Hariram A Column: ಕ್ಷೇತ್ರ ಮರುವಿಂಗಡನೆ ಮಾರಕವೇ ?
ಕ್ಷೇತ್ರ ಮರುವಿಂಗಡಣೆಯ ಮುಖ್ಯ ಉದ್ದೇಶ ಒಬ್ಬರಿಗೆ ಒಂದು ಮತ, ಒಂದು ಮೌಲ್ಯ ಎಂಬ ತತ್ವವನ್ನು ಎತ್ತಿ ಹಿಡಿಯುವುದೇ ಇದರ ಉದ್ದೇಶ. ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಒಬ್ಬನೇ ಪ್ರತಿನಿಧಿ ಅಥವಾ ಆಡಳಿತ ಘಟಕವು ಲಕ್ಷಾಂತರ ಜನರನ್ನು ಗಮನಿಸಬೇಕಾಗುತ್ತದೆ. ಇದರಿಂದ ದೂರುಗಳ ವಿಲೇವಾರಿ ವಿಳಂಬವಾಗಬಹುದು. ಮರುವಿಂಗಡಣೆಯು ಆಡಳಿತವನ್ನು ಹೆಚ್ಚು ಸುಲಭಗೊಳಿಸುತ್ತದೆ. ಮೂಲ ಸೌಕರ್ಯಗಳಾದ ಆಸ್ಪತ್ರೆಗಳು, ಶಾಲೆಗಳು ಮತ್ತು ಪೊಲೀಸ್ ಠಾಣೆಗಳನ್ನು ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಿ ಸ್ಥಾಪಿಸಬೇಕು ಎಂದು ನಿರ್ಧರಿಸಲು ಇದು ಸಹಕಾರಿಯಾಗಲಿದೆ.
-
ಪಂಚಾಯ್ತಿ ಕಟ್ಟೆ
ಹರಿರಾಮ್ ಎ.
ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ, ಹೋರಾಟಗಾರರಾಗಿ ಕ್ಷೇತ್ರ ಮರುವಿಂಗಡಣೆಯ ವಿಷಯವಾಗಿ ಬಹಳಷ್ಟು ಪರ-ವಿರೋಧದ ಚರ್ಚೆಗಳನ್ನು ಮಾಡುತ್ತಿದ್ದಾರೆ, ರಾಜಕೀಯ ಹಾಗೂ ಸೈದ್ಧಂತಿಕ ಲಾಭ ನಷ್ಟಗಳನ್ನು ಒಂದೆಡೆಗಿಟ್ಟು.
ನಾನು ಒಬ್ಬ ’Public Adminstration’ ಅಥವಾ ಸಾರ್ವಜನಿಕ ಆಡಳಿತದ ವಿದ್ಯಾರ್ಥಿಯಾಗಿ ಕ್ಷೇತ್ರ ಮರುವಿಂಗಡಣೆ (Delimitation) ಬಗ್ಗೆ ಯೋಚಿಸಿದಾಗ ನನ್ನ ಗ್ರಹಿಕೆಗೆ ಬಂದದ್ದು ಮಾತ್ರ ಕ್ಷೇತ್ರ ಮರು ವಿಂಗಡನೆಯು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ; ಅದು ಸಾರ್ವಜನಿಕ ಆಡಳಿತ ಮತ್ತು ಪ್ರಾದೇಶಿಕ ಅಭಿವೃದ್ಧಿಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂಬುದು.
140 ಕೋಟಿ ಜನಸಂಖ್ಯೆಯುಳ್ಳ ಭಾರತ ದೇಶವು ಸಂಕೀರ್ಣವಾದ ಸಮಸ್ಯೆಗಳನ್ನು ಒಳಗೊಂಡಿದ್ದು ಇಂದಿಗೂ ಅನೇಕ ಪ್ರದೇಶಗಳಿಗೆ ಅಭಿವೃದ್ಧಿ ಎಂಬ ಗಂಧವೇ ಸೋಕಿಲ್ಲ, ದೇಶದ ಸಾವಿರಾರು ಹಳ್ಳಿಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳು ಸಿಗದೇ ಆದಿಮಾನವನ ರೀತಿ ಬದುಕುತ್ತಿದ್ದಾರೆ.
ಹಾಗೆಯೇ ಎಲ್ಲಾ ನಗರ ಪ್ರದೇಶಗಳಲ್ಲೂ ಕೂಡ ಲಕ್ಷಾಂತರ ಜನರು ಮೂಲಭೂತ ಸೌಕರ್ಯಗಳು ಸಿಗದೇ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳಿಗೂ ಕ್ಷೇತ್ರ ಮರು ವಿಂಗಡಣೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ಕಂಡುಕೊಳ್ಳಲು ಸಹಕಾರಿ ಆಗಬಹುದೆ ? ಅದರ ಪ್ರಮುಖ ಅಂಶಗಳು ಇಲ್ಲಿವೆ:
ಆಡಳಿತಾತ್ಮಕ ದಕ್ಷತೆ ಮತ್ತು ಆಡಳಿತ
ಕ್ಷೇತ್ರ ಮರುವಿಂಗಡಣೆಯ ಮುಖ್ಯ ಉದ್ದೇಶ ಒಬ್ಬರಿಗೆ ಒಂದು ಮತ, ಒಂದು ಮೌಲ್ಯ ಎಂಬ ತತ್ವವನ್ನು ಎತ್ತಿ ಹಿಡಿಯುವುದೇ ಇದರ ಉದ್ದೇಶ. ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಒಬ್ಬನೇ ಪ್ರತಿನಿಧಿ ಅಥವಾ ಆಡಳಿತ ಘಟಕವು ಲಕ್ಷಾಂತರ ಜನರನ್ನು ಗಮನಿಸಬೇಕಾಗುತ್ತದೆ. ಇದರಿಂದ ದೂರುಗಳ ವಿಲೇವಾರಿ ವಿಳಂಬವಾಗಬಹುದು. ಮರುವಿಂಗಡಣೆಯು ಆಡಳಿತವನ್ನು ಹೆಚ್ಚು ಸುಲಭಗೊಳಿಸುತ್ತದೆ. ಮೂಲಸೌಕರ್ಯಗಳಾದ ಆಸ್ಪತ್ರೆಗಳು, ಶಾಲೆಗಳು ಮತ್ತು ಪೊಲೀಸ್ ಠಾಣೆಗಳನ್ನು ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಿ ಸ್ಥಾಪಿಸಬೇಕು ಎಂದು ನಿರ್ಧರಿಸಲು ಇದು ಸಹಕಾರಿಯಾಗಲಿದೆ. ಹೊಸ ಗಡಿಗಳನ್ನು ಗುರುತಿಸುವಾಗ ಸ್ಥಳೀಯ ಜನಸಂಖ್ಯಾ ಮಾಹಿತಿ ಯನ್ನು ನವೀಕರಿಸಲಾಗುತ್ತದೆ. ಇದು ನೀತಿ ನಿರೂಪಣೆಗೆ ಬಹಳಷ್ಟು ಸಹಾಯವಾಗುತ್ತದೆ.
ಇದನ್ನೂ ಓದಿ: Hariram A Column: ಆರೆಸ್ಸೆಸ್ ವರ್ಸಸ್ ಕಾಂಗ್ರೆಸ್ ಸಂಘರ್ಷ ನಿಜವೇ ?
ಸಂಪನ್ಮೂಲ ಹಂಚಿಕೆ, ಆರ್ಥಿಕ ಪರಿಣಾಮ
ಅಭಿವೃದ್ಧಿ ನಿಧಿಗಳನ್ನು ಸಾಮಾನ್ಯವಾಗಿ ಕ್ಷೇತ್ರದ ಆಧಾರದ ಮೇಲೆ ಹಂಚಲಾಗುತ್ತದೆ. ಒಂದು ಕ್ಷೇತ್ರದಲ್ಲಿ 5 ಲಕ್ಷ ಜನರಿದ್ದು, ಮತ್ತೊಂದರಲ್ಲಿ 20 ಲಕ್ಷ ಜನರಿದ್ದರೂ, ಎರಡಕ್ಕೂ ಒಂದೇ ಪ್ರಮಾಣದ ಅನುದಾನ ಸಿಕ್ಕರೆ ಅದು ಅಸಮಾನತೆಗೆ ಕಾರಣವಾಗುತ್ತದೆ. ಮರುವಿಂಗಡಣೆಯು ಈ ಅಸಮಾನತೆಯನ್ನು ಸರಿಪಡಿಸುತ್ತದೆ. ಹಿಂದುಳಿದ ವರ್ಗಗಳ ಅಥವಾ ನಿರ್ದಿಷ್ಟ ಸಮುದಾಯಗಳ ಏಳಿಗೆಗಾಗಿ ಮೀಸಲಾತಿ ಮತ್ತು ವಿಶೇಷ ಯೋಜನೆಗಳನ್ನು ಜಾರಿಗೆ ತರಲು ಅನುವು ಮಾಡಿಕೊಡು ತ್ತದೆ.
‘ಅಭಿವೃದ್ಧಿಗೆ ದಂಡ’ ಎಂಬ ವಿರೋಧಾಭಾಸ
(The Development Penalty)
ಇದು ಅತ್ಯಂತ ಸಂಕೀರ್ಣವಾದ ಸಮಸ್ಯೆಯಾಗಿದೆ. ಯಾವ ರಾಜ್ಯಗಳು ಅಥವಾ ಪ್ರದೇಶಗಳು ಕುಟುಂಬ ಯೋಜನೆ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಯಶಸ್ವಿ ಯಾಗುತ್ತವೆಯೋ, ಅಲ್ಲಿ ಜನಸಂಖ್ಯೆ ಕಡಿಮೆಯಾಗುತ್ತದೆ. ಕೇವಲ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆ ಮಾಡಿದರೆ, ಉತ್ತಮವಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳು ತಮ್ಮ ಸ್ಥಾನಗಳನ್ನು (ಸೀಟು ಗಳನ್ನು) ಕಳೆದುಕೊಳ್ಳುವ ಭೀತಿ ಇರುತ್ತದೆ.
ಇದು ಅಭಿವೃದ್ಧಿ ಹೊಂದಿದ್ದಕ್ಕೆ ಸಿಕ್ಕ ಶಿಕ್ಷೆ ಎಂಬ ಭಾವನೆಯನ್ನು ಮೂಡಿಸಬಹುದು. ಹಾಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಅವಶ್ಯಕತೆ ಇರುತ್ತದೆ.
ನಗರ ಮತ್ತು ಗ್ರಾಮೀಣ ಸಮತೋಲನ
ನಗರೀಕರಣ ಹೆಚ್ಚಾದಂತೆ, ಮರುವಿಂಗಡಣೆಯು ರಾಜಕೀಯ ಶಕ್ತಿಯನ್ನು ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ವರ್ಗಾಯಿಸುತ್ತದೆ. ನಗರ ಮೂಲಸೌಕರ್ಯದ ಬಗ್ಗೆ ಹೇಳುವುದಾದರೆ, ನಗರ ಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಾಗ ಮೆಟ್ರೋ ರೈಲು, ತ್ಯಾಜ್ಯ ನಿರ್ವಹಣೆ ಮತ್ತು ವಸತಿ ಯೋಜನೆ ಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಗ್ರಾಮೀಣ ನಿರ್ಲಕ್ಷ್ಯತೆ ಬಗ್ಗೆ ಮಾತನಾಡುವುದಾದರೆ, ಗ್ರಾಮೀಣ ಭಾಗದ ಸೀಟುಗಳು ಕಡಿಮೆಯಾದಾಗ, ಕೃಷಿ ಸಬ್ಸಿಡಿ ಅಥವಾ ಗ್ರಾಮೀಣ ವಿದ್ಯುದ್ದೀಕರಣದಂತಹ ವಿಷಯಗಳು ಶಾಸನಸಭೆಗಳಲ್ಲಿ ಹೆಚ್ಚಿನ ಗಮನ ಸೆಳೆಯದೆ ಹೋಗುವ ಅಪಾಯವಿರುತ್ತದೆ.
ಇಲ್ಲಿ ಪ್ರಮುಖ ಅಂಶವೆಂದರೆ, ಕ್ಷೇತ್ರ ಮರುವಿಂಗಡಣೆಯು ಕೇವಲ ಅಂಕಿಅಂಶಗಳ ಆಟವಲ್ಲ; ಅದು ಸಾರ್ವಜನಿಕ ಆಡಳಿತದ ನರಮಂಡಲ ಇದ್ದಂತೆ. ಯಾರ ಧ್ವನಿ ಕೇಳಿಸಬೇಕು ಮತ್ತು ಹಣ ಎಲ್ಲಿಗೆ ಹೋಗಬೇಕು ಎಂಬುದನ್ನು ಇದು ನಿರ್ಧರಿಸುತ್ತದೆ.
ಸಾಂಪ್ರದಾಯಿಕ ರಾಜಕೀಯ
ಭದ್ರಕೋಟೆಗಳ ವಿಘಟನೆ
ಹಲವು ದಶಕಗಳಿಂದ ಕೆಲವು ಕ್ಷೇತ್ರಗಳು ನಿರ್ದಿಷ್ಟ ಕುಟುಂಬಗಳ ಅಥವಾ ಹಿರಿಯ ನಾಯಕರ ಭದ್ರಕೋಟೆಗಳಾಗಿರುತ್ತವೆ. ಮರುವಿಂಗಡಣೆಯು ಈ ಗಡಿಗಳನ್ನು ಬದಲಿಸಿದಾಗ ಹಳೆಯ ಜಾತಿ ಮತ್ತು ಸಮುದಾಯದ ಲೆಕ್ಕಾಚಾರಗಳು ಬುಡಮೇಲಾಗುತ್ತವೆ. ಇದು ಸ್ಥಾಪಿತ ನಾಯಕರ ಹಿಡಿತ ವನ್ನು ಸಡಿಲಗೊಳಿಸಿ, ಸಕ್ರಿಯರಾಗಿರುವ ಯುವಕರಿಗೆ ಸಮಾನ ಅವಕಾಶವನ್ನು ಒದಗಿಸುತ್ತದೆ. ಹಿರಿಯ ನಾಯಕರಿಗೆ ಹೊಸ ಗಡಿಗಳ ಪರಿಚಯವಿರುವುದಿಲ್ಲ. ಈ ಅನಿಶ್ಚಿತತೆಯು ತಳಮಟ್ಟದಲ್ಲಿ ಕೆಲಸ ಮಾಡುವ ಮತ್ತು ಹೊಸ ತಂತ್ರeನ ಬಳಸುವ ಯುವ ರಾಜಕಾರಣಿಗಳಿಗೆ ವರದಾನ ವಾಗುತ್ತದೆ.
ನಗರೀಕರಣ ಮತ್ತು ಆಕಾಂಕ್ಷೆಯ ರಾಜಕಾರಣ
ಮರುವಿಂಗಡಣೆಯು ಹೆಚ್ಚುತ್ತಿರುವ ನಗರ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ನಗರ ಕ್ಷೇತ್ರ ಗಳನ್ನು ಸೃಷ್ಟಿಸುತ್ತದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರಿರುತ್ತಾರೆ. ಇವರು ಹೆಚ್ಚಾಗಿ ಉದ್ಯೋಗ, ಶಿಕ್ಷಣ, ಮತ್ತು ಆಧುನಿಕ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುತ್ತಾರೆ. ಇವರ ಆಲೋಚನೆಗಳಿಗೆ ಸ್ಪಂದಿಸುವ ಯುವ ನಾಯಕರು ಹೆಚ್ಚಿನ ಮನ್ನಣೆ ಪಡೆಯುತ್ತಾರೆ.
ಮಹಿಳಾ ಮೀಸಲಾತಿ ಮತ್ತು ಹೊಸ ನಾಯಕತ್ವ ಮರುವಿಂಗಡಣೆಯ ಜೊತೆಗೆ ಮಹಿಳಾ ಮೀಸಲಾತಿ ಜಾರಿಗೆ ಬಂದರೆ, ಅದು ರಾಜಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತದೆ. ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಶಿಕ್ಷಣ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಯುವ ಮಹಿಳೆಯರು ದೊಡ್ಡ ಮಟ್ಟದಲ್ಲಿ ಶಾಸನಸಭೆಗಳನ್ನು ಪ್ರವೇಶಿಸಲು ಇದು ದಾರಿ ಮಾಡಿಕೊಡು ತ್ತದೆ.
ಶಾಸನಸಭೆಯಲ್ಲಿ ಸಂಖ್ಯೆಯ ಹೆಚ್ಚಳ
ಲೋಕಸಭೆಯ ಸ್ಥಾನಗಳು 545 ರಿಂದ ಸುಮಾರು 800-850ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಹೆಚ್ಚಿನ ಸೀಟುಗಳ ಲಭ್ಯತೆಯು ರಾಜಕೀಯ ಪಕ್ಷಗಳಿಗೆ ಹೊಸ ಮುಖಗಳನ್ನು ಪ್ರಯೋಗಿಸಲು ಅವಕಾಶ ನೀಡುತ್ತದೆ. ಪಕ್ಷದ ನಿಷ್ಠಾವಂತ ಯುವ ಕಾರ್ಯಕರ್ತರಿಗೆ ಇದು ಚುನಾವಣೆಗೆ ಸ್ಪಽಸುವ ನೇರ ಅವಕಾಶವನ್ನು ಒದಗಿಸುತ್ತದೆ.
ದೀರ್ಘಕಾಲೀನ ಆಡಳಿತದ ದೃಷ್ಟಿಕೋನ
ಯುವ ನಾಯಕರು ಸಾಮಾನ್ಯವಾಗಿ ಮುಂದಿನ 20-30 ವರ್ಷಗಳ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುತ್ತಾರೆ. ಮರುವಿಂಗಡಣೆಯಿಂದ ರಚನೆಯಾದ ಹೊಸ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಶೂನ್ಯದಿಂದ ನಿರ್ಮಿಸುವ ಜವಾಬ್ದಾರಿ ಇರುತ್ತದೆ. ಇಲ್ಲಿ ಯುವ ನಾಯಕರ ಆಧುನಿಕ ಆಲೋಚನೆಗಳು ಮತ್ತು ತಾಂತ್ರಿಕ ಜ್ಞಾನವು ಆಡಳಿತಕ್ಕೆ ವೇಗ ನೀಡಬಲ್ಲದು.
ಸಂಕ್ಷಿಪ್ತವಾಗಿ ಹೇಳುವುದಾದರೆ....
ಕ್ಷೇತ್ರ ಮರುವಿಂಗಡಣೆಯು ರಾಜಕೀಯದ ಬ್ಯಾಕ್‌ಸ್ಟೇಜ್ ನಲ್ಲಿರುವ ಯುವಕರನ್ನು ಮೈನ್ ಸ್ಟೇಜ್‌ಗೆ ತರುವ ಪ್ರಕ್ರಿಯೆಯಾಗಿದೆ. ಇದು ಕೇವಲ ಗಡಿಗಳ ಬದಲಾವಣೆಯಲ್ಲ, ಬದಲಾಗಿ ಭಾರತದ ಪ್ರಜಾ ಪ್ರಭುತ್ವಕ್ಕೆ ಒಂದು ಹೊಸ ಚೈತನ್ಯ ನೀಡುವ ಅವಕಾಶ.