#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

R T Vittal Murthy Column: ನಿಖಿಲ್‌ ಇಲ್ಲಿಗೆ, ಕುಮಾರಣ್ಣ ದಿಲ್ಲಿಗೆ

ದೊಡ್ಡ ಗೌಡರು ಹೀಗೆ ಏಕಾಏಕಿಯಾಗಿ ಇಂಥ ಮಾತುಗಳನ್ನಾಡಿದಾಗ ಸಭೆಯಲ್ಲಿದ್ದ ನಾಯಕರು ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಅವರೇಕೆ ಇಂಥ ಮಾತುಗಳನ್ನಾಡಿದರು ಎಂದು ತಿಳಿಯದೆ ಮೌನಕ್ಕೆ ಜಾರಿ ದ್ದಾರೆ. ತಾವಾಡಿದ ಮಾತಿಗೆ ಸಭೆ ಮೌನವಾಗಿದ್ದನ್ನು ಕಂಡ ದೇವೇಗೌಡರು ತಮ್ಮ ಮಾತಿನ ಅರ್ಥ ವೇನೆಂದು ಸಭೆಗೆ ವಿವರಿಸಿದ್ದಾರೆ

R T Vittal Murthy Column: ನಿಖಿಲ್‌ ಇಲ್ಲಿಗೆ, ಕುಮಾರಣ್ಣ ದಿಲ್ಲಿಗೆ

ಅಂಕಣಕಾರ ಆರ್‌.ಟಿ.ವಿಠ್ಠಲಮೂರ್ತಿ

Source : Vishwavani Daily News Paper

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕಳೆದ ವಾರ ಪಕ್ಷದ ಕಚೇರಿಯಲ್ಲಿ ಜಿಲ್ಲಾ ನಾಯಕರ ಸಭೆ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರು ಚಿಂತೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು ಪದೇ ಪದೆ ಕರ್ನಾಟ ಕಕ್ಕೆ ಬರುವುದು ಅಷ್ಟು ಸೇಫ್ ಅಲ್ಲ ಎಂದಿದ್ದಾರೆ.

ದೊಡ್ಡ ಗೌಡರು ಹೀಗೆ ಏಕಾಏಕಿಯಾಗಿ ಇಂಥ ಮಾತುಗಳನ್ನಾಡಿದಾಗ ಸಭೆಯಲ್ಲಿದ್ದ ನಾಯಕರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಅವರೇಕೆ ಇಂಥ ಮಾತುಗಳನ್ನಾಡಿದರು ಎಂದು ತಿಳಿಯದೆ ಮೌನಕ್ಕೆ ಜಾರಿದ್ದಾರೆ. ತಾವಾಡಿದ ಮಾತಿಗೆ ಸಭೆ ಮೌನವಾಗಿದ್ದನ್ನು ಕಂಡ ದೇವೇಗೌಡರು ತಮ್ಮ ಮಾತಿನ ಅರ್ಥವೇನೆಂದು ಸಭೆಗೆ ವಿವರಿಸಿದ್ದಾರೆ.

“ಅಲ್ರೀ.. ಕುಮಾರಸ್ವಾಮಿ ಅವರೀಗ ಕೇಂದ್ರ ಸಚಿವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇವರ ಮೇಲೆ ತುಂಬು ವಿಶ್ವಾಸವಿಟ್ಟು ಉಕ್ಕು ಮತ್ತು ಕೈಗಾರಿಕೆಯಂಥ ಮಹತ್ವದ ಖಾತೆ ಕೊಟ್ಟಿ ದ್ದಾರೆ. ಹೀಗೆ ಗುರುತರವಾದ ಖಾತೆಯನ್ನು ಕುಮಾರಸ್ವಾಮಿ ಅವರಿಗೆ ಕೊಟ್ಟಿರುವ ಪ್ರಧಾನಿ ಮೋದಿ ಸುಮ್ಮನಿರುತ್ತಾರಾ? ನೋ ಚಾ. ಅರ್ಥಾತ್, ಇಂಥ ಮಹತ್ವದ ಖಾತೆಯನ್ನು ಕುಮಾರಸ್ವಾಮಿ ಯವರು ಹೇಗೆ ನಿರ್ವಹಿಸುತ್ತಿದ್ದಾರೆ.

ಅದಕ್ಕಾಗಿ ಎಷ್ಟು ಸಮಯ ಕೊಡುತ್ತಿದ್ದಾರೆ ಅಂತ ನೋಡುತ್ತಲೇ ಇರುತ್ತಾರೆ. ಹೀಗಾಗಿ ಕುಮಾರ ಸ್ವಾಮಿಯವರು ಇನ್ನು ಮುಂದೆ ಪದೇ ಪದೆ ಕರ್ನಾಟಕಕ್ಕೆ ಬರುವುದು, ಇ ಹೆಚ್ಚು ಸಮಯ ಕಳೆಯು ವುದು ಸರಿಯಲ್ಲ. ಹಾಗಂತ ಅವರು ಪದೇ ಪದೆ ಕರ್ನಾಟಕಕ್ಕೆ ಬರುತ್ತಿರುವುದು ತಪ್ಪು ಅಂತ ನಾನು ಹೇಳುತ್ತಿಲ್ಲ. ಯಾಕೆಂದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿ ಸುವ ಉದ್ದೇಶ ದಿಂದ ಅವರು ಹೀಗೆ ಬರುತ್ತಿದ್ದಾರೆ.

ಅದಕ್ಕಾಗಿ ಎಷ್ಟು ಸಮಯ ಕೊಡುತ್ತಿದ್ದಾರೆ ಅಂತ ನೋಡುತ್ತಲೇ ಇರುತ್ತಾರೆ. ಹೀಗಾಗಿ ಕುಮಾರ ಸ್ವಾಮಿಯವರು ಇನ್ನು ಮುಂದೆ ಪದೇ ಪದೆ ಕರ್ನಾಟಕಕ್ಕೆ ಬರುವುದು, ಇ ಹೆಚ್ಚು ಸಮಯ ಕಳೆಯು ವುದು ಸರಿಯಲ್ಲ. ಹಾಗಂತ ಅವರು ಪದೇ ಪದೆ ಕರ್ನಾಟಕಕ್ಕೆ ಬರುತ್ತಿರುವುದು ತಪ್ಪು ಅಂತ ನಾನು ಹೇಳುತ್ತಿಲ್ಲ. ಯಾಕೆಂದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿಸುವ ಉದ್ದೇಶ ದಿಂದ ಅವರು ಹೀಗೆ ಬರುತ್ತಿದ್ದಾರೆ.

ಆದರೆ ಇನ್ನು ಮುಂದೆ ಪಕ್ಷ ಕಟ್ಟಲು ಉಳಿದವರು ಹೆಚ್ಚು ಕೆಲಸ ಮಾಡಬೇಕು. ಕುಮಾರಸ್ವಾಮಿ ಯವರು ದಿಲ್ಲಿಯ ತಮ್ಮ ಗಮನ ಕೇಂದ್ರೀಕರಿಸಿ ಪ್ರಧಾನಿಯವರ ನಿರೀಕ್ಷೆಯಂತೆ ಕೆಲಸ ಮಾಡ ಬೇಕು" ಅಂತ ದೇವೇಗೌಡರು ವಿವರಿಸಿದಾಗ ಸಭೆಯಲ್ಲಿದ್ದ ನಾಯಕರಿಗೆ ಒಂದು ವಿಷಯ ಸ್ಪಷ್ಟ ವಾಗಿದೆ.

ಅದೆಂದರೆ- ಕುಮಾರಸ್ವಾಮಿ ದಿಲ್ಲಿಗೆ, ನಿಖಿಲ್ ಕುಮಾರಸ್ವಾಮಿ ಇಲ್ಲಿಗೆ ಎಂಬುದು. ಹಾಗಂತ ನಿಖಿಲ್ ಅವರು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರಾಗಲಿzರೆ ಎಂಬುದು ಹೊಸ ವಿಷಯವೇನಲ್ಲ. ಆದರೆ ಏಪ್ರಿಲ್ ಹೊತ್ತಿಗೆ ನಿಖಿಲ್ ಅಧ್ಯಕ್ಷರಾಗುವ ಕಾಲಕ್ಕೆ ಕುಮಾರಸ್ವಾಮಿ ಅವರು ರಾಷ್ಟ್ರ ರಾಜ ಕಾರಣದ ಮೇಲೆ ತಮ್ಮ ಸಂಪೂರ್ಣ ಗಮನ ಹರಿಸಲಿ ಎಂಬುದು ದೇವೇಗೌಡರ ಇಚ್ಛೆ. ಯಾಕೆಂದರೆ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣದ ಮೇಲೆ ಗಮನ ನೆಡದೆ ಹೋದರೆ, ಇಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪೂರ್ತಿಯಾಗಿ ನೀರಿಗೆ ಧುಮುಕುವುದು ಯಾವಾಗ ಎಂಬುದು ದೊಡ್ಡ ಗೌಡರ ಚಿಂತೆ.

ಕುತೂಹಲದ ವಿಷಯವೆಂದರೆ ಪಕ್ಷದ ನಾಯಕರ ಸಭೆಯಲ್ಲಿ ಯಾವಾಗ ದೇವೇಗೌಡರು ಈ ಆತಂಕ ವ್ಯಕ್ತಪಡಿಸಿದರೋ, ಇದಾದ ನಂತರ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಬರುವು ದನ್ನು ಕಡಿಮೆ ಮಾಡಿದ್ದಾರೆ. ಅದೇ ರೀತಿ ಬಂದಾಗಲೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹರಿಹಾಯುವುದನ್ನು ಕಡಿಮೆ ಮಾಡಿ ದ್ದಾರೆ.

ಕೆಪಿಸಿಸಿ ಪಟ್ಟಕ್ಕೆ ಅಪ್ಪಾಜಿ?

ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನ ಗೊಂದಲಕ್ಕೆ ಬ್ರೇಕ್ ಹಾಕಲು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದರಲ್ಲ? ಅವರು ಬಂದ ನಂತರ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಿರುವುದೇನೋ ನಿಜ. ಆದರೆ ಅದೇ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸು ಮಾತ್ರ ಬಿರುಸಾಗಿಯೇ ಮುಂದುವರಿದಿದೆ. ಈ ರೇಸಿಗೆ ಹೊಸತಾಗಿ ಸೇರ್ಪಡೆಯಾಗಿರುವುದು ಅಪ್ಪಾಜಿ ನಾಡಗೌಡರ ಹೆಸರು. ವಾಸ್ತವವಾಗಿ ಅರ್ಹತೆ ಮತ್ತು ಹಿರಿತನದ ಕಾರಣಕ್ಕಾಗಿ ಯಾವತ್ತೋ ದೊಡ್ಡ ದೊಡ್ಡ ಸ್ಥಾನಗಳನ್ನು ಪಡೆಯಬೇಕಿದ್ದ ಅಪ್ಪಾಜಿ ನಾಡಗೌಡರು ಸ್ವಭಾವತಃ ಸಜ್ಜನ.

ಹೀಗಾಗಿ ಅಧಿಕಾರಕ್ಕಾಗಿ ಲಾಬಿ-ಗೀಬಿ ಮಾಡದ ಅವರು ಸಿಕ್ಕ ಸ್ಥಾನಮಾನಗಳನ್ನು ಗೌರವದಿಂದ, ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಯಾವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಸತೀಶ್ ಜಾರಕಿಹೊಳಿ, ಡಿ.ಕೆ.ಸುರೇಶ್, ಈಶ್ವರ ಖಂಡ್ರೆ, ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ಹೆಸರು ಗಳು ಕಾಣಿಸಿಕೊಂಡವೋ? ಇದಾದ ನಂತರ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಈ ರೇಸಿಗೆ ಅಪ್ಪಾಜಿ ನಾಡಗೌಡರ ಹೆಸರನ್ನು ತಂದು ನಿಲ್ಲಿಸಿದ್ದಾರೆ.

ಕುತೂಹಲದ ಸಂಗತಿ ಎಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕ ಎಂ.ಬಿ.ಪಾಟೀಲ್ ಬರಲಿ ಅಂತ ಮೊನ್ನೆ ಮೊನ್ನೆಯ ತನಕ ಸಿದ್ದರಾಮಯ್ಯ ಬಯಸಿದ್ದರು. ಹೇಗಿದ್ದರೂ ಅಹಿಂದ ವರ್ಗ ಗಳ ಸೈನ್ಯ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜತೆ ನಿಂತಿದೆ. ಇಂಥ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಬಂದರೆ ಅಹಿಂದ ಪ್ಲಸ್ ಲಿಂಗಾಯತ ಶಕ್ತಿ ಒಂದಾದ ಹಾಗಾಗುತ್ತದೆ. ಆ ಮೂಲಕ ಕಾಂಗ್ರೆಸ್ ಶಕ್ತಿ ಹಿಗ್ಗುತ್ತದೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ.

ಆದರೆ ಅವರ ಲೆಕ್ಕಾಚಾರ ಏನೇ ಇದ್ದರೂ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಉತ್ಸುಕತೆ ಯಿಲ್ಲ. ಯುದ್ಧ ಕಾಲದಲ್ಲಿ ಪಕ್ಷದ ಅಧ್ಯಕ್ಷರಾಗುವುದು ಬೇರೆ. ಆದರೆ ಇದು ಶಾಂತಿಕಾಲ. ಹೀಗಾಗಿ ಪಕ್ಷದ ಅಧ್ಯಕ್ಷರಾಗುವು ದಕ್ಕಿಂತ ಸಚಿವರಾಗಿ ಕೆಲಸ ಮಾಡುವುದು ಸೂಕ್ತ ಎಂಬುದು ಅವರ ಯೋಚನೆ. ಹಾಗಂತ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ ನಂತರ ಇದ್ದಕ್ಕಿದ್ದಂತೆ ಮತ್ತೊಬ್ಬ ಲಿಂಗಾಯತ ನಾಯಕರಾದ ಅಪ್ಪಾಜಿ ನಾಡಗೌಡರ ಹೆಸರು ರೇಸಿಗೆ ಬಂದಿದೆ.

ಮೂಲಗಳ ಪ್ರಕಾರ, ಹಾಲಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಎಷ್ಟು ಕಾಲ ಮುಂದುವರಿಯು ತ್ತಾರೋ ಮುಂದುವರಿಯಲಿ. ಅವರು ಕೆಳಗಿಳಿದ ನಂತರ ಅಪ್ಪಾಜಿ ನಾಡಗೌಡರು ಕೆಪಿಸಿಸಿ ಪಟ್ಟಕ್ಕೆ ಬರಲಿ ಅಂತ ಸಿದ್ದರಾಮಯ್ಯ ಅವರು ವರಿಷ್ಠರಿಗೂ ಹೇಳಿದ್ದಾರೆ.

ಯಡಿಯೂರಪ್ಪ ಹೇಳಿದ ಟಾಪ್ ಸೀಕ್ರೆೆಟ್

ಈ ಮಧ್ಯೆ, ಬಿಜೆಪಿಯ ಕೆಲ ನಾಯಕರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮೊನ್ನೆ ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಪಕ್ಷದೊಳಗಿನ ಭಿನ್ನಮತದ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಸರ್, ಇದೇನಿದು? ಪಕ್ಷದೊಳಗಿನ ಭಿನ್ನಮತಕ್ಕೆ ವರಿಷ್ಠರಿಂದ ಮದ್ದು ಅರೆಯುವ ಕಾರ್ಯ ನಡೆಯುತ್ತಿಲ್ಲ. ಯತ್ನಾಳ್ ಮತ್ತಿತರರ ಬಗ್ಗೆ ನೀವು ಪದೇ ಪದೆ ಹೇಳಿದರೂ ವರಿಷ್ಠರೇಕೆ ಸುಮ್ಮನಿದ್ದಾರೆ? ದಿನ ಬೆಳಗಾದರೆ ಇಂಥ ಗೊಂದಲವಾಗುತ್ತಿದ್ದರೆ ಪಕ್ಷ ಸಂಘಟನೆಯ ಕೆಲಸಕ್ಕೆ ಹಿನ್ನಡೆ ಆಗುವುದಿಲ್ಲವೇ?" ಅಂತ ಕೇಳಿದ್ದಾರೆ. ಮಾತು ಮುಂದುವರಿಸಿದ ಈ ನಾಯಕರು, “ಎಷ್ಟೇ ದೂರು ಕೊಟ್ಟರೂ ವರಿಷ್ಠರು ಕ್ರಮ ಕೈಗೊಳ್ಳುತ್ತಿಲ್ಲ ಎಂದರೆ ಯತ್ನಾಳ್ ಮತ್ತಿತರರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಒತ್ತಾಸೆ ಇರುವಂತೆ ಕಾಣುತ್ತಿದೆ. ‌

ಮೊನ್ನೆ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದ ಸಂತೋಷ್ ಅವರು ಅಂಬೇಡ್ಕರ್ ಅವರ ಬಗ್ಗೆ ರಾಜ್ಯಾ ದ್ಯಂತ ಸ್ವಪಕ್ಷೀಯರು ಕಾರ್ಯಕ್ರಮ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸಂದರ್ಭ ದಲ್ಲಿ ಕೆಲ ನಾಯಕರು ಸಂತೋಷ್ ಅವರ ಬಳಿ ಹೋಗಿ ಪಕ್ಷದ ಭಿನ್ನಮತೀಯರ ಬಗ್ಗೆ ಪ್ರಸ್ತಾಪಿಸಿ ದರೆ, ‘ಯೇ ಹೋಗ್ರೀ. ಮೊದಲು ನಾವು ಹೇಳಿದಷ್ಟನ್ನು ಮಾಡ್ರೀ. ಯಾರು ಯಾರು ಏನು ಮಾತಾ ಡ್ತಾರೆ ಅಂತ ನೀವೇಕೆ ತಲೆಕೆಡಿಸಿಕೊಳ್ತೀರಿ? ಇವತ್ತಿನ ಸಭೆಯಲ್ಲಿ ಅಂಬೇಡ್ಕರ್ ಅವರ ವಿಷಯ ಬಿಟ್ಟರೆ ಬೇರೆ ವಿಷಯದ ಬಗ್ಗೆ ಮಾತಾಡ್ಬೇಡಿ’ ಅಂತ ಗದರಿಸಿದ್ದಾರೆ.

ಅಂದ ಹಾಗೆ, ಬೇರೆ ವಿಷಯಗಳ ಬಗ್ಗೆ ‘ಕಟ್-ಥ್ರೋಟ್’ ಆಗಿ ಮಾತನಾಡುವ ಸಂತೋಷ್ ಅವರು ಕರ್ನಾಟಕದ ಭಿನ್ನಮತೀ ಯರಿಗೆ ಖಡಕ್ ಸೂಚನೆ ನೀಡಿದ್ದರೆ ಆಟವೇ ಬೇರೆ ಇರುತ್ತಿತ್ತು. ಆದರೆ ಸಂತೋಷ್ ಅವರು ಈ ವಿಷಯದಲ್ಲಿ ಉತ್ಸುಕತೆ ತೋರಿಸುತ್ತಿಲ್ಲ. ಅರ್ಥಾತ್, ಕರ್ನಾಟಕದ ಭಿನ್ನ ಮತೀಯರಿಗೆ ಸಂತೋಷ್ ಅವರ ಒತ್ತಾಸೆ ಇದೆ" ಎಂದಿದ್ದಾರೆ.

ಯಾವಾಗ ಅವರು ಈ ಮಾತನಾಡಿದರೋ, ಆಗ ಯಡಿಯೂರಪ್ಪ ಅವರು ಎದುರಿಗಿದ್ದ ನಾಯಕರಿಗೆ ಒಂದು ಟಾಪ್ ಸೀಕ್ರೆಟ್ ಹೇಳಿದ್ದಾರೆ. ಅದೆಂದರೆ- ‘ಫೆಬ್ರವರಿ ಹದಿನೈದರ ವೇಳೆಗೆ ಕರ್ನಾಟಕದಲ್ಲಿ ಭಿನ್ನಮತೀಯರ ಬಾಯಿ ಮುಚ್ಚಿಸುತ್ತೇವೆ. ಇಲ್ಲದಿದ್ದರೆ ಹಲವರಿಗೆ ಪಕ್ಷದಿಂದಲೇ ಗೇಟ್ ಪಾಸ್ ಕೊಡುತ್ತೇವೆ ಅಂತ ವರಿಷ್ಠರು ಹೇಳಿದ್ದಾರೆ’ ಎಂಬುದು.

ಆಗ ತಡ ಮಾಡದ ಯಡಿಯೂರಪ್ಪ-ವಿಜಯೇಂದ್ರ ಅವರು ತಮ್ಮ ಬೆಂಬಲಿಗರ ಸಭೆ ಕರೆದು ತುರ್ತು ಠರಾವು ಪಾಸು ಮಾಡಿದ್ದಾರೆ. ಅದೆಂದರೆ- ‘ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲೇಬೇಕು’ ಎಂಬುದು. ಆ ಮೂಲಕ ಆಯ್ಕೆ ಯಾದ ಅಧ್ಯಕ್ಷರ ನೇತೃತ್ವದ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು ಅಂತ ವರಿಷ್ಠರನ್ನು ಆಗ್ರಹಿಸ ಲಾಗಿದೆ. ಯಾವಾಗ ಈ ಠರಾವು ದಿಲ್ಲಿಗೆ ತಲುಪಿತೋ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ವರಿಷ್ಠರು ಚುನಾವಣೆ ನಡೆಸುವುದು ಕನ್-ರ್ಮ್ ಆಯಿತೋ? ಆಗ ಕುಮಾರ್ ಬಂಗಾರಪ್ಪ ಅವರ ಹೆಸರು ಅಧ್ಯಕ್ಷ ಸ್ಥಾನದ ರೇಸಿನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದಿದೆ. ಅಷ್ಟೇ ಅಲ್ಲ. ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಯಲ್ಲಿ ನಾನೇ ಕತ್ತಿ ಎತ್ತುತ್ತೇನೆ ಅಂತ ಯತ್ನಾಳ್ ಘೋಷಿಸುವ ಸ್ಥಿತಿ ಬಂದಿದೆ.

ಮಿಂಚಿ ಮರೆಯಾದ ಕು.ಬಂಗಾರಪ್ಪ

ಆಗ ತಡ ಮಾಡದ ಯಡಿಯೂರಪ್ಪ-ವಿಜಯೇಂದ್ರ ಅವರು ತಮ್ಮ ಬೆಂಬಲಿಗರ ಸಭೆ ಕರೆದು ತುರ್ತು ಠರಾವು ಪಾಸು ಮಾಡಿದ್ದಾರೆ. ಅದೆಂದರೆ- ‘ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲೇಬೇಕು’ ಎಂಬುದು. ಆ ಮೂಲಕ ಆಯ್ಕೆ ಯಾದ ಅಧ್ಯಕ್ಷರ ನೇತೃತ್ವದ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು ಅಂತ ವರಿಷ್ಠರನ್ನು ಆಗ್ರಹಿಸ ಲಾಗಿದೆ. ಯಾವಾಗ ಈ ಠರಾವು ದಿಲ್ಲಿಗೆ ತಲುಪಿತೋ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ವರಿಷ್ಠರು ಚುನಾವಣೆ ನಡೆಸುವುದು ಕನ್-ರ್ಮ್ ಆಯಿತೋ? ಆಗ ಕುಮಾರ್ ಬಂಗಾರಪ್ಪ ಅವರ ಹೆಸರು ಅಧ್ಯಕ್ಷ ಸ್ಥಾನದ ರೇಸಿನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದಿದೆ. ಅಷ್ಟೇ ಅಲ್ಲ. ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಯಲ್ಲಿ ನಾನೇ ಕತ್ತಿ ಎತ್ತುತ್ತೇನೆ ಅಂತ ಯತ್ನಾಳ್ ಘೋಷಿಸುವ ಸ್ಥಿತಿ ಬಂದಿದೆ.

ಈ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸಿದ ಈ ನಾಯಕರು, “ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಡಿ. ಯಾಕೆಂದರೆ ಈಗ ಜಿಧ್ಯಕ್ಷರಾಗಿರುವ ಬಹುತೇಕರು ಯಡಿಯು ರಪ್ಪ-ವಿಜಯೇಂದ್ರ ಅವರ ಆಸಕ್ತಿಯಿಂದ ನೇಮಕಗೊಂಡವರು. ನಾಳೆ ಪಕ್ಷದ ರಾಜ್ಯಾಧ್ಯಕ್ಷ ಹುzಗೆ ಚುನಾವಣೆ ನಡೆದರೆ ಇವರು ವಿಜಯೇಂದ್ರ ಅವರನ್ನೇ ಬೆಂಬಲಿಸುತ್ತಾರೆ.

ಮಂಡಲ ಅಧ್ಯಕ್ಷರ ನೇಮಕಾತಿ ಪೆಂಡಿಂಗ್ ಇದೆಯಾದರೂ ಈಗಿರುವ ಬಹುತೇಕರು ಯಡಿಯೂರಪ್ಪ- ವಿಜಯೇಂದ್ರ ಕ್ಯಾಂಪಿನವರು. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸುವ ಬದಲು ವಿಜಯೇಂದ್ರ ಅವರ ಜಾಗಕ್ಕೆ ಬೇರೊಬ್ಬರನ್ನು ನೇಮಕ ಮಾಡಿ. ಈ ವಿಷಯ ಬಂದಾಗ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಅವರ ಹೆಸರನ್ನು ಪರಿಗಣಿಸಿ. ಎಷ್ಟೇ ಆದರೂ ಅವರು ಹಿಂದುಳಿದ ವರ್ಗದ ಪವರ್ ಫುಲ್ ಈಡಿಗ ಕಮ್ಯುನಿಟಿ ಯವರು.

ವಾಸ್ತವವಾಗಿ ಕರ್ನಾಟಕದಲ್ಲಿ ಒಕ್ಕಲಿಗ-ಲಿಂಗಾಯತ ಸಮುದಾಯ ಬಿಜೆಪಿ ಮಿತ್ರಕೂಟದ ಜತೆಗಿದೆ. ಹೀಗಾಗಿ ನಮಗೆ ಅಗತ್ಯವಾಗಿರುವುದು ಹಿಂದುಳಿದ ವರ್ಗಗಳ ಮತಬ್ಯಾಂಕು. ಈಗ ಕುಮಾರ್ ಬಂಗಾ ರಪ್ಪ ಅವರನ್ನು ಪಕ್ಷಾಧ್ಯಕ್ಷ ಸ್ಥಾನಕ್ಕೆ ತಂದರೆ ಹಿಂದುಳಿದ ವರ್ಗಗಳಿಗೆ ಸಮಾಧಾನ ವಾಗುತ್ತದೆ. ಎಷ್ಟೇ ಆದರೂ ಬಿಜೆಪಿಗೆ ಒಂದು ಪವರ್ ಫುಲ್ ಮತಬ್ಯಾಂಕಿನ ಬೆಂಬಲ ದೊರಕಿಸಿ ಕೊಟ್ಟವರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ.

ಅವರು 2004ರಲ್ಲಿ ಬಿಜೆಪಿಗೆ ಬಂದ ಕಾರಣಕ್ಕಾಗಿ ಪಕ್ಷ 79 ಸ್ಥಾನಗಳನ್ನು ಪಡೆದು ಕರ್ನಾಟಕದ ನೆಲೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತು. ಈಗ ಅವರ ಪುತ್ರ ಕುಮಾರ್ ಬಂಗಾ ರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಬೆಸ್ಟು" ಅಂತ ವಿವರಿಸಿದ್ದಾರೆ. ಹೀಗೆ ಯತ್ನಾಳ್ ಗ್ಯಾಂಗು ದೆಹಲಿಗೆ ಹೋಗಿ ಈ ಪ್ರಸ್ತಾಪ ಮಂಡಿಸಿ ಬಂದಿದ್ದೇ ತಡ, ವಿಷಯ ಯಡಿಯೂ ರಪ್ಪ ಮತ್ತು ವಿಜಯೇಂದ್ರ ಅವರ ಕಿವಿಗೆ ತಲುಪಿದೆ.

ಆಗ ತಡ ಮಾಡದ ಯಡಿಯೂರಪ್ಪ-ವಿಜಯೇಂದ್ರ ಅವರು ತಮ್ಮ ಬೆಂಬಲಿಗರ ಸಭೆ ಕರೆದು ತುರ್ತು ಠರಾವು ಪಾಸು ಮಾಡಿದ್ದಾರೆ. ಅದೆಂದರೆ- ‘ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲೇಬೇಕು’ ಎಂಬುದು. ಆ ಮೂಲಕ ಆಯ್ಕೆಯಾದ ಅಧ್ಯಕ್ಷರ ನೇತೃತ್ವದ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು ಅಂತ ವರಿಷ್ಠರನ್ನು ಆಗ್ರಹಿಸಲಾಗಿದೆ. ಯಾವಾಗ ಈ ಠರಾವು ದಿಲ್ಲಿಗೆ ತಲುಪಿತೋ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ವರಿಷ್ಠರು ಚುನಾವಣೆ ನಡೆಸುವುದು ಕನ್-ರ್ಮ್ ಆಯಿತೋ? ಆಗ ಕುಮಾರ್ ಬಂಗಾರಪ್ಪ ಅವರ ಹೆಸರು ಅಧ್ಯಕ್ಷ ಸ್ಥಾನದ ರೇಸಿನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದಿದೆ. ಅಷ್ಟೇ ಅಲ್ಲ. ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಯಲ್ಲಿ ನಾನೇ ಕತ್ತಿ ಎತ್ತುತ್ತೇನೆ ಅಂತ ಯತ್ನಾಳ್ ಘೋಷಿಸುವ ಸ್ಥಿತಿ ಬಂದಿದೆ.