ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News: ವಿಜೃಂಭಣೆಯಿಂದ ಜರುಗಿದ ಗುಬ್ಬಿಯಪ್ಪನ ಬೆಳ್ಳಿ ಪಲ್ಲಕ್ಕಿ ಉತ್ಸವ

ದೇವಾಲಯ ಸೇರಿದಂತೆ ಸುತ್ತಲಿನ ಆವರಣ ದೀಪಾಲಂಕಾರ ಎಲ್ಲರನ್ನೂ ಸೆಳೆದಿತ್ತು. ಮಕ್ಕಳ ಆಟಿಕೆ, ವಿವಿಧ ತಿಂಡಿ ತಿನಿಸು, ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನ ಜೊತೆಗೆ ಯಳವಯ್ಯ ತೋಟದ ಯುವಕರು ಆಯೋಜಿಸಿದ್ದ ಗುಬ್ಬಿ ಉತ್ಸವ ಕಾರ್ಯಕ್ರಮ ಅದ್ದೂರಿ ಯಾಗಿ ನಡೆಯಿತು

ವಿಜೃಂಭಣೆಯಿಂದ ಜರುಗಿದ ಗುಬ್ಬಿಯಪ್ಪನ ಬೆಳ್ಳಿ ಪಲ್ಲಕ್ಕಿ ಉತ್ಸವ

-

Ashok Nayak
Ashok Nayak Mar 5, 2026 5:12 PM

ಗುಬ್ಬಿ: ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಬೆಳ್ಳಿ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ನಡೆಯಿತು.

ಚಂದ್ರ ಗ್ರಹಣ ನಂತರ ರಾತ್ರಿ 7 ಗಂಟೆಗೆ ವಿಶೇಷ ಪೂಜೆ ನಡೆಸಿ ನಂತರ ಸ್ವಾಮಿ ಅವರಿಗೆ ಹಣ್ಣಿನ ಅಲಂಕಾರ ಮಾಡಲಾಯಿತು. ಸಾವಿರಾರು ಭಕ್ತರ ಕಣ್ಮನ ಸೆಳೆದ ಹಣ್ಣಿನ ಅಲಂಕಾ ರಕ್ಕೆ ಜೊತೆಯಾಗಿ ಮೆರೆಗು ನೀಡಿದ ಬೆಳ್ಳಿ ಪಲ್ಲಕ್ಕಿ ಉತ್ಸವ ದೇವಾಲಯ ಆವರಣದಲ್ಲಿ ಆಯೋಜಿಸಲಾಗಿತ್ತು.

ಬೆಳ್ಳಿ ಪಲ್ಲಕ್ಕಿಗೆ ಹೂವು ಹಾಗೂ ವಿದ್ಯುದ್ದೀಪಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಇಡೀ ರಾತ್ರಿ ಉತ್ಸವ ನಡೆಸಲಾಯಿತು. ಉತ್ಸವದ ಅಲಂಕಾರ ಕಣ್ಣು ತುಂಬಿಸಿಕೊಂಡ ಸಾವಿರಾರು ಭಕ್ತರು ಜಾತ್ರೆಯ ಸಂಭ್ರಮವನ್ನು ಸವಿದರು.

ಇದನ್ನೂ ಓದಿ: Gubbi News ಮಾದಾರ ಮಹಾಸಭಾದ ಕಡಬ ಹೋಬಳಿ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ್ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆ

ದೇವಾಲಯ ಸೇರಿದಂತೆ ಸುತ್ತಲಿನ ಆವರಣ ದೀಪಾಲಂಕಾರ ಎಲ್ಲರನ್ನೂ ಸೆಳೆದಿತ್ತು. ಮಕ್ಕಳ ಆಟಿಕೆ, ವಿವಿಧ ತಿಂಡಿ ತಿನಿಸು, ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನ ಜೊತೆಗೆ ಯಳವಯ್ಯ ತೋಟದ ಯುವಕರು ಆಯೋಜಿಸಿದ್ದ ಗುಬ್ಬಿ ಉತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯ ವೈಭವ ಕಂಡು ಪುಳುಕಿತರಾದರು. ಇಡೀ ರಾತ್ರಿ ನಡೆಯುವ ಉತ್ಸವಕ್ಕೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಅಲ್ಲಿನ ದಾಸೋಹ ಸಮಿತಿ ಸ್ವಯಂ ಸೇವಕರನ್ನು ಬಳಸಿ ಆಯೋಜಿಸಿ ದ್ದರು.

ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಎಲ್ಲಾ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಹದಿನೆಂಟು ಕೋಮಿನ ಮುಖಂಡರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ನೆರೆದಿದ್ದರು.