ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Dr Vijay Darda Column: ಅನಂತ್‌ ಅಂಬಾನಿ ಮತ್ತು ಒಂದು ಗಿಳಿಯ ಕತೆ

ನಾವಿಬ್ಬರೂ ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು. ಅವರ ಮಾತುಗಳು ನನ್ನ ಮೇಲೆ ಎಷ್ಟು ಪ್ರಭಾವ ಬೀರಿದವು ಅಂದರೆ, ನಾನು ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಅನಂತ್ ಅಂಬಾನಿ ಬಹಳ ದೊಡ್ಡ ಉದ್ಯಮ ಸಾಮ್ರಾಜ್ಯದ ಕುಡಿ. ಅವರ ತಾತ ಧೀರೂಭಾಯಿ ಅಂಬಾನಿ. ತಂದೆ ಮುಕೇಶ್ ಅಂಬಾನಿ, ತಾಯಿ ಸಮಾಜ ಸೇವಕಿ ನೀತಾ ಅಂಬಾನಿ

ಅನಂತ್‌ ಅಂಬಾನಿ ಮತ್ತು ಒಂದು ಗಿಳಿಯ ಕತೆ

ಹಿರಿಯ ಪತ್ರಕರ್ತ, ಅಂಕಣಕಾರ ಡಾ.ವಿಜಯ್‌ ದರಡಾ

Profile Ashok Nayak Feb 27, 2025 6:32 AM

ಆಗರ್ಭ ಶ್ರೀಮಂತನಾದರೂ ಅನಂತ್ ಅಂಬಾನಿ ಒಬ್ಬ ಅದ್ಭುತ ಮಾನವೀಯ ಗುಣಗಳ ವ್ಯಕ್ತಿ. ಶರವೇಗದಲ್ಲಿ ಓಡುವ ಈ ಕಾಲದಲ್ಲಿ ಅವರ ದೂರದೃಷ್ಟಿ ಕೂಡ ಬಹಳ ಹರಿತ ವಾಗಿದೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗ ನಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ

ನನ್ನ ಬದುಕು ಮತ್ತು ವೃತ್ತಿಜೀವನ ಅಸಂಖ್ಯಾತ ಜನರನ್ನು ನನ್ನ ಸಂಪರ್ಕಕ್ಕೆ ತರುತ್ತದೆ. ಅವರಲ್ಲಿ ಕೆಲವರು ನನ್ನ ಮೇಲೆ ತುಂಬಾ ಪ್ರಭಾವ ಬೀರುವ ವ್ಯಕ್ತಿಗಳಾಗಿರುತ್ತಾರೆ. ಆದರೆ, ‘ಈ ಜಗತ್ತು ಎಷ್ಟೊಂದು ಸುಂದರವಾಗಿದೆಯಲ್ಲ’ ಎಂದು ಅಚ್ಚರಿ ಪಡುವಂತೆ ಮಾಡುವ ವ್ಯಕ್ತಿಗಳು ಭೇಟಿಯಾಗುವುದು ತುಂಬಾ ಅಂದರೆ ತುಂಬಾ ಅಪರೂಪ. ವೇಗವಾಗಿ ಓಡುವ ಇಂದಿನ ಮಟೀರಿಯಲ್ ಯುಗದಲ್ಲಿ ಸರಳಾತಿಸರಳ ವ್ಯಕ್ತಿತ್ವದ, ಬದುಕಿನ ಬಗ್ಗೆ ಅತ್ಯಂತ ಸ್ಪಷ್ಟತೆಯುಳ್ಳ, ಗುರಿಯಲ್ಲಿ ಬದ್ಧತೆಯುಳ್ಳ ಹಾಗೂ ಸಮಸ್ತ ಚರಾಚರ ಜೀವಗಳ ಬಗ್ಗೆಯೂ ಅಪಾರ ಕರುಣೆಯನ್ನು ಹೊಂದಿರುವ ವ್ಯಕ್ತಿಗಳು ನಮಗೇನಾದರೂ ಸಿಕ್ಕರೆ ಅದು ಅದ್ಭುತವೇ ಸರಿ.

ಇದನ್ನೂ ಓದಿ: Dr Vijay Darda Column: ಅಕ್ರಮ ವಲಸಿಗರು ದೇಶ ಬಿಟ್ಟ ತೊಲಗಲೇಬೇಕು

ನನ್ನ ಪ್ರಕಾರ ಅನಂತ್ ಅಂಬಾನಿ ಅಂತಹ ಒಬ್ಬ ವ್ಯಕ್ತಿ. ಜಿಯೋ ಪ್ಲಾಟ್-ರ್ಮ್ಸ್ ಲಿಟೆಡ್‌ನ ನಿರ್ದೇಶಕ ಹಾಗೂ ರಿಲಯನ್ಸ್ ಸಮೂಹದ ನೇತಾರರಲ್ಲಿ ಒಬ್ಬರಾಗಿರುವ ಅನಂತ್ ನಿಜ ಕ್ಕೂ ಅಪರೂಪದ ವ್ಯಕ್ತಿತ್ವವುಳ್ಳ ಮನುಷ್ಯ. ಕಳೆದ ವಾರ ಅವರ ಜೊತೆಗೆ ಎರಡು ತಾಸು ಕಳೆಯುವ ಅವಕಾಶ ಸಿಕ್ಕಿತ್ತು.

ನಾವಿಬ್ಬರೂ ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು. ಅವರ ಮಾತುಗಳು ನನ್ನ ಮೇಲೆ ಎಷ್ಟು ಪ್ರಭಾವ ಬೀರಿದವು ಅಂದರೆ, ನಾನು ಅವುಗಳನ್ನು ನಿಮ್ಮೊಂದಿಗೆ ಹಂಚಿ ಕೊಳ್ಳಲೇಬೇಕು. ಅನಂತ್ ಅಂಬಾನಿ ಬಹಳ ದೊಡ್ಡ ಉದ್ಯಮ ಸಾಮ್ರಾಜ್ಯದ ಕುಡಿ. ಅವರ ತಾತ ಧೀರೂಭಾಯಿ ಅಂಬಾನಿ. ತಂದೆ ಮುಕೇಶ್ ಅಂಬಾನಿ, ತಾಯಿ ಸಮಾಜ ಸೇವಕಿ ನೀತಾ ಅಂಬಾನಿ.

ಭಾರತದಲ್ಲಿ ಇನ್ನಾರಲ್ಲೂ ಇರದಷ್ಟು ಹಣ ಈ ಕುಟುಂಬದ ಬಳಿಯಿದೆ. ಆದರೆ ಶ್ರೀಮಂತ ಹಿನ್ನೆಲೆಯಿಂದ ಬಂದಾಕ್ಷಣ ಅಥವಾ ಉದ್ಯಮಗಳ ಕುಟುಂಬದಲ್ಲಿ ಜನಿಸಿದಾಕ್ಷಣ ಯಾರೂ ದೊಡ್ಡ ಬಿಸಿನೆಸ್ ಲೀಡರ್ ಆಗುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬೇಕು ಅಂದರೂ ಸ್ವಂತ ವ್ಯಕ್ತಿತ್ವ ಬಹಳ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಅನಂತ್ ಖಂಡಿತವಾಗಿ ಎತ್ತರದಲ್ಲಿ ನಿಲ್ಲುತ್ತಾರೆಂದು ನಾನು ಯಾವ ಅನುಮಾನವಿಲ್ಲದೆ ಹೇಳಬಲ್ಲೆ.

ಅವರ ಗುರಿ ಕೇವಲ ಹಣ ಸಂಪಾದನೆ ಮಾಡಿ ಕೂಡಿಡುವುದಲ್ಲ. ಬದಲಿಗೆ ಜಗತ್ತನ್ನು ಇನ್ನೂ ಸುಂದರಗೊಳಿಸಬೇಕು, ಇದನ್ನು ಮನುಷ್ಯ ಮತ್ತು ಪ್ರಾಣಿಗಳ ವಾಸಕ್ಕೆ ಇನ್ನೂ ಹೆಚ್ಚು ಯೋಗ್ಯವಾದ ಜಾಗವನ್ನಾಗಿ ಮಾಡಬೇಕು ಎಂಬುದು ಅವರ ಮಹದಾಸೆ. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಆರೈಕೆಯ ವಿಷಯದಲ್ಲಿ ಅವರಿಗಿರುವ ದಯೆ ಮತ್ತು ಬದ್ಧತೆ ಎಂಥವರಿಗೂ ಅಚ್ಚರಿ ಹುಟ್ಟಿಸುತ್ತದೆ. ಒಂದು ಉದಾಹರಣೆ ನೀಡುತ್ತೇನೆ. ನೀವು ಕೂಡ ಅದನ್ನು ಕೇಳಿ ಅಚ್ಚರಿಪಡುತ್ತೀರಿ. ಬ್ರೆಜಿಲ್‌ನ ಕಾಟಿಂಗಾ ಕಾಡಿನಲ್ಲಿ ಸ್ಪಿಕ್ಸ್ ಮಕಾವ್ ಎಂಬ ಜಾತಿಯ ಗಿಳಿಯೊಂದಿತ್ತು. ಕೆಲ ವರ್ಷಗಳ ಹಿಂದೆ ಅದು ಸಂಪೂರ್ಣ ನಾಮಾವ ಶೇಷಗೊಂಡಿದೆ ಎಂದು ಘೋಷಿಸಲಾಗಿತ್ತು. ಅನಂತ್ ಅಂಬಾನಿಗೆ ಈ ವಿಷಯ ತಿಳಿಯಿತು. ಎಲ್ಲಾದರೂ ಒಂದೆರಡು ಈ ಪ್ರಭೇದದ ಗಿಳಿಗಳು ಉಳಿದಿರಬಹುದಲ್ಲಾ ಎಂದು ಶೋಧಿ ಸಲು ಆರಂಭಿಸಿದರು.

ಸಾಕಷ್ಟು ಹುಡುಕಾಟದ ಬಳಿಕ ದೇಶಿ ರಾಜಮನೆತನದ ಒಬ್ಬ ಯುವರಾಜನ ಬಳಿ ಸ್ಪಿಕ್ಸ್ ಮಕಾವ್ ಜಾತಿಯ ಒಂದು ಜೋಡಿ ಗಿಳಿಗಳಿವೆ ಎಂಬುದು ತಿಳಿಯಿತು. ಏನೇನೋ ಕಸರತ್ತು ಮಾಡಿ ಅನಂತ್ ಆ ಗಿಳಿಗಳನ್ನು ತಂದರು. ಅವುಗಳನ್ನು ತಮ್ಮ ವನತಾರಾ ಗಾರ್ಡನ್‌ನಲ್ಲಿ ಸಾಕಿದರು. ಗ್ರೀನ್ಸ್ ಜೂಲಾಜಿಕಲ್ ರೆಸ್ಕ್ಯೂ ಆಂಡ್ ರೀಹ್ಯಾಬಿಲಿಟೇಶನ್ ಸೆಂಟರ್ ಮತ್ತು ಅಳಿನಂಚಿನಲ್ಲಿರುವ ಗಿಳಿಗಳ ಸಂರಕ್ಷಣಾ ಸಂಸ್ಥೆಯ ಸಹಾಯವನ್ನು ಪಡೆದುಕೊಂಡರು. ಮೂವರೂ ಸೇರಿ ಆ ಗಿಳಿಗಳ ಸಂತಾನಾಭಿವೃದ್ಧಿಗೆ ಪ್ರಯತ್ನ ಆರಂಭಿಸಿದರು.

ನೀವು ನಂಬೋದಿಲ್ಲ! ಇಂದು 90 ಸ್ಪಿಕ್ಸ್ ಮಕಾವ್‌ಗಳು ಬ್ರೆಜಿಲ್‌ನ ಕಾಡುಗಳಲ್ಲಿ ಮತ್ತೆ ಹಾರಾಡಲು ಆರಂಭಿಸಿವೆ. ಅವು ತಮ್ಮ ನೈಸರ್ಗಿಕ ಪರಿಸರದಲ್ಲೇ ಸಂತಾನೋತ್ಪತ್ತಿ ಯನ್ನೂ ನಡೆಸುತ್ತಿವೆ. ಅನಂತ್ ಅಂಬಾನಿ ಭಗವಾನ್ ಗಣೇಶನ ಪರಮ ಭಕ್ತ. ಅವರ ವನತಾರಾ ಯೋಜನೆಯು ಇಂದು ಜಗತ್ತಿನ ಅತಿದೊಡ್ಡ ಆನೆ ಸಂರಕ್ಷಣಾ ಕೇಂದ್ರವಾಗಿ ಹೊರಹೊದೆ. ಅದಕ್ಕಿಂತ ಹೆಚ್ಚಾಗಿ, 80ಕ್ಕೂ ಅಧಿಕ ಚಿರತೆಗಳು ಈವರೆಗೆ ವನತಾರಾದಲ್ಲಿ ಜನಿಸಿವೆ. ಅವುಗಳನ್ನು ಶೀಘ್ರದಲ್ಲೇ ಕಾಡಿಗೆ ಬಿಡಲಾಗುತ್ತದೆ.

ಇನ್ನೊಂದು ಅದ್ಭುತವಾದ ಕತೆಯಿದೆ. ಅನಂತ್ ಅಂಬಾನಿಗೆ 12 ಮಂದಿ ಅತ್ಯಾಪ್ತ ಗೆಳೆಯರಿದ್ದಾರೆ. ಅವರೆಲ್ಲ ಮುಂಬೈನ ಸನ್ ಫ್ಲವರ್ ನರ್ಸರಿ ಶಾಲೆಯ ದಿನಗಳಿಂದಲೂ ಸ್ನೇಹಿತರು. ಅವರ ಗೆಳೆತನ ಎಷ್ಟು ಗಟ್ಟಿಯಾಗಿದೆ ಅಂದರೆ, ಅವರು ಅಮೆರಿಕದಲ್ಲಿ ಕಾಲೇಜಿಗೆ ಹೋಗುವಾಗಲೂ ಒಟ್ಟಿಗೇ ಇರಬೇಕು ಎಂದು ಸಾಕಷ್ಟು ತ್ಯಾಗ ಮಾಡಿದ್ದರು.

ಹೇಗೆಂದರೆ, ಅನಂತ್‌ಗೆ ಸ್ಟ್ಯಾನ್-ರ್ಡ್ ವಿಶ್ವದ್ಯಾಲಯಕ್ಕೆ ಪ್ರವೇಶ ಲಭಿಸಿತ್ತು. ಅವರ ಕೆಲ ಗೆಳೆಯರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಲಭಿಸಿತ್ತು. ಎರಡೂ ವಿಶ್ವವಿದ್ಯಾ ಲಯಗಳು ಬಹಳ ಪ್ರಸಿದ್ಧ. ಅಲ್ಲಿ ಪ್ರವೇಶ ಸಿಗಲಿ ಎಂದು ವಿದ್ಯಾರ್ಥಿಗಳು ಹಪಹಪಿಸುತ್ತಾರೆ. ಆದರೆ, ಈ ಸ್ನೇಹಿತರು ಬೇರೆ ಬೇರೆ ವಿಶ್ವದ್ಯಾಲಯಗಳಿಗೆ ಹೋಗಲು ಒಪ್ಪಲಿಲ್ಲ.

ಅಪ್ಪ ಅಮ್ಮಂದಿರು ಎಷ್ಟು ಹೇಳಿದರೂ ಕೇಳದೆ, ಕೊನೆಗೆ ಎಲ್ಲರೂ ಬ್ರೌನ್ ವಿಶ್ವವಿದ್ಯಾ ಲಯದಲ್ಲಿ ಪ್ರವೇಶ ಪಡೆದರು. ಅನಂತ್‌ಗೆ ಅನಾರೋಗ್ಯ ಉಂಟಾದಾಗ ಒಂದು ವರ್ಷ ಕಾಲೇಜಿನಿಂದ ದೂರ ಉಳಿಯಬೇಕಾಯಿತು. ಆಗ ಅವರ ಸ್ನೇಹಿತರೂ ಕೂಡ ಒಂದು ವರ್ಷ ಕಾಲೇಜಿಗೆ ಹೋಗದೆ ಸಾಥ್ ನೀಡಿದರು. ಈಗ ಎಲ್ಲರೂ ಅವರವರ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

ಆದರೂ ವಾರಕ್ಕೊಂದು ಸಲ ಭೇಟಿಯಾಗೇ ಆಗುತ್ತಾರೆ. ಅನಂತ್ ಚಿಕ್ಕವನಿದ್ದಾಗ ಮಂಗಳ ಮುಖಿಯರು ಒಟ್ಟಿಗೇ ಸೇರಿ ‘ಆರತಿ’ ಮಾಡುವುದನ್ನು ನೋಡಿ ಆರ್ಕಷಿತರಾಗಿದ್ದರು. ಇವತ್ತಿಗೂ ಅವರು ಆಗಾಗ ಅಂತಹ ಆರತಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಲಾಡ್‌ ನಲ್ಲಿ 18000 ಮಂಗಳಮುಖಿಯರಿಗೆ ಆಶ್ರಯ ಕಲ್ಪಿಸಿ, ಅವರನ್ನು ನೋಡಿಕೊಳ್ಳಲು ಇಬ್ಬರು ಕಾಯಂ ವೈದ್ಯರನ್ನು ನೇಮಿಸಿದ್ದಾರೆ.

ಅನಂತ್‌ಗೆ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಬೇಕು ಎಂಬ ಆಸೆಯಿದೆ. ಅದಕ್ಕಾಗಿ ಭಾರತದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ತಲಾ 5000 ಅಥವಾ 10000 ಹಾಸಿಗೆಗಳ 200 ಅತ್ಯಾಧುನಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಚಿಂತನೆ ಹೊಂದಿದ್ದಾರೆ. ಅವುಗಳ ಪೈಕಿ ಎರಡು ಆಸ್ಪತ್ರೆಗಳು ವಿದರ್ಭದಲ್ಲಿ ನಿರ್ಮಾಣವಾಗಲಿವೆ. ಈ ಬೃಹತ್ ಯೋಜನೆಗೆ ಅವರು ಈಗಾಗಲೇ 3 ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಿದ್ದಾರೆ.

ಅದರಲ್ಲಿ 1.5 ಲಕ್ಷ ಕೋಟಿ ರೂ. ಕೇವಲ ಕಟ್ಟಡಗಳನ್ನು ಗಮನಿಸುವುದಕ್ಕೇ ಬೇಕಾಗುತ್ತದೆ. ಇನ್ನುಳಿದ 1.5 ಲಕ್ಷ ಕೋಟಿ ರೂ.ಗೆ ಬರುವ ಬಡ್ಡಿ ಹಣದಲ್ಲಿ ಆಸ್ಪತ್ರೆಗಳನ್ನು ನಡೆಸಿ ಕೊಂಡು ಹೋಗಬೇಕು ಎಂದು ಪ್ಲಾನ್ ಮಾಡಿದ್ದಾರೆ. ತನ್ನ ತಾತನ ಆಸೆಯನ್ನು ಈಡೇರಿ ಸಲು ಭಾರತದಾದ್ಯಂತ ನೂರಾರು ದೇವಸ್ಥಾನಗಳನ್ನು ನಿರ್ಮಿಸುವ ಯೋಜನೆ ಯನ್ನು ಅನಂತ್ ಹೊಂದಿದ್ದಾರೆ. ಆ ದೇವಸ್ಥಾನಗಳು ಕೇವಲ ಪೂಜೆಯ ತಾಣಗಳಾಗಿ ರುವುದಿಲ್ಲ.

ಬದಲಿಗೆ ಅಲ್ಲಿ ಗುರುಕುಲ, ಕೈಗೆಟಕುವ ವಸತಿ ವ್ಯವಸ್ಥೆ, ನಿರಂತರ ಊಟ, ಮದುವೆ ಹಾಲ್‌ ಗಳು, ಆಧ್ಯಾತ್ಮಿಕ ಕೇಂದ್ರಗಳು ಹಾಗೂ ಇನ್ನಿತರ ಸಾಮಾಜಿಕ ಸೌಕರ್ಯಗಳಿರುತ್ತವೆ. ಅನಂತ್ ಕೇವಲ ಒಬ್ಬ ಸಮಾಜ ಸೇವಕ ಅಲ್ಲ. ಅವರಿಗೆ ಬಿಸಿನೆಸ್ ಷಯದಲ್ಲಿ ಅದ್ಭುತ ದೂರದೃಷ್ಟಿ ಇದೆ. ವ್ಯಾಪಾರ ಹಾಗೂ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಅಪಾರ ಜ್ಞಾನ ಸಂಪಾದನೆ ಮಾಡಿಕೊಂಡಿದ್ದಾರೆ.

ಉತ್ಪಾದನೆ, ಅರ್ಥಶಾಸ್ತ್ರ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಾಗ ಖುದ್ದಾಗಿ ಅವುಗಳನ್ನು ತಿಳಿದುಕೊಳ್ಳುತ್ತಾರೆ. ಪ್ರತಿದಿನ ಎರಡು ತಾಸು ತನ್ನ ತಂದೆ ಮುಕೇಶ್ ಅಂಬಾನಿಯ ಜೊತೆಗಿದ್ದುಕೊಂಡು ಉದ್ಯಮರಂಗದ ಒಳಹೊರಗನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅಣ್ಣ ಮತ್ತು ಅಕ್ಕನ ಜೊತೆಗೆ ಅನಂತ್ ಹೊಂದಿರುವ ಸಂಬಂಧ ಬಹಳ ಆರ್ದ್ರವಾಗಿದೆ.

ಅವರಿಬ್ಬರಿಗೂ ತಾನು ಹನುಮಂತನಿದ್ದಂತೆ ಎಂದು ಅನಂತ್ ಹೇಳಿಕೊಳ್ಳುತ್ತಾರೆ. ಮುಕೇಶ್ ಅಂಬಾನಿ ಯಾವಾಗಲೂ ಲಕ್ಷಾಂತರ ಭಾರತೀಯರಿಗೆ ಉದ್ಯೋಗ ನೀಡಬೇಕು ಎಂದು ಬಯಸುವ ಉದ್ಯಮಿ. ಆ ಕನಸನ್ನು ತನ್ನ ಕನಸಾಗಿ ಮಾಡಿಕೊಂಡಿರುವ ಅನಂತ್, ರಿಲಯನ್ಸ್‌ನ ನೌಕರರ ಸಂಖ್ಯೆಯನ್ನು ಈಗಿರುವ 25 ಲಕ್ಷದಿಂದ 1 ಕೋಟಿಗೆ ಏರಿಸಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಜಗತ್ತಿನಲ್ಲೇ ರಿಲಯನ್ಸ್ ಅತಿದೊಡ್ಡ ಉದ್ಯೋಗದಾತ ಕಂಪನಿಯಾಗಬೇಕು ಎಂಬ ಕನಸು ಅನಂತ್‌ಗಿದೆ.

ತಂದೆಯ 75ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಸಾಧನೆಯನ್ನೇ ನೀಡಬೇಕು ಎಂದು ಸಂಕಲ್ಪ ಮಾಡಿಕೊಂಡಿದ್ದಾರೆ. ನಾನು ಅನಂತ್ ಬಳಿ ಯವತ್ಮಾಲ್ ಮತ್ತು ವಿದರ್ಭದಲ್ಲಿ ಉದ್ದಮೆಗಳನ್ನು ಸ್ಥಾಪಿಸುವಂತೆ ಮನ ಮಾಡಿದಾಗ ಒಂದು ಕ್ಷಣವೂ ಯೋಚನೆ ಮಾಡದೆ ಒಪ್ಪಿಕೊಂಡರು. ನೀವು 10 ರಿಂದ 12 ಸಾವಿರ ಎಕರೆ ಜಾಗ ಕೊಡಿಸಿದರೆ ದೊಡ್ಡ ಉದ್ದಿಮೆ ಸ್ಥಾಪಿಸಿ ಸಾವಿರಾರು ಜನರಿಗೆ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಲೋಕಮತ್ ಮೀಡಿಯಾ ಗ್ರೂಪ್‌ನಿಂದ ಲಂಡನ್‌ನಲ್ಲಿ ಜಾಗತಿಕ ಆರ್ಥಿಕ ಶೃಂಗ ಆಯೋಜಿಸುತ್ತಿದ್ದೇವೆ ಎಂಬುದನ್ನು ಕೇಳಿ ಅವರಿಗೆ ಸಂತೋಷವಾತು. ಅಲ್ಲಿಗೆ ತಾನೂ ಆಗಮಿಸುವುದಾಗಿ ಹೇಳಿದರು. ಜಾಮ್‌ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಲೋಕಮತ್ ಮೀಡಿಯಾ ಗ್ರೂಪ್‌ನಿಂದ ಮಹಾರಾಷ್ಟ್ರದ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸುವುದಕ್ಕೂ ಖುಷಿಯಿಂದ ಒಪ್ಪಿಕೊಂಡರು.

ಇದರಿಂದ ಮಹಾರಾಷ್ಟ್ರ ಮತ್ತು ಗುಜರಾತ್ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಅವರಿಗೆ ಸಂತೋಷವಾಯಿತು. ನನ್ನ ಮತ್ತು ಅನಂತ್ ನಡುವೆ ನಡೆದ ಎರಡು ತಾಸುಗಳ ಮಾತುಕತೆಯಲ್ಲಿ ಲೋಕಮತ್ ಮೀಡಿಯಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಪಾದಕೀಯ ಸಲಹೆಗಾರ ರಿಷಿ ದರಡಾ ಕೂಡ ಜೊತೆಗಿದ್ದರು. ಅನಂತ್‌ಗಿರುವ ಅದ್ಭುತ ಜ್ಞಾಪಕ ಶಕ್ತಿಯನ್ನು ನೋಡಿ ನಾವು ಬೆರಗಾದೆವು. ಅನಂತ್ 7ನೇ ಕ್ಲಾಸಿನಲ್ಲಿದ್ದಾಗ ನಾನೊಮ್ಮೆ ಅವರ ಶಾಲೆಗೆ ಹೋಗಿದ್ದೆ.

ಅಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನಕ್ಕೆ ಅತಿಥಿಯಾಗಿದ್ದ ನಾನು, ಅನಂತ್ ಸಿದ್ಧಪಡಿಸಿ ಕೊಂಡು ಬಂದಿದ್ದ ಪ್ರಾತ್ಯಕ್ಷಿಕೆಯ ಎದುರು ನಿಂತು ಸೂಕ್ಷ್ಮವಾಗಿ ಗಮನಿಸಿದ್ದೆ. ಅದನ್ನು ಮೊನ್ನೆಯ ಭೇಟಿಯಲ್ಲಿ ಅನಂತ್ ನೆನಪಿಸಿದರು. ಅಂದು ತನ್ನ ಅಕ್ವೇರಿಯಂ ಮಾದರಿ ಯನ್ನು ನಾನು ಹೊಗಳಿದ್ದರ ಬಗ್ಗೆ ಹೇಳಿದರು. ಕಾಕತಾಳೀಯವೆಂಬಂತೆ ನನ್ನ ಮೊಮ್ಮಗ ಯಶೋವರ್ಧನ ಕೂಡ ಆ ಶಾಲೆಯಲ್ಲಿ ಅದೇ ಸಮಯದಲ್ಲಿ ಓದುತ್ತಿದ್ದ.

ಆ ಸುದೀರ್ಘ ಭೇಟಿಯ ಬಳಿಕ ಒಂದು ವಿಷಯವನ್ನು ನಾನು ನಿಸ್ಸಂಶಯವಾಗಿ ಹೇಳ ಬಲ್ಲೆ. ಮುಕೇಶ್ ಮತ್ತು ನೀತಾ ಅಂಬಾನಿ ತಮ್ಮ ಮಗನನ್ನು ಸಂಸ್ಕಾರವಂತನನ್ನಾಗಿ ಬೆಳೆಸಿದ್ದಾರೆ. ಈ ನೆಲದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅನಂತ್ ಮೈಗೂಡಿಸಿ ಕೊಂಡಿ ದ್ದಾರೆ. ಆತ ಕೇವಲ ಒಬ್ಬ ಉದ್ಯಮಿಯಲ್ಲ, ಬದಲಿಗೆ ದೂರದೃಷ್ಟಿಯ ನಾಯಕ. ಅವರ ವ್ಯಕ್ತಿತ್ವದಲ್ಲಿ ಮಾನವೀಯತೆ ತುಂಬಿ ತುಳುಕುತ್ತಿದೆ. ಅವರನ್ನು ನೋಡಿದಾಗ ಮೊಹಮ್ಮದ್ ಅಲಿ ಅಸರ್‌ನ ಒಂದು ‘ಶೇರ್’ ನೆನಪಾಗುತ್ತದೆ.

ಹೊಸ ಗುರಿ, ಹೊಸ ಜಾದೂ,

ಎಲ್ಲೆಡೆ ಬೆಳಕೋ ಬೆಳಕು,

ಬಹಳ ದೂರದವರೆಗೆ

ಮಾನವೀಯತೆಯ ಸೆಳಕು!