ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಜಪಾನ್‌ ಇಷ್ಟವಾಗಲು ಮುಖ್ಯ ಕಾರಣ ಜಪಾನಿಯರು !

ನನಗೆ ಅನೇಕ ಸಲ ಇವರಿಗೆ ಮಾತು ಬರುವು ದಿಲ್ಲವಾ ಅಥವಾ ಇವರು ಮಾತನ್ನು ಮರೆತುಬಿಟ್ಟಿ ದ್ದಾರಾ ಎಂದು ಬಲವಾಗಿ ಅನಿಸಿದ್ದಿದೆ". ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಜಪಾನಿಯರು ದನಿಯೆತ್ತರಿಸಿ ಮಾತಾಡುವುದಿಲ್ಲ. ವಿಮಾನ, ರೈಲು, ಬಸ್ಸಿನಲ್ಲಂತೂ ಮಾತಾಡುವ ಪ್ರಸಂಗ ಬಂದರೆ ಸಾಕಷ್ಟು ಯೋಚಿಸಿ ಮಾತಾಡುತ್ತಾರೆ.

ಜಪಾನ್‌ ಇಷ್ಟವಾಗಲು ಮುಖ್ಯ ಕಾರಣ ಜಪಾನಿಯರು !

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅಂಕಣ

ಇದೇ ಅಂತರಂಗ ಸುದ್ದಿ

vbhat@me.com

ಹೌದು, ನನಗೆ ಜಪಾನ್ ಇಷ್ಟವಾಗಲು ಮುಖ್ಯ ಕಾರಣ ಜಪಾನಿಯರು. ಜಗತ್ತಿನಲ್ಲಿ ಜಪಾನಿ ಯರಷ್ಟು ಮೃದು, ವಿನಮ್ರ ಮತ್ತು ಪ್ರಾಮಾಣಿಕ ವ್ಯಕ್ತಿಗಳು ಇಲ್ಲವೇ ಇಲ್ಲ ಅಂತಾರೆ. ಇದು ನನ್ನ ಅಭಿಪ್ರಾಯವೊಂದೇ ಅಲ್ಲ. ಇದು ಜಗತ್ತಿನೆಡೆ ನೆಲೆಸಿರುವ ಸಾರ್ವತ್ರಿಕ ಅಭಿ ಪ್ರಾಯ. ನೀವು ಯಾರ ಜತೆಗೆ ಬೇಕಾದರೂ ಜಗಳವಾಡಬಹುದಂತೆ, ಆದರೆ ಅದು ಜಪಾನಿಯ ರೊಂದಿಗೆ ಸಾಧ್ಯವಿಲ್ಲವಂತೆ. ಕಾರಣ ದನಿ ಎತ್ತರಿಸಿ ಮಾತಾಡುವುದು ಅವರ ಗಂಟಲ (ರಕ್ತದ?) ಇಲ್ಲ. ಅವರು ತಮ್ಮ ಆಕ್ರೋಶವನ್ನೂ ಮೆತ್ತಗೆ, ಮೃದುವಾಗಿ ವ್ಯಕ್ತಪಡಿಸಬಲ್ಲರು. ಜಪಾನಿನಲ್ಲಿ ಮೂರು ದಶಕ ಗಳಿಂದ ನೆಲೆಸಿರುವ ಖ್ಯಾತ ಲೇಖಕ ಪಿಕೋ ಇಯೆರ್ ಜಪಾನಿ ಯರ ಬಗ್ಗೆ ಒಂದೆಡೆ ಹೀಗೆ ಬರೆಯುತ್ತಾರೆ- “ಬಹುತೇಕ ಜಪಾನಿಯರು ಮಹಾಮೌನಿಗಳು. ಅವರಿಗೆ ಮಾತು ಅಲರ್ಜಿ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವವರು ಅಪರೂಪಕ್ಕೆ ಮಾತಾಡುತ್ತಾರೆ.

ಇದನ್ನೂ ಓದಿ: Vishweshwar Bhat Column: ಅಪ್ಪಟ ಜಪಾನಿ ಅನುಭವಗಳು

ಕೆಲವರು ವಾರಗಟ್ಟಲೆ ಮಾತಾಡುವುದಿಲ್ಲ. ನನಗೆ ಅನೇಕ ಸಲ ಇವರಿಗೆ ಮಾತು ಬರುವು ದಿಲ್ಲವಾ ಅಥವಾ ಇವರು ಮಾತನ್ನು ಮರೆತುಬಿಟ್ಟಿದ್ದಾರಾ ಎಂದು ಬಲವಾಗಿ ಅನಿಸಿದ್ದಿದೆ". ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಜಪಾನಿಯರು ದನಿಯೆತ್ತರಿಸಿ ಮಾತಾಡುವುದಿಲ್ಲ. ವಿಮಾನ, ರೈಲು, ಬಸ್ಸಿನಲ್ಲಂತೂ ಮಾತಾಡುವ ಪ್ರಸಂಗ ಬಂದರೆ ಸಾಕಷ್ಟು ಯೋಚಿಸಿ ಮಾತಾಡುತ್ತಾರೆ.

ಮಾತಾಡಲೇಬೇಕು ಎಂದಾಗ ಮೆಲ್ಲಗೆ ಒಳದನಿಯಲ್ಲಿ ಮಾತಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರೂ ಜಗಳವಾಡುವುದಿಲ್ಲ. ಹಮಾರಿ-ತುಮಾರಿ ಕಲಹಗಳೂ ಇಲ್ಲವೇ ಇಲ್ಲ. ಇನ್ನು ಖಾಸಗಿ ಮಾತುಕತೆಯಲ್ಲಿ, ಪಾರ್ಟಿಗಳಲ್ಲಿ ಏರಿದ ದನಿಯಲ್ಲಿ ಮಾತಾಡುವುದಿಲ್ಲ. ಎದುರಿಗಿರುವವರ ಅಭಿಪ್ರಾಯ ಸರಿ ಹೊಂದುವುದಿಲ್ಲ ಎಂದು ಅನಿಸಿದರೆ, ಒಂದೋ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ ಇಲ್ಲವೇ, ವಿಷಯಾಂತರ ಮಾಡುತ್ತಾರೆ.

Bhat 1ok

ಮಾತು ವಿಕೋಪಕ್ಕೆ ಹೋಗುತ್ತಿದೆ ಎಂದು ಅನಿಸಿದಾಗ, ಇಬ್ಬರೂ ಸುಮ್ಮನಾಗುವುದೂ ಉಂಟು. ಆದರೆ ಯಾರೂ ತಮ್ಮದೇ ವಾದಕ್ಕೆ ಕಟ್ಟುಬಿದ್ದು ಜಗಳ-ರಗಳೆ ಮಾಡಿಕೊಂಡು ಮುಖ ಕೆಡಿಸಿಕೊಳ್ಳುವುದಿಲ್ಲ. ಜಪಾನಿಯರು ಅತಿ ವಿನಯಶೀಲರು. ಅವರ ಶಿಷ್ಟಾಚಾರ, ಸಂಸ್ಕೃತಿ ಹಾಗೂ ದಿನನಿತ್ಯದ ಬದುಕಿನಲ್ಲಿ ಈ ವಿನಯಶೀಲತೆ ಸ್ಪಷ್ಟವಾಗಿ ಕಾಣಿಸುತ್ತದೆ. ಜಪಾನಿಯರ ಮೂಲಭೂತ ಗುಣಲಕ್ಷಣಗಳಲ್ಲಿ ಒಂದಾದ ಶಿಷ್ಟಾಚಾರ (Etiquette) ವನ್ನು ಎಲ್ಲೆಡೆಗಳಲ್ಲೂ ನೋಡಬಹುದು. ಜನರು ಪರಸ್ಪರ ಮಾತಾಡುವಾಗ, ಭೇಟಿಯಾಗು ವಾಗ ಮತ್ತು ವಿದಾಯ ಹೇಳುವಾಗ ನಿರ್ದಿಷ್ಟ ರೀತಿಯ ಶಿಷ್ಟಾಚಾರವನ್ನು ಅನುಸರಿಸು ತ್ತಾರೆ.

ಉದಾಹರಣೆಗೆ, ಜಪಾನ್‌ನಲ್ಲಿ ನಡು ಬಗ್ಗಿಸುವುದು, ದೇಹ ಬಾಗಿಸಿ ( Bowing) ವಂದಿಸು ವುದು ಅತಿ ಪ್ರಮುಖವಾದ ಗೌರವ ಸೂಚಿಸುವ ವಿಧಾನವಾಗಿದೆ. ಬಗ್ಗುವುದು ಕಾಟಾಚಾ ರವಲ್ಲ. ದೇಹವನ್ನು ಬಿಲ್ಲಿನಂತೆ ಬಾಗಿಸುವಾಗ ಅವರ ಕಣ್ಣು ಮುಚ್ಚಿರುತ್ತದೆ. ಎಷ್ಟು ಬಗ್ಗುತ್ತಾರೆ ಎನ್ನುವುದು ವ್ಯಕ್ತಿಯ ವಿನಯಶೀಲತೆ ಹಾಗೂ ಎದುರಿನವರ ಮೇಲಿರುವ ಗೌರವವನ್ನು ಸೂಚಿಸುತ್ತದೆ.

ನೀವು ಜಪಾನಿನಲ್ಲಿ ಏನಾದರೂ ತಪ್ಪು ಮಾಡಿದರೆ, ಅದನ್ನು ಅವರು ನಿಮಗೆ ಹೇಳದಿರ ಬಹುದು. ಅದರ ಬದಲಾಗಿ, ಅವರು ನಿಮಗೆ ಮುಜುಗರವಾಗದ ರೀತಿಯಲ್ಲಿ ‘ಸುಳಿವು’ ನೀಡಬಹುದು ಅಥವಾ ಸೂಚ್ಯವಾಗಿ ಹೇಳಲು ಪ್ರಯತ್ನಿಸಬಹುದು. ನೀವು ಮಾಡಿದ ತಪ್ಪನ್ನು ನಿಮಗೆ ಅವಮಾನ ಅಥವಾ ಮುಜುಗರವಾಗದ ರೀತಿಯಲ್ಲಿ ಅವರು ನಿಮ್ಮ ಗಮನಕ್ಕೆ ತರಬಲ್ಲರು. ಸೋಜಿಗವೆಂದರೆ, ಜಪಾನಿಯರ ಭಾಷೆಯಲ್ಲಿಯೇ ಗೌರವದ ಪ್ರತಿಫಲನವನ್ನು ಕಾಣಬಹುದು.

Bhat 2 ok

ಅವರ ಭಾಷೆಯ ಮೂರು ಪ್ರಮುಖ ಮಟ್ಟದ ಸಂಭಾಷಣಾ ಶೈಲಿಗಳಿವೆ- ಅಧಿಕೃತ ಗೌರವ ಪೂರ್ಣ ಭಾಷಾ ಶೈಲಿ (ಕೇಗೋ), ಯಾರು ಹೆಚ್ಚು ಪ್ರಭಾವಶಾಲಿಯಾಗಿzರೆ ಎಂಬುದರ ಆಧಾರದ ಮೇಲೆ ಬಳಸುವ ಗೌರವಪೂರ್ಣ ಶೈಲಿ (ಸೋನ್ಕೆಗೋ) ಮತ್ತು ತಾನೊಬ್ಬ ವಿನಯಶೀಲ ವ್ಯಕ್ತಿ ಎಂದು ತೋರಿಸಲು ಬಳಸುವ ಶೈಲಿ (ಕೇನ್ಜೋಗೋ). ಈ ಶೈಲಿಗಳ ಬಳಕೆ ವ್ಯಕ್ತಿಯ ವಿನಯಶೀಲತೆಗೆ ಸಾಕ್ಷಿಯಾಗಿದೆ.

ಜಪಾನಿಯರು ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣದ ಜತೆಗೆ ಕಡ್ಡಾಯವಾಗಿ ಸಂಸ್ಕಾರವನ್ನೂ ಕಲಿಸುತ್ತಾರೆ. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಗೌರವ, ವಿನಯಶೀಲತೆ ಹಾಗೂ ಸಾಮಾ ಜಿಕ ಶಿಸ್ತನ್ನು ಕಲಿಸಲಾಗುತ್ತದೆ. ಶಾಲೆಗಳಲ್ಲಿ ಶಿಷ್ಟಾಚಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.

ವಿದ್ಯಾರ್ಥಿಗಳು ಶಾಲೆಯಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಹೊಂದಿರುತ್ತಾರೆ. ಕೇವಲ ಪಾಠ ಮತ್ತು ಪರೀಕ್ಷೆಗಳಷ್ಟೇ ಅಲ್ಲ, ಉತ್ತಮ ಗುಣಲಕ್ಷಣಗಳು ಹಾಗೂ ಸಾಮಾಜಿಕ ಕೌಶಲ ಗಳನ್ನು ಬೆಳೆಸುವುದಕ್ಕೂ ಅವರ ಶಿಕ್ಷಣ ವ್ಯವಸ್ಥೆ ಒತ್ತು ನೀಡುತ್ತದೆ. ಧರ್ಮ ಮತ್ತು ಸಂಸ್ಕೃ ತಿಯ ಪ್ರಭಾವವೂ ಅವರ ವ್ಯಕ್ತಿತ್ವದ ಮೇಲೆ ಗಾಢ ಪ್ರಭಾವ ಬೀರಿರುವುದನ್ನು ಗಮನಿಸ ಬಹುದು.

ಜಪಾನಿನ ಸಂಸ್ಕೃತಿಯಲ್ಲಿ ಶಿಂಟೋ (Shinto) ಮತ್ತು ಬೌದ್ಧ ಧರ್ಮದ ಪ್ರಭಾವ ಮಹತ್ತರ ವಾದುದು. ಶಿಂಟೋ ಧರ್ಮದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಮುಖ್ಯವಾದ ಅಂಶಗಳಾಗಿದ್ದು, ಬೌದ್ಧ ಧರ್ಮ ವಿನಯಶೀಲತೆ, ಸಹಾನುಭೂತಿ ಹಾಗೂ ಶಾಂತಿ ಬಯಸುವ ಮನೋಭಾವ ವನ್ನು ಪ್ರೋತ್ಸಾಹಿಸುತ್ತದೆ. ಈ ಮೌಲ್ಯಗಳು ಜಪಾನಿನ ನಾಗರಿಕ ಜೀವನದ ಭಾಗವಾಗಿರು ವುದು ಗಮನಾರ್ಹ.

ಜಪಾನಿನಲ್ಲಿ ಆಫೀಸು ಅಥವಾ ಉದ್ಯೋಗ ಸ್ಥಳಗಳಲ್ಲಿ ಸಹ ವಿನಯಶೀಲತೆಗೆ ಒತ್ತು ನೀಡಲಾಗಿದೆ. ಉನ್ನತ ಹುzಯಲ್ಲಿದ್ದವರೂ ತಮಗಿಂತ ಹಿರಿಯರಾದವರನ್ನು ಗೌರವಿಸು ತ್ತಾರೆ. ವಿಸ್ತಾರವಾದ ಗೌರವಪೂರ್ಣ ಸಭಾಶೈಲಿ, ಪರಸ್ಪರ ತಾಳ್ಮೆಯಿಂದ ಮಾತುಕತೆ ನಡೆಸುವುದು ಮತ್ತು ಅತಿಯಾದ ಭಾವೋದ್ವೇಗ ತೋರಿಸದೇ ಮಾತನಾಡುವುದು ಅವರ ಮುಖ್ಯ ಲಕ್ಷಣಗಳು.

ಜಪಾನಿಯರು ಎಂದೂ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ತಮ್ಮ ಸಾಧನೆಗಳನ್ನು ಹೊರಗೆ ಹೇಳಿಕೊಳ್ಳದ ಗುಣವನ್ನು ಅವರು ಬಾಲ್ಯದಲ್ಲಿಯೇ ರೂಢಿಸಿಕೊಂಡಿರುತ್ತಾರೆ. ಹಾಗೆಯೇ ಅವರು ಒರಟು ವರ್ತನೆ ತೋರುವುದು ಬಹಳ ಅಪರೂಪ.

ಜಪಾನಿಯರು ಎಂಥವರು?

ಜಪಾನಿಯರು ಮೂಲತಃ ಅತ್ಯಂತ ಶಿಸ್ತಿನವರು (Disciplined). ಅವರಿಗೆ ವಹಿಸಿದ ಕೆಲಸ ವನ್ನು ನಿರ್ದಿಷ್ಟ ಸಮಯದಲ್ಲಿ ಮಾಡುವುದು ಅವರ ಗುಣ. ಸಮಯಪ್ರಜ್ಞೆ ಅವರ ರಕ್ತ ಗುಣ. ತಡವಾಗಿ ಬರುವುದು ಅವರ ದೃಷ್ಟಿಯಲ್ಲಿ ಅಪರಾಧ. ಅವರು ಮೂಲತಃ ಶ್ರಮ ಶೀಲರು (Hard working). ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುತ್ತಾರೆ. ದಿನದಲ್ಲಿ ಹದಿನೆಂಟು ಗಂಟೆ ಕೆಲಸ ಮಾಡಲೂ ಸೈ. ಅವರ ಶಿಸ್ತು ಮನೆ ಅಥವಾ ಆಫೀಸಿಗೆ ಮಾತ್ರ ಸೀಮಿತವಲ್ಲ.

ಸಾಮಾಜಿಕ ಶಿಸ್ತು (Social Order and Cleanliness) ಅವರ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಪ್ರಮುಖ ಅಂಶ. ಒಂದೆಡೆ ಮೂವರು ಸೇರಿದರೆ ಅವರು ತಕ್ಷಣ ಸರದಿ ಸಾಲಿನಲ್ಲಿ ನಿಲ್ಲು ತ್ತಾರೆ. ಪಾದಚಾರಿ ಪಥದಲ್ಲಿ ಶಿಸ್ತಿನಿಂದ ನಡೆಯುತ್ತಾರೆ. ರಸ್ತೆ, ಬೀದಿ, ಸುತ್ತಲಿನ ಪರಿಸರ ವನ್ನು ಅವರು ತಮ್ಮ ಮನೆಯ ವಿಸ್ತರಿಸಿದ ಭಾಗವೆಂದು ಪರಿಗಣಿಸುತ್ತಾರೆ. ಅವೆಲ್ಲ ಸ್ವಚ್ಛ ವಾಗಿರಲು ಈ ಅಂಶವೇ ಕಾರಣ.

ಜಪಾನಿಯರು ಅತ್ಯಂತ ಪ್ರಾಮಾಣಿಕರು ಮತ್ತು ನಂಬಿಕೆಗೆ ಅರ್ಹರು (Honest and Trustworthy). ತಮಗೆ ಸೇರಿರದ ಯಾವ ವಸ್ತುಗಳನ್ನೂ ಅವರು ಮುಟ್ಟುವುದಿಲ್ಲ. ಸಾರ್ವ ಜನಿಕ ಸ್ಥಳದಲ್ಲಿ ಮೊಬೈಲ್ , ಪರ್ಸ್, ಒಡವೆಗಳನ್ನು ಕಂಡರೂ ಕಾಣದಂತೆ ಹೋಗು ತ್ತಾರೆ. ಯಾರಾದರೂ ತಮ್ಮ ಮೊಬೈಲ, ಪರ್ಸ್, ಬೆಲೆ ಬಾಳುವ ಅಮೂಲ್ಯ ವಸ್ತುಗಳನ್ನು ಕಳೆದು‌ ಕೊಂಡರೆ, ಅದು ಮೂಲ ವಾರಸುದಾರರಿಗೆ ಸಿಗುವ ಸಾಧ್ಯತೆ ಶೇ.98.

ಜಪಾನಿಯರು ತಂತ್ರಜ್ಞಾನಪರ ಮತ್ತು ಸಂಪ್ರದಾಯವಾದಿಗಳು (Technologically Advanced yet Traditional). ಧರ್ಮ ಮತ್ತು ತಂತ್ರಜ್ಞಾನ ಒಟ್ಟಿಗೆ ಹೆಜ್ಜೆ ಹಾಕುವುದನ್ನು ಅಲ್ಲಿ ನೋಡಬಹುದು. ಹೆಗಲಿಗೆ ಲ್ಯಾಪ್‌ಟಾಪ್ ಅನ್ನು ಇಳಿಬಿಟ್ಟು ದೇವಸ್ಥಾನದಲ್ಲಿ ನಮ ಸ್ಕರಿಸುವವರನ್ನು ಎಡೆ ನೋಡಬಹುದು. ಅವರು ತಮ್ಮ ಸಂಪ್ರದಾಯ, ಧರ್ಮ ಹಾಗೂ ಪರಂಪರೆಯನ್ನು ಮರೆಯದೇ ತಂತ್ರeನ ಮತ್ತು ಸಂಸ್ಕೃತಿಯ ಮಧ್ಯೆ ಸಮ ತೋಲನ ಕಾಪಾಡಿಕೊಳ್ಳುವುದರಲ್ಲಿ ನಿಸ್ಸೀಮರು. ಸುರಕ್ಷಿತ ನಗರವಾದ ಟೋಕಿಯೋದಲ್ಲಿ, 6-4 ವರ್ಷ ವಯಸ್ಸಿನಲ್ಲಿ ಪಾಲಕರ ಸಹಾಯ ವಿಲ್ಲದೇ ಮಕ್ಕಳು ಒಂಟಿಯಾಗಿ ಪ್ರಯಾ ಣಿಸುವುದನ್ನು ಕಾಣಬಹುದು.

ಸರದಿ ಸಾಲೆಂದರೆ...

ಜಪಾನಿನಲ್ಲಿ ಬಹಳ ಬೇಗನೆ ಕರಗಿಹೋಗುವುದು ಉದ್ದದ ಸರದಿ ಸಾಲು. ಜಪಾನಿನ ‘ಸರದಿ ಸಂಸ್ಕೃತಿ’ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಸರದಿಯಲ್ಲಿ ಶಾಂತಿ ಯುತವಾಗಿ ನಿಲ್ಲುವುದು ಕೇವಲ ನಿಯಮವಲ್ಲ, ಅದು ಒಬ್ಬರಿಗೊಬ್ಬರು ಸಹಾಯ ಮಾಡುವುದು, ಸಮಾನತೆ ತೋರುವುದು ಮತ್ತು ಸಮಾಜದ ಸುಧಾರಣೆಗೆ ಸಹಕರಿಸುವ ಒಂದು ಅನೂಹ್ಯ ಮಾರ್ಗ.

ಪ್ರಕೃತಿ ವಿಕೋಪಗಳು (Natural Disasters) ಸಂಭವಿಸಿದಾಗಲೂ, ಜನರು ಸರದಿ ಯನ್ನು ಉಲ್ಲಂಘಿಸುವುದಿಲ್ಲ. 2011ರಲ್ಲಿ ಭೂಕಂಪ ( Great East Japan Earthquake) ಸಂಭವಿಸಿ ದಾಗ ಜನರು ಅನ್ನ, ನೀರು, ವೈದ್ಯಕೀಯ ಸಹಾಯ ಪಡೆಯಲು ಹಾಗೂ ಪರಿಹಾರ ವಿತ ರಣೆಗೆ ಶಾಂತಿಯುತವಾಗಿ ಸರದಿಯಲ್ಲಿ ನಿಂತ ದೃಶ್ಯವನ್ನು ಮರೆಯು ವಂತೆಯೇ ಇಲ್ಲ. ಹೊಸ ವರ್ಷ ಮತ್ತು ಚೆರ್ರಿ ಬ್ಲಾಸಂ ಹಬ್ಬದ ಸಮಯದಲ್ಲಿ ದೇವಸ್ಥಾನಗಳು, ಉದ್ಯಾನ ಗಳು ಮತ್ತು ಇತರ ಪ್ರವಾಸಿ ಕೇಂದ್ರಗಳಲ್ಲಿ ಜನರು ಶಿಸ್ತಿನಿಂದ ಸರದಿ ಕಾಯುತ್ತಾರೆ.

ಸರದಿ ಸಾಲಿನಲ್ಲಿ ಸಾವಿರ ಜನ ನಿಂತಿದ್ದರೂ ಜನ ತಾಳ್ಮೆಯಿಂದ ಕಾಯುತ್ತಾರೆ. ಹಿಂದಿದ್ದ ವರು ಮುಂದಿನವರನ್ನು ನೂಕುವುದಿಲ್ಲ. ಜಪಾನಿಯರು ಸರದಿ ಸಾಲಿಗೆ ಯಾಕೆ ಅಷ್ಟು ಮಹತ್ವ ನೀಡುತ್ತಾರೆ?

ಕಾರಣ ಅವರು ಸರದಿ ಸಾಲನ್ನು ಪರಸ್ಪರರಿಗೆ ನೀಡುವ ಗೌರವ ಎಂದೇ ಭಾವಿಸಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಸರದಿ ಸಂಸ್ಕೃತಿ ಸಾರ್ವಜನಿಕ ಸಂಯಮ ಮತ್ತು ತಾಳ್ಮೆಯನ್ನು ಕಲಿಸುತ್ತದೆ. ಅದನ್ನು ಉಲ್ಲಂಘಿಸುವುದು ಅಸಹನೆ ಮತ್ತು ಅಗೌರವದ ಸೂಚಕ. ಅದಕ್ಕಿಂತ ಮುಖ್ಯವಾಗಿ, ಸರದಿಯ ಬಗ್ಗೆ ಜಪಾನಿಯರ ಘೋಷವಾಕ್ಯ ಅಂದರೆ ‘ನೋ ಲೈನ್, ನೋ ಲೈಫ್’ ( No Line, No Life!). ಅದು ಅವರಿಗೆ ಜೀವನಶೈಲಿ ಮತ್ತು ಜೀವನ ಧರ್ಮ. ಜನಪ್ರಿ ಯ ರೆಸ್ಟೋರೆಂಟ್ ಅಥವಾ ಹೊಸ ಗೇ‌ಮ್/ಫೋನ್ ಬಿಡುಗಡೆಯಾದಾಗ, ಜನರು ಗಂಟೆ ಗಟ್ಟಲೆ, ಅರ್ಧ ದಿನ ಕಾಯುತ್ತಾರೆ.

ಕೆಲವೆಡೆ ಸರದಿಯಲ್ಲಿ ನಿಲ್ಲಲು ಪ್ರತ್ಯೇಕ ಮಾರ್ಗಗಳ ( Special Queuing Paths)ನ್ನು ನಿಗದಿಪಡಿಸಲಾಗಿದೆ. ಮೆಟ್ರೋ ರೈಲುಗಳು ಅಥವಾ ಶಿಂಕಾನ್ಸೆನ್ (Bullet Trains) ನಲ್ಲಿ ಹಳದಿ ಅಥವಾ ಬಿಳಿ ಮಾರ್ಗಗಳನ್ನು ನೋಡಬಹುದು. ಜನರು ಅದನ್ನು ಅನುಸರಿಸಿ ಗಂಟೆಗಟ್ಟಲೆ ಶಾಂತಿಯುತವಾಗಿ ಕಾಯುತ್ತಾರೆ. ಸರದಿ ನಿಯಮಗಳನ್ನು ಬದಲಾಯಿಸ ಬೇಕು ಎಂದಾದರೆ, ಅದನ್ನು ಮುಂಚೆಯೇ ಪ್ರಕಟಿಸಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಿರುತ್ತಾರೆ.

ಹೊಸತಾಗಿ ಸರದಿಯಲ್ಲಿ ನಿಲ್ಲುವವರಿಗೆ, ಇನ್ನು ಎಷ್ಟು ನಿಮಿಷ ಕಾಯುವುದು ಅನಿ ವಾರ್ಯ ಎಂಬುದನ್ನು ಸೂಚನಾಫಲಕಗಳ ಮೂಲಕ ತಿಳಿಸಲಾಗುತ್ತದೆ. ಜಪಾನಿನಲ್ಲಿ ಸರದಿ ಸಾಲಿನಲ್ಲಿ ನಿಲ್ಲುವುದನ್ನು ‘ವರ್ತನೆಯ ಪರೀಕ್ಷೆ’ (Queue as a Behavior Test) ಎಂದೂ ಪರಿಗಣಿಸಲಾಗಿದೆ. ಕೆಲವು ಕಂಪನಿಗಳು ಉದ್ಯೋಗ ಬಯಸಿದ ಅರ್ಜಿ ದಾರರನ್ನು ಸರದಿಯಲ್ಲಿ ನಿಂತಾಗಿನ ವರ್ತನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತವೆ. ತಮ್ಮ ಸಹನೆ, ಶಿಸ್ತು ಮತ್ತು ಸಾಮಾಜಿಕ ಅಂತರ ಪರೀಕ್ಷಿಸಲು ಇದು ಒಂದು ಸೂಕ್ತವಾದ ವಿಧಾನ.

ಫುಕುಬುಕುರೋ ( Fukubukuro- Lucky Bags) ಎಂಬ ವಿಶೇಷ ಮಾರಾಟದ ವೇಳೆ, ಜನರು ರಾತ್ರಿಯಿಡೀ ನಿಂತು ಕಾಯುತ್ತಾರೆ. ಕೊಮಿಕೆಟ್ (Comiket- Comic Market) ನಲ್ಲಿ ಸಾವಿ ರಾರು ಜನರು ಗ್ರಾಫಿಕ್ ಕಾದಂಬರಿ/ ಮಂಗಾ/ಗೇಮ್ಸಗಾಗಿ 5-6 ಗಂಟೆಗಳ ಕಾಲ ಶಾಂತವಾಗಿ ಸರದಿಯಲ್ಲಿ ಕಾಯುತ್ತಾರೆ. ಐಫೋನ್ ಬಿಡುಗಡೆಯಾಗುವಾಗ, ಜನರು ಶಾಪಿಂಗ್ ಮಾಲ್‌ ಗಳ ಮುಂದೆ ದಿನಗಟ್ಟಲೆ ಟೆಂಟ್ ಹಾಕಿಕೊಂಡು ಕಾಯುತ್ತಾರೆ.

ಯಾರಾದರೂ ಸರದಿ ಮುರಿಯಲು ಪ್ರಯತ್ನಿಸಿದರೆ, ಜನರು ಕೂಗುವುದಿಲ್ಲ, ಆಕ್ರೋಶ ತೋರುವುದಿಲ್ಲ. ಬದಲಿಗೆ ನೇರ ನೋಟದಿಂದ ತೀವ್ರ ಅಸಮಾಧಾನ ಸೂಚಿಸುತ್ತಾರೆ. ಕೆಲವೊಮ್ಮೆ, ಸರದಿ ಮುರಿದ ವ್ಯಕ್ತಿಯತ್ತ ತಿರುಗಿ ನೋಡುವ ಮೂಲಕ ಸಾಕಷ್ಟು ನೈತಿಕ ಒತ್ತಡ ಹೇರಬಹುದು. ಸರದಿ ಮುರಿಯುವವರಿಗೆ ಶೂನ್ಯ ಸಹಿಷ್ಣುತೆ!

ಅಶುಭ ಸಂಖ್ಯೆ

ಜಪಾನಿಯರು ಅಪ್ಪಿತಪ್ಪಿಯೂ ನಾಲ್ಕನೇ ಸಂಖ್ಯೆ ಬಳಸುವುದನ್ನು ತಪ್ಪಿಸುತ್ತಾರೆ. ನಾಲ್ಕನೇ (ಶಿ) ಸಂಖ್ಯೆ ಸಾವಿನ ಪದದಂತೆಯೇ ಧ್ವನಿಸುತ್ತದೆಯಂತೆ. ಹೀಗಾಗಿ ಆ ಸಂಖ್ಯೆ ಯನ್ನು ಅವರು ಅಪಶಕುನ ಅಥವಾ ಅಶುಭ ಎಂದು ಭಾವಿಸಿದ್ದಾರೆ. ಈ ನಂಬಿಕೆಯನ್ನು ಟೆಟ್ರಾಫೋಬಿಯಾ ( Tetraphobia) ಎಂದು ಕರೆಯುತ್ತಾರೆ.

ಅಂದರೆ 4 ಸಂಖ್ಯೆ ಕಂಡರೆ ಭಯ. ಜಪಾನಿನಲ್ಲಿ ಬಹುಮಹಡಿ ಕಟ್ಟಡಗಳು ನಾಲ್ಕನೇ ಮಹಡಿಯನ್ನು ಹೊಂದಿರುವುದಿಲ್ಲ. ಕಾಫಿ ಅಥವಾ ಚಹಾ ಸೆಟ್ ಗಳನ್ನು ಖರೀದಿಸಿದರೆ ಮೂರು ಅಥವಾ ಐದು ಕಪ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ನಾಲ್ಕು ಕಪ್‌ ಗಳಿ ರುವ ಸೆಟ್ ಸಿಗುವುದಿಲ್ಲ. ಜಪಾನಿನ ಚಹಾ ಸಮಾರಂಭದಲ್ಲಿ, ಅತಿಥಿಗಳ ಅಪೇಕ್ಷಣೀಯ ಸಂಖ್ಯೆ ಮೂರು ಅಥವಾ ಐದು. ಅನೇಕ ಕಟ್ಟಡಗಳಲ್ಲಿ ಲಿಫ್ಟ್‌ ನಲ್ಲಿ ‘4’ ನಂಬರ್ ಇರುವ ಬಟನ್ ಇರುವುದಿಲ್ಲ. ಬದಲಿಗೆ, ‘3 ಎ’ ಅಥವಾ ‘ F' (Four ಬದಲಿಗೆ) ಎಂದು ಬಳಕೆಯಾಗು ತ್ತದೆ. ಬಹುತೇಕ ಆಸ್ಪತ್ರೆಗಳಲ್ಲಿ ’ Room No.4’ ಇರುವುದಿಲ್ಲ. ಏಕೆಂದರೆ 4 ಅಂದ್ರೆ ಮರಣ ಎಂಬ ಭಯ. ಹೋಟೆಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿಯೂ ‘404’ ಅಥವಾ ‘4’ ನಂಬರ್ ಕೋಣೆಗಳನ್ನೇ ಬೇರೆ ಸಂಖ್ಯೆಯಿಂದ ಮಾರ್ಪಡಿಸುತ್ತಾರೆ.

ಹಾಗೆಯೇ ಕಾರು ರಿಜಿಸ್ಟ್ರೇಷನ್ ವೇಳೆ ‘4444’ ಅಥವಾ ‘4’ ಹೊಂದಿದ ಸಂಖ್ಯೆಯನ್ನು ಹೆಚ್ಚಿನವರು ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಆಂಬುಲೆ, ಮೆಡಿಕಲ್ ಕಾರುಗಳಿಗೆ ‘4’ ಸಂಖ್ಯೆ ಇಡುವುದಿಲ್ಲ. ಜಪಾನ್ ಏರ್‌ಲೈ ವಿಮಾನದಲ್ಲೂ ನಾಲ್ಕನೇ ನಂಬರಿನ ಆಸನ ಇರುವುದಿಲ್ಲ. ಅಪ್ಪಿತಪ್ಪಿ ನಾಲ್ಕನೇ ನಂಬರಿನ ಆಸನವಿದ್ದರೆ ಜಪಾನಿಯರು ಮಾತ್ರ ಅಲ್ಲಿ ಕುಳಿತುಕೊಳ್ಳುವುದಿಲ್ಲ.

ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ ಈ ನಂಬಿಕೆಗಳು ಯಾವುದೇ ತರ್ಕಬದ್ಧ ( Logical) ಆಧಾರ ಹೊಂದಿಲ್ಲ. ಆದರೆ, ಮನುಷ್ಯರ ಭಾವನೆಗಳು, ಮನಸ್ಸಿನ ಸ್ಥಿತಿ, ಮತ್ತು ಸಾಮಾಜಿಕ ಅಭ್ಯಾಸಗಳು ಈ ನಂಬಿಕೆಗಳನ್ನು ಮುಂದುವರಿಸಿವೆ. ಜಪಾನಿನ ಬಹು ತೇಕ ಯುವಜನರು ಈ ನಂಬಿಕೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಆಸ್ಪತ್ರೆ, ಹೋಟೆಲ್, ಅಪಾರ್ಟ್‌ಮೆಂಟ್‌ಗಳು ಇನ್ನೂ ನಾಲ್ಕನೇ ನಂಬರ್ ಬಳಕೆ ಯನ್ನು ತಪ್ಪಿಸುತ್ತವೆ.‌

ಕೆಲವು ಜನರು ಅದರ ಬಗ್ಗೆ ತಾವು ನಂಬುವುದಿಲ್ಲ ಎಂದು ಹೇಳಿದರೂ, ಒಳಗೊಳಗೇ ಆ ನಂಬಿಕೆ ಕುರಿತು ಭಯ-ಭೀತಿ ಹೊಂದಿರುವುದು ಸುಳ್ಳಲ್ಲ. ಈ ನಂಬಿಕೆ ಚೀನಾ, ಕೊರಿಯಾ ಮತ್ತು ಏಷ್ಯಾದ ಇತರ ದೇಶಗಳಲ್ಲೂ ಪ್ರಚಲಿತದಲ್ಲಿದೆ.