ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಒಡಹುಟ್ಟಿದವರು ತಂದೆ ತಾಯಿಯ ಸ್ಥಾನ ತುಂಬಬೇಕು

ಅಣ್ಣನಿಗೆ ತಂಗಿ ಪರಿಸ್ಥಿತಿ ಅರ್ಥವಾಗುತ್ತದೆ. ನೀರನ್ನು ಕುಡಿದು ಓಹೋ ಈ ಸೋಡಾ ನನಗೆ ಬಹಳ ಇಷ್ಟ ಚೆನ್ನಾಗಿದೆ ಎಂದನು. ಇದನ್ನು ಕೇಳಿದ ಅತ್ತಿಗೆ ತಾಯಿಗೆ ಆಸೆಯಾಯಿತು ಸೋಡಾ ನನಗೂ ಸ್ವಲ್ಪ ಕೊಡು ಎಂದರು. ಅತ್ತಿಗೆ ತಾಯಿಯ ಮುಂದೆ ತನ್ನ ಮರ್ಯಾದೆ ಹೋಯಿತು ಎಂದು ಕೊಂಡಿದ್ದಳು.

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ತಂಗಿಗೆ ಅಣ್ಣನಿಂದ ಫೋನ್ ಬಂದಿತು. ಪುಟ್ಟಿ ನಾನು ಮತ್ತು ನಿನ್ನ ಅತ್ತಿಗೆ ನಿಮ್ಮ ಮನೆಗೆ ಬಂದು ಸ್ವಲ್ಪ ಹೊತ್ತು ಇದ್ದು ಹೊರಡುತ್ತೇವೆ ಎಂದು ಹೇಳಿದ. ಅಣ್ಣ ಬರುತ್ತಾನೆ ಎಂದು ತಂಗಿಗೆ ಬಹಳ ಖುಷಿಯಾಯಿತು. ಆದರೆ ಆ ಸಂತೋಷ ಕ್ಷಣದಲ್ಲೇ ಬೆಲೂನು ಒಡೆದಂತೆ ಟುಸ್ ಎಂದಿತು. ಏಕೆಂದರೆ ಅಣ್ಣ ಅತ್ತಿಗೆ ಬಂದರೆ ಅವರಿಗೆ ತಿನ್ನಲು- ಕುಡಿಯಲು ಕೊಡಲು ಏನೂ ಇರಲಿಲ್ಲ. ಒಳಗೆ ಬಂದು ನೋಡಿದಳು. ಸ್ವಲ್ಪ ಸಕ್ಕರೆ ಬತ್ತಿದ ಒಂದು ನಿಂಬೆ ಹಣ್ಣು ಇತ್ತು. ಅದನ್ನೇ ಬೆರೆಸಿ ಪಾನಕ ಮಾಡಿಟ್ಟು ಹೊರಗೆ ಬಂದು ಅಣ್ಣ ಅತ್ತಿಗೆ ಬರುವುದನ್ನು ಕಾಯು‌ ತ್ತಿದ್ದಳು.

ಇದನ್ನೂ ಓದಿ: Roopa Gururaj Column: ಪ್ರಶ್ನೆ ಕೇಳುವ ಮಕ್ಕಳನ್ನು ಸುಮ್ಮನಾಗಿಸಬೇಡಿ

ಅಣ್ಣ ಅತ್ತಿಗೆ ಬಂದರು. ನೋಡಿದರು. ಬಹಳ ಹೆದರಿಕೆಯಾಯಿತು. ಏಕೆಂದರೆ ಅವಳು ಅಣ್ಣ ಅತ್ತಿಗೆ ಗೆ ತಕ್ಕಷ್ಟು ಪಾನಕ ಮಾಡಿದ್ದಳು. ಅತ್ತಿಗೆಯ ತಾಯಿಯೂ ಜೊತೆಯಲ್ಲಿ ಬಂದಿದ್ದರು. ಕೊನೆಗೆ ಅವಳು ಒಂದು ಉಪಾಯ ಮಾಡಿದಳು. ಎರಡು ಲೋಟದಲ್ಲಿದ್ದ ಪಾನಕವನ್ನು ಅತ್ತಿಗೆಗೆ ಅವರ ತಾಯಿಗೆ ಕೊಟ್ಟಳು. ಅಣ್ಣನಿಗೆ ಬರೀ ನೀರು ಕೊಟ್ಟು ಅಣ್ಣ ನಿನಗೆ ನಿಂಬೆಹಣ್ಣಿನ ಪಾನಕ ಇಷ್ಟ ಇಲ್ಲ ಎಂದು ಅಂಗಡಿಯಿಂದ ಮಕ್ಕಳಿಗೆ ತಂದ ಸಿಹಿ ಸೋಡಾ ಇತ್ತು ತಗೋ ಎಂದು ಅಣ್ಣನಿಗೆ ಲೋಟದಲ್ಲಿ ಬರೀ ನೀರು ಕೊಟ್ಟಳು.

ಅಣ್ಣನಿಗೆ ತಂಗಿ ಪರಿಸ್ಥಿತಿ ಅರ್ಥವಾಗುತ್ತದೆ. ನೀರನ್ನು ಕುಡಿದು ಓಹೋ ಈ ಸೋಡಾ ನನಗೆ ಬಹಳ ಇಷ್ಟ ಚೆನ್ನಾಗಿದೆ ಎಂದನು. ಇದನ್ನು ಕೇಳಿದ ಅತ್ತಿಗೆ ತಾಯಿಗೆ ಆಸೆಯಾಯಿತು ಸೋಡಾ ನನಗೂ ಸ್ವಲ್ಪ ಕೊಡು ಎಂದರು. ಅತ್ತಿಗೆ ತಾಯಿಯ ಮುಂದೆ ತನ್ನ ಮರ್ಯಾದೆ ಹೋಯಿತು ಎಂದು ಕೊಂಡಿದ್ದಳು.

ಆದರೆ ಅಷ್ಟರೊಳಗೆ ಅಣ್ಣ ಅಡಿಗೆ ಮನೆಗೆ ಬಂದು ಸ್ಟೀಲ್ ಲೋಟವನ್ನು ಕೆಳಗೆ ಬೀಳಿಸಿ ಅಯ್ಯೋ ತಂಗಿ ನೀನು ಇಟ್ಟಿದ್ದ ಸೋಡಾ ಎಲ್ಲಾ ಚೆಲ್ಲಿ ಹೋಯಿತು. ಹೊರಗಡೆ ಹೋಗಿ ನಾನೇ ತರುತ್ತೇನೆ ಎಂದು ಹೇಳಿದನು ಆಗ ಅವಳ ಅತ್ತೆ ಮತ್ತು ಪತ್ನಿ ಈಗ ಬೇಡ ಮತ್ತೊಮ್ಮೆ ಕುಡಿದರಾಯಿತು ಎಂದರು.

ತಂಗಿಗೆ ಅಣ್ಣನ ಒಳ್ಳೆಯತನ ಜಾಣತನ ಕಂಡು ಅಣ್ಣನ ಮೇಲಿನ ಪ್ರೀತಿ ಹೆಚ್ಚಿತು. ತನ್ನ ಪರಿಸ್ಥಿತಿ ಯನ್ನು ಅರಿತ ಅಣ್ಣ ಎಷ್ಟು ಚೆನ್ನಾಗಿ ನಿಭಾಯಿಸಿದ ಎಂದು ಕಣ್ತುಂಬಿ ಬಂತು. ಅವರು ಹೊರಡು ವಾಗ ಭಾವುಕಳಾಗಿ ಅಣ್ಣನನ್ನೇ ನೋಡುತ್ತಿದ್ದಳು. ಹೆಂಡತಿ ಮತ್ತು ಅತ್ತೆ ಸ್ವಲ್ಪ ದೂರ ಹೋದಾಗ ಅಣ್ಣ ತಂಗಿಗೆ ಲೇ ತಂಗ್ಯಮ್ಮಾ, ಒಳಗೆ ಹೋಗು ಸೋಡಾ ಎಲ್ಲಾ ಚೆಲ್ಲಿದೆ. ಅದರ ಮೇಲೆ ಇರುವೆ ಬರುತ್ತದೆ, ಕ್ಲೀನ್ ಮಾಡಬೇಕು ಹೋಗು ಎಂದು ಓಡಿ ಬಂದು ಅವಳ ಕೈಯಲ್ಲಿ ಒಂದಷ್ಟು ಹಣ ಕೊಟ್ಟು ಅಂಗಡಿಗೆ ಹೋಗಿ ಅಗತ್ಯದ ಸಾಮಾನು ತೆಗೆದುಕೊಂಡು ಬಾ ಎಂದು ಹೇಳಿ ತಂಗಿಯ ಕೆನ್ನೆ ತಟ್ಟಿ ಓಡಿದ.

ಹೃದಯ ತುಂಬಿ ಬಂದ ತಂಗಿಗೆ ಇದ್ದರೆ ಇಂಥಾ ಅಣ್ಣ ಇರಬೇಕು ಎನಿಸಿತು. ನಮ್ಮ ಮನೆಯಲ್ಲಿ ಬೆಳೆಯುವ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಡಹುಟ್ಟಿದವರ ಕಷ್ಟ ಸುಖಗಳಿಗೆ ಆಗುವ ಸೂಕ್ಷ್ಮತೆ ಯನ್ನು ಕಲಿಸಿಕೊಡಬೇಕು. ಜೊತೆ ಬೆಳೆದ ಮಕ್ಕಳಿಗೆ ಸಾಮಾನ್ಯವಾಗಿ ಅದು ಬಂದುಬಿಡುತ್ತದೆ. ಆದರೆ ಅದರಲ್ಲಿ ತಂದೆ ತಾಯಿಯ ಪಾತ್ರ ಬಹಳ ಮಹತ್ವದ್ದು.

ಹಂಚಿಕೊಂಡು ತಿನ್ನುವುದು, ಏನೇ ತಂದು ಕೊಟ್ಟರು ಅದನ್ನು ಮತ್ತೊಬ್ಬರಿಗಾಗಿ ಎತ್ತಿಡುವುದು, ಒಬ್ಬರಿಗೆ ಆರೋಗ್ಯ ಸರಿಯಿಲ್ಲದಿದ್ದಾಗ ಮತ್ತೊಬ್ಬರು ನೆರವಾಗುವುದು, ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುವುದು ಇದೆಲ್ಲವನ್ನು ಮಕ್ಕಳಲ್ಲಿ ಮೊದಲಿನಿಂದ ನಾವು ರೂಢಿಸುತ್ತಾ ಬಂದಾಗ ಅವರಿಗೆ ತಾವು ತಮ್ಮ ಅಕ್ಕ ತಮ್ಮ ಅಣ್ಣ-ತಂಗಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಪಾಠ ಬಾಲ್ಯ ದಿಂದಲೇ ಸಿಗುತ್ತಾ ಹೋಗುತ್ತದೆ.

ತಂದೆ ತಾಯಿ ಸದಾ ಜೊತೆಯಲ್ಲಿದ್ದು ಮಕ್ಕಳನ್ನು ಕಾಯಲು ಸಾಧ್ಯವಿಲ್ಲ. ತಂದೆ ತಾಯಿಯ ನಂತರ ಆ ಜವಾಬ್ದಾರಿಯನ್ನು ಒಡಹುಟ್ಟಿದವರೇ ತೆಗೆದು ಕೊಂಡಾಗ ಮನೆಯ ಮಕ್ಕಳೆಲ್ಲರೂ ಕೂಡ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ.

ರೂಪಾ ಗುರುರಾಜ್

View all posts by this author