Vishweshwar Bhat Column: ಬಿಸಿನೆಸ್ ಕಾರ್ಡ್ ಮಹತ್ವ
ಜಪಾನಿನಲ್ಲಿ ಬಿಸಿನೆಸ್ ಕಾರ್ಡ್ ವಿನಿಮಯ ಸಂಪ್ರದಾಯ ಕೇವಲ ಸಾಮಾನ್ಯ ಪ್ರಕ್ರಿಯೆ ಯಷ್ಟೇ ಅಲ್ಲ, ಬದಲಾಗಿ ಇದು ವ್ಯಕ್ತಿಯ ವ್ಯಾವಹಾರಿಕ ಶಿಸ್ತನ್ನು ತೋರಿಸುವ ಮುಖ್ಯವಾದ ನಡೆ. ಇದನ್ನು ಅವರು ‘ಮೇಇಶಿ ಕೊಕಾನ್’ ಎಂದು ಕರೆಯುತ್ತಾರೆ. ಸರಿಯಾದ ವಿಧಾನದಲ್ಲಿ ‘ಮೇಇಶಿ ಕೊಕಾನ್’ ವಿನಿಮಯ ಮಾಡಿದರೆ, ಅದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ದೀರ್ಘಕಾಲಿಕ ಲಾಭವನ್ನು ನೀಡಬಹುದು


ಸಂಪಾದಕೀಯ ಸದ್ಯಶೋಧನೆ
ಸಾಮಾನ್ಯವಾಗಿ ನಾನು ನನ್ನ ಬಿಸಿನೆಸ್ ಕಾರ್ಡ್ ಅನ್ನು ಯಾರಿಗೂ ಕೊಡುವುದಿಲ್ಲ. ಅಸ ಲಿಗೆ ನಾನು ಅದನ್ನು ಇಟ್ಟುಕೊಳ್ಳುವುದೇ ಇಲ್ಲ. ಯಾರಾದರೂ ಕೇಳಿದರೆ, ನಾನೇ ಅವರ ಮೊಬೈಲ್ ನಂಬರ್ ಕೇಳಿ ಪಡೆದುಕೊಂಡು ಅವರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ನನ್ನ ನಂಬರನ್ನು ಸೇವ್ ಮಾಡುವಂತೆ ಹೇಳುತ್ತೇನೆ. ನಮ್ಮ ಮುಖಕ್ಕಿಂತ ಮಿಗಿ ಲಾದ ಮತ್ತು ನನ್ನ ಪತ್ರಿಕೆಗಿಂತ ದೊಡ್ಡದಾದ ಬಿಸಿನೆಸ್ ಕಾರ್ಡ್ ಬೇರೆ ಯಾವುದೂ ಇಲ್ಲ ಎಂದು ಭಾವಿಸಿದವನು ನಾನು. ಆದರೆ ಜಪಾನಿಗೆ ಹೋದಾಗ ಯಾಕೋ, ಬಿಸಿನೆಸ್ ಕಾರ್ಡ್ ತರಬೇಕಿತ್ತು ಎಂದು ಹತ್ತಾರು ಸಲ ಅನಿಸಿದ್ದು ನಿಜ. ಕಾರಣ ಜಪಾನಿಯರು ಬಿಸಿನೆಸ್ ಕಾರ್ಡಿಗೆ ಬಹಳ ಮಹತ್ವ ನೀಡುತ್ತಾರೆ. ಅದನ್ನು ಕೊಡುವಾಗಲೂ ಆಸ್ತಿಪತ್ರ ಕೊಡುವಷ್ಟು ಬಡಿವಾರ ತೋರುತ್ತಾರೆ.
ಇದನ್ನೂ ಓದಿ: Vishweshwar Bhat Column: ಗುರುವಿನ ಅಗತ್ಯ
ಜಪಾನಿನಲ್ಲಿ ಬಿಸಿನೆಸ್ ಕಾರ್ಡ್ ವಿನಿಮಯ ಸಂಪ್ರದಾಯ ಕೇವಲ ಸಾಮಾನ್ಯ ಪ್ರಕ್ರಿಯೆ ಯಷ್ಟೇ ಅಲ್ಲ, ಬದಲಾಗಿ ಇದು ವ್ಯಕ್ತಿಯ ವ್ಯಾವಹಾರಿಕ ಶಿಸ್ತನ್ನು ತೋರಿಸುವ ಮುಖ್ಯ ವಾದ ನಡೆ. ಇದನ್ನು ಅವರು ‘ಮೇಇಶಿ ಕೊಕಾನ್’ ಎಂದು ಕರೆಯುತ್ತಾರೆ. ಸರಿಯಾದ ವಿಧಾನದಲ್ಲಿ ‘ಮೇಇಶಿ ಕೊಕಾನ್’ ವಿನಿಮಯ ಮಾಡಿದರೆ, ಅದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ದೀರ್ಘಕಾಲಿಕ ಲಾಭವನ್ನು ನೀಡಬಹುದು.
ಇದನ್ನು ಪ್ರಾಮಾಣಿಕತೆ, ಗೌರವ ಮತ್ತು ವ್ಯಾವಹಾರಿಕ ಸೂಕ್ಷ್ಮತೆಯ ಸಂಕೇತವಾಗಿ ಪರಿಗಣಿ ಸಲಾಗುತ್ತದೆ. ಜಪಾನಿನಲ್ಲಿ ವ್ಯಾವಹಾರಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ವ್ಯವಹಾರ ಕಾರ್ಡ್ ಅನ್ನು ನಯವಂತಿಕೆಯಿಂದ ಹಸ್ತಾಂತರಿಸುವ ಮತ್ತು ಸ್ವೀಕರಿಸುವ ಕ್ರಮವನ್ನು ಅನುಸರಿಸುತ್ತಾರೆ.
ಜಪಾನಿನಲ್ಲಿ, ವ್ಯಾವಹಾರಿಕ ಕಾರ್ಡ್‌ಗಳು ಕೇವಲ ಸಂಪರ್ಕ ಮಾಹಿತಿಗಾಗಿ ಮಾತ್ರವಲ್ಲ, ಬದಲಾಗಿ ಅವು ವ್ಯಕ್ತಿಯ ಹುದ್ದೆ, ಘನತೆ, ಸ್ಥಾನಮಾನ, ಕಂಪನಿಯ ಗೌರವ ಮತ್ತು ವ್ಯಾವ ಹಾರಿಕ ಎತ್ತರವನ್ನು ಪ್ರತಿನಿಧಿಸುತ್ತವೆ. ಬಿಸಿನೆಸ್ ಕಾರ್ಡ್ ವಿನಿಮಯವು ಮೊದಲ ಪರಿಚಯದ ಸಂದರ್ಭದ ನಡೆಯುವುದು ಮತ್ತು ಇದನ್ನು ಸರಿಯಾದ ಮಾರ್ಗದಲ್ಲಿ ಮಾಡುವುದರಿಂದ ವ್ಯಕ್ತಿಯ ಅಚ್ಚುಕಟ್ಟುತನ, ಶಿಸ್ತಿನ ಮಹತ್ವ ಮತ್ತು ಗೌರವವನ್ನು ತೋರಿಸಿದಂತೆ ಎಂಬ ಭಾವನೆಯಿದೆ.
ವಾಣಿಜ್ಯ-ವ್ಯವಹಾರ ಸಂಬಂಧ ಪ್ರವಾಸ ಮಾಡುತ್ತಿದ್ದರೆ ಅಥವಾ ಜಪಾನಿ ಸಹೋದ್ಯೋಗಿ ಗಳ ಜತೆ ಭೇಟಿಯಾಗಲು ಬಯಸಿದ್ದರೆ, ನಿಮ್ಮ ಬಿಸಿನೆಸ್ ಕಾರ್ಡ್‌ಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಇಟ್ಟುಕೊಳ್ಳಬೇಕು. ಒಬ್ಬ ವ್ಯಕ್ತಿ ಸ್ವತಃ ತನ್ನ ಕಾರ್ಡ್ ಅನ್ನು ಕೊಡುವ ಮೊದಲು, ಬಾಗಿ ನಮಸ್ಕಾರ ಮಾಡಬೇಕು. ಕಾರ್ಡ್ ನೀಡುವಾಗ, ಎರಡೂ ಕೈಗಳಿಂದ ಕಾರ್ಡ್ ಹಿಡಿದು, ವ್ಯಕ್ತಿಯೆದುರು ಹಿಡಿದುಕೊಳ್ಳಬೇಕು. ಕಾರ್ಡ್ ಅನ್ನು ಹಸ್ತಾಂತರಿಸುವಾಗ, ಯೊರೋಷಿಕು ಒನೆಗೈಇತಾಶಿಮಸು ( Thank you (very much) in advance) ಎಂದು ಹೇಳುವುದು ಪ್ರಾಮಾಣಿಕ ಮತ್ತು ಗೌರವದ ಸೂಚನೆ.
ಎದುರಿನವರ ಕಾರ್ಡ್ ಅನ್ನು ಸಹ ಎರಡೂ ಕೈಗಳಿಂದ ಆರಾಧ್ಯ ಭಾವದಿಂದ ಸ್ವೀಕರಿಸ ಬೇಕು. ಕಾರ್ಡ್ ಅನ್ನು ಸ್ವೀಕರಿಸಿದ ತಕ್ಷಣ, ಅದನ್ನು ಗಮನದಿಂದ ಓದಿ, ಹೆಸರು, ಹುದ್ದೆ ಮತ್ತು ಕಂಪನಿಯ ವಿವರಗಳನ್ನು ನೋಡಬೇಕು. ಕಾರ್ಡ್ ಸ್ವೀಕರಿಸಿದ ತಕ್ಷಣವೇ ಅದನ್ನು ಜೇಬಿಗೆ ಹಾಕಬಾರದು ಅಥವಾ ಟೇಬಲ್ ಮೇಲೆ ನಿರ್ಲಕ್ಷ್ಯವಾಗಿ ಇಡಬಾರದು.
ಇದನ್ನು ತಾತ್ಕಾಲಿಕವಾಗಿ ಟೇಬಲ್ ಮೇಲೆ ಸುರಕ್ಷಿತವಾಗಿ ಇರಿಸಿಕೊಳ್ಳಬಹುದು, ಆದರೆ ದನ್ನು ತಿರಸ್ಕಾರದಿಂದ ಬೇಕಾದೆಡೆ ಇಡಬಾರದು. ಒಂದು ಕಾಲದ ಹಲವು ಜನರೊಂದಿಗೆ ವಿನಿಮಯ ಮಾಡಿದರೆ, ಉನ್ನತ ಹುದ್ದೆಯ ವ್ಯಕ್ತಿಗೆ ಮೊದಲು ಕಾರ್ಡ್ ನೀಡುವುದು ಶಿಷ್ಟಾಚಾರ. Seniority (ಹಿರಿತನ) ತತ್ವ ಜಪಾನಿ ವ್ಯಾವಹಾರಿಕ ಶಿಷ್ಟಾಚಾರದ ಪ್ರಮುಖ ಅಂಶ. ಹಿರಿಯ ವ್ಯಕ್ತಿಗೆ ಹೆಚ್ಚಿನ ಗೌರವ ತೋರಬೇಕು ಮತ್ತು ಅವರ ಕಾರ್ಡ್ ಅನ್ನು ಇನ್ನಷ್ಟು ಜೋಪಾನದಿಂದ ತೆಗೆದುಕೊಳ್ಳಬೇಕು.
ಕಾರ್ಡನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯವಾಗಿ ನೋಡುವಂತಿಲ್ಲ. ಕಾರಣ ಬಿಸಿನೆಸ್ ಕಾರ್ಡ್ ಅನ್ನು ವ್ಯವಹಾರ ಸಂಬಂಧಗಳಲ್ಲಿ ವ್ಯಕ್ತಿಯ ಪ್ರತಿನಿಽ ಎಂದು ನೋಡಲಾಗುತ್ತದೆ. ಕಾರ್ಡ್ ವಿನಿಮಯದ ನಂತರ, ಅದರ ಮೇಲೆ ಯಾವ ಕಾರಣಕ್ಕೂ ಪೆನ್ ಅಥವಾ ಪೆನ್ಸಿಲ್ ನಿಂದ ಬರೆಯಬಾರದು.
ಮೀಟಿಂಗ್ ಮುಗಿದ ನಂತರ ಕಾರ್ಡ್ ಅನ್ನು ಸುರಕ್ಷಿತವಾಗಿ ನಿಮ್ಮ ಕಾರ್ಡ್ ಹೋಲ್ಡರ್‌ಗೆ ಇರಿಸಿಕೊಳ್ಳಬೇಕು ಮತ್ತು ಯಾವ ಕಾರಣಕ್ಕೂ ಟೇಬಲ್ ಮೇಲೆ ಬಿಟ್ಟು ಹೋಗಬಾರದು. ಸರಿಯಾದ ರೀತಿಯಲ್ಲಿ ಕಾರ್ಡ್ ವಿನಿಮಯ ಮಾಡಿದರೆ, ನೀವು ಪ್ರಾಮಾಣಿಕ ಮತ್ತು ಸುಸಂಸ್ಕೃತ ವ್ಯಕ್ತಿಯಾಗಿ ಅವರಿಗೆ ಕಾಣಿಸಿಕೊಳ್ಳುತ್ತೀರಿ. ಜಪಾನಿಗೆ ಹೋಗುವಾಗ ಯಾವ ಕಾರಣಕ್ಕೂ ಬಿಸಿನೆಸ್ ಕಾರ್ಡ್ ಇಲ್ಲದೇ ಹೋಗಬಾರದು.