ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr J N Jagannath Column: ಬ್ಯಾಂಕುಗಳಲ್ಲಿ ಏರುತ್ತಿರುವ ಸಾಲದ ಮಟ್ಟ

ಠೇವಣಿದಾರರು ಹಣ ವಾಪಸ್ಸು ಪಡೆಯಲು ಇಚ್ಛಿಸಿದಾಗ, ತಕ್ಷಣವೇ ಬ್ಯಾಂಕುಗಳು ನೀಡುವುದಕ್ಕೆ ಇದು ಅನುವುಮಾಡಿಕೊಡುತ್ತದೆ. ಜತೆಗೆ ಬ್ಯಾಂಕುಗಳು ಸರಕಾರಿ ಹೂಡಿಕೆ, ಬೇಗನೆ ದ್ರವ್ಯರೂಪಕ್ಕೆ ಪರಿವರ್ತಿಸ ಬಹುದಾದ ಹೂಡಿಕೆಯನ್ನು (ಎಸ್‌ಎಲ್‌ ಆರ್) ಹೊಂದಿರಬೇಕಾಗುತ್ತದೆ. ಸಾಲ, ನಗದು ರೂಪ, ದ್ರವ್ಯ ರೂಪದ ಹೂಡಿಕೆ ಈ ರೀತಿ ಬ್ಯಾಂಕು ಹಣವನ್ನು ಉಪಯೋಗಿಸುವಾಗ, ಠೇವಣಿಯೇ ಸಾಲಕ್ಕಿಂತ ಅಧಿಕವಾಗಿರಬೇಕಾಗುತ್ತದೆ.

ಬ್ಯಾಂಕುಗಳಲ್ಲಿ ಏರುತ್ತಿರುವ ಸಾಲದ ಮಟ್ಟ

Profile Ashok Nayak Mar 19, 2025 7:47 AM

ಕಳಕಳಿ

ಡಾ.ಜೆ.ಎನ್.ಜಗನ್ನಾತ್

ಬ್ಯಾಂಕುಗಳ ಪ್ರಮುಖ ಚಟುವಟಿಕೆ ಎಂದರೆ ಜನರಿಂದ ಠೇವಣಿ ಸಂಗ್ರಹಿಸಿ, ಜನರಿಗೆ ಸಾಲ ನೀಡು ವುದು. ಸಾಲ ನೀಡಲು ಬ್ಯಾಂಕುಗಳಿಗೆ ನಿಽ ಬೇಕಾಗುತ್ತದೆ. ನಿಧಿಯ ಪ್ರಮುಖ ಮೂಲ ಠೇವಣಿ ಯಾದರೂ, ಜತೆಯಲ್ಲಿ ಷೇರು ಬಂಡವಾಳ, ಸಂಗ್ರಹಿತ ಲಾಭ ಮತ್ತು ಬೇರೆಯ ಮೂಲಗಳಿಂದ ಪಡೆದ ಸಾಲಗಳು ಅಗತ್ಯವಾಗುತ್ತವೆ. ಬ್ಯಾಂಕುಗಳ ಠೇವಣಿ ಸಂಗ್ರಹಣೆ ಹೆಚ್ಚಾಗಿದ್ದು, ಅದರಲ್ಲಿ ಸ್ವಲ್ಪ ಭಾಗ ನಗದು ರೂಪದಲ್ಲಿ ಇರಬೇಕಾಗುತ್ತದೆ.

ಠೇವಣಿದಾರರು ಹಣ ವಾಪಸ್ಸು ಪಡೆಯಲು ಇಚ್ಛಿಸಿದಾಗ, ತಕ್ಷಣವೇ ಬ್ಯಾಂಕುಗಳು ನೀಡುವುದಕ್ಕೆ ಇದು ಅನುವುಮಾಡಿಕೊಡುತ್ತದೆ. ಜತೆಗೆ ಬ್ಯಾಂಕುಗಳು ಸರಕಾರಿ ಹೂಡಿಕೆ, ಬೇಗನೆ ದ್ರವ್ಯರೂಪಕ್ಕೆ ಪರಿವರ್ತಿಸಬಹುದಾದ ಹೂಡಿಕೆಯನ್ನು (ಎಸ್‌ಎಲ್‌ ಆರ್) ಹೊಂದಿರಬೇಕಾಗುತ್ತದೆ. ಸಾಲ, ನಗದು ರೂಪ, ದ್ರವ್ಯರೂಪದ ಹೂಡಿಕೆ ಈ ರೀತಿ ಬ್ಯಾಂಕು ಹಣವನ್ನು ಉಪಯೋಗಿಸುವಾಗ, ಠೇವಣಿಯೇ ಸಾಲಕ್ಕಿಂತ ಅಧಿಕವಾಗಿರಬೇಕಾಗುತ್ತದೆ.

ಇದನ್ನೂ ಓದಿ: Vishweshwar Bhat Column: ಶಿಂಟೋ ಧರ್ಮದ ಕುರಿತು

ಸುಮಾರು 100 ರುಪಾಯಿ ಠೇವಣಿ ಇದ್ದರೆ ಅದರಲ್ಲಿ 65 ರುಪಾಯಿಯಿಂದ 75 ರುಪಾಯಿವರೆಗೆ ಸಾಲ ನೀಡಿದರೆ, ಠೇವಣಿ ಮತ್ತು ಸಾಲದ ಅನುಪಾತವು ಉತ್ತಮ ಎಂದು ಪರಿಗಣಿಸಲ್ಪಡುತ್ತದೆ. ಆದರೆ ಸುಮಾರು 5 ವರ್ಷಗಳಿಂದ ಈ ಅನುಪಾತ ಏರುತ್ತಾ ಸಾಗಿ, ಈಗ ಬ್ಯಾಂಕುಗಳು 100 ರುಪಾ ಯಿ ಠೇವಣಿಗೆ 81 ರುಪಾಯಿರವರೆಗೂ ಸಾಲ ನೀಡುತ್ತಿವೆ.

ಇದು ಉತ್ತಮ ಬೆಳವಣಿಗೆಯಲ್ಲ. ಫೆಬ್ರವರಿ 2025ರ ಅಂಕಿ-ಅಂಶದ ಪ್ರಕಾರ, ವರ್ಷದಲ್ಲಿ ಸಾಲ ನೀಡುವಿಕೆಯು ಶೇ.11.3ರಷ್ಟು ಏರಿದರೆ, ಠೇವಣಿ ಸಂಗ್ರಹಣೆ ಕೇವಲ ಶೇ.1036ರಷ್ಟಿದೆ. ಈ ರೀತಿ ಸಾಲ ನೀಡುವಿಕೆ ಏರುತ್ತಾ ಹೋಗಿ, ಠೇವಣಿ ಸಂಗ್ರಹಣೆ ಕ್ಷೀಣಿಸುತ್ತಾ ಸಾಗಿದರೆ, ಬ್ಯಾಂಕುಗಳ ಮತ್ತು ದೇಶದ ಆರ್ಥಿಕತೆಯ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಏರುತ್ತಿರುವ ಹಣದುಬ್ಬರ, ಸರಕಾರದ ಬದಲಿತ ಆದಾಯ ತೆರಿಗೆ ನಿಯಮಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ನೀಡುವ ಸಾಲದ ಹೆಚ್ಚುವಳಿ ಇವುಗಳು ಕೂಡ ಸಾಲದ ಮಟ್ಟವು ಠೇವಣಿಯ ಮಟ್ಟಕ್ಕಿಂತ ಹೆಚ್ಚಾ ಗಲು ಕಾರಣವಾಗಿವೆ. ಈ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರ ಹೆಚ್ಚಿನ ಕಾಳಜಿ ವಹಿಸಬೇಕಿರುವುದು ಈಗಿನ ಅಗತ್ಯವಾಗಿದೆ.

(ಲೇಖಕರು ಆರ್ಥಿಕ ತಜ್ಞರು)