Dr N Somshwara Column: ನರವಿಜ್ಞಾನದ ಹೆಬ್ಬಾಗಿಲನ್ನು ತೆರೆದ ಹುತಾತ್ಮ ಲೆಬೋರ್ನ್ಯ
ನಿಧಾನವಾಗಿ ಮೂಗಿನ ಒಳಪ್ರವೇಶಿಸಿ, ಅಲ್ಲಿದ್ದ ಮಿದುಳನ್ನು ಹೆರೆದು ಹೆರೆದು ಹೊರತೆಗೆದು ಎಸೆಯು ತ್ತಿದ್ದರು. ಅವರ ದೃಷ್ಟಿಯಲ್ಲಿ ಹೃದಯವು ಜೀವ ಹಾಗೂ ಆತ್ಮನ ಅವಾಸವಾಗಿತ್ತು. ಮಿದುಳು ನಿಷ್ಪ್ರ ಯೋಜಕ ವಸ್ತುವಾಗಿತ್ತು. ಹಾಗಾಗಿ ಈಜಿಪ್ಟಿನ ಎಲ್ಲ ಮಮ್ಮಿಗಳಲ್ಲಿ ಮಿದುಳು ಎನ್ನುವ ಭಾಗವು ಇಲ್ಲವೇ ಇಲ್ಲ
![Dr N Someshwara Column 050225](https://cdn-vishwavani-prod.hindverse.com/media/images/Dr_N_Someshwara_Column_050225.max-1280x720.jpg)
![ಡಾ.ನಾ.ಸೋಮೇಶ್ವರ](https://cdn-vishwavani-prod.hindverse.com/media/images/Dr_N_Someshwarargylr.2e16d0ba.fill-100x100.jpg)
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಲೆಬೋರ್ನ್ಯ ಪ್ರಸಂಗವು ಹಲವು ನೈತಿಕ ದ್ವಂದ್ವಗಳನ್ನು ಹುಟ್ಟುಹಾಕಿದೆ. ಬ್ರೋಕಾ ಬದುಕಿದ್ದ ಕಾಲದಲ್ಲಿ ಲೆಬೋರ್ನ್ಯನಂತಹವರನ್ನು ಮನುಷ್ಯರು ಎಂದು ಪರಿಗಣಿಸುತ್ತಿರ ಲಿಲ್ಲ. ಬದಲಿಗೆ ಅವರನ್ನು ಕೇವಲ ವೈದ್ಯಕೀಯ ಅಧ್ಯಯನ ಸಾಮಗ್ರಿ ಎಂದು ಪರಿಗಣಿಸು ತ್ತಿದ್ದರು. ಹಾಗಾಗಿ ಅವ ರನ್ನು ಅಧ್ಯಯನ ಮಾಡಲು ಅಥವ ಅವರ ಮೇಲೆ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡ ಲು, ಅವರು ಯಾರ ಅನುಮತಿಯನ್ನು ಕೇಳುತ್ತಿರ ಲಿಲ್ಲ.ಸ್ವಯಂ ರೋಗಿಯನ್ನೂ ಕೇಳುತ್ತಿರಲಿಲ್ಲ. ಬ್ರೋಕ ಸಹ ತನ್ನ ವೈದ್ಯಕೀಯ ಪ್ರಬಂಧ ಗಳಲ್ಲಿ ಎಲ್ಲಿಯೂ ಲೆಬೋರ್ನ್ಯನ ನಿಜ ಹೆಸರನ್ನು ಬಳಸಲೇ ಇಲ್ಲ.
ಪ್ರಾಚೀನ ಈಜಿಪ್ಟಿಯನ್ನರು ಪುನರ್ಜನ್ಮದಲ್ಲಿ ನಂಬಿಕೆಯನ್ನಿಟ್ಟಿದ್ದರು. ಹಾಗಾಗಿ ತಮ್ಮವರು ಸತ್ತಾಗ ಅವರ ಶವಗಳನ್ನು ಸದಾ ಕಾಲಕ್ಕೂ ಸಂರಕ್ಷಿಸಿಡಲು ಕಲಿತರು. ಇದುವೇ ಮಮ್ಮಿಫಿಕೇಶನ್ ಅಥವ ಮಮ್ಮೀಕರಣ. ಶವರಕ್ಷಣೆಯ ಪ್ರಕ್ರಿಯೆಯಲ್ಲಿ, ಒಂದು ಹರಿತವಾದ ನೀಳ ಕೊಕ್ಕೆಯನ್ನು ಶವದ ಮೂಗಿನ ಒಳಗೆ ತೂರಿಸುತ್ತಿದ್ದರು.
ನಿಧಾನವಾಗಿ ಮೂಗಿನ ಒಳಪ್ರವೇಶಿಸಿ, ಅಲ್ಲಿದ್ದ ಮಿದುಳನ್ನು ಹೆರೆದು ಹೆರೆದು ಹೊರತೆಗೆದು ಎಸೆ ಯುತ್ತಿದ್ದರು. ಅವರ ದೃಷ್ಟಿಯಲ್ಲಿ ಹೃದಯವು ಜೀವ ಹಾಗೂ ಆತ್ಮನ ಅವಾಸವಾಗಿತ್ತು. ಮಿದುಳು ನಿಷ್ಪ್ರಯೋಜಕ ವಸ್ತುವಾಗಿತ್ತು. ಹಾಗಾಗಿ ಈಜಿಪ್ಟಿನ ಎಲ್ಲ ಮಮ್ಮಿಗಳಲ್ಲಿ ಮಿದುಳು ಎನ್ನುವ ಭಾಗವು ಇಲ್ಲವೇ ಇಲ್ಲ.
ಇದನ್ನೂ ಓದಿ: Dr N Someshwara Column: ಔಷಧವಲ್ಲ, ಇದು ಪ್ರತ್ಯೇಕ ವಿಷ !
ಮನುಷ್ಯನ ಸಕಲ ಕೆಲಸ ಕಾರ್ಯಗಳನ್ನು ನಿಯಂತ್ರಿಸುವ ಸೂಪರ್ ಕಂಪ್ಯೂಟರ್ ಮಿದುಳು ಎನ್ನುವ ಸತ್ಯವು ಮನುಷ್ಯನಿಗೆ ತಿಳಿಯಲು ಕಾರಣನಾದವನು, ಒಬ್ಬ ರೋಗಿ ಲೂಯೀ ವಿಕ್ಟರ್ ಲೆಬೋರ್ನ್ಯ (1809-1961). ಇವನು ಪ್ಯಾರಿಸ್ಸಿನ ಬಿಸೆತ್ರ ಆಸ್ಪತ್ರೆಯ ಕತ್ತಲ ಕೋಣೆಯೊಂದರಲ್ಲಿ 21 ವರ್ಷಗಳ ಕಾಲ ಬದುಕಿದ್ದ. ಆಗ ಇವನ ಹೆಸರು ಯಾರಿಗೂ ತಿಳಿದಿರಲಿಲ್ಲ.
ಇವನಿಗೆ ಗೊತ್ತಿದ್ದದ್ದು ಒಂದೇ ಒಂದು ಶಬ್ದ ಟ್ಯಾನ್. ಈ ಒಂದು ಶಬ್ದವನ್ನು ಬಿಟ್ಟು ಬೇರೇನನ್ನು ಮಾತನಾಡುತ್ತಿರಲಿಲ್ಲ. ಹಾಗಾಗಿ ಆಸ್ಪತ್ರೆಯಲ್ಲಿ ಎಲ್ಲರೂ ಈತನನ್ನು ಟ್ಯಾನ್ ಎಂದೇ ಕರೆಯು ತ್ತಿದ್ದರು. ಇಂತಹ ಮಾತು ಬಾರದ ಟ್ಯಾನ್ ನರವಿಜ್ಞಾನದ ಹೆಬ್ಬಾಗಿಲನ್ನೇ ತೆರೆದ ಎಂದರೆ ಅದು ಅತಿಶಯೋಕ್ತಿಯಾಗಲಾರದು. 1861ರಲ್ಲಿ ಈತನು ಪಿಯರಿ ಪಾಲ್ ಬ್ರೋಕ (1824-1880) ಎಂಬ -ಂಚ್ ವೈದ್ಯನನ್ನು ಭೇಟಿಯಾದ. ಅದರೊಡನೆ ಮನುಷ್ಯನನ್ನು ತನ್ನನ್ನು ತಾನು ಅರಿಯುವ ದಿಶೆಯಲ್ಲಿ ಒಂದು ಮಹತ್ತರ ತಿರುವು ದೊರೆಯಿತು.
ಈಜಿಪ್ಷಿಯನ್ನರು ಮಿದುಳೊಂದು ಅನಗತ್ಯ ವಸ್ತು ಎಂದು ತೀರ್ಮಾನಿಸಿದ್ದರೂ ಸಹ, ಆನಂತರ ಬಂದ ಗ್ರೀಕರು, ರೋಮನ್ನರು, ಅರಬ್ಬರು ಹಾಗೂ ಯೂರೋಪಿನ ಅನೇಕ ವಿಜ್ಞಾನಿಗಳು ಮಿದುಳೇ ಮನುಷ್ಯನ ಎಲ್ಲ ಚಟವಟಿಕೆಗಳ ಕೇಂದ್ರ ಎಂದು ತರ್ಕಿಸಿದ್ದರು. ಮಿದುಳಿನ ಕೆಲಸ ಕಾರ್ಯಗಳನ್ನು ಆಧಾರ ಸಮೇತ ಗುರುತಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದರು.
ಈ ದಿಶೆಯಲ್ಲಿ ಪಾಲ್ ಬ್ರೋಕ ಮೊದಲ ವಿಜಯಿಯಾಗಿ, ಮಿದುಳಿನ ನಿರ್ದಿಷ್ಟ ಕ್ಷೇತ್ರಗಳು ನಮ್ಮ ನಿರ್ದಿಷ್ಟ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತವೆ ಎನ್ನುವ ಪರಿಕಲ್ಪನೆಗೆ ನಿಖರ ಪುರಾವೆಯನ್ನು ನೀಡಿದ ಈ ಸಂಶೋಧನೆಯು ಹಲವು ದ್ವಂದ್ವ, ಚರ್ಚೆ ಹಾಗೂ ವಾದಗಳನ್ನು ಹುಟ್ಟಿಹಾಕಿದ್ದೂ ಸಹ ಒಂದು ವಿಪರ್ಯಾಸವಾಗಿದೆ.
ಲೂಯಿ ವಿಕ್ಟರ್ ಲೆಬೋರ್ನ್ಯ ಫ್ರಾನ್ಸ್ ದೇಶದ ಮೊಹರ್ ಸುರ್ ಲುಹುವಾ ಎಂಬ ಹಳ್ಳಿಯಲ್ಲಿ ಹುಟ್ಟಿದ. ಈತನ ಬಾಲ್ಯದ ಬಗ್ಗೆ ಹೆಚ್ಚೇನು ತಿಳಿದಿಲ್ಲ. ಇವನು ತನ್ನ 30ನೆಯ ವಯಸ್ಸಿನವರೆಗೆ ಓರ್ವ ಕುಶಲಕರ್ಮಿಯಾಗಿದ್ದ. ಒಂದು ದಿನ ಇದ್ದಕ್ಕಿದ್ದ ಹಾಗೆ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡ. ಉಗ್ರಸ್ವರೂಪದ ಸೆಳವು ಆರಂಭವಾಯಿತು. ಅವನ ದೇಹದ ಬಲಭಾಗಕ್ಕೆ ಲಕ್ವ ಹೊಡೆಯಿತು. ಟ್ಯಾನ್ ಎನ್ನುವ ಶಬ್ದವನ್ನು ಬಿಟ್ಟು ಮತ್ತೇನನ್ನೂ ಉಚ್ಚರಿಸಲಾರದವನಾದ.
1840. ಇವನೊಬ್ಬ ದಂಡಪಿಂಡ ಎಂದು ಅಂದಿನ ಸಮಾಜವು ತೀರ್ಮಾನಿಸಿತು. ಇಂತಹ ದಂಡಪಿಂಡಗಳು, ಅಂದರೆ ಗುಣಪಡಿಸಲಾಗದ ಮನೋರೋಗಿಗಳು, ಅಪಸ್ಮಾರಿಗಳು ಹಾಗೂ ದಿವಾಳಿಗಳನ್ನು (ಪಾಪರ್) ಬಿಸೆತ್ರ ಆಸ್ಪತ್ರೆಯಲ್ಲಿ ಖೈದು ಇರಿಸಿದ್ದರು. ಅವರ ಗುಂಪಿಗೆ ಲೆಬೋರ್ನ್ಯ ನನ್ನೂ ಸೇರಿಸಿಬಿಟ್ಟರು. ಬಹುಶಃ ಇದುವೇ ಸಮಾಜ ಮಾಡಿದ ತಪ್ಪು ಎನಿಸುತ್ತದೆ. ಲೆಬೋರ್ನ್ಯನಿಗೆ ಮಾತು ಬರದಿದ್ದರೂ, ಬೇರೆಯವರು ಮಾತನಾಡುವುದು ಚೆನ್ನಾಗಿ ಅರ್ಥವಾಗು ತ್ತಿತ್ತು.
ಆಂಗಿಕದ ಮೂಲಕ ಉತ್ತರವನ್ನು ನೀಡುತ್ತಿದ್ದ. ಸಂಭಾಷಿಸಲು ಪ್ರಯತ್ನಿಸುತ್ತಿದ್ದ. ಸಿಳ್ಳೆಯ ಮೂಲ ಕ ಹಾಡಲೆತ್ನಿಸುತ್ತಿದ್ದ. ಆದರೆ ಮೂಕನಾಗಿದ್ದ ಇವನನ್ನು ಫ್ರೆಂಚ್ ಸಮಾಜವು ಒಂದು ದಂಡ ಪಿಂಡ ಎಂದು ಪರಿಗಣಿಸಿ ಅವನನ್ನು ಆಸ್ಪತ್ರೆಗೆ ಶಾಶ್ವತವಾಗಿ ಸೇರಿಸಿಬಿಟ್ಟಿತು. ವೈದ್ಯರು ಇವನನ್ನು ಟ್ಯಾನ್ ಟ್ಯಾನ್ ಎಂದು ಗುರುತಿಸಿದರೆ, ದಾದಿಯವರ ತಂಡವು ಇವನನ್ನು ಹಠಮಾರಿ ಎಂದು ಕರೆಯುತ್ತಿದ್ದರು.
ಏಪ್ರಿಲ್ 1861. ಪಾಲ್ ಬ್ರೋಕ, 36 ವರ್ಷ ವಯಸ್ಸಿನ ಶಸವೈದ್ಯ. ಪ್ಯಾರಿಸ್ಸಿನ ಶೈಕ್ಷಣಿಕ ವಲಯ ದಲ್ಲಿ ಪ್ರತಿಭಾವಂತ ಎಂದು ಹೆಸರಾಗಿದ್ದ. ಪಾಲ್ ಬ್ರೋಕ ಮಿದುಳಿನ ತೊಗಟೆಯಲ್ಲಿ ವಿವಿಧ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುವ ನಿಗದಿತ ಕ್ಷೇತ್ರಗಳಿವೆ ಎಂದು ವಾದಿಸುತ್ತಿದ್ದ. ಆದರೆ ಇವನಿಗೆ ಪ್ರತಿಸ್ಪರ್ಧಿಯಾಗಿದ್ದ ಜೀನ್ ಪಿಯರಿ ಫ್ಲಾರೆನ್ಸ್ (1794-1867), ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೂ, ಮಿದುಳು ಇಡಿಯಾಗಿ ಕೆಲಸವನ್ನು ಮಾಡುತ್ತದೆ; ಬಿಡಿ ಬಿಡಿಯಾಗಲ್ಲ ಎಂದು ವಾದಿಸುತ್ತಿದ್ದ.
ಪಾರಿವಾಳದ ಮಿದುಳಿನ ಒಂದು ಭಾಗವನ್ನು ಛೇದಿಸಿದರೆ, ಇಡೀ ಪಾರಿವಾಳವು ನಿಶ್ಚೇತವಾಗು ತ್ತಿದ್ದುದನ್ನು ತೋರುತ್ತಿದ್ದ. ಟ್ಯಾನನ ಬಗ್ಗೆ ಯಾರೋ ಪಾಲ್ ಬ್ರೋಕನಿಗೆ ತಿಳಿಸಿದರು. ಪಾಲ್ ಬ್ರೋಕ ಬಂದು ಟ್ಯಾನನನ್ನು ಭೇಟಿಯಾದಾಗ, ಟ್ಯಾನನಿಗೆ ಅಂಗಕ್ಷಯವುಂಟಾಗಿತ್ತು. ಅವನು ಸಾಯುವ ಹಂತಕ್ಕೆ ಬಂದಿದ್ದ. ಪಾಲ್ ಬ್ರೋಕ ಟ್ಯಾನನ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ. ಅವನ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದ. ಟ್ಯಾನ್ ಎನ್ನುವ ಒಂದು ಶಬ್ದವನ್ನು ಮಾತ್ರ ನುಡಿಯುವ ವೈಚಿತ್ರ್ಯವನ್ನು ಬಿಟ್ಟರೆ, ಉಳಿದೆಲ್ಲ ರೀತಿಯಲ್ಲಿ ಅವನು ಎಲ್ಲರಂತೆಯೇ ಆರೋಗ್ಯ ವಾಗಿರುವುದನ್ನು ಗಮನಿಸಿದ. ದುರದೃಷ್ಟವಶಾತ್ ಟ್ಯಾನ್ ಕೆಲವೇ ದಿನಗಳಲ್ಲಿ ಮರಣಿಸಿದ.
ಆಗ ಬ್ರೋಕ ಅವನ ಶವಪರೀಕ್ಷೆಯನ್ನು ಮಾಡಿದ. ಅವನ ಮಿದುಳಿನ ಎಡ ಲಲಾಟಹಾಲೆಯಲ್ಲಿ ಒಂದು ಕೋಳಿಮೊಟ್ಟೆ ಗಾತ್ರದ ಭಾಗವು ನಷ್ಟವಾಗಿರುವುದನ್ನು ಗಮನಿಸಿದ. ಬ್ರೋಕ ಸರಳ ತರ್ಕ ವನ್ನು ಮಂಡಿಸಿದ. ಟ್ಯಾನ್ ನಲ್ಲಿ ಮಾತೊಂದನ್ನು ಬಿಟ್ಟು ಉಳಿದ ಎಲ್ಲ ಕೆಲಸ ಕಾರ್ಯಗಳು ಸಹಜವ್ಯಾಪ್ತಿಯಲ್ಲಿ ಇದ್ದ ಕಾರಣ, ಮಿದುಳಿನ ನಷ್ಟವಾದ ಈ ಭಾಗವು ಮಾತಿಗೆ ಸಂಬಂಧಪಟ್ಟಿರ ಬೇಕೆಂದು ತೀರ್ಮಾನಿಸಿದ.
ಇದುವೇ ಸುಸಂಬದ್ಧ ಮಾತಿಗೆ ಸಂಬಂಧಪಟ್ಟ ಕ್ಷೇತ್ರ ಎಂದು ಘೋಷಿಸಿದ. ಈ ಒಂದು ಘೋಷಣೆ ಯು ಕ್ರಾಂತೀಕಾರಕ ತೀರ್ಮಾನವಾಗಿತ್ತು. ಮೊದಲ ಬಾರಿಗೆ ಮಾನವನ ಮಿದುಳಿನಲ್ಲಿ, ಒಂದು ನಿರ್ದಿಷ್ಟ ಕೆಲಸವನ್ನು ಮಾಡುವ ಒಂದು ಕ್ಷೇತ್ರವನ್ನು ಗುರುತಿಸಲಾಗಿತ್ತು. ಹಾಗಾಗಿ ಜೀನ್ ಪಿಯರ್ ಫ್ಲಾರೆನ್ಸ್ ನಂತಹವರ ವಾದವು ಪೂರ್ಣವಾಗಿ ಬಿದ್ದುಹೋಯಿತು.
ಇಂದು ಲೆಬೋರ್ನ್ಯನ ಮಿದುಳನ್ನು -ರ್ಮಾಲ್ಡಿಹೈಡ್ ತುಂಬಿರುವ ಒಂದು ಗಾಜಿನ ಸೀಸೆಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಬ್ರೋಕ, ಲೆಬೋರ್ನ್ಯನ ಮಿದುಳಿನ ಚಿತ್ರವನ್ನು ಅತ್ಯಂತ ನಿಖರವಾಗಿ ಚಿತ್ರಿಸಿದ. ಈ ಚಿತ್ರ-ಮಾಹಿತಿಯು ಜಗತ್ತಿನ ಎಲ್ಲ ವೈದ್ಯಕೀಯ ಪಠ್ಯಪುಸ್ತಕಗಳಲ್ಲಿ ಪ್ರಕಟವಾಯಿತು. ಇದನ್ನು ಬ್ರೋಕಾಸ್ ಏ-ಸಿಯ ಅಥವ ಬ್ರೋಕವಾಕ್‌ಸ್ತಂಭನ ಎಂದು ಕರೆದರು.
ಇವರಿಗೆ ಭಾಷೆಯು ಸಂಪೂರ್ಣವಾಗಿ ಅರ್ಥವಾಗುತ್ತದೆ. ಆದರೆ ತಾವು ಸುಸಂಬದ್ಧವಾಗಿ ಮಾತ ನಾಡಲಾರರು. ಸಂಕೀರ್ಣ ಹಾಗೂ ಸುದೀರ್ಘ ವಾಕ್ಯವನ್ನು ರಚಿಸಲಾರರು. ಹೌದು... ಇಲ್ಲ... ಕಾರು ... ಹತ್ತು ಹೀಗೆ ಬಿಡಿ ಬಿಡಿಯಾಗಿ ಮಾತನಾಡುವುದುಂಟು. ಕೊನೆಗೆ ಇದೂ ನಿಂತುಹೋಗಬಹುದು. ಇಂದು ಬ್ರೋಕಾ ಕ್ಷೇತ್ರಕ್ಕೆ ಸಂಬಂಽಸಿದ ಹಾಗ ಸಾಕಷ್ಟು ಅಧ್ಯಯನಗಳು ನಡೆದಿವೆ. ಈ ಕ್ಷೇತ್ರವು ಕೇವಲ ಮಾತಿನ ಉತ್ಪಾದನೆಯನ್ನು ಮಾತ್ರ ಮಾಡುತ್ತಿಲ್ಲ, ವಾಕ್ಯಗಳ ರಚನೆ, ಸನ್ನೆಗಳು ಹಾಗೂ ಸಂಗೀತ ಲಯವನ್ನು ಆಸ್ವಾದಿಸಲೂ ನೆರವಾಗುತ್ತದೆ ಎನ್ನುವ ವಿಸ್ತೃತ ವಿಚಾರವು ತಿಳಿದುಬಂದಿದೆ.
ಲೆಬೋರ್ನ್ಯ ಪ್ರಸಂಗವು ಹಲವು ನೈತಿಕ ದ್ವಂದ್ವಗಳನ್ನು ಹುಟ್ಟುಹಾಕಿದೆ. ಬ್ರೋಕಾ ಬದುಕಿದ್ದ ಕಾಲದಲ್ಲಿ ಲೆಬೋರ್ನ್ಯನಂತಹವರನ್ನು ಮನುಷ್ಯರು ಎಂದು ಪರಿಗಣಿಸುತ್ತಿರಲಿಲ್ಲ. ಬದಲಿಗೆ ಅವರನ್ನು ಕೇವಲ ವೈದ್ಯಕೀಯ ಅಧ್ಯಯನ ಸಾಮಗ್ರಿ ಎಂದು ಪರಿಗಣಿಸುತ್ತಿದ್ದರು. ಹಾಗಾಗಿ ಅವ ರನ್ನು ಅಧ್ಯಯನ ಮಾಡಲು ಅಥವ ಅವರ ಮೇಲೆ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡ ಲು, ಅವರು ಯಾರ ಅನುಮತಿಯನ್ನು ಕೇಳುತ್ತಿರಲಿಲ್ಲ.
ಸ್ವಯಂ ರೋಗಿಯನ್ನೂ ಕೇಳುತ್ತಿರಲಿಲ್ಲ. ಬ್ರೋಕ ಸಹ ತನ್ನ ವೈದ್ಯಕೀಯ ಪ್ರಬಂಧಗಳಲ್ಲಿ ಎಲ್ಲಿ ಯೂ ಲೆಬೋರ್ನ್ಯನ ನಿಜ ಹೆಸರನ್ನು ಬಳಸಲೇ ಇಲ್ಲ. ಬದಲಿಗೆ ಟ್ಯಾನ್ ಎಂದೇ ಬರೆದು ತನ್ನ ಅಮಾನವೀಯತೆಯನ್ನು ಮೆರೆದ. ಬ್ರೋಕನ ನಂತರ ಬಂದ ವೈದ್ಯಕೀಯ ಇತಿಹಾಸಕಾರರು ಬಿಸೆತ್ರ ಆಸ್ಪತ್ರೆಯ ದಾಖಲೆಗಳನ್ನೆಲ್ಲ ಪರಿಶೀಲಿಸಿ, ಟ್ಯಾನನ ನಿಜವಾದ ಹೆಸರನ್ನು ಬಹಿರಂಗಪಡಿಸಿದರು.
2007ರಲ್ಲಿ ನೀನ ಡ್ರೋಂಕರ್ಸ್ ಎಂಬ ನರವೈದ್ಯೆ, ಲೆಬೋರ್ನ್ಯನ ಮಿದುಳನ್ನು ತೆಗೆದುಕೊಂಡು ಹೋಗಿ ಅದರ ಎಂ.ಆರ್.ಐ ಸ್ಕ್ಯಾನ್ ಮಾಡಿದಳು. ಸ್ಕ್ಯಾನ್ ವರದಿಯಂತೆ ಬ್ರೋಕ ಕ್ಷೇತ್ರದ ಜೊತೆ ಯಲ್ಲಿ ಇನ್ಸುಲ, ಬೇಸಲ್ ಗ್ಯಾಂಗ್ಲಿಯ, ವೈಟ್ ಮ್ಯಾಟರ್ ಟ್ರಾಕ್ಟ್ಸ್ ಎಂಬ ಮಿದುಳಿನ ಇತರ ಭಾಗ ಗಳೂ ಹಾನಿಗೊಳಗಾಗಿದ್ದವು ಎಂಬ ಅಂಶವು ಬೆಳಕಿಗೆ ಬಂದಿತು. ಬ್ರೋಕನಿಗೆ ತನ್ನ ಸಿದ್ಧಾಂತವನ್ನು ಮಂಡಿಸುವುದಷ್ಟೇ ಮುಖ್ಯವಾಗಿತ್ತು.
ಹಾಗಾಗಿ ಅವನು ಬ್ರೋಕಾ ಕ್ಷೇತ್ರವನ್ನಷ್ಟೇ ಪರಿಗಣಿಸಿದ್ದ. ಆದರೆ ಅವನ ಇನ್ಸುಲ, ಬೇಸಲ್ ಗ್ಯಾಂಗ್ಲಿ ಯ, ವೈಟ್ ಮ್ಯಾಟರ್ ಟ್ರಾಕ್ಟ್ ಇತ್ಯಾದಿಗಳಲ್ಲಿ ಪರಿಗಣಿಸಿರಲಿಲ್ಲ. ಇನ್ಸುಲ ಮತ್ತು ಬೇಸಲ್ ಗ್ಯಾಂಗ್ಲಿ ಯ ವ್ಯಕ್ತಿಯ ದೇಹ ಸ್ಥಿತಿಯನ್ನು ಉದಾಹರಣೆಗೆ ಹಸಿವಿನ ಪ್ರಮಾಣವನ್ನು ಹಾಗೂ ಪ್ರೇರಣಾ ದಾಯಕ ಕೆಲಸ ಕಾರ್ಯಗಳನ್ನು ಅಂದರೆ ಆಹಾರ, ವಿಹಾರ, ಮನರಂಜನೆಗಳನ್ನು ಹುಡುಕಿ ಕೊಂಡು ಹೋಗುವ ಕೆಲಸಗಳನ್ನು ನಿರ್ಧರಿಸುತ್ತವೆ.
ವೈಟ್ ಮ್ಯಾಟರ್ ಟ್ರಾಕ್ಟ್ ಮೂಲಕ ಇನ್ಸುಲವು ಪ್ರಧಾನ ಮಸ್ತಿಷ್ಕಕ್ಕೆ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ಹಾಗಾಗಿ ಲೆಬೋರ್ನ್ಯ ಮಿದುಳಿನ ಈ ಭಾಗಗಳು ಹಾನಿಗೊಳ ಗಾಗಿದ್ದವು. ಈ ವಿಚಾರಗಳ ಬಗ್ಗೆ ಬ್ರೋಕ ತಲೆಯನ್ನು ಕೆಡಿಸಿಕೊಳ್ಳಲಿಲ್ಲ. ಬ್ರೋಕ ಮಂಡಿಸಿದ ಸಿದ್ಧಾಂತದಿಂದ ಪ್ರಭಾವಿತನಾದ ಜರ್ಮನ್ ನರವೈದ್ಯ ಕಾರ್ಲ್ ವರ್ನಿಕೆ (1848-1905) 1874 ರಲ್ಲಿ ಮತ್ತೊಂದು ವಿಶೇಷವನ್ನು ಗಮನಿಸಿದ.
ಕೆಲವರು ಸುಲಲಿತವಾಗಿ ಮಾತನಾಡುತ್ತಿದ್ದರು ಆದರೆ ಅವರ ಮಾತುಕತೆಯ ತಲೆ ಬುಡ ಮಾತ್ರ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಇಂತಹ ವ್ಯಕ್ತಿಗಳು ಸತ್ತಮೇಲೆ ಅವರ ಮಿದುಳನ್ನು ಪರೀಕ್ಷಿಸಿ ದಾಗ, ಲೆಬೋರ್ನ್ಯನ ಮಿದುಳಿನ ಎಡ ಅರೆಗೋಳದಲ್ಲಿ ಹೇಗೆ ಒಂದು ಭಾಗವು ನಷ್ಟವಾಗಿತ್ತೋ, ಹಾಗೆಯೇ ಇವರಲ್ಲೂ ಸಹ, ಬ್ರೋಕ ಕ್ಷೇತ್ರದ ಸಮೀಪದಲ್ಲಿದ್ದ ಮತ್ತೊಂದು ಕ್ಷೇತ್ರಕ್ಕೂ ಹಾನಿ ಯಾಗಿತ್ತು. ಈ ಭಾಗವನ್ನು ವರ್ನಿಕೆ ಕ್ಷೇತ್ರವೆಂದು ಕರೆದರು.
ನಂತರ ದಿನಗಳಲ್ಲಿ ಜರ್ಮನ್ ನರ ಮನೋವೈದ್ಯ ಕಾರ್ಬೀನಿಯನ್ ಬ್ರಾಡ್ಮನ್ (1868-1918) ಸೈಟೋಆರ್ಕಿಟೆಕ್ಟೋನಿಕ್ ಎಂಬ ತಂತ್ರದಿಂದ, ಅಂದರೆ ಮಿದುಳಿನ ವಿವಿಧ ಭಾಗಗಳಲ್ಲಿರುವ ನರಕೋಶಗಳ ರಚನಾ ವೈವಿಧ್ಯತೆ ಯನ್ನು ಅಧ್ಯಯನ ಮಾಡಿ, ಮಿದುಳಿನಲ್ಲಿ 52 ವಿಶಿಷ್ಟ ಕ್ಷೇತ್ರ ಗಳು ಇರುವುದನ್ನು ಗುರುತಿಸಿದ. ಅವನ್ನು ಇಂದು ಬ್ರಾಡ್ಮನ್ ಏರಿಯಾಸ್ ಅಥವ ಬ್ರಾಡ್ಮನ್ ಕ್ಷೇತ್ರಗಳೆಂದು ಗುರುತಿಸುತ್ತೇವೆ.
ಈ 52 ಕ್ಷೇತ್ರಗಳು 52 ವಿಶಿಷ್ಟ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಕೇಂದ್ರಗಳಾಗಿವೆ. 20ನೆಯ ಶತಮಾನದಲ್ಲಿ ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನನ್ಸ್ ಇಮೇಜಿಂಗ್ ಹಾಗೂ ಪಾಸಿಟ್ರಾನ್ ಎಮಿಷನ್ ಟೊಪಾಗ್ರಾಪಿ ಎಂಬ ಎರಡು ಸ್ಕ್ಯಾನಿಂಗ್ ತಂತ್ರಜ್ಞಾನಗಳು ಅಸ್ತಿತ್ವಕ್ಕೆ ಬಂದವು. ಮಿದುಳು ಸಕ್ರಿಯ ವಾಗಿರುವಾಗಲೇ, ಮಿದುಳಿನ ಅವನ್ನು ಅಧ್ಯಯನ ಮಾಡಲು ಸಾಧ್ಯವಾಯಿತು.
ಈ ಸ್ಕ್ಯಾನಿಂಗ್ ಅಧ್ಯಯನಗಳು ಬ್ರಾಡ್ಮನ್ ಕ್ಷೇತ್ರಗಳ ಅಸ್ತಿತ್ವಕ್ಕೆ ಋಜುವಾತನ್ನು ಒದಗಿಸಿದವು. ಜೊತೆಗೆ ಮಿದುಳು ಕೇವಲ ಈ 52 ಕ್ಷೇತ್ರಗಳಿಂದ ಮಾತ್ರವಲ್ಲ, ಈ ಕ್ಷೇತ್ರಗಳ ವಿವಿಧ ಕ್ರಮಗತಿ ಹಾಗೂ ಸಂಯೋಜನೆಯ ಮೂಲಕ ಅತ್ಯಂತ ಸಂಕೀರ್ಣ ನರಜಾಲವನ್ನು ರೂಪಿಸಿ ಅವುಗಳ ನೆರವಿನಿಂದ ಸಮಗ್ರ ಕೆಲಸ ನಿರ್ವಹಿಸುತ್ತವೆ ಎನ್ನುವ ಮಾಹಿತಿಯೂ ತಿಳಿದುಬಂದಿತು.
ಲೂಯಿ ಲೆಬೋರ್ನ್ಯ ಏಪ್ರಿಲ್ 17, 1861ರಲ್ಲಿ ಮರಣಿಸಿದ. ಅವನ ಮರಣ ಪ್ರಮಾಣ ಪತ್ರದಲ್ಲಿ ಅವನ ಸಾವಿಗೆ ಅವನ ಗ್ಯಾಂಗ್ರಿನ್ ಅಥವ ಅಂಗಕ್ಷಯವು ಕಾರಣ ಎಂದು ನಮೂದಿಸಿದ್ದರು. ಮನುಷ್ಯನು ಮಹಾಸ್ವಾರ್ಥಿ. ಹೆಸರು ಹಣಕ್ಕಾಗಿ ಆತನು, ಎಂತಹ ನಿಕೃಷ್ಟ ಕೆಲಸವನ್ನು ಮಾಡಲು ಹೇಸುವುದಿಲ್ಲ. ವೈಜ್ಞಾನಿಕ ಅಧ್ಯಯನಗಳಿಗಾಗಿ ಅದೆಷ್ಟು ಕಪ್ಪೆಗಳನ್ನು, ಮೊಲಗಳನ್ನು, ಗಿನಿ ಪಿಗ್‌ಗಳನ್ನು, ಮಂಗಗಳನ್ನು, ಚಿಂಪಾಂಜ಼ಿಗಳನ್ನು, ಗೊರಿಲ್ಲಗಳನ್ನು ಕೊಂದಿದ್ದಾನೋ ಅದಕ್ಕೆ ಲೆಕ್ಕವೇ ಇಲ್ಲ.
ಜೊತೆಗೆ ಲೆಬೋರ್ನ್ಯನಂತಹ ಅಜ್ಞಾತ ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿರುವುದು ಇತಿಹಾಸದಲ್ಲಿ ಹೂತುಹೋಗಿದೆ. ಇಂತಹ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಪ್ರತಿಯೊಂದು ವೈದ್ಯ ಕೀಯ ಸಂಶೋಧನೆಯ ಹಿಂದೆ ಹಲವು ಜೀವಿಗಳ ಬಲಿದಾನವಾಗಿರುತ್ತವೆ ಎನ್ನುವ ಪ್ರಜ್ಞೆಯನ್ನು ನಾವು ಉಳಿಸಿಕೊಳ್ಳಬೇಕಿದೆ.