Dr Sadhanashree Column: ಆಯರ್ವೇದದ ಹತ್ತು ಆರೋಗ್ಯ ಸೂತ್ರಗಳು
ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್ ಬದಲಾವಣೆ ಮಾತ್ರವಲ್ಲ; ಅದು ಜೀವನದ ಹೊಸ ಅಧ್ಯಾಯವನ್ನು ಜಾಗೃತಿ ಮತ್ತು ವಿವೇಚನೆಯಿಂದ ಆರಂಭಿಸುವ ಒಂದು ಅಪರೂಪದ ಅವಕಾಶ. ಆರೋಗ್ಯ, ಸಂತೋಷ ಮತ್ತು ಶಾಂತಿ- ಇವುಗಳನ್ನು ಬಯಸದೆ ಇರುವವನು ಯಾರೂ ಇಲ್ಲ. ಆದರೆ ಮೂರು ಕೂಡ ಔಷಧಾಲಯದಲ್ಲೂ ಅಲ್ಲ, ಆಸ್ಪತ್ರೆಯಲ್ಲೂ ಅಲ್ಲ; ಅವು ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಅಡಗಿವೆ ಎಂದು ಆಯುರ್ವೇದ ಸ್ಪಷ್ಟವಾಗಿ ಹೇಳುತ್ತದೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಇಂದಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಟ್ರೆಂಡ್‌ಗಳು ಕ್ಷಣ ಕ್ಷಣಕ್ಕೂ ಬದಲಾಗು ತ್ತಿವೆ. ಆದರೆ ಆಯುರ್ವೇದದ ತತ್ವಗಳು ಸಾವಿರಾರು ವರ್ಷಗಳಿಂದ ಒಂದೇ ರೀತಿ ನಿಂತಿವೆ- ಏಕೆಂದರೆ ಅವು ದೇಹದ ಸಹಜ ನಿಯಮಗಳ ಮೇಲೆ ಆಧಾರಿತ. ಆಯುರ್ವೇದ ಎಂದಿಗೂ ‘ಎಲ್ಲರಿಗೂ ಒಂದೇ ಸೂತ್ರ’ ಎಂದು ಹೇಳುವುದಿಲ್ಲ.
ಅರುಣ್ ಎಂಬ ಯುವಕನಿಗೆ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ. ಪ್ರತಿದಿನ ಬೆಳಗ್ಗೆ ಎದ್ದು ಫೋನ್ ತೆರೆದರೆ ಹೊಸದೊಂದು ‘ಹೆಲ್ತ್ ಟ್ರೆಂಡ್’ ಅವನನ್ನು ಕರೆದೊಯ್ಯುತ್ತಿತ್ತು. ಒಂದು ದಿನ ಡಿಟಾಕ್ಸ್ ವಾಟರ್, ಮತ್ತೊಂದು ದಿನ ಇಂಟರ್ಮಿಟೆಂಟ್ ಫಾಸ್ಟಿಂಗ್, ಇನ್ನೊಂದು ದಿನ ಕೀಟೋ ಡಯಟ್, ಮತ್ತೆ ಕೆಲವೇ ದಿನಗಳಲ್ಲಿ ಬೀಜಗಳ ಆಹಾರ ಮಾತ್ರ, ನಂತರ ಹಸಿ ತರಕಾರಿ ಆಹಾರ.
ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಯುಟ್ಯೂಬ್ ಶಾರ್ಟ್‌ಗಳಲ್ಲಿ ಪ್ರತಿಯೊಂದು ಟ್ರೆಂಡ್ ಕೂಡ ‘ಇದೇ ಅಂತಿಮ ಸತ್ಯ’ ಎಂದು ಘೋಷಿಸುತ್ತಿತ್ತು. ಅರುಣ್ ಉತ್ಸಾಹದಿಂದ ಎಲ್ಲವನ್ನೂ ಪ್ರಯೋಗಿಸಿದ. ಆದರೆ ಕೆಲವು ತಿಂಗಳುಗಳ ಅವನಿಗೆ ಅಜೀರ್ಣ, ಅತಿದಣಿವು, ನಿದ್ರಾಹೀನತೆ ಮತ್ತು ಮಾನಸಿಕ ಕಿರಿಕಿರಿ ಶುರುವಾದವು.
ಯಾವ ಟ್ರೆಂಡ್ ಬಿಡಬೇಕು, ಯಾವುದನ್ನು ಹಿಡಿಯಬೇಕು ಎಂಬ ಗೊಂದಲದಲ್ಲಿ ಅವನು ತನ್ನದೇ ದೇಹದ ಮಾತನ್ನು ಕೇಳುವುದನ್ನೇ ಮರೆತ. ಪರಿಸ್ಥಿತಿ ಹದಗೆಟ್ಟಾಗ ಒಂದು ದಿನ ಅವನು ಹಿರಿಯ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿದ. ವೈದ್ಯರು ಯಾವುದೇ ಹೊಸ ಔಷಧವನ್ನೂ ಕೊಟ್ಟಿಲ್ಲ. ಅವರು ಕೇಳಿದ್ದು ಮೂರೇ ಪ್ರಶ್ನೆ- “ನಿನಗೆ ಹಸಿವಾದಾಗ ತಿನ್ನುತ್ತೀಯಾ? ದಾಹವಾದಾಗ ನೀರು ಕುಡಿಯುತ್ತೀಯಾ? ರಾತ್ರಿ ಸಮಯಕ್ಕೆ ಮಲಗುತ್ತೀಯಾ?" ಅರುಣ್‌ಗೆ ಅಚ್ಚರಿಯಾಯಿತು.
ಇಷ್ಟು ಸರಳವೇ ಆರೋಗ್ಯ? ವೈದ್ಯರು ನಗುತ್ತಾ ಹೇಳಿದ ಮಾತು ಅವನಿಗೆ ದಾರಿ ತೋರಿಸಿತು- “ಟ್ರೆಂಡ್‌ಗಳು ಪ್ರತಿದಿನ ಬದಲಾಗುತ್ತವೆ. ಆದರೆ ದೇಹದ ಪ್ರಕೃತಿ ಬದಲಾಗುವುದಿಲ್ಲ. ಅದನ್ನು ಅರಿತು ಬರೆದ ವಿಜ್ಞಾನವೇ ಆಯುರ್ವೇದ".
ಅರುಣ್ ನಿಧಾನವಾಗಿ ಸರಳ ಆಹಾರ, ನಿಯಮಿತ ಸಮಯ, ಸಹಜ ಜೀವನಶೈಲಿಗೆ ಮರಳಿದ. ಕೆಲವೇ ತಿಂಗಳುಗಳೊಳಗೆ ಅವನ ದೇಹವೂ, ಮನಸ್ಸೂ ಪುನಃ ಸಮತೋಲನಕ್ಕೆ ಬಂದವು. ಅವನು ಅರ್ಥಮಾಡಿಕೊಂಡದ್ದು ಒಂದೇ - ವಿಷಯ ವೈರಲ್ ಆದೊಡನೆಯೇ ಅದು ಸತ್ಯವಲ್ಲ; ಸತ್ಯ ಎಂದರೆ ಕಾಲಪರೀಕ್ಷೆಯನ್ನು ದಾಟಿರುವುದು.
ಇದನ್ನೂ ಓದಿ: Dr Sadhanashree Column: ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ
ಚಿಂತನೆಗೆ ಒಂದು ಮಾತು
ಇಂದಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಟ್ರೆಂಡ್‌ಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಿವೆ. ಆದರೆ ಆಯುರ್ವೇದದ ತತ್ವಗಳು ಸಾವಿರಾರು ವರ್ಷಗಳಿಂದ ಒಂದೇ ರೀತಿ ನಿಂತಿವೆ- ಏಕೆಂದರೆ ಅವು ದೇಹದ ಸಹಜ ನಿಯಮಗಳ ಮೇಲೆ ಆಧಾರಿತ. ಆಯುರ್ವೇದ ಎಂದಿಗೂ ‘ಎಲ್ಲರಿಗೂ ಒಂದೇ ಸೂತ್ರ’ ಎಂದು ಹೇಳುವುದಿಲ್ಲ. ಅದು ಹೇಳುವುದು- ಪ್ರಕೃತಿಗೆ ವಿರುದ್ಧವಾಗಿ ಅಲ್ಲ, ಪ್ರಕೃತಿಯ ಜತೆಗೂಡಿ ಬದುಕಿ.
ಆಯುರ್ವೇದದ ತತ್ತ್ವಗಳು ಫ್ಯಾಷನ್ ಅಲ್ಲ. ವೈರಲ್ ಕಂಟೆಂಟ್ ಅಲ್ಲ. ಅದು ಕಾಲಪರೀಕ್ಷಿತ ಜ್ಞಾನ. ಆದ್ದರಿಂದ ಇಂದು ಈ ಲೇಖನದಲ್ಲಿ ನಾನು ಹಂಚಿಕೊಳ್ಳುತ್ತಿರುವುದು ಹೊಸ ಪ್ರಯೋಗ ಗಳನ್ನಲ್ಲ, ವೈರಲ್ ಟ್ರೆಂಡ್‌ಗಳನ್ನಲ್ಲ. ಬದಲಿಗೆ ಸಾವಿರಾರು ವರ್ಷಗಳಿಂದ ಕಾಲಪರೀಕ್ಷೆಯನ್ನು ದಾಟಿರುವ, ಪುನಃ ಪುನಃ ಸತ್ಯವೆಂದು ಸಾಬೀತಾಗಿರುವ ಆಯುರ್ವೇದದ ಹತ್ತು ಆರೋಗ್ಯ ಸೂತ್ರ ಗಳನ್ನು ಮಾತ್ರ. ಈ ಸೂತ್ರಗಳನ್ನು ಪಾಲಿಸಲು ದೊಡ್ಡ ತ್ಯಾಗವೂ ಬೇಡ, ದುಬಾರಿ ಆಹಾರವೂ ಬೇಡ.
ಕೇವಲ ವಿವೇಚನೆ, ಅರಿವು, ಸರಳತೆ ಮತ್ತು ನಿರಂತರತೆ ಸಾಕು. ಈ ಹತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಹೊಸ ವರ್ಷವನ್ನು ನಿಜವಾಗಿಯೂ ಆರೋಗ್ಯಕರ ದಿಕ್ಕಿನಲ್ಲಿ ಆರಂಭಿಸ ಬಹುದು.
ಈ ಹೊಸ ವರ್ಷದಲ್ಲಿ ಹೊಸ ಟ್ರೆಂಡ್‌ಗಳನ್ನು ಹಿಂಬಾಲಿಸುವ ಬದಲು, ಶಾಶ್ವತ ಜ್ಞಾನವನ್ನು ನಿಮ್ಮ ಜೀವನದ ಭಾಗವಾಗಿಸಿಕೊಳ್ಳಿ. ಈ ಹತ್ತು ಆಯುರ್ವೇದ ಸೂತ್ರಗಳೇ ನಿಮ್ಮ ಹೊಸ ವರ್ಷದ ಆರೋಗ್ಯ ಸಂಕಲ್ಪವಾಗಲಿ. ಇವುಗಳನ್ನು ಅನುಸರಿಸಿದರೆ, ನಿಮ್ಮ ದೇಹದಲ್ಲೂ ಮನಸ್ಸಲ್ಲೂ ಕಾಣುವ ಬದಲಾವಣೆ ನಿಮ್ಮನ್ನೇ ಅಚ್ಚರಿ ಪಡಿಸುವುದು ನಿಸ್ಸಂಶಯ!
ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್ ಬದಲಾವಣೆ ಮಾತ್ರವಲ್ಲ; ಅದು ಜೀವನದ ಹೊಸ ಅಧ್ಯಾಯವನ್ನು ಜಾಗೃತಿ ಮತ್ತು ವಿವೇಚನೆಯಿಂದ ಆರಂಭಿಸುವ ಒಂದು ಅಪರೂಪದ ಅವಕಾಶ. ಆರೋಗ್ಯ, ಸಂತೋಷ ಮತ್ತು ಶಾಂತಿ- ಇವುಗಳನ್ನು ಬಯಸದೆ ಇರುವವನು ಯಾರೂ ಇಲ್ಲ. ಆದರೆ ಮೂರು ಕೂಡ ಔಷಧಾಲಯದಲ್ಲೂ ಅಲ್ಲ, ಆಸ್ಪತ್ರೆಯಲ್ಲೂ ಅಲ್ಲ; ಅವು ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಅಡಗಿವೆ ಎಂದು ಆಯುರ್ವೇದ ಸ್ಪಷ್ಟವಾಗಿ ಹೇಳುತ್ತದೆ. ಈ ಹೊಸ ವರ್ಷದಲ್ಲಿ ಪಾಲಿಸಬಹುದಾದ ಹತ್ತು ಸರಳ ಆದರೆ ಶಕ್ತಿಯುತ ಆರೋಗ್ಯ ಸೂತ್ರಗಳನ್ನು ಇಲ್ಲಿ ಪರಿಚಯಿಸು ತ್ತಿದ್ದೇನೆ.
1. ದಿನಚರ್ಯೆಗೆ ಶಿಸ್ತು ತಂದುಕೊಳ್ಳಿ
ಬೆಳಗ್ಗೆ ಸೂರ್ಯೋದಯಕ್ಕೂ ಮೊದಲು ಎಚ್ಚರವಾಗುವುದು ಆಯುರ್ವೇದದ ಪ್ರಮುಖ ನಿಯಮ. ಇದು ದೇಹದ ಜೈವಿಕ ಗಡಿಯಾರವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ನಿಯತ ಸಮಯಕ್ಕೆ ಎಚ್ಚರವಾಗುವುದು, ಶೌಚ, ಅಭ್ಯಂಗ, ವ್ಯಾಯಾಮ- ಇವೆಲ್ಲವೂ ದೇಹಕ್ಕೆ ಕಾಯಂ ಭದ್ರತಾ ವ್ಯವಸ್ಥೆ.
2. ಅಗ್ನಿಯನ್ನು ಗೌರವಿಸಿ: ಸರಿಯಾದ ಆಹಾರ, ಸರಿಯಾದ ಸಮಯ ಆಯುರ್ವೇದದಲ್ಲಿ ಜಠರಾಗ್ನಿಗೆ ಅತ್ಯಂತ ಮಹತ್ವ. ಹಸಿವಿಲ್ಲದೆ ತಿನ್ನುವುದು, ಅತಿಯಾಗಿ ತಿನ್ನುವುದು ಅಥವಾ ಅಸಮಯದಲ್ಲಿ ತಿನ್ನುವುದು ಅಗ್ನಿಯನ್ನು ದುರ್ಬಲಗೊಳಿಸುತ್ತದೆ. ಹಸಿವಿನ ಸಂಕೇತವನ್ನು ಗಮನಿಸಿ, ಮಧ್ಯಾಹ್ನ ಉತ್ತಮ ಊಟ ಮತ್ತು ರಾತ್ರಿ ಲಘು ಆಹಾರವನ್ನು ಪಾಲಿಸಿದರೆ ಅರ್ಧ ರೋಗಗಳು ದೂರವಾಗುತ್ತವೆ.
3. ಆಹಾರವೇ ಔಷಧ
ಹೊಸ ವರ್ಷದಲ್ಲಿ ದುಬಾರಿ ಸೂಪರ್-ಡ್‌ಗಳ ಹಿಂದೆ ಓಡಬೇಕಾಗಿಲ್ಲ. ಋತುಸಮ್ಮತ, ಪರಂಪರಾ ನುಗತ, ತಾಜಾ ಆಹಾರವೇ ಅತ್ಯುತ್ತಮ ಔಷಧ. ಕಾಲೋದ್ಭವ ಹಣ್ಣುಗಳ ಸೇವನೆ, ಗೃಹಪಾಕದ ಸರಳ ಪಾಯಸ, ಅನ್ನ, ತುಪ್ಪ, ಸಾರು, ಪಲ್ಯ, ಮಜ್ಜಿಗೆ- ಇವೇ ದೀರ್ಘಕಾಲದ ಆರೋಗ್ಯದ ಮೂಲ.
4. ತುಪ್ಪದ ಬಳಕೆಯನ್ನು ಮರೆಯಬೇಡಿ
ತುಪ್ಪವನ್ನು ಆಯುರ್ವೇದವು ‘ಅಮೃತ’ ಎಂದು ಕರೆಯುತ್ತದೆ. ಇದು ಜಠರಾಗ್ನಿಯನ್ನು ಹೆಚ್ಚಿಸಿ, ಧಾತುಗಳನ್ನು ಪೋಷಿಸಿ, ಮನಸ್ಸಿಗೆ ಶಾಂತಿ ನೀಡುತ್ತದೆ. ಪ್ರತಿದಿನ ಕರಗಿಸಿದ ಒಂದು ಚಮಚ ಶುದ್ಧ ದೇಶಿ ತುಪ್ಪವನ್ನು ಬಿಸಿ ಆಹಾರದಲ್ಲಿ ಸೇರಿಸುವುದು ಆರೋಗ್ಯಕರ ಅಭ್ಯಾಸ. ಹಾ! ತುಪ್ಪವು ವಿಷಹರ, ಬುದ್ಧಿಯನ್ನು ಚುರುಕುಗೊಳಿಸಿ, ಕಣ್ಣನ್ನು ಕಾಪಾಡುತ್ತದೆ ಎಂಬುದನ್ನು ಮರೆಯಬೇಡಿ.
5. ನಿದ್ರೆಯನ್ನು ಬಲಿ ಕೊಡಬೇಡಿ
ನಿದ್ರೆ ಆಯುರ್ವೇದದ ಮೂರು ಉಪಸ್ತಂಭಗಳಲ್ಲಿ ಒಂದು. ತಡರಾತ್ರಿ ಮಲಗುವುದು, ಪರದೆಗಳ ಅತಿಯಾದ ಬಳಕೆ, ಅಸ್ಥಿರ ನಿದ್ರೆ, ಹಗಲು ನಿದ್ರೆ- ಇವೆಲ್ಲವೂ ತ್ರಿದೋಷಗಳನ್ನೂ ಹಾಳು ಮಾಡುತ್ತವೆ. ರಾತ್ರಿ 10 ಗಂಟೆಗೆ ಮೊದಲು ಮಲಗುವ ಅಭ್ಯಾಸವನ್ನು ಹೊಸ ವರ್ಷದ ದೃಢನಿಶ್ಚಯವನ್ನಾಗಿ ಮಾಡಿಕೊಳ್ಳಿ.
6. ದೇಹಕ್ಕೆ ವ್ಯಾಯಾಮ ನೀಡಿ, ಆದರೆ ಹಿಂಸಿಸಬೇಡಿ
ವ್ಯಾಯಾಮ ಅವಶ್ಯ, ಆದರೆ ಅತಿಯಾದ ವ್ಯಾಯಾಮ ಹಾನಿಕಾರಕ. ನಿಮ್ಮ ಶಕ್ತಿ, ಋತು ಮತ್ತು ವಯಸ್ಸಿಗೆ ಅನುಗುಣವಾಗಿ ಯೋಗಾಸನ, ನಡಿಗೆ, ಸೂರ್ಯನಮಸ್ಕಾರಗಳನ್ನು ದಿನಚರಿಯಲ್ಲಿ ಸೇರಿಸಿ. ಬೆವರು ಸ್ವಲ್ಪ ಬಂದರೆ ಸಾಕು- ಅತಿಯಾದ ಆಯಾಸ ಬೇಡ.
7. ಮನಸ್ಸಿಗೂ ಪುಷ್ಟಿ ಬೇಕು
ಆಯುರ್ವೇದವು ದೇಹ ಮತ್ತು ಮನಸ್ಸನ್ನು ಬೇರ್ಪಡಿಸುವುದಿಲ್ಲ. ನಿರಂತರ ಒತ್ತಡ, ಚಿಂತೆ, ಶ್ಲೋಕ , ಕ್ರೋಧ, ಅಶಾಂತಿ, ಅಸೂಯೆ- ಇವೆಲ್ಲವೂ ರೋಗಗಳಿಗೆ ಕಾರಣವಾಗುತ್ತವೆ. ಪ್ರತಿದಿನ ಸ್ವಲ್ಪ ಸಮಯ ಮೌನ, ಧ್ಯಾನ, ಪ್ರಾರ್ಥನೆ ಅಥವಾ ಸ್ವಶ್ವಾಸದ ಅರಿವಿಗೆ ಮೀಸಲಿಡಿ.
8. ಋತುಚರ್ಯೆಯನ್ನು ಪಾಲಿಸಿ
ಪ್ರತಿ ಋತುವಿಗೂ ವಿಭಿನ್ನ ಆಹಾರ ಮತ್ತು ಜೀವನಶೈಲಿ ಅಗತ್ಯ. ಬೇಸಗೆಯಲ್ಲಿ ತಂಪಾದ, ಹಗುರ ಆಹಾರ; ಚಳಿಗಾಲದಲ್ಲಿ ಪೋಷಕ ಮತ್ತು ಉಷ್ಣ ಆಹಾರ- ಹೀಗೆ ಋತುಸಮ್ಮತ ಜೀವನಶೈಲಿಯನ್ನು ಅನುಸರಿಸಿದರೆ ದೇಹವು ಪ್ರಕೃತಿಯೊಂದಿಗೆ ಹೊಂದಿಕೊಂಡು ಪೂರ್ತಿ ವರ್ಷದ ಸ್ವಾಸ್ಥ್ಯ ಸುರಕ್ಷಿತ.
9. ಡಿಟಾಕ್ಸ್ ಎಂಬ ಹೆಸರಿನಲ್ಲಿ ದೇಹಕ್ಕೆ ಕಿರುಕುಳ ಕೊಡಬೇಡಿ
ಆಯುರ್ವೇದದಲ್ಲಿ ಶುದ್ಧೀಕರಣವೆಂದರೆ ಒಂದು ವೈಜ್ಞಾನಿಕ ಪ್ರಕ್ರಿಯೆ. ಅತಿಯಾದ ಉಪವಾಸ, ಹೆಸರೇ ಕೇಳದ ಆಹಾರ ದ್ರವ್ಯಗಳ ವಿಚಿತ್ರ ಸಂಯೋಜನೆ, ಬೇರೆ ಬೇರೆ ರೀತಿಯ ‘ಟೀ’ಗಳ ಸೇವನೆ- ಇವೆಲ್ಲವೂ ಎಲ್ಲರಿಗೂ ಸೂಕ್ತವಲ್ಲ. ಸರಿಯಾದ ಆಹಾರ, ಸಮಯ ಮತ್ತು ನಿದ್ರೆಯೇ ನಿಜವಾದ ಡಿಟಾಕ್ಸ್.
10.ನೀರನ್ನು ಔಷಧದಂತೆ ಕುಡಿಯಿರಿ, ಪ್ರಮಾಣವೇ ಗುಣ
‘ಹೆಚ್ಚು ನೀರು ಕುಡಿಯಬೇಕು’ ಎಂಬ ಅಭಿಯಾನ ಇತ್ತೀಚಿನ ವರ್ಷಗಳಲ್ಲಿ ಎಡೆ ಕೇಳಿಸುತ್ತಿದೆ. ಆದರೆ ಆಯುರ್ವೇದದ ದೃಷ್ಟಿಯಲ್ಲಿ ನೀರು ಕೂಡ ಔಷಧದಂತೆ; ಅದನ್ನು ಹಸಿವಿನಂತೆ ದಾಹದ ಸೂಚನೆ ಯಂತೆ ಮಾತ್ರ ಸೇವಿಸಬೇಕು. ದಾಹವಿಲ್ಲದೆ ನಿರಂತರವಾಗಿ ನೀರು ಕುಡಿಯುವುದರಿಂದ ಜಠರಾಗ್ನಿ ಕುಂದುತ್ತದೆ, ಜೀರ್ಣಕ್ರಿಯೆ ಮಂದಗೊಳ್ಳುತ್ತದೆ ಮತ್ತು ಶರೀರದಲ್ಲಿ ಕಫದ ಸಂಚಯ ವಾಗುತ್ತದೆ.
ತುಂಬಾ ತಣ್ಣನೆಯ ನೀರು ಅಥವಾ ಊಟದ ಮಧ್ಯೆ ಅತಿಯಾದ ನೀರು ಸೇವನೆ ಅಗ್ನಿಗೆ ಹಾನಿ ಕಾರಕ. ಊಟದ ವೇಳೆ ಸ್ವಲ್ಪ ಉಷ್ಣ ಅಥವಾ ಸಾಮಾನ್ಯ ತಾಪಮಾನದ ನೀರು ಸಾಕು. ಊಟದ ನಂತರ ತಕ್ಷಣ ಹೆಚ್ಚಿನ ಪ್ರಮಾಣದ ನೀರು ಕುಡಿಯುವುದನ್ನು ತಪ್ಪಿಸಬೇಕು.ಬೆಳಗ್ಗೆ ಎದ್ದ ತಕ್ಷಣ ದಾಹವಿಲ್ಲದೆ ಲೀಟರ್‌ಗಟ್ಟಲೆ ನೀರು ಕುಡಿಯುವುದು ಎಂದಿಗೂ ಸೂಕ್ತವಲ್ಲ.
ದೇಹದ ಅಗತ್ಯ, ಋತು, ಶ್ರಮ ಮತ್ತು ವಯಸ್ಸನ್ನು ಗಮನಿಸಿ ನೀರಿನ ಪ್ರಮಾಣವನ್ನು ಹೊಂದಿಸಿ ಕೊಳ್ಳಬೇಕು. ‘ದೇಹ ಕೇಳಿದಷ್ಟು ನೀರು ಕುಡಿ; ಮನಸ್ಸು ಹೇಳಿದಷ್ಟು ಅಲ್ಲ’.
ಆರೋಗ್ಯ ಒಂದು ಪ್ರಯಾಣ, ಗುರಿಯಲ್ಲ
ಹೊಸ ವರ್ಷದ ಉತ್ಸಾಹದಲ್ಲಿ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಆರೋಗ್ಯ ರಕ್ಷಣೆ ಒಂದು ದಿನದ ಕೆಲಸವಲ್ಲ. ಪ್ರತಿದಿನದ ಸಣ್ಣ ಆಯ್ಕೆಗಳು- ಏನು ತಿನ್ನುತ್ತೇವೆ, ಯಾವಾಗ ನಿದ್ರೆ ಮಾಡುತ್ತೇವೆ, ಹೇಗೆ ಯೋಚಿಸುತ್ತೇವೆ- ಇವೇ ನಮ್ಮ ಭವಿಷ್ಯದ ಆರೋಗ್ಯವನ್ನು ನಿರ್ಮಿಸುತ್ತವೆ.
ಹೊಸ ವರ್ಷವನ್ನು ಹೊಸ ಔಷಧಿಗಳಿಂದಲ್ಲ, ಹೊಸ ಜಾಗೃತಿಯಿಂದ ಆರಂಭಿಸೋಣ. ಆಯುರ್ವೇದ ನಮಗೆ ಹೇಳುವುದು- ದೇಹದ ಮಾತನ್ನು ಕೇಳಿ, ಪ್ರಕೃತಿಯ ಲಯಕ್ಕೆ ಹೊಂದಿಕೊಳ್ಳಿ, ಸರಳ ಜೀವನವನ್ನು ಅಪ್ಪಿಕೊಳ್ಳಿ. ಈ ಹತ್ತು ಸೂತ್ರಗಳು ಹೊಸ ವರ್ಷದಲ್ಲಿ ಆರೋಗ್ಯ, ಶಾಂತಿ ಮತ್ತು ಸಂತೋಷದ ದಾರಿಯಲ್ಲಿ ನಿಮ್ಮನ್ನು ಮುನ್ನಡೆಸಲಿ.
“ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ, ಆತುರಸ್ಯ ವಿಕಾರ ಪ್ರಶಮನಂ"- ಆರೋಗ್ಯವನ್ನು ರಕ್ಷಿಸುವುದೇ ಆಯುರ್ವೇದದ ಗುರಿ. ಹೊಸ ವರ್ಷ ಎಂದರೆ ಮತ್ತೊಂದು ಕ್ಷಣಿಕ ಆರೋಗ್ಯ ಟ್ರೆಂಡ್ ಅನ್ನು ಹಿಂಬಾಲಿಸುವ ಸಮಯವಲ್ಲ. ಅದು ನಮ್ಮದೇ ದೇಹವನ್ನು ಮರುಕಳಿಸಿ ಆಲಿಸುವ, ಅದರ ಸಹಜ ಅಗತ್ಯಗಳನ್ನು ಅರಿತುಕೊಳ್ಳುವ ಸಮಯ.
ಮಾನವನ ದೇಹವು ಪ್ರಯೋಗಶಾಲೆಯಲ್ಲಿನ ವಸ್ತುವಲ್ಲ. ಪ್ರತಿದಿನ ಬದಲಾಗುವ ಸಲಹೆಗಳಿಗೆ ಅನುಗುಣವಾಗಿ ಅದನ್ನು ಮರುಮರು ಪರೀಕ್ಷೆಗೆ ಒಳಪಡಿಸುವುದು ಆರೋಗ್ಯವಲ್ಲ. ದೇಹಕ್ಕೆ ಬೇಕಿರುವುದು ಹೊಸತನವಲ್ಲ; ಅದಕ್ಕೆ ಬೇಕಿರುವುದು ನಿಯಮ, ಸಮತೋಲನ ಮತ್ತು ಕಾಳಜಿ. ಈ ಸರಳ ಸತ್ಯವನ್ನು ಸಾವಿರಾರು ವರ್ಷಗಳ ಹಿಂದೆ ಅರಿತು, ಅದನ್ನು ಜೀವನಶೈಲಿಯ ರೂಪದಲ್ಲಿ ನೀಡಿದ ವಿeನವೇ ಆಯುರ್ವೇದ.
ಈ ಲೇಖನದಲ್ಲಿ ವಿವರಿಸಲಾದ ಹತ್ತು ಆರೋಗ್ಯ ಸೂತ್ರಗಳು ಅಸಾಧ್ಯವಾದ ಸಂಕಲ್ಪಗಳಲ್ಲ. ಅವು ನಮ್ಮ ದೈನಂದಿನ ಬದುಕಿನಲ್ಲಿಯೇ ಅಡಗಿರುವ ಸರಳ ತತ್ವಗಳು. ಹಸಿವಾದಾಗ ಮಾತ್ರ ಆಹಾರ ಸೇವಿಸುವುದು, ದಾಹದ ಸೂಚನೆಯಂತೆ ನೀರು ಕುಡಿಯುವುದು, ಸಮಯಕ್ಕೆ ನಿದ್ರೆಗೆ ಒಪ್ಪಿಕೊಳ್ಳು ವುದು, ಅತಿರೇಕವನ್ನು ತೊರೆದು ಸಮತೋಲನವನ್ನು ಅಪ್ಪಿಕೊಳ್ಳುವುದು- ಇವೆಲ್ಲವೂ ದೇಹದ ಸಹಜ ನಿಯಮಗಳಿಗೆ ಗೌರವ ಸಲ್ಲಿಸುವ ಕ್ರಮಗಳು.
ಈ ತತ್ವಗಳನ್ನು ದಿನನಿತ್ಯದ ಬದುಕಿನಲ್ಲಿ ನಿಷ್ಠೆಯಿಂದ ಅಳವಡಿಸಿಕೊಂಡರೆ, ದೇಹ ನಿಧಾನವಾಗಿ ತನ್ನ ಸಹಜ ಸ್ಥಿತಿಯನ್ನು ಮರಳಿ ಪಡೆಯುತ್ತದೆ. ಅನಗತ್ಯ ಔಷಧಿಗಳ ಅವಲಂಬನೆ ಕಡಿಮೆ ಯಾಗುತ್ತದೆ; ಜೀರ್ಣಕ್ರಿಯೆ, ನಿದ್ರೆ ಮತ್ತು ಮನಸ್ಸಿನ ಸ್ಥಿತಿಯಲ್ಲಿ ಸ್ಪಷ್ಟವಾದ ಸುಧಾರಣೆ ಕಾಣುತ್ತದೆ.
ಆರೋಗ್ಯವು ಸಾಧಿಸಬೇಕಾದ ಗುರಿಯಲ್ಲ, ಬದುಕಿನ ಸಹಜ ಗುಣವಾಗಿ ವ್ಯಕ್ತವಾಗುತ್ತದೆ. ಈ ಹೊಸ ವರ್ಷದಲ್ಲಿ ಒಂದು ಸರಳ ಆದರೆ ದೃಢ ಸಂಕಲ್ಪ ಮಾಡೋಣ- ಕ್ಷಣಿಕ ಟ್ರೆಂಡ್‌ಗಳ ಹಿಂದೆ ಓಡುವು ದಲ್ಲ, ಶಾಶ್ವತ ಜ್ಞಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ. ದೇಹದ ವಿರುದ್ಧ ಹೋರಾ ಡುವುದಲ್ಲ, ದೇಹದ ಜತೆಗೆ ನಡೆಯುವ ಸಂಕಲ್ಪ. ಒಂದು ವರ್ಷ, ಒಂದು ಜಾಗೃತ ಸಂಕಲ್ಪ ಸಾಕು. ಉಳಿದ ಎಲ್ಲವನ್ನು ದೇಹವೇ ತನ್ನ ಜ್ಞಾನದಿಂದ ನಿರ್ವಹಿಸುತ್ತದೆ!