#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vinayaka M Bhatta Column: ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಡಲಾಗಿರುವ ರಘುವಂಶ ಮಹಾಕಾವ್ಯದ ಉಲ್ಲೇಖ. ಜನರ ಮೇಲೆ ತೆರಿಗೆ ಹಾಕುವುದು ರಾಜಾ ದಿಲೀಪನ ಕಾಲದಲ್ಲೂ ಇತ್ತು ಎಂಬುದನ್ನು ಮತ್ತು ಹಾಗೆ ಸಂಗ್ರಹಿಸಿದ ತೆರಿಗೆಯನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂಬುದನ್ನು ಹೇಳು ವುದು ಇಲಾಖೆಯ ಉದ್ದೇಶವಾಗಿರಲಿಕ್ಕೆ ಸಾಕು.

ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ

ಅಂಕಣಕಾರ ವಿನಾಯಕ ಎಂ ಭಟ್ಟ

Profile Ashok Nayak Feb 9, 2025 10:45 AM

ವಿದ್ಯಮಾನ

ವಿನಾಯಕ ಎಂ. ಅಂಬ್ಲಿಹೊಂಡ

ಸೂರ್ಯನು ಭೂಮಿಯಿಂದ ತೇವಾಂಶವನ್ನು ಸೆಳೆದು ಅದನ್ನು ಮಳೆಯ ರೂಪದಲ್ಲಿ ಸಾವಿರ ಪಟ್ಟು ಭೂಮಿಗೇ ಹಿಂದಿರುಗಿಸುವಂತೆ ರಾಜಾ ದಿಲೀಪನು ತನ್ನ ಪ್ರಜೆಗಳ ಒಳಿತಿಗಾಗಿ ಮಾತ್ರ ಅವರಿಂದ ತೆರಿಗೆಗಳನ್ನು ಸಂಗ್ರಹಿಸಿ ಅದರ ನೂರು ಪಟ್ಟು ಜನಕಲ್ಯಾಣ ಕಾರ್ಯಗಳನ್ನು ಮಾಡು ತ್ತಿದ್ದನು ಎಂದು ರಘುವಂಶದಲ್ಲಿ ಮಹಾಕವಿ ಕಾಳಿದಾಸ ಉಲ್ಲೇಖಿಸಿರುತ್ತಾನೆ. ಇದು ನನ್ನ ಸಂಶೋ ಧನೆ ಅಲ್ಲ, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಡಲಾಗಿರುವ ರಘುವಂಶ ಮಹಾ ಕಾವ್ಯದ ಉಲ್ಲೇಖ. ಜನರ ಮೇಲೆ ತೆರಿಗೆ ಹಾಕುವುದು ರಾಜಾ ದಿಲೀಪನ ಕಾಲ ದಲ್ಲೂ ಇತ್ತು ಎಂಬು ದನ್ನು ಮತ್ತು ಹಾಗೆ ಸಂಗ್ರಹಿಸಿದ ತೆರಿಗೆಯನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂಬುದನ್ನು ಹೇಳುವುದು ಇಲಾಖೆಯ ಉದ್ದೇಶವಾಗಿರಲಿಕ್ಕೆ ಸಾಕು.

ಭಾರತದಲ್ಲಿನ ಆದಾಯ ತೆರಿಗೆಯ ಸಂಕ್ಷಿಪ್ತ ಇತಿಹಾಸವನ್ನು ಒಮ್ಮೆ ಅವಲೋಕಿಸೋಣ. 1860ರಲ್ಲಿ ಸರ್ ಜೇಮ್ಸ ವಿಲ್ಸನ್ ದೇಶದಲ್ಲಿ ಔಪಚಾರಿಕವಾಗಿ ತೆರಿಗೆಯನ್ನು ಪರಿಚಯಿಸಿದರು. ಸ್ವಾತಂತ್ರ್ಯ ಪೂರ್ವ ಭಾರತದ ಹಣಕಾಸು ಸಚಿವರಾಗಿದ್ದ ಅವರು, ಬ್ರಿಟಿಷ್ ಆಳ್ವಿಕೆಯಲ್ಲಿ ಮೊದಲ ಕೇಂದ್ರ ಬಜೆಟ್ ಅಧಿವೇಶನದಲ್ಲಿ ತೆರಿಗೆಯನ್ನು ಪರಿಚಯಿಸಿದರು.

ಇದನ್ನೂ ಓದಿ: Vinayaka M Bhatta Column: ಮಾತು ಮನಸ್ಸಿನ ಕೈಗನ್ನಡಿ, ಅಲ್ಲವೇ...?

ಈ ಕಾಯ್ದೆಯ ಮೂಲಕವೇ ಭಾರತದಲ್ಲಿ ಕೇಂದ್ರೀಕೃತ ಸಂಘಟಿತ ತೆರಿಗೆ ವ್ಯವಸ್ಥೆ ಪ್ರಾರಂಭ ವಾಯಿತು. 1857ರ ಮಿಲಿಟರಿ ದಂಗೆಯಿಂದ ಸರಕಾರವು ಅನುಭವಿಸಿದ ನಷ್ಟವನ್ನು ವಸೂಲಿ ಮಾಡಲು ಈ ಕಾಯ್ದೆಯನ್ನು ಪರಿಚಯಿಸಲಾಯಿತು ಎನ್ನಲಾಗುತ್ತದೆ. 1886ರಲ್ಲಿ, ಪ್ರತ್ಯೇಕ ಆದಾಯ ತೆರಿಗೆ ಕಾಯ್ದೆಯನ್ನು ಅಂಗೀಕರಿಸಲಾಯಿತು. ಈ ಕಾಯ್ದೆಯು ಕಾಲಕಾಲಕ್ಕೆ ವಿವಿಧ ಮಾರ್ಪಾಡುಗಳೊಂದಿಗೆ 3 ದಶಕಗಳವರೆಗೆ ಜಾರಿಯಲ್ಲಿತ್ತು.

ಮತ್ತೆ 1918ರಲ್ಲಿ ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಅಂಗೀಕರಿಸಲಾಯಿತು ಹಾಗೂ ಮತ್ತೆ ಅದನ್ನು 1922ರಲ್ಲಿ ಅಂಗೀಕರಿಸಿದ ಮತ್ತೊಂದು ಹೊಸ ಕಾಯ್ದೆಯಿಂದ ಬದಲಾಯಿಸಲಾಯಿತು. ಈ ಕಾಯ್ದೆಯು ಹಲವಾರು ತಿದ್ದುಪಡಿಗಳೊಂದಿಗೆ 1961-62ರವರೆಗೂ ಜಾರಿಯಲ್ಲಿತ್ತು.ಸ್ವತಂತ್ರ ಭಾರತದಲ್ಲಿ ಆದಾಯ ತೆರಿಗೆ ಕಾಯ್ದೆ 1961 ಅನ್ನು ಜಮ್ಮು ಮತ್ತು ಕಾಶ್ಮೀರವೂ ಸೇರಿದಂತೆ ಇಡೀ ಭಾರತಕ್ಕೆ ಅನ್ವಯಿಸುವಂತೆ 1961ರ ಏಪ್ರಿಲ್ 1ರಿಂದ ಜಾರಿಗೆ ತರಲಾಗಿತ್ತು.

1962ರಿಂದ ಪ್ರತಿ ವರ್ಷ ಕೇಂದ್ರ ಬಜೆಟ್ ಮೂಲಕ ಆದಾಯ ತೆರಿಗೆ ಕಾಯ್ದೆಯಲ್ಲಿ ದೂರಗಾಮಿ ಸ್ವರೂಪದ ಹಲವಾರು ತಿದ್ದುಪಡಿಗಳನ್ನು ಮಾಡುತ್ತಾ ಬರಲಾಗಿದೆ. ಸರಕಾರಗಳು ಹೀಗೆ ಜನರಿಂದ ಸಂಗ್ರಹಿಸಿದ ಆದಾಯವನ್ನು ಸರಕಾರದ ವೆಚ್ಚಗಳಿಗೆ ಹಣಕಾಸು ಒದಗಿಸುವುದರ ಜತೆಗೆ, ಪ್ರಗತಿಪರ ಆದಾಯ ತೆರಿಗೆಯ ಮೂಲಕ ಜನಸಂಖ್ಯೆಯಲ್ಲಿ ಸಂಪತ್ತನ್ನು ಸಮಾನವಾಗಿ ವಿತರಿಸಲು ಮತ್ತು ಆರ್ಥಿಕ ಏರಿಳಿತಗಳ ಚಕ್ರದಿಂದ ದೇಶದ ಮೇಲೆ ಉಂಟಾಗುವ ಪರಿಣಾಮಗಳನ್ನು ತಗ್ಗಿಸಲು ಸ್ವಯಂಚಾಲಿತ ಹಣಕಾಸಿನ ಸ್ಥಿರೀಕರಣವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿತ್ತು.

ಒಂದು ರಾಷ್ಟ್ರದ ಆರ್ಥಿಕ ಶಕ್ತಿಯು ರಾಷ್ಟ್ರದ ತೆರಿಗೆ ವ್ಯವಸ್ಥೆಗಳು ಎಷ್ಟು ಉತ್ತಮವಾಗಿವೆ ಎಂಬು ದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಸಂಗ್ರಹಿಸಿದ ತೆರಿಗೆಗಳು ಸಾರ್ವಜನಿಕ ಒಳಿತಿಗಾಗಿ ವ್ಯಯವಾಗುವುದು ಕಡ್ಡಾಯವಾಗಿರಬೇಕು ಅಷ್ಟೆ. ಇರಲಿ, ಆದಾಯ ತೆರಿಗೆ ಕಾಯ್ದೆಗೆ ಮುಂದಿನ ಪರಿಷ್ಕರಣೆಗಳು 1918 ಮತ್ತು 1922ರಲ್ಲಿ ಬಂದವು. 1918ರ ಕಾಯ್ದೆಯು 1886ರ ಕಾಯ್ದೆಯನ್ನು ರದ್ದುಗೊಳಿಸಿತು ಮತ್ತು ಅನೇಕ ಹೊಸ ಪ್ರಮುಖ ಬದಲಾವಣೆಗಳನ್ನು ರೂಪಿಸಿತು.

1922ರ ಕಾಯ್ದೆಯು ಅತ್ಯಂತ ಮುಖ್ಯವಾಗಿತ್ತು, ಏಕೆಂದರೆ ಅಂದಿನಿಂದ ಭಾರತವು ಪ್ರತ್ಯೇಕ ಆದಾಯ ತೆರಿಗೆ ಇಲಾಖೆಯನ್ನು ಹೊಂದಲು ಸಾಧ್ಯವಾಯಿತು. 1922ರ ಕಾಯ್ದೆಯು ಭಾರತದಲ್ಲಿ ಸ್ವತಂತ್ರ ಸರಕಾರ ರಚನೆಯಾದ ಮೇಲೂ 1961ರವರೆಗೆ ಜಾರಿಯಲ್ಲಿತ್ತು. ಕಾನೂನು ಸಚಿವಾಲಯ ದೊಂದಿಗೆ ಸಮಾಲೋಚಿಸಿದ ನಂತರ 1961ರ ಭಾರತೀಯ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂತು. ಇದು ದೀರ್ಘವೂ ಸಂಕೀರ್ಣವೂ ಆಗಿದ್ದು 23 ಅಧ್ಯಾಯಗಳು, 298 ವಿಭಾಗಗಳನ್ನು ಹೊಂದಿತ್ತು. ಶೇ.97.75ರಷ್ಟು ಅತ್ಯಧಿಕ ತೆರಿಗೆ ದರ ಮತ್ತು 11 ತೆರಿಗೆ ಸ್ಲ್ಯಾಬ್ ಗಳಿಂದ, ಶೇ.30ರಷ್ಟು ಗರಿಷ್ಠ ದರ ಮತ್ತು 3 ಸ್ಲ್ಯಾಬ್‌ಗಳವರೆಗೆ ತಲುಪುವವರೆಗೆ ಭಾರತದ ಆದಾಯ ತೆರಿಗೆ ವ್ಯವಸ್ಥೆ ಬಹಳ ದೂರ ಸಾಗಿಬಂದಿದೆ. ಈ ಪಯಣದ ಒಂದು ಸಿಂಹಾವಲೋಕನ ಮಾಡೋಣ.

1949-50: ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ತೆರಿಗೆ ದರಗಳನ್ನು ಬದಲಾಯಿಸ ಲಾಯಿತು. ಆಗಿನ ಹಣಕಾಸು ಸಚಿವ ಜಾನ್ ಮಥಾಯ್ ಅವರು 10000 ರು.ವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಮೊದಲ ಸ್ಲ್ಯಾಬ್‌ನಲ್ಲಿ ಒಂದು ಆಣಾದಿಂದ ಒಂಬತ್ತು ಪೈಸೆಗಳಿಗೆ ಮತ್ತು 2ನೇ ಸ್ಲ್ಯಾಬ್‌ನಲ್ಲಿ ಎರಡು ಆಣಾಗಳಿಂದ ‘ಒಂದು ಆಣಾ ಒಂಬತ್ತು ಪೈಸೆಗಳಿಗೆ" ಇಳಿಸಿದರು (‘ಅಣಾ’ ಎಂಬುದು ಹಿಂದೆ ಭಾರತದಲ್ಲಿ ಬಳಸಲಾಗುತ್ತಿದ್ದ ಕರೆನ್ಸಿ ಘಟಕವಾಗಿತ್ತು. ಇದು ರುಪಾಯಿಗೆ 1/16 ಗೆ ಸಮಾನವಾಗಿದೆ ಅಂದರೆ, ಹದಿನಾರು ಆಣೆಗೆ ಒಂದು ರುಪಾಯಿಯಾಗುತ್ತದೆ).

1974-75: ವೈ.ಬಿ.ಚವಾಣ್ ಅವರು, ತೆರಿಗೆದಾರರ ಕಣ್ಣಲ್ಲಿ ನೀರೂರಿಸುತ್ತಿದ್ದ ಗರಿಷ್ಠ ದರವನ್ನು ಶೇ.97.75ರಿಂದ ಶೇ.75ಕ್ಕೆ ಇಳಿಸಿದರು. ವೈಯಕ್ತಿಕ ಆದಾಯದ ಎಲ್ಲಾ ಹಂತಗಳಲ್ಲಿ ತೆರಿಗೆಗಳನ್ನು ತಗ್ಗಿಸಲಾಯಿತು. 6000ದವರೆಗಿನ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆ ಇಲ್ಲ; 70 ಸಾವಿರ ರು.ಗಿಂತ ಹೆಚ್ಚಿನ ಆದಾಯದ ಸ್ಲ್ಯಾಬ್ ಮೇಲೆ ಮೂಲ ಆದಾಯ ತೆರಿಗೆಯ ಕನಿಷ್ಠ ದರವನ್ನು ಶೇ.70ಕ್ಕೆ ಇರಿಸಲಾಯಿತು. ಸರ್ಚಾರ್ಜ್ ದರವನ್ನು ಎಲ್ಲಾ ವರ್ಗಗಳಿಗೆ ಏಕರೂಪದ ಶೇ.10ಕ್ಕೆ ಇಳಿಸ ಲಾಯಿತು.

1985-86: ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಆದಾಯ ತೆರಿಗೆ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಎಂಟ ರಿಂದ ನಾಲ್ಕಕ್ಕೆ ಇಳಿಸುವ ಮೂಲಕ ತೆರಿಗೆ ರಚನೆಯನ್ನು ಕ್ರಾಂತಿಕಾರಕವಾಗಿ ಪುನರ್‌ ರಚಿಸಿದರು. ವೈಯಕ್ತಿಕ ಆದಾಯದ ಮೇಲಿನ ಆದಾಯ ತೆರಿಗೆಯ ಅತ್ಯಧಿಕ ಕನಿಷ್ಠ ದರವು ಶೇ.61.85 ರಿಂದ ಶೇ.50ಕ್ಕೆ ಇಳಿಯಿತು. 18000 ರು.ಗಿಂತ ಕಡಿಮೆ ಆದಾಯವಿರುವವರು ಯಾವುದೇ ತೆರಿಗೆ ಪಾವತಿ ಸುವ ಅಗತ್ಯವಿರದಿದ್ದರೆ, 18001 ರು.ಗಳಿಂದ 25000 ರು.ಗಳವರೆಗಿನ ಸ್ಲ್ಯಾಬ್ ಮೇಲೆ ಆದಾಯ ತೆರಿಗೆ ದರವನ್ನು ಶೇ.25ಕ್ಕೆ ನಿಗದಿಪಡಿಸಲಾಗಿತ್ತು. 250001 ರು.ಗಳಿಂದ 50000 ರು.ಗಳವರೆಗಿನ ಸ್ಲ್ಯಾಬ್‌ ನಲ್ಲಿ ಇದು ಶೇ.30ರಷ್ಟಿತ್ತು; 50001 ರು.ಗಳಿಂದ 1 ಲಕ್ಷ ರು.ವರೆಗಿನ ತೆರಿಗೆಗೆ ಶೇ.40ರಷ್ಟು ತೆರಿಗೆ ವಿಧಿಸ ಲಾಗುತ್ತಿತ್ತು ಮತ್ತು 1 ಲಕ್ಷ ರು.ಗಿಂತ ಹೆಚ್ಚಿನ ಆದಾಯದ ಮೇಲೆ ಇದು ಶೇ.50ರಷ್ಟಿತ್ತು.

1992-93: ಮನಮೋಹನ್ ಸಿಂಗ್ ಅವರು ಸ್ಲ್ಯಾಬ್‌ಗಳ ಸಂಖ್ಯೆಯನ್ನು ನಾಲ್ಕರಿಂದ ಮೂರಕ್ಕೆ ಇಳಿಸಿದರು. 30000 ರು.ಗಳಿಂದ 50000 ರು.ವರೆಗಿನ ಆದಾಯಕ್ಕೆ ಪ್ರವೇಶದರವು ಶೇ.20, 50 ಸಾವಿರ ದಿಂದ 1 ಲಕ್ಷ ರು.ಗಳವರೆಗಿನ ಆದಾಯಕ್ಕೆ ಮಧ್ಯಮ ಸ್ಲ್ಯಾಬ್ ಮತ್ತು 1 ಲಕ್ಷ ರು.ಗಿಂತ ಹೆಚ್ಚಿನ ಆದಾಯಕ್ಕೆ ಗರಿಷ್ಠ ಶೇ.40ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

1994-95, ಎರಡು ವರ್ಷಗಳ ಅಂತರದ ನಂತರ, ಮನಮೋಹನ್‌ರು ತೆರಿಗೆ ಸ್ಲ್ಯಾಬ್ ಗಳನ್ನು ಸರಿ ಹೊಂದಿಸಿದರು ಆದರೆ ದರಗಳನ್ನು ಮಾತ್ರ ಬದಲಾಯಿಸಲಿಲ್ಲ. ಮೊದಲ ಸ್ಲ್ಯಾಬ್ ಅನ್ನು 35000 ರು.ಗಳಿಂದ 60000 ರು.ಗಳಿಗೆ ನಿಗದಿಪಡಿಸಲಾಯಿತು. ಅದೇ ಶೇ.20ರಷ್ಟು ತೆರಿಗೆ ದರದೊಂದಿಗೆ, ಎರಡನೇ ಸ್ಲ್ಯಾಬ್ ಅನ್ನು 60000 ರು.ಗಳಿಂದ 1.2 ಲಕ್ಷ ರು.ಗೆ ನಿಗದಿಪಡಿಸಲಾಯಿತು.

ವಿ.ಪಿ.ಸಿಂಗ್ ಮತ್ತು ಮನಮೋಹನ್ ಸಿಂಗ್ ತಮ್ಮ ಬಜೆಟ್‌ಗಳಲ್ಲಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಕಡಿತ ಗೊಳಿಸಿದರೂ, 1997-98ರಲ್ಲಿ ಪಿ.ಚಿದಂಬರಂ ಅವರು ಮಂಡಿಸಿದ ತಮ್ಮ ‘ಕನಸಿನ ಬಜೆಟ್ ’ನಲ್ಲಿ ಚಾಲ್ತಿಯಲ್ಲಿರುವ 15, 30 ಮತ್ತು 40 ಪ್ರತಿಶತ ದರಗಳನ್ನು 10, 20 ಮತ್ತು 30 ಪ್ರತಿಶತಕ್ಕೆ ಬದಲಾ ಯಿಸಿದರು. 40000 ರು.ಗಳಿಂದ 60000 ರು.ಗಳವರೆಗೆ ಆದಾಯ ಹೊಂದಿರುವವರು ಮೊದಲ ಸ್ಲ್ಯಾಬ್ ನಲ್ಲಿ ಶೇ.10, 60 ಸಾವಿರ ರಿಂದ 1.5 ಲಕ್ಷ ರು.ವರೆಗಿನ ಸ್ಲ್ಯಾಬ್‌ನಲ್ಲಿ ಶೇ.20 ಮತ್ತು 1.5 ಲಕ್ಷ ರು.ಗಿಂತ ಹೆಚ್ಚಿನ ಎಲ್ಲಾ ಆದಾಯಕ್ಕೆ ಶೇ.30ರಷ್ಟು ತೆರಿಗೆ ಪಾವತಿಸಿದ್ದಾರೆ.

ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಸಂಬಳ ಪಡೆಯುವ ತೆರಿಗೆದಾರರಿಗೆ ಏಕರೂಪವಾಗಿ ಅನ್ವಯ ವಾಗುವಂತೆ 20000 ರು.ಗೆ ಹೆಚ್ಚಿಸಿದರು. ಇದಲ್ಲದೆ, ವಾರ್ಷಿಕ 75000 ರು.ಗಳ ವೇತನ ಪಡೆಯುವ ಮತ್ತು ಭವಿಷ್ಯ ನಿಧಿಗೆ 10 ಪ್ರತಿಶತದಷ್ಟು ಕೊಡುಗೆ ನೀಡುವ ಉದ್ಯೋಗಿಗಳು ಯಾವು ದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಿಸಲಾಯಿತು.

2005-06: ಸುಮಾರು 10 ವರ್ಷಗಳ ನಂತರ, ಚಿದಂಬರಂ ಮತ್ತೊಮ್ಮೆ ತೆರಿಗೆ ಶ್ರೇಣಿಗಳಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಘೋಷಿಸಿದರು. 1 ಲಕ್ಷದಿಂದ 1.5 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.10, 1.5 ಲಕ್ಷದಿಂದ 2.5 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.20 ಮತ್ತು 2.5 ಲಕ್ಷ ರು. ಗಿಂತ ಹೆಚ್ಚಿನ ಆದಾಯವಿರುವವರಿಗೆ ಶೇ.30ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದರು.

2010-11: ಐದು ವರ್ಷಗಳ ನಂತರ, ಪ್ರಣಬ್ ಮುಖರ್ಜಿಯವರು ಆದಾಯದ ಸ್ಲ್ಯಾಬ್‌ಗಳನ್ನು ಮತ್ತೆ ಬದಲಾಯಿಸಿದರು. 1.6 ಲಕ್ಷ ರು.ವರೆಗಿನ ಆದಾಯವಿರುವವರು ಶೂನ್ಯ ತೆರಿಗೆ, 1.6 ಲಕ್ಷ ರು.ಗಳಿಂದ 5 ಲಕ್ಷ ರು.ವರೆಗಿನ ಆದಾಯವಿರುವವರು ಶೇ.10, 5 ಲಕ್ಷದಿಂದ 8 ಲಕ್ಷ ರು.ವರೆಗಿನ ಆದಾಯವಿರುವವರು ಶೇ.20 ಮತ್ತು 8 ಲಕ್ಷ ರು.ಗಿಂತ ಹೆಚ್ಚಿನ ಆದಾಯವಿರುವವರು ಶೇ.30 ತೆರಿಗೆ ಪಾವತಿಸಬೇಕಾಗುತ್ತಿತ್ತು.

2012-13: ಪ್ರಣಬ್ ಮುಖರ್ಜಿಯವರು ವೈಯಕ್ತಿಕ ತೆರಿಗೆದಾರರ ಸಾಮಾನ್ಯ ವರ್ಗದ ವಿನಾಯಿತಿ ಮಿತಿಯನ್ನು 1.8 ಲಕ್ಷ ರು.ಗಳಿಂದ 2 ಲಕ್ಷ ರು.ಗೆ ಹೆಚ್ಚಿಸಿದ್ದಲ್ಲದೆ, ತೆರಿಗೆ ಸ್ಲ್ಯಾಬ್‌ಗಳನ್ನು ಸ್ವಲ್ಪ ಬದಲಾಯಿಸಿದರು. ವಾರ್ಷಿಕ 2 ಲಕ್ಷ ರು.ವರೆಗಿನ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ, 2 ಲಕ್ಷದಿಂದ 5 ಲಕ್ಷ ರು.ವರೆಗಿನ ಆದಾಯವಿರುವವರು ಈಗ ಶೇ.10, 5 ಲಕ್ಷದಿಂದ 10 ಲಕ್ಷ ರು. ವರೆಗಿನ ಆದಾಯವಿರುವವರು ಶೇ.20, 10 ಲಕ್ಷ ದು.ಗಿಂತ ಹೆಚ್ಚಿನ ಆದಾಯವಿರುವವರು ಶೇ.30 ತೆರಿಗೆ ಪಾವತಿಸಬೇಕಾಗುತ್ತಿತ್ತು.

2017-18: 2.5 ಲಕ್ಷ ರು.ಗಳಿಂದ 5 ಲಕ್ಷ ರು.ವರೆಗಿನ ಆದಾಯವಿರುವ ವೈಯಕ್ತಿಕ ತೆರಿಗೆದಾರರಿಗೆ ಪ್ರಸ್ತುತ ಇರುವ ತೆರಿಗೆ ದರವನ್ನು ಶೇ.10ರಿಂದ 5ಕ್ಕೆ ಇಳಿಸಲಾಯಿತು. ಇದಲ್ಲದೆ, ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 87 ಎಲ್ಲಾ ಅಡಿಯಲ್ಲಿ ಅಸ್ತಿತ್ವದಲ್ಲಿರುವ ರಿಯಾಯಿತಿಯನ್ನು (ಈ ಹಿಂದೆ 5 ಲಕ್ಷ ರು.ವರೆಗಿನ ಆದಾಯವಿರುವವರಿಗೆ ನೀಡಲಾಗುತ್ತಿತ್ತು) 2.5 ಲಕ್ಷದಿಂದ 3.5 ಲಕ್ಷ ರು.ಗಳವರೆಗೆ ಆದಾಯವಿರುವವರಿಗೂ ಅನ್ವಯವಾಗುವಂತೆ ನೋಡಿಕೊಳ್ಳಲಾಯಿತು.

ಸೆಕ್ಷನ್ 87ಎ ಅಡಿಯಲ್ಲಿ ಹೊಸ ರಿಯಾಯಿತಿಯ ಸಂಯೋಜಿತ ಪರಿಣಾಮ ಮತ್ತು ಕನಿಷ್ಠ ಸ್ಲ್ಯಾಬ್ ಅನ್ನು ಶೇ.5ಕ್ಕೆ ಇಳಿಸುವುದರಿಂದ, 3 ಲಕ್ಷ ರು.ವರೆಗಿನ ಆದಾಯವಿರುವವರಿಗೆ ತೆರಿಗೆ ಹೊರೆ ಶೂನ್ಯ ವಾಗುವಂತೆ ನೋಡಿಕೊಳ್ಳಲಾಯಿತು.

2020-21: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಐಚ್ಛಿಕ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯನ್ನು ಪ್ರಸ್ತಾಪಿಸಿ, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದರು ಮತ್ತು ಕಡಿಮೆ ತೆರಿಗೆ ದರಗಳನ್ನು ಘೋಷಿಸಿದರು. 100ಕ್ಕೂ ಹೆಚ್ಚು ಆದಾಯ ತೆರಿಗೆ ಕಡಿತಗಳು ಮತ್ತು ವಿನಾಯಿತಿಗಳಲ್ಲಿ ಸುಮಾರು 70ನ್ನು ತೆಗೆದುಹಾಕಿದರು.

ಸತತ 8ನೇ ಬಾರಿಗೆ ಬಜೆಟ್ ಮಂಡಿಸಿರುವ ನಿರ್ಮಲಾ ಅವರು 2025ರಲ್ಲಿ ಮಧ್ಯಮವರ್ಗಕ್ಕೆ ‘ಗುಡ್ ನ್ಯೂಸ್’ ನೀಡಿದ್ದಾರೆ ಎನ್ನಲೇಬೇಕು. ಹಣಕಾಸು ವರ್ಷ 2025-26ರಿಂದ ವಾರ್ಷಿಕ 12 ಲಕ್ಷ ರು.ವರೆಗೆ ಆದಾಯವಿರುವವರು ಯಾವುದೇ ತೆರಿಗೆ ಕಟ್ಟುವಂತಿಲ್ಲ. ಜತೆಗೆ ತೆರಿಗೆ ಪಾವತಿಸುವವರಿಗೆ ಅನುಕೂಲವಾಗುವಂತೆ ತೆರಿಗೆ ಸ್ಲ್ಯಾಬ್ ಗಳಲ್ಲೂ ಬದಲಾವಣೆ ಮಾಡಿದ್ದಾರೆ. 12 ಲಕ್ಷ ರು.ವರೆಗೆ ಶೂನ್ಯ ತೆರಿಗೆ ಇದ್ದು, ಇದರೊಂದಿಗೆ 75000 ರು. ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯಿಸಿ ಒಟ್ಟು 12,75,000 ರು.ವರೆಗೆ ಆದಾಯ ಇರುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ.

ಅಷ್ಟೇ ಅಲ್ಲದೆ, 64 ವರ್ಷಗಳಷ್ಟು ಹಳೆಯ ಆದಾಯ ತೆರಿಗೆ ಕಾಯ್ದೆ, 1961ರ ಬದಲಿಗೆ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಇದು ಹೆಚ್ಚು ಸರಳವಾಗಿರಲಿದ್ದು, ತೆರಿಗೆದಾರರಿಗೆ ಹೆಚ್ಚಿನ ಅನುಕೂಲಗಳು ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ. 2013ರಲ್ಲಿ 2 ಲಕ್ಷ ರು.ವರೆಗಿದ್ದ ಶೂನ್ಯ ತೆರಿಗೆಯನ್ನು ಕೇವಲ ಹತ್ತು ವರ್ಷಗಳ ಅವಧಿಯಲ್ಲಿ 12 ಲಕ್ಷಕ್ಕೆ ಏರಿಸಿದ ಹಾಗಾಯಿತು.

ಈ ಕ್ರಮದಿಂದ, ಕೇಂದ್ರ ಸರಕಾರ ಹೆಚ್ಚು ಕಡಿಮೆ 1.25 ಲಕ್ಷ ಕೋಟಿ ರುಪಾಯಿಗಳ ಆದಾಯವನ್ನು ಕಳೆದುಕೊಳ್ಳಲಿದೆ. ಇದು ಸಣ್ಣ ಮೊತ್ತವಲ್ಲ. ಎಲ್ಲರಿಗೂ ಅರ್ಥವಾಗುವಂತೆ ಹೇಳಬೇಕೆಂದರೆ, ಕರ್ನಾಟದಂಥ 2 ರಾಜ್ಯಗಳ ‘ಪುಕ್ಕಟೆ ಗ್ಯಾರಂಟಿ’ ಯೋಜನೆಗಳಿಗೆ ಸಾಕಾಗುವಷ್ಟು ಹಣ ಇದಾಗು ತ್ತದೆ.

ಶೂನ್ಯ ತೆರಿಗೆಯ ಮಿತಿಯನ್ನು 12 ಲಕ್ಷಕ್ಕೆ ತಂದು ನಿಲ್ಲಿಸಿರುವುದು ನಿಜಕ್ಕೂ ಒಂದು ಕ್ರಾಂತಿಕಾರಕ ನಿರ್ಧಾರ. ಅಷ್ಟೇ ಅಲ್ಲದೆ ತೆರಿಗೆಯಲ್ಲಿನ ಈ ಸಕಾರಾತ್ಮಕ ಮತ್ತು ಕ್ರಾಂತಿಕಾರಕ ಬದಲಾವಣೆ ಯನ್ನು, ಸಾರ್ವತ್ರಿಕ ಚುನಾವಣೆಯ ಸ್ವಲ್ಪ ಮೊದಲು ಘೋಷಿಸಿ ಅದರ ಲಾಭ ಪಡೆಯಬಹುದಾ ಗಿತ್ತು. ಹಾಗೆ ಮಾಡದೆ, ಈಗ ಪರಿಷ್ಕರಣೆ ಮಾಡುವ ಮೂಲಕ ಒಂದು ಉತ್ತಮ ಶಿಷ್ಟಾ ಚಾರಕ್ಕ ಮೋದಿ ಸರಕಾರ ನಾಂದಿ ಹಾಡಿದೆ ಎನ್ನಲಡ್ಡಿಯಿಲ್ಲ.