Vishweshwar Bhat Column: ಚಪ್ಪಲಿ ಬಿಟ್ಟು ಒಳಬನ್ನಿ
ಹೊರಗಿನಿಂದ ಬಂದವರ ಶೂ ಎಷ್ಟೇ ಸ್ವಚ್ಛವಾಗಿರಲಿ, ಅದನ್ನು ಮನೆಯೊಳಗೆ ಧರಿಸಿ ಬರು ವಂತಿಲ್ಲ. ಸಾಮಾನ್ಯವಾಗಿ, ಜಗತ್ತಿನ ಬೇರೆ ದೇಶಗಳಲ್ಲಿ, ನಾವು ಯಾರನ್ನಾದರೂ ಭೇಟಿಯಾದಾಗ ಅಥವಾ ನಿರ್ಗಮಿಸುವಾಗ ಕೈಕುಲುಕುವುದು ಸಹಜ. ಆದರೆ ಜಪಾನಿಯರು ಈ ವಿಷಯದಲ್ಲಿ ಭಲೇ ಸೂಕ್ಷ್ಮ. ಅವರು ಎಲ್ಲರಿಗೂ ಕೈ ಚಾಚುವುದಿಲ್ಲ. ಎದುರಿಗಿರುವ ವ್ಯಕ್ತಿಯ ಹಾವಭಾವ, ವ್ಯಕ್ತಿತ್ವ, ಸ್ವಚ್ಛತೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೈ ಕುಲುಕುತ್ತಾರೆ


ಸಂಪಾದಕರ ಸದ್ಯಶೋಧನೆ
ಎಲ್ಲ ದೇಶಗಳಲ್ಲೂ ಕೆಲವು ರೀತಿ-ರಿವಾಜುಗಳಿರುತ್ತವೆ. ಅಲ್ಲಿ ಅವುಗಳನ್ನು ಪಾಲಿಸುವುದು ಕಡ್ಡಾಯ. ಆ ದೇಶಗಳಿಗೆ ಹೋಗುವ ಮುನ್ನ ಅಂಥ ರೀತಿ-ರಿವಾಜುಗಳನ್ನು ತಿಳಿದುಕೊಳ್ಳು ವುದು ಕೂಡ ಅಷ್ಟೇ ಮುಖ್ಯ. ನಾನು ಜಪಾನಿಗೆ ಹೋಗುವ ಮುನ್ನ ಅಂಥ ರೀತಿ-ರಿವಾಜು ಗಳು, ಕಟ್ಟುಪಾಡುಗಳು ಇವೆಯಾ ಎಂದು ತಡಕಾಡುತ್ತಿದ್ದೆ. ಜಪಾನಿನಲ್ಲಿ ಬಹಳ ವರ್ಷಗಳ ಕಾಲ ವಾಸಿಸಿದವರ ಜತೆ ಮಾತಾಡಿದಾಗ ಗೊತ್ತಾಗಿದ್ದೇನೆಂದರೆ, ಜಪಾನಿಯರು ಇಂಥ ವಿಷಯಗಳಲ್ಲಿ ಬಹಳ ಸೂಕ್ಷ್ಮ ಮನಸ್ಸಿನವರು. ಅವರು ಯಾರನ್ನಾದರೂ ಮನೆಗೆ ಆಹ್ವಾ ನಿಸಿದರೆ, ಅದು ದೊಡ್ಡ ಗೌರವ ಎಂದರ್ಥ. ಯಾರದ್ದಾದರೂ ಮನೆಗೆ ಹೋದಾಗ, ಬಾಗಿಲ ಹೊರಗೆ ಚಪ್ಪಲಿ ಅಥವಾ ಶೂಗಳನ್ನು ಕಳಚಿ ಇಡಬೇಕು.
ಇದನ್ನೂ ಓದಿ: Vishweshwar Bhat Column: ಬಿಸಿನೆಸ್ ಕಾರ್ಡ್ ಮಹತ್ವ
ಯಾವ ಕಾರಣಕ್ಕೂ ಚಪ್ಪಲಿ ಗಳನ್ನು ಧರಿಸಿ ಮನೆಯೊಳಗೆ ಹೋಗಲೇ ಬಾರದು. ಹಾಗೆ ಹೋದರೆ ಮನೆಯವರಿಗೆ ಅಗೌರವ ಸೂಚಿಸಿದಂತೆ. ಸಾಮಾನ್ಯವಾಗಿ ಎಲ್ಲರ ಮನೆಯ ಬಾಗಿಲ ಹೊರಗಡೆ ಅತಿಥಿಗಳಿಗಾಗಿಯೇ ಪ್ರತ್ಯೇಕ ಚಪ್ಪಲಿಗಳನ್ನು ಇಟ್ಟಿರುತ್ತಾರೆ.
ಹೊರಗಿನಿಂದ ಬಂದವರು ತಮ್ಮ ಶೂಗಳನ್ನು ಅಲ್ಲಿಯೇ ಬಿಡಬೇಕು ಎಂಬುದರ ಇಂಗಿತ ವದು. ಜಪಾನಿಯರು ಈ ವಿಷಯದಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳುವುದಿಲ್ಲ. ಜಪಾನಿ ನಲ್ಲಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳು ಅತ್ಯಂತ ಸ್ವಚ್ಛವಾಗಿದ್ದರೂ ಹೊರಗಿನಿಂದ ಬರುವವರು ಚಪ್ಪಲಿಗಳನ್ನು ಮನೆಯ ಹೊರಗೇ ಬಿಟ್ಟು ಬರಬೇಕು ಎಂದು ಅಪೇಕ್ಷಿಸು ತ್ತಾರೆ.
ಹೊರಗಿನಿಂದ ಬಂದವರ ಶೂ ಎಷ್ಟೇ ಸ್ವಚ್ಛವಾಗಿರಲಿ, ಅದನ್ನು ಮನೆಯೊಳಗೆ ಧರಿಸಿ ಬರುವಂತಿಲ್ಲ. ಸಾಮಾನ್ಯವಾಗಿ, ಜಗತ್ತಿನ ಬೇರೆ ದೇಶಗಳಲ್ಲಿ, ನಾವು ಯಾರನ್ನಾದರೂ ಭೇಟಿಯಾದಾಗ ಅಥವಾ ನಿರ್ಗಮಿಸುವಾಗ ಕೈಕುಲುಕುವುದು ಸಹಜ. ಆದರೆ ಜಪಾನಿಯರು ಈ ವಿಷಯದಲ್ಲಿ ಭಲೇ ಸೂಕ್ಷ್ಮ. ಅವರು ಎಲ್ಲರಿಗೂ ಕೈ ಚಾಚುವುದಿಲ್ಲ. ಎದುರಿಗಿರುವ ವ್ಯಕ್ತಿಯ ಹಾವಭಾವ, ವ್ಯಕ್ತಿತ್ವ, ಸ್ವಚ್ಛತೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೈ ಕುಲುಕುತ್ತಾರೆ.
ಹೀಗಾಗಿ ಜಪಾನಿಯರೊಂದಿಗೆ ಏಕಾಏಕಿ ಹಸ್ತಲಾಘವಕ್ಕೆ ಮುಂದಾಗಬಾರದು. ಹೀಗಿರು ವಾಗ ತಬ್ಬಿಕೊಳ್ಳುವಾಗ ಇನ್ನೂ ಯೋಚಿಸಬೇಕು. ಅದರ ಬದಲು ನಡುಬಗ್ಗಿಸಿ, ದೇಹವನ್ನು ಬಾಗಿಸಿ, ನಮಸ್ಕಾರ ಮಾಡುವುದು ಒಳ್ಳೆಯದು. ಅದನ್ನು ಅವರೂ ಇಷ್ಟಪಡುತ್ತಾರೆ. ಜಪಾ ನಿನಲ್ಲಿ ನಾನು ಗಮನಿಸಿದ ಇನ್ನೊಂದು ಸಂಗತಿ ಎಂದರೆ, ಅವರು ಯಾವುದೇ ಕಾರಣಕ್ಕೂ ಕಸವನ್ನು ಎಲ್ಲಿಯೂ (ಬೇಕಾಬಿಟ್ಟಿ) ಬಿಸಾಡುವುದಿಲ್ಲ.
ಒಂದು ವೇಳೆ ಸುತ್ತಮುತ್ತ ಕಸದ ಬುಟ್ಟಿಗಳು ಇಲ್ಲದಿದ್ದರೂ, ಅದನ್ನು ಎಸೆಯುವುದಿಲ್ಲ. ಬೇರೆಯವರಿಂದಲೂ ಅದನ್ನೇ ಬಯಸುತ್ತಾರೆ. ಅಂಥ ಪ್ರಸಂಗ ಬಂದಾಗ ಕಸವನ್ನು ನಮ್ಮ ಬ್ಯಾಗಿನ, ಕಿಸೆಯ ಇಟ್ಟುಕೊಳ್ಳಬೇಕು ಎಂದು ಬಯಸುತ್ತಾರೆ. ಮನೆಗೆ ಬಂದು ಅದನ್ನು ಕಸದ ಬುಟ್ಟಿಗೆ ಹಾಕಬೇಕೆಂದು ಅಪೇಕ್ಷಿಸುತ್ತಾರೆ.
ನೀವೇನಾದರೂ ಅಪ್ಪಿ-ತಪ್ಪಿ ಕಸವನ್ನು ಎಸೆದಿದ್ದನ್ನು ಕಂಡರೆ ಮುಲಾಜಿಲ್ಲದೇ ನಿಮ್ಮ ಮುಖಕ್ಕೆ ಹೇಳುತ್ತಾರೆ. ಚಿ, ಚಾಕಲೇಟ್, ಬಿಸ್ಕತ್ ತಿಂದು ಅದರ ಪ್ಯಾಕೆಟನ್ನು ಕಿಸೆಯೊಳ ಗಿಟ್ಟುಕೊಳ್ಳುವುದು ವಾಸಿ. ನೀವು ಜಪಾನಿನಲ್ಲಿ ಆಫೀಸಿನ, ಪಾರ್ಟಿಯ, ಸ್ನೇಹಿತರ ಜತೆಗೆ ಮಾತಾಡುವಾಗ ಸಾಧ್ಯವಾದಷ್ಟರ ಮಟ್ಟಿಗೆ ಬಿರುಸಿನ ಚರ್ಚೆ, ವಾದ-ವಿವಾದದಲ್ಲಿ ತೊಡ ಗುವುದರಿಂದ ದೂರವಿರುವುದು ವಾಸಿ.
ಯಾವುದೇ ವಿಷಯದ ಬಗ್ಗೆ ಅತ್ಯಂತ ಕಠಿಣವಾದ ನಿಲುವು, ತೀಕ್ಷ್ಣ ಅಭಿಪ್ರಾಯ ಹೊಂದು ವುದನ್ನು ಜಪಾನಿಯರು ಇಷ್ಟಪಡುವುದಿಲ್ಲ. ನನ್ನ ವಾದವೇ ಸರಿ, ನಾನು ಹೇಳಿದ್ದೇ ಸೈ ಎನ್ನುವ ಮನೋಭಾವ ನಿಮ್ಮದಾಗಿದ್ದರೆ, ನಿಶ್ಚಿತವಾಗಿಯೂ ನಿಮ್ಮನ್ನು ಮುಜುಗರಕ್ಕೀಡು ಮಾಡಿಕೊಳ್ಳುತ್ತೀರಿ. ಜಪಾನಿಯರು ತಮ್ಮ ರಸ್ತೆ, ಕಾಲುದಾರಿ ಹಾಗೂ ಪಾದಚಾರಿ ಮಾರ್ಗ ವನ್ನು ಅತ್ಯಂತ ಸ್ವಚ್ಛವಾಗಿ ಇಟ್ಟುಕೊಂಡಿರುತ್ತಾರೆ.
ನಡೆಯುತ್ತಾ ಆಹಾರ ಸೇವಿಸುವುದನ್ನು, ಕಾಫಿ ಅಥವಾ ಸಾಫ್ಟ್ ಡ್ರಿಂಕ್ ಕುಡಿಯುವುದನ್ನು ಅವರು ಇಷ್ಟಪಡುವುದಿಲ್ಲ. ನಡೆದಾಡುತ್ತಾ ಆಹಾರ ಸೇವಿಸುವಾಗ, ಕಾಫಿ ಕುಡಿಯುವಾಗ ಸ್ವಾಭಾವಿಕವಾಗಿ ಅದು ರಸ್ತೆಯ ಮೇಲೆ ಚೆಲ್ಲುವ ಸಾಧ್ಯತೆ ಇರುತ್ತದೆ. ಇದರಿಂದ ರಸ್ತೆ ಗಲೀಜಾಗುವುದನ್ನು ಅವರು ಇಷ್ಟಪಡುವುದಿಲ್ಲ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಸೀನುವುದು, ಉಗುಳುವುದು, ಜೋರಾಗಿ ಮಾತಾಡುವುದು, ಹಾಡುವುದು, ಶಿಳ್ಳೆ ಹೊಡೆ ಯುವುದನ್ನು ಅವರು ಇಷ್ಟಪಡುವುದಿಲ್ಲ. ಜಪಾನಿನಲ್ಲಿದ್ದಾಗ ಈ ಸಂಗತಿಗಳನ್ನು ಆಚರಿ ಸುವುದು ಕಡ್ಡಾಯ.