#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Shishir Hegde Column: ಅಮೆರಿಕ ಅಧ್ಯಕ್ಷರ ವೈಟ್‌ ಹೌಸ್‌ ಮನೆಯೊಕ್ಕಲು

ಹೇಳಿ ಕೇಳಿ ಅಮೆರಿಕವಾದ್ದರಿಂದ ಮಾಧ್ಯಮಗಳೆಲ್ಲವೂ ಅಜೀರ್ಣವಾಗುವಷ್ಟು ವರದಿ, ಪ್ರಕಟಿಸುತ್ತಲೇ ಇವೆ. ಅದು ಸಾಕಾಗಲಿಲ್ಲವೆಂಬಂತೆ ಫೇಸ್‌ಬುಕ್ ಬುಜಿಗಳ ವಿಶ್ಲೇಷಣೆಗಳು ಬೇರೆ. ಟ್ರಂಪ್ ಮೋದಿಯ ಸ್ನೇಹಿತ ಹೌದೇ? ಮೋದಿಯನ್ನೇಕೆ ಕರೆಯಲಿಲ್ಲ? ಇಟಲಿ ಪ್ರಧಾನಿಯನ್ನು ಕರೆದದ್ದೇಕೆ? ಟ್ರಂಪ್ ಭಾರತ ಕ್ಕೆ ಮಾರಕವೇ? ಇತ್ಯಾದಿ ಏನೋ ಒಂದು ಪ್ರಶ್ನೆ ಇಟ್ಟುಕೊಂಡು ತೋಚಿದ ರೀತಿಯಲ್ಲೆಲ್ಲ ವಿಶ್ಲೇಷಣೆ

Shishir Hegde Column: ಅಮೆರಿಕ ಅಧ್ಯಕ್ಷರ ವೈಟ್‌ ಹೌಸ್‌ ಮನೆಯೊಕ್ಕಲು

ಶಿಶಿರ್‌ ಹೆಗಡೆ ಅಂಕಣ

ಅಮೆರಿಕ ಅಧ್ಯಕ್ಷರ ಅಧಿಕಾರ ಹಸ್ತಾಂತರವು ಭಾರತದ ಪ್ರಧಾನಿ ಬದಲಾದಂತಲ್ಲ. ಚುನಾವಣಾ ಫಲಿತಾಂಶ ನವೆಂಬರ್‌ನಲ್ಲೇ ಬಂದಿರುತ್ತದೆ. ಸುಮಾರು ೨ ತಿಂಗಳ ಕಾಲ ಹಳೆಯ ಅಧ್ಯಕ್ಷರೇ ಮುಂದುವರಿಯುತ್ತಾರೆ.

ಜನವರಿ 20ರಂದು ಮಧ್ಯಾಹ್ನ 12 ಗಂಟೆಗೆ ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವುದು. ಈ ದಿನಾಂಕ ಮತ್ತು ಸಮಯವನ್ನು ಅಮೆರಿಕನ್ನರು ಸಂವಿಧಾನದಲ್ಲೇ ನಿಗದಿಮಾಡಿರುವುದರಿಂದ ಇದು ಫಿಕ್ಸ್ ಮುಹೂರ್ತ ಮೊನ್ನೆ ಟ್ರಂಪ್ ಅಧಿಕಾರ ವಹಿಸಿಕೊಂಡ ಮಾರನೇ ದಿನ ಜಗತ್ತಿನ ಎಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪತ್ರಿಕೆಗಳ ಮುಖಪುಟಗಳಲ್ಲಿ ಡೊನಾಲ್ಡ್ ಟ್ರಂಪ್ ಫೋಟೋ, ವರದಿ ಇತ್ತಂತೆ.

ಇದು ಸಹಜ, ಆದರೆ ಸಾಮಾನ್ಯವಲ್ಲ. ಕೆಲವೇ ದೇಶಗಳ ನಾಯಕರು ಬದಲಾದಾಗ ಮಾತ್ರ ಹೀಗಾಗು ತ್ತದೆ. ಹೇಳಿ ಕೇಳಿ ಅಮೆರಿಕವಾದ್ದರಿಂದ ಮಾಧ್ಯಮಗಳೆಲ್ಲವೂ ಅಜೀರ್ಣವಾಗುವಷ್ಟು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸುತ್ತಲೇ ಇವೆ. ಅದು ಸಾಕಾಗಲಿಲ್ಲವೆಂಬಂತೆ ಫೇಸ್‌ಬುಕ್ ಬುಜಿಗಳ ವಿಶ್ಲೇಷಣೆಗಳು ಬೇರೆ. ಟ್ರಂಪ್ ಮೋದಿಯ ಸ್ನೇಹಿತ ಹೌದೇ? ಮೋದಿಯನ್ನೇಕೆ ಕರೆಯಲಿಲ್ಲ? ಇಟಲಿ ಪ್ರಧಾನಿಯನ್ನು ಕರೆದದ್ದೇಕೆ? ಟ್ರಂಪ್ ಭಾರತಕ್ಕೆ ಮಾರಕವೇ? ಇತ್ಯಾದಿ ಏನೋ ಒಂದು ಪ್ರಶ್ನೆ ಇಟ್ಟುಕೊಂಡು ತೋಚಿದ ರೀತಿಯಲ್ಲೆಲ್ಲ ವಿಶ್ಲೇಷಣೆ.

ಇವೆಲ್ಲವನ್ನು ಇನ್ನೊಂದಿಷ್ಟು ದಿನ ಸಹಿಸಿಕೊಳ್ಳಬೇಕಿದೆ. ಎಲ್ಲ ಪ್ರಜಾಪ್ರಭುತ್ವದಂತೆ, ಹೊಸ ರಾಷ್ಟ್ರಾಧ್ಯಕ್ಷರ ಪದಗ್ರಹಣ ಅಮೆರಿಕದಲ್ಲಿ ಒಂದಿಷ್ಟು ಭರವಸೆಗಳನ್ನು ಸಹಜವಾಗಿ ಹುಟ್ಟಿಸಿದೆ. ಎಲ್ಲ ದೇಶಗಳಲ್ಲೂ ಹಾಗೆಯೇ ಅಲ್ಲವೇ? ಪ್ರತಿ ಚುನಾವಣೆ ಮುಗಿದು ಹೊಸ ಸರಕಾರ, ನಾಯಕ ಅಽಕಾರ ಹಿಡಿಯುತ್ತಿದ್ದಂತೆ ಒಂದಿಷ್ಟು ಸಾರ್ವಜನಿಕ ಆಶಾಭಾವನೆ ಹುಟ್ಟುತ್ತದೆ. ಸಮಾಜ ತನ್ನ ಆಯ್ಕೆಯನ್ನು ಹೌದೆಂದು ಪ್ರತಿಪಾದಿಸಿಕೊಳ್ಳುವ ಪರಿ ಅದು.

ಈ ಜನರ(ಲ) ಭಾವನೆಗೆ ಮಾಧ್ಯಮಗಳೂ ಜತೆಯಾಗುತ್ತವೆ. ಅವು ಅಧಿಕಾರ ಹಿಡಿಯುತ್ತಿರುವ ನಾಯಕನ ಬೆರಳು ಚೀಪುವ ಫೋಟೋದಿಂದ ಹಿಡಿದು ಏನೇನೋ ಮಾಹಿತಿಗಳನ್ನು ಹೊರತೆಗೆದು, ಪ್ರಕಟಿಸಿ ಸಂಭ್ರಮಿಸುತ್ತವೆ. ಜತೆಯಂದಿಷ್ಟು ಸುಳ್ಳುಸುದ್ದಿಗಳೆಲ್ಲ ಸೇರಿ ಒಂದಿಷ್ಟು ರಂಜನೆ. ಈ ಸಂಚಲನಕ್ಕೆ ಹೊಸ ನಾಯಕನಾದವನು ಕೂಡ ಒಂದಿಷ್ಟು ತನ್ನದನ್ನು ಸೇರಿಸುತ್ತಾನೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುವುದು ಇತ್ಯಾದಿ.

ಈ ಸಮಯದಲ್ಲಿ ನಾಯಕನಾದವನು ಗಟ್ಟಿ ಹೂಸು ಬಿಟ್ಟರೂ ‘ಅದಕ್ಕೆ ಇಂಥದ್ದೇ ಕಾರಣ’, ‘ಇದು ನಮ್ಮ ಮೊದಲು’ ಎಂಬ ಮಾಧ್ಯಮಗಳು ದೇಶಾತೀತ, ಕಾಲಾತೀತ! ಅಮೆರಿಕ ಅಧ್ಯಕ್ಷರ ಅಧಿಕಾರ ಹಸ್ತಾಂತರವು ಭಾರತದ ಪ್ರಧಾನಿ ಬದಲಾದಂತಲ್ಲ. ಚುನಾವಣೆಯ ಫಲಿತಾಂಶ ನವೆಂಬರ್‌ ನಲ್ಲಿಯೇ ಬಂದಿರುತ್ತದೆ. ಸುಮಾರು ಎರಡು ತಿಂಗಳ ಕಾಲ ಹಳೆಯ ಅಧ್ಯಕ್ಷರೇ ಮುಂದುವರಿಯು ತ್ತಾರೆ.

ಜನವರಿ ೨೦ನೇ ತಾರೀಖು ಮಧ್ಯಾಹ್ನ 12 ಗಂಟೆಗೆ ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವುದು. ಈ ದಿನಾಂಕ ಮತ್ತು ಸಮಯವನ್ನು ಅಮೆರಿಕನ್ನರು ಸಂವಿಧಾನದಲ್ಲಿಯೇ ನಿಗದಿ ಬರೆದುಕೊಂಡಿ ರುವುದರಿಂದ ಇದು ಫಿಕ್ಸ್ ಮುಹೂರ್ತ. ಈ ಹೊಸ ಅಧ್ಯಕ್ಷರು ಆಯ್ಕೆಯಾಗಿ ಪದಗ್ರಹಣದವರೆಗೆ ಕಾಯುವ, ಹಾಲಿ ಮುಂದುವರಿಯುವ ಕಾಲವಿದೆಯಲ್ಲ, ಇದು ಅಮೆರಿಕದ ರಾಜಕಾರಣದ ಅತ್ಯಂತ ಚುರುಕಿನ ಸಮಯ. ಹಳೆಯ ಅಧ್ಯಕ್ಷರೇ ಪುನಃ ಆರಿಸಿ ಬಂದಲ್ಲಿ ಬದಲಾವಣೆ ಇರುವುದಿಲ್ಲ.

ಆದರೆ ಅಧ್ಯಕ್ಷರು ಬದಲಾಗುವ ಸಂದರ್ಭದಲ್ಲಿ ನೂರೆಂಟು ರಾಜಕೀಯ ದೊಂಬರಾಟಗಳು ನಡೆಯುತ್ತವೆ. ಹಾಲಿ ಅಧ್ಯಕ್ಷ ಬಾಕಿ ಇರಿಸಿಕೊಂಡಿದ್ದ -ಲುಗಳನ್ನೆಲ್ಲ ತ್ವರಿತ ಸಹಿ ಮಾಡುತ್ತಾನೆ; ಕೊನೆಯ ಕ್ಷಣದಲ್ಲಿ ತನ್ನದೊಂದು ಛಾಪು ಬಿಟ್ಟುಹೋಗುವ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆ ಇತ್ಯಾದಿ.

ಇದೆಲ್ಲದರ ಜತೆ ಅಽಕಾರದ ಕೊನೆಯ ದಿನಗಳಲ್ಲಿ ಒಂದಿಷ್ಟು ಜನರಿಗೆ ಕ್ಷಮಾದಾನ ಕೊಡುವುದು ನಿರ್ಗಮಿಸುವ ಅಧ್ಯಕ್ಷ ಮಾಡುವ ಕೆಲಸಗಳಂದು. ಟ್ರಂಪ್ ಆರಿಸಿ ಬರುತ್ತಿದ್ದಂತೆ ಬೈಡನ್ ಮೊದಲು ಮಾಡಿದ ಕೆಲಸವೆಂದರೆ ತಮ್ಮ ಮಗ ಹಂಟರ್ ಬೈಡನ್‌ಗೆ ಕ್ಷಮಾದಾನ ಕೊಟ್ಟದ್ದು. ಬೈಡನ್‌ನ ಮಗ ತೆರಿಗೆ ವಂಚನೆ ಕೇಸ್‌ನಲ್ಲಿ ಇತ್ತೀಚೆಗೆ ಶಿಕ್ಷೆಗೊಳಗಾಗಿದ್ದ. ಅಷ್ಟೇ ಅಲ್ಲ, ಟ್ರಂಪ್‌ನ ಮೇಲಿನ ಹೆದರಿಕೆ ಗೋ ಏನೋ, ಬೈಡನ್ ತನ್ನ ಕುಟುಂಬದವರಿಗೆಲ್ಲ ನಿರೀಕ್ಷಣಾ ಕ್ಷಮಾದಾನಕ್ಕೆ ಹೋಗುವ ಹಿಂದಿನ ದಿನ ಸಹಿಹಾಕಿದ್ದಾನೆ.

ಬೈಡನ್‌ಗೆ ತನ್ನ ಮುಂದಿನ ಜೀವನಕ್ಕೆ ಅಷ್ಟು ಬಂದೋಬಸ್ತ್ ಮಾಡಿಕೊಳ್ಳುವ ಅನಿವಾರ್ಯತೆ ಯಿದ್ದಂತಿದೆ. ಇದೆಲ್ಲದರ ಜತೆ ಇನ್ನೊಂದಿಷ್ಟು ಮಂದಿ, ಟ್ರಂಪ್ ವಿರುದ್ಧ ಮಾತಾಡಿದವರಿಗೆ, ಕ್ರಮ ಕೈಗೊಂಡವರಿಗೆಲ್ಲ ಕ್ಷಮಾದಾನ ದಯಪಾಲಿಸಲಾಗಿದೆ. ಅಮೆರಿಕದ ಅಧ್ಯಕ್ಷರು ಬದಲಾಗುವು ದೆಂದರೆ ಅದು ಒಬ್ಬ ವ್ಯಕ್ತಿ, ನಾಯಕ ಬದಲಾಗುವುದಷ್ಟೇ ಅಲ್ಲ. ಅದು ಪೂರ್ಣ ಆಡಳಿತ ‘ಯಂತ್ರ’ ದ ಬದಲಾವಣೆ. ಉನ್ನತ ಮಟ್ಟದಲ್ಲಿ ಸುಮಾರು ನಾಲ್ಕು ಸಾವಿರ ಅಧಿಕಾರಿಗಳು, ಸುಮಾರು 600 ಕೇಂದ್ರಕ್ಕೆ ಸಂಬಂಧಿಸಿದ ಅಧಿಕಾರಿಗಳು, 180 ದೇಶಗಳ ಅಮೆರಿಕದ ರಾಯಭಾರಿಗಳು- ಹೀಗೆ ಏನಿಲ್ಲವೆಂದರೂ ಸುಮಾರು ಹತ್ತರಿಂದ ಹನ್ನೆರಡು ಸಾವಿರ ಅಧಿಕಾರಿಗಳು ಅಧ್ಯಕ್ಷರ ಜತೆ ಬದಲಾಗುತ್ತಾರೆ.

ಸರಕಾರ ಬದಲಾದಾಗ ಅಧಿಕಾರಿಗಳು ಬದಲಾಗುವುದು ಸಹಜವೇ ಆದರೂ ಅಮೆರಿಕದಲ್ಲಿ ಈ ಪ್ರಮಾಣ ತುಸು ಜಾಸ್ತಿ. ಅಮೆರಿಕದಲ್ಲಿ ಅಧ್ಯಕ್ಷರು ಬದಲಾಗುವುದೆಂದರೆ ಪ್ರಮಾಣವಚನ, ಅಧಿಕಾರ ಹಸ್ತಾಂತರವಷ್ಟೇ ಅಲ್ಲ. ವೈಟ್ ಹೌಸ್ ಹಸ್ತಾಂತರವೂ ಅದೇ ದಿನ ತೆರೆಯ ಹಿಂದೆ ನಡೆಯುವ ಇನ್ನೊಂದು ಪ್ರಮುಖ ವಿದ್ಯಮಾನ. ವೈಟ್ ಹೌಸ್ ಎಂಬುದು ಅಧ್ಯಕ್ಷರ ಮನೆಯೂ ಹೌದು, ಜತೆಯಲ್ಲಿ ಕಚೇರಿಯೂ ಹೌದು. ಅದೊಂದು ವಿಶಿಷ್ಟ ಕಟ್ಟಡ. ಹೊರನೋಟಕ್ಕೆ ತೀರಾ ಬೆಂಗಳೂರಿನ ಕಾರ್ಪೊರೇಟರ್‌ಗಳ ಮನೆಯಷ್ಟೇ ದೊಡ್ಡದೆಂದು ಕಂಡರೂ ಒಟ್ಟು ಆರು ಅಂತಸ್ತು, 132 ರೂಮುಗಳು, 30 ಮಲಗುವ ಕೋಣೆ, 35 ಸ್ನಾನಗೃಹಗಳಿರುವ ೨೦,೦೦೦ ಚದರ ಅಡಿಯ ಬೃಹತ್ ಮನೆ ಅದು.

ಅಧ್ಯಕ್ಷರ ವೈಟ್ ಹೌಸ್ ಗೃಹಪ್ರವೇಶ ಎಂದರೆ ಕೇವಲ ಅವರ ಕುಟುಂಬದವರು ನಾಲ್ಕಾರು ಸೂಟ್‌ ಕೇಸ್ ಹೊತ್ತು ತಂದು ಒಳಸೇರಿಕೊಳ್ಳುವುದೂ ಅಲ್ಲ! ಈ ಮನೆಯೊಕ್ಕಲ ತಯಾರಿ ಬಹಳ ಮೊದಲೇ ಶುರುವಾಗಿರುತ್ತದೆ. ಚುನಾವಣಾ ಫಲಿತಾಂಶ ನವೆಂಬರ್‌ನಲ್ಲಿ ಬಂದಾಕ್ಷಣ ವೈಟ್ ಹೌಸ್ ನಿರ್ವಹಣಾ ತಂಡ ಹೊಸ ಚುನಾಯಿತ ಅಧ್ಯಕ್ಷರನ್ನು ಸಂಪರ್ಕಿಸುತ್ತದೆ.

ಭಾವಿ ಅಧ್ಯಕ್ಷರ ಮತ್ತು ಅವರ ಕುಟುಂಬದ ಎಲ್ಲ ಬೇಕು ಬೇಡಗಳನ್ನು ಪಟ್ಟಿ ಮಾಡಿ ವೈಟ್ ಹೌಸ್‌ಗೆ ಕಳುಹಿಸಿಕೊಡುತ್ತದೆ. ಅಧ್ಯಕ್ಷರ ಆಹಾರಕ್ರಮ ಏನು, ಯಾವ ಅಡುಗೆ ಇಷ್ಟ, ಯಾವುದು ಅಲ್ಲ, ಅವರು ಬಳಸುವ ಸಾಬೂನು, ಟೂತ್ ಪೇಸ್ಟ್ ಯಾವುದು, ಗಡ್ಡ ಮಾಡುವಾಗಿನ ಬ್ಲೇಡಿನಿಂದ ಹಿಡಿದು ಅಂಡರ್‌ವೇರ್, ಸೂಟು, ಬೂಟು ಹೀಗೆ ಎಲ್ಲದರ ಪಟ್ಟಿ. ಜತೆಯಲ್ಲಿ ಅಧ್ಯಕ್ಷರ ಕುಟುಂಬ ದವರ ಬಗ್ಗೆಯೂ- ಯಾರಿಗೆ ಚಹಾ, ಯಾರಿಗೆ ಕಾಫಿ- ಹೀಗೆ ಅಷ್ಟೇ ವಿವರವನ್ನು ಪಡೆದುಕೊಳ್ಳ ಲಾಗುತ್ತದೆ.

ಜತೆಯಲ್ಲಿ ಬೆಡ್‌ರೂಮ್‌ಗಳು ಹೇಗಿರಬೇಕು, ಕೋಣೆಗಳಿಗೆ ಯಾವ ರೀತಿ ಶೃಂಗರಿಸಿರಬೇಕು, ಯಾವ ರೀತಿಯ ಸೋ- ಬೇಕು, ಯಾವ ಬಣ್ಣ ಬಳಿದಿರಬೇಕು ಇತ್ಯಾದಿ ಇತ್ಯಾದಿ. ಯಾವ ಬೇಡಿಕೆಯನ್ನೂ ಪ್ರಶ್ನಿಸುವಂತಿಲ್ಲ, ಸಾಧ್ಯವಿಲ್ಲವೆನ್ನುವಂತೆಯೂ ಇಲ್ಲ. ವೈಟ್ ಹೌಸ್ ಎಂದರೆ ಅದು ಯಾವತ್ತೂ ಅಧ್ಯಕ್ಷರ ಮನೆ. ಜನವರಿ 20ಕ್ಕೆ ಅಧಿಕಾರ ಹಸ್ತಾಂತರವೆಂದರೆ ಆ ದಿನ ಬೆಳಗಿನವರೆಗೂ ಅದು ನಿರ್ಗಮಿಸಲಿರುವ ಅಧ್ಯಕ್ಷರ ಮನೆ. ಮುಂದಿನ ಅಧ್ಯಕ್ಷ ನಾನೇ ಎಂದು ಟ್ರಂಪ್ ಹಿಂದಿನ ದಿನ ರಾತ್ರಿಯೇ ಅಲ್ಲಿ ಬಂದು ಉಳಿಯುವಂತಿಲ್ಲ.

ಅಂತೆಯೇ ನಾಳೆ ಹೇಗಿದ್ದರೂ ಹೋಗಬೇಕು, ಇವತ್ತೇ ಹೊರಟು ಬಿಡೋಣ ಎಂದು ಬೈಡನ್ ಖಾಲಿ ಮಾಡಿಕೊಂಡು ಹೋಗುವಂತೆಯೂ ಇಲ್ಲ. ಅಧ್ಯಕ್ಷರಾದ ದಿನದಿಂದ ಕೊನೆಯ ರಾತ್ರಿಯವರೆಗೂ ಅಲ್ಲಿಯೇ ವಾಸವಿರಬೇಕು. ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ರಾತ್ರಿಯಿಂದಲೇ ಅಲ್ಲಿ ವಾಸ ಆರಂಭಿಸಬೇಕು. ಹಾಗಾಗಿ ಈ ಇಡೀ ವೈಟ್ ಹೌಸ್ ಗೃಹಪ್ರವೇಶ ಪ್ರಕ್ರಿಯೆ ಪ್ರಮಾಣವಚನದ ಸಮಯದಲ್ಲಿ, ಕೇವಲ ಐದಾರು ತಾಸಿನಲ್ಲಿಯೇ ಆಗಬೇಕು.

ಅಷ್ಟರೊಳಗೆ ವೈಟ್ ಹೌಸ್ ಹೊಸ ವಾರಸುದಾರ ಬಯಸಿದ್ದೆಲ್ಲ ಏರ್ಪಾಡಾಗಬೇಕು, ಒಂದೊಂದೂ ತಪ್ಪಾಗದಂತೆ...ಜನವರಿ 20ಕ್ಕೆ ಪ್ರಮಾಣವಚನವೆಂದರೆ ಜನವರಿ 19ರ ರಾತ್ರಿ ಭಾವಿ ಅಧ್ಯಕ್ಷರು (ಉದಾಹರಣೆಗೆ ಈ ಬಾರಿ ಟ್ರಂಪ್) ಹಿಂದಿನ ದಿನವೇ ವಾಷಿಂಗ್ಟನ್ ಡಿಸಿಯಲ್ಲಿರುವ ಅಧ್ಯಕ್ಷರ ವಸತಿ ಗೃಹದಲ್ಲಿ ಬಂದುಳಿದಿರುತ್ತಾರೆ. ಅದರ ಹೆಸರು ಬ್ಲೇರ್ ಹೌಸ್- ಅದಿರುವುದು ವೈಟ್ ಹೌಸ್‌ನ ಪಕ್ಕದ ರಸ್ತೆಯಲ್ಲಿ, ಐವತ್ತು ಮೀಟರ್ ದೂರದಲ್ಲಿ. ಭಾರತ ಮೊದಲಾದ ದೇಶಗಳ ಪ್ರಧಾನಿಗಳು ಬಂದಾಗ ತಂಗುವುದು ಇಲ್ಲಿಯೇ.

ಮಾರನೇ ದಿನ, ಪ್ರಮಾಣವಚನದ ದಿನ. ಆ ದಿನದ ಪ್ರೋಟೋಕಾಲ್ ಪ್ರಕಾರ ಹಾಲಿ ಅಧ್ಯಕ್ಷರು (ಉದಾ: ಬೈಡನ್) ಬೆಳಗ್ಗೆ ಆರಕ್ಕೆಲ್ಲ ಸ್ನಾನ ಇತ್ಯಾದಿ ಮುಗಿಸಿ ತಯಾರಾಗಿ ವೈಟ್ ಹೌಸ್‌ನ ಕೆಳ ಅಂತಸ್ತಲ್ಲಿ ತಿಂಡಿಗೆ ಬಂದಿರಬೇಕು. ವಸತಿಗೃಹಗಳಲ್ಲಿ eಛ್ಚಿhಟ್ಠಠಿ ಮಾಡಿ ತಿಂಡಿಗೆ ಬಂದಂತೆ! ಇತ್ತ ಅಧ್ಯಕ್ಷರ ತಿಂಡಿ ಆರಂಭವಾಗುತ್ತಿದ್ದಂತೆ ಅತ್ತ ಅಧ್ಯಕ್ಷರ ಬೆಡ್‌ರೂಮ್ ಮತ್ತಿತರ ಕೋಣೆಗಳ ನವೀಕರಣ ಆರಂಭವಾಗಿಬಿಡುತ್ತದೆ.

ಅದೇ ಸಮಯದಲ್ಲಿ ಭಾವಿ ಅಧ್ಯಕ್ಷರು ವೈಟ್ ಹೌಸ್‌ಗೆ ತಿಂಡಿಗೆ ಬರುತ್ತಾರೆ. ಅಲ್ಲಿ ತಿಂಡಿ ಮುಗಿಸು ತ್ತಿದ್ದಂತೆ ಅವರಿಬ್ಬರೂ ಕಾರು ಹತ್ತಿ ಅಮೆರಿಕದ ಸಂಸತ್ (ಕಾಂಗ್ರೆಸ್) ನತ್ತ ಹೊರಡುತ್ತಾರೆ. ಅವರು ಅತ್ತ ಪ್ರಮಾಣವಚನಕ್ಕೆಂದು ಹೊರಡುತ್ತಿದ್ದಂತೆ ವೈಟ್ ಹೌಸ್‌ನ ಕ್ಷಿಪ್ರ ನವೀಕರಣ ಶುರುವಾಗುತ್ತದೆ. ಇರುವುದು ಇನ್ನು ಐದೇ ತಾಸು. ಟ್ರಂಪ್ ಅಧ್ಯಕ್ಷರಾಗಿ ಮರಳಿ ಮಧ್ಯಾಹ್ನ ಬರುವುದರೊಳಗೆ ಯೋಜನೆಯಂತೆ ಎಲ್ಲಾ ಬದಲಾವಣೆಗಳು ಸರಿಯಾಗಿಯೇ ನಡೆಯಬೇಕು.

ಹೊಸ ಅಧ್ಯಕ್ಷರ, ಕುಟುಂಬದವರ ಎಲ್ಲ ಬೇಕುಗಳನ್ನು ಮೊದಲೇ ತಿಳಿದುಕೊಂಡಿದ್ದರೂ ಹಾಲಿ ಅಧ್ಯಕ್ಷರು ಮಾಜಿಯಾಗುವಲ್ಲಿಯವರೆಗೆ- ಆ ದಿನ ಬೆಳಗ್ಗೆಯವರೆಗೂ ವೈಟ್ ಹೌಸ್‌ನಲ್ಲಿ ಏನನ್ನೂ ಬದಲಿಸುವಂತಿಲ್ಲ. ಹಾಗಾಗಿ ಅದೆಲ್ಲವನ್ನು ಆ ಕೆಲವೇ ಗಂಟೆಗಳಲ್ಲಿ ನಿಭಾಯಿಸಲು, ವೈಟ್ ಹೌಸ್‌ನ ನೆಲದ ರತ್ನಗಂಬಳಿ, ಕಾರ್ಪೆಟ್, ಗೋಡೆಯ ಬಣ್ಣ, ಟಾಯ್ಲೆಟ್, ಕಿಟಕಿ, ಆಂತರಿಕ ವಿನ್ಯಾಸ ಎಲ್ಲ‌ ವನ್ನು ಹೊಸ ಅಧ್ಯಕ್ಷರ, ಅವರ ಹೆಂಡತಿ, ಮಕ್ಕಳ, ಕುಟುಂಬದ ಬಯಕೆಯಂತೆ ಬದಲಿಸಲು ಸುಮಾರು 120-150 ಮಂದಿ ತಯಾರಾಗಿರುತ್ತಾರೆ. ಅವರೆಲ್ಲರೂ ತೀರಾ ಕರಾರುವಾಕ್ಕಾಗಿ, ಎಲ್ಲ ಸಾಮಾನು ಸರಂಜಾಮನ್ನೆಲ್ಲ ರಾತ್ರಿಯೇ ವೈಟ್ ಹೌಸ್ ಹೊರಗಡೆ ತಂದಿಟ್ಟುಕೊಂಡು ಕಾಯು ತ್ತಿರುತ್ತಾರೆ.

ಮೊದಲು ಹಳೆಯ ಅಧ್ಯಕ್ಷರ ಸಾಮಾನನ್ನು ಹೊರಸಾಗಿಸುವುದು. ಅನಂತರದಲ್ಲಿ ಹೊಸ ಅಧ್ಯಕ್ಷರ ಸಾಮಾನುಗಳನ್ನು ಒಳತರುವುದು. ಐದೇ ತಾಸಿನಲ್ಲಿ ಇಡೀ 20000 ಚದರ ಅಡಿಯ ಮನೆ, ಅಲ್ಲಿನ ಹೂವಿನ ಕುಂಡ, ಬೆಲೆಬಾಳುವ ಪೈಂಟಿಂಗುಗಳು, ಕಾರ್ಪೆಟ್ ಎಲ್ಲವನ್ನೂ ಬದಲಿಸಿ, ಪೈಂಟ್ ಹೊಡೆದು, ಹೊಸ ಪೈಂಟ್ ವಾಸನೆಯೂ ಬರದಂತೆ ಮಾಡಲಾಗುತ್ತದೆ.

ಬೆಳಗ್ಗೆ ತಿಂಡಿ ತಿನ್ನುವಾಗಲಿದ್ದ ಬೈಡನ್ ವೈಟ್ ಹೌಸ್ ಮಧ್ಯಾಹ್ನವಾಗುತ್ತಿದ್ದಂತೆ ಟ್ರಂಪ್ ಹೌಸ್ ಆಗಿ ಬದಲಾಗಿಬಿಡಬೇಕು! ವೈಟ್ ಹೌಸ್ ಎಂದರೆ ಮನೆ ಅಥವಾ ಕಚೇರಿಯಷ್ಟೇ ಅಲ್ಲ. ಅದೊಂದು ಮ್ಯೂಸಿಯಂ ಕೂಡ ಹೌದು. ಅಲ್ಲಿರುವ ಪ್ರತಿಯೊಂದು ಪೇಂಟಿಂಗ್ ಮಿಲಿಯನ್‌ಗಟ್ಟಲೆ ಬೆಲೆಬಾಳು ವಂಥದ್ದು. ಅಲ್ಲಿರುವ ಯಾವುದೋ ಗಡಿಯಾರವು ಇನ್ನೂರು ವರ್ಷ ಹಿಂದೆ ಯಾವುದೋ ದೇಶದ ದೊರೆ ಕೊಟ್ಟದ್ದಿರಬಹುದು.

ಅಮೆರಿಕಕ್ಕೆ 1776ರಲ್ಲಿಯೇ ಸ್ವಾತಂತ್ರ ಬಂದಿರುವುದರಿಂದ ಅಲ್ಲಿಂದ ಇಲ್ಲಿಯವರೆಗೆ ವೈಟ್ ಹೌಸ್‌ಗೆ, ಅಧ್ಯಕ್ಷರಿಗೆ ಅದೆಷ್ಟೋ ವಸ್ತುಗಳು ಉಡುಗೊರೆಯಾಗಿ ಬಂದಿರುತ್ತವೆ. ಎಲ್ಲವಕ್ಕೂ ಒಂದೊಂದು ಇತಿಹಾಸವಿರುವುದರಿಂದ ಎಲ್ಲವೂ ಬೆಲೆಬಾಳುವಂಥವೇ. ಅವುಗಳನ್ನೆಲ್ಲ ಬಹುಕಾಲದಿಂದ ಪ್ರತ್ಯೇಕ ಕಟ್ಟಡವೊಂದರಲ್ಲಿ ಶೇಖರಿಸಿಡಲಾಗಿದೆ. ಆ ದಾಸ್ತಾನಿನಲ್ಲಿ ಯಾವ ವಸ್ತು, ಪೀಠೋಪಕರಣ ಏನು ಬೇಕೋ ಅದನ್ನು ಅಧ್ಯಕ್ಷರಾದವರು, ಅವರ ಹೆಂಡತಿ ಬಳಕೆಗೆ ಆಯ್ಕೆಮಾಡಿಕೊಳ್ಳಬಹುದು!

ಉದಾಹರಣೆಗೆ ಟ್ರಂಪ್ ಬಯಸಿದಲ್ಲಿ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನು ತರಿಸಿ ಹಾಕಿಸಿಕೊಳ್ಳಬಹುದು. ಅಧ್ಯಕ್ಷರ ಹೆಂಡತಿ ಬಯಸಿದರೆ ನೂರು ವರ್ಷ ಹಿಂದೆ ಇಂಗ್ಲೆಂಡಿನ ರಾಣಿ ಅಂದಿನ ಅಧ್ಯಕ್ಷರ ಹೆಂಡತಿಗೆ ಕೊಟ್ಟ ವಜ್ರದುಂಗುರ ವನ್ನು ಧರಿಸಬಹುದು- ಹೀಗೆ. ಎಲ್ಲಾ ಹಿಂದಿನ ಅಧ್ಯಕ್ಷರ ಸ್ವತ್ತಿಗೂ ಈಗಿನ ಅಧ್ಯಕ್ಷರೇ ವಾರಸು ದಾರರು. ಆದರೊಂದು ನಿಬಂಧನೆ ಇದೆ.

ಅಧ್ಯಕ್ಷರಾಗಿದ್ದಾಗ ಅವರಾಗಲಿ, ಅವರ ಕುಟುಂಬದವರಾಗಲಿ ಏನೇ ಉಡುಗೊರೆ ಪಡೆದರೂ ಅದು ವೈಟ್ ಹೌಸ್‌ನ ಸ್ವತ್ತು. ಅಧಿಕಾರ ಮುಗಿಯುತ್ತಿದ್ದಂತೆ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಬೇಕು. ಅಧ್ಯಕ್ಷರ ಮಕ್ಕಳು, ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಯಾರೋ ಆಟಿಕೆ ಸಾಮಾನನ್ನೂ ಕೊಟ್ಟಿದ್ದಾ ರೆಂದುಕೊಳ್ಳಿ, ಅದನ್ನು ಬಿಟ್ಟು ಹೋಗುವಾಗ ಒಯ್ಯುವಂತಿಲ್ಲ. ಬೇಕೇ ಬೇಕೆಂದರೆ ನ್ಯಾಯಯುತ ಹಣ ತೆತ್ತು ಖರೀದಿಸಬಹುದು.

ಹಾಗಂತ ವೈಟ್ ಹೌಸ್ ಅನ್ನು ಬೇಕಾಬಿಟ್ಟಿ ಬದಲಾವಣೆ ಮಾಡುವಂತಿಲ್ಲ, ಕೆಲವೊಂದಿಷ್ಟು ನಿಬಂಧನೆಗಳಿವೆ. ಉದಾಹರಣೆಗೆ ಹಿಂದೆ ಅಧ್ಯಕ್ಷ ಅಬ್ರಹಾಂ ಲಿಂಕನ್ ಇದ್ದ ಮಲಗುವ ಕೋಣೆ. ಅದನ್ನು ಯಾವುದೇ ಅಧ್ಯಕ್ಷರು ಬಂದರೂ ಬದಲಿಸುವಂತಿಲ್ಲ. ಲಿಂಕನ್ ಕೊಲೆಯಾಗುವುದಕ್ಕಿಂತ ಮೊದಲು ಅವರ ಮಲಗುವ ಕೋಣೆ ಹೇಗಿತ್ತೋ ಇವತ್ತಿಗೂ ಅದನ್ನು ಹಾಗೆಯೇ ಇಡಲಾಗಿದೆ. ಜತೆಯಲ್ಲಿ ಲಿಂಕನ್ ಗುಂಡೇಟು ತಿಂದು ಕೊನೆಯುಸಿರು ಎಳೆಯುವಾಗ ಮಲಗಿದ್ದ ಹಾಸಿಗೆಯನ್ನು ಕೂಡ ಅಲ್ಲಿಡಲಾಗಿದೆ.

ಇದು ವೈಟ್ ಹೌಸ್‌ನ ಭೂತದ ಮನೆ ಎಂದೂ ಕುಖ್ಯಾತಿ ಪಡೆದದ್ದಿದೆ. ಲಿಂಕನ್ ನಂತರ ಬಂದ ಅಧ್ಯಕ್ಷರುಗಳ ಹೆಂಡತಿಯರಿಗೆ ಲಿಂಕನ್ ಭೂತವಾಗಿ ಕಾಣಿಸಿಕೊಂಡದ್ದೂ ಇದೆಯಂತೆ!! ಇಷ್ಟೆ ಬದಲಾವಣೆಯನ್ನು ಐದಾರು ತಾಸಿನಲ್ಲಿ ಮಾಡುವಾಗ ಅಲ್ಲಿ ಭದ್ರತೆ ಮತ್ತು ಗೌಪ್ಯತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಹೊರಹೋಗುವವರು ಅಥವಾ ಯಾರೋ ಕೆಲಸದವರು ಅಲ್ಲಿಯೂ ಮೈಕ್, ವಿಡಿಯೋ ಕ್ಯಾಮರಾ ಮೊದಲಾದವನ್ನು ಅಡಗಿಸಿಟ್ಟಿದ್ದರೆ? ಅಥವಾ ಯಾವುದೋ ಕಾರ್ಪೆಟ್‌ನ ಕೆಳಗೆ ಅಧ್ಯಕ್ಷರಿಗೆ ಹಾನಿಯಾಗುವಂತೆ ಏನೋ ಒಂದು ಮಾಡಿಟ್ಟಿದ್ದರೆ? ಹಾಗಾಗಿ ಇಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಯನ್ನು ನೋಡಲು ಒಂದು ಪ್ರತ್ಯೇಕ ತಂಡವಿರುತ್ತದೆ.

ಅದು ಅಧ್ಯಕ್ಷರ ರಕ್ಷಣಾ ಪಡೆಯ ಕೆಲಸ. ಪ್ರತಿಯೊಬ್ಬ ಕೆಲಸವದವನ ಮೇಲೂ ನಿಕಟ ನಿಗಾ ವಹಿಸಲಾಗುತ್ತದೆ. ಇಡೀ ವೈಟ್ ಹೌಸ್‌ನ ನಿರ್ವಹಣೆ, ಯಜಮಾನಿಕೆ ನೋಡಿಕೊಳ್ಳುವವನಿಗೆ ಒಂದು ವಿಶೇಷ ಹುದ್ದೆ ಇದೆ. ಅವನನ್ನು ಚೀ- ಅಶರ್ (ಮುಖ್ಯ ದ್ವಾರಾಧಿಕಾರಿ) ಎಂದು ಕರೆಯುವುದು. ವೈಟ್ ಹೌಸ್‌ನ ಎಲ್ಲಾ ದೇಖರೇಕ್ ನೋಡಿಕೊಳ್ಳುವುದೇ ಅವನ ಕೆಲಸ. ಇಡೀ ವೈಟ್ ಹೌಸ್‌ನ ಮನೆಗೆಲಸದವರಿಗೆ ಅವನೇ ಬಾಸ್.

ಮನೆಗೆಲಸದವರೆಂದರೆ ಅದು 150-200 ಜನರ ತಂಡ. ಅಡುಗೆಯವರು, ಇಂಟೀರಿರ್ಯ ಡಿಸೈನರ್, ಇಲೆಕ್ಟ್ರಿಷಿಯನ್, ಎಂಜಿನಿಯರುಗಳು, ಗಾರೆ ಕೆಲಸದವರು, ಆಯಾಗಳು, ಗಾರ್ಡನ್ ನೋಡಿಕೊಳ್ಳು ವವರು, ನಾಯಿ ನೋಡಿಕೊಳ್ಳುವವರು, ಟ್ರೈನರ್, ಡಾಕ್ಟರ್, ದರ್ಜಿ ಇತ್ಯಾದಿ. ಹೊಸ ಅಧ್ಯಕ್ಷರ ಗೃಹಪ್ರವೇಶದ ತಯಾರಿ ಮಾಡುವುದು ಕೂಡ ಇವನ ತಂಡದ್ದೇ ಕೆಲಸ, ಹೊಣೆಗಾರಿಕೆ.

ಆದರೆ ಜನವರಿ ಇಪ್ಪತ್ತರ ನವೀಕರಣ ಮುಗಿಯುತ್ತಿದ್ದಂತೆ, ಹೊಸ ಅಧ್ಯಕ್ಷರು ಅಧಿಕಾರ ವಹಿಸಿ ಕೊಂಡು, ಮಧ್ಯಾಹ್ನದ ಊಟಕ್ಕೆ ವೈಟ್ ಹೌಸ್ ಸೇರುತ್ತಿದ್ದಂತೆ ಈ ದ್ವಾರಾಧಿಕಾರಿಯ ಇಡೀ ತಂಡದ ಕೆಲಸವೂ ಮುಗಿದಿರುತ್ತದೆ. ಆತನ ಜಾಗಕ್ಕೆ ಹೊಸ ದ್ವಾರಾಧಿಕಾರಿ ಮತ್ತವನ ನೂರೈವತ್ತು

ಜನರ ತಂಡ ಬಂದಿರುತ್ತದೆ. ಆ ಹೊಸ ತಂಡ ಅಲ್ಲಿಂದ ಮುಂದೆ ವೈಟ್ ಹೌಸ್‌ನ, ಅಧ್ಯಕ್ಷರ ಮನೆಯ ನಿರ್ವಹಣೆಯ ಜವಾಬ್ದಾರಿ ಹೊರುತ್ತದೆ. ಹೀಗೆ- ವೈಟ್ ಹೌಸ್ ಗೃಹಪ್ರವೇಶ ಎಂದರೆ ಅದು ಆರೇ ಆರು ತಾಸಿನಲ್ಲಿ ಹಿಂದಿನವರು ಖಾಲಿ ಮಾಡಿ, ಸಂಪೂರ್ಣ ನವೀಕರಿಸಿ, ಹೊಸ ಅಧ್ಯಕ್ಷರನ್ನು ಮನೆತುಂಬಿಕೊಳ್ಳುವ ಅನನ್ಯ ಕಾರ್ಯಕ್ರಮ. ಉqಛ್ಟಿqsಠಿeಜ್ಞಿಜ ಞ್ಠoಠಿ ಚಿಛಿ Zಡ್ಝಿಛಿoo. ಯಾವ ತಪ್ಪಿಗೂ ಜಾಗವಿಲ್ಲ.