Ravi Sajangadde Column: ರೂಪಾಯಿ ಮೌಲ್ಯ ಕುಸಿತ: ಏನು, ಯಾಕೆ, ಹೀಗೆ ?

ಇತ್ತೀಚಿನವರೆಗೆ, ಅಮೆರಿಕದಲ್ಲಿ ಯಾವ ಪಕ್ಷದವರು ಅಧಿಕಾರಕ್ಕೆ ಬಂದರೂ, ಭಾರತ ದೊಂದಿಗಿನ ಸಂಬಂಧದಲ್ಲಿ ಹೇಳಿಕೊಳ್ಳುವಂಥ ಬಾಂಧವ್ಯ, ಪರಸ್ಪರ ಸಹಯೋಗ ಇರಲಿಲ್ಲ ವೆಂದೇ ಹೇಳಬೇಕು. ಅದಕ್ಕೆ ಕಾರಣಗಳು ಹಲವಾರು.

Sajangadde
Profile Ashok Nayak January 17, 2025

Source : Vishwavani Daily News Paper

ವಿಶ್ಲೇಷಣೆ

ರವೀ ಸಜಂಗದ್ದೆ

ಕೆಂಪಾದವೋ ಎಲ್ಲ ಟ್ರಂಪಾದವೋ! ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಅಮೆರಿಕ ಅಧ್ಯ

ಕ್ಷೀಯ ಚುನಾವಣೆಯಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್, ಜನವರಿ 20ರಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿ, 45ನೆಯ ಅಧ್ಯಕ್ಷರಾಗಿ ಗದ್ದುಗೆ ಏರಲಿದ್ದಾರೆ. ಅಲ್ಲಿಗೆ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ‘ಅಮೆರಿಕ ಅಧ್ಯಕ್ಷೀಯ ಚುನಾವಣೆ’ ಪ್ರಕ್ರಿಯೆಗೆ ತಾರ್ಕಿಕ ಅಂತ್ಯ ಸಿಗಲಿದೆ.

ಇತ್ತೀಚಿನವರೆಗೆ, ಅಮೆರಿಕದಲ್ಲಿ ಯಾವ ಪಕ್ಷದವರು ಅಧಿಕಾರಕ್ಕೆ ಬಂದರೂ, ಭಾರತ ದೊಂದಿಗಿನ ಸಂಬಂಧದಲ್ಲಿ ಹೇಳಿಕೊಳ್ಳುವಂಥ ಬಾಂಧವ್ಯ, ಪರಸ್ಪರ ಸಹಯೋಗ ಇರಲಿಲ್ಲವೆಂದೇ ಹೇಳಬೇಕು. ಅದಕ್ಕೆ ಕಾರಣಗಳು ಹಲವಾರು. 2014ರ ತರುವಾಯದಲ್ಲಿ, ಭಾರತದಲ್ಲಿ ಸ್ಥಿರ ಸರಕಾರ, ಸಮರ್ಥ ನಾಯಕತ್ವ ಮತ್ತು ದಕ್ಷ ಆಡಳಿತ ತಂಡವು ಅಧಿಕಾರಕ್ಕೆ ಬಂದ ನಂತರವಷ್ಟೇ ದ್ವಿಪಕ್ಷೀಯ ಬಾಂಧವ್ಯದಲ್ಲಿ ವರ್ಧನೆಯಾಗಿದೆ. ಒಂದು

ಕಾಲಕ್ಕೆ, ‘ಅಮೆರಿಕಕ್ಕೆ ನೆರವಾಗುವ ನಿರ್ಣಯಗಳು ಮಾತ್ರ’ ಈ ದ್ವಿಪಕ್ಷೀಯ ಸಂಬಂಧದಲ್ಲಿ ಅಂಗೀಕಾರವಾಗುತ್ತಿದ್ದವು; ಆದರೀಗ ಬದಲಾದ ಕಾಲಘಟ್ಟದಲ್ಲಿ, ಭಾರತವೂ ದ್ವಿಪಕ್ಷೀಯ

ನಿರ್ಣಯಗಳನ್ನು ತೆಗೆದುಕೊಳ್ಳುವಂಥ ಮತ್ತು ಭಾರತದ ಅಭಿಪ್ರಾಯಗಳೂ ಅಮೆರಿಕದ ನಿರ್ಧಾರಗಳ ಮೇಲೆ ಪ್ರಭಾವ ಬೀರುವಂಥ ಸನ್ನಿವೇಶ ನಿರ್ಮಾಣವಾಗಿದೆ.

ಅಂಥ ಸದೃಢ ರಾಷ್ಟ್ರವಾಗಿ ಭಾರತ ರೂಪುಗೊಂಡಿದೆ. ಆರ್ಥಿಕ, ವಾಣಿಜ್ಯ, ರಫ್ತು, ಉತ್ಪಾ ದನೆ, ಕೈಗಾರಿಕೆ ಮತ್ತಿತರ ವಿಭಾಗಗಳಲ್ಲಿ ಭಾರತ ಮತ್ತು ಅಮೆರಿಕ ಪರಸ್ಪರ ಸಹಕಾರದ ಮೂಲಕ ದ್ವಿಪಕ್ಷೀಯ ಪ್ರಗತಿ ಸಾಧಿಸಿರುವುದು ನಿರ್ವಿವಾದ. ಟ್ರಂಪ್‌ರ ಸಿಂಹಾಸನಾ ರೋಹಣ ಸನ್ನಿಹಿತವಾಗುತ್ತಿದ್ದಂತೆಯೇ ವಿಶ್ವಾದ್ಯಂತದ ಷೇರುಪೇಟೆಗಳು ನಿರೀಕ್ಷೆ ಯಂತೆಯೇ ಒಂದಷ್ಟು ಸಂಚಲನವನ್ನು ಕಂಡಿವೆ, ಹಲವಾರು ಏರಿಳಿತಗಳು ಸಂಭವಿಸಿವೆ. ಭಾರತದಲ್ಲಿ ಅಷ್ಟೇನೂ ಪ್ರಭಾವ ಆಗಲಿಲ್ಲವಾದರೂ, ಹಣಕಾಸು ತಜ್ಞರು ಊಹಿಸಿದಂತೆ ಅಮೆರಿಕನ್ ಡಾಲರ್ ಎದುರು ರುಪಾಯಿ ಒಂದಷ್ಟು ಕುಸಿತ ಕಂಡಿದೆ.

ಹೀಗೇಕಾಯಿತು ಎಂಬುದರ ಕುರಿತಾದ ವಿವರಗಳನ್ನು ಸರಳವಾಗಿ ಅರಿಯಲು ಯತ್ನಿ ಸೋಣ. ಡಾಲರ್‌ನೆದುರು ರುಪಾಯಿಯು ಶೇ.8-10ರಷ್ಟು ಕುಸಿಯಬಹುದು ಎಂಬುದಾಗಿ, ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಆರ್‌ಬಿಐ ಅಂದಾಜಿಸಿತ್ತು. ಇದರ ಜತೆಗೆ, ಕಳೆದ ವಾರ ಹೊರಬಿದ್ದ ಅಲ್ಲಿನ ಮಾರುಕಟ್ಟೆ ವರದಿಯೂ ಡಾಲರ್ ಮೌಲ್ಯವು ಬಲವಾಗಲು ಮತ್ತೊಂದು ಕಾರಣವಾಯಿತು.

ಡಿಸೆಂಬರ್ ತಿಂಗಳಿನಲ್ಲಿ 160000 ಉದ್ಯೋಗ ಸೃಷ್ಟಿಯ ಅಂದಾಜಿನ ಎದುರು, 256000 ದಷ್ಟು ಉದ್ಯೋಗಗಳು ಅಮೆರಿಕದಲ್ಲಿ ಸೃಷ್ಟಿಯಾಗಿವೆ. ಅಲ್ಲಿನ ನಿರುದ್ಯೋಗ ದರ ಶೇ.4.2 ರಿಂದ 4.1ಕ್ಕೆ ಕುಸಿದಿದೆ. ಇದು ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ವೃದ್ಧಿ ಸಲು ಬಲವಾದ ಕಾರಣ. ಈ ಧನಾತ್ಮಕ ವಿವರಗಳು ಅಮೆರಿಕದ ಫೆಡರಲ್ ರಿಸವ್ ನ ಉದ್ದೇಶಿತ ಬಡ್ಡಿದರ ಕಡಿತದ ಸಾಧ್ಯತೆಯನ್ನು ತಗ್ಗಿಸಿದೆ.

ಶೇ.1ರಷ್ಟು ಬಡ್ಡಿದರ ಕಡಿತದ ಈ ಹಿಂದಿನ ನಿರೀಕ್ಷೆಗೆ ಹೋಲಿಸಿದರೆ, ಶೇ.0.5ರಷ್ಟು ಬಡ್ಡಿದರ ಕಡಿತವಷ್ಟೇ ಆದೀತೆಂದು ಮಾರುಕಟ್ಟೆ ನಿರೀಕ್ಷಿಸುತ್ತಿದೆ. ಹೂಡಿಕೆದಾರರಿಗೆ ಇದು ಶುಭ ಸುದ್ದಿ. ಹಾಗಾಗಿ ಡಾಲರ್ ಒಂದಷ್ಟು ಪ್ರಬಲವಾಗುತ್ತಿದೆ- ಪರಿಣಾಮವಾಗಿ ರುಪಾಯಿ ಮೌಲ್ಯ ಒಂದಷ್ಟು ಕುಸಿಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿರುವುದೂ ರುಪಾಯಿ ಮೌಲ್ಯ ಕುಸಿಯಲು ಇನ್ನೊಂದು ಕಾರಣ. ರಷ್ಯಾ ದೇಶದ ಕಚ್ಚಾತೈಲ ಸರಬರಾಜು ವ್ಯವಸ್ಥೆಯ ಕುರಿತಾದ ತನ್ನ ಈಗಿನ ನಿರ್ಬಂಧಗಳನ್ನು ಅಮೆರಿಕ ಇನ್ನಷ್ಟು ಬಿಗಿಗೊಳಿಸುವ ಸಾಧ್ಯತೆ ಕಾಣುತ್ತಿದೆ.

ಹಾಗಾದಾಗ, ಭಾರತ ಮತ್ತು ಚೀನಾದಂಥ ಪ್ರಮುಖ ಆಮದುದಾರರ ಮೇಲೆ ಈ ಮುಂದು ವರಿದ ನಿರ್ಬಂಧಗಳು ವ್ಯತಿರಿಕ್ತ ಪರಿಣಾಮ ಬೀರಬಹುದು. ರುಪಾಯಿ ಮೌಲ್ಯವು ಒಂದಷ್ಟು ದುರ್ಬಲವಾಗಲು ತೈಲಬೆಲೆ ಏರಿಕೆಯೂ ಸಹಕರಿಸುವಂತೆ ಭಾಸವಾಗುತ್ತಿದೆ. ಭಾರತವು ತೈಲದ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿರುವುದರಿಂದ, ಕಚ್ಚಾತೈಲ ಬೆಲೆಯು ಏರಿಕೆಯ ಗತಿಯಲ್ಲಿರುವುದರಿಂದ ಮತ್ತು ಆಮದು ಹಣದುಬ್ಬರ ಏರಿಕೆಯಾಗು ತ್ತಿರುವುದರಿಂದ ರುಪಾಯಿ ಮೌಲ್ಯದಲ್ಲಿನ ಕುಸಿತವನ್ನು ಕಾಣುತ್ತಿದ್ದೇವೆ.

ಹೊಸದಾಗಿ ಅಧಿಕಾರ ಹಿಡಿಯಲು ಸಿದ್ಧರಾಗಿರುವ ಟ್ರಂಪ್ ಅವರ ನಿರ್ಬಂಧಗಳು ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ನೀತಿಯ ಕುರಿತಾದ ಅನಿಶ್ಚಿತತೆಯೂ, ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯದ ಮೇಲೆ ಒಂದಷ್ಟು ಪ್ರಭಾವ ಬೀರಿದೆ. ಟ್ರಂಪ್ ನೀಡುತ್ತಿರುವ ತೆರಿಗೆ ಕಡಿತ, ಭೌಗೋಳಿಕ ವಿಘಟನೆ-ಆಕ್ರಮಣ-ಸ್ವಾಧೀನ ಕುರಿತ ಹೇಳಿಕೆಗಳು, ವಿವಿಧ ದೇಶಗಳಿಂದ ಆಮದು ಮಾಡುವ ಸೇವೆಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಪ್ರಸ್ತಾವನೆ ಕೂಡ ಡಾಲರ್ ಮೌಲ್ಯದ ವೃದ್ಧಿಗೆ ಮತ್ತು ಅದರ ಎದುರು ರುಪಾಯಿ ಮೌಲ್ಯದ ಕುಸಿತಕ್ಕೆ ಕಾರಣೀಭೂತವಾಗಿವೆ.

ಮುಂದಿನ ದಿನಗಳಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ವಲಯದ ಸೇವೆಗಳಿಗೆ ಅಮೆರಿಕವು ಹೆಚ್ಚಿನ ಸುಂಕ ವಿಧಿಸುವ ಆತಂಕವಿದ್ದು, ಇದು ಕೂಡ ಡಾಲರಿನೆದುರು ರುಪಾಯಿಯ ಅಪಮೌಲ್ಯವಾಗಲು ಬಲವಾದ ಕಾರಣವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ದಾರರು (ಎಫ್‌ ಡಿಐ) ಮತ್ತು ವಿದೇಶಿ ಪೋರ್ಟ್ ಪೋಲಿಯೋ ಹೂಡಿಕೆದಾರರು

(ಎಫ್ಪಿಐ) ರುಪಾಯಿಯ ಮೌಲ್ಯವು ವೃದ್ಧಿಸುವಲ್ಲಿ ಅಥವಾ ಕುಸಿಯುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಈ ಬೃಹತ್ ಹೂಡಿಕೆದಾರರು ಜನವರಿ ತಿಂಗಳಲ್ಲಿ ಭಾರತದ ಷೇರು

ಮಾರುಕಟ್ಟೆಯಲ್ಲಿ ಮಾರಾಟವನ್ನು ಹೆಚ್ಚಿಸುತ್ತಾ, ‘ಪ್ರಾಫಿಟ್ ಬುಕಿಂಗ್’ ಮಾಡುವ ಉದ್ದೇಶದಿಂದ ಒಂದಷ್ಟು ಬಿಲಿಯನ್ ಡಾಲರ್ ಮೊತ್ತವನ್ನು ದೇಶದಿಂದ ಹೊರಗೆ ಹರಿಸಿದ್ದಾರೆ.

ಕಳೆದ ‌ಡಿಸೆಂಬರ್‌ನಲ್ಲಿ ಹೀಗೆ 169 ಬಿಲಿಯನ್‌ನಷ್ಟು ಹೊರಹರಿವು ಆಗಿದ್ದು, ಜನವರಿ ಯಲ್ಲಿ ಅದಾಗಲೇ ಈ ಮೊತ್ತವು 213 ಬಿಲಿಯನ್ ಪ್ರಮಾಣವನ್ನು ದಾಟಿದೆ. ನಿರಂತರ ಮಾರಾಟವು ಒಟ್ಟಾರೆಯಾಗಿ ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿದೆ. ಪರಿಣಾಮ, ಕಳೆದೊಂದು ವಾರದಿಂದ ಷೇರುಪೇಟೆಯಲ್ಲಿ ‘ಕರಡಿ ಕುಣಿತ’! ಹಣದ ಹೆಚ್ಚಿನ ಹೊರ ಹರಿವು ಸ್ವಾಭಾವಿಕವಾಗಿ ಆಯಾ ದೇಶದ ಕರೆನ್ಸಿಯನ್ನು ನೇರವಾಗಿ ಅಪಮೌಲ್ಯಗೊಳಿಸು ತ್ತದೆ. ರುಪಾಯಿ ಮೌಲ್ಯವು ಕುಸಿಯಲು ಇದೂ ತನ್ನದೇ ಕೊಡುಗೆ ನೀಡಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ದೇಶದ ಕಾರ್ಪೊರೇಟ್/ಕೈಗಾರಿಕೆ, ಕೃಷಿ ಮತ್ತು ಉತ್ಪಾದನಾ ವಲಯಗಳು ಒಂದಷ್ಟು ಮಂದಗತಿಯಲ್ಲಿ ಸಾಗುತ್ತಿರುವುದನ್ನು ಅಂಕಿ-ಅಂಶಗಳು ಸಾರುತ್ತಿವೆ. 2024ರಲ್ಲಿ ಭಾರತದ ಒಟ್ಟು ವ್ಯವಹಾರೋದ್ದಿಮೆ ಮತ್ತು ಉತ್ಪಾದನಾ ವಲಯದ ಲಾಭವು, ದೇಶದ ಜಿಡಿಪಿಯ ಶೇ.5.2ರಷ್ಟು ಇತ್ತು.

ಅದೀಗ ಕಡಿಮೆಯಾಗಿದೆ. ಬೇಡಿಕೆ ಮತ್ತು ಬಳಕೆಯ ಪ್ರಮಾಣಗಳಲ್ಲಿನ ವ್ಯತ್ಯಾಸ, ಉತ್ಪಾ ದನೆ ಹಾಗೂ ಕಚ್ಚಾ ವಸ್ತುಗಳ ಬೆಲೆಯಲ್ಲಿನ ಏರಿಕೆಯೂ ಈ ಮಂದಗತಿಯ ಮುಂದು ವರಿಕೆಗೆ ತಮ್ಮ ಪಾಲು ನೀಡಿವೆ. ಉತ್ಪಾದನೆ ಮತ್ತು ಪೂರಕ ವ್ಯವಹಾರಗಳಲ್ಲಿ ಉದ್ದೇಶಿತ ಪ್ರಗತಿ ಸಾಧಿಸಲು ಆಗದಿರುವ ಕಾರಣ ರುಪಾಯಿಯು ಒಂದಷ್ಟು ಮೌಲ್ಯವನ್ನು ಕಳಕೊಂಡಂತೆ ಭಾಸವಾಗುತ್ತಿದೆ.

ಇವಿಷ್ಟು ರುಪಾಯಿ ಅಪಮೌಲ್ಯವಾಗಲು ಬಲವಾದ ಅಂಶಗಳು. ಮತ್ತೊಂದೆಡೆ, ರುಪಾಯಿ ಮೌಲ್ಯದ ಕುಸಿತದಿಂದಾಗಿ ಕಚ್ಚಾತೈಲ ಮತ್ತು ಅವಶ್ಯಕ ಸರಕುಗಳ ಆಮದು ವೆಚ್ಚ ಜಾಸ್ತಿಯಾಗಿ ಹಣದುಬ್ಬರದಲ್ಲಿ ಏರಿಕೆಯಾಗುತ್ತದೆ. ಜತೆಗೆ ವಿದೇಶದಲ್ಲಿ (ಉದಾ ಹರಣೆಗೆ ಅಮೆರಿಕದಲ್ಲಿ) ಖರ್ಚು ಮಾಡಬೇಕಾದ ರುಪಾಯಿಯ ಪ್ರಮಾಣವೂ ಜಾಸ್ತಿ ಯಾಗುತ್ತದೆ. ರುಪಾಯಿ ಮೌಲ್ಯ ಕುಸಿತದಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ಹೂಡಿಕೆಗೆ ಹಿಂದೇಟು ಹಾಕುತ್ತಾರೆ, ಹೂಡಿಕೆಯನ್ನು ಮುಂದೂಡುತ್ತಾರೆ.

ಇದು ವಿದೇಶಿ ಬಂಡವಾಳದ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಬಂಡವಾಳದ ಹರಿವು ಕಡಿಮೆಯಾದರೆ ದೇಶದ ಒಟ್ಟಾರೆ ಆರ್ಥಿಕ ಪ್ರಗತಿ ಮಂದ ವಾಗುತ್ತದೆ. ಹೀಗಿದ್ದೂ, ರುಪಾಯಿ ದುರ್ಬಲಗೊಂಡಾಗ ರಫ್ತು ವಲಯಕ್ಕೆ ಒಂದಷ್ಟು ಅನುಕೂಲವೂ ಆಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ರಫ್ತು ಮಾಡುವ ಮೂಲಕ, ಭಾರತದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಸಿ ದೇಶಗಳ ನಡುವಿನ ‘ವ್ಯವಹಾರದ ಕೊರತೆ ಅಂತರ’ವನ್ನು ತಗ್ಗಿಸಬಹುದು.

ವಿದೇಶಿ ಸಂಸ್ಥೆಗಳು ಡಾಲರ್ ಮುಖಾಂತರ ಹಣ ಪಾವತಿಸುವುದಾದರೆ, ರುಪಾಯಿ ಅಪಮೌಲ್ಯದ ದೆಸೆಯಿಂದಾಗಿ ಅಂಥ ಭಾರತೀಯ ಸಂಸ್ಥೆಗಳಿಗೆ ಹೆಚ್ಚಿನ ಮೊತ್ತ ಸಿಗುತ್ತದೆ.

ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಹತೋಟಿಯಲ್ಲಿ ಇಟ್ಟು, ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ರುಪಾಯಿಯು ಮತ್ತಷ್ಟು ಅಪಮೌಲ್ಯಗೊಳ್ಳದಂತೆ ತಡೆಯಬಹುದು. ಆರ್‌ಬಿಐನ ಹಿಂದಿನ ಗವರ್ನರ್ ಶಕ್ತಿಕಾಂತ್ ದಾಸ್ ಈ ವಿಚಾರದಲ್ಲಿ ಎಚ್ಚರಿಕೆಯ ನೀತಿ ಅನುಸರಿಸಿ, ಡಾಲರ್ ಎದುರು ರುಪಾಯಿ ಮೌಲ್ಯ ವಿಪರೀತ ಕುಸಿಯದಂತೆ ನೋಡಿ ಕೊಳ್ಳುತ್ತಿದ್ದರು.

ಈಗಿನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಡಾಲರ್‌ಗೆ ನಿಗದಿಯಾಗಿರುವ ‘ನಿಶ್ಚಿತ ದರ’ ನೀತಿ ಯನ್ನು ಅನುಸರಿಸುತ್ತಿಲ್ಲ. ಕರೆನ್ಸಿಯ ಮೌಲ್ಯವನ್ನು ಮಾರುಕಟ್ಟೆಯು ನಿರ್ಧರಿಸುವಂತಾಗುವ ನೀತಿಯನ್ನು ಸದ್ಯಕ್ಕೆ ಆರ್ಬಿ ಐ ಅನುಸರಿಸಿದಂತೆ ಭಾಸವಾಗುತ್ತಿದೆ. ಹೀಗಿದ್ದೂ ಡಾಲರ್ ಎದುರು ರುಪಾಯಿ ಮೌಲ್ಯವು ೮೭ಕ್ಕಿಂತ ಕೆಳಗೆ ಕುಸಿಯಲು ಸದ್ಯೋ ಭವಿಷ್ಯದಲ್ಲಿ ಆರ್‌ಬಿಐ ಬಿಡುವ ಸಾಧ್ಯತೆ ಕಡಿಮೆ ಎನಿಸುತ್ತದೆ.

ಡಾಲರ್ ಎದುರು ರುಪಾಯಿ ಕುಸಿದಾಕ್ಷಣ, ‘ಅಮೆರಿಕದ ಆರ್ಥಿಕತೆ ಬಲಿಷ್ಠವಾಗಿದೆ, ಭಾರತದ ಆರ್ಥಿಕತೆ ಕುಸಿಯುತ್ತದೆ’ ಎಂದು ಭರತವಾಕ್ಯ ನುಡಿದುಬಿಡುವುದು ಸುತರಾಂ ಸರಿಯಲ್ಲ. ಹಲವು ಜಾಗತಿಕ ವಿದ್ಯಮಾನಗಳ ಜತೆಗೆ ದೇಶದೊಳಗಿನ ವಿದ್ಯಮಾನಗಳು, ಉತ್ಪಾದನೆ, ಕೈಗಾರಿಕೆ, ಕೃಷಿ, ಉದ್ಯೋಗ, ಹಣದುಬ್ಬರ, ಷೇರು ಮಾರುಕಟ್ಟೆ ಸೂಚ್ಯಂಕ ಮುಂತಾದ ಹಲವು ಅಂಶಗಳೂ ರುಪಾಯಿ ಮೌಲ್ಯವನ್ನು ನಿರ್ಧರಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತವೆ, ಪ್ರಭಾವ ಬೀರುತ್ತವೆ.

ದೀರ್ಘಕಾಲದವರೆಗೆ ಅಥವಾ ನಿರಂತರವಾಗಿ ಈ ಟ್ರೆಂಡ್ ಮುಂದುವರಿದಾಗ ಮಾತ್ರ ಅದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಬಲ್ಲದು, ಸಂಭಾವ್ಯ ಅಪಾಯವನ್ನು ಅದು ಸೂಚಿಸಬಲ್ಲದು. ಹಾಗಾಗಲು ಆರ್‌ಬಿಐನ ಸದೃಢ ನೀತಿಗಳು ಖಂಡಿತ ಬಿಡಲಾರವು. ಸದೃಢ-ಸುಭದ್ರ ಸರಕಾರ ಇರುವುದರ ಜತೆಗೆ, ದೇಶದ ಸರ್ವತೋಮುಖ ಅಭಿವೃದ್ಧಿಯೂ ಆಶಾದಾಯಕವಾಗಿರುವ ಪರಿಣಾಮ ಹಾಗೇನೂ ಆಗಲಾರದು.

ಇತ್ತೀಚಿನ ಜಾಗತಿಕ ಏರಿಳಿತಗಳು ಮತ್ತು ಯುದ್ಧಗಳು, ಜಾಗತಿಕ ವಿತ್ತೀಯ ಮಾರುಕಟ್ಟೆ ಯಲ್ಲಿ ಒಂದಷ್ಟು ಸಂಚಲನ, ತಲ್ಲಣ ಮೂಡಿಸಿರುವುದುಂಟು; ಭಾರತದ ಮೇಲೆ ಮತ್ತು ನಮ್ಮ ಕರೆನ್ಸಿಯ ಮೇಲೆ ಇದರ ಕನಿಷ್ಠ ಪರಿಣಾಮವಾಗಿದೆ. ಇದು ಋತುಮಾನ ಬದಲಾ ದಾಗ ಬರುವ ಶೀತ-ಕೆಮ್ಮಿನಂತೆ!

ಇದಕ್ಕೆ ಮದ್ದು ತೆಗೆದುಕೊಂಡರೆ ಏಳು ದಿನಗಳಲ್ಲಿ ಕಡಿಮೆಯಾಗುತ್ತದೆ, ತೆಗೆದುಕೊಳ್ಳ ದಿದ್ದರೆ ಒಂದು ವಾರದಲ್ಲಿ ವಾಸಿಯಾಗುತ್ತದೆ ಎನ್ನುವುದೇ ಲೇಸು! ಹೀಗಾಗಿ ರುಪಾಯಿ ಕುಸಿತವನ್ನು ನಾವುಗಳೇ ನಮ್ಮ ಅನುಕೂಲಕ್ಕೆ ತಕ್ಕಂತೆ ವಿಶ್ಲೇಷಿಸುವುದು ಬೇಡ. ಅದಕ್ಕೆ ಸಂಬಂಧಿಸಿದ ‘ಆರ್ಥಿಕ ವೈದ್ಯ’ರು ಅದರ ಕುರಿತು ವಿಮರ್ಶಿಸಿ ನಿರ್ಧರಿಸಲಿ. ನಮ್ಮ ಪೈಸೆಗೆ

ಯಾವತ್ತೂ ಕಿಮ್ಮತ್ತು ಇದ್ದೇ ಇರುತ್ತದೆ!

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Ravi Sajangadde Column: ಬೆಂಗಳೂರು ವಾಯು ಸಾರಿಗೆ: 3 ಕಾರ್ಯಸಾಧು ಯೋಜನೆಗಳು !

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ