Naveen Sagar Column: ಹೂವನ್ನು ಒದರಿ ನಾರು ಸ್ವರ್ಗ ಸೇರದ ಕಥೆ !
ಹೂವಿನ ಜತೆ ನಾರು ಸ್ವರ್ಗ ಸೇರುವುದು ನೋಡಿದ್ದೇವೆ. ಹೂವನ್ನೇ ಒದರಿ ನಾರು ಸ್ವರ್ಗ ಸೇರುವು ದನ್ನು ಬಾನು ಮುಷ್ತಾಕ್ ತೋರಿಸಿದ್ದಾರೆ. ಮಗ ಪರೀಕ್ಷೆಯಲ್ಲಿ ಪಾಸ್ ಆದರೆ, ಹುಟ್ಟೋಕೆ ಕಾರಣ ಆದವರು ಎಂದು, ಅಪ್ಪನಿಗೆ ಸರ್ಟಿಫಿಕೇಟ್ ಕೊಟ್ಟ ಹಾಗಾಗಿದೆ. ಇನ್ನು ಸರಕಾರದ ವಿವೇಚನೆ ಬಗ್ಗೆ ಮಾತನಾಡು ವುದೇ ವ್ಯರ್ಥ. ಇದು ವಿವಾದವಾಗುತ್ತದೆ ಎಂದು ಗೊತ್ತಿದ್ದರೂ, ವಿವಾದ ಆಗಬೇಕು ಎಂಬ ಆಸೆ ಇಟ್ಟು ಕೊಂಡೇ ತೆಗೆದುಕೊಂಡ ನಿರ್ಧಾರ ಇದು. ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದೆ.

-

ಪದಸಾಗರ
ಬೂಕರ್ ಪ್ರಶಸ್ತಿ ಮತ್ತು ದಸರಾ ಉದ್ಘಾಟನೆಯ ಮಾತುಗಳು ಬದಿಗಿರಲಿ, ಈ ನಕ್ಸಲ್ ಮನಸ್ಥಿತಿಯ ಎಡ ಬರಹಗಾರರಿಗೆ ಹಿಂದೂ ಧರ್ಮ, ಧರ್ಮಗ್ರಂಥ, ದೇವರು ಯಾಕೆ ವಿಮರ್ಶೆಯ ಸರಕು? ಅದರಲ್ಲೂ ಅನ್ಯಧರ್ಮೀಯರಿಗೇಕೆ ಹಿಂದೂ ಧರ್ಮವನ್ನು ವಿಮರ್ಶಿ ಸುವ ಹೆಸರಿನಲ್ಲಿ ಅವಹೇಳನ ಮಾಡುವ ಚಟ?
ಎವ್ರಿ ಡೇ ಈಸ್ ನಾಟ್ ಸಂಡೇ ಅಂತ ಯಾರು ಸ್ವಾಮಿ ಹೇಳಿದ್ದು. ಕರ್ನಾಟಕದಲ್ಲಿ ಕಳೆದ ಒಂದು ಹತ್ತು ದಿನಗಳಿಂದ ಭಾನುವಾರವೇ ಚಾಲ್ತಿಯಲ್ಲಿದೆ.. ಓಹ್ ಕ್ಷಮಿಸಿ ಇದು ಭಾನುವಾರವಲ್ಲ- ಬಾನು ‘ವಾರ’! ಆದರೆ ಬಾನುವಾರಗಳು ಬಾನು‘ವಾರ್’ ಆಗಿ ಬದಲಾಗಿ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿದೆ. ಯೆಸ್.. ಈ ಯುದ್ಧದ ಕೇಂದ್ರಬಿಂದು ಬಾನು. ಬಾನು ಭೂಮಿಯಷ್ಟು ಅಂತರ ವಿರುವ ಎರಡು ಧರ್ಮಗಳ ಮಧ್ಯ ಇನ್ನಷ್ಟು ಅಂತರ ನಿರ್ಮಾಣವಾಗುವುದಕ್ಕೂ ಬಾನು ಕಾರಣ ವಾಗುತ್ತಿದ್ದಾರೆ.
ಬಾನು ಮುಷ್ತಾಕ್ ಅವರಿಗೆ ಇದು ಬೇಕಿತ್ತಾ? ಸೈಲೆಂಟಾಗಿ ನಮ್ರತೆಯ ಮಾತನ್ನಾಡಿ ಹಿಂದೆ ಸರಿದು ಘನತೆ ಉಳಿಸಿಕೊಳ್ಳಬಹುದಿತ್ತಲ್ಲವೇ? ದಸರಾ ಉದ್ಘಾಟನೆ ಮಾಡಲೇಬೇಕೆಂದು ಅಷ್ಟೊಂದು ಆಸೆಯಾದರೂ ಯಾಕೆ? ಯಾರದ್ದೇ ಸಾಧನೆಗೆ ಅಯಾಚಿತವಾಗಿ ಹತ್ತು ಲಕ್ಷ ಹಣ ಸರಕಾರದಿಂದ ಸಿಕ್ಕಿದೆ. ಸಾಕೆಂದು ಸುಮ್ಮನಿರೋ ಬದಲು ದಸರಾ ಉದ್ಘಾಟಿಸುವ ಹುಕಿ ಏಕೆ? ನಾನಿದನ್ನು ಹುಕಿ ಅಂತಲೇ ಕರೆಯುತ್ತೇನೆ.
ಯಾಕಂದರೆ ಹಿಂದೂ ಧಾರ್ಮಿಕ ನಂಬಿಕೆಗಳ ಬಗ್ಗೆ ಮನಸಲ್ಲಿ ಕಿಂಚಿತ್ತೂ ಗೌರವ ಇಲ್ಲದವರು, ಹಿಂದೂ ದೇವರನ್ನು, ಆಚರಣೆಗಳನ್ನು ಹೀಗಳೆಯುವವರು, ಇನ್ಯಾವ ಸದ್ಭಾವದಿಂದ ದಸರಾ ಉದ್ಘಾಟನೆ ಮಾಡಲು ಸಾಧ್ಯ? ಸರಕಾರವೇನೋ ಮುಸಲ್ಮಾನೆ ಎಂಬ ಕಾರಣಕ್ಕೆ ಓಲೈಸುತ್ತಿದೆ ಅನ್ನೋಣ. ಆದರೆ ಮುಸಲ್ಮಾನೆ ಯಾಕೆ ಸರಕಾರವನ್ನು ಓಲೈಸುತ್ತಿರೋದು? ಭವಿಷ್ಯದಲ್ಲಿ ಮತ್ತಷ್ಟು ಲಾಭದ ನಿರೀಕ್ಷೆಯಿಂದಲಾ? ಬಾನು ಮುಷ್ತಾಕ್ ಕನ್ನಡ ಸಾರಸ್ವತ ಲೋಕದಲ್ಲಿ ಯಾವತ್ತಿಗೂ ಜನಪ್ರಿಯ ಅಥವಾ ಸಮಾಜೋಪಯೋಗಿ ಲೇಖಕಿ ಆಗಿ ಗುರುತಿಸಿಕೊಂಡವರಲ್ಲ.
ಇದನ್ನೂ ಓದಿ: Naveen Sagar Column: ಕೊಂಚ ತಡವಾದರೂ ದುಷ್ಟ ಶಿಕ್ಷಣ, ಧರ್ಮ ರಕ್ಷಣ ಶತ ಸಿದ್ಧ !
ಧಾರ್ಮಿಕ ವಿಚಾರಗಳನ್ನು ಕೆಣಕುವ ಸಬ್ಜೆಕ್ಟ್ ಗಳೇ ಅವರ ಬಹುಪಾಲು ಬರಹದ ಸರಕು. ಅವರ ಬರಹಗಳೆಲ್ಲವೂ ಅವರ ಕಾಂಟ್ರವರ್ಸಿಯಲ್ ಹೇಳಿಕೆಗಳದ್ದೇ ಇನ್ನೊಂದು ರೂಪವಷ್ಟೆ. ಅಂಥದ್ದು ಬರೆದರೂ ಪಾಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೆಫ್ಟಿ ಮನಸುಗಳನ್ನು ಮುಟ್ಟಲು ಸಾಧ್ಯ ವಾಗಿರಲಿಲ್ಲ ಬಾನು ಮುಷ್ತಾಕ್ ಅವರಿಗೆ. ಕಾರಣ ಅವು ಇಂಗ್ಲಿಷ್ನಲ್ಲಿರಲಿಲ್ಲ. ಆದರೆ ದೀಪಾ ಭಸ್ತಿ ಅವರು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಮಾಡಿದ ಇಂಗ್ಲಿಷ್ ಅನುವಾದ ಲೆಫ್ಟಿ ಅವಾರ್ಡ್ ಎಂದೇ ಖ್ಯಾತವಾದ ಬೂಕರ್ ಪ್ರಶಸ್ತಿ ಪ್ಯಾನೆಲ್ಗೆ ಕಾಣಿಸಿದ್ದೇ ತಡ ಅವಾರ್ಡ್ ಅನೌನ್ಸ್ ಆಗಿಯೇ ಬಿಟ್ಟಿತು.
ಒರಿಜಿನಲ್ಲು ರಾಜ್ಯಮಟ್ಟದಲ್ಲೂ ಅವಾರ್ಡ್ ಪಡೆಯಲು ಯೋಗ್ಯವಿಲ್ಲದೇ ಮೂಲೆ ಸೇರಿತ್ತು. ಆದರೆ ಅದರ ಅನುವಾದಕ್ಕೆ ಬೂಕರ್ ಸಿಕ್ಕಿಬಿಟ್ಟಿತು. ಅದರರ್ಥ ಏನು? ದೀಪಾ ಭಸ್ತಿಗೆ ಬೂಕರ್ ಅವಾರ್ಡ್ ಸಿಕ್ಕಿದ್ದು ಕಷ್ಟ ಪಟ್ಟು ಅನುವಾದಿಸಿ, ಮೂಲಕೃತಿಗಿಂತ ಬೆಟರ್ ಅನಿಸುವಂತೆ ಬರೆದದ್ದಕ್ಕೋ, ಅಥವಾ ಬಾನು ಮುಷ್ತಾಕ್ ಎಂಬ ಲೆಫ್ಟಿ ಮನಸ್ಥಿತಿಯ ಮುಸಲ್ಮಾನ ಲೇಖಕಿಯ ಪುಸ್ತಕವನ್ನು ಅನುವಾದಿಸಿದ್ದಕ್ಕೋ ಬಲ್ಲವರೇ ಹೇಳಬೇಕು.

ಆಯ್ತು. ಅನುವಾದಕ್ಕೆ ಬೂಕರ್ ಪ್ರಶಸ್ತಿ ಬಂತು. ಸಂತೋಷ. ಕನ್ನಡ ಮೂಲದ ಲೇಖಕಿ ಬರೆದ ಇಂಗ್ಲಿಷ್ ಪುಸ್ತಕಕ್ಕೆ ವಿದೇಶಿ ಪ್ರಶಸ್ತಿಯೊಂದು ಬಂದಿದೆ. ಸಂತೋಷ. ಆದರೆ ಬೂಕರ್ ಪ್ರಶಸ್ತಿ ಪಡೆಯುವುದು ಹೆಮ್ಮೆಯ ವಿಚಾರ ಯಾಕೆ? ಸಿನಿಮಾದಲ್ಲಿ ಆಸ್ಕರ್ ಥರವೇ ಪುಸ್ತಕದಲ್ಲಿ ಬೂಕರ್. ಅಷ್ಟೇ. ಈ ಪ್ರಶಸ್ತಿಗಳನ್ನು ಸರ್ವಶ್ರೇಷ್ಠ ಎಂದೇಕೆ ತಲೆ ಮೇಲೆ ಹೊತ್ತು ಮೆರೆಸುತ್ತಿರುವುದು? ಬೂಕರ್ ಪ್ರಶಸ್ತಿ ಗೆದ್ದದ್ದು ದೀಪಾ ಭಸ್ತಿ.
ಬಾನು ಮುಷ್ತಾಕ್ ಮೂಲಕೃತಿ ತಮ್ಮದು ಅಂತ ಖುಷಿಪಡಬಹುದೇ ಹೊರತು, ತಾವು ಪ್ರಶಸ್ತಿ ವಿಜೇತರಲ್ಲ ಎಂದು ಅವರಿಗೆ ಗೊತ್ತಿರಬೇಕು. ಆದರೆ ಪ್ರಶಸ್ತಿಯ ಪಾಲುದಾರೆ ಅಥವಾ ಪ್ರಮುಖ ಹಕ್ಕು ತಮ್ಮದೇ ಎಂಬಂತೆ ಮೈಲೇಜ್ ಗಿಟ್ಟಿಸುತ್ತಿರುವುದು ಅತಿ ದೊಡ್ಡ ಅಸಹ್ಯ. ಕಡೆಯ ಪಕ್ಷ ನಾವು ಜಂಟಿಯಾಗಿ ಉದ್ಘಾಟಿಸುತ್ತೇವೆ ಎಂಬ ಸೌಜನ್ಯದ ಪ್ರತಿಕ್ರಿಯೆಯೂ ಬಾನು ಅವರಿಂದ ಬರಲಿಲ್ಲ.
ಹೂವಿನ ಜತೆ ನಾರು ಸ್ವರ್ಗ ಸೇರುವುದು ನೋಡಿದ್ದೇವೆ. ಹೂವನ್ನೇ ಒದರಿ ನಾರು ಸ್ವರ್ಗ ಸೇರುವು ದನ್ನು ಬಾನು ಮುಷ್ತಾಕ್ ತೋರಿಸಿದ್ದಾರೆ. ಮಗ ಪರೀಕ್ಷೆಯಲ್ಲಿ ಪಾಸ್ ಆದರೆ, ಹುಟ್ಟೋಕೆ ಕಾರಣ ಆದವರು ಎಂದು, ಅಪ್ಪನಿಗೆ ಸರ್ಟಿಫಿಕೇಟ್ ಕೊಟ್ಟ ಹಾಗಾಗಿದೆ. ಇನ್ನು ಸರಕಾರದ ವಿವೇಚನೆ ಬಗ್ಗೆ ಮಾತನಾಡುವುದೇ ವ್ಯರ್ಥ. ಇದು ವಿವಾದವಾಗುತ್ತದೆ ಎಂದು ಗೊತ್ತಿದ್ದರೂ, ವಿವಾದ ಆಗಬೇಕು ಎಂಬ ಆಸೆ ಇಟ್ಟುಕೊಂಡೇ ತೆಗೆದುಕೊಂಡ ನಿರ್ಧಾರ ಇದು. ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದೆ. ಬೂಕರ್ ಗೆದ್ದಿದ್ದಕ್ಕೆ, ನಾವು ದೀಪಾ ಭಸ್ತಿಯವರಿಗೂ ಬಾನು ಮುಷ್ತಾಕ್ ಅವರಿಗೂ ತಲಾ ಹತ್ತು ಲಕ್ಷ ನೀಡಿದ್ದೇವೆ. ಯಾಕೆ ನೀಡಿದಿರಿ ಅಂತ ಕೇಳಬೇಕಲ್ಲ ಈಗ. ಬೂಕರ್ ಸಂಸ್ಥೆ ಅನುವಾದಕಿಗೆ ಪ್ರಶಸ್ತಿ ಜತೆ ಹಣ ನೀಡಿದ್ದಾಗಿದೆ.
ಇಲ್ಲಿ ಆ ಸಂತೋಷಕ್ಕೆ ಒಂದು ಸನ್ಮಾನ ಸಾಕಿತ್ತಲ್ಲವೇ? ಈ ಔದಾರ್ಯ ಏಕೆ? ಸರಿ ದೀಪಾ ಭಸ್ತಿಗೆ ಹಣದ ಗೌರವ ಕೊಟ್ಟದ್ದೂ ಓಕೆ ಅನ್ನೋಣ. ಬಾನು ಮುಷ್ತಾಕ್ಗೆ ಹತ್ತು ಲಕ್ಷ ಕೊಡುವ ಅಗತ್ಯ ವೇನಿತ್ತು? ಇಷ್ಟಕ್ಕೂ ಯಾರ ಹಣ ಇದು ಈ ರೀತಿ ದಾನ ಮಾಡೋದಕ್ಕೆ? ಸರಿ ಇಬ್ಬರಿಗೂ ಹತ್ತು ಲಕ್ಷ ಕೊಟ್ಟಾಯ್ತು. ಸನ್ಮಾನವೂ ಆಯ್ತು.
ಅಲ್ಲಿಗೆ ಮುಗಿಯಬೇಕಿತ್ತಲ್ವಾ ಸಂಭ್ರಮ? ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದೇಕೆ? ದೀಪಾ ಭಸ್ತಿಯನ್ನು ಸೈಡಿಗಿಟ್ಟಿದ್ದೇಕೆ? ಎರಡು ವರ್ಷಗಳ ಹಿಂದೆ ಹಿಂದೂ ಧರ್ಮದ ಮತ್ತು ಸ್ವಾಮಿಗಳ ಅವಹೇಳನ ಮಾಡಿದ್ದಕ್ಕೆ ಹಂಸಲೇಖ ಅವರಿಗೆ ದಸರಾ ಉದ್ಘಾಟಿಸುವ ಅವಕಾಶ ನೀಡಲಾಯಿತು.
ಈಗ ಬಾನು ಮುಷ್ತಾಕ್ಗೆ ಆಹ್ವಾನ. ಇಲ್ಲಿ ಯಾವ ಸಂದೇಶ ರವಾನೆ ಆಗ್ತಾ ಇದೆ. ಹಿಂದೂ ಧರ್ಮ ವನ್ನು ಟೀಕಿಸಿ, ನಿಂದಿಸಿ, ಅಪಹಾಸ್ಯ ಮಾಡಿ. ನಾವು ನಿಮ್ಮನ್ನು ಸನ್ಮಾನಿಸುತ್ತೇವೆ ಅಂತಲಾ? ಇಲ್ಲಿ ಬಾನು ಮುಷ್ತಾಕ್ ಕೇವಲ ಹಿಂದೂ ಧಾರ್ಮಿಕ ಭಾವನೆಗೆ ಮಾತ್ರ ಧಕ್ಕೆ ತಂದಿರುವುದಲ್ಲ, ನಾಡ ದೇವಿ ಭುವನೇಶ್ವರಿ ಕುರಿತಾಗಿ ವಿರೋಧಿ ಹೇಳಿಕೆ ನೀಡುವ ಮೂಲಕ ಕನ್ನಡವನ್ನೂ ಅವಮಾನಿಸಿ ದ್ದಾರೆ.
ಹಿಂದೂ ಧರ್ಮ ಮತ್ತು ನಾಡದೇವಿಯ ಬಗ್ಗೆ ಗೌರವವಿಲ್ಲದವರಿಂದ ನಾಡಹಬ್ಬದ ಉದ್ಘಾಟನೆ ಎಂಬುದು ವ್ಯಂಗ್ಯದ ಪರಮಾವಧಿ ಅಲ್ಲವೇ? ಸರಕಾರದ ಪ್ರಕಾರ ನಾಡಹಬ್ಬ ಒಂದು ಸೆಕ್ಯುಲರ್ ಹಬ್ಬ. ಯಾವ ಲಾಜಿಕ್ ಪ್ರಕಾರ ಇದು ಸೆಕ್ಯುಲರ್ ಹಬ್ಬ? ಯಾವ ಮುಸಲ್ಮಾನ ಕ್ರೈಸ್ತರ ಮನೆಯಲ್ಲಿ ನವರಾತ್ರಿ ಆಚರಣೆ ನಡೆಯುತ್ತದೆ ತೋರಿಸಿ ಬಿಡಲಿ.
ನವರಾತ್ರಿಯ ಯಾವ ಪೂಜೆಗಳಲ್ಲಿ ಮುಸಲ್ಮಾನರು ಇನ್ನಿತರ ಧರ್ಮದವರು ಬಂದು ಭಾಗವಹಿಸಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ? ಒಂಬತ್ತು ದಿನ ಒಂಬತ್ತು ದೇವಿಯ ಪೂಜೆ ನಡೆಸುವ ನವರಾತ್ರಿ, ಮಹಾಭಾರತದ ಪೌರಾಣಿಕ ಇತಿಹಾಸ ಇರುವ ವಿಜಯದಶಮಿ ಅದ್ಯಾವಾಗ ಸೆಕ್ಯುಲರ್ ಹಬ್ಬವಾಗಿಬಿಟ್ಟಿತು? ಶಾಲೆಯಲ್ಲಿ ದಸರಾ ಸಮಯದಲ್ಲಿ ನಡೆಸುವ ಶಾರದಾ ಪೂಜೆಯನ್ನು ನಿಲ್ಲಿಸಲು ಹೊರಟಿತ್ತು ಇದೇ ಸರಕಾರ. ಕಾರಣ ಸೆಕ್ಯುಲರಿಸಂ ಅಮಲು.
ಬಿಜೆಪಿ ಸರಕಾರ ಇzಗ, ಚಾಮುಂಡಿ ಪೂಜೆ, ದಸರಾ ಇವೆಲ್ಲ ಕೋಮುವಾದಿ ಹಬ್ಬವಾಗಿತ್ತು. ಮಹಿಷ ದಸರಾ ಎಂಬ ಅನಿಷ್ಟದ ಆಚರಣೆಗೆ ಬೆಂಬಲವಾಗಿ ನಿಂತು ದಸರಾ ಮತ್ತು ಚಾಮುಂಡೇಶ್ವರಿ ಯನ್ನು ವಿರೋಧಿಸುತ್ತಿತ್ತು ಇದೇ ಬಣ. ಅಂದರೆ ದಸರಾ ಅನ್ನೋದು ತಮಗೆ ಬೇಕಾದಾಗ ಸೆಕ್ಯುಲರ್ ಮತ್ತು ಕೋಮುವಾದಿ ಹಬ್ಬವಾಗಿ ಬದಲಾಗುವ ಅಚರಣೆಯಾ? ಸರಕಾರ ಹೇಳುವ ಹಾಗೆ ಹೈದರ್ ಟಿಪ್ಪೂ ಕಾಲದಲ್ಲೂ ದಸರಾ ಆಚರಣೆ ಇತ್ತು ನಿಜ.
ಆದರೆ ಅದು ಹಿಂದೂಗಳಿಂದ ಆಚರಿಸಲ್ಪಡುತ್ತಿತ್ತು. ಆ ಲೆಕ್ಕದಲ್ಲಿ ಇಂದಿನ ಪರಿಸ್ಥಿತಿ ಟಿಪ್ಪೂ ಕಾಲಕ್ಕಿಂತ ಹೀನ ಅನಿಸುತ್ತಿಲ್ಲವೇ? ಹಿಂದೂಗಳು ಧರ್ಮಾಂಧರಲ್ಲ. ಮುಸಲ್ಮಾನ ದ್ವೇಷಿಗಳೂ ಲ್ಲ. ದಸರಾ ಹಬ್ಬವನ್ನು ಒಬ್ಬ ಘನತೆವೆತ್ತ ಮುಸ್ಲಿಂ ಮಹಿಳೆ ಉದ್ಘಾಟಿಸಿದ್ದರೆ ಅದನ್ನು ಯಾವ ಹಿಂದೂ ಕೂಡ ವಿರೋಧಿಸುತ್ತಿರಲಿಲ್ಲ. ಹಾಗಿದ್ದಿದ್ದರೆ ಕವಿ ಪ್ರೊಫೆಸರ್ ನಿಸಾರ್ ಅಹಮದ್ ಅವರು ಆಯ್ಕೆ ಯಾದಾಗಲೂ ವಿರೋಧ್ಯ ವ್ಯಕ್ತ ಆಗಿರುತ್ತಿತ್ತು.
ನಿಸಾರ್ ಅಹಮದ್ ಯಾವತ್ತಿಗೂ ಭಾರತೀಯತೆ ಸಾರಿದರು. ಕನ್ನಡಪ್ರೇಮ ತೋರಿದರು. ಬಹು ಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವಕ್ಕೆ ಎಂದೂ ಧಕ್ಕೆ ತರಲಿಲ್ಲ. ಅಂಥ ವ್ಯಕ್ತಿ ದೇವರ ಗರ್ಭ ಗುಡಿ ಹೊಕ್ಕರೂ ಹಿಂದೂಧರ್ಮ ಸಹಿಸುತ್ತದೆ. ಆದರೆ ದೇವರ ಅಸ್ತಿತ್ವವನ್ನೇ ಪ್ರಶ್ನಿಸೋ, ಹೆಜ್ಜೆ ಹೆಜ್ಜೆಗೂ ಹಿಂದೂ ಧರ್ಮದ ಆಚರಣೆಗಳನ್ನು ಟೀಕಿಸೋ ವ್ಯಕ್ತಿಗೆ ಈ ಗೌರವ ಯಾಕೆ? ಇನ್ನು ಹಲವರ ಸವಾಲಿನಂತೆ ಬಾನು ಮುಷ್ತಾಕ್ ಕಟ್ಟರ್ ಹಿಂದೂ ಧರ್ಮೀಯರಂತೆ ದಿರಿಸು ಧರಿಸಿ ಹಿಂದೂ ಆಚರಣೆ ಯಂತೆ ಪೂಜೆ ಮಾಡಲು ತಯಾರಿದ್ದಾರಾ? ಇಲ್ಲ.
ಹಾಗೆ ಮಾಡಲು ಅವರ ಧರ್ಮ ಬಿಡುವುದಿಲ್ಲ. ಈಗಲೇ ಫತ್ವಾ ಹೊರಡಿಸುವ ಮಾತು ಬರುತ್ತಿದೆ. ಮುಸಲ್ಮಾನ ನಾಯಕರು ಉಗ್ರವಾಗಿ ಮಾತನಾಡುತ್ತಿದ್ದಾರೆ. ಪೂಜೆ ಮಾಡಿದ್ರೆ ಹರಾಮ, ಕಾಫಿರರು ಅಂತೆಲ್ಲ ಹೇಳುತ್ತಿದ್ದಾರೆ. ತನ್ನ ಧರ್ಮದ ಎದುರು ಸೆಡ್ಡು ಹೊಡೆದು ನಿಲ್ಲಲು ಬಾನು ಮುಷ್ತಾಕ್ಗೆ ಸಾಧ್ಯ ಇದೆಯಾ? ಇಲ್ಲ. ಹೀಗಿರುವಾಗ ಉದ್ಘಾಟನೆಯ ಅವಕಾಶ ಉಳಿಸಿಕೊಳ್ಳೋಕೆ ಬಣ್ಣದ ಮಾತು ಗಳನ್ಯಾಕೆ ಆಡುತ್ತಿದ್ದಾರೆ? ಬೂಕರ್ ಪ್ರಶಸ್ತಿ ಮತ್ತು ದಸರಾ ಉದ್ಘಾಟನೆಯ ಮಾತುಗಳು ಬದಿಗಿರಲಿ, ಈ ನಕ್ಸಲ್ ಮನಸ್ಥಿತಿಯ ಎಡ ಬರಹಗಾರರಿಗೆ ಹಿಂದೂ ಧರ್ಮ, ಧರ್ಮಗ್ರಂಥ, ದೇವರು ಯಾಕೆ ವಿಮರ್ಶೆಯ ಸರಕು? ಅದರಲ್ಲೂ ಅನ್ಯಧರ್ಮೀಯರಿಗೇಕೆ ಹಿಂದೂ ಧರ್ಮವನ್ನು ವಿಮರ್ಶಿಸುವ ಹೆಸರಿನಲ್ಲಿ ಅವಹೇಳನ ಮಾಡುವ ಚಟ? ಅನ್ಯಧರ್ಮದ ಕುರಿತಾಗಿ ಅದೊಮ್ಮೆ ಅಜಿತ್ ಹನುಮಕ್ಕ ನವರ್ ಮಾತನಾಡಿದ್ದಕ್ಕೆ ಏನೆಲ್ಲ ಅನುಭವಿಸುವಂತಾಯ್ತು.
ಆದರೆ ಹಿಂದೂ ಧರ್ಮವನ್ನು ನಿಂದಿಸಿ ಯಾರು ಬೇಕಾದರೂ ಜಯಿಸಿಕೊಳ್ಳಬಹುದು. ಇದೇ ಅಲ್ವಾ ಸರಕಾರ ನೀಡುತ್ತಿರುವ ಸಂದೇಶ? ಈಗಲೂ ಸಮಯ ಇದೆ. ಬಾನು ಮುಷ್ತಾಕ್ ಈ ಆಹ್ವಾನವನ್ನು ತಿರಸ್ಕರಿಸಲಿ. ಹಿಂದೆ ಸರಿಯುವುದರಿಂದ ಕಳೆದುಕೊಂಡಿರುವ ಮರ್ಯಾದೆಯೇನೂ ಮರಳಿ ಸಿಗುವುದಿಲ್ಲ. ಆದರೆ ಸರಕಾರಕ್ಕೆ ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ. ಜತೆಗೆ ಈ ಬಾರಿಯ ದಸರಾ ಹಬ್ಬಕ್ಕೆ ತಟ್ಟುವ ಮೈಲಿಗೆ ತಪ್ಪಿದಂತಾಗುತ್ತದೆ. ನಾಡಹಬ್ಬ ಅರ್ಥಪೂರ್ಣವೂ ಅನಿಸುತ್ತದೆ.
ಸರಕಾರಕ್ಕೆ ಒಂದು ಮನವಿ. ಹಿಂದೂ ಧರ್ಮಕ್ಕೆ ಹೆಮ್ಮೆ ತರುವ ಹಾಗೂ ಕರ್ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ಕಾಂತಾರ’ ಚಿತ್ರದ ನಟ-ನಿರ್ದೇಶಕ ರಿಷಭ್ ಶೆಟ್ಟಿ ನಮ್ಮ ಆಯ್ಕೆಯಾಗಿ ಇದ್ದಾರೆ. ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಹಿರಿಯ ನಟ ಅನಂತ್ ನಾಗ್ ಇದ್ದಾರೆ. ಕಾಂಟ್ರವರ್ಸಿ ಗಳಿಂದ ದೂರ ಇರುವ ಆದರೆ ರಾಜ್ಯಕ್ಕೆ ಹೆಮ್ಮೆ ತಂದ ಹತ್ತು ಹಲವಾರು ವ್ಯಕ್ತಿಗಳು ಇಲ್ಲಿದ್ದಾರೆ. ಅವರಲ್ಲಿ ಯಾರನ್ನಾದರೂ ಬದಲಿ ಆಯ್ಕೆ ಮಾಡಿ ಸರಕಾರ ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸಲಿ.
ದಸರಾ ನಾಡಹಬ್ಬವೇ ಹೌದು. ಆದರೆ ಹಿಂದೂಗಳ ಹಬ್ಬವನ್ನು ನಾಡಹಬ್ಬವಾಗಿಸಲಾಗಿದೆ ಎಂಬುದು ನೆನಪಿರಲಿ. ರಂಜಾನ್ ಹಬ್ಬವನ್ನು ನಾಡಹಬ್ಬ ಆಗಿಸಲು ಸಾಧ್ಯವಿಲ್ಲ. ಸೆಕ್ಯುಲರೈಸ್ ಮಾಡಲಾಗುವುದಿಲ್ಲ ಎಂಬ ವಾಸ್ತವವನ್ನು ಸರಕಾರ ಗಮನಿಸಿದಲ್ಲಿ, ದಸರಾ ಹಬ್ಬವನ್ನು ಸೆಕ್ಯುಲರೈಸ್ ಮಾಡುವ ದುರಾಲೋಚನೆಗೆ ಇಳಿಯುವುದಿಲ್ಲ.