ದಸರಾ ಚಾಲನೆಗೆ ಎಡ-ಬಲ ಗೊಂದಲ
ಒಂದೆಡೆ ಆಳುವ ಸರಕಾರದ ಪರ ಎಡವರ್ಗದವರಿದ್ದರೆ, ವಿಪಕ್ಷ ಹಾಗೂ ಹಿಂದೂ ಸಂಘಟನೆಗಳ ಪರ ಬಲವರ್ಗದ ಮಂದಿ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಸರಾ ಉದ್ಘಾಟಕರಾಗಿ ಆಯ್ಕೆ ಯಾಗಿರುವ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ಬಗ್ಗೆ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ವ್ಯಾಖ್ಯಾನ, ಅಭಿಪ್ರಾಯ ಕೇಳಿಬರುತ್ತಿವೆ.

-

ಕೆ.ಜೆ.ಲೋಕೇಶ್ ಬಾಬು, ಮೈಸೂರು
ದಸರಾ ಮಹೋತ್ಸವ ಉದ್ಘಾಟಕರ ಬಗ್ಗೆ ಆಳುವ ಸರಕಾರ ಸ್ಪಷ್ಟ ಮಾತುಗಳಲ್ಲಿ ತನ್ನ ನಿಲುವು ಪ್ರಕಟಿಸಿದರೂ, ಸದರಿ ವಿಚಾರ ವಿಪಕ್ಷಗಳು ಹಾಗೂ ಹಿಂದೂ ಪರ ಸಂಘಟನೆಗಳ ಪಾಲಿಗೆ ಈವರೆಗೆ ಗೊಂದಲದ ಗೂಡಾಗಿಯೇ ಕಾಡತೊಡಗಿದೆ. ಈ ಹಿಂದಿನ ಯಾವ ದಸರಾ ವೇಳೆಯೂ ಕಂಡು ಬಾರದ ಈ ಮಟ್ಟಿನ ವಿರೋಧಾಭಾಸ ಈ ವರ್ಷದ ದಸರೆಗೆ ಕಂಡುಬರುತ್ತಿರುವುದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ಬಗೆಯ ಕಸಿವಿಸಿ ಸೃಷ್ಟಿಸಿದೆ.
ಒಂದೆಡೆ ಆಳುವ ಸರಕಾರದ ಪರ ಎಡವರ್ಗದವರಿದ್ದರೆ, ವಿಪಕ್ಷ ಹಾಗೂ ಹಿಂದೂ ಸಂಘಟನೆಗಳ ಪರ ಬಲವರ್ಗದ ಮಂದಿ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ಬಗ್ಗೆ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ವ್ಯಾಖ್ಯಾನ, ಅಭಿಪ್ರಾಯ ಕೇಳಿಬರುತ್ತಿವೆ.
ಕೆಲವರು ಹೇಳಿಕೆಗಳನ್ನು ನೀಡಿರುವ ಭರದಲ್ಲಿ ನೈತಿಕತೆ ಮರೆತಿರುವುದು ಕೂಡ ಸ್ಪಷ್ಟವಾಗಿ ಕಾಣುತ್ತಿದೆ. ಅವರವರ ಆಹಾರ ಪದ್ದತಿ ಅವರವರಿಗೆ ಬಿಟ್ಟದ್ದು ಎಂಬ ಕನಿಷ್ಠ ವಿವೇಚನೆಯೂ ಇಲ್ಲದಂತೆ ನೀಡುತ್ತಿರುವ ಹೇಳಿಕೆಗಳು ಸಾಮಾಜಿಕ ಶಾಂತಿಯನ್ನು ಕದಡಿರುವುದಂತೂ ನಿಜ.
ಇದನ್ನೂ ಓದಿ: Banu Mushtaq: ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಟೀಕೆಗಳು ನಗಣ್ಯ: ಬಾನು ಮುಷ್ತಾಕ್
ಸಿಎಂ ಸಮರ್ಥನೆ
ಇದರ ನಡುವೆ ತನ್ನ ಆಯ್ಕೆಯೇ ಅಂತಿಮ ಎಂಬ ನಿಲುವಿಗೆ ಅಂಟಿಕೊಂಡಿರುವ ಸಿಎಂ ಸಿದ್ದರಾ ಮಯ್ಯ ಭಾನುವಾರ ಮೈಸೂರಿನಲ್ಲಿ ತಾವೇ ಖುದ್ದು ಟೀಕಾಕಾರರ ವಿರುದ್ಧ ಹರಿಹಾಯ್ದರು. ಈ ಮೂಲಕ ತಮ್ಮ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಅಂತೆಯೇ ದಸರಾ ಉದ್ಘಾಟಕರ ಆಯ್ಕೆ ಕುರಿತಂತೆ ವಾರವಿಡೀ ಮೈಸೂರಿನಲ್ಲಿ ನಡೆದ ವಿದ್ಯಮಾನಗಳು ರಾಜ್ಯದ ಗಮನ ಸೆಳೆದಿರು ವುದು ಸುಳ್ಳಲ್ಲ. ಈ ವೇಳೆ ಯಾರ‍್ಯಾರು ಯಾವ್ಯಾವ ಬಗೆಯ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಒಂದು ಪುಟ್ಟ ಅವಲೋಕನ ಹೀಗಿದೆ.
*
ಧಮಾಂಧರು ಮಾತ್ರ ಬಾನು ಮುಷ್ತಾಕ್ ಹೆಸರನ್ನು ವಿರೋಧಿಸುತ್ತಾರೆ. ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೆಯ ಹೇಳಿಕೆಗೂ ಇದಕ್ಕೂ ಏನು ಸಂಬಂಧ. ಎಂದೋ ಏನೋ ಹೇಳಿದ್ದಾರೆ ಎಂದು ಅದನ್ನು ಇಲ್ಲಿಗೆ ಲಿಂಕ್ ಮಾಡುವುದು ಎಷ್ಟು ಸರಿ. ಬೆರಳೆಣಿಕೆ ಮಂದಿಗೆ ಮಾತ್ರ ಬುಕರ್ ಪ್ರಶಸ್ತಿ ಬಂದಿದೆ. ನಾನೇ ಅವರ ಹೆಸರನ್ನು ಆಯ್ಕೆ ಮಾಡಿದ್ದೇನೆ. ಉದ್ಘಾಟಕರು ದನ ತಿನ್ನುವುದನ್ನು ಬಿಜೆಪಿಯವರು ನೋಡಿದ್ದಾರಾ? ದಸರಾ ಸಾಂಸ್ಕೃತಿಕ ಹಬ್ಬ. ಇದು ಧರ್ಮಾತೀತ ವಾದ ಹಬ್ಬ. ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ. ಕರೆದವರು, ಕರೆಸಿಕೊಂಡವರಿ ಗಷ್ಟೇ ಅದು ಗೊತ್ತು. ಸರಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿ ಯಾಗಿಯೇ ನಡೆಯುತ್ತದೆ. ಅವರಿಗೆ ಬೇಕಾದ ರೀತಿ ದಸರೆ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ.
-ಪ್ರಮೋದಾದೇವಿ ಒಡೆಯರ್, ರಾಜವಂಶಸ್ಥೆ
ಬಾನು ಮುಷ್ತಾಕ್ ಅವರು ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂಗ್ಲಿಷ್ ಗೆ ಭಾಷಾಂತರ ಮಾಡಿದ ದೀಪಾ ಬಾಸ್ತಿಯವರಿಗೂ ಪ್ರಶಸ್ತಿ ನೀಡಲಾಗಿದೆ. ಬಾನು ಮುಷ್ತಾಕ್ ರೈತ ಚಳವಳಿ, ಭಾಷಾ ಚಳವಳಿ, ವಕೀಲ ವೃತ್ತಿ, ಹೀಗೆ ಹೋರಾಟದ ಹಿನೆಲೆಯಿಂದ ಬಂದವರು. ಆದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮದು ಬಹುತ್ವದ ದೇಶ. ಮಂತ್ರಿ ಗಳಾಗಿದ್ದವರೂ ಒಬ್ಬ ಮಹಿಳಾ ಸಾಧಕಿ ವಿರುದ್ಧ ಮಾತನಾಡಿರುವುದು ಸರಿಯಲ್ಲ.
-ಎಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ
ಮುಸ್ಲಿಮರನ್ನು ಕರೆಯಬಾರದು ಅಂತ ಸಂವಿಧಾನದಲ್ಲಿ ಹೇಳಿಲ್ಲ. ಇವರು ರಾಮ ಮಂದಿರ ಉದ್ಘಾಟನೆ ವೇಳೆ ಪ್ರೊಟೋಕಾಲ್ ಉಲ್ಲಂಘನೆ ಆಗಿಲ್ವಾ?. ವೈದಿಕ ವ್ಯವಸ್ಥೆ ಬಿಟ್ಟು ನಾವೇ ಮಾಡ ಲಿಕ್ಕೆ ಸಾಧ್ಯನಾ? ನಾನು ಕೂಡ ಒಬ್ಬ ಹಿಂದೂ. ಯಾವುದೇ ಪೂಜೆ ನಡೆದರೆ ಯಾರು ಮಾಡುತ್ತಾರೆ ಹೇಳಿ.
-ಸಂತೋಷ್ ಲಾಡ್, ಸಚಿವ
ಬುಕರ್ ಪ್ರಶಸ್ತಿ ಪಡೆದಿರುವ ದೀಪಾ ಬಸ್ತಿಯವರನ್ನು ಕೂಡ ಬಾನು ಮುಷ್ತಾಕ್ ಜೊತೆಗೆ ದಸರಾ ಉದ್ಘಾಟನೆಗೆ ಆಹ್ವಾನಿಸಬೇಕಿತ್ತು. ಕೇವಲ ಓಟ್ ಬ್ಯಾಂಕ್ ಪಾಲಿಟಿಕ್ಸ್ ಗಾಗಿ ಬಾನು ಮುಷ್ತಾಕ್ ರನ್ನು ಮಾತ್ರ ಆಹ್ವಾನಿಸಿದ್ದಾರೆ. ಬಾನು ಮುಷ್ತಾಕ್ ಜೊತೆಗೆ ದೀಪಾ ಬಸ್ತಿಯವರನ್ನು ಸಹ ಆಹ್ವಾ ನಿಸಬೇಕಿತ್ತು. ಇಬ್ಬರೂ ಒಟ್ಟಿಗೆ ಸೇರಿ ಉದ್ಘಾಟನೆ ಮಾಡಿದ್ದರೆ ಹೆಚ್ಚು ಅರ್ಥಪೂರ್ಣ ವಾಗುತ್ತಿತ್ತು. ಬಾನು ಮುಷ್ತಾಕ್ ಒಬ್ಬರೇ ದಸರಾ ಉದ್ಘಾಟನೆಗೆ ನಮ್ಮ ಪ್ರಬಲ ವಿರೋಧ ಇದ್ದೇ ಇದೆ.
-ಮಹೇಶ್ ಕಾಮತ್, ವಿಶ್ವ ಹಿಂದೂ ಪರಿಷದ್, ಜಿಲ್ಲಾಧ್ಯಕ್ಷ
ಸಿದ್ದರಾಮಯ್ಯ ತಂತ್ರ ಕಾಂಗ್ರೆಸ್ ಮೂರ್ಖರಿಗೆ ಅರ್ಥವಾಗುತ್ತಿಲ್ಲ. ಮುಸ್ಲಿಮರನ್ನು ತಮ್ಮ ಬೆನ್ನ ಹಿಂದೆ ಇಟ್ಟುಕೊಳ್ಳಲು ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆ ಗೆ ಕರೆದಿದ್ದಾರೆ. ನಾಳೆ ಸಿಎಂ ಕುರ್ಚಿಗೆ ಕಂಟಕ ಬಂದಾಗ ಮುಸ್ಲಿಂ ಶಕ್ತಿ ತಮ್ಮ ಹಿಂದೆ ನಿಲ್ಲಿಸಿಕೊಳ್ಳಲು ಹೆಣೆದಿರುವ ತಂತ್ರ ಇದು. ಕನ್ನಡದ ಬಗ್ಗೆ ಅವಮಾನಕರವಾಗಿ ಮಾತನಾಡಿದವರು ದಸರಾ ಉದ್ಘಾಟಿಸಬೇಕಾ? ಇದನ್ನು ಜನರೇ ಹೇಳಲಿ.
- ಪ್ರತಾಪ್ ಸಿಂಹ, ಮಾಜಿ ಸಂಸದ