Susan Thomas Column: ಕೈಚೀಲ ಈಗ ಪ್ರಕೃತಿಯಷ್ಟೇ ಸಹಜ, ಸಾಂಕೇತಿಕ
1944ರ ಕಾಲಘಟ್ಟದಲ್ಲಿ ಮಂಜುಗಡ್ಡೆಯನ್ನು ಇಟ್ಟುಕೊಳ್ಳುವ ಬಾಕ್ಸ್ ಅನ್ನು ಹೊತ್ತೊಯ್ಯಲು ಬಳಸಲ್ಪಡುತ್ತಿದ್ದ ಈ ಕೈಚೀಲ, ಆಧುನಿಕ ಕಾಲಘಟ್ಟದಲ್ಲಿ ಒಂದು ಸಂಸ್ಕೃತಿಯೇ ಆಗಿ ಬದಲಾ ಗಿದೆ. ನಮ್ಮ ನಿತ್ಯ ಜೀವನದಲ್ಲೊಂದು ಭಾಗವಾಗಿದೆ. ಪುಸ್ತಕ ಬಿಡುಗಡೆ, ಧರಣಿ, ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ, ಕಾಲೇಜುಗಳು ಆರಂಭವಾಗುವ ಹಂತ, ಸಮಾರಂಭಗಳು ಎಲ್ಲೆಲ್ಲೂ ಈ ಕೈಚೀಲಗಳು ಕಾಣುತ್ತವೆ.
-
ಹೊರಸೂಸುವ ಮನ
ಸುಸಾನ್ ಥಾಮಸ್
ಬರಹ ಹೊಂದಿರುವ ಕೈಚೀಲ ಕಸುಬುದಾರಿಕೆಗೆ ಒಂದು ಉದಾಹರಣೆ. ನೀವು ಪ್ಯಾಲೆ ಸ್ಟೀನ್ ಬಗ್ಗೆ ಕಾಳಜಿ ವಹಿಸುತ್ತೀರೋ ಇಲ್ಲವೋ, ನೀವು ಪುಸ್ತಕದ ಸಾಲು ಗಳನ್ನು ಓದುತ್ತೀರೋ ಇಲ್ಲವೋ, ಕೈಚೀಲದಲ್ಲಿ ಮಾತ್ರ ಎಲ್ಲರ ಕಣ್ಣು ರಫಾ ಮೇಲಿದೆ ಎಂದು ಬರೆಯಲಾಗಿರು ತ್ತದೆ. ಅದು ನಾವು ತೆಗೆದುಕೊಳ್ಳಬೇಕಾದ ವಸ್ತುಗಳ ಪಟ್ಟಿಯನ್ನೂ ಹೊಂದಿರುತ್ತದೆ. ಅದೂ ಈಗ ಟ್ರೆಂಡ್ ಆಗಿದೆ. ಈ ಕೈಚೀಲಗಳು ಒಂದು ಸಾಂಕೇತಿಕ ಗುಣ ಹೊಂದಿವೆ.
ಈ ವರ್ಷ ಫೆಬ್ರವರಿಯಲ್ಲಿ ಮೆಕ್ ಡೊನಾಲ್ಡ್‌ಇಂಡಿಯಾ ‘ಟೋಟ್‌ಅಲಿ ಯುವರ್ಸ್’ ( toteallyyours) ಎಂಬ ಅಭಿಯಾನ ಆರಂಭಿಸಿತು. ಅದೊಂದು ಕೈಚೀಲವನ್ನು ತನ್ನ ವ್ಯಾಪಾರದ ಭಾಗವಾಗಿ ನೀಡಲು ಶುರು ಮಾಡಿದೆ. 299 ರು., ಅದಕ್ಕೂ ಮೇಲಿನ ಮೌಲ್ಯದ ಊಟವನ್ನು ಆರ್ಡರ್ ಮಾಡಿದರೆ, ಅದನ್ನು ತನ್ನದೇ ಕೈಚೀಲದಲ್ಲಿ ಹಾಕಿ, ನಿಮಗೆ ತಲುಪಿಸುವ ವ್ಯಕ್ತಿಗೆ ನೀಡುತ್ತದೆ.
1944ರ ಕಾಲಘಟ್ಟದಲ್ಲಿ ಮಂಜುಗಡ್ಡೆಯನ್ನು ಇಟ್ಟುಕೊಳ್ಳುವ ಬಾಕ್ಸ್ ಅನ್ನು ಹೊತ್ತೊಯ್ಯ ಲು ಬಳಸಲ್ಪಡುತ್ತಿದ್ದ ಈ ಕೈಚೀಲ, ಆಧುನಿಕ ಕಾಲಘಟ್ಟದಲ್ಲಿ ಒಂದು ಸಂಸ್ಕೃತಿಯೇ ಆಗಿ ಬದಲಾಗಿದೆ. ನಮ್ಮ ನಿತ್ಯ ಜೀವನದಲ್ಲೊಂದು ಭಾಗವಾಗಿದೆ. ಪುಸ್ತಕ ಬಿಡುಗಡೆ, ಧರಣಿ, ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ, ಕಾಲೇಜುಗಳು ಆರಂಭವಾಗುವ ಹಂತ, ಸಮಾರಂಭ ಗಳು ಎಲ್ಲೆಲ್ಲೂ ಈ ಕೈಚೀಲಗಳು ಕಾಣುತ್ತವೆ.
ಪ್ರಜಾಪ್ರಭುತ್ವದ ಒಂದು ಭಾಗವಾಗಿಯೇ ಇದು ಹರಡಿಕೊಂಡಿದೆ. ಅತ್ಯಂತ ಶಾಂತ ವ್ಯಕ್ತಿ, ರಾಜಕೀಯ ಕಾರ್ಯಕರ್ತ, ಯಥಾಸ್ಥಿತಿವಾದಿ, ಕ್ರಾಂತಿಕಾರಿ (ಕಾರಣವಿದ್ದೋ, ಕಾರಣ ವಿಲ್ಲದೆಯೋ!) ಎಲ್ಲರ ಬಳಿಯೂ ಇದಿರುತ್ತದೆ.
ಬೆಂಗಳೂರಿನ ಎನ್‌ಐಎಫ್ʼಟಿ ವಿದ್ಯಾಸಂಸ್ಥೆಯಲ್ಲಿ ನಾನು ಐದು ವರ್ಷ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದೆ. ಆಗ ಕಾಲೇಜು ಆರಂಭದಲ್ಲಿ ಈ ಕೈಚೀಲಗಳು ವಿದ್ಯಾರ್ಥಿಗಳ ಜೊತೆಯಲ್ಲೇ ಇರುತ್ತಿದ್ದವು. 2020ರಲ್ಲಿ ಪರಿಸ್ಥಿತಿ ಕೈಮೀರಿ ಎಲ್ಲವೂ ಆನ್‌ಲೈನ್ ಆದ ವರ್ಷವೊಂದು ಮಾತ್ರ ಇದಕ್ಕೆ ಹೊರತು.
ಇದನ್ನೂ ಓದಿ: Susan Thomas Column: ಮಹಿಳೆಯರು ಕಾರ್ಯಕ್ಷೇತ್ರದಲ್ಲಿ ತುಮುಲಕ್ಕೆ ಒಡ್ಡಿಕೊಳ್ಳಬೇಕಿಲ್ಲ
ಪ್ರತಿವರ್ಷ ಕೈಚೀಲಗಳಲ್ಲಿ ನಾವು ಪ್ರಯೋಗ ಮಾಡುತ್ತಿದ್ದೆವು. ಪಾಕೆಟ್‌ಗಳು, ಚೀಲ ಮುಚ್ಚಲು ಜಿಪ್‌ಗಳು, ಹಿಡಿಕೆಪಟ್ಟಿಯ ಉದ್ದ ಇದರಲ್ಲಿ ಬದಲಾವಣೆಗಳು ಸಂಭವಿಸು ತ್ತಿದ್ದವು. ಆದರೆ ಕೈಚೀಲಗಳು ಮಾತ್ರ ಕಡ್ಡಾಯವಾಗಿದ್ದವು.
21ನೇ ಶತಮಾನದ ಆರಂಭದ ಹೊಸ್ತಿಲಲ್ಲಿ ನನ್ನ ವೃತ್ತಿಜೀವನ ಆರಂಭವಾದಾಗ, ಸಮ್ಮೇಳನಗಳಲ್ಲಿ ಫೈಲ್‌ಗಳನ್ನು ನೀಡಲಾಗುತ್ತಿತ್ತು. ಕಾರ್ಯಕ್ರಮದಲ್ಲಿ ಏನೇನು ನಡೆಯುತ್ತದೆ ಎಂಬ ಮಾಹಿತಿ ಪುಸ್ತಿಕೆಗಳನ್ನು ಬಟ್ಟೆಯ ಫೈಲ್‌ಗಳಲ್ಲಿ ಹಾಕಿ ಕೊಡಲಾಗು ತ್ತಿತ್ತು.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನಗೆ ಕಲಾಮ್ಕಾರಿ ಶೈಲಿಯ ಕೈಚೀಲವನ್ನು ನೀಡಲಾಯಿತು. ಇದರಲ್ಲಿ ಪಕ್ಕಾ ‘ವೋಕಲ್ ಫಾರ್ ಲೋಕಲ್’ನ (ದೇಶೀಯತೆ) ಸ್ಪೂರ್ತಿಯಿದ್ದರೂ, ಜಾಗತಿಕ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಗಿತ್ತು. ಒಳಗಡೆ ಪೂಥೆರಾಕುಲು ಎಂಬ ಸಿಹಿಯ ಬಾಕ್ಸ್, ಬೀದರ್‌ನ ಲೋಹದ ತಟ್ಟೆ, ಒಂದು ಮಗ್ ಇತ್ತು. ಕಾರ್ಯಕ್ರಮದ ವಿಷಯಗಳು ಹಾಗೂ ಇತರೆ ದಾಖಲೆಗಳನ್ನು ಇ-ಮೇಲ್ ಮಾಡಲಾ ಗಿತ್ತು.
2018ರಲ್ಲಿ ಬೆಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಕೈಚೀಲವೊಂದು ಸಿಕ್ಕಿತ್ತು. ಅದರಲ್ಲಿ ಗಂಡಭೈರುಂಡ ಚಿಹ್ನೆಯಿತ್ತು, ಅಲ್ಲಿ ಕಾರ್ಯಕ್ರಮವೊಂದನ್ನು ನಿರ್ವಹಿಸಿದ್ದೆ. ಆ ಕೈಚೀಲವನ್ನು ಸಿದ್ಧಪಡಿಸಿದ್ದ ಶೈನೀ ಆಂಟೋನಿ ಬಳಿ ನಾನು ಮಾತನಾಡಿದಾಗ, ಅವರು ನಮ್ಮ ಕೈಚೀಲಗಳು ಮಾರಾಟಕ್ಕಿಲ್ಲ ಎಂದು ತಿಳಿಸಿದ್ದರು. ಆ ಚೀಲಗಳನ್ನು ನಿರೂಪಕರಿಗೆ, ಲೇಖಕರಿಗೆ ಸ್ಮರಣಿಕೆಗಳನ್ನಾಗಿ ನೀಡಲಾಗಿತ್ತು.
ನನ್ನ ಬಳಿ ಆಭರಣದಂಗಡಿ, ಅಖಿಲ ಭಾರತ ಮೀನುಗಾರಿಕೆ ಸಮ್ಮೇಳನ, ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಕೈಚೀಲಗಳಿದ್ದವು. ಬೆಟ್ಟವಿಳಿದು ನನ್ನೂರಿನ ಆಭರಣದಂಗಡಿ ಗಳಲ್ಲಿ ಬಂಗಾರ ಕೊಳ್ಳಲು ಬರುವವರು, ಬಿಲ್ ಕೌಂಟರ್‌ಗಳಲ್ಲಿ ಕೈಚೀಲ ಕೊಡುವಂತೆ ಮನವಿ ಮಾಡುತ್ತಿರುತ್ತಾರೆ. ಅದನ್ನೇ ಮುಂದೆ ತರಕಾರಿ, ದಿನಸಿ ಹಾಕಲು ಬಳಸಲಾಗುತ್ತದೆ. ನಾನಂತೂ ಬಟ್ಟೆ ಇಸಿ ಮಾಡಲೂ ಇದನ್ನೇ ಬಳಸುತ್ತೇನೆ.
ಈ ಚೀಲವೇ ಒಂದು ವಿಶೇಷ ದೃಶ್ಯ. ನಡೆದುಕೊಂಡು ಹೋಗುವಾಗ ನಮ್ಮತ್ತ ಎಲ್ಲರ ಗಮನ ಸೆಳೆಯುವ ಒಂದು ಸಾಧನ. ಸಾಹಿತ್ಯ ಜಗತ್ತಿನಲ್ಲಿ ಇದನ್ನು ಬಹಳ ಗಂಭೀರವಾಗಿ ಪ್ರಚಾರ ಮಾಡಿದ್ದು ಅರುಂಧತಿ ರಾಯ್ ಅವರ ನೂತನ ಪುಸ್ತಕ ಮಾರಾಟ ಮಾಡುವಾಗ. ಪ್ರಸ್ತುತ ಆ ಪುಸ್ತಕವನ್ನು ಮಾರುವಾಗ ಅದರೊಂದಿಗೆ ಒಂದು ಕೈಚೀಲವನ್ನು (299 ರು. ಮೌಲ್ಯ, ಉಚಿತ) ನೀಡಲಾಗುತ್ತದೆ. ಅದರ ಮೇಲೆ ರಾಯ್ ಅವರ ಮುಖದ ಚಿತ್ರವಿದೆ.
ಜೊತೆಗೆ ಪುಸ್ತಕದಲ್ಲಿನ ಸುಂದರ ಸಾಲು ‘ಆಕೆಯೇ ನನ್ನ ಆಶ್ರಯ ಮತ್ತು ನನ್ನೊಳಗಿನ ಭೋರ್ಗರೆತ’ವೂ ಬರೆಯಲ್ಪಟ್ಟಿದೆ. ಚೀಲದ ಮೌಲ್ಯ ಮೆಕ್‌ಡೊನಾಲ್ಡ್‌ನ ಊಟದಷ್ಟೇ ಮೌಲ್ಯ ಹೊಂದಿದೆ. ಈ ಪುಸ್ತಕ ಬರ್ಗರ್‌ಗಿಂತ ದುಬಾರಿಯಾಗಿದ್ದರೂ, ಎರಡೂ ಕಡೆ ಚೀಲ ಮಾತ್ರ ಉಚಿತವಾಗಿ ಸಿಗುತ್ತದೆ.
ದೆಹಲಿಯ ಸರೋಜಿನಿ ನಗರದ ಮಧ್ಯಮ ವರ್ಗದವರ ಮಾರುಕಟ್ಟೆಯಲ್ಲಿ, ಬರಹಗಳನ್ನು ಹೊಂದಿರುವ ಸಾಲು ಸಾಲು ಕೈಚೀಲಗಳು ಇರುತ್ತವೆ. ಈ ಚೀಲಗಳು ದಪ್ಪವಾಗಿರುತ್ತವೆ, ಕೆಲವೊಂದು ಕೆಟ್ಟದಾಗಿರುತ್ತವೆ. ಹಣೆಯಲ್ಲಿ ಸಿಂದೂರ ಹಚ್ಚಿಕೊಂಡಿರುವ ಮುಗ್ಧ ತಾಯಂದಿರು ಕಿರುಚುತ್ತಾ, ಫ್ರಿಜ್ಜಿನ ಕವರ್‌ಗಳು ಮತ್ತಿತರ ಚೀಲಗಳಿಗೆ ಹುಡುಕುತ್ತಿರುತ್ತಾರೆ.
ಸ್ವಲ್ಪ ವರ್ಷಗಳ ಹಿಂದೆ ವಾಹನಗಳ ಹಿಂಭಾಗದ ಬರಹಗಳು ಗಮನ ಸೆಳೆಯುತ್ತಿದ್ದವು. ಅದೊಂದು ಮುಂಜಾನೆ ರಿಚ್ಮಂಡ್ ರಸ್ತೆಯಲ್ಲಿ ನನ್ನ ಸಹೋದರನ ಮಕ್ಕಳನ್ನು ಬಿಡಲು ಅವನೊಂದಿಗೆ ಬೈಕ್ʼನಲ್ಲಿ ಹೋಗುತ್ತಿದ್ದಾಗ, ಎದುರು ಹೋಗುತ್ತಿದ್ದ ಕಾರು ನನ್ನನ್ನು ದಿಗ್ಗನೆ ಎಚ್ಚರಿಸಿತು. ಅದರಲ್ಲಿ ಅಂಟಿಸಿದ್ದ ಸ್ಟಿಕ್ಕರ್‌ನಲ್ಲಿ ‘ಸ್ತ್ರೀವಾದವೆಂದರೆ ಮಹಿಳೆಯ ರನ್ನೂ ಮನುಷ್ಯರು ಎಂದು ಪರಿಗಣಿಸುವ ಸುಧಾರಣಾ ವಾದ’ ಎಂದು ಬರೆಯಲ್ಪಟ್ಟಿತ್ತು.
ದೆಹಲಿಯಲ್ಲಿ ನಾನು ನೋಡುವ ವಾಹನಗಳ ಸ್ಟಿಕ್ಕರ್‌ಗಳಲ್ಲಿ, ತಮ್ಮ ರಾಜಕೀಯ ಗುರುತು ಗಳನ್ನು, ಜಾತಿಗಳನ್ನು ಹೆಮ್ಮೆಯಿಂದ ಘೋಷಿಸಿಕೊಳ್ಳುವ ಬರಹಗಳನ್ನು ನೋಡುತ್ತೇನೆ. ನೀವು ಯಾರು ಎಂದು ತೋರಿಸಿಕೊಳ್ಳಲು ಅವು ನಿಮಗೆ ಸಹಾಯ ಮಾಡುತ್ತವೆ!
ಅವೆಲ್ಲ ಇರಲಿ ಭಾರತದಲ್ಲಿನ ಟ್ರಕ್ʼಗಳು, ಆಟೋಗಳ ಪ್ರೌಢತೆಯನ್ನು ಯಾರೂ ನಿರ್ಲ ಕ್ಷಿಸುವಂತಿಲ್ಲ. ಅವುಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎನ್ನುವುದರಿಂದ ಹಿಡಿದು, ಕುಟುಂಬ ಯೋಜನೆ, ಹೃದಯಾಘಾತವಾದರೆಗಿನ ಬರಹಗಳಿರುತ್ತವೆ.
ಬರಹ ಹೊಂದಿರುವ ಕೈಚೀಲ ಕಸುಬುದಾರಿಕೆಗೆ ಒಂದು ಉದಾಹರಣೆ. ನೀವು ಪ್ಯಾಲೆಸ್ಟೀನ್ ಬಗ್ಗೆ ಕಾಳಜಿ ವಹಿಸುತ್ತೀರೋ ಇಲ್ಲವೋ, ನೀವು ಪುಸ್ತಕದ ಸಾಲುಗಳನ್ನು ಓದುತ್ತೀರೋ ಇಲ್ಲವೋ, ಕೈಚೀಲದಲ್ಲಿ ಮಾತ್ರ ಎಲ್ಲ ಕಣ್ಣು ರಫಾ ಮೇಲಿದೆ ಎಂದು ಬರೆಯಲಾಗಿರುತ್ತದೆ.
ಅದರಲ್ಲಿ ನಾವು ತೆಗೆದುಕೊಳ್ಳಬೇಕಾದ ವಸ್ತುಗಳ ಪಟ್ಟಿಯನ್ನೂ ಹೊಂದಿರುತ್ತದೆ. ಅದೂ ಈಗ ಟ್ರೆಂಡ್ ಆಗಿದೆ. ಈ ಕೈಚೀಲಗಳು ಒಂದು ಸಾಂಕೇತಿಕ ಗುಣ ಹೊಂದಿವೆ. ಟೀಶರ್ಟ್ ಗಳಲ್ಲಿ ಬರೆಯಲ್ಪಟ್ಟಿರುವ ಸಾಲುಗಳು ಹೇಗೆ ಮುಖಕ್ಕೆ ಬಡಿಯುತ್ತವೋ, ಹಾಗೆ ಈ ಚೀಲ ಗಳಲ್ಲಿನ ಸಾಲುಗಳು ರಾಚುವುದಿಲ್ಲ. ಇವು ಕಿರುಚಾಡದೇ ನಿಮ್ಮ ಗಮನ ಸೆಳೆಯುತ್ತವೆ. ತನ್ನ ಕೈಗಳನ್ನು ಗಲೀಜು ಮಾಡಿಕೊಳ್ಳದೇ ಒಬ್ಬ ವ್ಯಕ್ತಿ ಇಲ್ಲಿ ರಾಜಕೀಯವಾಗಿರಬಹುದು. ಇದೊಂದು ರೀತಿಯ ಸ್ಲ್ಯಾಕ್ಟಿವಿಸಂ (ಕಾರ್ಯವಂತಿಕೆ ಮತ್ತು ಚೀಲವನ್ನು ಬೆಸೆಯುವಂತಹ ಗುಣ)!
ಬಟ್ಟೆಯ ಚೀಲ ನೈಜ ಜಗತ್ತಿನ ಸಹಜ ಚಿಹ್ನೆ. ಇದು ಎಲ್ಲವನ್ನೂ ಹೊಂದಿರುತ್ತದೆ, ನಿಮ್ಮ ರಾಜಕೀಯ ಚಿಂತನೆಗಳು, ಇತರೆ ಸಂಗತಿಗಳೂ ಇದರಲ್ಲಿರುತ್ತವೆ. ಸಾಕಷ್ಟು ವಸ್ತುಗಳನ್ನು ತುಂಬಿಸಿಕೊಳ್ಳುವ ಗುಣವೇ ಇದನ್ನು ಸಾಂಕೇತಿಕಗೊಳಿಸುತ್ತದೆ. ಎಲ್ಲವನ್ನೂ ತನ್ನೊಂದಿಗೆ ಒಯ್ಯುವ ಗುಣವನ್ನು ಇದು ಅಭಿವ್ಯಕ್ತಿಸುತ್ತದೆ. ಇದು ಈ ಸಮಯದ ಸಾಂಸ್ಕೃತಿಕ ಸಂಕೇತ.
ಇಲ್ಲೊಂದು ರಕ್ತಸಂಬಂಧ ಮತ್ತು ಆತ್ಮೀಯತೆಯನ್ನು ಒಂದು ಚೀಲದೊಂದಿಗೆ ನೀವು ಹೊಂದಬಹುದು. ಇದರಲ್ಲಿ ಮುಚ್ಚುಮರೆಯಿರುವುದಿಲ್ಲ. ತನ್ನ ನಿಜರೂಪವನ್ನು ಅವಿತಿ ಡುವ ಪ್ರಸಂಗವೇ ಬರುವುದಿಲ್ಲ, ಮಹಿಳೆಯೊಬ್ಬಳ ದೌರ್ಬಲ್ಯಗಳನ್ನು ಸಾರ್ವಜನಿಕವಾಗಿ ತೋಡಿಕೊಳ್ಳಬೇಕಾದ ಅಗತ್ಯವೂ ಇರುವುದಿಲ್ಲ.