Dr Vijay Darda Column: ಆಸ್ಪತ್ರೆಗಳಿಗೆ ನುಸುಳಿದ ಸಾವಿನ ವ್ಯಾಪಾರಿಗಳು
ಮಹಾರಾಷ್ಟ್ರದ ಕೆಲ ಸರಕಾರಿ ಆಸ್ಪತೆಗಳಲ್ಲಿ ನಕಲಿ ಔಷಧಗಳನ್ನು ಖರೀದಿಸಿರು ವುದು ಬೆಳಕಿಗೆ ಬಂದಿದೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸರಕಾರಿ ಆಸ್ಪತ್ರೆಗಳು ನಕಲಿ ಔಷಧ ಗಳನ್ನು ಖರೀದಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಮೂಡುತ್ತದೆ. ಇದೊಂ ದು ಕರಾಳ ದಂಧೆ. ಈ ದಂಧೆಯಲ್ಲಿ ಪ್ರಭಾವಿ ಗಳು ಶಾಮೀಲಾಗಿದ್ದಾರೆ!

ಅಂಕಣಕಾರ ಡಾ.ವಿಜಯ್ ದರಡಾ

ನಕಲಿ ಔಷಧಗಳು ಅನಾದಿ ಕಾಲದಿಂದ ನಮ್ಮ ನಡುವೆ ಇವೆ. ಆದರೆ ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲೂ ಅವು ಪತ್ತೆಯಾಗದೆ ಹೋಗುತ್ತಿವೆ ಎಂಬುದು ಅಚ್ಚರಿಯ ವಿಷಯ. ಅದಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಸರಕಾರಿ ಆಸ್ಪತ್ರೆ ಗಳೇ ಅವುಗಳನ್ನು ಖರೀದಿಸುತ್ತಿವೆ. ಇದರರ್ಥ ಇಷ್ಟೆ. ಇದೊಂದು ಕರಾಳ ದಂಧೆ. ಈ ದಂಧೆಯಲ್ಲಿ ಪ್ರಭಾವಿಗಳು ಶಾಮೀಲಾ ಗಿದ್ದಾರೆ! ನಕಲಿ ಔಷಧಗಳನ್ನು ಮಾರಾಟ ಮಾಡು ವ ಸಾವಿನ ವ್ಯಾಪಾರಿಗಳು ಸರಕಾರಿ ಆಸ್ಪತ್ರೆಗಳ ಒಳಗೆ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ ಅಂತಾದರೆ ಇದು ತುಂಬಾ ಗಂಭೀರವಾದ ವಿಚಾರ.
ಈ ಕರಾಳ ಸತ್ಯ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಇದನ್ನು ಮುಚ್ಚಿಡದೆ ಎಲ್ಲರೆದುರು ತೆರೆದಿಟ್ಟ ಮತ್ತು ರಾಜ್ಯದ ವಿಧಾನಸಭೆಯಲ್ಲಿ ಈ ವಿಷಯವನ್ನು ಒಪ್ಪಿಕೊಂಡ ವೈದ್ಯ ಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿ- ಅವರನ್ನು ಖಂಡಿತ ಅಭಿನಂದಿಸಬೇಕು. ಶಾಸಕ ಮೋಹನ್ ಮಾತೆ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ನಕಲಿ ಔಷಧ ಗಳನ್ನು ಕೆಲ ಸರಕಾರಿ ಆಸ್ಪತ್ರೆಗಳು ಖರೀದಿಸಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Dr Vijay Darda Column: ಅನಂತ್ ಅಂಬಾನಿ ಮತ್ತು ಒಂದು ಗಿಳಿಯ ಕತೆ
ಸಹಜವಾಗಿಯೇ ಈ ಉತ್ತರವನ್ನು ನೋಡಿದರೆ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸ ಬೇಕಾದ ಸರಕಾರಿ ಆಸ್ಪತ್ರೆಗಳು ನಕಲಿ ಔಷಧಗಳನ್ನು ಖರೀದಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಮೂಡುತ್ತದೆ. ಸರಕಾರದ ನಿಯಂತ್ರಣ ವ್ಯವಸ್ಥೆಯಲ್ಲಿ, ನೀತಿ ನಿಯಮಗಳಿಗೆ ಅನುಗುಣವಾಗಿ ಸರಕಾರಿ ಆಸ್ಪತ್ರೆಗಳು ಕೆಲಸ ಮಾಡುತ್ತವೆ.
ಅವು ಔಷಧಗಳನ್ನು ಖರೀದಿಸುವುದಕ್ಕೆ ನಿರ್ದಿಷ್ಟ ಪದ್ಧತಿ ಮತ್ತು ಕ್ರಮಗಳಿವೆ. ಔಷಧಗಳು ಅಸಲಿ ಹೌದೋ ಅಲ್ಲವೋ ಎಂಬುದನ್ನು ನೋಡಿಕೊಂಡೇ ಅವು ಖರೀದಿಸಬೇಕಾಗುತ್ತದೆ. ನಕಲಿ ಅಥವಾ ಕಳಪೆ ಔಷಧಗಳನ್ನು ಪತ್ತೆಹಚ್ಚುವುದು ಅಷ್ಟೇನೂ ಕಷ್ಟವಲ್ಲ.
ಅದರಲ್ಲೂ, ಇಡೀ ಜಗತ್ತಿನಲ್ಲಿ ಇಂದು ನಕಲಿ ಔಷಧಗಳ ಮಾರುಕಟ್ಟೆ ವಿಸ್ತರಿಸುತ್ತಿರುವು ದರಿಂದ ಅವುಗಳನ್ನು ಪತ್ತೆಹಚ್ಚುವುದಕ್ಕೆ ಸಾಕಷ್ಟು ವಿಚಕ್ಷಣ ವ್ಯವಸ್ಥೆಗಳೂ ರೂಪು ಗೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಜಗತ್ತಿನಲ್ಲಿ ನಕಲಿ ಔಷಧಗಳ ಮಾರುಕಟ್ಟೆಯಲ್ಲಿ ವರ್ಷಕ್ಕೆ 200 ಬಿಲಿಯನ್ ಡಾಲರ್, ಅಂದರೆ ಸುಮಾರು 17 ಲಕ್ಷ ಕೋಟಿ ರೂ.ನಷ್ಟು ವಹಿವಾಟು ನಡೆಯುತ್ತದೆ.
ಭಾರತದಲ್ಲಿ ನಕಲಿ ಔಷಧಗಳ ಮಾರುಕಟ್ಟೆಯ ಗಾತ್ರ ಎಷ್ಟು ಎಂಬುದನ್ನು ಅಂದಾ ಜಿಸುವುದು ಕಷ್ಟ. ಏಕೆಂದರೆ, ಈ ನಕಲಿ ಔಷಧಗಳನ್ನು ಎಲ್ಲಿ ಉತ್ಪಾದಿಸುತ್ತಾರೆ ಮತ್ತು ಎಲ್ಲಿ ಮಾರಾಟ ಮಾಡುತ್ತಾರೆ ಎಂಬ ಬಗ್ಗೆ ನಿಖರ ದತ್ತಾಂಶಗಳು ಇಲ್ಲ. ಆದರೂ, ಈಗ ಬೆಳಕಿಗೆ ಬಂದಿರುವ ಪ್ರಕರಣಗಳು ಆತಂಕಕಾರಿಯಾಗಿದ್ದು, ಎಲ್ಲರೂ ಬೆಚ್ಚಿಬೀಳುವಂತಹ ವಾಸ್ತವವನ್ನು ನಮ್ಮೆದುರು ತೆರೆದಿಟ್ಟಿವೆ.
ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ಅಸೋಚಾಮ್) ಈ ಬಗ್ಗೆ ಅಧ್ಯಯನ ನಡೆಸಿ ಈಗಾಗಲೇ ಸರಕಾರ ಕ್ಕೆ ಎಚ್ಚರಿಕೆಯನ್ನೂ ನೀಡಿದೆ. ಜಗತ್ತಿನಲ್ಲಿ ಭಾರತವು ನಕಲಿ ಔಷಧಗಳ ಉತ್ಪಾದನೆಯ ಹಬ್ ಆಗುತ್ತಿದೆ ಎಂದು ಅಸೋಚಾಮ್ ಹೇಳಿದೆ.
ಕಳೆದ ವರ್ಷ ದೆಹಲಿ ಪೊಲೀಸರು ದೆಹಲಿ ಮತ್ತು ಎನ್‌ಸಿಆರ್ ವಲಯದಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದ ದೊಡ್ಡ ನಕಲಿ ಔಷಧಗಳ ಸಿಂಡಿಕೇಟನ್ನು ಪತ್ತೆಹಚ್ಚಿದ್ದರು. ಗಾಜಿ ಯಾಬಾದ್ ನಲ್ಲಿ ನಕಲಿ ಔಷಧಗಳನ್ನು ದಾಸ್ತಾನು ಮಾಡಿದ್ದ ದೊಡ್ಡ ಉಗ್ರಾಣವೇ ಪತ್ತೆ ಯಾಗಿತ್ತು. ತನಿಖೆ ನಡೆಸಿದಾಗ ಆ ನಕಲಿ ಔಷಧಗಳು ಸೋನಿಪತ್‌ನಲ್ಲಿರುವ ಕಾರ್ಖಾ ನೆಯಲ್ಲಿ ತಯಾರಾಗುತ್ತಿವೆ ಎಂಬುದು ತಿಳಿದುಬಂದಿತ್ತು.
ಆಘಾತಕಾರಿ ಸಂಗತಿಯೆಂದರೆ, ಭಾರತೀಯ ಬ್ರ್ಯಾಂಡ್‌ನ ಔಷಧಗಳು ಮಾತ್ರವಲ್ಲ, ಅಮೆರಿಕ, ಬ್ರಿಟನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ತಯಾರಾಗಿ ಭಾರತಕ್ಕೆ ಬರುವ 20ಕ್ಕೂ ಹೆಚ್ಚು ಪ್ರಮುಖ ಔಷಧಗಳನ್ನೂ ಈ ದಂಧೆಕೋರರು ನಕಲು ಮಾಡಿದ್ದರು. ದುರದೃಷ್ಟವಶಾತ್ ಈ ದಂಧೆಯ ಸೂತ್ರಧಾರಿ ಒಬ್ಬ ಡಾಕ್ಟರ್ ಆಗಿದ್ದ !
ಕಳೆದ ವರ್ಷ ತೆಲಂಗಾಣದಲ್ಲಿ ನಕಲಿ ಔಷಧಗಳ ದಂಧೆ ಪತ್ತೆಯಾಗಿತ್ತು. ಔಷಧ ನಿಯಂ ತ್ರಣ ಪ್ರಾಧಿಕಾರದವರು ಆಳವಾದ ತನಿಖೆ ನಡೆಸಿದರು. ಆಗ ಅಲ್ಲಿಗೆ ಬರುತ್ತಿದ್ದ ನಕಲಿ ಔಷಧಗಳನ್ನು ಉತ್ತರಾಖಂಡದಲ್ಲಿ ಉತ್ಪಾದಿಸುತ್ತಿದ್ದುದು ತಿಳಿಯಿತು. ಕಳೆದ ವರ್ಷವೇ ಉತ್ತರ ಪ್ರದೇಶದಲ್ಲಿ 80 ಕೋಟಿ ರೂ. ಮೌಲ್ಯದ ನಕಲಿ ಔಷಧಗಳನ್ನು ಜಪ್ತಿ ಮಾಡ ಲಾಗಿತ್ತು.
ಅದೇ ರೀತಿ, ಪಶ್ಚಿಮ ಬಂಗಾಳದಲ್ಲೂ ರಾಶಿ ರಾಶಿ ನಕಲಿ ಔಷಧಗಳು ಪತ್ತೆಯಾಗಿದ್ದವು. ಈ ಎಲ್ಲಾ ಪ್ರಕರಣಗಳಲ್ಲೂ ನಕಲಿ ಔಷಧಗಳನ್ನು ಎಷ್ಟು ಚೆನ್ನಾಗಿ ಪ್ಯಾಕಿಂಗ್ ಮಾಡಲಾ ಗಿತ್ತು ಅಂದರೆ, ಅವುಗಳನ್ನು ನೋಡಿದರೆ ಅಸಲಿ ಔಷಧಿಗೂ ನಕಲಿಗೂ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ.
ಆದರೆ ಕ್ಯಾಪ್ಸೂಲ್‌ನ ಒಳಗೆ ಔಷಧದ ಬದಲು ಚಾಕ್‌ಪೀಸ್‌ನ ಪುಡಿ ಅಥವಾ ಹಿಟ್ಟು ತುಂಬಿ ರುತ್ತಿದ್ದರು. ಒಂದು ಸಮೀಕ್ಷೆಯ ಪ್ರಕಾರ ಶೇ.60ರಷ್ಟು ನಕಲಿ ಔಷಧಗಳಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಹಾಗಂತ ಅವುಗಳಿಂದ ರೋಗವೂ ಗುಣವಾಗುವು ದಿಲ್ಲ. ಅವುಗಳನ್ನು ಸೇವಿಸುವುದೇ ವ್ಯರ್ಥ.
ಆದರೆ, ಇನ್ನುಳಿದ ಶೇ.40ರಷ್ಟು ನೌಕಲಿ ಔಷಧಗಳು ರೋಗಿಯ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡುತ್ತವೆ. ಅಪಾಯಕಾರಿಯಲ್ಲದ ನಕಲಿ ಔಷಧಗಳ ಬಗ್ಗೆ ವ್ಯಾಪಕ ಅಧ್ಯಯನ ನಡೆದಿಲ್ಲ ಎಂಬುದು ಬೇರೆ ವಿಚಾರ. ಆದರೆ, ಉಲ್ಬಣ ಗೊಳ್ಳುವಂತಹ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಅಪಾಯಕಾರಿಯಲ್ಲದ ನಕಲಿ ಔಷಧ ಸೇವಿಸುತ್ತಾ ತನಗೆ ರೋಗ ಗುಣವಾಗುತ್ತದೆ ಎಂದು ಕಾಲ ಹರಣ ಮಾಡು ತ್ತಿದ್ದರೆ ಅವನಿಗೆ ಗೊತ್ತೇ ಇಲ್ಲದೆ ಸಾವಿನ ಕೂಪದತ್ತ ಸಾಗಬಹುದು. ಅವನು ಸೇವಿಸಿದ ನಕಲಿ ಔಷಧ ಅಪಾಯಕಾರಿ ಅಲ್ಲದಿರಬಹುದು, ಆದರೆ ಅದರಿಂದ ಪ್ರಯೋಜನವಾಗದೆ ಅವನು ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಯಾರು ಹೊಣೆ? ಮಾರಣಾಂತಿಕ ರೋಗಗಳ ಚಿಕಿತ್ಸೆಗೆ ಬಳಸುವ ನಕಲಿ ಔಷಧಗಳು ಕೂಡ ಸಾಕಷ್ಟು ಪತ್ತೆಯಾಗಿವೆ.
ನಕಲಿ ಔಷಧ ತಯಾರಕರು 5000 ರೂ. ನೀಡಿ ಕ್ಯಾನ್ಸರ್ ಔಷಧಿಯ ಖಾಲಿ ವಯಲ್‌ಗಳನ್ನು ಖರೀದಿಸಿ, ಅದರೊಳಗೆ 100 ರೂಪಾಯಿಯ ಆಂಟಿ ಫಂಗಲ್ ಔಷಧ ತುಂಬಿ, 1 ಲಕ್ಷ ರೂ. ನಿಂದ 3 ಲಕ್ಷ ರೂ.ಗೆ ಮಾರಾಟ ಮಾಡುತ್ತಿರುವುದು ಕೂಡ ಪತ್ತೆಯಾಗಿದೆ.
ಇದೇ ಸಾವಿನ ವ್ಯಾಪಾರಿಗಳು ಕೋವಿಡ್-19 ಮಹಾಮಾರಿಯ ಸಮಯದಲ್ಲಿ ನಕಲಿ ರೆಮ್ ಡೆಸಿವಿರ್ ಇಂಜೆಕ್ಷನ್‌ಗಳನ್ನು ಕೂಡ ಮಾರಾಟ ಮಾಡಿ ದುಡ್ಡು ಬಾಚಿಕೊಂಡಿದ್ದರು. ಇಂತಹ ಘಟನೆಗಳೆಲ್ಲ ಪತ್ರಿಕೆ, ಟೀವಿ ಚಾನಲ್‌ಗಳಲ್ಲಿ ವರದಿಯಾಗಿವೆ. ಇವುಗಳಿಗೆ ಸಾಕಷ್ಟು ಪ್ರಚಾರವೂ ಸಿಕ್ಕಿದೆ. ಹೀಗಾಗಿ ಜನರಿಗೆ ನಕಲಿ ಔಷಧಗಳು ಮಾರುಕಟ್ಟೆಯಲ್ಲಿ ಹರಿದಾಡು ತ್ತಿರುವುದು ಚೆನ್ನಾಗಿಯೇ ಗೊತ್ತಿದೆ. ಆದರೂ ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಗಳು ನಕಲಿ ಔಷಧಗಳನ್ನು ಖರೀದಿ ಮಾಡಿವೆ ಅಂತಾದರೆ ಅದು ಕೇವಲ ಕಣ್ತಪ್ಪಿನಿಂದ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿರುವ ತಪ್ಪು ಖಂಡಿತ ಅಲ್ಲ.
ಅದು ಉದ್ದೇಶಪೂರ್ವಕ ಕೃತ್ಯವಾಗಿರುವ ಸಾಧ್ಯತೆಯೇ ಹೆಚ್ಚು. ಅಂತಹವರನ್ನು ಶಿಕ್ಷಿಸಲೇ ಬೇಕು. ಇದು ಜನರ ಸಾವು ಮತ್ತು ಬದುಕಿನ ಪ್ರಶ್ನೆ. ಈ ಬಗ್ಗೆ ವಿಸ್ತೃತ ತನಿಖೆ ನಡೆದು, ತಪ್ಪಿತಸ್ಥರ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಿ, ಅದಕ್ಕೆ ತಕ್ಕ ಜೈಲುಶಿಕ್ಷೆ ವಿಧಿಸು ವಂತಾಗಬೇಕು.
ಸದ್ಯ ನಕಲಿ ಔಷಧ ಸೇವಿಸಿ ರೋಗಿಯೊಬ್ಬ ಮೃತಪಟ್ಟರೆ ಅದಕ್ಕೆ ಕಾರಣರಾದವರಿಗೆ ಜೀವಾ ವಧಿಯವರೆಗೆ ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ನಕಲಿ ಔಷಧ ತಯಾರಿಕೆ ಮತ್ತು ಮಾರಾಟದ ಪ್ರಕರಣಗಳನ್ನು ಕೋರ್ಟ್ ನಲ್ಲಿ ಸಾಬೀತುಪಡಿಸುವುದೇ ಬಹಳ ಕಷ್ಟ.
ಅದಕ್ಕಿಂತ ಹೆಚ್ಚಾಗಿ, ಸದ್ಯ ನಕಲಿ ಔಷಧ ತಯಾರಕರಿಗೆ ಕೇವಲ ಐದು ವರ್ಷಗಳವರೆಗೆ ಮಾತ್ರ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ. ಎಲ್ಲಿಯವರೆಗೆ ಕಠಿಣ ಶಿಕ್ಷೆ ವಿಧಿಸುವ ವ್ಯವಸ್ಥೆ ಬರುವುದಿಲ್ಲವೋ ಅಲ್ಲಿಯವರೆಗೆ ಈ ಕರಾಳ ದಂಧೆ ನಿಲ್ಲುವುದಿಲ್ಲ. ಔಷಧಗಳನ್ನು ನಕಲಿ ಮಾಡುವವರ ಬಗ್ಗೆ ವ್ಯವಸ್ಥೆಗೆ ಶೂನ್ಯ ಸಹಿಷ್ಣುತೆ ಬರಬೇಕು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೂಕ್ಷ್ಮ ವ್ಯಕ್ತಿತ್ವದ ನಾಯಕ. ಅವರು ಈಗಾಗಲೇ ಈ ವಿಷಯದಲ್ಲಿ ವ್ಯವಸ್ಥೆಯನ್ನು ಬಿಗಿಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆಗಳು ನಕಲಿ ಔಷಧ ಖರೀದಿಸಿದ ಪ್ರಕರಣದಲ್ಲಿ ವಿಸ್ತೃತವಾದ ತನಿಖೆ ನಡೆಯಲಿದೆ ಎಂಬ ಭರವಸೆ ನನಗಿದೆ. ಈ ವಿಷಯವನ್ನು ಅವರು ಕೇಂದ್ರ ಸರಕಾರದ ಮುಂದೆಯೂ ತರಲು ಹೊರಟಿದ್ದಾರೆ. ಅಲ್ಲದೆ ಈ ಸಾವಿನ ವ್ಯಾಪಾರಿಗಳ ಬಗ್ಗೆ ಎಲ್ಲಾ ರಾಜ್ಯಗಳ ಔಷಧ ಮಂಡಳಿಗೂ ಮಾಹಿತಿ ನೀಡುತ್ತೇನೆಂದು ಹೇಳಿದ್ದಾರೆ.
ಅದೇ ವೇಳೆ, ಏಕೆ ಸರಕಾರಿ ಆಸ್ಪತ್ರೆಗಳಲ್ಲಿ ಪದೇಪದೇ ತುರ್ತು ಔಷಧಗಳೇ ಅಲಭ್ಯವಾಗು ತ್ತವೆ ಎಂಬ ಪ್ರಶ್ನೆಯನ್ನೂ ನಾವು ಕೇಳಬೇಕಿದೆ. ಒಮ್ಮೆ ಒಬ್ಬ ಕ್ಯಾನ್ಸರ್ ರೋಗಿ ನನ್ನಲ್ಲಿಗೆ ಬಂದಿದ್ದ. ಏಮ್ಸ್‌ನ ವೈದ್ಯರೊಬ್ಬರು ಅವರಿಗೆ 1.25 ಲಕ್ಷ ರೂ. ಮೌಲ್ಯದ ಇಂಜೆಕ್ಷನ್ ತೆಗೆದುಕೊಳ್ಳಲು ಶಿಫಾರಸು ಮಾಡಿದ್ದರು.
ಒಂದಲ್ಲ, ಹಲವು ಇಂಜೆಕ್ಷನ್‌ಗಳನ್ನು ಅವರು ತೆಗೆದುಕೊಳ್ಳಬೇಕಿತ್ತು. ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಇಷ್ಟು ದುಬಾರಿ ಚಿಕಿತ್ಸೆಯನ್ನು ಸ್ವಂತ ಹಣದಲ್ಲಿ ಹೇಗೆ ತೆಗೆದುಕೊಳ್ಳಲು ಸಾಧ್ಯ? ಭಾರತದಲ್ಲಿ ದುಬಾರಿ ಆರೋಗ್ಯ ಸೇವೆ ಎಂಬುದು ಅತ್ಯಂತ ಗಂಭೀರವಾದ ಸಮಸ್ಯೆ. ಈ ವ್ಯವಸ್ಥೆಯನ್ನು ಬದಲಿಸುವ ಬಗ್ಗೆ ಸರ್ಕಾರ ಗಮನ ಹರಿಸಲೇಬೇಕಿದೆ.
ಸದ್ಯದ ಮಟ್ಟಿಗೆ ಎಲ್ಲರೂ ಎಚ್ಚರವಾಗಿರಿ. ನೀವು ಸೇವಿಸುವ ಔಷಧ ನಕಲಿಯಲ್ಲ ಎಂಬು ದನ್ನು ಹೇಗಾದರೂ ಖಾತ್ರಿಪಡಿಸಿಕೊಳ್ಳಿ! ಫಾರ್ಮಾ ಕಂಪನಿಗಳು ಈಗಾಗಲೇ ಔಷಧಗಳ ಪ್ಯಾಕೇಜ್ ಮೇಲೆ ಬಾರ್‌ಕೋಡ್ ಮುದ್ರಿಸುವುದನ್ನು ಆರಂಭಿಸಿವೆ. ಯಾವುದೇ ಔಷಧ ವನ್ನು ಖರೀದಿಸಿದ ಮೇಲೆ ಆ ಬಾರ್‌ಕೋಡ್ ಸ್ಕ್ಯಾನ್ ಮಾಡಿ ನೋಡಿ. ನಕಲಿ ಔಷಧಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಅದು ನೆರವಾಗಬಹುದು.
ಆದರೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ನಕಲಿಯ ಹಾವಳಿ ಇರುವುದು ಕೇವಲ ಔಷಧ ಗಳಿಗೆ ಮಾತ್ರವೆ? ನಕಲಿ ಅಕ್ಕಿ, ನಕಲಿ ಬೇಳೆ, ನಕಲಿ ಖೋಯಾ, ನಕಲಿ ಪನೀರ್, ನಕಲಿ ತುಪ್ಪ... ಹೀಗೆ ಎಲ್ಲವೂ ಇಂದು ನಕಲಿ ನಕಲಿ ನಕಲಿ! ಮುಗ್ಧ ಜನರು ಏನು ಮಾಡ ಬೇಕೆಂಬುದನ್ನು ಸರಕಾರವೇ ಹೇಳಬೇಕು.
(ಲೇಖಕರು: ಹಿರಿಯ ಪತ್ರಿಕೋದ್ಯಮಿ)