ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ನಭೋಮಂಡಲದಲ್ಲಿ ನವ ಮನ್ವಂತರ ಸೃಷ್ಟಿಸುತ್ತಿರುವ ಇಸ್ರೋ !

ಚಂದ್ರಯಾನ-೧ ಎಂಬ 2008ರಲ್ಲಿ ಕೈಗೊಂಡ ಯೋಜನೆಯು ಚಂದ್ರನಲ್ಲಿ ನೀರಿನ ಅಣುಗಳು ಇರುವಿಕೆಯನ್ನು ಪತ್ತೆ ಹಚ್ಚಿದ್ದು, ಜಗತ್ತಿನ ಸಂಶೋಧನಾ ಸಮುದಾಯವನ್ನು ಬೆರಗುಗೊಳಿಸಿತೆನ್ನ ಬಹುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳನ ಕಕ್ಷೆಯಲ್ಲಿ ಪ್ರವೇಶಿಸಿದ ಮಂಗಳಯಾನ(2013) ಕಾರ್ಯಕ್ರಮವು ಏಷ್ಯಾದ ಮೊದಲ ಮಿಷನ್ ಆಗಿ ದಾಖಲೆ ಬರೆಯಿತಲ್ಲದೆ, ಜಾಗತಿಕ ಗೌರವ, ಮನ್ನಣೆಗೆ ಪಾತ್ರವಾಯಿತು.

ಗಂಟಾಘೋಷ

ನರೇಂದ್ರಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದ ಸ್ಥಿತಿಗತಿಗಳನ್ನು ಅವಲೋಕಿಸಿ ದಾಗ, ವಿವಿಧ ಕ್ಷೇತ್ರಗಳ ೫೦ಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಸಂಸ್ಥೆಗಳಿಗೆ ನೆರವು ನೀಡುವ ಮೂಲಕ ಮತ್ತಷ್ಟು ಬಲಿಷ್ಠಗೊಳಿಸು ತ್ತಿರುವ ಅಮೃತಕಾಲ ದೃಷ್ಟಿಯಲ್ಲಿ ಇಸ್ರೋ ಮಹತ್ವದ ಪಾತ್ರ ವಹಿಸುತ್ತಿದೆ.

ಮೋದಿ ಸರಕಾರದ ಅವಧಿಯಲ್ಲಿ ಇಸ್ರೋ ತನ್ನ ಇತಿಹಾಸದ ಅತ್ಯಂತ ವೇಗದ, ವ್ಯಾಪಕ ಹಾಗೂ ಜಾಗತಿಕವಾಗಿ ಗುರುತಿಸಲ್ಪಟ್ಟ ಬೆಳವಣಿಗೆಯನ್ನು ಕಂಡಿದೆ. ಚಂದ್ರಯಾನ ೩ ಯಶಸ್ಸು, ಗಗನಯಾನದ ಮೂಲಕ ಮಾನವ ಯಾನ ತಯಾರಿ, ಸೂರ್ಯನ ಅಧ್ಯಯನಕ್ಕೆ ಆದಿತ್ಯ L1, NavIC ವಿಸ್ತರಣೆ ಹಾಗೂ ಖಾಸಗಿ space ಸ್ಟಾರ್ಟ್‌ಅಪ್‌ಗಳ ಸ್ಫೋಟಕ ಬೆಳವಣಿಗೆ ಇವೆಲ್ಲವು ಭಾರತವನ್ನು affordable space power ಆಗಿ ಜಗತ್ತಿನ ಮುಂದೆ ಬಲಿಷ್ಠವಾಗಿರಿಸಿದೆ.

ಸ್ಪೇಸ್ ಎಕಾನಮಿಯನ್ನು ೯ ಬಿಲಿಯನ್‌ನಿಂದ ೪೪ ಬಿಲಿಯನ್ ಡಾಲರ್‌ಗೆ ಏರಿಸುವ ಗುರಿ, 2035ರ ಭಾರತ ಸ್ಪೇಸ್ ಸ್ಟೇಷನ್ ಮತ್ತು 2040-50 ಮಂಗಳ ಮಿಷನ್‌ಗಳ ದೃಷ್ಟಿ, ಇವು ಭಾರತವನ್ನು ೨೧ನೇ ಶತಮಾನದ ಪ್ರಮುಖ ತಂತ್ರಜ್ಞಾನ ಸಾಮರ್ಥ್ಯ ರಾಷ್ಟ್ರವಾಗಿ ರೂಪಿಸುತ್ತಿವೆ.

ಮೋದಿ ಸರಕಾರದ Reforms-Research-Results ಮಾದರಿ ಇಸ್ರೋಗೆ ಮೂರು ಪ್ರಮುಖ ಬದಲಾವಣೆಗಳನ್ನು ತಂದಿತು. ನೀತಿ ಸ್ವಾತಂತ್ರ್ಯ( Space Policy 2023)ಖಾಸಗಿ ಕಂಪನಿಗಳಿಗೆ ದಾರಿ IN&SPACe ಸ್ಥಾಪನೆ), ಬಾಹ್ಯಾಕಾಶ ರಾಜತಾಂತ್ರಿಕತೆ ( Space Diplomacy )ಯ ಭಾಗವಾಗಿ ೩೦ಕ್ಕೂ ಹೆಚ್ಚು ರಾಷ್ಟ್ರಗಳೊಂದಿಗೆ ಒಪ್ಪಂದಗಳು ಮತ್ತು ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆಯ ಉಸ್ತುವಾರಿ ಕೂಡ ಇಸ್ರೋದಾಗಿದೆ.

ಇದನ್ನೂ ಓದಿ: Gururaj Gantihole Column: ಶಾಶ್ವತ ಯೋಜನೆಗೆ ಕಾಯುತ್ತಿದೆ ಖಾರ್‌ ಲ್ಯಾಂಡ್‌ ಎಂಬ ಕ್ಷಾರಭೂಮಿ !

ದೇಶದಲ್ಲಾಗುತ್ತಿರುವ ಬದಲಾವಣೆ ಹಾಗೂ ಅಭಿವೃದ್ಧಿಗಳ ವಿಚಾರದಲ್ಲಿ, ಮೂಲಸೌಕರ್ಯ ಕ್ರಾಂತಿ ( INFRAST RUCTURE REVOLUTION ), ಸಾಮಾಜಿಕ ಪರಿವರ್ತನೆ ( SOCIAL TRANSFORMATION ), ಆರ್ಥಿಕ ಮತ್ತು ವ್ಯವಹಾರ ಸುಧಾರಣೆಗಳು ( ECONOMIC BUSINESS REFORMS ), ತಂತ್ರeನ ಮತ್ತು ಡಿಜಿಟಲ್ ಸುಧಾರಣೆ ( TECHNOLOGY DIGITAL TRANSFORMA TION ), ಕೃಷಿ, ನೀರು ಮತ್ತು ಪರಿಸರ ವಿಜ್ಞಾನ ( AGRICUL TURE, WATER ECOLOGY ) ಸೇರಿದಂತೆ ಇನ್ನೂ ಇಂತಹ ಹತ್ತಾರು ಪ್ರಮುಖ ವಿಚಾರಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ, ಭಾರತವನ್ನು ಇಂದು ಕೇಂದ್ರಬಿಂದುವಾಗಿ ನೋಡುವ ಪರಿದೃಷ್ಟಿ ಬೆಳೆಯುತ್ತಿದೆ.

ಮೇಲಿನ ಹತ್ತಾರು ಪ್ರತಿಷ್ಠಿತ ಯೋಜನೆಗಳಲ್ಲಿ ಮೋದಿಯವರ ಸರಕಾರ ಹಮ್ಮಿಕೊಂಡು, ವಿಶ್ವಮಟ್ಟದಲ್ಲಿ ಬೆಳೆಯುತ್ತ ಸದ್ದು ಮಾಡುತ್ತಿರುವ ಸಂಸ್ಥೆಗಳಲ್ಲಿ ಇಸ್ರೋ ಕೂಡ ಒಂದಾಗಿದೆ. ದೂರಸಂಪರ್ಕ ಬೆಳವಣಿಗೆ, ಹವಾಮಾನ ಮುನ್ಸೂಚನೆ, ಭೂಮಿಯ ಸಂಪನ್ಮೂಲಗಳ ಅಧ್ಯಯನ, ವಿಜ್ಞಾನ ಸಂಶೋಧನೆ, ರಾಷ್ಟ್ರದ ರಕ್ಷಣಾತ್ಮಕ ಮತ್ತು ತಾಂತ್ರಿಕ ಬಲವರ್ಧನೆ ಸೇರಿದಂತೆ ಮಾನವ ಸಮಾಜವು ಅಂತರಿಕ್ಷವನ್ನು ಮಾನವ ಕಲ್ಯಾಣಕ್ಕೆ ಬಳಸಬೇಕು ಎಂಬ ದೃಷ್ಟಿಕೋನದಿಂದ ಹಾಗೂ ಡಾ.ವಿಕ್ರಮ ಸಾರಾಭಾಯಿ ಅವರ ದೂರದೃಷ್ಟಿ ಮತ್ತು ಸಮಗ್ರ ಶ್ರಮದಿಂದ 1969ರಲ್ಲಿ ISRO ಅಸ್ತಿತ್ವಕ್ಕೆ ಬಂದಿತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1969ರ ಆಗಸ್ಟ 15ರಂದು ಪರಮಾಣು ಇಂಧನ ಇಲಾಖೆಯಡಿಯಲ್ಲಿ ಸ್ಥಾಪನೆಗೊಂಡಿತು. ಇದಕ್ಕೂ ಮುಂಚೆ 1962ರಲ್ಲಿ ಭಾರತ ಸರಕಾರ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ ( INCOSPAR ) ರಚಿಸಿತು, ಇದರ ಮೊದಲ ಅಧ್ಯಕ್ಷರಾಗಿ ಡಾ. ವಿಕ್ರಂ ಸಾರಾಭಾಯಿ ಅವರು ಆಯ್ಕೆಯಾಗಿದ್ದರು. 1972ರಲ್ಲಿ ಇಸ್ರೋ ಅನ್ನು ಅಂತರಿಕ್ಷ ಇಲಾಖೆ ( Department of Space ) ಒಳಗೆ ತಂದು, ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲಾಯಿತು.

ಇಸ್ರೋದ ಮುಖ್ಯ ಕಚೇರಿ ಬೆಂಗಳೂರಿನಲ್ಲಿದ್ದು, ಪ್ರಸ್ತುತದಲ್ಲಿ ಸುಮಾರು 17000 ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಸ್ರೋ ಕಾಲಘಟ್ಟ ಮತ್ತು ಸಂಸ್ಥೆಯ ಸಾಧನೆಯನ್ನು ಒಟ್ಟಾರೆ ಅವಲೋಕಿಸಿದಾಗ, ಮೋದಿ ಪೂರ್ವ ಮತ್ತು ಮೋದಿ ಸರಕಾರ ಬಂದ ನಂತರದ ಕಾಲಘಟ್ಟದ ಸಾಧನೆಗಳು ಅತ್ಯಂತ ಸ್ಪಷ್ಟವಾಗಿ ಕಂಡುಬರುತ್ತವೆ.

ತಂಬಾದಲ್ಲಿ ಉಡ್ಡಯನ ಕೇಂದ್ರವನ್ನು ಸ್ಥಾಪಿಸಿದ ಬಳಿಕ, 1963ರ ನವೆಂಬರ್ ೨೧ರಂದು RH75 ಎಂಬ Small Sounding Rocket ಅನ್ನು ಬಾಹ್ಯಾಕಾಶ ಕಾರ‍್ಯಕ್ರಮದಡಿ ಮೊಟ್ಟಮೊದಲ ಬಾರಿಗೆ ಹಾರಿಸಿ ಪರೀಕ್ಷಿಸಿತು.

ಅಧಿಕೃತವಾಗಿ ಮೊಟ್ಟಮೊದಲ ಆರ್ಯಭಟ ಉಪಗ್ರಹವನ್ನು ರಷ್ಯಾದ Kapustin Yar ಎಂಬ ಸ್ಥಳದಿಂದ Kosmos-3M ಎಂಬ ರಾಕೆಟ್ ಮೂಲಕ ಯಶಸ್ವಿಯಾಗಿ ಹಾರಿಸಲಾಯಿತು. ಶ್ರೀ ಹರಿಕೋಟದ ಸತೀಶ್ ಧವನ್ ಸ್ಪೇಸ್ ಸೆಂಟರ್ ಮೂಲಕ ರೋಹಿಣಿ ( RS -೧) ಉಪಗ್ರಹವನ್ನು ದೇಶೀಯವಾಗಿ ನಿರ್ಮಿತವಾದ SLV -೩ ವಾಹಕದ ಮೂಲಕ 1980ರ ಜುಲೈ ೧೮ರಂದು ಯಶಸ್ವಿ ಯಾಗಿ ಕಕ್ಷೆಗೆ ಸೇರಿಸಲಾಯಿತು. ಈ ಮೂಲಕ, ಭಾರತವು ತನ್ನದೇ ಆ ಉಪಗ್ರಹವನ್ನು ಯಶಸ್ವೀ ಯಾಗಿ ಕಕ್ಷಗೆ ಸೇರಿಸಿದ ೭ನೇ ರಾಷ್ಟ್ರವಾಗಿ ಗುರುತಿಸಿಕೊಂಡಿತು.

ಪುಟ್ಟ ಹೆಜ್ಜೆಯೊಂದಿಗೆ ಇಸ್ರೋ ಆರಂಭಿಸಿದ ಸಾಧನಾ ಹಾದಿಯು ಬಹಳ ಕಠಿಣವಾಗಿಯೇ ಇತ್ತು. 1980ರಿಂದ ತನ್ನ INSAT (ಸಂಪರ್ಕ-ಹವಾಮಾನ) ಮತ್ತು IRS (Remote Sensing) ಸರಣಿ ಕಾರ್ಯ ಕ್ರಮಗಳು ಭಾರತದ ದೂರಸಂಪರ್ಕ, ಹವಾಮಾನ, ಕೃಷಿ, ವಿಪತ್ತು ನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವು.

ಚಂದ್ರಯಾನ-೧ ಎಂಬ 2008ರಲ್ಲಿ ಕೈಗೊಂಡ ಯೋಜನೆಯು ಚಂದ್ರನಲ್ಲಿ ನೀರಿನ ಅಣುಗಳು ಇರುವಿಕೆಯನ್ನು ಪತ್ತೆ ಹಚ್ಚಿದ್ದು, ಜಗತ್ತಿನ ಸಂಶೋಧನಾ ಸಮುದಾಯವನ್ನು ಬೆರಗುಗೊಳಿಸಿತೆನ್ನ ಬಹುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳನ ಕಕ್ಷೆಯಲ್ಲಿ ಪ್ರವೇಶಿಸಿದ ಮಂಗಳಯಾನ(2013) ಕಾರ್ಯಕ್ರಮವು ಏಷ್ಯಾದ ಮೊದಲ ಮಿಷನ್ ಆಗಿ ದಾಖಲೆ ಬರೆಯಿತಲ್ಲದೆ, ಜಾಗತಿಕ ಗೌರವ, ಮನ್ನಣೆಗೆ ಪಾತ್ರವಾಯಿತು.

ಮೇ ೨೬, 2014ರಂದು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರು ತಮ್ಮ ನೂರಾರು ಯೋಜನೆಗಳ ಜೊತೆಗೆ, ಇಸ್ರೋ ಸಂಸ್ಥೆಗೆ ವಿಶೇಷ ಅನುದಾನ, ಕಾರ್ಯ ಯೋಜನೆಗಳಿಗೆ ಕೋಟ್ಯಂತರ ಹಣಕಾಸಿನ ನೆರವು ನೀಡುತ್ತ ಬಂದರು. ಈ ಒಂದು ಅವಕಾಶವು ಇಸ್ರೋ ಸಂಸ್ಥೆ ಯನ್ನು ಎಂದೂ ಕಂಡರಿಯದ ರೀತಿಯಲ್ಲಿ ಸಾಧನೆ ಹಾದಿಯಲ್ಲಿ ಸಾಗಲು ಕಾರಣವಾಯಿತು.

2014ರಿಂದ 2025ರವರೆಗೆ ಇಸ್ರೋ ೪೭ಕ್ಕೂ ಹೆಚ್ಚು ಲಾಂಚ್‌ಗಳನ್ನು ನಡೆಸಿದ್ದು, ಈ ಹಿಂದಿನ ಎಲ್ಲ ಸರಕಾರಗಳ ಒಟ್ಟು ಲಾಂಚ್‌ಗಳ ಸಂಖ್ಯೆಯನ್ನು ಮೀರಿದೆ. ಈ ಅವಧಿಯಲ್ಲಿ ಚಂದ್ರಯಾನ-೩, ಆದಿತ್ಯ-ಎಲ್೧, ಗಗನಯಾನ ಮುಂತಾದ ಮಹತ್ವದ ಮಿಷನ್‌ಗಳು ಭಾರತವನ್ನು ಜಾಗತಿಕ ಅಂತರಿಕ್ಷ ಶಕ್ತಿಯನ್ನಾಗಿ ಬದಲಾಯಿಸಿವೆ.

ಚಂದ್ರಯಾನ-೨ (2019) ಲ್ಯಾಂಡರ್ ವಿಕ್ರಮ್‌ನ ಲ್ಯಾಂಡಿಂಗ್ ವಿಫಲವಾದರೂ ಚಂದ್ರನ ವಿವರವಾದ ಮ್ಯಾಪಿಂಗ್ ಮಾಹಿತಿ ನೀಡಿತು. ಇದರಿಂದ ಭಾರತ ಚಂದ್ರನ ದಕ್ಷಿಣ ಧ್ರುವದ ಸಂಶೋಧನೆಗೆ ತಯಾರಿಯಾಯಿತು. ಚಂದ್ರ ಯಾನ-೩ (2023) ಇಸ್ರೋದ ಅತಿ ದೊಡ್ಡ ಸಾಧನೆ ಯಾಗಿದ್ದು, ಚಂದ್ರನ ದಕ್ಷಿಣಧ್ರುವದಲ್ಲಿ ಮೊದಲ ಬಾರಿಗೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿ, ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ೧೪ ದಿನಗಳ ಕಾಲ ಕೆಲಸ ಮಾಡಿ ಚಂದ್ರನ ಮಣ್ಣಿನಲ್ಲಿ ಗಂಧಕ ಮತ್ತು ಖನಿಜಗಳ ಇರುವಿಕೆಯನ್ನು ದೃಢಪಡಿಸಿತು.

ಹಿಮ-ನೀರು ಇರುವಿಕೆ ಕುರಿತು ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿತು. ಈ ಮಿಷನ್‌ಗೆ ಅತಿ ಕಡಿಮೆ ಯ 613 ಕೋಟಿ ವೆಚ್ಚದಲ್ಲಿ ಯಶಸ್ಸು ಸಾಧಿಸಿ, ಅಮೆರಿಕಾ, ರಷ್ಯಾ, ಚೀನಾದ ನಂತರ, ಭಾರತವು ನಾಲ್ಕನೆ ದೇಶವಾಗಿ ತಲೆಯೆತ್ತಿ ನಿಂತಿತು. ಈ ಸಂದರ್ಭವನ್ನು ಪ್ರಧಾನಿ ಮೋದಿ ಇದನ್ನು ಭಾರತದ ಹೆಮ್ಮೆ ಎಂದು ಕರೆದರು.

ಇಸ್ರೋ ಕೇವಲ ಸರಕಾರಿ ಸಂಸ್ಥೆ ಎಂಬಂತೆ ಯೋಚಿಸದೆ, ಖಾಸಗಿ ಕಂಪನಿಗಳಿಗೂ ಹೂಡಿಕೆ ಮಾಡಲು ಅವಕಾಶ ಕೊಡಲಾಯಿತು. ಇತರೆ ದೇಶಗಳ ವಿವಿಧ ಮಾದರಿಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ, ಕೋಟಿಗಳ ಆದಾಯವನ್ನು ಸಹ ಇಸ್ರೋ ಸಂಸ್ಥೆಯು ಗಳಿಕೆ ಮಾಡಿದ್ದು, ಹೊಸ ದಾಖಲೆಯಾಯಿತು.

ಪ್ರಧಾನಿಯವರ ಆಶಯದಂತೆ, ಚಂದ್ರಯಾನ-೪ (2028 ಗುರಿ) ಸರಕಾರ ಅನುಮೋದನೆ ಪಡೆದು ಚಂದ್ರನಿಂದ ನಮೂನೆಗಳನ್ನು ತರಲು ಯೋಜಿಸಲಾಗಿದೆ. ಚಂದ್ರಯಾನ-೫ ( LUPEX ) ಜಪಾನ್ ಒಅಗಿಅ ಜೊತೆಗೆ ಚಂದ್ರ ಧ್ರುವ ಸಂಶೋಧನೆಗೆ ಒಪ್ಪಂದ ಮಾಡಿಕೊಂಡಿದ್ದು, ಮೋದಿ ಅವರು ಇದನ್ನು ಸ್ವಾಗತಿಸಿದ್ದಾರೆ.

ಆದಿತ್ಯ-ಎಲ೧ (2023) ಮೊದಲ ಸೌರ ಅಧ್ಯಯನ ಮಿಷನ್ ಯಶಸ್ವಿಯಾಗಿ ಸೂರ್ಯನ ಕೊರೋನಾ ವಾತಾವರಣವನ್ನು ಅಧ್ಯಯನ ಮಾಡುತ್ತಿದೆ. ಈ ಮಿಷನ್ ಸೌರ ಚಟುವಟಿಕೆಗಳ ಪರಿಣಾಮವನ್ನು ಅಧ್ಯಯನ ಮಾಡುವಲ್ಲಿ ಸಹಾಯ ಮಾಡುತ್ತದೆ ಮತ್ತು ಭವಿಷ್ಯದ ಸೌರ ವಿದ್ಯಮಾನಗಳಿಗೆ ಸಹಾಯಕವಾಗಿರಲಿದೆ.

ಗಗನಯಾನ ಭಾರತದ ಮೊದಲ ಮಾನವ ಅಂತರಿಕ್ಷ ಮಿಷನ್ ಆಗಿದ್ದು, 2025ರಲ್ಲಿ ಅನ್‌ಮ್ಯಾನ್ಡ್ ಪರೀಕ್ಷೆಗಳು ಪೂರ್ಣಗೊಳ್ಳಲಿವೆ. ಮೋದಿ ಸರಕಾರದಲ್ಲಿ ಈ ಯೋಜನೆಗೆ ವೇಗ ನೀಡಿ, ಭಾರತೀಯ ಗಗನಸಾಹಸಿಗಳನ್ನು ತಯಾರು ಪಡಿಸಲಾಗುತ್ತಿದೆ. ಇದು ಭಾರತವನ್ನು ಮಾನವ ಅಂತರಿಕ್ಷ ಶಕ್ತಿಯನ್ನಾಗಿ ಮಾಡಬಲ್ಲ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

ಮಂಗಳಯಾನ, ಆಸ್ಟ್ರೋಸ್ಯಾಟ್ (2015) ಸ್ಪೇಸ್ ಟೆಲಿಸ್ಕೋಪ್, ASAT ಟೆಸ್ಟ್ (2019) ಮೂಲಕ ಭಾರತವು ಸ್ಪೇಸ್ ವಾರ್ ಫೇರ್ ಸಾಮರ್ಥ್ಯ ತೋರಿಸಿತು. 389 ವಿದೇಶಿ ಉಪಗ್ರಹಗಳ ಉಡ್ಡಯನದ ಮೂಲಕ ಇಸ್ರೋ ಆದಾಯವನ್ನು ಹೆಚ್ಚಿಸಿತು.

ಭಾರತೀಯ ಅಂತರಿಕ್ಷ ನಿಲ್ದಾಣ ( BAS) 2035ರೊಳಗೆ, ನೆಕ್ಟ್ಸ್ ಜನರೇಷನ್ ಲಾಂಚರ್ (NGL) ಅನುಮೋದನೆ ಪಡೆದು ಭವಿಷ್ಯದ ಮಿಷನ್‌ಗಳಿಗೆ ತಯಾರಿ ನಡೆಯುತ್ತಿದೆ. ಮೋದಿ ಸರಕಾರದಲ್ಲಿ ಇಸ್ರೋ ಲಾಂಚ್ ವೇಗವನ್ನು ದ್ವಿಗುಣಗೊಳಿಸಿ, ಉದ್ಯಮಗಳೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸಿತು. PSLV ಇಂಟಿಗ್ರೇಷನ್ ಸೌಲಭ್ಯ ತಯಾರಿಸಿ ಸಮಯ ಉಳಿಸಿತು. ಈ ಸಾಧನೆಗಳು ಯುವಕರಿಗೆ ಸ್ಪೂರ್ತಿ ನೀಡಿ, ದೇಶದ ಆರ್ಥಿಕತೆಗೆ 10000 ಕೋಟಿಗೂ ಹೆಚ್ಚು ಆದಾಯ ತಂದಿವೆ. ಚಂದ್ರಯಾನ-೩ನಂತಹ ಯಶಸ್ಸುಗಳು ಭಾರತವನ್ನು ಅಂತರಿಕ್ಷ ಸ್ಪರ್ಧೆಯಲ್ಲಿ ಮುಂಚೂಣಿ ಯಲ್ಲಿರುವಂತೆ ಮಾಡಿವೆ.

ಈ ಸಾಧನೆಗಳು ಮೋದಿ ಸರಕಾರದ ದೂರದೃಷ್ಟಿಯ ಫಲವಾಗಿದ್ದು, ಸಮರ್ಥ ನಾಯಕತ್ವದ ಅಡಿ ಯಲ್ಲಿ ಇಸ್ರೋ ‘ಸ್ಪೇಸ್ ಸ್ಟೇಷನ್’ ನಿರ್ಮಿಸಲು ಸಿದ್ಧವಾಗಿದೆ. ಬ್ರಹ್ಮಾಂಡ ವಿಜ್ಞಾನದ ಹೆಜ್ಜೆ ಅರಿಯಲು XPoSat (2024), Docking ತಂತ್ರಜ್ಷಾನ ( 202425)ದ ಭಾಗವಾಗಿ SpaDeX (2025ರಲ್ಲಿ ಎರಡು ಉಪಗ್ರಹಗಳನ್ನು ಅಂತರಿಕ್ಷದ ಭೇಟಿಗೊಳಿಸಿ, dockundock ಮಾಡುವ ಸೂಕ್ಷ್ಮ ತಂತ್ರಜ್ಞಾನ ವನ್ನು ISRO ಯಶಸ್ವಿಯಾಗಿ ಪ್ರದರ್ಶಿಸಿತು) ಯೋಜನೆಗಳು ಮಾನವಯಾನ ಮತ್ತು ಭವಿಷ್ಯದ space station ಯೋಜನೆಗಳಿಗೆ ಅತ್ಯವಶ್ಯಕ ಕೌಶಲ್ಯ ಕ್ರಿಯೆಯಾಗಿವೆ.

ಮುಂದಿನ ದಿನಗಳಲ್ಲಿ ರಾಕೆಟ್ ಮೂಲಕ ಅಂತರಿಕ್ಷ ಪ್ರವಾಸ ಮಾಡಲು ಗಗನಯಾನ ಯೋಜನೆಯ ಜೊತೆಗೆ ಅಂತರಿಕ್ಷದಲ್ಲಿ ಕಸದ ಹಾವಳಿ ( Space Debris ) ನಿರ್ವಹಿಸಲು Project NETRA ಎಂಬ ಸ್ವಂತ ವ್ಯವಸ್ಥೆಯನ್ನು ಸಹ ಭಾರತ ಹೊಂದಿದೆ. ಇಸ್ರೋ ಭಾರತದ ವಿಜ್ಞಾನ ತಂತ್ರಜ್ಞಾನ ಸಾಮರ್ಥ್ಯಕ್ಕೆ ಜೀವಾಳವಾಗಿದ್ದು,1969ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ಚಂದ್ರ,ಸೂರ್ಯ, ಮಂಗಳ, ಅಂತರಿಕ್ಷ ವಿeನ, ಮಾನವಯಾನ ( all in one roof ಎಂಬಂತೆ) ಕ್ಷೇತ್ರಗಳಲ್ಲಿ ವಿಶ್ವದ ಅತ್ಯಂತ ಮುಂಚೂಣಿಯ ಸಂಸ್ಥೆಗಳಲ್ಲಿ ಒಂದಾಗಿದೆ.

ಮೋದಿ ಸರಕಾರದ ಅವಧಿಯಲ್ಲಿ ISRO ವೈಜ್ಞಾನಿಕ ಮಹತ್ವದಿಂದ ಜಾಗತಿಕ ತಂತ್ರಜ್ಞಾನ ನಾಯಕತ್ವದ ಭೂಮಿಕೆಗೆ ಬಂದುನಿಂತಿದೆ. ಇಸ್ರೋ 2035-2050 ಭವಿಷ್ಯತ್ತಿನ ನೀಲನಕ್ಷೆ ಹೊಂದಿದ್ದು, 2025-27ಕ್ಕೆ ಮಾನವ ಸಹಿತ ಗಗನಯಾನ, 2026ಕ್ಕೆ NISAR (NASAISRO ) ಭೂಮಿಯ ನಿಖರ ಮ್ಯಾಪಿಂಗ್, 2027-29ಕ್ಕೆ ಚಂದ್ರಯಾನ ೪, 2030ಕ್ಕೆ ಶುಕ್ರ ಗ್ರಹ ಅಧ್ಯಯನ, 2035ಕ್ಕೆ ಭಾರತೀಯ ಸ್ಪೇಸ್ ಸ್ಟೇಷನ್ (೨೫ ವರ್ಷ ಬಾಳಿಕೆ), 2040ಕ್ಕೆ ಮಂಗಳಯಾನ-೨ ಮತ್ತು 2050ಕ್ಕೆ ಚಂದ್ರನ ಮೇಲೆ ಭಾರತೀಯರ ಪಾದಾರ್ಪಣೆ, ಇವೆಲ್ಲವೂ ಮೋದಿ ಸರಕಾರದ ರಾಷ್ಟ್ರೀಯ ಕನಸುಗಳ ಮೂಲ ಭಾಗವಾಗಿದ್ದು, ಯುವ ಸಮುದಾಯವು ಇದರಲ್ಲಿ ಹೆಚ್ಚು ತೊಡಗುವಂತೆ ಮಾಡುವುದಾಗಿದೆ.

ಇಸ್ರೋ ಈಗ, ಜಗತ್ತಿನಲ್ಲೇ ’ The world's most cost-efficient space agency’ ಎಂದು ಪ್ರಖ್ಯಾತ ವಾಗಿದೆ. ಇಸ್ರೋ ಇಂದು ಕೇವಲ ಬಾಹ್ಯಾಕಾಶ ಸಂಸ್ಥೆಯಲ್ಲ, ಇದು ಭಾರತದ ವೈಜ್ಞಾನಿಕ ಸ್ವಾಯತ್ತೆ, ತಂತ್ರಜ್ಞಾನ ಪ್ರಾಬಲ್ಯ ಮತ್ತು ಜಾಗತಿಕ ನಾಯಕತ್ವದ ಸಂಕೇತ. ಮೋದಿ ಸರಕಾರದ vision driven governance, policy reforms ಮತ್ತು ಬಾಹ್ಯಾಕಾಶ ರಾಜತಾಂತ್ರಿಕತೆಗಳು ಇಸ್ರೋಗೆ ಹೊಸ ದಿಕ್ಕು ನೀಡಿವೆ.

2035ರ ಭಾರತೀಯ ಬಾಹ್ಯಾಕಾಶ ನಿಲ್ದಾಣ, ಮಾನವಯಾನ, ಮಂಗಳ ಮಿಷನ್ ಮತ್ತು ಚಂದ್ರನ ಆಧಾರಿತ ಯೋಜನೆಗಳು ಎಲ್ಲವೂ ಭಾರತವನ್ನು spacefaring civilization ಆಗಿ ರೂಪಿಸುವತ್ತ ಮುನ್ನಡೆಸುತ್ತಿವೆ ಎನ್ನಬಹುದು. ಈ ಮೂಲಕ, ಇಸ್ರೋ ಭಾರತದ ೨೧ನೇ ಶತಮಾನದ ಟೆಕ್ನಾಲಜಿಕಲ್ ಐಡೆಂಟಿಟಿಯಾಗಿ ಬೆಳೆದು ನಿಲ್ಲುತ್ತಿದೆ.

ಗುರುರಾಜ್ ಗಂಟಿಹೊಳೆ

View all posts by this author