ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಇದು ಜಾಗತಿಕ ಯಜಮಾನಿಕೆ ಬದಲಾಗುವ ಸಮಯ !

ನಮ್ಮಲ್ಲಿ ಒಂದು ಆಡುಮಾತಿದೆ- “ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು" ಎನ್ನುವುದು ಆ ಮಾತು. ಇದರರ್ಥ ಬಹಳ ಸರಳ. ಮಾತನಾಡುವ ಮುಂಚೆ ಬಹಳಷ್ಟು ಎಚ್ಚರಿಕೆ ಯಿಂದ ಇರಬೇಕು. ಆಡುವ ಮಾತು ಯಾವ ಪರಿಣಾಮವನ್ನು ಬೀರಬಲ್ಲದು ಎನ್ನುವುದರ ಅರಿವಿರಬೇಕು. ಯಾವಾಗ, ಎಲ್ಲಿ ಮತ್ತು ಎಷ್ಟು ಮಾತಾಡಬೇಕು ಎನ್ನುವುದರ ಪ್ರಜ್ಞೆ ಇರಬೇಕು.

ಇದು ಜಾಗತಿಕ ಯಜಮಾನಿಕೆ ಬದಲಾಗುವ ಸಮಯ !

-

ಚೀನಾ ಮತ್ತು ಭಾರತ ಎರಡೂ ಒಂದಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎನ್ನುವಂತಿತ್ತು. ಟ್ರಂಪ್ ಯಾವಾಗ ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸಿದರೋ ಆಗ ಚೀನಾ ಭಾರತದ ಪರವಾಗಿ ನಿಂತಿತು. ‘ಬೀಜಿಂಗ್ ನವದೆಹಲಿಯ ಜತೆಯಿದೆ’ ಎನ್ನುವ ಅಧಿಕೃತ ಹೇಳಿಕೆ ಯನ್ನೂ ನೀಡುತ್ತದೆ. ಗಡಿ ತಗಾದೆಗಳನ್ನು ನಾವು ಬಗೆಹರಿಸಿಕೊಳ್ಳ ಬಹುದು ಎನ್ನುವಷ್ಟರ ಮಟ್ಟಿಗೆ ಚೀನಾ ಭಾರತದ ಬಗ್ಗೆ ಮೃದುಧೋರಣೆ ತಾಳಿದೆ.

ನಮ್ಮಲ್ಲಿ ಒಂದು ಆಡುಮಾತಿದೆ- “ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು" ಎನ್ನುವುದು ಆ ಮಾತು. ಇದರರ್ಥ ಬಹಳ ಸರಳ. ಮಾತನಾಡುವ ಮುಂಚೆ ಬಹಳಷ್ಟು ಎಚ್ಚರಿಕೆ ಯಿಂದ ಇರಬೇಕು. ಆಡುವ ಮಾತು ಯಾವ ಪರಿಣಾಮವನ್ನು ಬೀರಬಲ್ಲದು ಎನ್ನುವುದರ ಅರಿವಿರಬೇಕು. ಯಾವಾಗ, ಎಲ್ಲಿ ಮತ್ತು ಎಷ್ಟು ಮಾತಾಡಬೇಕು ಎನ್ನುವುದರ ಪ್ರಜ್ಞೆ ಇರಬೇಕು.

ಇದು ಎಲ್ಲರಲ್ಲೂ ಇರಬೇಕಾದದ್ದು. ಅದರಲ್ಲೂ ಒಂದು ದೇಶದ ಪ್ರೆಸಿಡೆಂಟ್ ಆದವರು, ರಾಜತಾಂತ್ರಿಕ ವರ್ಗದವರು ಮತ್ತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ, ಸಮಾಜದ ಬಹುಜನ ರನ್ನು ಪ್ರೇರೇಪಿಸಬಲ್ಲ ವ್ಯಕ್ತಿಗಳು ಇನ್ನೂ ಹೆಚ್ಚು ಜಾಗೃತರಾಗಿರುವ ಅವಶ್ಯಕತೆಯಿದೆ.

ಅವರಾಡುವ ಒಂದೊಂದು ಮಾತುಗಳೂ ರೆಕಾರ್ಡ್ ಆಗುತ್ತವೆ. ಅವು ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತವೆ. ಮಾತುಗಳಿಗೆ ಒಂದು ದೇಶ, ಜನಾಂಗವನ್ನು ಒಡೆಯುವ ಮತ್ತು ಒಗ್ಗೂಡಿಸುವ ಶಕ್ತಿಯಿದೆ. ಮಾತು ಮನಸ್ಸಿನ ಮೂರ್ತರೂಪ ಎನ್ನುತ್ತಾರೆ. ಅಂದರೆ ಮನಸ್ಸಿನಲ್ಲಿದ್ದ ಭಾವನೆಗಳು ಮಾತಿನ ರೂಪದಲ್ಲಿ ಹೊರಬರುತ್ತವೆ. ಮನಸ್ಸಿನಲ್ಲಿರುವ ಮಾತುಗಳನ್ನು ನಾಗರಿಕ ಸಮಾಜದಲ್ಲಿ ಪೂರ್ಣ ಹೇಳಲಾಗದು.

ಹೀಗಾಗಿ ಅಳೆದು ತೂಗಿ ಮಾತನಾಡುವುದು, ಸಭ್ಯತೆ ಮೀರಿ ಮಾತನಾಡದೆ ಇರುವುದು ಮತ್ತು ನಮ್ಮಲ್ಲಿ ಅಭಿಪ್ರಾಯ ಭೇದವಿzಗ ಕೂಡ ಅದನ್ನು ಸಭ್ಯತೆಯಿಂದ ಹೇಳುವುದು ಸಂಸ್ಕಾರ ಎನ್ನಿಸಿಕೊಂಡಿದೆ. ಮೊದಲೇ ಹೇಳಿದಂತೆ ಇದು ಎಲ್ಲಾ ಪ್ರಜೆಗಳಿಗೂ ಅನ್ವಯ. ಅದರಲ್ಲೂ ಆಯಕಟ್ಟಿನ ಜಾಗದಲ್ಲಿ ಕುಳಿತ ಮಂದಿ ಮೈಯೆ ಕಣ್ಣಾಗಿರಬೇಕು, ಕಿವಿಯಾಗಿರಬೇಕು. ಮಾತನಾಡುವ ಮುನ್ನ ಸಾವಿರ ಬಾರಿ ಯೋಚಿಸಬೇಕು. ಅದಕ್ಕೇ ಇರಬೇಕು ನಮ್ಮ ಹಿರಿಯರು ‘ಮಾತು ಬೆಳ್ಳಿ, ಮೌನ ಬಂಗಾರ’ ಎಂದದ್ದು!

Rangaswamy M

ಇವತ್ತಿನ ದಿನದಲ್ಲಿ ಅತ್ಯುತ್ತಮ ಮಾತುಗಾರರು ಕೇವಲ ತಮ್ಮ ಮಾತುಗಳಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೋಟಿಗಟ್ಟಲೆ ಹಣವನ್ನು ಸಂಪಾದಿಸಿದ್ದಾರೆ. ಅವರ ಯಶಸ್ಸಿಗೆ ಕಾರಣ ಟೈಮಿಂಗ್. ಸರಿಯಾದ ಸಮಯದಲ್ಲಿ ಸರಿಯಾದ ಮಾತುಗಳು ಅವರನ್ನು ಬದುಕಿನ ಉತ್ತುಂಗಕ್ಕೆ ಕರೆದೊಯ್ದಿವೆ. ಚೆನ್ನಾಗಿ ಮಾತನಾಡುವುದು ಒಂದು ಕಲೆಯಾದರೆ, ಎಲ್ಲಿ ಮೌನವಾಗಿರಬೇಕು ಎನ್ನುವುದು ಮತ್ತು ಎಷ್ಟು ಮಾತಾಡಬೇಕು ಎನ್ನುವುದು ಅದಕ್ಕಿಂತ ದೊಡ್ಡ ಕೌಶಲ.

ಇಷ್ಟೆ ಪೀಠಿಕೆ ಹಾಕಲು ಕಾರಣ, ನಿಮಗೆ ಗೊತ್ತಿರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾರತದ ಬಗ್ಗೆ ತಮ್ಮ ನಾಲಗೆಯನ್ನು ಹರಿಬಿಟ್ಟಿರುವುದು. ಮಾತಿನ ಭರದಲ್ಲಿ ಆತ ಭಾರತವನ್ನು ‘ಡೆಡ್ ಇಕಾನಮಿ’ ಎಂದರು. ಪಾಕಿಸ್ತಾನದ ಜತೆಗೆ ಹೆಚ್ಚಿನ ಪ್ರೀತಿ ತೋರಿದರು. ಸಾಲದ್ದಕ್ಕೆ “ಪಾಕಿಸ್ತಾನ ಒಂದು ದಿನ ತೈಲವನ್ನು ಮಾರುವ ಸ್ಥಿತಿಗೆ ಬರುತ್ತದೆ. ಯಾರಿಗೆ ಗೊತ್ತು ಭಾರತ ಕೂಡ ಆ ತೈಲವನ್ನು ಕೊಳ್ಳಬಹುದು" ಎನ್ನುವ ಮಾತನ್ನು ಆಡಿದರು.

ಹೆಚ್ಚಿನ ಸುಂಕ ವಿಧಿಸಿದರು. ತಾವು ಹೇಳಿದಂತೆ ಕೇಳದಿದ್ದರೆ ಇನ್ನಷ್ಟು ಸ್ಯಾಂಕ್ಷನ್ಸ್ ಜಾರಿ ಮಾಡುವು ದಾಗಿ ಹೇಳಿದರು. ಅವರ ಮಾತುಗಳಲ್ಲಿ ನಾಗರಿಕತೆ ಮಾಯವಾಗಿತ್ತು. ‘ನಾನು ಹೇಳಿದ್ದೇ ವೇದವಾಕ್ಯ, ಅಂತಿಮ’ ಎನ್ನುವ ರೀತಿಯಲ್ಲಿತ್ತು. ಅವರು ನಾಲಗೆಯ ಮೇಲಿನ ಹಿಡಿತವನ್ನು ಕಳೆದುಕೊಂಡು ಮಾತನಾಡುತ್ತಿರುವುದು ಇದು ಮೊದಲೇನಲ್ಲ. ಆದರೆ ಈ ಮಾತುಗಳು ಮಾಡಿದ ಡ್ಯಾಮೇಜನ್ನು ಅವರ ಬೇರಾವ ಮಾತುಗಳೂ ಮಾಡಿರಲಿಲ್ಲ.

ಇದನ್ನೂ ಓದಿ: Rangaswamy Mookanahally Column: ವ್ಯಕ್ತಿಯೊಬ್ಬ ಶಕ್ತಿಶಾಲಿ ಆದಂತೆಲ್ಲಾ ಅದೆಷ್ಟು ಅಶಕ್ತ ?

ಇಪ್ಪತ್ತೈದು ವರ್ಷದ ಅಮೆರಿಕ ಮತ್ತು ಭಾರತೀಯ ಡಿಪ್ಲೊಮ್ಯಾಟ್ಸ್ ಮಾಡಿದ ಎಲ್ಲಾ ಕೆಲಸಗಳನ್ನು ಟ್ರಂಪ್ ಮಾತುಗಳು ನೆಲಕಚ್ಚಿಸಿ ಬಿಟ್ಟವು. ಟ್ರಂಪ್ ಮೊದಲ ಅವಧಿಯಲ್ಲಿ ಸ್ವತಃ ಭಾರತದ ಜತೆಗೆ ಕಟ್ಟಿಕೊಂಡಿದ್ದ ಉತ್ತಮ ಬಾಂಧ್ಯವ್ಯವನ್ನು ಕೂಡ ಅವರು ಕೈಯಾರೆ ಹಾಳುಮಾಡಿಕೊಂಡರು. ‘ಅಮೆರಿಕವನ್ನು ಮತ್ತೆ ಗ್ರೇಟ್ ಮಾಡಬೇಕು’ ಎನ್ನುವ ಟ್ರಂಪ್ ಅವರ ನಿಲುವು ತಪ್ಪಲ್ಲ. ಆ ದೇಶದ ಅಧ್ಯಕ್ಷನಾಗಿ ಅಂಥ ನಿಲುವು ಒಳ್ಳೆಯದು. ಅದು ಆ ದೇಶಕ್ಕೆ ಖಂಡಿತ ಲಾಭದಾಯಕ.

ಆದರೆ ಅದಕ್ಕೆ ಆತ ತುಳಿದ ಹಾದಿ ಮಾತ್ರ ಸರಿಯಾಗಿಲ್ಲ. ಅಲ್ಲದೆ ಇಂದಿಗೆ ಪರಿಸ್ಥಿತಿ ಬದಲಾಗಿದೆ. ಇಪ್ಪತ್ತು- ಮೂವತ್ತು ವರ್ಷದ ಹಿಂದೆ ಅಮೆರಿಕ ಮಾತಿಗೆ ಎದುರಾಡುವ ಶಕ್ತಿ ಯಾರಿಗೂ ಇರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಆಡುವ ಮಾತಿನ ಮೇಲೆ ಅವರು ನಿಯಂತ್ರಣ ತಪ್ಪಿದ್ದು, ಅಮೆರಿಕವನ್ನು ಗ್ರೇಟ್ ಮಾಡುವ ಹಾದಿಯಿಂದ ಅವರನ್ನು ವಿಮುಖರನ್ನಾಗಿಸಿದೆ.

ಇಷ್ಟೆ ಪ್ರಹಸನ ಏಕಾಗುತ್ತಿದೆ ಎಂದರೆ, ಜಗತ್ತಿನಲ್ಲಿ ಇಂದಿಗೂ ಅಮೆರಿಕದ ಡಾಲರನ್ನು ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದೇವೆ. ಡಾಲರಿನ ಮೇಲಿನ ಅವಲಂಬನೆ ಹೆಚ್ಚಾದಷ್ಟೂ ಅಮೆರಿಕ ಬಲಿಷ್ಠವಾಗುತ್ತದೆ. ಮೂವತ್ತು ವರ್ಷದ ಹಿಂದೆ ಜಗತ್ತಿನ 96/97 ಪ್ರತಿಶತ ವಹಿವಾಟು ಅಮೆರಿಕದ ಡಾಲರಿನ ಮೂಲಕವೇ ಆಗುತ್ತಿತ್ತು. ಅಂದರೆ ಭಾರತವು ಚೀನಾ ಜತೆಯೋ ಅಥವಾ ರಷ್ಯಾ ಜತೆಯೋ ಅಥವಾ ಜಗತ್ತಿನ ಬೇರೆ ಯಾವುದೇ ದೇಶದ ಜತೆಯಲ್ಲಿ ಕೂಡ ವ್ಯಾಪಾರ ಮಾಡಿದರೂ ಅಲ್ಲಿ ಬಳಕೆಯಾಗುತ್ತಿದ್ದದ್ದು ಡಾಲರ್.

ಇಂದಿಗೆ ಅದು 65/70 ಪ್ರತಿಶತಕ್ಕೆ ಇಳಿದಿದೆ. ಅಂದರೆ ಬಹಳಷ್ಟು ದೇಶಗಳು ಡಾಲರಿನ ಬದಲಿಗೆ, ಯುರೋ, ಪೌಂಡ್, ಚೀನಾದ ಯೆನ್ ಕರೆನ್ಸಿಯಲ್ಲಿ, ಮತ್ತೆ ಹಲವು ಕಡೆ ಭಾರತೀಯ ರುಪಾಯಿ ಯಲ್ಲಿ ಕೂಡ ಟ್ರೇಡ್ ಮಾಡುತ್ತಿವೆ. ಡಾಲರಿನ ಈ ಪಾರುಪತ್ಯದ ಬಗ್ಗೆ ಸೊತ್ತಿದವರನ್ನು, ಇದನ್ನು ವಿರೋಧಿಸಿದವರನ್ನು ಅಮೆರಿಕ ಇಲ್ಲವಾಗಿಸುತ್ತ ಬಂದಿರುವುದು ಜಗತ್ತಿಗೆ ಗೊತ್ತಿರುವ ಸತ್ಯ. ಇರಾಕಿನ ಸದ್ಧಾಂ ಹುಸೇನ್ ಡಾಲರಿನ ವಿರುದ್ಧ ಮಾತನಾಡಿದ ಪ್ರಮುಖರಲ್ಲಿ ಮೊದಲಿಗ ಎನ್ನಬಹುದು.

“ಡಾಲರಿಗೆ ಬದಲಿಗೆ ಇರಾಕಿ ದಿನಾರಿನಲ್ಲಿ ವ್ಯಾಪಾರ ಮಾಡುತ್ತೇನೆ" ಎಂದಿದ್ದವನನ್ನು ಅಮೆರಿಕ ಹೇಗೆ ಟಾರ್ಗೆಟ್ ಮಾಡಿತು. ಇರಾಕಿನ ಮೇಲೆ ದಾಳಿ ಮಾಡಿ ಆ ದೇಶವನ್ನು ಶಿಲಾಯುಗಕ್ಕೆ ಮರಳಿಸಿದ್ದು ಅಲ್ಲದೆ ಸದ್ದಾಮನನ್ನು ಕೂಡ ಮುಗಿಸಿಬಿಟ್ಟಿತು. ನಂತರದ ಪಟ್ಟಿಯಲ್ಲಿ ಬರುವುದು ಲಿಬಿಯಾದ ಮೊಹಮದ್ ಗಡಾಫಿ. ಗಡಾಫಿ ಬಹಳ ಸುಭಗ ಎನ್ನುವುದು ನನ್ನ ಉದ್ದೇಶವಲ್ಲ.

ಆದರೆ ಅಮೆರಿಕ ಆತನನ್ನು ಕೂಡ ಇಲ್ಲವಾಗಿಸಿದ್ದು ಆತ ಕೆಟ್ಟವನು ಎನ್ನುವ ಕಾರಣಕ್ಕಾಗಿ ಅಲ್ಲ, ಬದಲಿಗೆ ತಾನು ಹೇಳಿದಂತೆ ಕೇಳಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಎನ್ನುವುದು ವೇದ್ಯ. ವೆನಿಜುವೆ ಲಾದ ಹ್ಯೂಗೋ ಚಾವೇಸ್ ಅತ್ಯಂತ ಗಟ್ಟಿಮುಟ್ಟಾಗಿದ್ದವರು ಆರೆಂಟು ತಿಂಗಳಲ್ಲಿ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದರು. ಕ್ಯೂಬಾ, ವಿಯೆಟ್ನಾಂ, ಹೀಗೆ ಅಮೆರಿಕ ವಿರುದ್ಧ ಸೊತ್ತಿದ ದೇಶಗಳನ್ನು ಮತ್ತು ಅಲ್ಲಿನ ನಾಯಕರನ್ನು ಹೊಸಕಿ ಹಾಕುವುದು ಅಮೆರಿಕದ ಹಳೆಯ ಚಾಳಿ.

ಇವತ್ತಿನ ದಿನಕ್ಕೆ ಬರೋಣ. ಭಾರತ, ಬ್ರೆಜಿಲ್, ಚೀನಾ, ರಷ್ಯಾ ಮತ್ತು ಸೌತ್ ಆಫ್ರಿಕಾ ಸೇರಿಕೊಂಡು ‘ಬ್ರಿಕ್ಸ್’ ಎನ್ನುವ ಒಕ್ಕೂಟ ಕಟ್ಟಿಕೊಂಡಿರುವುದು‌ ಹಳೆಯ ವಿಚಾರ. ಈ ಒಕ್ಕೂಟದಲ್ಲಿ ಇಂಡೋ ನೇಷ್ಯಾ ದೇಶವನ್ನು ಹೊಸ ಸದಸ್ಯ ದೇಶವನ್ನಾಗಿ ಸೇರಿಸಿಕೊಳ್ಳಲಾಗಿದೆ. ಇದರ ಜತೆಗೆ ಹತ್ತು ದೇಶ ಗಳನ್ನು ‘ಬ್ರಿಕ್ಸ್‌’ ಒಕ್ಕೂಟದ ಪಾಲುದಾರ ದೇಶಗಳು ಎಂದು ಗುರುತಿಸಲಾಗಿದೆ.

ಬೆಲಾರಸ್, ಬೊಲಿವಿಯಾ, ನೈಜೀರಿಯಾ, ಮಲೇಷ್ಯಾ, ಥೈಲ್ಯಾಂಡ್, ಕ್ಯೂಬಾ, ವಿಯೆಟ್ನಾಂ, ಉಗಾಂಡಾ, ಉಜ್ಬೇಕಿಸ್ತಾನ್ ಮತ್ತು ಕಝಕಿಸ್ತಾನ್ ದೇಶಗಳು ‘ಬ್ರಿಕ್ಸ್’ ಒಕ್ಕೂಟದ ಪಾಲುದಾರ ‌ ದೇಶಗಳಾಗಿ ಸೇರ್ಪಡೆಗೊಂಡಿವೆ. ಅಮೆರಿಕ ದೇಶದ ಏಕಸಾಮ್ಯದ ದೇಶಗಳು ದಶಕದಿಂದ ಸೊತ್ತಲು ಶುರು ಮಾಡಿವೆ. ಹೀಗಾಗಿ ಅಮೆರಿಕ ವಿರುದ್ಧ ಒಂದು ಸಾಂಕ ಹೋರಾಟದ ಅಗತ್ಯವನ್ನು ಮನಗಂಡು ಜೂನ್ 2009ರಲ್ಲಿ ಬ್ರಿಕ್ಸ್ ಒಕ್ಕೂಟ ಸೃಷ್ಟಿಯಾಯಿತು.

2010ರಲ್ಲಿ ಸೌತ್ ಆಫ್ರಿಕಾ ದೇಶವನ್ನು ಕೂಡ ಸದಸ್ಯ ದೇಶವನ್ನಾಗಿ ಸೇರಿಸಿಕೊಳ್ಳಲಾಗಿದೆ. 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳನ್ನು ‌ಸೇರಿಸಿಕೊಳ್ಳ ಲಾಯಿತು. 2025ರಲ್ಲಿ ಇಂಡೋನೇಷ್ಯಾ ದೇಶಕ್ಕೆ ಸದಸ್ಯತ್ವ ಸಿಕ್ಕಿದೆ. ಇನ್ನಷ್ಟು ದೇಶಗಳು ಈ ಒಕ್ಕೂಟ ವನ್ನು ಸೇರಿಕೊಳ್ಳಲು ಅರ್ಜಿಯನ್ನು ಸಲ್ಲಿಸಿವೆ.

ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಸ್ಪೇನ್, ಫಿನ್‌ಲ್ಯಾಂಡ್, ನೆದರ್ಲ್ಯಾಂಡ್, ಫ್ರಾನ್ಸ್, ಡೆನ್ಮಾರ್ಕ್, ಕೆನಡಾ ಸೇರಿದಂತೆ ಒಟ್ಟಾರೆ 32 ದೇಶಗಳ ನ್ಯಾಟೋ ಒಕ್ಕೂಟ ಜಾಗತಿಕ ಜಿಡಿಪಿಯ 43 ಪ್ರತಿಶತ ದೇಣಿಗೆ ನೀಡುತ್ತಿದೆ. ಹತ್ತು ದೇಶಗಳ ಬ್ರಿಕ್ಸ್ ಒಕ್ಕೂಟ ಜಾಗತಿಕ ಜಿಡಿಪಿಯ 46‌ ಪ್ರತಿಶತವನ್ನು ಹೊಂದಿದೆ.

ನ್ಯಾಟೋ ಒಕ್ಕೂಟದ ಎಲ್ಲಾ ಸದಸ್ಯ ದೇಶಗಳ ಒಟ್ಟು ಜನಸಂಖ್ಯೆ ಜಾಗತಿಕ ಜನಸಂಖ್ಯೆಯ 12 ಪ್ರತಿಶತವಿದ್ದರೆ, ಬ್ರಿಕ್ಸ್ ಒಕ್ಕೂಟ ಜಾಗತಿಕ ಜನಸಂಖ್ಯೆಯ 40 ಪ್ರತಿಶತವನ್ನು ಹೊಂದಿವೆ. ನ್ಯಾಟೋ ಒಕ್ಕೂಟ ಮಿಲಿಟರಿ ಒಕ್ಕೂಟವಾಗಿದೆ. ‘ಬ್ರಿಕ್ಸ್’ ಇಕನಾಮಿಕ್ಸ್ ಕೋ-ಆಪರೇಷನ್‌ಗೆ ಜನ್ಮ ತಾಳಿದೆ.

ಇದರರ್ಥ ಬ್ರಿಕ್ಸ್‌ ಮೂಲ ಉದ್ದೇಶ ಅಮೆರಿಕನ್ ಡಾಮಿನೆ ಅನ್ನು ಕೊನೆಗೊಳಿಸುವುದಾಗಿದೆ. ಇದು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ಚೆನ್ನಾಗಿ ಗೊತ್ತಿದೆ. ಡಾಲರ್ ಕುಸಿದರೆ ಅಮೆರಿಕ ಮುಂದೆಂದೂ ಅಮೆರಿಕವಾಗಿ ಉಳಿದುಕೊಳ್ಳುವುದಿಲ್ಲ ಎನ್ನುವುದು ಕೂಡ ಅವರಿಗೆ ಗೊತ್ತಿದೆ. ಹೀಗಿದ್ದೂ ಟ್ರಂಪ್ ನಾಲಗೆಯನ್ನು ಹರಿಬಿಟ್ಟು ಅವರ ದೇಶಕ್ಕೆ ಬಹಳ ದೊಡ್ಡ ತಪ್ಪು ಮಾಡಿಬಿಟ್ಟರು ಮತ್ತು ಬ್ರಿಕ್ಸ್‌ ಒಕ್ಕೂಟಕ್ಕೆ ಅನುಕೂಲ ಮಾಡಿಕೊಟ್ಟರು.

ಬ್ರಿಕ್ಸ್‌ ಒಕ್ಕೂಟದಲ್ಲಿ ಎಲ್ಲವೂ ಸರಿಯಿಲ್ಲ. ಏಕೆಂದರೆ ಈ ಒಕ್ಕೂಟದ ಪ್ರಮುಖ ದೇಶಗಳಲ್ಲಿ ಅಂದರೆ ಚೀನಾ ಮತ್ತು ಭಾರತದ ನಡುವೆ ಹೇಳಿಕೊಳ್ಳುವ ಉತ್ತಮ ಬಾಂಧವ್ಯವಿಲ್ಲ. ಚೀನಾ ದೇಶ ಅಮೆರಿಕದ ಡಾಲರಿಗೆ ವಿರುದ್ಧವಾಗಿ ಬ್ರಿಕ್ಸ್ ಕರೆನ್ಸಿ ತರಬೇಕು ಎನ್ನುವ ಉದ್ದೇಶವನ್ನು ಹೊಂದಿದೆ. ಅದಕ್ಕಾಗಿ ಸಕಲ ತಯಾರಿಗಳು‌ ಆಗಿವೆ. ಆದರೆ ಬ್ರಿಕ್ಸ್ ಕರೆನ್ಸಿ ಹೊರಡಿಸಲು ಭಾರತ ಒಪ್ಪಿಗೆಯನ್ನು ನೀಡದ ಕಾರಣ ಅದು ನಿಂತಿದೆ.

ಇದು‌ ಅಮೆರಿಕ ಪಾಲಿಗೆ ಸಿಹಿಸುದ್ದಿ. ಚೀನಾ ಮತ್ತು ಭಾರತ ಎರಡೂ ಒಂದಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎನ್ನುವಂತ್ತಿತ್ತು. ಟ್ರಂಪ್ ಯಾವಾಗ ಭಾರತದ ಮೇಲೆ ಹೆಚ್ಚಿನ ಸುಂಕ ವಿಽಸಿದರೋ ಆಗ ಚೀನಾ ಭಾರತದ ಪರವಾಗಿ ನಿಂತಿತು. ‘ಬೀಜಿಂಗ್ ನವದೆಹಲಿಯ ಜತೆಯಿದೆ’ ಎನ್ನುವ ಅಧಿಕೃತ ಹೇಳಿಕೆಯನ್ನು ಕೂಡ ನೀಡುತ್ತದೆ. ಗಡಿ ತಗಾದೆಗಳನ್ನು ನಾವು ಕುಳಿತು ಬಗೆ ಹರಿಸಿಕೊಳ್ಳಬಹುದು ಎನ್ನುವಷ್ಟರ ಮಟ್ಟಿಗೆ ಚೀನಾ ಭಾರತದ ಬಗ್ಗೆ ಮೃದುಧೋರಣೆ ತಾಳಿದೆ.

ಎಲ್ಲಕ್ಕೂ ಒಂದು ಅಂತ್ಯ ಎನ್ನುವುದು ಇರಲೇಬೇಕಲ್ಲವೇ? ಅಮೆರಿಕದ ಮುಂದೆ ಇಂದು ನಿಂತಿರು ವುದು ಭಾರತ ಎನ್ನುವ ಬೃಹತ್ ರಾಷ್ಟ್ರ. ಜಗತ್ತಿನ ಸರಿಸುಮಾರು 19 ಪ್ರತಿಶತ ಜನಸಂಖ್ಯೆ ಹೊಂದಿರುವ ದೇಶ. ವ್ಯಾಪಾರದ ದೃಷ್ಟಿಯಿಂದ ನೋಡಿದಾಗ ಭಾರತದ ಮಾರುಕಟ್ಟೆಯನ್ನು ಕಡೆಗಣಿಸಿ ಯಾವ ದೇಶವೂ ವ್ಯಾಪಾರವನ್ನು ಮಾಡಲಾಗದು ಎನ್ನುವಷ್ಟು ದೊಡ್ಡ ದೇಶ.

‘ಪರ್ಚೇಸಿಂಗ್ ಪವರ್’ ದೃಷ್ಟಿಯಲ್ಲಿ ಭಾರತ ಇಂದಿಗೆ ಸರಿಸುಮಾರು 18 ಟ್ರಿಲಿಯನ್ ಇಕಾನಮಿ. 2038ಕ್ಕೆ ಜಗತ್ತಿನ ಎರಡನೇ ಅತಿ ದೊಡ್ಡ ಇಕಾನಾಮಿಯಾಗಲಿದೆ. ಚೀನಾ ಮೊದಲ ಸ್ಥಾನದಲ್ಲಿ, ಭಾರತ ಎರಡನೇ ಸ್ಥಾನದಲ್ಲಿರಲಿವೆ. ಅಮೆರಿಕ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ. ಹೀಗಾಗಿ ಎರಡನೇ ಮಹಾಯುದ್ಧದ ನಂತರ ಅಽಪತಿಯಾಗಿ ಮೆರೆದಿದ್ದ ಅಮೆರಿಕದ ಪಾರುಪತ್ಯಕ್ಕೆ ಭಾರತ ಅಧಿಕೃತವಾಗಿ ಅಂತ್ಯಹಾಡಿದೆ. ಹೊಸ ವಿಶ್ವವ್ಯವಸ್ಥೆಯ ‘ರೀ-ಸೆಟ್’ ಬಟನ್ ಒತ್ತಿದ್ದು ಭಾರತ ಎನ್ನುವುದು ಚರಿತ್ರೆಯಲ್ಲಿ ದಾಖಲಾಗಲಿದೆ.

ಚೀನಾ ಮತ್ತು ಭಾರತದ ನಡುವೆ ಎರಡೂ ದೇಶಕ್ಕೂ ಆಪ್ತವಾಗಿರುವ ರಷ್ಯಾ ನಿಂತಿದೆ. ಇವತ್ತಿನವರೆಗೂ ಬ್ರಿಕ್ಸ್ ಕರೆನ್ಸಿ ಬಗ್ಗೆ, ಚೀನಾ ಮತ್ತು ಭಾರತ ಒಟ್ಟಾಗಿ ಕೆಲಸ‌ ಮಾಡುವುದರ ಬಗ್ಗೆ ಅನುಮಾನಗಳಿದ್ದವು. ಅಮೆರಿಕವಂತೂ ಇದು ಎಂದಿಗೂ ಸಾಧ್ಯವಿಲ್ಲದ ಮಾತು ಎನ್ನುವ ನಂಬಿಕೆ ಯಲ್ಲಿ ಬದುಕುತ್ತಿತ್ತು. ಆ ದೇಶದ ಅಧ್ಯಕ್ಷ ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳುತ್ತಾ “ನಾನು ಹೇಳಿದ್ದು ಎಲ್ಲರೂ ಕೇಳಬೇಕು, ಕೇಳುತ್ತಾರೆ" ಎನ್ನುವ ಹುಂಬತನದ ಮಾತುಗಳನ್ನು ಆಡದೆ ಹೋಗಿದ್ದರೆ, ಜಾಗತಿಕ ಅಭಿವೃದ್ಧಿ ಓಟದಲ್ಲಿ ಎಲ್ಲರಿಗಿಂತ ಹೆಚ್ಚು ‘ಗ್ರೋತ್ ರೇಟ್’ ಹೊಂದಿ ಪ್ರಥಮ ಸ್ಥಾನದಲ್ಲಿರುವ ಭಾರತವನ್ನು ‘ಡೆಡ್ ಇಕಾನಮಿ’ ಎನ್ನುವ ತಪ್ಪು ಮಾಡದೆ ಇದ್ದಿದ್ದರೆ ಆಗ ಚೀನಾ ಮತ್ತು ಭಾರತ ಸನಿಹ ಬರುತ್ತಿರಲಿಲ್ಲವೇನೋ? ಆದರೆ ಟ್ರಂಪ್ ಆಡಿದ ಆ ಒಂದು ಮಾತು ವಿಶ್ವ ಯಜಮಾನಿಕೆಯ ಚೇರನ್ನು ಅಲ್ಲಾಡಿಸಿರುವುದು ಸತ್ಯ.