Ravi Sajangadde Column: AI ತಂತ್ರಜ್ಞಾನದಲ್ಲಿ ಪ್ರಭುತ್ವ ಸಾಧಿಸಲು ಪೈಪೋಟಿ !

ಪರಸ್ಪರ ಆರ್ಥಿಕ ನಿರ್ಬಂಧ, ಆಮದು-ರಫ್ತು ನಿರ್ಬಂಧ ಮಾಡುತ್ತಾ ಮೇಲುಗೈ ಸಾಧಿಸಲು ಪ್ರಯತ್ನಿಸು ತ್ತಿವೆ. ಇವೆಲ್ಲದರ ಮಧ್ಯೆ, ಕೆಲ ದಿನಗಳ ಹಿಂದೆ ಚೀನಾದ ಒಂದು ಸಣ್ಣ ಸ್ಟಾರ್ಟ್‌ಅಪ್ ಸಂಸ್ಥೆ ಅಭಿವೃದ್ಧಿ ಪಡಿಸಿ ಹೊರತಂದ ‘ಡೀಪ್ ಸೀಕ್’ ಹೆಸರಿನ ‘ನರೇಟಿವ್ ಎಐ ಮಾಡೆಲ್’ ಅಮೆರಿಕವನ್ನು ಅಕ್ಷರಶಃ ತಲ್ಲಣಗೊಳಿಸಿದೆ!

Ravi Sajangadde Column 010225
Profile Ashok Nayak Feb 1, 2025 9:59 AM

ವಿಶ್ಲೇಷಣೆ

ರವೀ ಸಜಂಗದ್ದೆ

ಉತ್ಪಾದನೆ, ತಂತ್ರಜ್ಞಾನ, ಆವಿಷ್ಕಾರ, ವೈರಸ್ ಹಬ್ಬಿಸುವಿಕೆ ಹೀಗೆ ಯಾವುದೇ ಕ್ಷೇತ್ರವಾದರೂ ಅದರಲ್ಲಿ ಪಾರಮ್ಯ ಸಾಽಸಲು ಚೀನಾ ದೇಶವು ಮುಂದಾಗುವುದು ಹೊಸದೇನಲ್ಲ. ತನ್ನ ಸಂಪನ್ಮೂ ಲಗಳನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಬಳಸಿ ಇಡೀ ವಿಶ್ವವನ್ನು ಕಾಲಕಾಲಕ್ಕೆ ತಲ್ಲಣ ಗೊಳಿಸಲು, ಅಲುಗಾಡಿಸಲು ನಿರಂತರ ಪ್ರಯತ್ನ ಮಾಡುವುದರಲ್ಲಿ ಚೀನಾ ಎತ್ತಿದ ಕೈ.

ಐದು ವರ್ಷಗಳ ಹಿಂದೆ ಕರೋನಾ ವೈರಸ್ ಅನ್ನು ವಿಶ್ವಾದ್ಯಂತ ಹರಡಿಸಿ, ತಲ್ಲಣ, ಅಪಾರ ನಷ್ಟ, ಸಾವು-ನೋವು ಉಂಟುಮಾಡಿದ, ಜಗತ್ತಿನ ಅಭಿವೃದ್ಧಿಗೆ ಒಂದಷ್ಟು ಧಕ್ಕೆ ತಂದ ಆರೋಪ/ಕುಖ್ಯಾತಿ ಚೀನಾದ ಮೇಲಿದೆ. ವಿಶ್ವದ ವಿವಿಧೆಡೆ ನಡೆಯುತ್ತಿರುವ ಸಂಘರ್ಷಕ್ಕೆ/ಯುದ್ಧಕ್ಕೆ ಬೆಂಬಲ ನೀಡುವ ಮೂಲಕ ಚೀನಾ, ರಷ್ಯಾ ಮತ್ತು ಅಮೆರಿಕ ತಂತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ, ಪ್ರಾಬಲ್ಯ ಮೆರೆಯಲು ಕಸರತ್ತು ನಡೆಸುತ್ತಿವೆ. ದುಡ್ಡು ಮತ್ತಿತರ ಸಂಪನ್ಮೂಲಗಳನ್ನು ವ್ಯಾಪಕವಾಗಿ ವ್ಯಯಿ ಸುತ್ತಿವೆ.

ಇದನ್ನೂ ಓದಿ: Ravi Sajangadde Column: ರೂಪಾಯಿ ಮೌಲ್ಯ ಕುಸಿತ: ಏನು, ಯಾಕೆ, ಹೀಗೆ ?

ಜತೆಗೆ, ಪರಸ್ಪರ ಆರ್ಥಿಕ ನಿರ್ಬಂಧ, ಆಮದು-ರಫ್ತು ನಿರ್ಬಂಧ ಮಾಡುತ್ತಾ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿವೆ. ಇವೆಲ್ಲದರ ಮಧ್ಯೆ, ಕೆಲ ದಿನಗಳ ಹಿಂದೆ ಚೀನಾದ ಒಂದು ಸಣ್ಣ ಸ್ಟಾರ್ಟ್‌ಅಪ್ ಸಂಸ್ಥೆ ಅಭಿವೃದ್ಧಿಪಡಿಸಿ ಹೊರತಂದ ‘ಡೀಪ್ ಸೀಕ್’ ಹೆಸರಿನ ‘ನರೇಟಿವ್ ಎಐ ಮಾಡೆಲ್’ ಅಮೆರಿಕ ವನ್ನು ಅಕ್ಷರಶಃ ತಲ್ಲಣಗೊಳಿಸಿದೆ!

ಕಳೆದೊಂದು ವಾರದಿಂದ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಈ ಉಚಿತ, ಸರಳ ಅಪ್ಲಿಕೇಶನ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ ಮತ್ತು ಕುತೂಹಲ ಮೂಡಿಸಿದೆ. ಈ ಕುರಿತ ಒಂದಿಷ್ಟು ಮಾಹಿತಿ ಯ ಕಡೆಗೆ ಕಣ್ಣು ಹಾಯಿಸೋಣ. ‘ಚೀನಾ ದೇಶವು ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಾರದು, ನಾನೇ ಈ ಕ್ಷೇತ್ರವನ್ನು ಆಳಬೇಕು’ ಎಂಬ ಮಹತ್ವಾಕಾಂಕ್ಷೆಯಿಂದ ಅಮೆರಿಕವು ಚೀನಾಕ್ಕೆ ಚಿಪ್ಗ ಳ ಸರಬರಾಜಿನ ಮೇಲೆ ನಿರ್ಬಂಧ ಹೇರಿತ್ತು.

ಈ ಚಿಪ್‌ನ ಬಳಕೆಯ ಮೂಲಕ ಮಾತ್ರವಷ್ಟೇ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಮಾರು ಕಟ್ಟೆಗೆ ಬಿಡಲು ಸಾಧ್ಯ ಎಂದು ಅಮೆರಿಕ ನಂಬಿತ್ತು. ಆದರೀಗ, ಒಂದು ಪ್ರಬಲವಾದ ಎಐ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಲು ದುಬಾರಿ ಮತ್ತು ಶಕ್ತಿಶಾಲಿ ಚಿಪ್ ಅಥವಾ ಜಿಪಿಯು ಅನಿವಾ ರ್ಯವಲ್ಲ ಎಂಬುದು ಸಾಬೀತಾಗಿದೆ.

‘ಡೀಪ್ ಸೀಕ್’ ಎನ್ನುವ ಈ ಚೀನಾ ನಿರ್ಮಿತ, ಚಿಪ್-ರಹಿತ ನರೇಟಿವ್ ಎಐ ಮಾದರಿಯು ಒಂದೇ ದಿನದಲ್ಲಿ ಟ್ರಿಲಿಯನ್ ಡಾಲರ್ ಮೌಲ್ಯವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ನೀವಾಳಿಸಿ ತೆಗೆದಿದೆ! ಈ ಡೀಪ್ ಸೀಕ್ ತಂತ್ರಜ್ಞಾನ ಬಿಡುಗಡೆಯಾದ ಒಂದೇ ದಿನದಲ್ಲಿ ಅಮೆರಿಕದ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾದ ಮಾರುಕಟ್ಟೆ ಮೌಲ್ಯವು ಸುಮಾರು 600 ಬಿಲಿಯನ್ ಡಾಲರ್ನ ಷ್ಟು (52 ಲಕ್ಷ ಕೋಟಿ ರು.) ಕುಸಿತ ಕಂಡಿದೆ. ಅಲ್ಲಿಗೆ ಚಿಪ್ ಮತ್ತಿತರ ದೈತ್ಯ ತಂತ್ರಜ್ಞಾನ ಕಂಪನಿಗಳ ಒಟ್ಟಾರೆ ಮೌಲ್ಯ ಇನ್ನಿಲ್ಲದಂತೆ ಕುಸಿದಿದೆ.

ಎಲ್ಲಾ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ತಯಾರಿಸುವ ಸಾಮರ್ಥ್ಯವಿರುವ ಮತ್ತು ಜಾಗತಿಕ ಉತ್ಪಾದಕ ರಾಷ್ಟ್ರವಾಗಿದ್ದ ಚೀನಾ, ಅಮೆರಿಕದ ಬಹುದೊಡ್ಡ ಎಐ ತಂತ್ರಜ್ಞಾನ ಉತ್ಪನ್ನವಾದ ಚಾಟ್ ಜಿಪಿಟಿಯ ತದ್ರೂಪದಂತಿರುವ ಈ ಡೀಪ್ ಸೀಕ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡು ತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಇಂಥದೊಂದು ಸಂಚಲನವಾಗಿದೆ ಎಂಬುದು ಗಮನಾರ್ಹ. ಡೀಪ್ ಸೀಕ್ ಎಂಬ ಈ ಅಪ್ಲಿಕೇಶನ್ ಬಿಡುಗಡೆಯಾಗುತ್ತಿದ್ದಂತೆ, ಚಾಟ್ ಜಿಪಿಟಿ ಸೇರಿದಂತೆ ಎಐ ತಂತ್ರಜ್ಞಾನ ವಲಯದ ಎಲ್ಲಾ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ, ಅಮೆರಿಕ ಮತ್ತು ಹಲವು ದೇಶಗಳಲ್ಲಿ ಹೆಚ್ಚು ಡೌನ್‌ಲೋಡ್ ಆದ ಅಪ್ಲಿಕೇಶನ್ ಎನ್ನುವ ದಾಖಲೆ ಬರೆಯಿತು.

ಚಾಟ್ ಜಿಪಿಟಿ ಮಾಡುವ ಕೆಲಸಕ್ಕಿಂತ ಹೆಚ್ಚಿನ ನಿಖರತೆ ಮತ್ತು ವೇಗದಲ್ಲಿ ಡೀಪ್ ಸೀಕ್ ಕಾರ್ಯ ನಿರ್ವಹಿಸುತ್ತದೆ. ಡೀಪ್ ಸೀಕ್ ತಂತ್ರಜ್ಞಾನದ ಈ ಸಾಧನೆ ಅನೇಕರ ನಿರೀಕ್ಷೆಗಳನ್ನು ತಲೆಕೆಳ ಗಾಗಿಸಿದೆ. ಒಂದೆರಡು ವರ್ಷಗಳ ಹಿಂದೆ, ಚೀನಾದ ಎಐ ತಂತ್ರಜ್ಞಾನ ಕ್ಷೇತ್ರವು ಅಮೆರಿಕಕ್ಕಿಂತ ತುಂಬಾ ಹಿಂದೆ ಉಳಿದಿದೆ ಎಂದು ಅಂದಾಜಿಸಲಾಗಿತ್ತು; ಈಗ ಡೀಪ್ ಸೀಕ್ ಎಐ ತಂತ್ರಜ್ಞಾನವು ನಿಜವಾದ ಮತ್ತು ಪ್ರಬಲವಾದ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ.

ಚೀನಾದ ಎಐ ಪರಿಣತಿ ಮತ್ತು ಸಂಶೋಧನೆ ವ್ಯವಸ್ಥೆಯು ಹೊಸ ಹೊಸ ಆವಿಷ್ಕಾರಗಳನ್ನು ಯಶಸ್ವಿಯಾಗಿ ನಡೆಸಲು ಸಮರ್ಥವಾಗಿದೆ ಎಂಬುದು ಸಾಬೀತಾದಂತಾಗಿದೆ. ಚೀನಾದ ಬಳಿ ಡೀಪ್ ಸೀಕ್‌ಗಿಂತ ಹೆಚ್ಚು ಸಾಮರ್ಥ್ಯದ ಮತ್ತು ಪ್ರಭಾವಶಾಲಿಯಾದ ಇನ್ನಷ್ಟು ಎಐ ಅಪ್ಲಿಕೇಶನ್‌ಗಳು ಸಿದ್ಧವಿವೆ ಎಂಬ ಮಾಹಿತಿಯೂ ಅಮೆರಿಕಕ್ಕೆ ಇನ್ನಷ್ಟು ಗೊಂದಲ, ಗಾಬರಿ ಮತ್ತು ಹೆದರಿಕೆಯನ್ನು ಉಂಟುಮಾಡಿದೆ. ಇದು ನಿಜವಾದಲ್ಲಿ ಜಗದಗಲ ತಲ್ಲಣವು ಮತ್ತಷ್ಟು ಹೆಚ್ಚಾಗುವುದು ಖಂಡಿತ.

ಜಾಗತಿಕವಾಗಿ ಇಷ್ಟೊಂದು ಸದ್ದು ಮಾಡುತ್ತಿರುವ ಹಾಗೂ ಅಮೆರಿಕಕ್ಕೆ ಬಲವಾದ ಪೆಟ್ಟು ನೀಡಿ ರುವ ಡೀಪ್ ಸೀಕ್‌ನಲ್ಲಿ ಏನೇನಿದೆ? ಎಂದು ಪ್ರಶ್ನಿಸಿದರೆ, ‘ಎಲ್ಲವೂ ಇದೆ’ ಎಂದು ಉತ್ತರಿಸ ಬೇಕಾ ದೀತು! ಇದು ಬಳಕೆದಾರ-ಸ್ನೇಹಿ ಅಪ್ಲಿಕೇಶನ್. ಹಾಗಾಗಿ ಆಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ ಲೋಡ್ ಮಾಡಿಕೊಳ್ಳಬಹುದಾದ ಆಪ್‌ಗಳಲ್ಲಿ ಇದು ಒಂದೇ ವಾರದೊಳಗೆ ಅಗ್ರಸ್ಥಾನದಲ್ಲಿ ವಿರಾಜ ಮಾನವಾಗಿದೆ.

ಇದನ್ನು ಯಾರು ಬೇಕಾದರೂ ಬಿಟ್ಟಿಯಾಗಿ ಬಳಸಿಕೊಳ್ಳಬಹುದು ಮತ್ತು ತಮಗೆ ಬೇಕಾದಂತೆ ಅಭಿವೃದ್ಧಿಪಡಿಸಿಕೊಳ್ಳಬಹುದು. ಈ ಅಂಶವೇ ತಂತ್ರಜ್ಞಾನ ವಲಯದ ದಿಗ್ಗಜರ ನಿದ್ರೆಗೆಡಿಸಿದೆ ಮತ್ತು ಆತಂಕಕ್ಕೂ ಕಾರಣವಾಗಿದೆ. ಚಾಟ್ ಜಿಪಿಟಿ, ಜೆಮಿನಿ ಮುಂತಾದ ಕೃತಕ ಬುದ್ಧಿಮತ್ತೆ ಆಧರಿ ಸಿದ ಅಪ್ಲಿಕೇಶನ್‌ಗಳಲ್ಲಿ ಬಳಕೆಯಾಗುವ ‘ಲಾರ್ಜ್ ಲಾಂಗ್ವೇಜ್ ಮಾಡೆಲ್ (ಎಲ್‌ಎಲ್‌ಎಂ) ವ್ಯವಸ್ಥೆ ಮತ್ತು ನೈಪುಣ್ಯವನ್ನು ಡೀಪ್ ಸೀಕ್ ಕೂಡ ಬಳಸುತ್ತಿದೆ.

ಇದರ ‘ಆರ್ ೧’ ಆವೃತ್ತಿಯು ಮತ್ತಷ್ಟು ವಿಸ್ತೃತ, ಆಧುನಿಕ ಮತ್ತು ಅಭಿವೃದ್ಧಿಪಡಿಸಲಾದ ರೂಪಾಂ ತರವಾಗಿದೆ. ಎನ್ವಿಡಿಯಾದಂಥ ಅಮೆರಿಕದ ದೈತ್ಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಚಿಪ್‌ಗಳ ಬಳಕೆ ಮಾಡದೆಯೇ ಈ ಡೀಪ್ ಸೀಕ್ ಮಾಡೆಲ್ ಸಂಪೂರ್ಣ ಸಜ್ಜುಗೊಂಡು ವಿಶ್ವಾದ್ಯಂತ ಸೇವೆಗೆ ಲಭ್ಯವಿರುವುದನ್ನು ಅಮೆರಿಕಕ್ಕೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ!

ಈ ಎಲ್ಲಾ ಬೆಳವಣಿಗೆಗಳು ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಒಂದಿಷ್ಟು ಅರಿಯೋಣ. ಚೀನಾ ಮತ್ತು ಅಮೆರಿಕ ನಡುವಿನ ಈ ‘ತಂತ್ರಜ್ಞಾನ ಜಗ್ಗಾಟ’ದಲ್ಲಿ ಭಾರತ ಕ್ಕೆ ತಕ್ಷಣಕ್ಕೆ ಹೆಚ್ಚಿನ ನಷ್ಟ ಅಥವಾ ತೊಂದರೆಯಿಲ್ಲ ಎನಿಸುತ್ತದೆ. ಆದರೆ, ಈ ಜಗ್ಗಾಟವು ಯುದ್ಧವಾಗಿ ಪರಿಣಮಿಸಿದರೆ, ಮುಂದಿನ ದಿನಗಳಲ್ಲಿ ಭಾರತವೂ ಸೇರಿದಂತೆ ಅನೇಕ ದೇಶಗಳನ್ನು ನಿಯಂತ್ರಿಸಲು ಚೀನಾ ಮತ್ತು ಅಮೆರಿಕ ಯತ್ನಿಸಬಹುದು.

ಎಐ ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾಕ್ಕೆ ಹೋಲಿಸಿದರೆ ಭಾರತವು ಬಹಳ ಹಿಂದಿದೆ. ಹೀಗಾಗಿ ನಮ್ಮ ದೇಶದಲ್ಲಿರುವ ಪರಿಣತರನ್ನು, ಕುಶಲಮತಿ ತಂತ್ರಜ್ಞರನ್ನು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸುವ ಯೋಜನೆಯನ್ನು ಜಾರಿಮಾಡಲು ಇದು ಸಕಾಲ. ಇದು ಈಗಿನ ತುರ್ತು ಕೂಡ ಹೌದು. ನಮ್ಮಲ್ಲಿರುವ ಅನ್ವೇಷಣಾ ಪ್ರವೃತ್ತಿಯನ್ನು ಸಮರ್ಥವಾಗಿ ಬಳಸಿ ಕೊಂಡರೆ, ಯಾವುದೇ ಕ್ಷೇತ್ರದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಸಿದ್ಧ ಸಮೀಕರಣಗಳನ್ನು ಹೊಡೆದು ಹಾಕಿ ಹೊಸ ಆಯಾಮದೊಂದಿಗೆ ಈ ಕ್ಷೇತ್ರದಲ್ಲಿ ಅನೂಹ್ಯ ಸ್ಪರ್ಧಾಕಣವನ್ನು ಸೃಷ್ಟಿಸಿ ಗೆಲ್ಲಬ ಹುದು ಎಂಬುದನ್ನು ಈ ಡೀಪ್ ಸೀಕ್ ಅಪ್ಲಿಕೇಶನ್ ಮೂಲಕ ಚೀನಾ ತೋರಿಸಿಕೊಟ್ಟಿದೆ.

ಹೀಗೆ ಟ್ಠಠಿ ಟ್ಛ ಠಿeಛಿ ಚಿಟ್ಡ ಯೋಚಿಸಿ ಯಶಸ್ಸು ಪಡೆಯುವುದು ಮತ್ತು ಗೆಲುವಿನ ನಗೆ ಬೀರುವುದು ಸದ್ಯದ ಜಾಗತಿಕ ಟ್ರೆಂಡ್! ಇಂಥ ನವೀನ ಆವಿಷ್ಕಾರ ಮತ್ತು ಸಾಧ್ಯಾಸಾಧ್ಯತೆಗಳನ್ನು ನಿಜವಾಗಿ ಸಲು ಬೇಕಿರುವುದು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ತಂತ್ರಜ್ಞಾನದ ಅಭಿವೃದ್ಧಿಯ ಕಟ್ಟಾಸೆ ಮತ್ತು ದಕ್ಷ ಮಾನವ ಸಂಪನ್ಮೂಲ. ನಮ್ಮ ದೇಶದಲ್ಲಿ ಇದ್ಯಾವುದಕ್ಕೂ ಕೊರತೆಯಿಲ್ಲ. ನಮ್ಮದೇ ವಿಶಿಷ್ಟ ಉತ್ಪನ್ನಗಳನ್ನು ಸೃಷ್ಟಿಸಿ, ಜಗತ್ತೇ ಬೆರಗಾಗುವಂತೆ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇದೆಯಾದರೂ, ‘ಹೊಸ ಆಟ’, ‘ಹೊಸ ವ್ಯಾಖ್ಯಾನ’ದ ಮೂಲಕ ಜಗತ್ತನ್ನು ಆಳುವ ಆ ತವಕ, ಹಸಿವು, ಕ್ಷಮತೆಯ ಕೊರತೆಯಿದೆ.

ದೇಶದ ಶಿಕ್ಷಣ ವಲಯವೂ ಈ ದಿಸೆಯಲ್ಲಿ ನಿರೀಕ್ಷಿತ ಕೊಡುಗೆ ನೀಡುತ್ತಿಲ್ಲ ಎಂಬುದು ಬೇಸರದ ಸಂಗತಿ. ಬದಲಾಗುತ್ತಿರುವ ಎಐ ತಂತ್ರಜ್ಞಾನ ಕೇಂದ್ರಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಕಂಪನಿಗಳು ಪ್ರಸ್ತುತತೆ ಉಳಿಸಿಕೊಳ್ಳಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಮಾಹಿತಿ ಸಂಗ್ರ ಹಣೆ ಮತ್ತು ವಿಶ್ಲೇಷಣೆ ( data collection and analysis) ಮುಂದಿನ ದಿನಗಳಲ್ಲಿ ಪ್ರಪಂಚ ವನ್ನು ಆವರಿಸಿಕೊಳ್ಳಲಿದೆ. ಯಾರ ಬಳಿ ಅತಿಹೆಚ್ಚು ಮತ್ತು ನಿಖರ ಮಾಹಿತಿ ಇದೆಯೋ, ಆ ದೇಶವು ಜಗ ತ್ತನ್ನು ಆಳಲಿದೆ. ಈ ನಿಟ್ಟಿನಲ್ಲಿ ನೋಡಿದಾಗ, ಭಾರತಕ್ಕೆ ತನ್ನದೇ ಆದ ಎಐ ತಂತ್ರಜ್ಞಾನ ಆಧರಿತ ಟೂಲ್ ಒಂದರ ಅವಶ್ಯಕತೆ ಇದೆ.

ಇಲ್ಲವಾದರೆ ಜನರು ಚಾಟ್ ಜಿಪಿಟಿ, ಡೀಪ್ ಸೀಕ್ ಮುಂತಾದ ವಿದೇಶಿ ಅಪ್ಲಿಕೇಶನ್‌ಗಳನ್ನು ಬಳಸು ತ್ತಾರೆ ಮತ್ತು ಅವಕ್ಕೆ ಒಗ್ಗಿಕೊಳ್ಳುತ್ತಾರೆ. ಅವರ ಎಲ್ಲಾ ಮಾಹಿತಿಗಳು ಆ ಅಪ್ಲಿಕೇಶನ್ ಅನ್ನು ಹೊರ ತಂದ ದೇಶದಲ್ಲಿ ಸಂಗ್ರಹವಾಗುತ್ತವೆ. ಬಳಸಿ ಅನುಭವವಾದ ಕಾರಣ, ಒಂದು ಅಪ್ಲಿಕೇಶನ್ ಬಳಸಿ ಅದಕ್ಕೆ ಹೊಂದಿಕೊಂಡರೆ, ಮುಂದಿನ ದಿನಗಳಲ್ಲಿ ನಮ್ಮದೇ ಆದ ಅಪ್ಲಿಕೇಶನ್ ಬಂದರೂ ಉಪ ಯೋಗಿಸಲು ಜನರು ಹಿಂದೇಟು ಹಾಕುತ್ತಾರೆ.

ಎಐ ಆಧರಿತ ಇಂಟೆಲಿಜೆನ್ಸ್ ಡೇಟಾವನ್ನು ವಿಶ್ಲೇಷಿಸುವ ಮೂಲಕ, ವ್ಯಕ್ತಿ, ಪ್ರದೇಶ, ಸಮಾಜ, ಸಮು ದಾಯ, ರಾಜ್ಯ, ದೇಶ, ಪ್ರಪಂಚವನ್ನು ಕ್ಷಣಾರ್ಧದಲ್ಲಿ ಅಲ್ಲೋಲಕಲ್ಲೋಲಗೊಳಿಸುವಂಥ ಕೆಲಸ ವನ್ನು ಮಾಡಬಹುದಾದ ಜಗತ್ತಿನಲ್ಲಿ ನಾವಿದ್ದೇವೆ. ಈ ಕುರಿತು ಸರಕಾರ ಯೋಚಿಸಿ ಶೀಘ್ರವಾಗಿ ಕಾರ್ಯಪ್ರವೃತ್ತವಾಗಬೇಕಿದೆ. ಎಐ ತಂತ್ರಜ್ಞಾನವನ್ನು ಆಧರಿಸಿದ ಭಾರತದ್ದೇ ಆದ ಟೂಲ್ ಒಂದನ್ನು ಈ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಆಶ್ವಾಸನೆಯನ್ನು ಕೇಂದ್ರ ಸರಕಾರ ನೀಡಿರು ವುದು ಸಂತಸದ ಬೆಳವಣಿಗೆ. ಕಂಡು ಕೇಳರಿಯದ ಹೊಸತೊಂದು ಬದಲಾವಣೆಯ ಮನ್ವಂತರಕ್ಕೆ ಜಗತ್ತು ಹೊರಳುತ್ತಿರುವುದಂತೂ ಸ್ಪಷ್ಟ.

‘ಏನಾದೀತು?’ ಎಂಬ ಕುತೂಹಲ ನಿರಂತರ ಇರಲಿ. ‘ಕಾಲಾಯ ತಸ್ಮೈ ನಮಃ’ ಎನ್ನೋಣ!

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್