ಚೀನಾ ಮಾಸ್ಟರ್ಸ್; ಭರ್ಜರಿ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ತಲುಪಿದ ಸಿಂಧು
China Masters 2025: 41 ನಿಮಿಷಗಳ ಹೋರಾಟದಲ್ಲಿ 21-15, 21-15 ಅಂತರದಲ್ಲಿ ಜಯ ಸಾಧಿಸುವ ಮೂಲಕ ಭಾರತೀಯ ಆಟಗಾರ್ತಿ ಮೇಲುಗೈ ಸಾಧಿಸಿದರು. ಕಳೆದ ವಾರ ಹಾಂಗ್‌ಕಾಂಗ್ ಓಪನ್‌ನಲ್ಲಿ ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮತ್ತೊಬ್ಬ ಆಟಗಾರ್ತಿ ಡೇನ್ ಲಿನ್ ಕ್ರಿಸ್ಟೋಫರ್ಸನ್ ಅವರಿಗೆ ಮಣಿದಿದ್ದರು.

-

ಶೆಂಝೆನ್ (ಚೀನಾ): ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು(P.V. Sindhu) ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲಿ(China Masters 2025) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ಶೆಂಝೆನ್‌ನಲ್ಲಿ ನಡೆದ ಪಂದ್ಯದಲ್ಲಿ ಥೈಲ್ಯಾಂಡ್‌ನ ಪೋರ್ನ್‌ಪಾವೀ ಚೊಚುವಾಂಗ್(Pornpawee Chochuwong) ಅವರನ್ನು ಸೋಲಿಸುವ ಮೂಲಕ ಈ ಸಾಧನೆ ಮಾಡಿದರು.
41 ನಿಮಿಷಗಳ ಹೋರಾಟದಲ್ಲಿ 21-15, 21-15 ಅಂತರದಲ್ಲಿ ಜಯ ಸಾಧಿಸುವ ಮೂಲಕ ಭಾರತೀಯ ಆಟಗಾರ್ತಿ ಮೇಲುಗೈ ಸಾಧಿಸಿದರು. ಕಳೆದ ವಾರ ಹಾಂಗ್‌ಕಾಂಗ್ ಓಪನ್‌ನಲ್ಲಿ ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮತ್ತೊಬ್ಬ ಆಟಗಾರ್ತಿ ಡೇನ್ ಲಿನ್ ಕ್ರಿಸ್ಟೋಫರ್ಸನ್ ಅವರಿಗೆ ಮಣಿದಿದ್ದರು.
ಗೆಲುವಿನ ಬಳಿಕ ಮಾತನಾಡಿದ ಸಿಂಧು, "ಈ ಗೆಲುವಿನಿಂದ ನನಗೆ ಸಂತೋಷವಾಗಿದೆ. ಆರಂಭದಿಂದಲೂ ಜಾಗರೂಕರಾಗಿರುವುದು ಮತ್ತು ನನ್ನ 100 ಪ್ರತಿಶತವನ್ನು ನೀಡುವುದು ಮತ್ತು ಸುಲಭವಾದ ತಪ್ಪುಗಳನ್ನು ಮಾಡದಿರುವುದು ನನಗೆ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
"ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಆದರೆ ಯಾವುದೇ ಪಂದ್ಯಗಳು ಬಂದರೂ ದೀರ್ಘ ಪಂದ್ಯಗಳಿಗೆ ಸಿದ್ಧರಾಗಿರಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಸಿಂಧು ಹೇಳಿದರು.