ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ಹಿಂದೆದೂ ಕಂಡಿರದ ಅಮೆರಿಕದ ಶೌರ್ಯ ನೋಡಲಿದ್ದೀರಿ"; ಆಪರೇಷನ್ ಎಪಿಕ್ ಪ್ಯೂರಿ ಬಗ್ಗೆ ಟ್ರಂಪ್ ಮಾಹಿತಿ

Operation Epic Fury: ಆಪರೇಷನ್ ಎಪಿಕ್ ಫ್ಯೂರಿ ಅಡಿಯಲ್ಲಿ ಯುದ್ಧ ಕಾರ್ಯಾಚರಣೆಗಳು ತೀವ್ರಗತಿಯಿಂದ ಸಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಳೆದ 36 ಗಂಟೆಗಳಲ್ಲಿ ಅಮೆರಿಕ ಮತ್ತು ಮಿತ್ರ ಪಡೆಗಳು ನೂರಾರು ಗುರಿಗಳನ್ನು ಹೊಡೆದುರುಳಿಸಿವೆ. ಇದರಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಮತ್ತು ಪ್ರಮುಖ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಸಂಬಂಧಿಸಿದ ಸೌಲಭ್ಯಗಳು ಸೇರಿವೆ.

ಆಪರೇಷನ್ ಎಪಿಕ್ ಪ್ಯೂರಿ ಬಗ್ಗೆ ಟ್ರಂಪ್ ಮಾಹಿತಿ

ಆಪರೇಷನ್ ಎಪಿಕ್ ಪ್ಯೂರಿ ಬಗ್ಗೆ ಟ್ರಂಪ್ ಮಾಹಿತಿ -

Priyanka P
Priyanka P Mar 2, 2026 2:41 PM

ವಾಷಿಂಗ್ಟನ್, ಮಾ.2: ಇಸ್ರೇಲ್ ಜೊತೆಗಿನ ಸಂಘಟಿತ ದಾಳಿಗಳ ನಂತರ ಅಮೆರಿಕದ ಪಡೆಗಳು ಇರಾನ್ ವಿರುದ್ಧ ತಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದೆ. ಆಪರೇಷನ್ ಎಪಿಕ್ ಫ್ಯೂರಿ (Operation Epic Fury) ಅಡಿಯಲ್ಲಿ ಯುದ್ಧ ಕಾರ್ಯಾಚರಣೆಗಳು ತೀವ್ರಗತಿಯಿಂದ ಸಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ.

ಭಾನುವಾರ (ಮಾ.1) ಪೋಸ್ಟ್ ಮಾಡಿದ ರೆಕಾರ್ಡ್ ಮಾಡಿದ ವಿಡಿಯೊ ಭಾಷಣದಲ್ಲಿ, ಕಳೆದ 36 ಗಂಟೆಗಳಲ್ಲಿ ಅಮೆರಿಕ ಮತ್ತು ಮಿತ್ರ ಪಡೆಗಳು ನೂರಾರು ಗುರಿಗಳನ್ನು ಹೊಡೆದುರುಳಿಸಿವೆ. ಇದರಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಮತ್ತು ಪ್ರಮುಖ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಸಂಬಂಧಿಸಿದ ಸೌಲಭ್ಯಗಳು ಸೇರಿವೆ ಎಂದು ಟ್ರಂಪ್ ಹೇಳಿದರು. ಅಮೆರಿಕದ ಪಡೆಗಳು ಇರಾನ್‍ನ ಒಂಬತ್ತು ನೌಕಾ ಹಡಗುಗಳು ಮತ್ತು ನೌಕಾ ಸೌಲಭ್ಯವನ್ನು ನಾಶಪಡಿಸಿವೆ ಎಂದು ಅವರು ಹೇಳಿದ್ದಾರೆ.

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಮೃತಪಟ್ಟಿದ್ದಾರೆ ಟ್ರಂಪ್ ಎಂದು ಘೋಷಿಸಿದರು. ಜೊತೆಗೆ, ಇರಾನ್‌ನ ಪೂರ್ಣ ಸೈನಿಕ ನಾಯಕತ್ವವೇ ನಾಶವಾಗಿದೆ ಎಂದು ಹೇಳಿದ್ದಾರೆ. ಕೆಲವು ಅಧಿಕಾರಿಗಳು ರಕ್ಷಣಾ ಭದ್ರತೆ ಕೋರಿ ಮುಂದೆ ಬರುತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್, ಮಿಲಿಟರಿ ಮತ್ತು ಪೊಲೀಸರ ಸದಸ್ಯರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಅಥವಾ ಮರಣವನ್ನು ಎದುರಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೆರಳಿದ ಇರಾನ್‌ನಿಂದ ಮುಂದುವರಿದ ದಾಳಿ; ದುಬೈ, ಅಬುಧಾಬಿ, ದೋಹಾದಲ್ಲಿ ಸರಣಿ ಸ್ಫೋಟ

ಕಾರ್ಯಾಚರಣೆ ಪ್ರಾರಂಭವಾದ ನಂತರದ ಮೊದಲ ಅಮೆರಿಕನ್ ಸಾವುನೋವುಗಳನ್ನು ಯುಎಸ್ ಸೆಂಟ್ರಲ್ ಕಮಾಂಡ್ ದೃಢಪಡಿಸಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಭಾನುವಾರ (ಮಾ.1) ಬೆಳಗ್ಗಿನ ಸಮಯದಲ್ಲಿ, ಮೂವರು ಯುಎಸ್ ಸೇವಾ ಸದಸ್ಯರು ಮೃತಪಟ್ಟಿದ್ದಾರೆ. ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಕರ್ತವ್ಯಕ್ಕೆ ಮರಳುವ ನಿರೀಕ್ಷೆಯಿದೆ.

ಸಾವುನೋವುಗಳು ಯಾವಾಗ ಅಥವಾ ಎಲ್ಲಿ ಸಂಭವಿಸಿದವು ಎಂಬುದನ್ನು ಸೇನೆ ಬಹಿರಂಗಪಡಿಸಿಲ್ಲ. ಪ್ರಮುಖ ಯುದ್ಧ ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಸೆಂಟ್ರಲ್ ಕಮಾಂಡ್ ಹೇಳಿದ್ದು, ಪರಿಸ್ಥಿತಿಯನ್ನು ಅಸ್ಥಿರವಾಗಿದೆ ಎಂದು ವಿವರಿಸಿದೆ.

ಈ ಬಗ್ಗೆ ಮಾತನಾಡಿದ ಟ್ರಂಪ್, ದೇಶವು ನಿಜವಾದ ಅಮೆರಿಕನ್ ದೇಶಭಕ್ತರಿಗೆ ದುಃಖಿಸುತ್ತಿದೆ ಎಂದು ಹೇಳಿದರು. ಹೆಚ್ಚಿನ ಸಾವುನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು ಆದರೆ ಸಂಘರ್ಷವು ವಾರಗಳವರೆಗೆ ಮುಂದುವರಿಯಬಹುದು ಎಂದು ಎಚ್ಚರಿಸಿದರು.

ಇರಾನ್ ದೀರ್ಘ-ಶ್ರೇಣಿಯ ಕ್ಷಿಪಣಿಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯಲು ಈ ದಾಳಿಯ ಅಗತ್ಯವಿದೆ ಎಂದು ಟ್ರಂಪ್ ಹೇಳಿದರು. ಭಯೋತ್ಪಾದಕರನ್ನು ಬೆಳೆಸುವ ರಾಷ್ಟ್ರವು ಅಂತಹ ಶಸ್ತ್ರಾಸ್ತ್ರಗಳನ್ನು ಹೊಂದಲು ನಾವು ಅನುಮತಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರು ತಮ್ಮ ಭಾಷಣದಲ್ಲಿ ವಿವರಿಸಿದರು.

ಅಮೆರಿಕದ ಎಫ್-15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್‌? ವೈರಲ್‌ ಆದ ವಿಡಿಯೋದಲ್ಲೇನಿದೆ?

ಅಮೆರಿಕ-ಇಸ್ರೇಲಿ ಜಂಟಿ ದಾಳಿಯನ್ನು ಇದುವರೆಗೆ ನಡೆಸಿದ ಅತಿದೊಡ್ಡ ಮಿಲಿಟರಿ ದಾಳಿಗಳಲ್ಲಿ ಒಂದಾಗಿದೆ ಎಂದು ಅವರು ಬಣ್ಣಿಸಿದರು. ಈ ದಾಳಿಗಳು ಇರಾನ್‌ನ ಮಿಲಿಟರಿ ಮೂಲಸೌಕರ್ಯವನ್ನು ಗಮನಾರ್ಹವಾಗಿ ಕೆಡಿಸಿದೆ ಎಂದು ಹೇಳಿದರು.

ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಎಚ್ಚರಿಸಿದೆ. ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕನ್ ನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿಗಳು ನಡೆದಿವೆ ಎಂದು ವರದಿಯಾಗಿದೆ.

ಇರಾನಿನ ದೇಶಭಕ್ತರು ಈ ಅವಕಾಶವನ್ನು ಬಳಸಿಕೊಂಡು ರಾಜಕೀಯ ಬದಲಾವಣೆಯನ್ನು ತರಬೇಕು ಎಂದು ಟ್ರಂಪ್ ತಮ್ಮ ಭಾಷಣದ ಕೊನೆಯಲ್ಲಿ ಕರೆ ನೀಡಿದರು. ಜೊತೆಗೆ, ಎಲ್ಲಾ ಗುರಿಗಳು ಸಾಧನೆಯಾಗುವವರೆಗೆ ಅಮೆರಿಕದ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂಬುದನ್ನು ಅವರು ಪುನರುಚ್ಚರಿಸಿದರು.