Surendra Pai Column: ನಮ್ಮೆಲ್ಲರ ಮನೆಯೊಳಗಿರುವ ಟಿಕ್ ಟಿಕ್ ಟೈಮ್ ಬಾಂಬ್ !
ಅಯ್ಯೋ ! ನಮ್ಮೆಲ್ಲರ ಮನೆಯಲ್ಲೂ ಒಂದೊಂದು ಟೈಮ್ ಬಾಂಬ್ ಇದೆಯ ! ಎಂಬ ಉದ್ಗಾರ ಹೊರಹೊಮ್ಮಿತು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳೇ ಆ ಸೈಲೆಂಟ್ ಟೈಮ್ ಬಾಂಬ್ ! ಅಣುಬಾಂಬ್ ಗಳನ್ನು ಯುದ್ಧದ ಸಮಯದಲ್ಲಿ ಶತ್ರುರಾಷ್ಟ್ರದವರು ಬಳಸುತ್ತಾರೆ. ಆದರೆ ಸಾಮಾಜಿಕ ಜಾಲತಾಣವೆಂಬ ಟೈಮ್ ಬಾಂಬ್ ನಮ್ಮವರೇ ನಮ್ಮ ವಿರುದ್ಧ ಸಿಡಿಸುತ್ತಾರೆ.

-

ಪ್ರಚಲಿತ
ಸುರೇಂದ್ರ ಪೈ
ಅಣುಬಾಂಬ್ ಗಳನ್ನು ಯುದ್ಧದ ಸಮಯದಲ್ಲಿ ಶತ್ರುರಾಷ್ಟ್ರದವರು ಬಳಸುತ್ತಾರೆ. ಆದರೆ ಸಾಮಾಜಿಕ ಜಾಲತಾಣವೆಂಬ ಟೈಮ್ ಬಾಂಬ್ ನಮ್ಮವರೇ ನಮ್ಮ ವಿರುದ್ಧ ಸಿಡಿಸುತ್ತಾರೆ. ಹುಟ್ಟುತ್ತಲೇ ಮಕ್ಕಳು ಅಳುವನ್ನು ನಿಲ್ಲಿಸಲು ಆಟದ ಸಾಮಾನಿನಂತೆ ಅವರ ಕೈಗೆ ಮೊಬೈಲ್ ನೀಡಿ ನಾವೆ ಸುಮ್ಮನಾಗುತ್ತೇವೆ. ಅಲ್ಲಿಂದಲೇ ಮೊಬೈಲ್ ಎಂಬ ಮಾಯ ಲೋಕದ ಪಯಣ ಶುರುವಾಗಿ ಆ ಪ್ರಪಂಚದ ಮುಂದೆ ಸ್ನೇಹ ಸಂಬಂಧಗಳು, ಪ್ರೀತಿ, ನಂಬಿಕೆ, ಮಾನವೀಯತೆ, ಸಂಸ್ಕೃತಿ, ಆಚಾರ ವಿಚಾರ, ದೇಶಪ್ರೇಮ ಎಲ್ಲವೂ ಗೌಣವಾಗಿ ಬಿಡುತ್ತದೆ.
ಅಂದು ಬ್ರಿಟಿಷರು (ಪಾಶ್ಚಾತ್ಯರು ಭಾರತವನ್ನು ಬಿಟ್ಟು ಹೋಗುವ ಮುನ್ನ) ಭಾರತೀಯ ಶ್ರೇಷ್ಠ ಸಂಸ್ಕೃತಿ, ಜ್ಞಾನವನ್ನು ಶಾಶ್ವತವಾಗಿ ಅಳಿಸಿ ಹಾಕಲು ಶಿಕ್ಷಣ ಪದ್ದತಿಯನ್ನು ಬದಲಾವಣೆ ಮಾಡಿದರು. ಜ್ಞಾನವು ವರ್ಗಾವಣೆಯಾಗುವ ಜ್ಞಾನೇಂದ್ರ, ದೇವಸ್ಥಾನಗಳು ಸೇರಿದಂತೆ ಇನ್ನಿತರ ಎಲ್ಲಾ ಮಾರ್ಗವನ್ನು ಧ್ವಂಸಗೊಳಿಸಿದರು.
ತನ್ಮೂಲಕ ನಮ್ಮೆಲ್ಲರ ಆಲೋಚನಾ ಶಕ್ತಿಯನ್ನು ಅತ್ಯಂತ ಚಾಣಾಕ್ಷತನದಿಂದ ನಮ್ಮಿಂದ ಕಿತ್ತು ಕೊಂಡರು. ಮತ್ತೊಂದೆಡೆ ಪಾಶ್ಚಾತ್ಯರು ಬಿತ್ತಿದ ಒಡೆದು ಆಳುವ ನೀತಿಯ ವಿಷ ಬೀಜವು ಹೆಮ್ಮರ ವಾಗಿ ಬೆಳೆಯುತ್ತಾ ಸಾಗಿತ್ತು. ಇವುಗಳ ಮಧ್ಯೆ ಯಾವುದು ಸರಿ ತಪ್ಪು ಎಂಬ ಸ್ಪಷ್ಟವಾದ ಪರಿಕಲ್ಪನೆ ಹೊರಹೊಮ್ಮಲು ಅನೇಕ್ ಶತಮಾನಗಳೇ ಬೇಕಾಯಿತು.
ಮೂರಾ ಬಟ್ಟೆಯಂತಾದ ಬದುಕನ್ನು ನಿಧಾನವಾಗಿ, ಸಾವರಿಸಿಕೊಂಡು ಪಾಶ್ಚಾತ್ಯರ ಕುತಂತ್ರ ವನ್ನು ನಿಧಾನವಾಗಿ ಅರಿಯುವಷ್ಟರಲ್ಲಿ ಕಾಲ ಮೀರೋಗಿತ್ತು. ಮೊನ್ನೆಯಷ್ಟೇ ನಡೆದ ನೇಪಾಳದ ಘಟನೆಗಳು ಮತ್ತೊಮ್ಮೆ ಇವೆಲ್ಲವನ್ನೂ ನೆನಪಿಸುವ, ಅವಲೋಕಿಸುವ, ಚಿಂತಿಸುವ ಅನಿವಾರ್ಯತೆ ಯನ್ನು ಒತ್ತಿ ಹೇಳುತ್ತದೆ.
ಯಾವ ಒಡೆದು ಆಳುವ ವಿಷ ಬೀಜವೆಂಬ ಬೆಂಕಿಯನ್ನು ಹೊತ್ತಿಸಿ ಪಾಶ್ಚಾತ್ಯರು ಹೋಗಿದ್ದರೋ ಅದು ಇಂದಿಗೂ ನಮ್ಮಲ್ಲಿ ಉರಿಯುತ್ತಿದೆ. ಅಷ್ಟು ಸಾಲದೆಂಬಂತೆ ಆಧುನಿಕ ಯುಗಕ್ಕೆ ತಕ್ಕಂತೆ ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳೆಂಬ ಬಗೆ ಬಗೆಯ ತಂತ್ರಜ್ಞಾನದ ಆಮಿಷ ಒಡ್ಡಿ, ವಾಸ್ತವದಿಂದ ಬಹುದೂರ ಇರುವ ಮಾಯಾಲೋಕದಲ್ಲಿ, ಯುವ ಪೀಳಿಗೆಯವರು ವಿಹರಿಸು ವಂತೆ ಮಾಡುವಲ್ಲಿ ಯಶಸ್ವಿಯು ಆಗಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಇಸ್ರೇಲ್ -ಇರಾನ್ ಯುದ್ಧದ ಸಮಯದಲ್ಲಿ ಅಣುಶಕ್ತಿ ಬಳಕೆಯಿಂದಾ ಗುವ ಅನಾಹುತಗಳ ಬಗ್ಗೆ ಬಹಳಷ್ಟು ಚರ್ಚೆ ನಡೆದವು. ಈ ನಿಟ್ಟಿನಲ್ಲಿ ಪ್ರತಿಯೊಂದು ರಾಷ್ಟ್ರದ ಬಳಿಯಿರುವ ಅಣುಬಾಂಬ್ ಗಳಿಂದ ಮನುಕುಲಕ್ಕೆ ಒದಗಬಹುದಾದ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಿದವು.
ಆಗ ಅಣುಬಾಂಬ್ ಎಲ್ಲದಕ್ಕಿಂತಲೂ ದೊಡ್ಡದ್ದು, ಒಂದು ಅಣುಬಾಂಬ್ ನಿಂದ ಕೋಟ್ಯಂತರ ಜನರು ಒಮ್ಮೆಲೇ ನಾಶವಾಗುತ್ತಾರೆ ಎಂದಷ್ಟೇ ಗೊತ್ತಿತ್ತು. ಆದರೆ ನೇಪಾಳದಲ್ಲಿ ನಡೆದ ಘಟನೆಯು ನಮ್ಮೆ ಆಲೋಚನೆಯನ್ನು ಬುಡಮೇಲಾಗಿಸಿತು.
ಅಯ್ಯೋ ! ನಮ್ಮೆಲ್ಲರ ಮನೆಯಲ್ಲೂ ಒಂದೊಂದು ಟೈಮ್ ಬಾಂಬ್ ಇದೆಯ ! ಎಂಬ ಉದ್ಗಾರ ಹೊರಹೊಮ್ಮಿತು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳೇ ಆ ಸೈಲೆಂಟ್ ಟೈಮ್ ಬಾಂಬ್ ! ಅಣುಬಾಂಬ್ ಗಳನ್ನು ಯುದ್ಧದ ಸಮಯದಲ್ಲಿ ಶತ್ರುರಾಷ್ಟ್ರದವರು ಬಳಸುತ್ತಾರೆ. ಆದರೆ ಸಾಮಾಜಿಕ ಜಾಲತಾಣವೆಂಬ ಟೈಮ್ ಬಾಂಬ್ ನಮ್ಮವರೇ ನಮ್ಮ ವಿರುದ್ಧ ಸಿಡಿಸುತ್ತಾರೆ.
ಹುಟ್ಟುತ್ತಲೇ ಮಕ್ಕಳು ಅಳುವನ್ನು ನಿಲ್ಲಿಸಲು ಆಟದ ಸಾಮಾನಿನಂತೆ ಅವರ ಕೈಗೆ ಮೊಬೈಲ್ ನೀಡಿ ನಾವೆ ಸುಮ್ಮನಾಗುತ್ತೇವೆ. ಅಲ್ಲಿಂದಲೇ ಮೊಬೈಲ್ ಎಂಬ ಮಾಯಲೋಕದ ಪಯಣ ಶುರುವಾಗಿ ಆ ಪ್ರಪಂಚದ ಮುಂದೆ ಸ್ನೇಹ ಸಂಬಂಧಗಳು, ಪ್ರೀತಿ, ನಂಬಿಕೆ, ಮಾನವೀಯತೆ, ಸಂಸ್ಕೃತಿ, ಆಚಾರ ವಿಚಾರ, ದೇಶಪ್ರೇಮ ಎಲ್ಲವೂ ಗೌಣವಾಗಿ ಬಿಡುತ್ತದೆ.
ಒಂದು ಮನೆಯಲ್ಲಿ ಕನಿಷ್ಠ ಎಂದರೂ ಐದು ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿರುವ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಊಟ ಮಾಡದೇ ಬೇಕಾದರೂ ನಾಲ್ಕಾರು ದಿನ ಹೇಗೂ ಕಳೆಯುತ್ತಾರೆ ಆದರೆ ಮೊಬೈಲ್, ಸಾಮಾಜಿಕ ಜಾಲತಾಣ ಎಲ್ಲದಕ್ಕೂ ಮಿಗಿಲಾಗಿ ನೆಟ್‌ವರ್ಕ್ ಇಲ್ಲದೇ ಅವರ ಜೀವನವೇ ಸಾಗದು.
ನಿಮಗೆ ನೆನಪಿರಬಹುದು, ಕಳೆದ ತಿಂಗಳ ಕೊನೆಯ ಭಾನುವಾರ ಕರ್ನಾಟಕ, ಚೆನೈ, ಹೈದ್ರಾಬಾದ್ ನಲ್ಲಿ ಒಂದು ಗಂಟೆಯ ಕಾಲ ಏರ್ ಟೆಲ್ ನೆಟ್‌ವರ್ಕ್ ವ್ಯತ್ಯಯ ಆದಾಗ ಇಂದಿನ ಯುವ ಪೀಳಿಗೆ ಯವರು ಬಾಲ ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಓಡಾಡತೊಡಗಿದರು. ನೆಟ್‌ವರ್ಕ್ ಇಲ್ಲದೇ ಕಂಗಾಲಾದ ಜನರು ದಿಕ್ಕುತೋಚದೆ ನಾಲ್ಕೈದು ಬಾರಿ ಫ್ಲೈಟ್ ಮೋಡ್‌ಗೆ ಹಾಕಿ ತೆಗೆದರು. ಆಗಲು ನೆಟ್‌ವರ್ಕ್ ಬಾರದ ಕಾರಣ ರಿ-ಸ್ಟಾರ್ಟ್ ಮಾಡಿದರು. ಆಗಲೂ ಒಂದೇ ಒಂದು ಚಿಕ್ಕ ನೆಟ್‌ವರ್ಕ್ ಕಡ್ಡಿ ಕಾಣಿಸದಿದ್ದಾಗ ಮೊಬೈಲ್ ಸ್ವಿಚ್ ಆಫ್ ಮಾಡಿ ನೋಡೋಣ ಎಂದು ನೋಡಿದರು.
ಹೀಗೆ ನೆಟ್‌ವರ್ಕ್ ಹುಡುಕಾಟದಲ್ಲಿ ಮಾಡಿದ ಒಂದೊಂದೇ ಪ್ರಯತ್ನಗಳು ವಿಫಲವಾದಾಗ ಮತ್ತಷ್ಟು ಆತಂಕ ಹೆಚ್ಚುತ್ತಲೇ ಹೋಯಿತು. ಕೊನೆಯದಾಗಿ ಸಿಮ್ ಕಾರ್ಡ್ ತೆಗೆದು ಮತ್ತೆ ಹಾಕಿ ನೋಡಿದರೂ ಆಗಲೂ ನೆಟ್ವರ್ಕ್ ನ ಪತ್ತೆ ಇಲ್ಲ. ಆಗ ಸಹನೆಯ ಕಟ್ಟೆ ಒಡೆದು ಅಕ್ಕ ಪಕ್ಕದವರ ಬಳಿ ನಿಮ್ಮ ಮೊಬೈಲ್ ನೆಟ್‌ವರ್ಕ್ ಇದೆಯೇ, ನಿಮ್ಮ ಏರ್‌ಟೆಲ್ ನೆಟ್‌ವರ್ಕ್ ಸರಿಯಾಗಿದೆಯೇ ಎಂದು ಕೇಳತೊಡಗಿದರು.
ನಾವು ತಂತ್ರಜ್ಞಾನಕ್ಕೆ ಎಷ್ಟು ಅಂಟುಕೊಂಡಿದ್ದೇವೆ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಮತ್ತೊಂದಿರಲಿಲ್ಲ. ಆಗ ಅವರು ನಡೆದುಕೊಂಡ ರೀತಿ ನೋಡಿದಾಗಲೇ ನಮಗೆ ತಂತ್ರಜ್ಞಾನ ಎಂಬ ಮಾಯಾಲೋಕ ಏನೇ ಅನಾಹುತ ಮಾಡಬಹುದೆಂಬ ಚಿತ್ರಣ ಸಿಕ್ಕಿತ್ತು. ಆದರೆ ಅದ್ಯಾವುದನ್ನೂ ನಾವು ನಾವು ಗಂಭೀರವಾಗಿ ಪರಿಗಣಿಸಲಿಲ್ಲ.
ಇಂದು ಕುಟುಂಬದ ಚಿತ್ರಣ ಬದಲಾಗಿದೆ. ಮನೆಯಲ್ಲಿ ಅಪ್ಪ, ಅಮ್ಮ ಮಕ್ಕಳು ಮಾತ್ರ ಇದ್ದರೂ, ಒಬ್ಬರೊಂದಿಗೆ ಇನ್ನೊಬ್ಬರ ಮಾತುಕತೆಯಿಲ್ಲ. ಪಾಲಕರು ಮಕ್ಕಳ ಬಳಿ ಮಾತನಾಡಲು ಹೆದರಬೇಕಾದ ವಾತಾವರಣವಿದೆ. ಊಟ ಮಾಡಲು ಬಾರೋ, ಎಷ್ಹೋತ್ತು ಕಾಯೊದು, ಎಲ್ಲರೂ ಕಾಯುತ್ತಿzರೆ ಎಂದು ಅಮ್ಮ ಹೇಳಿದರೆ ಮಕ್ಕಳು ಅದನ್ನೇ ಅಪಮಾನ ಎಂದು ತಿಳಿದು ಸಿಟ್ಟಿನಿಂದ ರೊಚ್ಚಿಗೆದ್ದು ರಂಪಾಟ ಮಾಡಿ ಮನೆಯನ್ನೇ ರಣರಂಗವನ್ನಾಗಿಸುತ್ತಾರೆ.
ಇನ್ನು ಕೆಲವು ಮಕ್ಕಳು ಮತ್ತೊಮ್ಮೆ ಕಿರಿಕಿರಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ರೂಮ್ ಒಳಗೆ ಹೋಗಿ ದಬ್ಬನೇ ಬಾಗಿಲಹ ಹಾಕಿಕೊಳ್ಳುತ್ತಾರೆ. ಇದು ಎಲ್ಲರ ಮನೆಯ ಸಾಮಾನ್ಯ ದೃಶ್ಯ. ಅಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣ ನಮ್ಮ ಯುವ ಪೀಳಿಗೆಯವರನ್ನು ಸಂಪೂರ್ಣ ವಾಗಿ ವಶೀಕರಣ ಮಾಡಿ ಬಿಟ್ಟಿದೆ.
ಇಂದು ನೇಪಾಳದಲ್ಲಿ ಆಗಿದ್ದು ಇದುವೇ. ನಮ್ಮ ಮಕ್ಕಳು ಪಾಶ್ಚಾತ್ಯರ ತಂತ್ರಜ್ಞಾನಕ್ಕೆ ಬಲಿಯಾಗಿ , ಅದರ ವ್ಯಾಮೋಹಕ್ಕೆ ಒಳಗಾಗಿ ಹುಚ್ಚೆದ್ದು ನಮ್ಮ ತಾಯ್ನಾಡನ್ನೇ ಸುಟ್ಟು ಹಾಕುವ ಮಟ್ಟಿಗೆ ಮದಭರಿತ ಆನೆಯಂತೆ ವರ್ತಿಸುತ್ತಿದ್ದಾರೆ. ಅಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬ ದೇಶಪ್ರೇಮಿ, ಸ್ವಾತಂತ್ರ್ಯ ಸಂಗ್ರಾಮಿ ಇದ್ದರೆ ಇಂದು ನಮ್ಮ ನಮ್ಮ ಮನೆಯಲ್ಲಿ ನಮ್ಮ ಮಕ್ಕಳ ಬಳಿ ಜೀವಂತ ಟೈಮ್ ಬಾಂಬ್ ಮಾದರಿಯ ತಂತ್ರಜ್ಞಾನವೊಂದು ತಣ್ಣನೇ ಅತ್ತಿಂದಿತ್ತ ಓಡಾಡುತ್ತಿದೆ.
ಪುಸ್ತಕಗಳನ್ನು ಓದುತ್ತಾ, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಸರಿಯಾದ eನವನ್ನು ಪಡೆದುಕೊಳ್ಳಬೇಕಾದ ಯುವಪೀಳಿಗೆ ಇಂದು ಪಾಶ್ಚಾತ್ಯರು ಹೆಣೆಯ ಜಾಲದಲ್ಲಿ ಸಿಲುಕಿ ವಿಲವಿಲ ಎಂದು ಒzಡುತ್ತಿದೆ. ಅದಕ್ಕೆ ಅಲ್ಲವೇ ಚೀನಾದ ಟಿಕ್ ಟಾಕ್ ಆಪ್ ನ ನಶೆಯಲ್ಲಿ ನಮ್ಮ ಗಡಿಯಲ್ಲಿ ಭದ್ರತಾಪಡೆಗಳ ಮೇಲೆ ದಾಳಿಯಾಗಿದ್ದು.
ಅಲ್ಲಿಂದಲೇ ಅಲ್ಲವೇ ಭಾರತ ಸರಕಾರ ಇದರ ತೀವ್ರತೆ ಅರಿತು ಹತ್ತಾರು ಆಪ್ ಗಳನ್ನು ಬಹಿಷ್ಕರಿಸಿದ್ದು. ಬಾಲ್ಯದ ಮಕ್ಕಳಿಗೆ ಸಂಸ್ಕಾರಯುತ ನೈತಿಕ ಶಿಕ್ಷಣ ನೀಡಿ ಪ್ರೀತಿಯಿಂದ ತಪ್ಪನ್ನು ತಿದ್ದಿ ತೀಡಬೇಕಾದ ನಾವು ಮಕ್ಕಳು ಅಳುತ್ತಾರೆ. ಅವರ ಕಣ್ಣಲ್ಲಿ ನೀರು ಬಂದರೆ ನಮ್ಮ ಕರುಳು ಹಿಚುಕಿದಂತಾಗುತ್ತದೆ ಎಂದು ಮಕ್ಕಳ ಮೇಲಿನ ವ್ಯಾಮೋಹದಿಂದ ಸುಮ್ಮನಾದೆವು. ಅದೇ ಮಕ್ಕಳು ಇಂದು ಕ್ಷಣಕ್ಷಣಕ್ಕೂ ಸಣ್ಣ ಸಣ್ಣ ವಿಷಯಕ್ಕೂ ತಾಳ್ಮೆ ಕಳೆದುಕೊಂಡು ರೊಚ್ಚಿಗೇಳುತ್ತಿದ್ದಾರೆ.
ಮಕ್ಕಳ ಕೈಯಲ್ಲಿರುವ ಮೊಬೈಲ್, ಸಾಮಾಜಿಕ ಜಾಲತಾಣವೆಂಬ ಸೂಪರ್ ಫಾಸ್ಟ್ ಸೈಲೆಂಟ್ ಟೈಮ್ ಬಾಂಬ್ ಎಷ್ಟೊತ್ತಿಗೆ, ಎಲ್ಲಿ ಸಿಡಿಯುತ್ತದೆ ಎಂಬ ಆತಂಕ ಸದಾ ನಮ್ಮೆಲ್ಲರನ್ನು ಕಾಡಲಿದೆ. ಇದು ಕೇವಲ ಜೆನ್ ಝೀ ಪಿಳೀಗೆಗೆ ಮಾತ್ರ ಸಿಮೀತವಲ್ಲ, ಮುಂದೆ ಬರಲಿರುವ ಜೆನ್ ಅಲ್ಫಾ ಪೀಳಿಗೆಯನ್ನು ಈ ನಶೆಯಿಂದ ಹೊರ ತರುವ ಸವಾಲಿನ ಬಗ್ಗೆಯೂ ಎಚ್ಚರಿಕೆಯನ್ನು ನೀಡುತ್ತದೆ.
ಸಾಮಾಜಿಕ ಜಾಲತಾಣದ ಮೇಲಿರುವ ಕೌತುಕತೆ ತಮ್ಮದೇ ಮನೆಯ ಸದಸ್ಯರೋ, ಆಪ್ತರೊಬ್ಬರು ಜೀವನ್ಮರಣದ ಹೋರಾಟದಲ್ಲಿ ಐಸಿಯುನಲ್ಲಿ ಇದ್ದಿದ್ದರೂ ಅಷ್ಟು ಟೆನ್ಷನ್ ಆಗುವುದು ನಮಗೆ ಕಾಣಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಸಾಮಾಜಿಕ ಜಾಲ ತಾಣ ನಮ್ಮ ಮಿದುಳನ್ನು ನಿಯಂತ್ರಿಸು ತ್ತಿದೆ. ಇದುವೇ ತಂತ್ರಜ್ಞಾನ ಯುದ್ಧ.
ಇದನ್ನೇ ಪಾಶ್ಚಾತ್ಯ ರಾಷ್ಟ್ರಗಳು ಎದುರು ನೋಡುತ್ತಿರುವುದು. ಅವರ ಆರ್ಥಿಕ ಮುಂದುವರಿಕೆಗೆ ನಮ್ಮ ಮಕ್ಕಳು, ಯುವಲರು ಕಚ್ಚಾವಸ್ತುಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಬಹುಶಃ ಇಂದಿನ ಈ ಬೆಳವಣಿಗೆಯನ್ನು ಈಗಾಗಲೇ ನಿರೀಕ್ಷಿಸಿದ ಚೈನಾ, ಉತ್ತರ ಕೊರಿಯಾ, ರಷ್ಯಾ, ತುರ್ಕ್‌ಮೆನಿಸ್ತಾನ್, ಇರಾನ್ ದೇಶಗಳು ತಮ್ಮ ದೇಶದಲ್ಲಿ ತಮ್ಮದೇ ಆದ ಸರ್ಚ್ ಎಂಜಿನ್, ಸ್ವದೇಶಿ ಆಪ್ ಗಳನ್ನು ಮಾತ್ರ ಬಳಸಲು ಅನುಮತಿ ನೀಡಿವೆ.
ಈ ದೇಶಗಳಲ್ಲಿ ಗೂಗಲ್ ಸೇರಿದಂತೆ ಇನ್ನಿತರ ಆಪ್ ಗಳ ಮೇಲೆ ನಿರ್ಬಂಧವಿದೆ. ಕೇವಲ ಆಪ್ ಮೇಲೆ ಮಾತ್ರವಲ್ಲ, ಆಮದು ಮಾಡಿಕೊಳ್ಳುವ ಪ್ರತಿಯೊಂದು ಸಾಮಗ್ರಿಯ ಮೇಲೂ ಬಿಗಿಯಾದ ಹದ್ದಿನ ಕಣ್ಣು ಇಡಲಾಗುತ್ತದೆ. ಮೇಲ್ನೋಟಕ್ಕೆ ನೋಡುವಾಗ ಇದು ಮಾನವನ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲಿದೆ ಎಂದೆನಿಸಿದರೂ ಸಹ, ಇಂದಿನ ವಿದ್ಯನಾನವನ್ನು ಅವಲೋಕಿಸಿದಾಗ ದೇಶದ ಆಂತರಿಕ ಭದ್ರತೆ ವಿಷಯದಲ್ಲಿ ಆ ನಿರ್ಣಯ ಸೂಕ್ತವೆನಿಸುತ್ತದೆ.
ಇನ್ನಾದರೂ ನಾವು ನಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕಾದ ಸಮಯ ಇದಾಗಿದೆ. ಇಲ್ಲದಿದ್ದರೆ ಸಾಮಾಜಿಕ ಜಾಲತಾಣವೆಂಬ ಬ್ರಹ್ಮರಾಕ್ಷಸ ಮೊಬೈಲ್ ನೊಳಗಿನಿಂದ ನಮ್ಮೆಲ್ಲರನ್ನೂ ಆಹುತಿ ತೆಗೆದುಕೊಳ್ಳುವ ಕಾಲ ದೂರವಿಲ್ಲ.