Narada Sanchara: ಸಿಂಗ್ ಈಸ್ ಮಿಂಚಿಂಗ್!
ಕೇಂದ್ರ ಸಚಿವ ಡಾ.ಜಿತೇಂದ್ರ ಪ್ರಸಾದ್ ಅವರು ಈ ಜಾಣನುಡಿಯನ್ನು ಆಗಾಗ ಉಲ್ಲೇಖಿಸುವುದು ಮಾತ್ರವಲ್ಲದೆ, ಅದರಂತೆಯೇ ನಡೆದುಕೊಳ್ಳುವುದೂ ಉಂಟಂತೆ. ಇದಕ್ಕೊಂದು ಉದಾಹರಣೆ ಬೇಕೇ? 10 ವರ್ಷಗಳ ಹಿಂದೆ ಅವರು ದೆಹಲಿಯ ಲೂಟ್ಯೆನ್ಸ್ ಪ್ರದೇಶದಲ್ಲಿನ ತಮ್ಮ ಬಂಗಲೆ ಯನ್ನು ಪ್ರವೇಶಿಸಿದ ನಂತರ ಮಾಡಿದ ಮೊಟ್ಟಮೊದಲ ಕೆಲಸವೇನು ಗೊತ್ತೇ- ಬಂಗಲೆಯ ಚಾವಣಿಯ ಮೇಲೆ ಸೌರವಿದ್ಯುತ್ ಉತ್ಪಾದನೆಯ ಫಲಕಗಳನ್ನು ಅಳವಡಿಸಲು ಏರ್ಪಾಡು ಮಾಡಿದ್ದು
ನಾರದ ಸಂಚಾರ
ಆಡದೆಲೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮನು, ಅಧಮ ತಾನಾ ಡಿಯೂ ಮಾಡದವನು" ಎಂದಿದ್ದಾರೆ ನಮ್ಮ ಸರ್ವಜ್ಞ ಕವಿ. ಕಿಲೋಮೀಟರುಗಟ್ಟಲೆ ಉಪದೇಶ ವನ್ನೇನೋ ನೀಡಬಹುದು, ಆದರೆ ಆಡಿದಂತೆ ನಡೆದು ತೋರಿಸುವುದಿದೆಯಲ್ಲಾ, ಅದು ಶಾನೆ ತ್ರಾಸದ ಕೆಲಸ ಕಣ್ರೀ!
ಆದರೆ ಕೇಂದ್ರ ಸಚಿವ ಡಾ.ಜಿತೇಂದ್ರ ಪ್ರಸಾದ್ ಅವರು ಈ ಜಾಣನುಡಿಯನ್ನು ಆಗಾಗ ಉಲ್ಲೇಖಿಸು ವುದು ಮಾತ್ರವಲ್ಲದೆ, ಅದರಂತೆಯೇ ನಡೆದುಕೊಳ್ಳುವುದೂ ಉಂಟಂತೆ. ಇದಕ್ಕೊಂದು ಉದಾ ಹರಣೆ ಬೇಕೇ? 10 ವರ್ಷಗಳ ಹಿಂದೆ ಅವರು ದೆಹಲಿಯ ಲೂಟ್ಯೆನ್ಸ್ ಪ್ರದೇಶದಲ್ಲಿನ ತಮ್ಮ ಬಂಗಲೆ ಯನ್ನು ಪ್ರವೇಶಿಸಿದ ನಂತರ ಮಾಡಿದ ಮೊಟ್ಟಮೊದಲ ಕೆಲಸವೇನು ಗೊತ್ತೇ- ಬಂಗಲೆಯ ಚಾವಣಿಯ ಮೇಲೆ ಸೌರವಿದ್ಯುತ್ ಉತ್ಪಾದನೆಯ ಫಲಕಗಳನ್ನು ಅಳವಡಿಸಲು ಏರ್ಪಾಡು ಮಾಡಿದ್ದು.
ಇದನ್ನೂ ಓದಿ: Narada Sanchara: ಏಟು-ಎದುರೇಟು!
ಎಲ್ಲರಿಗೂ ಗೊತ್ತಿರುವಂತೆ ಜಿತೇಂದ್ರ ಸಿಂಗ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನದ ಖಾತೆಗಳನ್ನು ನಿರ್ವಹಿಸುತ್ತಿರುವುದರಿಂದ, ಅವರ ಅಧಿಕೃತ ಕಚೇರಿಯಲ್ಲಿನ ಲಗತ್ತಾದ ಅಥವಾ ಆಯಕಟ್ಟಿನ ಜಾಗದಲ್ಲಿ ಪ್ರತಿಷ್ಠಾಪನೆಗೊಳ್ಳುವಂಥ ಹೆಮ್ಮೆ ಮತ್ತು ಸೌಭಾಗ್ಯ ಈ ಸೌರ ಫಲಕಗಳಿಗೆ ಸಿಕ್ಕಿದೆ ಎನ್ನಬೇಕು. ಹೀಗಾಗಿ ‘ಸಿಂಗ್ ಈಸ್ ಮಿಂಚಿಂಗ್’ ಎನ್ನಲಡ್ಡಿಯಿಲ್ಲ, ಅಲ್ಲವೇ?
ಬಜೆಟ್ ಸುತ್ತಲ ಹುಯಿಲು
ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರದಂದು ಬಜೆಟ್ ಮಂಡಿಸಿದ್ದು ನಿಮಗೆ ಗೊತ್ತು. ಅದು ತೆರಿಗೆಯ ಸ್ತರಗಳಲ್ಲಿ ನೀಡಿದ ವಿನಾಯಿತಿಯಿಂದಾಗಿ ಮಧ್ಯಮವರ್ಗದ ವೇತನದಾರ ನೌಕರರು ಶಾನೆ ಖುಷಿಯಾಗಿರುವುದೂ ಈಗಾಗಲೇ ಜಗಜ್ಜಾಹೀರು. ಹೀಗಾಗಿ ಸಮಾಜದ ಈ ವಲಯದಿಂದ ನಿರ್ಮಲಾ ಅವರೆಡೆಗೆ ಮೆಚ್ಚುಗೆಯ ಮಾತುಗಳು ಹರಿದಿವೆ. ಆದರೆ, ‘ಮೊಸರಲ್ಲೂ ಕಲ್ಲು ಹುಡುಕಲು ಹೊರಡುವ ಒಲ್ಲದ ಗಂಡ’ರಂಥ ಕೆಲ ವಿಪಕ್ಷ ನಾಯಕರು ಎಂದಿನಂತೆಯೇ ಅಪಸ್ವರ ಹಾಡಿದ್ದಾರೆ. “ರೈತರ ಕೃಷಿ ಸಾಲ ಮನ್ನಾ ಬಗ್ಗೆ ಈ ಬಜೆಟ್ ಏನೂ ಹೇಳಿಲ್ಲ" ಎಂಬ ರಾಜ್ಯ ಕಾಂಗ್ರೆಸ್ಸಿಗರೊಬ್ಬರ ಹೇಳಿಕೆಯೇ ಈ ಮಾತಿಗೆ ಸಾಕ್ಷಿ.
ಮತ್ತೆ ಕೆಲವು ಜನಸಾಮಾನ್ಯರಂತೂ, “ವೇತನದಾರರ 12 ಲಕ್ಷಗಳವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಅನ್ವಯವಾಗುವುದಿಲ್ಲ ಎಂದೇನೋ ನಿರ್ಮಲಾ ಸೀತಾರಾಮನ್ ಹೇಳಿಬಿಟ್ಟರು; ಆದರೆ ಆ 12 ಲಕ್ಷ ರುಪಾಯಿಗಳನ್ನು ಸಂಪಾದಿಸೋದು ಹೇಗೆ ಅಂತ ಹೇಳಿಕೊಡಲಿಲ್ವಲ್ಲಾ ಶಿವನೇ" ಎನ್ನುತ್ತಾ ವಾಟ್ಸಾಪುಗಳಲ್ಲಿ ಪ್ರಲಾಪಿಸುತ್ತಿದ್ದಾರಂತೆ!
ಒಟ್ಟಿನಲ್ಲಿ, ‘ಎಲ್ಲ ಕಾಲಕ್ಕೂ ಎಲ್ಲ ಜನರನ್ನೂ ಎಲ್ಲ ವಿಧಗಳಲ್ಲೂ ಸಮಾಧಾನಪಡಿಸಲು ಆಗುವು ದಿಲ್ಲ’ ಎಂಬ ಜನಪ್ರಿಯ ಗ್ರಹಿಕೆಗೆ ಈ ಬಾರಿಯ ಬಜೆಟ್ ಮತ್ತೊಮ್ಮೆ ಪುಷ್ಟಿನೀಡಿದೆ ಎನ್ನಲಡ್ಡಿ ಯಿಲ್ಲ!
ನಾರಾಯಣ ನಾರಾಯಣ!
ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ವಿಮಾನದಲ್ಲಿ ತೆರಳಿ, ಅಲ್ಲಿನ ತ್ರಿವೇಣಿ ಸಂಗಮ ದಲ್ಲಿ ಒಮ್ಮೆ ಮಿಂದು, ಇದ್ದಬದ್ದ ಪಾಪಗಳನ್ನೆಲ್ಲಾ ಕಳೆದುಕೊಳ್ಳೋಣಾ ಅಂದ್ರೆ, ಹಾಳಾದ್ದು ಟಿಕೆಟ್ ದರ ವಿಪರೀತವಾಗಿದೆಯಲ್ಲಪ್ಪಾ" ಎಂಬ ಮಧ್ಯಮ ವರ್ಗದ ಕುಟುಂಬ ವೊಂದರ ಮಹಿಳಾಮಣಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಳಂತೆ. ಇದನ್ನು ಕೇಳಿಸಿಕೊಂಡ ಆಕೆಯ ಪತಿರಾಯ, “ಕುಂಭಮೇಳದಲ್ಲಿ ಮೀಯದಿದ್ದರೆ ಏನಾಯಿತು, ಈ ಕುಂಭದಲ್ಲಿರುವ ನೀರಿನಿಂದ ಸ್ನಾನ ಮಾಡಿ, ಮಮ್ಮು ಮಾಡಿ, ಪಾಚ್ಕೋ.." ಎಂದು ಹೇಳುತ್ತಾ, ಮಡಕೆಯಲ್ಲಿ ತಂದಿದ್ದ ನೀರನ್ನು ಆಕೆಯ ತಲೆಮೇಲೆ ಸುರಿದನಂತೆ!