ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Droupadi Murmu: ನೆಲದಲ್ಲಿ ಸಿಲುಕಿಕೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಚಕ್ರ; ತಪ್ಪಿದ ಭಾರಿ ದುರಂತ

ಶಬರಿಮಲೆ ಭೇಟಿಗಾಗಿ ಕೇರಳಕ್ಕೆ ಬುಧವಾರ ಬೆಳಗ್ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಚಕ್ರವು ನೆಲದಲ್ಲಿ ಸಿಲುಕಿ ಹಾಕಿಕೊಂಡ ಘಟನೆ ಪ್ರಮದಂನಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ. ರಾಷ್ಟ್ರಪತಿ ಅಪಾಯದಿಂದ ಪಾರಾಗಿದ್ದು, ಬಳಿಕ ಅವರು ರಸ್ತೆ ಪ್ರಯಾಣದ ಮೂಲಕ ಪಂಬಾಗೆ ತೆರಳಿದರು.

ನೆಲದಲ್ಲಿ ಸಿಲುಕಿದ ದ್ರೌಪದಿ ಮುರ್ಮು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

-

ತಿರುವನಂತಪುರಂ: ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter) ಇಳಿಯುವಾಗ ಅದರ ಚಕ್ರಗಳು ತಗ್ಗು ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ಘಟನೆ ಬುಧವಾರ ಕೇರಳದಲ್ಲಿ (Kerala) ನಡೆದಿದೆ. ಶಬರಿಮಲೆ (Sabarimala) ಭೇಟಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಬುಧವಾರ ಬೆಳಗೆ ಹೆಲಿಕಾಪ್ಟರ್‌ನಲ್ಲಿ ಕೇರಳಕ್ಕೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಪ್ರಮದಂನಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹೊಸದಾಗಿ ಕಾಂಕ್ರೀಟ್ ಮಾಡಲಾದ ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿತ್ತು. ಹೀಗೆ ಇಳಿಯುವಾಗ ಅದರ ಚಕ್ರಗಳು ತಗ್ಗು ಪ್ರದೇಶದಲ್ಲಿ ಸಿಲುಕಿಕೊಂಡವು.

ಬಳಿಕ ರಾಷ್ಟ್ರಪತಿ ಹೆಲಿಕಾಪ್ಟರ್‌ನಿಂದ ಇಳಿದು ರಸ್ತೆ ಮೂಲಕ ಪಂಬಾಗೆ ತೆರಳಿದರು. ಆನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸಿಲುಕಿ ಹಾಕಿಕೊಂಡಿದ್ದ ಹೆಲಿಕಾಪ್ಟರ್‌ನ ಚಕ್ರಗಳನ್ನು ಹೊರ ತೆಗೆಯಲು ಪ್ರಯತ್ನಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಕ್ರೀಡಾಂಗಣವನ್ನು ಹೆಲಿಕಾಪ್ಟರ್ ಇಳಿಯುವ ಸ್ಥಳವಾಗಿ ನಿಗದಿಪಡಿಸಲಾಗಿತ್ತು. ಹೀಗಾಗಿ ಮಂಗಳವಾರ ತಡರಾತ್ರಿ ಅಲ್ಲಿ ಹೆಲಿಪ್ಯಾಡ್ ಅನ್ನು ರಚಿಸಲಾಯಿತು. ಇದರಿಂದ ಈ ರೀತಿ ಆಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಪಂಬಾ ಬಳಿಯ ನೀಲಕ್ಕಲ್‌ನಲ್ಲಿ ಇಳಿಯಲು ಯೋಜಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದ ಅದನ್ನು ಪ್ರಮದಂಗೆ ವರ್ಗಾಯಿಸಲಾಯಿತು.

ಹೆಲಿಪ್ಯಾಡ್‌ನ ಕಾಂಕ್ರೀಟ್ ಸರಿಯಾಗಿ ಹೊಂದಿಸಲಾಗಿರಲಿಲ್ಲ. ಆದ್ದರಿಂದ ಹೆಲಿಕಾಪ್ಟರ್ ಇಳಿಯುವಾಗ ಅದರ ಭಾರವನ್ನು ಅದಕ್ಕೆ ತಡೆಯಲು ಸಾಧ್ಯವಾಗಲಿಲ್ಲ. ಹೆಲಿಕಾಪ್ಟರ್ ಚಕ್ರಗಳು ನೆಲವನ್ನು ಮುಟ್ಟುವಾಗ ಆ ಸ್ಥಳಗಳಲ್ಲಿ ತಗ್ಗುಗಳು ಉಂಟಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಬಿಕಿನಿ ತೊಟ್ಟು ಗಂಗಾ ನದಿಯಲ್ಲಿ ಸ್ನಾನ ಮಾಡಿದ ಮಹಿಳೆ; ನೆಟ್ಟಿಗರಿಂದ ಕ್ಲಾಸ್‌

ಕೇರಳಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಮಂಗಳವಾರ ಸಂಜೆ ತಿರುವನಂತಪುರಂಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಬೆಳಗ್ಗೆ ಶಬರಿಮಲೆ ದೇವಾಲಯಕ್ಕೆ ತೆರಳಿದರು.

ಮೊದಲ ಭೇಟಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ಭೇಟಿ ನೀಡಿದ್ದರು. ಈ ಮೂಲಕ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿ ಎನಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಎರಡು ದಿನಗಳ ಕೇರಳ ಭೇಟಿಯ ವೇಳೆ ಶಬರಿಮಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಮೇ 18ರಂದು ಕೇರಳಕ್ಕೆ ಆಗಮಿಸಿದ ಅನಂತರ ಕೊಟ್ಟಾಯಂ ಜಿಲ್ಲೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮರುದಿನ ಬೆಳಗ್ಗೆ ದೇವಾಲಯದ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ ಪಂಪಾ ಮೂಲ ಶಿಬಿರಕ್ಕೆ ತೆರಳಿದರು.

ಕೇರಳದ ಪತ್ತನಂಪಿಟ್ಟ ಜಿಲ್ಲೆಯಲ್ಲಿ 3,000 ಅಡಿ ಎತ್ತರದಲ್ಲಿರುವ ಶಬರಿಮಲೆ ದಕ್ಷಿಣ ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕವಾಗಿ, ದೇವಾಲಯಕ್ಕೆ ಪ್ರವೇಶವು ಪಂಪಾ ನದಿಯಿಂದ ಬರಿಗಾಲಿನ ಪಾದಯಾತ್ರೆಯ ನಂತರ 41 ದಿನಗಳ ಪ್ರಾಯಶ್ಚಿತ್ತವನ್ನು ಒಳಗೊಂಡಿರುತ್ತದೆ. ಯಾತ್ರಿಕರು ಇರುಮುಡಿಯನ್ನು ಒಯ್ಯುತ್ತಾರೆ