ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಶ್ರೀಕೃಷ್ಣನ ಆದರ್ಶ ವ್ಯಕ್ತಿತ್ವ: ಬದುಕಿಗೊಂದು ಜೀವಂತ ದರ್ಶನ

ಕೃಷ್ಣನ ಬದುಕು ಹುಟ್ಟಿನಿಂದಲೇ ಸವಾಲುಗಳಿಂದ ಕೂಡಿತ್ತು. ಹುಟ್ಟುವ ಮುನ್ನವೇ ಸೋದರ ಮಾವ ಕಂಸನ ರೂಪದಲ್ಲಿ ಸಾವು ಕಾಯುತ್ತಿತ್ತು. ಕತ್ತಲೆಯ ಸೆರೆಮನೆಯಲ್ಲಿ ಜನಿಸಿ, ಹೆತ್ತ ತಾಯಿ ದೇವಕಿಯ ಮಡಿಲನ್ನು ಜನಿಸಿದ ರಾತ್ರಿಯೇ ತೊರೆದ. ಮುದ್ದಿಸಿ, ಸಾಕಿದ ಯಶೋದೆಗೂ ಆತ ಕೊನೆತನಕ ಉಳಿಯ ಲಿಲ್ಲ.

ಶ್ರೀಕೃಷ್ಣನ ಆದರ್ಶ ವ್ಯಕ್ತಿತ್ವ: ಬದುಕಿಗೊಂದು ಜೀವಂತ ದರ್ಶನ

-

ಒಂದೊಳ್ಳೆ ಮಾತು

ನನ್ನನ್ನು ನಂಬುವುದಾದರೆ ಪೂರ್ತಿಯಾಗಿ ನಂಬು, ಮಗು ತಾಯಿಯನ್ನು ಅಪ್ಪುವಂತೆ ನಿಷ್ಕಲ್ಮಶ ವಾಗಿ ನಂಬು; ಆಗಷ್ಟೇ ನಾನು ನಿನಗೆ ದಕ್ಕುತ್ತೇನೆ’ ಎನ್ನುತ್ತಾನೆ ಶ್ರೀಕೃಷ್ಣ. ಕೃಷ್ಣ ಕೇವಲ ಪೂಜಿಸುವ ದೇವರಲ್ಲ, ಮಾನವ ಬದುಕಿನ ಸಂಕೀರ್ಣತೆಗಳನ್ನು ಹೇಗೆ ಎದುರಿಸಬೇಕೆಂದು ಕಲಿಸಿಕೊಟ್ಟ ಪರಿಪೂರ್ಣ ಆದರ್ಶ. ಆತನ ವ್ಯಕ್ತಿತ್ವ ಎಂದಿಗೂ ಯಾವುದೇ ಸಿದ್ಧ ಚೌಕಟ್ಟಿಗೆ ಸಿಗುವಂಥದ್ದಲ್ಲ.

ಕೃಷ್ಣನ ಬದುಕು ಹುಟ್ಟಿನಿಂದಲೇ ಸವಾಲುಗಳಿಂದ ಕೂಡಿತ್ತು. ಹುಟ್ಟುವ ಮುನ್ನವೇ ಸೋದರ ಮಾವ ಕಂಸನ ರೂಪದಲ್ಲಿ ಸಾವು ಕಾಯುತ್ತಿತ್ತು. ಕತ್ತಲೆಯ ಸೆರೆಮನೆಯಲ್ಲಿ ಜನಿಸಿ, ಹೆತ್ತ ತಾಯಿ ದೇವಕಿಯ ಮಡಿಲನ್ನು ಜನಿಸಿದ ರಾತ್ರಿಯೇ ತೊರೆದ. ಮುದ್ದಿಸಿ, ಸಾಕಿದ ಯಶೋದೆಗೂ ಆತ ಕೊನೆತನಕ ಉಳಿಯಲಿಲ್ಲ.

ನಿಸ್ವಾರ್ಥ ಪ್ರೀತಿಯ ಸಂಕೇತವಾದ ರಾಧೆಯ ಪ್ರೇಮವೂ ಕೈಗೂಡದೆ ಹೋಯಿತು. ಇಷ್ಟೆಲ್ಲ ಕಳೆದು ಕೊಳ್ಳುವಿಕೆಗಳ ನಡುವೆಯೂ ಕೃಷ್ಣನ ಮುಖದಲ್ಲಿನ ಮಂದಹಾಸ ಎಂದಿಗೂ ಮಾಸಲಿಲ್ಲ.

ಇದನ್ನೂ ಓದಿ: Roopa Gururaj Column: ಶಿವನು ಕೇದಾರನಾಥದಲ್ಲಿ ನೆಲೆಸಲು ಕಾರಣ

ಕೃಷ್ಣನ ಚರಿತ್ರೆಯನ್ನು ಅವಲೋಕಿಸಿದರೆ ನಮ್ಮ ಇಂದಿನ ಬದುಕಿನ ಎಲ್ಲ ರೂಪಗಳೂ ಅಲ್ಲಿ ಕಾಣಸಿಗುತ್ತವೆ:

ವಿಷಮಯ ಸಂಬಂಧಗಳು: ಪ್ರೀತಿಸಬೇಕಾದ ಮಾವನೇ ಕಂಸನಾಗಿ ವೈರಿಯಾಗಬಹುದು; ತಾಯಿಯಂತೆ ಬಂದು ವಿಷವುಣಿಸುವ ಪೂತನಿಯಂಥ ಮೋಸಗಾರರೂ ಎದುರಾಗಬಹುದು.

ಪ್ರೀತಿ ಮತ್ತು ಸಮರ್ಪಣೆ: ಏನನ್ನೂ ಬಯ ಸದೆ ಶುದ್ಧ ಪ್ರೀತಿ ನೀಡುವ ರಾಧೆ, ಸಾಹಸ ಮೆಚ್ಚಿ ಬಂದ ರುಕ್ಮಿಣಿ, ಪ್ರೀತಿಯಿಂದ ಹಠ ಸಾಧಿಸುವ ಸತ್ಯಭಾಮೆಯಂಥ ವಿಭಿನ್ನ ವ್ಯಕ್ತಿತ್ವಗಳು.

ಕರ್ತವ್ಯ ಮತ್ತು ರಕ್ಷಣೆ: ಸದಾ ಸ್ಮರಿಸುವ ಅರ್ಜುನ, ಧರ್ಮಕ್ಕೆ ಬದ್ಧನಾದ ಧರ್ಮ ರಾಯ, ಕಷ್ಟದಲ್ಲಿ ರಕ್ಷಣೆ ಬೇಡಿದ ಸೋದರಿ ದ್ರೌಪದಿ, ದೈವವೆಂದು ನಂಬಿದ ಕುಂತಿ ಹಾಗೂ ಮುಗ್ಧ ಗೆಳೆಯ ಸುಧಾಮ.

ವಿರೋಧ ಮತ್ತು ದ್ವೇಷ: ಒಳಗೊಳಗೆ ಗೌರ ವಿಸುತ್ತಲೇ ಅನಿವಾರ್ಯವಾಗಿ ಎದುರಾಗುವ ಭೀಷ್ಮ-ದ್ರೋಣರಂಥ ಹಿರಿಯರು; ಧಿಕ್ಕರಿಸಿ ಹಗೆ ಸಾಧಿಸುವ ದುರ್ಯೋಧನ, ಶಕುನಿ, ಕರ್ಣ, ಶಿಶುಪಾಲರಂಥ ವಿರೋಧಿಗಳು.

ಅಹಂಕಾರದ ವಂಶಸ್ಥರು: ದೈವದ ಜೊತೆಗಿ ದ್ದರೂ ಅಹಂಕಾರದಿಂದ ಮೆರೆದು ವಿನಾಶದ ಹಾದಿ ಹಿಡಿದ ಯಾದವರು. ಇಷ್ಟೆಲ್ಲಾ ಭಿನ್ನ ಸ್ವಭಾವದ ಜನರ ನಡುವೆ ಬದುಕಿದ ಕೃಷ್ಣ, ಪ್ರತಿಯೊಂದು ಸಂಬಂಧ ವನ್ನೂ ಅತ್ಯಂತ ಸಮರ್ಥವಾಗಿ ಮತ್ತು ನ್ಯಾಯಯುತ ವಾಗಿ ನಿಭಾಯಿಸಿದ. ಧರ್ಮ ರಕ್ಷಣೆಗಾಗಿ ಅಗತ್ಯ ವಿದ್ದಾಗ ತಂತ್ರ ಮತ್ತು ಯುಕ್ತಿಯನ್ನು ಬಳಸಿದ. ಕುರುಕ್ಷೇತ್ರದ ಮಹಾಯುದ್ಧ ದಲ್ಲಿ ತಾನಿದ್ದರೂ ಆಯುಧ ಹಿಡಿಯದೆ, ಕೇವಲ ಸಂಯಮ ಹಾಗೂ ಮಾರ್ಗದರ್ಶನದಿಂದಲೇ ವಿಜಯ ದೊರಕಿಸಿಕೊಟ್ಟ. ಕೃಷ್ಣನ ಮಹತ್ವವಿರು ದು ಆತನ ಸಮಚಿತ್ತದಲ್ಲಿ.

ಇಡೀ ಸಾಮ್ರಾಜ್ಯವನ್ನು ಕಟ್ಟಿ ದರೂ ತಾನು ರಾಜನಾಗಲಿಲ್ಲ. ಜಗತ್ತಿನ ಎಲ್ಲ ಲೌಕಿಕ ವ್ಯವಹಾರಗಳ ನಡುವೆ ಇದ್ದರೂ ಯಾವು ದಕ್ಕೂ ಅಂಟಿಕೊಳ್ಳಲಿಲ್ಲ. ಅಂತಿಮವಾಗಿ ತನ್ನ ಕಣ್ಣೆದುರೇ ಕುಲನಾಶ ವಾಗುವುದನ್ನು ಕಂಡರೂ ವಿಚಲಿತನಾಗದೆ, ಕರ್ತವ್ಯ ಮುಗಿಸಿ ಜಗತ್ತಿನಿಂದ ನಿರ್ಗಮಿ ಸುವಾಗ ಏನನ್ನೂ ತನ್ನೊಂದಿಗೆ ಕೊಂಡೊಯ್ಯಲಿಲ್ಲ. ನಮ್ಮ ಇಂದಿನ ದೈನಂದಿನ ಬದುಕೂ ಒಂದು ರೀತಿಯ ಕುರುಕ್ಷೇತ್ರವೇ. ಇಲ್ಲಿಯೂ ನಮಗೆ ದುರ್ಯೋಧನ, ಶಕುನಿ, ಪೂತನಿಯರಂಥವರು ಎದುರಾಗುತ್ತಾರೆ.

ವೈರಿಯೊಡನೆ ಹೇಗೆ ಕಠಿಣ ವಾಗಿರಬೇಕು, ಸ್ನೇಹಿತರೊಡನೆ ಹೇಗೆ ಆಪ್ತವಾಗಿರ ಬೇಕು, ಸಂಕಷ್ಟ ಗಳಲ್ಲಿ ಹೇಗೆ ಶಾಂತವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದಕ್ಕೆ ಕೃಷ್ಣನೇ ಅತ್ಯುತ್ತಮ ಮನಶ್ಶಾಸ್ತ್ರಜ್ಞ ಮತ್ತು ದಿಗ್ದರ್ಶಕ. ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗುವ ಈ ಅಶಾಶ್ವತ ಜಗತ್ತಿನಲ್ಲಿ, ಭ್ರಮೆಯನ್ನು ಕಳಚಿ, ಯಾವುದೇ ಸನ್ನಿವೇಶದಲ್ಲೂ ಧರ್ಮ ಹಾಗೂ ಕರ್ತವ್ಯಕ್ಕೆ ಬದ್ಧವಾಗಿರುವುದೇ ಕೃಷ್ಣ ಕಲಿಸುವ ಪರಮ ಸತ್ಯ. ನಮ್ಮ ಬುದ್ಧಿಮಟ್ಟಕ್ಕೆ ತಕ್ಕಂತೆ ಆತ ನಮಗೆ ದಕ್ಕುತ್ತಾನೆ.

ಆದ್ದರಿಂದಲೇ ಜೀವನದಲ್ಲಿ ಅತಿಯಾದ ಪ್ರೀತಿ, ಮೋಹ ಆಸೆಗೆ ಬೀಳದೆ, ಸಮಚಿತ್ತದಿಂದ ಬದುಕನ್ನು ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳೋಣ. ಜೀವನದಲ್ಲಿ ಯಾರೇ ಬಂದರು ಹೋದರೂ, ಇರುವಷ್ಟು ಕಾಲ ಸಂಬಂಧಗಳನ್ನು ಪ್ರಾಮಾಣಿಕವಾಗಿ ಇರಿಸಿ ಕೊಳ್ಳೋಣ. ಆಪ್ತವಾಗಿ ಮಾತನಾಡಿಸುವವರೆಲ್ಲ ಸ್ನೇಹಿತರಲ್ಲ, ಕಟುವಾಗಿ ಮಾತನಾಡುವವರೆಲ್ಲಾ ಹಿತ ಶತ್ರುಗಳಲ್ಲ: ಇಂತಹ ಸೂಕ್ಷ್ಮಗಳು ಅರಿವಾದಾಗ ಬದುಕಲ್ಲಿ ಹೆಚ್ಚು ನಿರ್ಲಿಪ್ತತೆ ಮೂಡುತ್ತದೆ.

ಬದುಕನ್ನು ಸಮಚಿತ್ತದಿಂದ ಸ್ವೀಕರಿಸುವ ಪರಿಪಕ್ವತೆ ಕೂಡ ಬೆಳೆಯುತ್ತದೆ. ವಸುದೇವ ಸುತಂ ದೇವಂ ಕಂಸ ಚಾಣೂರಮರ್ದನಮ್ | ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||