Dr N Someshwara Column: ಔಷಧವಲ್ಲ, ಇದು ಪ್ರತ್ಯೇಕ ವಿಷ !

ತಮ್ಮ ಮೇಲೆ ಕರುಣೆ ತೋರುವಂತೆ ಗೋಗರೆದರು. ಅವರ ತೃಪ್ತಿಗಾಗಿ ನರಬಲಿಯನ್ನು ಒಳಗೊಂಡಂತೆ ಎಲ್ಲ ರೀತಿಯ ಪ್ರಾಣಿಗಳನ್ನು ಬಲಿಗೊಟ್ಟರು

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮ್ಮ ಪೂರ್ವಜರಿಗೆ, ಕಾಯಿಲೆಗಳು ಏಕೆ ಬರುತ್ತವೆ ಎನ್ನುವುದು ತಿಳಿದಿರಲಿಲ್ಲ. ಆರಂಭದ ದಿನಗಳಲ್ಲಿ ಅವರು, ದೇವರು / ದೆವ್ವಗಳು / ಹಿರಿಯರಆತ್ಮಗಳು ಅತೃಪ್ತಗೊಂಡಾಗ, ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ನಾನಾ ಕಾಯಿಲೆಗಳನ್ನು ಶಾಪದ ರೂಪದಲ್ಲಿ ನೀಡುತ್ತಿದ್ದರು ಎಂದು ನಂಬಿದ್ದರು. ಈ ಶಕ್ತಿಗಳನ್ನು ತೃಪ್ತಿಪಡಿಸಲು, ಅವನ್ನು ಮಂತ್ರಗಳ ರೂಪದಲ್ಲಿ ಹಾಡಿ ಹೊಗಳಿದರು. ತಮ್ಮ ಮೇಲೆ ಕರುಣೆ ತೋರುವಂತೆ ಗೋಗರೆದರು. ಅವರ ತೃಪ್ತಿಗಾಗಿ ನರಬಲಿಯನ್ನು ಒಳಗೊಂಡಂತೆ ಎಲ್ಲ ರೀತಿಯ ಪ್ರಾಣಿಗಳನ್ನು ಬಲಿಗೊಟ್ಟರು. ಪ್ರತಿವರ್ಷ ಅವರ ಹೆಸರಿನಲ್ಲಿ ಪೂಜೆ, ಉತ್ಸವ, ಜಾತ್ರೆ ಇತ್ಯಾದಿಗಳನ್ನು ಏರ್ಪಡಿಸಿದರು.

ನಮ್ಮ ಪೂರ್ವಜರು, ಸಡಿಲವಾಗಿ ಹರಡಿದ್ದ ಜನ ಸಮುದಾಯಗಳನ್ನೆಲ್ಲ ಒಗ್ಗೂಡಿಸಿ ಸಂಸ್ಕೃತಿಗಳ ಉಗಮಕ್ಕೆ ಕಾರಣರಾದರು. ನಮ್ಮ ಪೂರ್ವ ಜರಲ್ಲಿ ಕೆಲವರು ಕಾರ್ಯ-ಕಾರಣಗಳ ಸಂಬಂಧವನ್ನು ಗಮನಿಸಿ, ಚಿಕಿತ್ಸೆಯನ್ನು ನೀಡುವ ಕಲೆಯನ್ನು ಕರಗತಗೊಳಿಸಿಕೊಂಡರು. ಮನುಷ್ಯನಿಗೆ ಬರುವ ಕಾಯಿಲೆಗಳು, ಅವುಗಳ ರೋಗ ಲಕ್ಷಣಗಳು ಹಾಗೂ ಅವು ತಗ್ಗಬಹುದಾದ ವಿವಿಧ ಚಿಕಿತ್ಸೆಗಳ ಬಗ್ಗೆ ಪ್ರಾಥಮಿಕ ಅರಿವನ್ನು ಪ್ರಯೋಗ ಮತ್ತು ತಪ್ಪುಗಳ (ಟ್ರಯಲ್ ಅಂಡ್ ಎರರ್) ಅನುಭವದಿಂದ ಗಳಿಸಿದರು. ಇಂತಹ ಅನುಭವವನ್ನು ಅಂದಿನ ಜಗತ್ತಿನ ಪ್ರಮುಖ ಸಂಸ್ಕೃತಿ ಗಳಾಗಿದ್ದ ಮೆಸಪೊಟೋಮಿಯನ್, ಈಜಿಪ್ಷಿಯನ್, ಗ್ರೀಕ್, ಭಾರತೀಯ ಮತ್ತು ಚೀನೀ ವೈದ್ಯಕೀಯ ಪದ್ಧತಿಗಳಲ್ಲಿ ನೋಡಬಹುದಾಗಿತ್ತು.

ಗ್ರೀಕರು ಮನುಷ್ಯನ ದೇಹದಲ್ಲಿ ರಕ್ತ, ಕಫ, ಕಪ್ಪು ಪಿತ್ತ ಹಾಗೂ ಹಳದಿ ಪಿತ್ತಗಳಿರುತ್ತವೆ ಎಂದರು. ಇವು ಸಮತೋಲನ ದಲ್ಲಿದ್ದಾಗ ಆರೋಗ್ಯ ವಿರುತ್ತದೆ; ಸಮತೋಲನವು ತಪ್ಪಿದಾಗ ಅನಾರೋಗ್ಯವುಂಟಾಗುತ್ತದೆ ಎಂಬ ತೀರ್ಮಾನಕ್ಕೆ ಬಂದರು. ಇದೇ ರೀತಿಯ ತ್ರಿದೋಷ ಸಿದ್ಧಾಂತ ವನ್ನು ಭಾರತೀಯ ವೈದ್ಯರು ಮಂಡಿಸಿದರು. ವ್ಯಕ್ತಿಗಳ ಪ್ರಕೃತಿಯನ್ನು ವಾತ, ಪಿತ್ತ, ಕಫಗಳೆಂದು ವರ್ಗೀಕರಿಸಬಹುದು. ಈ ದೋಷಗಳ ವೈಪರೀತ್ಯದಿಂದ ಕಾಯಿಲೆಗಳು ಬರುತ್ತವೆ; ದೋಷಗಳನ್ನು ಸರಿಪಡಿಸಿದಾಗ ಕಾಯಿಲೆಗಳು ಗುಣವಾಗುತ್ತವೆ ಎಂಬುದು ಈ ಸಿದ್ಧಾಂತದ ತಿರುಳು. ಇದೇ ರೀತಿಯಲ್ಲಿ ಚೀನೀ ಪದ್ಧತಿಯ ವೈದ್ಯರು ನಮ್ಮ ಶರೀರದಲ್ಲಿ ಯಿನ್ ಮತ್ತು ಯಾಂಗ್ ಎಂಬ ಪ್ರಾಕೃತಿಕ ಶಕ್ತಿಗಳಿರುತ್ತವೆ. ಅವು ಏರುಪೇರಾದಾಗ ಕಾಯಿಲೆಗಳು ಬರುತ್ತವೆ. ಅವುಗಳ ನಡುವೆ ಸಮತೋಲನವನ್ನು ಸಾಽಸುವುದೇ ಚಿಕಿತ್ಸೆಯ ಗುರಿ ಎಂದರು.

ನಮ್ಮ ಶರೀರದಲ್ಲಿರುವ ಅಽಕ ರಸಗಳನ್ನು ಹೊರಹರಿಸಿ, ಸಮತೋಲನೆಯನ್ನು ಸ್ಥಾಪಿಸಲು ವಿವಿಧ ವಿಧಾನಗಳನ್ನು ಗ್ರೀಕ್ ವೈದ್ಯರು ರೂಪಿಸಿದರು. ಅದಕ್ಕಾಗಿ ಶರೀರದ ಬೆವರು, ಜೊಲ್ಲು, ಕಫ, ಮೂತ್ರ, ಮಲ ಮತ್ತು ರಕ್ತಗಳನ್ನು ನಿಗದಿತ ಪ್ರಮಾಣದಲ್ಲಿ ಹೊರಹರಿಸುವುದರ ಮೂಲಕ ಸಮತೋಲನೆಯನ್ನು ಸ್ಥಾಪಿಸಿದರು. ಅಧಿಕ ಹಾಗೂ ಅಸಹಜ ರಸಗಳನ್ನು ವಿಸರ್ಜಿಸಲು ಕೃತಕ ವಿಧಾನಗಳನ್ನು ರೂಪಿಸಿದರು.ಮೊದಲನೆಯದು ರಕ್ತ ವಿಮೋಚನ ಅಥವ ಬ್ಲಡ್ ಲೆಟಿಂಗ್. ರಕ್ತನಾಳ ಛೇದನ, ಕಪ್ಪಿಂಗ್ ಹಾಗೂ ಜಿಗಣೆಗಳ ನೆರವಿನಿಂದ ದೋಷಯುಕ್ತ ರಕ್ತವನ್ನು ಹೊರಹರಿಸಿ ಸಮತೋಲನವನ್ನು ಕಾಪಾಡುತ್ತಿದ್ದರು. ಎರಡನೆಯದು ವಿರೇಚನ. ಇಲ್ಲಿ ವಿರೇಚಕಗಳನ್ನು ಪ್ರಯೋಗಿಸುತ್ತಿದ್ದರು. ಕಪ್ಪು ಪಿತ್ತವು ಅಽಕವಾಗಿದ್ದರೆ ಕೋಲೋಸಿಂಥ್ ಎಂಬ ಔಷಧಿಯನ್ನು, ಹಳದಿ ಪಿತ್ತವು ಅಧಿಕವಾಗಿದ್ದರೆ ಟಾರ್ಟರ್ ಎಮಿಟಿಕ್ ಎಂಬ ಔಷಧವನ್ನು ನೀಡುತ್ತಿದ್ದರು. ಭೇದಿಯಾಗುತ್ತಿತ್ತು.

ವಮನಕಾರಕವನ್ನು ನೀಡಿ ವಾಂತಿಯನ್ನು ಮಾಡಿಸಿ, ಜೊಲ್ಲು, ಕಫ ಮತ್ತು ಜಠರ ರಸಗಳ ಮೂಲಕ ಹೆಚ್ಚುವರಿ ರಸಗಳನ್ನು ಹೊರ ಹರಿಸುತ್ತಿದ್ದರು. ಸಾಮಾನ್ಯವಾಗಿ ವಾಂತಿಯನ್ನು ಮಾಡಿಸಲು ಇಪಿಕಾಕುನ ಎನ್ನುವ ಔಷಧವನ್ನು ನೀಡುತ್ತಿದ್ದರು. ಯಾವ ರಸವನ್ನು ಸಮತೋಲಿಸಬೇಕಾಗಿದೆಎನ್ನುವುದನ್ನು ಅನುಸರಿಸಿ ತಣ್ಣೀರಿನ ಸ್ನಾನ ಇಲ್ಲವೇ ಬಿಸಿನೀರಿನ ಸ್ನಾನವನ್ನು ಮಾಡಿಸುತ್ತಿದ್ದರು. ರಕ್ತ ಮತ್ತು ಕಫ ಅಧಿಕವಾಗಿದ್ದಾಗ ವಿಪರೀತ ವ್ಯಾಯಾಮವನ್ನು ಮಾಡಿಸಿ ಬೆವರನ್ನು ಹರಿಸುವುದರ ಮೂಲಕ ಸಮತೋಲನೆಯನ್ನು ಸ್ಥಾಪಿಸುತ್ತಿದ್ದರು. ಪಥ್ಯಾಹಾರವನ್ನು ವಿಧಿಸುತ್ತಿದ್ದರು ಹಾಗೂ ಕೆಲವು ಮೂಲಿಕೆಗಳನ್ನು ಔಷಧಗಳ ರೂಪದಲ್ಲಿ ನೀಡುತ್ತಿದ್ದರು.

ನಿದ್ರೆ ಮತ್ತು ದೈನಂದಿನ ಚಟುವಟಿಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿದ್ದರು. ಇದು ಗ್ರೀಕ್ ವೈದ್ಯಕೀಯ ಚಿಕಿತ್ಸಾ ಪದ್ಧತಿಯ ಸ್ಥೂಲವಿವರಣೆ. ಇಂತಹ ಚಿಕಿತ್ಸೆಯ ಪರಿಣಾಮವನ್ನು ತಿಳಿಯಲು ಅಮೆರಿಕದ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್ ಅವರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಡಿಸೆಂಬರ್ 14, 799. ವಾಷಿಂಗ್ಟನ್ ಸಾಯುವುದಕ್ಕೆ ಎರಡು ದಿನಗಳ ಮೊದಲು ಅವರಿಗೆ ಗಂಟಲು ನೋವು ಕಾಣಿಸಿಕೊಂಡಿತು. ಅವರು ಚಳಿಗಾಳಿಯನ್ನು ಓಡಾಡಿ ಥಂಡಿಯನ್ನು ಬರಿಸಿಕೊಂಡಿ ದ್ದರು. ಅವರ ಗಂಟಲುಪೆಟ್ಟಿಗೆ (ಲಾರಿಂಕ್ಸ್) ಹಾಗೂಊರ್ಧ್ವ ಜಿಹ್ವೆ (ಎಪಿಗ್ಲಾಟಿಸ್) ಬ್ಯಾಕ್ಟೀರಿಯ ಸೋಂಕಿಗೆ ಒಳಗಾಗಿ ಉರಿಯೂತಕ್ಕೆ ತುತ್ತಾಗಿತ್ತು.

ಇದನ್ನೂ ಓದಿ: Dr N Someshwara Column: ಎರಡು ಅಲಗಿನ ಖಡ್ಗ ಫೀನಾಲ್‌ !

ಜ್ವರ ಕೆಮ್ಮಿನ ಜೊತೆಯಲ್ಲಿ ಉಸಿರಾಟದ ತೊಂದರೆಯಿತ್ತು. ವಾಷಿಂಗ್ಟನ್ ಅವರಿಗೆ ಚಿಕಿತ್ಸೆಯನ್ನು ನೀಡಲು ಡಾ.ಜೇಮ್ಸ್ ಕ್ರೈಕ್, ಡಾ.ಗುಸ್ತಾವಸ್ರಿಚರ್ಡ್ ಬ್ರೌನ್ ಮತ್ತು ಡಾ.ಎಲೀಷಾ ಕುಲ್ಲೆನ್ ಡಿಕ್ ಬಂದರು. ಇವರೆಲ್ಲ ಸೇರಿಕೊಂಡು ವಾಷಿಂಗ್ಟನ್ ಅವರ ದೇದಿಂದ 80 ಔನ್ಸ್ 2365 ಎಂ.ಎಲ್ ರಕ್ತವನ್ನು, ಅಂದರೆ ಶರೀರದಲ್ಲಿದ್ದ ಒಟ್ಟು ರಕ್ತದಲ್ಲಿ ಶೇ.40ರಷ್ಟು ರಕ್ತವನ್ನು, ಅಂದರೆ ಎರಡೂಕಾಲು ಲೀಟರಿಗಿಂತಲೂ ಹೆಚ್ಚಿನ ರಕ್ತವನ್ನು ಹೊರ ಹರಿಸಿದರು. ರಸರೇಚಕ ಅಥವ ಕ್ಯಾಲೋಮೆಲ್ ಅಂದರೆ ಮರ್ಕ್ಯುರಸ್ ಕ್ಲೋರೈಡನ್ನು ನೀಡಿ ವಿರೇಚನ ಮಾಡಿಸಿದರು. ಕ್ಯಾಲೊಮೆಲ್ ಎನ್ನುವುದು ಉಗ್ರ ಸ್ವರೂಪದ ವಿರೇಚಕ. ಜೊತೆಗೆ ಟಾರ್ಟರ್ ಎಮಿಟಿಕ್ (ಆಂಟಿಮನಿ ಪೊಟಾಷಿಯಂ ಟಾರ್ಟ್ರೇಟ್) ಎಂಬ ವಮನಕಾರಕವನ್ನೂ ನೀಡಿದರು.

ಇವೆಲ್ಲವೂ ಸೇರಿ ವಾಷಿಂಗ್ಟನ್ ಅವರ ಗಂಟಲ ನೋವನ್ನು ಗುಣಪಡಿಸುವ ಬದಲು ಅವರನ್ನು ಸದ್ದಿಲ್ಲದಂತೆ ಬಲಿ ತೆಗೆದು ಕೊಂಡವು. ಈ ಪ್ರಕರಣವನ್ನು ಕೆಳಕಂಡಂತೆ ವಿಶ್ಲೇಷಿಸಬಹುದು. ಉಗ್ರಸ್ವರೂಪದ ಬ್ಯಾಕ್ಟೀರಿಯ ಸೋಂಕು ಆಗಿತ್ತು. ಶರೀರದಿಂದ 40% ರಕ್ತವು ಹೊರಹೋಗಿದ್ದ ಕಾರಣ, ಶರೀರಕ್ಕೆ ದೊರೆಯುತ್ತಿದ್ದ ಆಕ್ಸಿಜನ್ ಪ್ರಮಾಣ ಕಡಿಮೆ ಯಾಗಿತ್ತು. ಕ್ಯಾಲೋಮೆಲ್‌ನಲ್ಲಿದ್ದ ಪಾದರಸ ಹಾಗೂ ಟಾರ್ಟರ್ ಎಮಿಟಿಕ್‌ನಲ್ಲಿದ್ದ ಆಂಟಿಮನಿ ವಿಷವಸ್ತುಗಳು. ಇವು ಅನಿಯಂತ್ರಿತ ವಾಂತಿ ಮತ್ತು ಭೇದಿಗೆ ಕಾರಣವಾಗಿ ತೀವ್ರ ಸ್ವರೂಪದ ನೀರ್ಕಳೆತಕ್ಕೆ (ಡಿ-ಹೈಡ್ರೇಶನ್) ಎಡೆಮಾಡಿಕೊಟ್ಟವು. ಅನಿಯಂತ್ರಿತ ಸೋಂಕು ವಾಯುನಾಳದ ದ್ವಾರವನ್ನು ಕಿರಿದಾಗಿಸಿ, ಉಸಿರಾಟವನ್ನು ಮತ್ತಷ್ಟು ದುರ್ಬಲಗೊಳಿಸಿ, ಸಾವಿಗೆ ಕಾರಣವಾಯಿತು.

ಮರ್ಕ್ಯುರಿ ಕ್ಲೋರೈಡ್: ಕನ್ನಡದಲ್ಲಿ ರಸರೇಚಕ ಹಾಗೂ ಇಂಗ್ಲಿಷಿನಲ್ಲಿ ಕ್ಯಾಲೋಮೆಲ್ ಎಂದು ಹೆಸರಾದ ಮರ್ಕ್ಯುರಿ ಕ್ಲೋರೈಡ್ ಒಂದು ಖನಿಜ. ಅರಬ್ ವೈದ್ಯ ಮತ್ತು ದಾರ್ಶನಿಕ ಅಬು ಬಕರ್ ಅಲ್ ರಾಜ಼ಿ ಅಥವ ಅಲ್ ರಾಜೆಸ್ (864-925) ಇದನ್ನು ಮೊದಲ ಬಾರಿಗೆ ವಿವರಿಸಿದ. ರಸವಾದಿಗಳು ಅಥವಾ ಆಲ್ಕೆಮಿಸ್ಟ್ ಇದರ ಗುಣಾವಗುಣಗಳನ್ನು ಕುರಿತು ಅಧ್ಯಯನ ಮಾಡಿದರು. 1608ರಲ್ಲಿ ಆಸ್ವಾಲ್ಡ್ ಕ್ರಾಲ್ (1563-1609) ಇದನ್ನು ಯೂರೋಪಿಯನ್ ವೈದ್ಯರಿಗೆ ಪರಿಚಯವನ್ನು ಮಾಡಿದ. 1655ರಲ್ಲಿ ಥಿಯೋಡೋರ್ ಡಿ ಮೇಯಿನ್ (1563-1609) ಈ ರಾಸಾ ಯನಿಕಕ್ಕೆ ಕ್ಯಾಲೋಮೆಲ್ ಎಂದು ನಾಮಕರಣವನ್ನು ಮಾಡಿ, ಅದರ ರಾಸಾಯನಿಕ ಸಂಯೋಜನೆಯನ್ನು ಪ್ರಚುರಪಡಿಸಿದ. 1618ರ -ರ್ಮಕೋಪಿಯೇ ಲಂಡೆನ್ಸಿಸ್ - ಲಂಡನ್ನಿನಲ್ಲಿ ಅಧಿಕೃತವಾಗಿ ಮಾರಾಟದಲ್ಲಿರುವ ಔಷಧಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಡುವ ಪುಸ್ತಕದಲ್ಲಿ- ಕ್ಯಾಲೋಮೆಲ್ ಪ್ರವೇಶವನ್ನು ಪಡೆಯಿತು. 18-19ನೆಯ ಶತಮಾನದ ಯೂರೋಪಿನಲ್ಲಿ ಅಂದರೆ ವಿಕ್ಟೋರಿಯನ್ ಯುಗ ಹಾಗೂ ಅಮೆರಿಕನ್ ಸಿವಿಲ್ ವಾರ್ ಸಮಯದಲ್ಲಿ, ಸರ್ವ ರೋಗಗಳನ್ನು ಗುಣಪಡಿಸುವ ಸಂಜೀ ವಿನಿ ಎಂಬ ಅಭಿದಾನವು ಕ್ಯಾಲೊಮೆಲ್ಲಿಗೆ ದೊರೆಯಿತು.

ಸಿಫಿಲಿಸ್, ಬ್ರಾಂಕೈಟಿಸ್, ಕಾಲರ, ಉಗುರು ಒಳಬೆಳೆತ, ಕೀಲುವಾತಕಿ ಅಥವ ಗೌಟ್, ಕ್ಷಯ ಅಥವ ಟ್ಯುಬರ್ಕ್ಯುಲೋಸಿಸ್, ಇನ್ ಫ್ಲೂಯೆಂಜ಼, ಟೈಫಾಯ್ಡ್, ಮಂಪ್ಸ್, ಹಲ್ಲು ಮೊಳೆಯುವಿಕೆಗೆ ನೆರವಾಗುವ ಹಲ್ಲುಪುಡಿ, ಕ್ಯಾನ್ಸರ್ ಮುಂತಾದವನ್ನು ಗುಣಪಡಿಸುವ ಶಕ್ತಿಯು ಕ್ಯಾಲೋಮೆಲ್ಲಿಗೆಇದೆ ಎಂದು ಎಲ್ಲ ಕಡೆಗೆ ಪ್ರಖ್ಯಾತವಾಯಿತು. ಈ ಅವಧಿಯಲ್ಲಿ ಅಮೆರಿಕದ ವೈದ್ಯ ಮತ್ತು ರಾಜಕಾರಣಿ ಬೆಂಜ಼ಮಿನ್ ರಶ್ (1746-1745) ಭಂಡಪ್ರಮಾಣದಲ್ಲಿ (ಹೀರೋಯಿಕ್ ಡೋಸ್) ಕ್ಯಾಲೋಮೆಲ್ಲನ್ನು ನೀಡಲಾರಂಭಿಸಿದ. ಸುಮಾರು 20 ಗ್ರೇನ್ (1.3 ಗ್ರಾಮ್) ಕ್ಯಾಲೋಮೆಲ್ಲನ್ನು ದಿನಕ್ಕೆ ನಾಲ್ಕು ಬಾರಿ ಕೊಟ್ಟ. ರಶ್ ನೀಡುವ ಔಷಧ ಪ್ರಮಾಣವನ್ನು ಸ್ಯಾಮ್ಯುವಲ್ ಕಾರ್ಟ್ರೈಟ್ ಎಂಬ ಬ್ರಿಟಿಶ್ ದಂತವೈದ್ಯನು ಶಿಫಾರಸ್ಸು ಮಾಡಿದ. ಔಷಧದ ಪ್ರಮಾಣವು ಹೆಚ್ಚಿದಷ್ಟು ಅದು ದೇಹದ ಮೇಲೆ ಹೆಚ್ಚು ಸೌಮ್ಯ ಸ್ವರೂಪದಲ್ಲಿ ವರ್ತಿಸುತ್ತದೆ ಎಂಬ ಅವೈಜ್ಞಾನಿಕ ವಾದವನ್ನು ಮಂಡಿಸಿದ.

ಕ್ಯಾಲೋಮೆಲ್ ಎರಡು ರೂಪದಲ್ಲಿ ದೊರೆಯುತ್ತಿತ್ತು. ನೀಲಿ ಬಣ್ಣದ ಕ್ಯಾಪ್ಸೂಲ್ ಹಾಗೂ ನೀಲಿ ಬಣ್ಣದ ಮುದ್ದೆ. ನೀಲಿ ಬಣ್ಣದ ಕ್ಯಾಪ್ಸೂಲನ್ನು ಜ್ಯೇಷ್ಠಮಧು ಅಥವ ಸಕ್ಕರೆಯ ಜೊತೆಯಲ್ಲಿ ನುಂಗಲು ಕೊಡುತ್ತಿದ್ದರು. ವೈದ್ಯರು ಕ್ಯಾಲೋಮೆಲ್ ಮುದ್ದೆಯಿಂದ ಒಂದಷ್ಟು ಮುರಿದು ನುಂಗಲುನೀಡುತ್ತಿದ್ದರು. ಡೋಸ್ ಎನ್ನುವ ಪರಿಕಲ್ಪನೆಯೇ ಅವರಿಗೆ ಇರಲಿಲ್ಲ. ವೈದ್ಯರು ತಮ್ಮ ಮನಸ್ಸಿಗೆ ತೋಚಿದಷ್ಟು ಔಷಧ ವನ್ನು ನೀಡುತ್ತಿದ್ದರು.೧೮೨೫ರಲ್ಲಿ ಓರ್ವ ಅಜ್ಞಾತ ಕವಿಯು ಕ್ಯಾಲೋಮೆಲ್ ಹಿತಕಾರಿಯೆಂದು ಬಂದಿತು / ಸಾವಿರಾರು ಜನರಿಗೆ ಅನಾಹುತವ ತಂದಿತು / ಸದ್ದಿಲ್ಲದೆ ಕೊಂದಿತು ಅದೆಷ್ಟು ಜನರನ್ನು / ಔಷಧವಲ್ಲ, ತಿಳಿ ಪ್ರತ್ಯಕ್ಷ ವಿಷವೆಂಬುದನ್ನು ಎಂಬ ಕವನವನ್ನು ಬರೆದು ಪ್ರಕಟಿಸಿದ. ಮದರಾಸ್ ಮೆಡಿಕಲ್ ಸರ್ವೀಸಸ್‌ನಲ್ಲಿ ಸರ್ ಜೇಮ್ಸ್ ಆನೆಸ್ಲೆ ಎಂಬ ವೈದ್ಯನಿದ್ದ. ೧೯೨೬ರಲ್ಲಿ ಅವನು ಕ್ಯಾಲೋಮೆಲ್ಲನ್ನು ವಿವಿಧ ಪ್ರಮಾಣದಲ್ಲಿ ನಾಯಿಗಳ ಮೇಲೆ ಪ್ರಯೋಗಿಸಿದ.

ಕ್ಯಾಲೋಮೆಲ್ ವಿರೇಚಕವಾಗಿ ಮಾತ್ರ ಕೆಲಸವನ್ನು ಮಾಡುತ್ತದೆ; ಅದನ್ನು ಬಿಟ್ಟು ಉಳಿದ ಯಾವುದೇ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವು ಅದಕ್ಕಿಲ್ಲ ಎಂದು ಪ್ರಬಂಧ ವನ್ನು ಬರೆದು ಪ್ರಕಟಿಸಿದ. ಮಕ್ಕಳಿಗೆ ಹಲ್ಲು ಮೊಳೆಯುವುದು ತಡವಾದಾಗ ಕ್ಯಾಲೋಮೆಲ್ ಹಲ್ಲುಪುಡಿಯನ್ನು ನೀಡುವ ಪದ್ಧತಿಯಿತ್ತು. 1853ರಲ್ಲಿ ಸ್ಯಾಮ್ಯುವಲ್ ಜಾಕ್ಸನ್, ಮಕ್ಕಳ ಮೇಲೆ ಕ್ಯಾಲೋಮೆಲ್ ಬೀರುವ ದುಷ್ಪರಿಣಾಮವನ್ನುಕುರಿತು ಸಂಶೋಧನೆಯನ್ನು ಮಾಡಿದ. ಕ್ಯಾಲೋಮೆಲ್ ಮಕ್ಕಳ ಚರ್ಮದಲ್ಲಿ ಗ್ಯಾಂಗ್ರಿನ್ ಉಂಟು ಮಾಡುತ್ತದೆ; ವಸಡುಗಳನ್ನು ಸಡಿಲ ಗೊಳಿಸುತ್ತದೆ. ಬುಡ ಭದ್ರವಿಲ್ಲದ ಹಲ್ಲುಗಳು ಉದುರಿಹೋಗುತ್ತವೆ ಎಂಬ ವಿಚಾರವನ್ನು ಪ್ರಚುರಪಡಿಸಿದ. 1863ರಲ್ಲಿ ವಿಲಿಯಂ ಅಲೆಗ್ಸಾಂಡರ್ ಹ್ಯಾಮಂಡ್ (1828-1900) ಎಂಬ ಅಮೆರಿಕದ ಸರ್ಜನ್ ಜನರಲ್ ಹಾಗೂ ನರವಿಜ್ಞಾನಿಯು ಸೈನ್ಯದಲ್ಲಿ ಕ್ಯಾಲೋ ಮೆಲ್ಲನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ.

ಬೆಂಜ಼ಮಿನ್ ರಶ್ ನೀಡುತ್ತಿದ್ದ ಭಂಡ ಪ್ರಮಾಣದ ಔಷಧವು ಅಪಾರ ಸಾವು ನೋವಿಗೆ ಎಡೆ ಮಾಡಿಕೊಡುತ್ತಿತ್ತು. ಕ್ಯಾಲೋ ಮೆಲ್‌ನಲ್ಲಿರುವ ಮರ್ಕ್ಯುರಿ ಅಥವ ಪಾದರಸವು ಮಹಾನ್ ವಿಷವಾಗಿತ್ತು. ಇದು ಹಲ್ಲನ್ನು ಉದುರಿಸಿ, ವಸಡನ್ನು ಕರಗಿಸಿ, ದವಡೆಯಲ್ಲಿ ಗ್ಯಾಂಗ್ರಿನ್ ಉಂಟುಮಾಡಿ ಇಡೀ ಮೇಲ್ದವಡೆಯನ್ನೇ ನಾಶ ಮಾಡುತ್ತಿತ್ತು. ವಾಂತಿ, ಹೊಟ್ಟೆನೋವು, ರಕ್ತಭೇದಿ ಯನ್ನುಂಟು ಮಾಡುತ್ತಿತ್ತು. ಭಂಡ ಪ್ರಮಾಣದ ಔಷಧವು ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುತ್ತಿತ್ತು. 20ನೆಯ ಶತಮಾನದ ಆರಂಭದಲ್ಲಿ ಪಾದರಸ ವಿಷ ಲಕ್ಷಣಗಳೆಲ್ಲ ಸ್ಪಷ್ಟವಾದ ಮೇಲೆ,ಕ್ಯಾಲೋಮೆಲ್ಲನ್ನು ಯಾವುದೇ ರೂಪದ ಔಷಧದಲ್ಲಿ ಬಳಸುವುದನ್ನು ವೈದ್ಯ ವಿಜ್ಞಾನವು ನಿಷೇಧಿಸಿತು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?