narada Sanchara: ‘ಮಿಸ್ಟರ್ ಫೈರ್’ರಿಂದ ‘ಮಿಸ್ ಫೈರ್’!
ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ, ಆದಷ್ಟು ಬೇಗ ಹಣ ಹೊಂದಿಸಿ" ಅಂತ ಹೇಳಿ, ಗಾಯಕ್ಕೆ ಪಟ್ಟಿ ಕಟ್ಟೋ ಬದಲು ಮಾತಲ್ಲೇ ‘ಪಟ್ಟಿ ಕಟ್ಟಿ’ದ್ದಾರೆ. ಆ ಕುಟುಂಬದವರೋ ಎದ್ದೆವೋ ಬಿದ್ದೆವೋ ಅಂತ ಹರಸಾಹಸ ಮಾಡಿ 1 ಲಕ್ಷ ರುಪಾಯಿ ಹೊಂದಿಸಿ ಆಸ್ಪತ್ರೆಗೆ ಕಟ್ಟಿದ್ದಾರೆ. ಈ ವಿಷಯವು ಐಸಿಯುನಲ್ಲಿದ್ದ ರೋಗಿಗೆ ಅದ್ಹೆಂಗೋ ತಿಳಿದು, ತನಗೆ ಆಮ್ಲಜನಕ ಪೂರೈಸುತ್ತಿದ್ದ ನಳಿಕೆಯ ಸಮೇತವೇ ಐಸಿಯುನಿಂದ ಓಡಿಬಂದು, ಜನರಿಗೆ ಈ ಅನ್ಯಾಯವನ್ನು ತಿಳಿಸಿ ಬೊಂಬಡಾ ಬಜಾಯಿಸಿದ್ದಾನೆ!
ಇದನ್ನು ಕೇಳಿದ ಜನರು ಮೂಗಿನ ಮೇಲೆ ಬೆರಳಿಟ್ಟುಕೊಂಡು, “ಅಯ್ಯೋ ಶಿವನೇ, ಹೀಗೂ ಉಂಟೇ?" ಎಂದು ನಿಬ್ಬೆರಗಾದರಂತೆ. ಜೀವರಕ್ಷಣೆಯ ಹೊಣೆಹೊರಬೇಕಾದ ಹಾಗೂ ಜನರ ಕಣ್ಣೀರು ಒರೆಸುವ ಮಾನವೀಯ ಕಾರ್ಯದಲ್ಲಿ ಸಹಭಾಗಿಗಳಾಗಬೇಕಾದ ಕೆಲ ಆಸ್ಪತ್ರೆಗಳು ಹೇಗೆ ಅದಕ್ಕೆ ವ್ಯತಿರಿಕ್ತವಾದ ಕೆಲಸದಲ್ಲಿ ತೊಡಗಿಕೊಂಡಿವೆ ಎನ್ನಲು ಇದೊಂದು ನಿದ ರ್ಶನ ಸಾಕು. ಈ ಘಟನೆಯನ್ನು ಅವಲೋಕಿಸಿದಾಗ, ಕಲಹಪ್ರಿಯ ನಾರದರಿಗೆ ಸಾಹಸ ಸಿಂಹ ವಿಷ್ಣುರ್ಧನ್ ಅಭಿನಯದ ‘ವಿಷ್ಣುಸೇನೆ’ ಹಾಗೂ ಚಿರಂಜೀವಿ ಅಭಿನಯದ ‘ಟ್ಯಾಗೋರ್’ ಸಿನಿಮಾಗಳು ನೆನಪಿಗೆ ಬಂದವು. ನಿಮಗೆ?!
ನೀರು ಹನಿಯೋದು ನಿಂತಿಲ್ಲ
ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ ಯನ್ನು ಗೆದ್ದ ತರುವಾಯದಲ್ಲಿ, ನಿಗದಿತ ಅವಧಿಯ ನಂತರ ಮುಖ್ಯಮಂತ್ರಿಗಳ ಅಧಿಕಾರ ಹಂಚಿಕೆ/ಹಸ್ತಾಂತರದ ಮಾತು ಕತೆ ನಡೆದಿದ್ದು ನಿಜವೇ? ಕರ್ನಾಟಕದಲ್ಲಿ ಮುಖ್ಯಮಂತ್ರಿ ಗಳ ಬದಲಾವಣೆ ಆಗಲಿದೆಯೇ? ಎಂಬ ಪ್ರಶ್ನೆಗಳು ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಈಗಲೂ ಕಾಡುತ್ತಿವೆ.
ಆದರೆ ಈ ಬಗ್ಗೆ ಸರಿಯಾದ ಉತ್ತರ ಅಥವಾ ಸಮರ್ಥನೆ ಸಂಬಂಧಪಟ್ಟವರಿಂದ ಇನ್ನೂ ಹೊಮ್ಮಿಲ್ಲವಾದ್ದರಿಂದ ಎಲ್ಲವೂ ಗೋಜಲು ಗೋಜಲು ಆಗಿಬಿಟ್ಟಿದೆ. ಈ ಮಧ್ಯೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, “ಸಿದ್ದರಾಮಯ್ಯ ಅವರೇ ಸಿಎಂ ಹುದ್ದೆಯಲ್ಲಿ ಮುಂದು ವರಿಯುತ್ತಾರೆ, ಮುಂದಿನ ವರ್ಷವೂ ಅವರೇ ಬಜೆಟ್ ಮಂಡಿಸುತ್ತಾರೆ" ಎಂಬ ಬಾಣವನ್ನು ಬಿಟ್ಟಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಘಟಕದ ಕಥೆಯನ್ನಂತೂ ಕೇಳೋದೇ ಬ್ಯಾಡ; ರಾಜ್ಯಾಧ್ಯಕ್ಷರ ಬದ ಲಾವಣೆ ಕುರಿತು ಪಕ್ಷದ ವಿಭಿನ್ನ ಬಣಗಳಿಂದ ಏನಾದರೊಂದು ಸುದ್ದಿ ಹಬ್ಬುತ್ತಲೇ ಇದೆ ಅಥವಾ ನಾಯಕರೆನಿಸಿಕೊಂಡವರು ಈ ಸಂಬಂಧವಾಗಿ ಏನೇನೋ ಹೇಳಿಕೆಗಳನ್ನು ನೀಡು ತ್ತಿದ್ದಾರೆ. “ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದಿಂದ ವಿಜಯೇಂದ್ರರನ್ನು ಬದಲಾಯಿಸು ವುದು ಯತ್ನಾಳ್ ಹಣೆಯಲ್ಲಿ ಬರೆದಿಲ್ಲ" ಎಂಬ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆ ಇದಕ್ಕೊಂದು ಸ್ಯಾಂಪಲ್.
ಒಟ್ಟಿನಲ್ಲಿ, ಸಿಎಂ ಬದಲಾಗ್ತಾರೋ ಇಲ್ವೋ? ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮತ್ತೊಬ್ಬರ ಪ್ರತಿಷ್ಠಾಪನೆಯಾಗುತ್ತೋ ಇಲ್ವೋ? ಎಂಬ ಪ್ರಶ್ನೆಗಳು ಇನ್ನೂ ಕೆಲ ಕಾಲದವರೆಗೆ ‘ಯಕ್ಷ ಪ್ರಶ್ನೆ’ಗಳಾಗೇ ಉಳಿಯಲಿವೆ ಅನ್ನೋದು ತ್ರಿಲೋಕ ಸಂಚಾರಿ ನಾರದರ ಊಹೆ!