12th Global Achievers Awards in South Africa: ವಿವಿಧತೆಯಲ್ಲಿ ವಿಶೇಷತೆ ನೀಡಿದ ವಿಶ್ವವಾಣಿ
ಅವಕಾಶ ಸಿಕ್ಕಿದಾಗ ಸ್ವಾರ್ಥಿಯಾಗಬೇಡ, ಸಾರಥಿಯಾಗು ಎಂದು ಭಗವಂತ ಹೇಳುತ್ತಾನೆ. ವಿಶ್ವೇಶ್ವರ ಭಟ್ಟರಿಗೆ ಪತ್ರಿಕೋದ್ಯಮದಲ್ಲಿ ಇಂಥ ಬಹಳ ದೊಡ್ಡ ಮಾರ್ಗದರ್ಶನದ ಅವಕಾಶ ಸಿಕ್ಕಿದೆ. ಸಾರಥಿಯಾಗಿ ನೀವು ಎಲ್ಲ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಒಟ್ಟುಗೂಡಿಸಿದ್ದೀರಿ. ಇದು ಇನ್ನಷ್ಟು ಬೆಳೆಯಲಿ. ಅವಾರ್ಡ್ ತಗೊಂಡು ಹೋಗಲು ಬಂದವಳು ವಿಶ್ವವಾಣಿ ಕುಟುಂಬದ ಸದಸ್ಯೆಯಾಗಿದ್ದೇನೆ.
-
ವಿಶ್ವವಾಣಿ ಪ್ರಶಸ್ತಿ ಪಡೆಯಲು ಬಹಳ ಸಂತೋಷವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕೈಯಿಂದ ಅದನ್ನು ಪಡೆದದ್ದು ಕೂಡ ಇನ್ನಷ್ಟು ಸಂತೋಷ ವಾಗಿದೆ. ಇದರೊಂದಿಗೆ ಇಂಡಿಯಾ ಈಸ್ ಮೈ ಸೆಕೆಂಡ್ ಹೋಮ್ ಎಂದೂ ಇಲ್ಲಿಯ ಮುಖಂಡರು ಹೇಳಿರುವುದು. ವಿವಿಧ ತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ಆದರೆ ವಿವಿಧತೆಯಲ್ಲಿ ಒಂದು ವಿಶೇಷತೆಯನ್ನು ಕೊಟ್ಟ ಪತ್ರಿಕೆ ವಿಶ್ವವಾಣಿ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ 52 ವರ್ಷದ ಸಾಮಾಜಿಕ ಸೇವಾ ಬದುಕಿನಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಸಾವಿರಾರು ಜನರ ಮುಂದೆ ಪಡೆದಿ ದ್ದೇನೆ. ಆದರೆ ಹೊರದೇಶಕ್ಕೆ ಬಂದು ಇಲ್ಲಿಯ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುತ್ತಾ ವಿಶ್ವವಾಣಿ ಅವಾರ್ಡ್ ಪಡೆದಿರುವುದು ತುಂಬಾ ವಿಶೇಷವಾಗಿದೆ.

ನಾವು ಸಾಯುವವರೆಗೂ ಪ್ರಶಸ್ತಿಗಳನ್ನು ಪಡೆಯುವುದಿರುತ್ತದೆ. ಅಂದರೆ ಸಾಧನೆ ಎಷ್ಟು ಮಾಡಿದರೂ ಮುಗಿಯದು ಎಂದರ್ಥ. ಇನ್ನಷ್ಟು ಸಾಧನೆ ಮಾಡುವ ಪ್ರೋತ್ಸಾಹ, ಸೂಚನೆ ಯನ್ನು ಈ ಪುರಸ್ಕಾರದ ಮೂಲಕ ನೀಡಿದ್ದೀರಿ ಎಂದು ಭಾವಿಸುತ್ತೇನೆ ಎಂದರು.
ಇದನ್ನೂ ಓದಿ: 12th Global Achievers Awards in South Africa: ಪ್ರಶಸ್ತಿ ಪುರಸ್ಕೃತರ ಸಂಖ್ಯೆ ನೂರಕ್ಕೆ ಏರಲಿ
ಪ್ರಪಂಚದ ಬೇರೆ ಬೇರೆ ದೇಶಗಳನ್ನು ನಾನು ಸುತ್ತಿದ್ದೇನೆ. ಆದರೆ ಎಲ್ಲೂ ಕೂಡ ನಮ್ಮ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಕೊಡುವ ಸೌಭಾಗ್ಯ ಸಿಕ್ಕಿಲ್ಲ. ಇಲ್ಲಿ ಅದೂ ಸಿಕ್ಕಿದೆ. ಯಾರ ಹಣೆಬರಹವನ್ನು ಬದಲಾಯಿಸಲಾರೆವು. ಆದರೆ ಉತ್ತಮ ಮಾರ್ಗದರ್ಶನ ಕೊಡಬಲ್ಲೆವು.
ಅವಕಾಶ ಸಿಕ್ಕಿದಾಗ ಸ್ವಾರ್ಥಿಯಾಗಬೇಡ, ಸಾರಥಿಯಾಗು ಎಂದು ಭಗವಂತ ಹೇಳುತ್ತಾನೆ. ವಿಶ್ವೇಶ್ವರ ಭಟ್ಟರಿಗೆ ಪತ್ರಿಕೋದ್ಯಮದಲ್ಲಿ ಇಂಥ ಬಹಳ ದೊಡ್ಡ ಮಾರ್ಗದರ್ಶನದ ಅವಕಾಶ ಸಿಕ್ಕಿದೆ. ಸಾರಥಿಯಾಗಿ ನೀವು ಎಲ್ಲ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಒಟ್ಟು ಗೂಡಿಸಿದ್ದೀರಿ. ಇದು ಇನ್ನಷ್ಟು ಬೆಳೆಯಲಿ. ಅವಾರ್ಡ್ ತಗೊಂಡು ಹೋಗಲು ಬಂದವಳು ವಿಶ್ವವಾಣಿ ಕುಟುಂಬದ ಸದಸ್ಯೆಯಾಗಿದ್ದೇನೆ. ನೂರಾರು ಜನರನ್ನು ಸೇರಿಸುವ ಇಂಥ ಕಾರ್ಯಕ್ರಮಗಳು ವಿಶ್ವವಾಣಿಯಿಂದ ಇನ್ನಷ್ಟು ಆಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.