Keshav Prasad B Column: ಯುವ ಉದ್ಯಮಿಗಳು ಮಸ್ಕ್ʼರಿಂದ ಕಲಿಯಬೇಕಾದ ಪಾಠ
ಜತೆಗೆ ಬೆಳೆಯುತ್ತಿರುವ ಭಾರತದ ಇವಿ ವಲಯದಲ್ಲಿ ಕಂಪನಿಯು ದೀರ್ಘಾವಧಿಯ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದೆ. 2024ರಲ್ಲಿ 17 ಲಕ್ಷ ಕಾರುಗಳನ್ನು ಕಂಪನಿ ಉತ್ಪಾದಿಸಿತ್ತು. ಟೆಕ್ನಾಲಜಿ, ವಿನ್ಯಾಸ, ಪರ್ಫಾಮೆನ್ಸ್‌ನಲ್ಲಿ ಟೆಸ್ಲಾ ಕಾರುಗಳು ಗ್ರಾಹಕರ ಮನ ಗೆದ್ದಿವೆ. ಕೇವಲ 2.9 ಸೆಕೆಂಡ್‌ನಲ್ಲಿ ಶೂನ್ಯದಿಂದ ಗಂಟೆಗೆ 100 ಕಿ.ಮೀ. ವೇಗವನ್ನು ಕಾರು ಪಡೆಯಬಲ್ಲದು

ಹಿರಿಯ ಪತ್ರಕರ್ತ, ಅಂಕಣಕಾರ ಕೇಶವ್ ಪ್ರಸಾದ್ ಬಿ.

ಮನಿ ಮೈಂಡೆಡ್
ಎಲಾನ್ ಮಸ್ಕ್ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಈತ, ಮನೆಯ ತಯಾರಿಸು ತ್ತಿದ್ದ ಚಾಕೊಲೇಟ್‌ಗಳನ್ನು ಮನೆ ಮನೆಗೆ ಮಾರುತ್ತಿದ್ದ. 12ನೇ ವಯಸ್ಸಿನಲ್ಲಿ ಕಂಪ್ಯೂಟರ್ ಗೇಮ್ ಅನ್ನು ಅಭಿವೃದ್ಧಿಪಡಿಸಿದ. ಹುಡುಗನಾಗಿದ್ದಾಗ ದಿನಕ್ಕೆ 18 ಗಂಟೆ ದುಡಿಯಲೂ ಹಿಂಜರಿಯದ ಅಸೀಮ ಸಾಹಸಿ. ಈತನ ಪರಿಕಲ್ಪನೆ, ಹುಡುಗಾಟಿಕೆಗಳನ್ನು ಕಂಡು ಹುಚ್ಚ ಎಂದು ನಕ್ಕವರೂ ಅನೇಕ. ಆದರೆ ಇಂದು ಈತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಅಮೆ ರಿಕದ ಶ್ವೇತಭವನದಲ್ಲೂ ಪ್ರಭಾವಿ. ಇಲೆಕ್ಟ್ರಿಕ್ ಕಾರು ಉತ್ಪಾದಿಸುವ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಉತ್ಪನ್ನ ಕೊನೆಗೂ ಭಾರತಕ್ಕೆ ಬರುತ್ತಿದೆ ಎಂಬ ಸುದ್ದಿ ಸಂಚಲ ನ ಸೃಷ್ಟಿಸಿದೆ. ‘ಇಟಿ ನೌ’ ವರದಿಯ ಪ್ರಕಾರ, ಟೆಸ್ಲಾ ಕಂಪನಿಯು ಭಾರತದಲ್ಲಿ ಸುಮಾರು 3 ಶತಕೋಟಿ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ.
ರುಪಾಯಿ ಲೆಕ್ಕದಲ್ಲಿ ಇದು ಸುಮಾರು 26000 ಕೋಟಿ ಆಗುತ್ತದೆ. ವರ್ಷಕ್ಕೆ 5 ಲಕ್ಷ ಇಲೆಕ್ಟ್ರಿ ಕ್ ಕಾರುಗಳನ್ನು ಉತ್ಪಾದಿಸುವ ಟೆಸ್ಲಾದ ಬೃಹತ್ ಕಾರ್ಖಾನೆ ಯೋಜನೆಯನ್ನು ಆಕರ್ಷಿ ಸಲು ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ಪೈಪೋಟಿ ನಡೆಸುತ್ತಿವೆ. ಮೊದಲಿಗೆ ದಿಲ್ಲಿ ಮತ್ತು ಮುಂಬಯಿನಲ್ಲಿ ಏಪ್ರಿಲ್‌ನಲ್ಲಿ ಟೆಸ್ಲಾದ ಮೊದಲ ಶೋ ರೂಮ್ ಆರಂಭವಾಗಲಿದೆ. ಭಾರತದಲ್ಲಿ 20ರಿಂದ 25 ಲಕ್ಷ ರುಪಾಯಿಗೆ ಟೆಸ್ಲಾದ ಇಲೆಕ್ಟ್ರಿಕ್ ಕಾರು ಗಳ ಕ್ರಾಂತಿಯನ್ನು ನಿರೀಕ್ಷಿಸಲಾಗಿದೆ.
ಜತೆಗೆ ಬೆಳೆಯುತ್ತಿರುವ ಭಾರತದ ಇವಿ ವಲಯದಲ್ಲಿ ಕಂಪನಿಯು ದೀರ್ಘಾವಧಿಯ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದೆ. 2024ರಲ್ಲಿ 17 ಲಕ್ಷ ಕಾರುಗಳನ್ನು ಕಂಪನಿ ಉತ್ಪಾ ದಿಸಿತ್ತು. ಟೆಕ್ನಾಲಜಿ, ವಿನ್ಯಾಸ, ಪರ್ಫಾಮೆನ್ಸ್‌ನಲ್ಲಿ ಟೆಸ್ಲಾ ಕಾರುಗಳು ಗ್ರಾಹಕರ ಮನ ಗೆದ್ದಿವೆ. ಕೇವಲ 2.9 ಸೆಕೆಂಡ್‌ನಲ್ಲಿ ಶೂನ್ಯದಿಂದ ಗಂಟೆಗೆ 100 ಕಿ.ಮೀ. ವೇಗವನ್ನು ಕಾರು ಪಡೆಯಬಲ್ಲದು.
ಸೆಲ್ಫ್ ಡ್ರೈವಿಂಗ್ ಟೆಕ್ನಾಲಜಿಯೂ ಇದರಲ್ಲಿದೆ. ಟೆಸ್ಲಾದ ಮಾಲೀಕರು ಕಾರಿನ ಸಾಫ್ಟ್ ವೇರ್ ಅಪ್ಡೇಟ್‌ಗಳಿಗೆ ಸರ್ವೀಸ್ ಸೆಂಟರ್‌ಗೆ ಭೇಟಿನೀಡಬೇಕಿಲ್ಲ. ರಿಮೋಟ್ ತಂತ್ರಜ್ಞಾನದ ನೆರವಿನಿಂದ ಪಡೆಯುತ್ತಾರೆ. ಮನರಂಜನೆ, ಕಂಫರ್ಟ್ ಎರಡನ್ನೂ ಕಾರು ಒಳಗೊಂಡಿದೆ. ಇತ್ತೀಚಿನ ಬಜೆಟ್‌ನಲ್ಲಿ 40000 ಡಾಲರ್ ಮೇಲಿನ ದರದ ಇವಿ ಕಾರುಗಳಿಗೆ ಆಮದು ತೆರಿಗೆಯನ್ನು ಶೇ.100ರಿಂದ ಶೇ.75ಕ್ಕೆ ಇಳಿಸಲಾಗಿದೆ.
ಫೋರ್ಬ್ಸ್ ನಿಯತಕಾಲಿಕೆಯ ಲಿಸ್ಟ್ ಪ್ರಕಾರ ಟೆಸ್ಲಾ ಸಿಇಒ ಮ ಅವರ ನಿವ್ವಳ ಸಂಪತ್ತು 396 ಶತಕೋಟಿ ಡಾಲರ್. ಅಂದರೆ ಸುಮಾರು 34 ಲಕ್ಷ ಕೋಟಿ ರುಪಾಯಿಗೂ ಹೆಚ್ಚು. ವಿಶೇಷವೇನೆಂದರೆ ಈ ಸಂಪತ್ತು ಅವರ ಸ್ವಯಾರ್ಜಿತ. ಸ್ವಂತ ಪರಿಶ್ರಮದಿಂದ ಗಳಿಸಿದ್ದು. 53 ವರ್ಷ ವಯಸ್ಸಿನ ಮಸ್ಕ್ ಅವರಿಂದ ಈಗಿನ ಯುವಜನತೆ ಕಲಿಯಬೇಕಾದ ಉದ್ಯಮ ಶೀಲತೆಯ ಪಾಠಗಳು ಹಲವು.
ಮಸ್ಕ್ ಈಗ ಒಟ್ಟು 7 ಕಂಪನಿಗಳ ಮಾಲೀಕರು. ಅದರಲ್ಲಿ ಇಲೆಕ್ಟ್ರಿಕ್ ಕಾರುಗಳನ್ನು ಉತ್ಪಾ ದಿಸುವ ‘ಟೆಸ್ಲಾ’ ಮತ್ತು ರಾಕೆಟ್‌ಗಳನ್ನು ಉತ್ಪಾದಿಸುವ ‘ಸ್ಲೇಸ್ ಎಕ್ಸ್’ ಪ್ರಮುಖ ವಾಗಿವೆ. ಈ ಹಿಂದೆ ಟ್ವಿಟರ್ ಎಂದು ಜನಪ್ರಿಯವಾಗಿದ್ದ ಜಾಲತಾಣ ಕಂಪನಿಯನ್ನೂ ಖರೀದಿಸಿ ‘ಎಕ್ಸ್’ ಎಂದು ಹೆಸರು ಬದಲಿಸಿದ್ದಾರೆ. ಇದರೊಂದಿಗೆ ವಿಶ್ವ ಪ್ರಸಿದ್ಧವಾದ 3 ಕಂಪನಿಗಳಿಗೆ ಎಲಾ ನ್ ಮಸ್ಕ್ ಅವರು ಮಾಲೀಕರಾಗಿದ್ದಾರೆ.
ಎಐ ತಂತ್ರಜ್ಞಾನ ಸ್ಟಾರ್ಟಪ್ ಆಗಿರುವ ‘ಎಕ್ಸ್ಎಐ’ಯನ್ನೂ ಸ್ಥಾಪಿಸಿದ್ದಾರೆ. ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ಅನ್ನು 2002ರಲ್ಲಿ ಆರಂಭಿಸಿದರು, 2022ರಲ್ಲಿ ಟ್ವಿಟರ್ ಅನ್ನು ಖರೀದಿ ಸಿದ್ದರು. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ 1971ರಲ್ಲಿ ಜನಿಸಿದ ಎಲಾನ್ ಮಸ್ಕ್, ಬಾಲ್ಯದ ಪ್ರಯೋಗಶೀಲರಾಗಿದ್ದ ಹುಡುಗ. 12 ವರ್ಷ ವಯಸ್ಸಿನಲ್ಲಿಯೇ ವಿಡಿಯೊ
ಗೇಮ್ ಅಭಿವೃದ್ಧಿಪಡಿಸಿದ್ದ. ಹೆತ್ತವರು ಬೇರ್ಪಟ್ಟಿದ್ದರು. ಕೌಟುಂಬಿಕ ಸಮಸ್ಯೆಗಳಿತ್ತು. ಸೋದರನ ಜತೆಗೆ ಮನೆಯ ತಯಾರಿಸಿದ ಚಾಕೊಲೇಟ್‌ಗಳನ್ನು ಮಾರಾಟ ಮಾಡು ತ್ತಿದ್ದರು. ಬಾಲ್ಯದ ಉದ್ಯಮಶೀಲತೆ ಇತ್ತು. ಭವಿಷ್ಯದ ಅವಕಾಶವನ್ನು ಅರಸುತ್ತ ಕೆನಡಾಕ್ಕೆ ತೆರಳಿದ ಎಲಾನ್ ಮ, ಬಳಿಕ ಅಮೆರಿಕಕ್ಕೆ ವಲಸೆ ಹೋದರು.
ಇಕನಾಮಿಕ್ಸ್ ಮತ್ತು ಫಿಸಿಕ್ಸ್ ಓದಿದರು. ಇಬ್ಬರನ್ನು ವಿವಾಹವಾಗಿದ್ದ ಮಸ್ಕ್, ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ. ಹನ್ನೊಂದು ಮಕ್ಕಳಿದ್ದಾರೆ. ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾ ಲಯದಿಂದ ಫಿಸಿಕ್ಸ್ ಗ್ರಾಜ್ಯುಯೇಟ್ ಡಿಗ್ರಿ ಪ್ರೋಗ್ರಾಮ್‌ಗೆ ಸೇರಿದ್ದ ಎಲಾನ್ ಮಸ್ಕ್ ಅವರು ಸ್ವಂತ ಟೆಕ್ನಾಲಜಿ ಸ್ಟಾರ್ಟಪ್ ಸ್ಥಾಪಿಸುವ ಆಕಾಂಕ್ಷೆಯೊಂದಿಗೆ 90ರ ದಶಕದಲ್ಲಿ ಕಾಲೇಜು ಡ್ರಾಪೌಟ್ ಆದರು. ಆಗ ಡಾಟ್‌ಕಾಮ್ ಬೂಮ್ ಶುರುವಾಗಿತ್ತು.
ಎಲಾನ್ ಮಸ್ಕ್ ಅವರು ತಮ್ಮದೇ ವೆಬ್ ಸಾಫ್ಟ್ ವೇರ್ ಸ್ಟಾರ್ಟಪ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಕಂಪನಿ ‘ಪೇಪಾಲ್’ ಅನ್ನು ಹುಟ್ಟು ಹಾಕಿದರು. ಅದನ್ನು 2002ರಲ್ಲಿ ‘ಇ-ಬೇ’ಗೆ ಒಂದೂವರೆ ಶತಕೋಟಿ ಡಾಲರ್‌ಗೆ ಮಾರಿದರು. ಅದೇ ವರ್ಷ ಹೊಸ ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ಅನ್ನು ಸ್ಥಾಪಿಸಿದರು. ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ‘ನಾಸಾ’ಗೆ ರ್ಯಾಯವಾಗಿ ಸ್ಪೇಸ್ ಎಕ್ಸ್ ಜನ್ಮ ತಾಳಿತ್ತು. 2004ರಲ್ಲಿ ಟೆಸ್ಲಾ ಕಂಪನಿಗೆ ಭಾರಿ ಬಂಡ ವಾಳವನ್ನು ಹೂಡಿಕೆ ಮಾಡಿ ಅದರ ಸಿಇಒ ಆದರು.
ಖ್ಯಾತ ಬ್ಯಾಂಕರ್ ಉದಯ್ ಕೋಟಕ್ ಅವರು, ಭಾರತದ ಯುವ ಉದ್ಯಮಿಗಳು ಉದ್ದಿಮೆ ಯನ್ನು ಬೆಳೆಸುವುದಕ್ಕಿಂತಲೂ, ಸ್ಟಾಕ್ ಟ್ರೇಡಿಂಗ್ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯ ಬಗ್ಗೆ ಆಸಕ್ತಿ ವಹಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಉದ್ಯ ಮ ವಲಯದ ಕುಟುಂಬಗಳು ಕಂಪನಿಗಳನ್ನು ಕಟ್ಟುವುದರ ಬದಲಿಗೆ ಸ್ಟಾಕ್ ಇನ್ವೆಸ್ಟ್ ಮೆಂಟ್‌ಗೆ ಗಮನ ಕೊಡುತ್ತಿವೆ. ಇದು ಉದ್ಯಮಶೀಲತೆಯನ್ನು ಕುಗ್ಗಿಸುತ್ತಿದೆ ಎಂದು ಉದಯ್ ಕೋಟಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಬಳಿಕ ಈಗಿನ ಪೀಳಿಗೆಯ ಯುವ ಉದ್ಯಮಿಗಳು ಫ್ಯಾಮಿಲಿ ಆಫೀಸ್‌ಗಳನ್ನು ನೋಡಿಕೊಳ್ಳುವುದು, ಸ್ಟಾಕ್ ಮಾರ್ಕೆಟ್‌ನಲ್ಲಿ ಇನ್ವೆ ಮಾಡುವುದು, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದನ್ನೇ ಫುಲ್ ಟೈಮ್ ಉದ್ಯೋಗವಾಗಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಒಂದಾದ ಮೇಲೊಂದರಂತೆ ಬಿಸಿನೆಸ್‌ಗಳನ್ನು ಮಾಡಬೇಕು. ನಾನು ಹಲವು ಯುವ ಉದ್ಯಮಿಗಳನ್ನು ಮಾತನಾಡಿಸಿರುವೆ. ಏನು ಮಾಡುತ್ತಿದ್ದೀರಿ ಎಂದು ವಿಚಾರಿಸಿ ದರೆ, ಕುಟುಂಬದ ಕಂಪನಿಯನ್ನು ನೋಡಿಕೊಳ್ಳುತ್ತಿರುವೆ ಎನ್ನುತ್ತಾರೆ.
ಹಾಗಾದರೆ ಅವರು ತಮ್ಮದೇ ಹೊಸ ಕಂಪನಿಯನ್ನು ಆರಂಭಿಸುವುದಿಲ್ಲವೇಕೆ? 35-40 ವರ್ಷ ವಯಸ್ಸಿನ ಯುವಜನತೆ ಇಕಾನಮಿಗೆ ನೇರವಾಗಿ ಹೆಚ್ಚಿನ ಕೊಡುಗೆಯನ್ನು ಏಕೆ ಸಲ್ಲಿಸುತ್ತಿಲ್ಲ? ಈಗಿನ ಜನರೇಶನ್‌ನಲ್ಲಿ ಯಶಸ್ಸು ಮತ್ತು ಹೊಸ ಬಿಸಿನೆಸ್ ಕಟ್ಟುವ ಹಸಿವು ಇರಬೇಕು. ಅದಕ್ಕಾಗಿ ಕಠಿಣ ಪರಿಶ್ರಮ ಪಡಬೇಕು ಎನ್ನುತ್ತಾರೆ ಕೋಟಕ್ ಮಹೀಂದ್ರಾ. ನಿಜ, ಈಗಿನ ಪೀಳಿಗೆಯ ಮಂದಿ ಈ ನಿಟ್ಟಿನಲ್ಲಿ ಎಲಾನ್ ಮಸ್ಕ್ ಅವರಿಂದ ಕಲಿಯಬೇಕಾದ ಪಾಠಗಳು ಇವೆ.
ಜೀವನದಲ್ಲಿ ಸೋಲುಗಳು, ಹಿನ್ನಡೆಗಳು, ಅವಮಾನಗಳು, ಸಂಕಟಗಳು, ಕಷ್ಟನಷ್ಟಗಳು ಎದುರಾದಾಗ ಧೃತಿಗೆಡದೆ ಮುಂದುವರಿಯಬೇಕು. ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್, ರಾಕೆಟ್‌ಗಳ ಉಡಾವಣಾ ವೈಫಲ್ಯದಿಂದಾಗಿ 2008 ಮತ್ತು 2021ರಲ್ಲಿ ಬಹುತೇಕ ದಿವಾಳಿ ಯ ಅಂಚಿಗೆ ಕುಸಿದಿತ್ತು. ಈಗ ಸ್ಪೇಸ್ ಎಕ್ಸ್ 300 ಕೋಟಿ ಡಾಲರ್ ಲಾಭದಲ್ಲಿರುವ ಕಂಪನಿ ಯಾಗಿದೆ. ಟೆಸ್ಲಾ ಕೂಡ 2008ರಲ್ಲಿ ದಿವಾಳಿಯ ಅಂಚಿಗೆ ಬಂದಿತ್ತು.
ಹಣದ ಕೊರತೆ ತೀವ್ರ ಕಾಡಿತ್ತು. ಉದ್ಯೋಗಿಗಳಿಗೆ ಸಂಬಳ ಕೊಡಲು ದುಡ್ಡಿರಲಿಲ್ಲ. ಆದರೆ ಸಿಇಒ ಎಲಾನ್ ಮಸ್ಕ್ ಅವರು ಮಧ್ಯಪ್ರವೇಶಿಸಿದ್ದರು. ಹೂಡಿಕೆದಾರರಿಂದ ತುರ್ತಾಗಿ ನಿಧಿ ಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿ ಕಂಪನಿ ದಿವಾಳಿಯಾಗದಂತೆ ಕಾಪಾಡಿ ದ್ದರು. ಟೆಸ್ಲಾದ ಹೂಡಿಕೆದಾರರಲ್ಲಿ ಅಸಮಾಧಾನ ಸ್ಪೋಟವಾಗಿತ್ತು. ಆಡಳಿತ ಮಂಡಳಿ ಯಲ್ಲಿದ್ದವರಲ್ಲಿ ಕೆಲವರು ಸಿಇಒ ಎಲಾನ್ ಮಸ್ಕ್ ಅವರಿಗೇ ಕಂಪನಿಯಿಂದ ಗೇಟ್‌ಪಾಸ್ ನೀಡಲು ಯತ್ನಿಸಿದ್ದರು. ಹೀಗಿದ್ದರೂ, ಎಲಾನ್ ಮಸ್ಕ್ ಅವರ ದೃಢ ಸಂಕಲ್ಪ ಮತ್ತು ಅಸಾಂಪ್ರದಾಯಿಕ ತಂತ್ರಗಾರಿಕೆಯಿಂದಾಗಿ ಕೇವಲ ಟೆಸ್ಲಾ ದಿವಾಳಿಯಾಗುವುದು ತಪ್ಪಿದ್ದಷ್ಟೇ ಅಲ್ಲದೆ, ಮಸ್ಕ್ ಅವರ ಕನಸಿನ ಇಲೆಕ್ಟ್ರಿಕ್ ಕಾರು ಕೂಡ ನಂತರದ ದಿನಗಳಲ್ಲಿ ತಯಾರಾಗಿ ಅತ್ಯಂತ ಜನಪ್ರಿಯವಾಯಿತು.
ಎರಡನೆಯದಾಗಿ, ಎಲಾನ್ ಮಸ್ಕ್ ಅವರು ಈ ಮಟ್ಟಕ್ಕೆ ಏರುವಲ್ಲಿ ಪಟ್ಟಿದ್ದ ಕಠಿಣ ಪರಿಶ್ರಮ. “ಒಂದು ಹಂತದಲ್ಲಿ ದಿನಕ್ಕೆ ಸರಾಸರಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಇಲ್ಲದಿದ್ದರೆ ಸ್ಪೇಸ್ ಎಕ್ಸ್, ಟೆಸ್ಲಾದಂಥ ಕಂಪನಿಯನ್ನು ಕಟ್ಟಲು ನನ್ನಿಂದ ಸಾಧ್ಯವಾಗು ತ್ತಿರಲಿಲ್ಲ" ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಕಾಯಕವೇ ಕೈಲಾಸವೆಂಬ ಬಸವಣ್ಣನವರ ಆದರ್ಶವನ್ನು ಮಸ್ಕ್ ಅಕ್ಷರಶಃ ಪಾಲಿಸಿದ್ದಾರೆ. ಮೂರನೆಯದಾಗಿ ಎಲಾನ್ ಮಸ್ಕ್ ಅವರ ಸಂಶೋಧನಾಸಕ್ತಿ. ಟೆಸ್ಲಾ ಇಲೆಕ್ಟ್ರಿಕ್ ಕಾರು ಗಳನ್ನು ಅದ್ಭುತವಾಗಿ ಹೊರತರುವ ಮೂಲಕ ಇಡೀ ಆಟೊಮೊಬೈಲ್ ಇಂಡಸ್ಟ್ರಿಯ ದಿಕ್ಕನ್ನೇ ಬದಲಿಸಿದರು. ಒಟ್ಟು 28 ಮಹತ್ವದ ಪೇಟೆಂಟ್‌ಗಳನ್ನು ಮಸ್ಕ್ ಗಳಿಸಿದ್ದಾರೆ. ಅವರು ಕಾಣುವ ಕನಸುಗಳು ಅಸಾಧಾರಣ. ಮಂಗಳ ಗ್ರಹದಲ್ಲಿ ಮನುಷ್ಯರಿಗೆ ವಾಸಿಸಲು ಬೇಕಾದ್ದನ್ನು ಮಾಡಬೇಕು ಎಂಬುದು ಅವರ ಕನಸುಗಳಂದು.
ಈ ನಿಟ್ಟಿನಲ್ಲಿ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕಂಪನಿ ಕಟ್ಟಿದ್ದಾರೆ. ಮರುಬಳಕೆ ಮಾಡಬಹು ದಾದ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇಲೆಕ್ಟ್ರಿಕ್ ಕಾರಿನಿಂದ ಹಿಡಿದು ಬಾಹ್ಯಾ ಕಾಶ ಟೂರಿಸಂ ತನಕ ಅವರ ಆಲೋಚನೆಗಳು, ಅನುಷ್ಠಾನಗಳು ಕ್ರಾಂತಿಕಾರಕ. ಗೇಮ್ ಚೇಂಜರ್. ಇಲೆಕ್ಟ್ರಿಕ್ ಕಾರುಗಳನ್ನು ಎಷ್ಟು ಅದ್ಭುತವಾಗಿ ತಯಾರಿಸಬಹುದು ಎಂಬು ದನ್ನು ಜಗತ್ತಿಗೆ ತೋರಿಸಿಕೊಟ್ಟ ವ್ಯಕ್ತಿ ಯಾರಾದರೂ ಇದ್ದರೆ ಅದು ಎಲಾನ್ ಮಸ್ಕ್ ಮನು ಷ್ಯನ ಮಿದುಳಿನ ಒಳಗೆ ಚಿಪ್ ಅಳವಡಿಸುವ ಕೆಲಸಕ್ಕೂ ಮಸ್ಕ್ ಆಲೋಚಿಸುತ್ತಿದ್ದು, ನ್ಯೂರಾಲಿಂಕ್ ಸ್ಟಾರ್ಟಪ್ ಸ್ಥಾಪಿಸಿದ್ದಾರೆ.
ಉಪಗ್ರಹ ಆಧರಿತ ಜಾಗತಿಕ ಇಂಟರ್ನೆಟ್ ವ್ಯವಸ್ಥೆಯ ಅಭಿವೃದ್ಧಿಗೆ ಸ್ಟಾರ್‌ಲಿಂಕ್ ಇಂಟ ರ್ನೆಟ್ ಸ್ಥಾಪಿಸಿದ್ದಾರೆ. ಬೃಹತ್ ಮೆಗಾ ಗಿಗಾ ಕಾರ್ಖಾನೆಗಳ ಸ್ಥಾಪನೆಗೂ ಮುಂದಾಗಿದ್ದಾರೆ.
“ನೀವೊಂದು ಕಂಪನಿ ಕಟ್ಟುವುದಿದ್ದರೆ, ಪ್ರತಿ ಗಂಟೆಯನ್ನೂ ಬಿಡದೆ ದುಡಿಯಿರಿ. ಮೊದಲ ಕಂಪನಿ ಶುರುಮಾಡಿದಾಗ ನಾನು ಮತ್ತು ನನ್ನ ಸೋದರ ಅಪಾರ್ಟ್ ಮೆಂಟ್ ಖರೀದಿಸುವ ಬದಲಿಗೆ ಚಿಕ್ಕ ಕಚೇರಿಯ ರಾತ್ರಿ ಮಲಗುತ್ತಿದ್ದೆವು. ಉದ್ಯಮಶೀಲರು ಯಾರೂ ಊಹಿಸಲೂ ಆಗದ ಅವಾಸ್ತವಿಕ ಕನಸುಗಳನ್ನು ನನಸಾಗಿಸಲು ಕಾರ್ಯಪ್ರವೃತ್ತರಾಗಬೇಕಾಗುತ್ತದೆ ಮತ್ತು ನಿಮ್ಮ ಪ್ರಯತ್ನಗಳು ವಾಸ್ತವಿಕವಾಗಿ ಇರಬೇಕಾಗುತ್ತದೆ, ಎದುರಾಗುವ ಎಲ್ಲ ಸವಾಲುಗಳನ್ನೂ, ಸೋಲುಗಳನ್ನೂ ಎದುರಿಸಬೇಕಾಗುತ್ತದೆ.
ಆಗ ಮಾತ್ರ ಯಶಸ್ಸಿನ ಸಂತೋಷ ಸಿಗಲು ಸಾಧ್ಯ" ಎನ್ನುತ್ತಾರೆ ಎಲಾನ್ ಮಸ್ಕ್ ಎಲ್ಲರಿಗೂ ಎಲಾನ್ ಮಸ್ಕ್ ಆಗಲು ಸಾಧ್ಯವಾಗದಿದ್ದರೂ, ಅವರ ಯಶೋಗಾಥೆಯಿಂದ ಸ್ಪೂರ್ತಿ ಪಡೆಯಲು ಸಾಧ್ಯ. ಸ್ಟಾಕ್ ಮಾರ್ಕೆಟ್ ಒಂದನ್ನೇ ನೆಚ್ಚಿಕೊಳ್ಳುವ ಬದಲಿಗೆ ಸ್ವಂತ ಉದ್ದಿಮೆ ಗಳನ್ನು ಕಟ್ಟಿ ಬೆಳೆಸಲು ಸ್ವತಃ ಯುವ ಉದ್ಯಮಿಗಳೇ ಮುಂದಾಗದಿದ್ದರೆ ಹೇಗೆ?