Leena Joshi Column: ಸ್ವಮೂತ್ರ ಪಾನಿ ಪ್ರಧಾನಿಯಿಂದಾದ ಪ್ರಮಾದಗಳು
1977-79 ಭಾರತದ ರಾಜಕೀಯದಲ್ಲಿ ಮಹತ್ವದ ಕಾಲಘಟ್ಟ. ಎರಡು ವರ್ಷಗಳ ತುರ್ತು ಪರಿಸ್ಥಿತಿಯ ವಿರುದ್ಧ ಬೇಸತ್ತಿದ್ದ, ಮೂರು ದಶಕಗಳ ಕಾಲ ಕಾಂಗ್ರೆಸ್ಸಿನ ಆಡಳಿತದಿಂದ ರೋಸಿದ್ದ ಭಾರತೀಯರಿಗೆ ಒಂದು ಚೇಂಜ್ ಬೇಕಿತ್ತು. ಮೂಲ ಕಾಂಗ್ರೆಸ್ಸಿನಿಂದ ಬೇರ್ಪಟ್ಟು ಹೊಸ ಪಕ್ಷವನ್ನು ಕಟ್ಟಿದ್ದ ಗಾಂಧಿವಾದಿ ನಾಯಕರ ಮೇಲೆ ದೇಶವಾಸಿಗಳಿಗೆ ಒಂದು ಹಿಡಿ ಜಾಸ್ತಿ ಪ್ರೀತಿ ಇತ್ತು.
-
ಒಳನೋಟ
ಲೀನಾ ಜೋಶಿ
ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ( RAW ) ಮುಖ್ಯಸ್ಥ, ಆರ್. ಎನ್. ಕಾವ್, ಪ್ರಧಾನಿ ಮೊರಾರ್ಜಿ ದೇಸಾಯಿಯನ್ನು ಭೇಟಿಯಾಗಲು ಹಲವಾರು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಹೊಸದಾಗಿ ಪ್ರಧಾನಿಯಾದ ಹುಮ್ಮಸ್ಸಿನಲ್ಲಿದ್ದ, ಮೊರಾರ್ಜಿಗೆ ರಾ ಮುಖ್ಯಸ್ಥನ ಭೇಟಿ ಮಹತ್ವದ್ದಾಗಿ ಕಂಡಿರಲಿಲ್ಲ.
ಪ್ರಧಾನಿಯಾದ ದಿನ ಅವರು ಕೈಗೊಂಡ ಪ್ರಮುಖ ತೀರ್ಮಾನ, ಪ್ರಧಾನಿ ಅಧಿಕೃತ ನಿವಾಸದ ಸ್ನಾನದ ಕೋಣೆಯಲ್ಲಿದ್ದ ‘ಬಾತ್ ಟಬ’ ತೆರವುಗೊಳಿಸುವುದು, ಮತ್ತು ಅದಕ್ಕಿಂತ ಮಹತ್ವದ್ದೇ ನೆಂದರೆ ‘ವಿದೇಶಿ ಕಮೋಡ್’ ತೆರವುಗೊಳಿಸಿ ‘ಭಾರತೀಯ ಕಕ್ಕಸಿನ’ ಪುನರ್‌ನಿರ್ಮಾಣ.
1977-79 ಭಾರತದ ರಾಜಕೀಯದಲ್ಲಿ ಮಹತ್ವದ ಕಾಲಘಟ್ಟ. ಎರಡು ವರ್ಷಗಳ ತುರ್ತು ಪರಿಸ್ಥಿತಿ ಯ ವಿರುದ್ಧ ಬೇಸತ್ತಿದ್ದ, ಮೂರು ದಶಕಗಳ ಕಾಲ ಕಾಂಗ್ರೆಸ್ಸಿನ ಆಡಳಿತದಿಂದ ರೋಸಿದ್ದ ಭಾರತೀಯರಿಗೆ ಒಂದು ಚೇಂಜ್ ಬೇಕಿತ್ತು. ಮೂಲ ಕಾಂಗ್ರೆಸ್ಸಿನಿಂದ ಬೇರ್ಪಟ್ಟು ಹೊಸ ಪಕ್ಷವನ್ನು ಕಟ್ಟಿದ್ದ ಗಾಂಧಿವಾದಿ ನಾಯಕರ ಮೇಲೆ ದೇಶವಾಸಿಗಳಿಗೆ ಒಂದು ಹಿಡಿ ಜಾಸ್ತಿ ಪ್ರೀತಿ ಇತ್ತು.
ನಿರೀಕ್ಷೆಗಳ ಮಹಾಪುರದ ಮೇಲೆ 1977ರಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಮೊರಾರ್ಜಿಗೆ ಆಗ 81 ವರ್ಷ. ಜೀವನದ ಸಂಧ್ಯಾಕಾಲದಲ್ಲಿದ್ದ ಅನುಭವಿ ರಾಜಕಾರಣಿ, ಪ್ರಾಮಾಣಿಕ ರಾಜಕಾರಣಿ, ‘ಸ್ವಮೂತ್ರ’ ಕುಡಿಯುವ ವ್ಯಕ್ತಿ ಎಂಬ ಟ್ಯಾಗ್ ಇತ್ತು. ಗಾಂಧಿ ಟೋಪಿ, ಗಾಂಧಿ ಜುಬ್ಬ, ಧೋತಿಗೆ 1970ರ ದಶಕದಲ್ಲೂ ಅಪಾರ ಗೌರವವಿತ್ತು. ಈ ನಂಬಿಕೆ ನುಚ್ಚುನೂರಾಗಲು ಹೆಚ್ಚು ಸಮಯ ತಗಲಲಿಲ್ಲ.
ಮೊರಾರ್ಜಿ ಸರಕಾರ ತನ್ನದೇ ತಪ್ಪು ನಿರ್ಧಾರಗಳಿಂದ ಧೂಳಿಪಟವಾಯಿತು. ಕುರಿಗಳ ಮಂದೆಗೆ ಕುರಿಯೇ ನಾಯಕನಾದರೆ ಹೇಗಿರುತ್ತೆ ಹಾಗಿತ್ತು ಆವಾಗ ದೇಶದ ಪರಿಸ್ಥಿತಿ. ಮೊರಾರ್ಜಿಯ ವ್ಯಕ್ತಿತ್ವ ಅತಿ ಜಿಗುಟಿನದ್ದು. ಕಾಲಕ್ಕೆ ತಕ್ಕಂತೆ ಮನುಷ್ಯ ಬದಲಾಗಬೇಕೆನ್ನುವ ಪ್ರಕೃತಿ ನಿಯಮಕ್ಕೆ ವಿರುದ್ಧ ವಾಗಿ ಯೋಚಿಸುತ್ತಿದ್ದ ವ್ಯಕ್ತಿ.
ಅಹಿಂಸೆಯಿಂದಲೇ ದೇಶ ಉದ್ಧಾರ ಎಂಬ ಹಳೆಯ ಸಂಪ್ರದಾಯಕ್ಕೆ ಜೋತುಬಿದ್ದ ವ್ಯಕ್ತಿತ್ವ. ಸ್ವಾತಂತ್ರ್ಯದ ನಂತರ ದೇಶ ಎದುರಿಸಿದ 1948-1962-1971ರ ಯುದ್ಧದ ಬಳಿಕವೂ ಶಾಂತಿ ಶಾಂತಿ ಶಾಂತಿ ಎಂದು ಜಪಿಸುತ್ತಿದ್ದ ವ್ಯಕ್ತಿ. ಶಾಂತಿಯೇ ಮೂಲಮಂತ್ರ, ಶಾಂತಿಯೇ ಸರ್ವಸ್ವ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ, ಶಾಂತಿಯ ಮಂತ್ರ ಬಲಶಾಲಿಯ ಬಾಯಲ್ಲಿ ಬಂದಾಗ ಮಾತ್ರ ಅದಕ್ಕೆ ತೂಕ!
ಜನತಾ ಸರಕಾರದ ದೊಡ್ಡ ಸವಾಲುಗಳಲ್ಲಿ ಒಂದು, ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳಾಗಿತ್ತು. ಜನತಾ ಪಕ್ಷವು ಹಲವು ವಿಭಿನ್ನ ಚಿಂತನೆಗಳ ನಾಯಕರು ಒಟ್ಟುಗೂಡಿದ ಒಕ್ಕೂಟವಾಗಿದ್ದರಿಂದ ಆಂತರಿಕ ಸಂಘರ್ಷಗಳು ಆಗಾಗ್ಗೆ ಎದುರಾದವು. ವಿಭಿನ್ನ ನಾಯಕರ ನಡುವೆ ನಡೆದ ಅಧಿಕಾರದ ಪೈಪೋಟಿ ಸರಕಾರದ ಸ್ಥಿರತೆಗೆ ಹಾನಿ ಮಾಡಿತು. ಈ ಒಳಗಿನ ಕಲಹಗಳು ಕೊನೆಗೆ ಸರಕಾರದ ಪತನಕ್ಕೆ ಕಾರಣವಾದವು. 1979ರಲ್ಲಿ ಸರಕಾರ ಕುಸಿದು ರಾಜಕೀಯ ಅಸ್ಥಿರತೆ ಉಂಟಾಯಿತು.
ಭಾರತದಂತಹ ದೊಡ್ಡ ದೇಶದ ಭದ್ರತೆ ಕೇವಲ ಸೇನೆಯ ಶಕ್ತಿಯಿಂದ ಮಾತ್ರ ಸಾಧ್ಯವಿಲ್ಲ. ದೇಶದ ಸುರಕ್ಷತೆಗಾಗಿ ಗುಪ್ತಚರ ಸಂಸ್ಥೆಗಳು, ರಾಜಕೀಯ ನಾಯಕತ್ವ ಮತ್ತು ಸರಿಯಾದ ನಿರ್ಧಾರಗಳು ಕೂಡ ಅತಿ ಮಹತ್ವವಾದದ್ದು. ವಿಶೇಷವಾಗಿ ಪಕ್ಕದ ರಾಷ್ಟ್ರಗಳೊಂದಿಗೆ ಇರುವ ಸಂಬಂಧಗಳಲ್ಲಿ ಒಂದು ಸಣ್ಣ ತಪ್ಪು ನಿರ್ಧಾರವೂ ದೇಶಕ್ಕೆ ದೊಡ್ಡ ಹಾನಿ ಉಂಟುಮಾಡಬಹುದು.
ಇದನ್ನೂ ಓದಿ: Leena Joshi Column: ಹುಚ್ಚರ ಮದುವೆಯಲ್ಲಿ ಉಂಡ ಜಾಣ ರಷ್ಯಾ
ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ದೇಶದ ಹೊರಗಿನ ಭದ್ರತಾ ಮಾಹಿತಿಗಳನ್ನು ಸಂಗ್ರಹಿಸುವ ಪ್ರಮುಖ ಸಂಸ್ಥೆ. ಈ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಆರ್.ಎನ್. ಕಾವ್ ( R.N.Kao ) ಪ್ರಮುಖರು. RAW ಅನ್ನು ಬಲಿಷ್ಠ ಸಂಸ್ಥೆಯಾಗಿ ರೂಪಿಸಿದ ಕೀರ್ತಿ ಆರ್.ಎನ್. ಕಾವ್‌ಗೆ ಸಲ್ಲುತ್ತದೆ. ಅವರ ಕಾಲದಲ್ಲಿ RAW ಅತ್ಯಂತ ಬಲಿಷ್ಠ ಸಂಸ್ಥೆಯಾಗಿ ಬೆಳೆಯಿತು. ಪಾಕಿಸ್ತಾನದ ಒಳಗೆ ಮತ್ತು ಇತರ ರಾಷ್ಟ್ರಗಳಲ್ಲಿ ಭಾರತದ ಪರವಾಗಿ ಕೆಲಸ ಮಾಡುವ ಅನೇಕ ಗುಪ್ತಚರರು ತಮ್ಮ ಜೀವದ ಹಂಗಿಲ್ಲದೆ ಮಾಹಿತಿ ಸಂಗ್ರಹಿಸು ತ್ತಿದ್ದರು.
1977ರಲ್ಲಿ ಮೋರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ RAW ಸಂಸ್ಥೆ ಯ ಕಾರ್ಯಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಿತು. RAW ಸಂಸ್ಥೆಯ ಬಜೆಟ್ ಕಡಿಮೆ ಮಾಡಲಾಯಿತು ಮತ್ತು ಕೆಲವು ಪ್ರಮುಖ ಕಾರ್ಯಾಚರಣೆಗಳನ್ನು ನಿಧಾನ ಗೊಳಿಸಲಾಯಿತು.
ವಿದೇಶಗಳಲ್ಲಿ ನಡೆಯುತ್ತಿದ್ದ ಗುಪ್ತಚರ ಕಾರ್ಯಾಚರಣೆಗಳನ್ನು ಕೂಡ ಸೀಮಿತಗೊಳಿಸಲಾಯಿತು. RAW ಸಂಸ್ಥೆಗೆ ಅಗತ್ಯವಿದ್ದ ಹಣಕಾಸು ನೆರವು ಮತ್ತು ಆಡಳಿತಾತ್ಮಕ ಬೆಂಬಲ ಕಡಿಮೆಯಾಯಿತು. ಆರ್.ಎನ್.ಕಾವ್ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಈ ಬದಲಾವಣೆಗಳು ತುಂಬಾ ನಿರಾಶೆ ತಂದವು. ಕಾವ್ ಅವರು ಬಲಿಷ್ಠ ಗುಪ್ತಚರ ವ್ಯವಸ್ಥೆ ದೇಶದ ಭದ್ರತೆಗೆ ಅತ್ಯಗತ್ಯ ಎಂದು ನಂಬು ತ್ತಿದ್ದರು. ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾ ಮುಂತಾದ ರಾಷ್ಟ್ರಗಳ ಚಟುವಟಿಕೆಗಳನ್ನು ಗಮನಿಸುವಲ್ಲಿ RAW ಸಂಸ್ಥೆ ಬಲವಾಗಿರಬೇಕು ಎಂದು ಅವರು ಭಾವಿಸಿದ್ದರು.
ಹೊಸ ಸರಕಾರದ ಜತೆ ಭಿನ್ನಾಭಿಪ್ರಾಯಗಳು ಹೆಚ್ಚಾದಂತೆ, ಕಾವ್ ಅವರಿಗೆ ತಮ್ಮ ಕಾರ್ಯವನ್ನು ಸ್ವತಂತ್ರವಾಗಿ ಮುಂದುವರಿಸುವುದು ಕಷ್ಟವಾಗುತ್ತಿದೆ ಎಂಬ ಭಾವನೆ ಮೂಡಿತು. ಅವರು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡಲು ಸದಾ ಸಿದ್ಧರಾಗಿದ್ದರೂ, ತಮ್ಮ ದೃಷ್ಟಿಕೋನಕ್ಕೆ ತಕ್ಕ ಬೆಂಬಲ ದೊರೆಯದ ಪರಿಸ್ಥಿತಿ ಅವರಿಗೆ ನಿರಾಶೆ ತಂದಿತು. ಈ ಎಲ್ಲ ಕಾರಣಗಳಿಂದಾಗಿ, 1977ರಲ್ಲಿ ಕಾವ್ ಅವರು ತಮ್ಮ ಹುದ್ದೆಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡರು.
ಆರ್.ಎನ್. ಕಾವ್ ಅವರ ರಾಜೀನಾಮೆ ಒಂದು ವ್ಯಕ್ತಿಯ ವೈಯಕ್ತಿಕ ನಿರ್ಧಾರ ಮಾತ್ರವಲ್ಲ; ಅದು ರಾಜಕೀಯ ಬದಲಾವಣೆಗಳು ಮತ್ತು ನೀತಿ ಭಿನ್ನಾಭಿಪ್ರಾಯಗಳು ಒಂದು ಮಹತ್ವದ ಸಂಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಉದಾಹರಣೆ.
ಗುಪ್ತಚರ ಸಂಸ್ಥೆಗಳ ಕಾರ್ಯಾಚರಣೆಗಳಿಗೆ ತಕ್ಷಣ ಹಣಕಾಸು ದೊರೆಯದಿದ್ದರೆ, ಅವರ ಕಾರ್ಯ ಗಳು ವಿಳಂಬವಾಗುತ್ತವೆ ಮತ್ತು ಅದು ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯಗಳ ಬಗ್ಗೆ ಪ್ರಮುಖವಾಗಿ ಬರೆದಿರುವವರಲ್ಲಿ ಮಾಜಿ RAW ಅಧಿಕಾರಿ ಬಿ. ರಾಮನ್ ಪ್ರಮುಖರು.
ಅವರು ಬರೆದ The Kaoboys of RAW: Down Memory Lane ಎಂಬ ಪುಸ್ತಕದಲ್ಲಿ ಹಲವು ಐತಿಹಾಸಿಕ ಘಟನೆಗಳ ಬಗ್ಗೆ ಉಖಗಳಿವೆ. ಅವರು ತಮ್ಮ ಅನುಭವಗಳನ್ನು ವಿವರಿಸುವಾಗ, ಗುಪ್ತಚರ ಸಂಸ್ಥೆಗಳ ಕಾರ್ಯಾಚರಣೆಗಳಲ್ಲಿ ಎದುರಾಗುವ ಸವಾಲುಗಳು ಮತ್ತು ರಾಜಕೀಯ ನಿರ್ಧಾರಗಳ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.
ಅವರ ಬರಹಗಳಲ್ಲಿ ಪಾಕಿಸ್ತಾನದಲ್ಲಿ, ಭಾರತದ ಪರವಾಗಿ ಕೆಲಸ ಮಾಡುತ್ತಿದ್ದ ಗುಪ್ತಚರರ ಜೀವನ ಎಷ್ಟು ಅಪಾಯಕರವಾಗಿತ್ತು ಎಂಬುದನ್ನು ವಿವರಿಸಲಾಗಿದೆ. ರಾಮನ್, ತಮ್ಮ ಅನುಭವಗಳನ್ನು ವಿವರಿಸುವಾಗ ಆ ಕಾಲಘಟ್ಟದ ಸವಾಲುಗಳನ್ನು ಉಲ್ಲೇಖಿಸಿದ್ದಾರೆ. ಅವರು ಬರೆದ ಪುಸ್ತಕಗಳಲ್ಲಿ ಅU ಸಂಸ್ಥೆಯ ಒಳಗಿನ ಸವಾಲುಗಳು, ರಾಜಕೀಯ ಬದಲಾವಣೆಗಳ ಪರಿಣಾಮ ಮತ್ತು ಗುಪ್ತಚರ ಅಧಿಕಾರಿಗಳು ಎದುರಿಸಿದ ಸಂಕಷ್ಟಗಳ ಬಗ್ಗೆ ವಿವರಿಸಲಾಗಿದೆ.
1978ರ ಸಮಯ, ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜಿಯಾ ಉಲ್ ಹಕ್ (Zia&ul&Haq) ಎಂಥ ತಾಂಧ ಎಂದರೆ, ತನ್ನ ಅಧಿಕಾರಿಗಳಿಗೆ, ದೇಶದ ಜನತೆಗೆ ಕರೆಕೊಟ್ಟಿದ್ದ ’bleed India with a thousand cuts’. ಆ ಕಾಲಘಟ್ಟದಲ್ಲಿ ಪಾಕಿಸ್ತಾನ ತನ್ನ ಅಣುಶಕ್ತಿ ಕಾರ್ಯಕ್ರಮವನ್ನು ವೇಗವಾಗಿ ಮುಂದುವರಿಸು ತ್ತಿತ್ತು. ಭಾರತಕ್ಕೆ ಈ ವಿಷಯದ ಬಗ್ಗೆ ರಾ *agents ಗಳಿಂದ ಮಾಹಿತಿ ದೊರೆಯುತ್ತಿತ್ತು.
ಮೊರಾರ್ಜಿ ದೇಸಾಯಿ ಮತ್ತು ಜಿಯಾ ಉಲ್ ಹಕ್ ನಡುವಿನ ಮಧುರ ಸಂಬಂಧದ ಬಗ್ಗೆ ಬರೆಯು ತ್ತಾ, ರಾಮನ್ ಒಂದು ಮಹತ್ವದ ಸಂಗತಿಯ ಬಗ್ಗೆ ನಮ್ಮೆಲ್ಲರ ಗಮನ ಸೆಳೆಯುತ್ತಾರೆ. ಒಮ್ಮೆ, ದೂರವಾಣಿ ಸಂಭಾಷಣೆಯಲ್ಲಿ, ಮೊರಾರ್ಜಿ ಜಿಯಾ ಉಲ್ ಹಕ್‌ಗೆ ಹೇಳುತ್ತಾರೆ, ಭಾರತಕ್ಕೆ ಪಾಕಿಸ್ತಾನದ ಪ್ರತಿಯೊಂದು ವಿಷಯದ ಬಗ್ಗೆ ಸಂಪೂರ್ಣ ಅರಿವಿದೆ, ಪಾಕಿಸ್ತಾನದ ಅಣು ಸ್ಥಾವರದ ಪ್ರತಿಯೊಂದು ಮಾಹಿತಿಯಿದೆ, ನೀವು ಪಾಕಿಸ್ತಾನಿಗಳು ಯಾವ ಮೂಲಗಳಿಂದ ಅಣುಬಾಂಬಗೆ ಬೇಕಾದ ಕಚ್ಛಾ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದೀರಿ, ಯಾವ ಪರೀಕ್ಷೆಯನ್ನು ಮಾಡಿದ್ದೀರಿ ಎಂದು ನನಗೆ ಇಲ್ಲೀ ಕುಳಿತು ಎಲ್ಲ ಗೊತ್ತು.
ಈ ಮಾಹಿತಿ ಜಿಯಾ ಉಲ್ ಹಕ್ ನನ್ನು ಅಲರ್ಟ್ ಮಾಡಿತು, ಭಾರತದ ಅತ್ಯಧಿಕ ರಾ agents ಗಳನ್ನು, ಪಾಕಿಸ್ತಾನದಲ್ಲಿ ಹೆಕ್ಕಿ ಹೆಕ್ಕಿ ಹುಡುಕಿ ಕ್ರೂರವಾಗಿ ಕೊಲ್ಲಲಾಯಿತು. ಮೊರಾರ್ಜಿ ದೇಸಾಯಿ ಪಾಕಿಸ್ತಾನದೊಂದಿಗೆ ಶಾಂತಿ ಸಂಬಂಧಗಳನ್ನು ಬೆಳೆಸಲು ಅವಿರತ ಪ್ರಯತ್ನ ಪಟ್ಟರು ಎಂದು ಬಿಂಬಿಸಲಾಯಿತು.
ಪಾಕಿಸ್ತಾನ ಮೊರಾರ್ಜಿಯ ಸಹಾಯವನ್ನು ಮರೆಯಲಿಲ್ಲ, ಇದಕ್ಕೆ ಪೂರಕವೆಂಬಂತೆ, ಪಾಕಿಸ್ತಾನ ಸರಕಾರ ಮೊರಾರ್ಜಿಗೆ ನಿಶಾನ್-ಎ-ಪಾಕಿಸ್ತಾನ್ ಪ್ರಶಸ್ತಿ ನೀಡಿತು. ನಿಶಾನ್-ಎ-ಪಾಕಿಸ್ತಾನ್, ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಗೆ ಅತ್ಯುನ್ನತ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಇದನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪಾಕಿಸ್ತಾನದ ಪ್ರಜೆಗಳು ಮತ್ತು ವಿದೇಶಿಯರು ಸೇರಿದಂತೆ ಸರಕಾರಿ ಅಧಿಕಾರಿಗಳಿಗೆ ಹಾಗೂ ನಾಗರಿಕರಿಗೆ ನೀಡಲಾಗುತ್ತದೆ.
ಪ್ರಧಾನಮಂತ್ರಿಯವರು ದೇಶದ ಅತ್ಯಂತ ಸೂಕ್ಷ್ಮ ಮಾಹಿತಿಗಳ ಪಾಲಕರು. ಅವರ ಮಾತು ಮತ್ತು ನಿರ್ಧಾರಗಳು ದೇಶದ ಭದ್ರತೆಯನ್ನು ಬಲಪಡಿಸಬಹುದು ಅಥವಾ ದುರ್ಬಲಗೊಳಿಸಬಹುದು. ಒಂದು ಸಣ್ಣ ತಪ್ಪು ನಿರ್ಧಾರ ಅಥವಾ ಅಜಾಗರೂಕ ಹೇಳಿಕೆ ದೇಶದ ಭದ್ರತೆಗೆ ದೊಡ್ಡ ಹಾನಿ ಮಾಡಬಹುದು. ನಾಯಕತ್ವದ ಮಟ್ಟದಲ್ಲಿ ಮಾತನಾಡುವಾಗ ಅತ್ಯಂತ ಎಚ್ಚರಿಕೆ ಅಗತ್ಯ. ಒಂದು ತಪ್ಪಾದ ಹೇಳಿಕೆ ಅಥವಾ ಅಜಾಗರೂಕ ಮಾತು ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯ ಸೂಚನೆಯಾ ಗಬಹುದು.
ಇಂತಹ ಸಂದರ್ಭಗಳಲ್ಲಿ ಶತ್ರು ರಾಷ್ಟ್ರಗಳು ತಮ್ಮೊಳಗಿನ ಶಂಕಿತರನ್ನು ಹುಡುಕಲು ಪ್ರಾರಂಭಿಸ ಬಹುದು. ಇದರಿಂದ ಗುಪ್ತಚರರ ಜೀವಕ್ಕೆ ಅಪಾಯ ಉಂಟಾಗಬಹುದು. ಪಕ್ಕದ ರಾಷ್ಟ್ರಗಳೊಂದಿಗೆ ಸಂಬಂಧಗಳಲ್ಲಿ ಸ್ನೇಹವೂ ಅಗತ್ಯ. ಆದರೆ, ಅತಿಯಾದ ವಿಶ್ವಾಸ ಅಪಾಯಕಾರಿಯೂ ಆಗಬಹುದು. ಪಾಕಿಸ್ತಾನದಂತಹ ರಾಷ್ಟ್ರಗಳೊಂದಿಗೆ ರಾಜಕೀಯ ಸಂಬಂಧಗಳು ಸದಾ ಸಂಕೀರ್ಣ ವಾಗಿವೆ.
ಒಂದು ಕಡೆ ಮಾತುಕತೆ, ಮತ್ತೊಂದು ಕಡೆ ಎಚ್ಚರಿಕೆ- ಈ ಎರಡರ ನಡುವೆ ಸಮತೋಲನ ಕಾಪಾಡು ವುದು ನಾಯಕತ್ವದ ಪ್ರಮುಖ ಕರ್ತವ್ಯ.
ಇಂದಿನ ಜಗತ್ತಿನಲ್ಲಿ ಯುದ್ಧಗಳು ಕೇವಲ ಗನ್ ಮತ್ತು ಟ್ಯಾಂಕ್‌ಗಳ ಮೂಲಕ ನಡೆಯುವುದಿಲ್ಲ. ಮಾಹಿತಿ ಯುದ್ಧ, ಸೈಬರ್ ದಾಳಿ ಮತ್ತು ಗುಪ್ತಚರ ಕಾರ್ಯಾಚರಣೆಗಳು ಪ್ರಮುಖ ಪಾತ್ರ ವಹಿಸು ತ್ತಿವೆ. ಗುಪ್ತಚರ ಸಂಸ್ಥೆಗಳು ಬಲಿಷ್ಠವಾಗಿರಬೇಕು. ಸರಕಾರಗಳು ಅವರಿಗೆ ಅಗತ್ಯವಿರುವ ಸ್ವಾತಂತ್ರ್ಯ ಮತ್ತು ಸಂಪನ್ಮೂಲಗಳನ್ನು ನೀಡಬೇಕು.
ದೇಶದ ಭದ್ರತೆ ಒಂದು ದಿನದಲ್ಲಿ ನಿರ್ಮಾಣವಾಗುವುದಿಲ್ಲ. ಅದು ದಶಕಗಳ ಪರಿಶ್ರಮ, ತ್ಯಾಗ ಮತ್ತು ಸರಿಯಾದ ನಾಯಕತ್ವದ ಫಲಿತಾಂಶ. ಪಕ್ಕದ ರಾಷ್ಟ್ರಗಳೊಂದಿಗೆ ಇರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬಲಿಷ್ಠ ಗುಪ್ತಚರ ವ್ಯವಸ್ಥೆ, ಜವಾಬ್ದಾರಿಯುತ ನಾಯಕತ್ವ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಅಚಲ ನಿಷ್ಠೆ ಅತ್ಯಂತ ಅಗತ್ಯ. ಈ ಐತಿಹಾಸಿಕ ಪ್ರಮಾದಗಳು ನಮಗೆ ನೀಡುವ ಪಾಠ ಒಂದೇ- ದೇಶದ ಭದ್ರತೆ ಎಂಬುದು ಮಾತಿನ ವಿಷಯವಲ್ಲ, ಅದು ಜವಾಬ್ದಾರಿಯ ವಿಷಯ. ನಾಯಕತ್ವದ ಒಂದು ಮಾತು ದೇಶವನ್ನು ಮುನ್ನಡೆಸಬಹುದು, ಅದೇ ಮಾತು ದೇಶವನ್ನು ಹಿಂದೆ ತಳ್ಳಬಹುದು.