ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

ಇಸ್ರೇಲಿಗಳು ಕಾಫಿ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಅವರಿಗೆ ಕಾಫಿ ಎಂದರೆ ಕೇವಲ ಒಂದು ಪಾನೀಯವಲ್ಲ, ಅದೊಂದು ಭಾವನೆ ಮತ್ತು ಸಂಸ್ಕೃತಿ. 2001ರಲ್ಲಿ ಸ್ಟಾರ್‌ಬಕ್ಸ್ ಬಹಳ ಅದ್ದೂರಿ‌ ಯಾಗಿ ಇಸ್ರೇಲ್ ಮಾರುಕಟ್ಟೆಗೆ ಪ್ರವೇಶಿಸಿತು. ‘ಶಾಲೋಮ್ ಕಾಫಿ ಲಿಮಿಟೆಡ್’ ಎಂಬ ಸ್ಥಳೀಯ ಸಂಸ್ಥೆಯೊಂದಿಗೆ ಕೈಜೋಡಿಸಿ ಆರು ಶಾಖೆಗಳನ್ನು ತೆರೆಯಿತು. ಆದರೆ, ಕೇವಲ ಎರಡು ವರ್ಷ ಕಳೆಯುವಷ್ಟರಲ್ಲಿ (2003) ಸುಮಾರು 6 ಮಿಲಿಯನ್ ಡಾಲರ್ ನಷ್ಟ ಅನುಭವಿಸಿ ತನ್ನೆಲ್ಲ ಶಾಖೆ ಗಳನ್ನು ಮುಚ್ಚಿತು.

ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

-

ಇದೇ ಅಂತರಂಗ ಸುದ್ದಿ

ಸ್ಟಾರ್‌ಬಕ್ಸ್ ತನ್ನ ಕಾಫಿಯನ್ನು ಅಮೆರಿಕನ್ ರುಚಿಗೆ ತಕ್ಕಂತೆ ಸಿದ್ಧಪಡಿಸುತ್ತದೆ. ಆದರೆ ಇಸ್ರೇಲಿಗಳಿಗೆ ಸ್ಟಾರ್‌ಬಕ್ಸ್ ಕಾಫಿ ‘ನೀರು ನೀರಾಗಿ’ ಕಂಡಿತು. ಅವರಿಗೆ ಬೇಕಿದ್ದದ್ದು ಘಮ ಘಮಿಸುವ ಅರೋಮಾ ಇರುವ, ಗಟ್ಟಿಯಾದ ಎಸ್ಪ್ರೆಸೊ ಮತ್ತು ಮಕಿಯಾಟೊ. ಇಸ್ರೇಲಿ ಗಳಿಗೆ ಯುರೋಪಿಯನ್ ಶೈಲಿಯ, ಅದರಲ್ಲೂ ವಿಶೇಷವಾಗಿ ಇಟಾಲಿಯನ್ ಶೈಲಿಯ ಗಟ್ಟಿ ಕಾಫಿ ಎಂದರೆ ಪ್ರಾಣ. ಟೆಲ್ ಅವಿವ್‌ನ ಬೀದಿಬೀದಿಗಳಲ್ಲಿರುವ ಲೋಕಲ್ ಕೆೆಫೆಗಳು ಕಲಾತ್ಮಕವಾಗಿ ಕಾಫಿ ತಯಾರಿಸುತ್ತವೆ. ಸ್ಟಾರ್‌ಬಕ್ಸ್‌ʼನ ಯಾಂತ್ರಿಕ ರುಚಿ ಅಲ್ಲಿನ ಜನರ ಮನ ಗೆಲ್ಲುವಲ್ಲಿ ವಿಫಲವಾಯಿತು.

ಇಸ್ರೇಲ್‌ನ ಆರ್ಥಿಕ ರಾಜಧಾನಿ ಮತ್ತು ಅತ್ಯಂತ ಆಧುನಿಕ ನಗರವೆಂದು ಕರೆಸಿಕೊಳ್ಳುವ ಟೆಲ್ ಅವಿವ್ʼನಲ್ಲಿ ಜಾಗತಿಕ ಕಾಫಿ ದೈತ್ಯ ‘ಸ್ಟಾರ್‌ಬಕ್ಸ್’ ಸೋತ ಕಥೆ ಮಾರ್ಕೆಟಿಂಗ್ ಪ್ರಪಂಚದಲ್ಲಿ ಒಂದು ದೊಡ್ಡ ಪಾಠ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಯಶಸ್ವಿಯಾಗಿರುವ ಸ್ಟಾರ್‌ಬಕ್ಸ್‌ ಸಂಸ್ಥೆಯು ಇಸ್ರೇಲ್‌ನಲ್ಲಿ ಮಾತ್ರ ಕೇವಲ ಎರಡೇ ವರ್ಷಗಳಲ್ಲಿ ತನ್ನ ಅಂಗಡಿಗಳನ್ನು ಮುಚ್ಚಿ ಓಡಿಹೋಗಬೇಕಾಯಿತು.

ಇಸ್ರೇಲಿಗಳು ಕಾಫಿ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಅವರಿಗೆ ಕಾಫಿ ಎಂದರೆ ಕೇವಲ ಒಂದು ಪಾನೀಯವಲ್ಲ, ಅದೊಂದು ಭಾವನೆ ಮತ್ತು ಸಂಸ್ಕೃತಿ. 2001ರಲ್ಲಿ ಸ್ಟಾರ್‌ಬಕ್ಸ್ ಬಹಳ ಅದ್ದೂರಿ‌ ಯಾಗಿ ಇಸ್ರೇಲ್ ಮಾರುಕಟ್ಟೆಗೆ ಪ್ರವೇಶಿಸಿತು. ‘ಶಾಲೋಮ್ ಕಾಫಿ ಲಿಮಿಟೆಡ್’ ಎಂಬ ಸ್ಥಳೀಯ ಸಂಸ್ಥೆಯೊಂದಿಗೆ ಕೈಜೋಡಿಸಿ ಆರು ಶಾಖೆಗಳನ್ನು ತೆರೆಯಿತು. ಆದರೆ, ಕೇವಲ ಎರಡು ವರ್ಷ ಕಳೆಯುವಷ್ಟರಲ್ಲಿ (2003) ಸುಮಾರು 6 ಮಿಲಿಯನ್ ಡಾಲರ್ ನಷ್ಟ ಅನುಭವಿಸಿ ತನ್ನೆಲ್ಲ ಶಾಖೆ ಗಳನ್ನು ಮುಚ್ಚಿತು.

ಇಸ್ರೇಲ್‌ನಲ್ಲಿ ಕಾಫಿ ಕುಡಿಯುವುದು ಒಂದು ದೀರ್ಘಾವಧಿಯ ಸಾಮಾಜಿಕ ಪ್ರಕ್ರಿಯೆ. ಅಲ್ಲಿನ ಜನರಿಗೆ ಯುರೋಪಿಯನ್ ಶೈಲಿಯ, ಅದರಲ್ಲೂ ವಿಶೇಷವಾಗಿ ಇಟಾಲಿಯನ್ ಶೈಲಿಯ ಗಟ್ಟಿ ಕಾಫಿ ಎಂದರೆ ಪ್ರಾಣ. ಸ್ಟಾರ್‌ಬಕ್ಸ್ ತನ್ನ ಕಾಫಿಯನ್ನು ಅಮೆರಿಕನ್ ರುಚಿಗೆ ತಕ್ಕಂತೆ ಸಿದ್ಧಪಡಿಸುತ್ತದೆ. ಆದರೆ ಇಸ್ರೇಲಿಗಳಿಗೆ ಸ್ಟಾರ್‌ಬಕ್ಸ್ ಕಾಫಿ ‘ನೀರು ನೀರಾಗಿ’ ಕಂಡಿತು. ‌

ಇದನ್ನೂ ಓದಿ: Vishweshwar Bhat Column: ಟೆಲ್‌ ಅವಿವ್‌ʼನ ಮನೆ ಗೋಡೆಯೂ ಬದುಕುಳಿಯುವ ಅದಮ್ಯ ಚೇತನಕ್ಕೆ ಸಾಕ್ಷಿ!

ಅವರಿಗೆ ಬೇಕಿದ್ದದ್ದು ಘಮಘಮಿಸುವ ಅರೋಮಾ ಇರುವ, ಗಟ್ಟಿಯಾದ ಎಸ್ಪ್ರೆಸೊ ಮತ್ತು ಮಕಿಯಾಟೊ. ಟೆಲ್ ಅವಿವ್‌ನ ಬೀದಿಬೀದಿಗಳಲ್ಲಿರುವ ಲೋಕಲ್ ಕೆಫೆಗಳು ಕಲಾತ್ಮಕವಾಗಿ ಕಾಫಿ ತಯಾರಿಸುತ್ತವೆ. ಸ್ಟಾರ್‌ಬಕ್ಸ್‌ʼನ ಯಾಂತ್ರಿಕ ರುಚಿ ಅಲ್ಲಿನ ಜನರ ಮನ ಗೆಲ್ಲುವಲ್ಲಿ ವಿಫಲವಾಯಿತು.

ಸ್ಟಾರ್‌ಬಕ್ಸ್ ಮೂಲಮಂತ್ರವೇ ‘ಗ್ರಾಬ್ ಆಂಡ್ ಗೋ’, ಅಂದರೆ ಕೈಯಲ್ಲಿ ಕಾಫಿ ಕಪ್ ಹಿಡಿದು ಹೋಗ್ತಾ ಇರೋದು.. ಆದರೆ ಇಸ್ರೇಲಿ ಸಂಸ್ಕೃತಿ ಇದಕ್ಕೆ ತದ್ವಿರುದ್ಧ. ಟೆಲ್ ಅವಿವ್ ಜನರಿಗೆ ಕೆಫೆ ಎನ್ನುವುದು ಸ್ನೇಹಿತರೊಂದಿಗೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆಯುವ ಜಾಗ. ಅವರು ಸಣ್ಣ ಕಪ್ ಕಾಫಿಯನ್ನು ಬಹಳ ಸಮಯ ತೆಗೆದುಕೊಂಡು ಆನಂದಿಸುತ್ತಾರೆ.

ಸ್ಟಾರ್‌ಬಕ್ಸ್ʼನ ಪೇಪರ್ ಕಪ್ ಶೈಲಿ ಮತ್ತು ಫಾಸ್ಟ್‌ ಫುಡ್ ಮಾದರಿಯ ಸಂಸ್ಕೃತಿ ಅವರಿಗೆ ಅಪರಿಚಿತ ವಾಗಿತ್ತು. ಸ್ಥಳೀಯ ಕೆಫೆಗಳಲ್ಲಿ ಬರಿಸ್ಟಾಗಳು ಗ್ರಾಹಕರೊಂದಿಗೆ ವೈಯಕ್ತಿಕ ಸಂಬಂಧ ಹೊಂದಿರು ತ್ತಾರೆ. ಸ್ಟಾರ್‌ಬಕ್ಸ್ʼನ ಕಾರ್ಪೊರೇಟ್ ಶೈಲಿಯಲ್ಲಿ ಆ ಆತ್ಮೀಯತೆ ಇರಲಿಲ್ಲ.

ಇಸ್ರೇಲ್‌ನಗಲೇ ‘ಅರೋಮಾ’ ಮತ್ತು ‘ಆರ್ಕೆಫೆ’ ಎಂಬ ಎರಡು ಪ್ರಬಲ ಸ್ಥಳೀಯ ಕಾಫಿ ಸರಪಳಿ ಗಳಿದ್ದವು. ಇವು ಸ್ಟಾರ್‌ಬಕ್ಸ್ʼಗಿಂತ ಉತ್ತಮ ರುಚಿ ಮತ್ತು ಕಡಿಮೆ ಬೆಲೆಗೆ ಕಾಫಿ ನೀಡುತ್ತಿದ್ದವು. ಸ್ಟಾರ್‌ಬಕ್ಸ್ ಬರುವ ಮೊದಲೇ ಈ ಕೆಫೆಗಳು ಇಸ್ರೇಲಿಗಳ ದೈನಂದಿನ ಜೀವನದ ಭಾಗವಾಗಿದ್ದವು. ಅವುಗಳ ಮುಂದೆ ಸ್ಟಾರ್‌ಬಕ್ಸ್ ಕಾಫಿ ದುಬಾರಿಯಾಗಿ ಮತ್ತು ಸಪ್ಪೆಯಾಗಿ ಕಂಡುಬಂತು.

1

2001ರಿಂದ 2003ರ ಅವಧಿಯು ಇಸ್ರೇಲ್‌ನಲ್ಲಿ ‘ಎರಡನೇ ಇಂತಿಫಾದ’ ಎಂಬುದು ಉದ್ವಿಗ್ನತೆಯ ಕಾಲವಾಗಿತ್ತು. ಅನೇಕ ಕಡೆಗಳಲ್ಲಿ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. ಅಂಥ ಸಮಯದಲ್ಲಿ ಜನರು ಸಾರ್ವಜನಿಕ ಸ್ಥಳಗಳಿಗೆ ಬರುವುದು ಕಡಿಮೆಯಾಗಿತ್ತು. ಇದು ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿತು. ಅಮೆರಿಕನ್ ಬ್ರ್ಯಾಂಡ್ ಆಗಿದ್ದರಿಂದ ಸ್ಟಾರ್‌ಬಕ್ಸ್ ಮೇಲೆ ಹೆಚ್ಚಿನ ಕಣ್ಣಿತ್ತು.

ಇಸ್ರೇಲಿಗಳು ಕಾಫಿಯನ್ನು ಒಂದು ಕಲೆಯಾಗಿ ನೋಡುತ್ತಾರೆ. ಅಲ್ಲಿನ ಜನರು ತಾವೇ ಕಾಫಿ ಬೀಜ ಗಳನ್ನು ಹುರಿದು ಪುಡಿ ಮಾಡಿ ಕುಡಿಯುವ ಸಂಪ್ರದಾಯ ಹೊಂದಿದ್ದಾರೆ.

‘ಕಾಫಿ ವಿಷಯದಲ್ಲಿ ಇಸ್ರೇಲಿಗಳು ರಾಜಿಯಾಗುವುದಿಲ್ಲ’ ಎಂಬ ಮಾತು ಅಕ್ಷರಶಃ ಸತ್ಯ. ಅವರಿಗೆ ಸ್ಟಾರ್‌ಬಕ್ಸ್ ನೀಡುವ ‘ಮಿಲ್ಕ್ ಶೇಕ್’ ಮಾದರಿಯ ಸಕ್ಕರೆ ಮಿಶ್ರಿತ ಪಾನೀಯಗಳಿಗಿಂತ, ಕಾಫಿಯ ನೈಜ ಕಹಿರುಚಿಯೇ ಇಷ್ಟ. ಸ್ಟಾರ್‌ಬಕ್ಸ್ ಸೋಲಿಗೆ ಮುಖ್ಯ ಕಾರಣ ‘ಸಾಂಸ್ಕೃತಿಕ ಅಂಧತ್ವ’. ಒಂದು ದೇಶದ ಮಾರುಕಟ್ಟೆಗೆ ಪ್ರವೇಶಿಸುವಾಗ ಅಲ್ಲಿನ ಜನರ ರುಚಿ ಮತ್ತು ಜೀವನಶೈಲಿಯನ್ನು ಅರ್ಥೈಸಿ ಕೊಳ್ಳದಿದ್ದರೆ ಎಂಥ ದೊಡ್ಡ ಕಂಪನಿಯೂ ನೆಲಕಚ್ಚುತ್ತದೆ ಎಂಬುದಕ್ಕೆ ಇದು ಉತ್ತಮ ಉದಾ ಹರಣೆ. ‌

ಇಂದು ಸ್ಟಾರ್‌ಬಕ್ಸ್ ಜಗತ್ತಿನಾದ್ಯಂತ ನಲವತ್ತು ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದರೂ, ಇಸ್ರೇಲ್ ಮಾತ್ರ ಆ ನಕ್ಷೆಯಿಂದ ಇಂದಿಗೂ ಹೊರಗುಳಿದಿದೆ.

ಏನಿದು ಕೆಫೆ ಹಾಫುಕ್?

ಇಸ್ರೇಲ್‌ನ ಕಾಫಿ ಸಂಸ್ಕೃತಿ ಮತ್ತು ಅಲ್ಲಿನ ಜನರ ದೈನಂದಿನ ಜೀವನವನ್ನು ಅರ್ಥಮಾಡಿ ಕೊಳ್ಳ ಬೇಕಾದರೆ ನಾವು ಮೊದಲು ಸವಿಯಬೇಕಾದದ್ದು ‘ಕೆಫೆ ಹಾಫುಕ್’ (Kafe Hafuch). ಇದು ಕೇವಲ ಒಂದು ಕಪ್ ಕಾಫಿಯಲ್ಲ, ಜತೆಗೆ ಇಸ್ರೇಲಿಗಳ ಅಸ್ಮಿತೆ ಮತ್ತು ಅವರ ‘ಕಾಫಿ ಅಭಿಮಾನ’ದ ಸಂಕೇತ ವೂ ಹೌದು. ಹೀಬ್ರೂ ಭಾಷೆಯಲ್ಲಿ ‘ಹಾಫುಕ್’ ಎಂದರೆ ‘ತಲೆಕೆಳಗಾದ’ ಎಂದರ್ಥ. ಕಾಫಿ ತಯಾರಿಸು ವ ಕ್ರಮ ಮತ್ತು ಅದರ ವಿನ್ಯಾಸ ಈ ಹೆಸರಿಗೆ ಸಂಪೂರ್ಣ ನ್ಯಾಯ ಒದಗಿಸುತ್ತದೆ.

ಜಗತ್ತಿನಾದ್ಯಂತ ಪ್ರಸಿದ್ಧವಾಗಿರುವ ‘ಲ್ಯಾಟೆ’ ಅಥವಾ ‘ಕ್ಯಾಪುಚಿನೋ’ ತಯಾರಿಸುವಾಗ ಮೊದಲು ಕಪ್‌ಗೆ ಎಸ್ಪ್ರೆಸೊ (ಕಪ್ಪು ಕಾಫಿ ಡಿಕಾಕ್ಷನ್) ಸುರಿದು, ನಂತರ ಅದರ ಮೇಲೆ ಹಾಲನ್ನು ಹಾಕಲಾಗು ತ್ತದೆ. ಆದರೆ ಇಸ್ರೇಲ್‌ನ ಈ ‘ಹಾಫುಕ್’ ಶೈಲಿಯಲ್ಲಿ ಇದು ಉಲ್ಟಾ. ಮೊದಲು ಕಪ್‌ಗೆ ಬಿಸಿ ಮಾಡಿದ ಮತ್ತು ನೊರೆಭರಿತವಾದ ಹಾಲನ್ನು ಹಾಕಲಾಗುತ್ತದೆ. ನಂತರ ಅದರ ಮೇಲೆ ಅತ್ಯಂತ ನಿಧಾನವಾಗಿ ಬಿಸಿಬಿಸಿ ಎಸ್ಪ್ರೆಸೊವನ್ನು ಸುರಿಯಲಾಗುತ್ತದೆ.

ಎಸ್ಪ್ರೆಸೊ ಹಾಲಿನ ಪದರದ ನಡುವೆ ಸೇರಿಕೊಂಡು, ಕಪ್‌ನ ಮೇಲ್ಭಾಗದಲ್ಲಿ ಒಂದು ಸುಂದರವಾದ ಕಂದುಬಣ್ಣದ ಉಂಗುರ ಅಥವಾ ಪದರವನ್ನು ಸೃಷ್ಟಿಸುತ್ತದೆ. ಇದು ನೋಡಲು ಅತ್ಯಂತ ಆಕರ್ಷಕ ವಾಗಿರುವುದರಿಂದಲೇ ಇದಕ್ಕೆ ‘ತಲೆಕೆಳಗಾದ ಕಾಫಿ’ ಎಂಬ ಹೆಸರು ಬಂದಿದೆ. ಮೇಲ್ನೋಟಕ್ಕೆ ಇದು ಲ್ಯಾಟೆಯಂತೆ ಕಂಡರೂ, ಇಸ್ರೇಲಿಗಳು ಇದನ್ನು ಲ್ಯಾಟೆ ಎಂದರೆ ಒಪ್ಪುವುದಿಲ್ಲ.

ಕೆಫೆ ಹಾಫುಕ್ʼನಲ್ಲಿ ಹಾಲಿನ ಪ್ರಮಾಣ ಮತ್ತು ಅದರ ನೊರೆಯ ಸಾಂದ್ರತೆ ಬಹಳ ಮುಖ್ಯ. ಇದು ಹೆಚ್ಚು ‘ಕ್ರೀಮಿ’ ಆಗಿರುತ್ತದೆ.ಇಸ್ರೇಲ್‌ನಲ್ಲಿ ಇನ್‌ಸ್ಟಂಟ್ ಕಾಫಿಪುಡಿ ಬಳಸುವುದನ್ನು ಅಪರಾಧ ಎಂಬಂತೆ ನೋಡಲಾಗುತ್ತದೆ. ಪ್ರತಿ ಕಪ್ ಹಾಫುಕ್ ಕೂಡ ಆಗ ತಾನೇ ಪುಡಿ ಮಾಡಿದ ಕಾಫಿ ಬೀಜ ಗಳಿಂದ ತಯಾರಿಸಿದ ತಾಜಾ ಎಸ್ಪ್ರೆಸೊದಿಂದ ಕೂಡಿರುತ್ತದೆ.

ಸ್ಟಾರ್‌ಬಕ್ಸ್ ಇಸ್ರೇಲ್‌ನಲ್ಲಿ ಮಣ್ಣು ಮುಕ್ಕಲು ಈ ‘ಕೆಫೆ ಹಾಫುಕ್’ ಕೂಡ ಒಂದು ಪ್ರಮುಖ ಕಾರಣ. ಸ್ಟಾರ್‌ಬಕ್ಸ್ ತನ್ನ ಕಾಫಿಯನ್ನು ಪೇಪರ್ ಕಪ್‌ಗಳಲ್ಲಿ ನೀಡಿ ‘ಬೇಗ ಕುಡಿದು ಹೊರಡಿ’ ಎಂಬ ಸಂಸ್ಕೃತಿಯನ್ನು ಪ್ರೋತ್ಸಾಹಿಸಿತು. ಆದರೆ ಇಸ್ರೇಲಿಗಳಿಗೆ ಕಾಫಿ ಎನ್ನುವುದು ಒಂದು ವಿರಾಮದ ಸಂಕೇತ. ಸಾಂಪ್ರದಾಯಿಕವಾಗಿ ಕೆಫೆ ಹಾಫುಕ್ ಅನ್ನು ಪಾರದರ್ಶಕ ಗಾಜಿನ ಲೋಟಗಳಲ್ಲಿ ಸರ್ವ್ ಮಾಡಲಾಗುತ್ತದೆ.

ಕಾಫಿ ಮತ್ತು ಹಾಲಿನ ಪದರಗಳು ಕಣ್ಣಿಗೆ ಕಾಣಿಸಬೇಕು ಎಂಬುದು ಅವರ ಆಶಯ. ಪೇಪರ್ ಕಪ್‌ ನಲ್ಲಿ ಆ ದೃಶ್ಯ ವೈಭವ ಸಿಗದ ಕಾರಣ ಜನರು ಸ್ಟಾರ್‌ಬಕ್ಸ್ ಅನ್ನು ತಿರಸ್ಕರಿಸಿದರು. ಇಸ್ರೇಲ್‌ನಲ್ಲಿ ಕಾಫಿ ತಯಾರಿಸುವವನು (ಬರಿಸ್ಟಾ) ಒಬ್ಬ ಕಲಾವಿದನಿದ್ದಂತೆ. ಗ್ರಾಹಕನಿಗೆ ಹಾಲಿನ ನೊರೆ ಎಷ್ಟು ಬೇಕು, ಕಾಫಿ ಎಷ್ಟು ಕಹಿಯಾಗಿರಬೇಕು ಎಂಬ ಸಣ್ಣ ವಿಷಯವನ್ನೂ ಅವರು ಗಮನಿಸುತ್ತಾರೆ. ಸ್ಟಾರ್‌ಬಕ್ಸ್ ಯಾಂತ್ರಿಕ ವ್ಯವಸ್ಥೆಯಲ್ಲಿ ಈ ಆತ್ಮೀಯತೆ ಇರಲಿಲ್ಲ.

ಟೆಲ್ ಅವಿವ್ ನಗರವನ್ನು ‘ಕಾಫಿಯ ರಾಜಧಾನಿ’ ಎನ್ನಬಹುದು. ಇಲ್ಲಿನ ಜನರಿಗೆ ಕಾಫಿ ಕುಡಿಯು ವುದು ಒಂದು ಸಾಮಾಜಿಕ ಸಮಾರಂಭ. ಕೆಫೆ ಹಾಫುಕ್ ಅನ್ನು ಬರೀ ಕಾಫಿಯಾಗಿ ನೀಡುವುದಿಲ್ಲ. ಅದರ ಜತೆಗೆ ಒಂದು ಸಣ್ಣ ಬಿಸ್ಕೆಟ್ ಅಥವಾ ಸಣ್ಣದೊಂದು ಚಾಕೊಲೇಟ್ ಪೀಸ್ ನೀಡುವುದು ಅಲ್ಲಿನ ಶಿಷ್ಟಾಚಾರ.

ಇಸ್ರೇಲಿ ಕೆಫೆಗಳಲ್ಲಿ ನೀವು ಒಂದು ಕಪ್ ಕೆಫೆ ಹಾಫುಕ್ ಆರ್ಡರ್ ಮಾಡಿ ಗಂಟೆಗಟ್ಟಲೆ ಕುಳಿತು ಪತ್ರಿಕೆ ಓದಬಹುದು ಅಥವಾ ಲ್ಯಾಪ್ʼಟಾಪ್‌ನಲ್ಲಿ ಕೆಲಸ ಮಾಡಬಹುದು. ಯಾರೂ ನಿಮ್ಮನ್ನು ಎಬ್ಬಿಸುವುದಿಲ್ಲ. ಈ ನಿಧಾನಗತಿಯ ಜೀವನಶೈಲಿಗೆ ಹಾಫುಕ್ ಪರಿಪೂರ್ಣ ಜತೆಗಾರ. ಆಧುನಿಕ ಕಾಲಕ್ಕೆ ತಕ್ಕಂತೆ ಕೆಫೆ ಹಾಫುಕ್ ಈಗ ಹಲವು ರೂಪಾಂತರಗಳನ್ನು ಪಡೆದಿದೆ. ಸಾಂಪ್ರದಾಯಿಕ ಹಾಲಿನ ಬದಲು ಈಗ ಸೋಯಾ ಹಾಲು, ಬಾದಾಮಿ ಹಾಲು ಅಥವಾ ಓಟ್ಸ್ ಹಾಲು ಬಳಸಿ ಕೂಡ ‘ಹಾಫುಕ್’ ಮಾಡಲಾಗುತ್ತದೆ.

ಇಸ್ರೇಲಿಗಳು ಸಾಮಾನ್ಯವಾಗಿ ಕಾಫಿಗೆ ಸಕ್ಕರೆ ಹಾಕುವುದಿಲ್ಲ. ಕಾಫಿಯ ನೈಸರ್ಗಿಕ ಕಹಿ ಮತ್ತು ಹಾಲಿನ ನೈಸರ್ಗಿಕ ಸಿಹಿಯೇ ಅವರಿಗೆ ಇಷ್ಟ. ಇಂದು ಲಂಡನ್, ನ್ಯೂಯಾರ್ಕ್ ಅಥವಾ ಬೆಂಗಳೂರಿ ನಂಥ ನಗರಗಳಲ್ಲಿಯೂ ‘ಇಸ್ರೇಲಿ ಕೆಫೆ’ಗಳು ಶುರುವಾಗುತ್ತಿವೆ. ಅಲ್ಲಿನ ಮೆನು ಕಾರ್ಡ್‌ನಲ್ಲಿ ‘ಕೆಫೆ ಹಾಫುಕ್’ ಎಂಬ ಹೆಸರು ರಾರಾಜಿಸುತ್ತಿದೆ. ಇದು ಕೇವಲ ಇಸ್ರೇಲ್ ದೇಶಕ್ಕೆ ಸೀಮಿತವಾಗದೇ, ಉತ್ತಮ ಗುಣಮಟ್ಟದ ಕಾಫಿಯನ್ನು ಇಷ್ಟಪಡುವ ಜಾಗತಿಕ ಸಮುದಾ ಯದ ನೆಚ್ಚಿನ ಪಾನೀಯ ವಾಗುತ್ತಿದೆ.

ಕೆಫೆ ಹಾಫುಕ್ ಕೇವಲ ಹಾಲಿನ ಮೇಲೆ ಸುರಿದ ಕಾಫಿಯಲ್ಲ. ಅದು ಇಸ್ರೇಲಿಗಳ ತಾಳ್ಮೆ, ಕಲೆ ಮತ್ತು ರುಚಿಯ ಮೇಲಿರುವ ಅವರ ಅಧಿಕಾರದ ಸಂಕೇತ. ಕಾಫಿ ವಿಷಯದಲ್ಲಿ ಅವರು ರಾಜಿ ಮಾಡಿ ಕೊಳ್ಳುವುದಿಲ್ಲ ಎಂಬುದಕ್ಕೆ ಈ ಪಾನೀಯವೇ ಜ್ವಲಂತ ಸಾಕ್ಷಿ.

ಶಾಕ್ಷುಕವಿಲ್ಲದೇ ಇಸ್ರೇಲ್ ಉಂಟೇ?

ಇಸ್ರೇಲ್‌ನ ಆಹಾರ ಪದ್ಧತಿಯ ಬಗ್ಗೆ ಮಾತನಾಡುವಾಗ ‘ಶಾಕ್ಷುಕ’ ಪ್ರಸ್ತಾಪವಿಲ್ಲದೇ ಅದು ಪೂರ್ಣ ವಾಗುವುದಿಲ್ಲ. ಮೂಲತಃ ಉತ್ತರ ಆಫ್ರಿಕಾದಿಂದ (ಟುನೀಶಿಯಾ) ಬಂದ ಈ ಖಾದ್ಯವು ಇಂದು ಇಸ್ರೇಲ್‌ನ ರಾಷ್ಟ್ರೀಯ ಉಪಾಹಾರದಂತೆ ಜನಪ್ರಿಯವಾಗಿದೆ. ನೀವು ಸಸ್ಯಾಹಾರವನ್ನು ಮಾತ್ರ ಸೇವಿಸುವವರಾಗಿದ್ದರೆ, ಇಸ್ರೇಲ್‌ನಲ್ಲಿ ನಿಮಗೆ ಸಿಗುವ ಅತ್ಯಂತ ರುಚಿಕರ ಮತ್ತು ಆರೋಗ್ಯಕರ ಆಯ್ಕೆಗಳಲ್ಲಿ ಇದು ಪ್ರಮುಖವಾದದ್ದು.

ಶಾಕ್ಷುಕ ಎಂದರೇನು? ಇದರ ಅರ್ಥವೇನು? ‘ಶಾಕ್ಷುಕ’ ಎಂಬ ಪದವು ಅರೇಬಿಕ್ ಭಾಷೆಯಿಂದ ಬಂದಿದ್ದು, ಇದರ ಅರ್ಥ ‘ಎಲ್ಲವನ್ನೂ ಒಟ್ಟಿಗೆ ಬೆರೆಸುವುದು’ ಅಥವಾ ‘ಮಿಶ್ರಣ ಮಾಡುವುದು’. ಇದು ಪ್ರಮುಖವಾಗಿ ಕೆಂಪಗೆ ಮಾಗಿದ ಟೊಮೆಟೊಗಳು, ಬೆಳ್ಳುಳ್ಳಿ, ವಿವಿಧ ಮೆಣಸಿನಕಾಯಿಗಳು ಮತ್ತು ಮಸಾಲೆ ಪದಾರ್ಥಗಳ ದಪ್ಪನೆಯ ಗ್ರೇವಿಯಲ್ಲಿ ತಯಾರಾಗುವ ಖಾದ್ಯ.

ಸಾಂಪ್ರದಾಯಿಕವಾಗಿ ಇದರ ಮೇಲೆ ಮೊಟ್ಟೆಗಳನ್ನು ಒಡೆದು ಹಾಕಿ ಬೇಯಿಸಲಾಗುತ್ತದೆ, ಆದರೆ ಸಸ್ಯಾಹಾರಿಗಳಿಗಾಗಿ ಇದರ ವಿಭಿನ್ನ ರೂಪಾಂತರಗಳು ಲಭ್ಯವಿವೆ. ಇಸ್ರೇಲ್ ಒಂದು ‘ವಲಸಿಗರ ದೇಶ’. 1950ರ ದಶಕದಲ್ಲಿ ಉತ್ತರ ಆಫ್ರಿಕಾದಿಂದ ಬಂದ ಯಹೂದಿಗಳು ಈ ಖಾದ್ಯವನ್ನು ಇಸ್ರೇಲ್ಗೆ ಪರಿಚಯಿಸಿದರು.

ಆರಂಭದಲ್ಲಿ ಇದು ಬಡವರ ಆಹಾರವೆಂದು ಪರಿಗಣಿತವಾಗಿತ್ತು. ಏಕೆಂದರೆ ಇದನ್ನು ತಯಾರಿಸಲು ಬೇಕಾದ ತರಕಾರಿಗಳು ಅಗ್ಗವಾಗಿ ಸಿಗುತ್ತಿದ್ದವು. ಆದರೆ ಇಂದು ಇದು ಐಷಾರಾಮಿ ಹೋಟೆಲ್‌ ಗಳಿಂದ ಹಿಡಿದು ಬೀದಿಬದಿಯ ಕೆಫೆಗಳವರೆಗೆ ಎಡೆ ಲಭ್ಯವಿದೆ.

ಇಸ್ರೇಲಿಗಳಿಗೆ ಶಾಕ್ಷುಕ ಎಂದರೆ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ಒಂದು ದೊಡ್ಡ ಹಂಚಿ ನಿಂದ (Skillet) ನೇರವಾಗಿ ತಿನ್ನುವ ಒಂದು ಸಮುದಾಯದ ಸಂಭ್ರಮ. ನೀವು ಕಟ್ಟುನಿಟ್ಟಿನ ಸಸ್ಯಾ ಹಾರಿಯಾಗಿದ್ದರೆ, ಮೊಟ್ಟೆಯಿಲ್ಲದ ಶಾಕ್ಷುಕವನ್ನು ಇಸ್ರೇಲ್‌ನಲ್ಲಿ ಬಹಳ ಸುಲಭವಾಗಿ ಪಡೆಯ ಬಹುದು. ಇಸ್ರೇಲಿಗಳು ಸಸ್ಯಾಹಾರದ ವಿಷಯದಲ್ಲಿ ಬಹಳ ಸೃಜನಶೀಲರು. ಮೊಟ್ಟೆಯ ಬದಲು ಇವರು ಮೊಟ್ಟೆಯ ವಿನ್ಯಾಸವನ್ನು ನೀಡಲು ಟೋಫು ಅಥವಾ ಸ್ಥಳೀಯ ಗಿಣ್ಣನ್ನು ಬಳಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹಸಿರು ಶಾಕ್ಷುಕ ಬಹಳ ಪ್ರಸಿದ್ಧ. ಇದರಲ್ಲಿ ಟೊಮೆಟೊ ಬದಲು ಪಾಲಕ್ ಸೊಪ್ಪು, ಬ್ರೊಕೋಲಿ, ಬಟಾಣಿ ಮತ್ತು ಕ್ರೀಮ್ ಬಳಸಲಾಗುತ್ತದೆ. ಇದು ಅತ್ಯಂತ ಪುಷ್ಟಿದಾಯಕ ಸಸ್ಯಾಹಾರಿ ಆಯ್ಕೆಯಾಗಿದೆ. ಬಿಳಿಬದನೆ (Eggplant), ಅಣಬೆ ಅಥವಾ ಆಲೂಗಡ್ಡೆಯನ್ನು ಗ್ರೇವಿ ಯಲ್ಲಿ ಬೆರೆಸಿ ಮಾಡುವ ಶಾಕ್ಷುಕ ಕೂಡ ಸಸ್ಯಾಹಾರಿಗಳಿಗೆ ಹೇಳಿ ಮಾಡಿಸಿದಂತಿದೆ.

ಶಾಕ್ಷುಕದ ವಿಶೇಷ ಅದರ ಸರಳತೆ ಮತ್ತು ಅದರಲ್ಲಿ ಬಳಸುವ ಮಸಾಲೆಗಳು. ಆಲಿವ್ ಎಣ್ಣೆ, ಸಾಕಷ್ಟು ಈರುಳ್ಳಿ, ಕೆಂಪು ಬೆಲ್ ಪೆಪ್ಪರ್ (ದೊಣ್ಣೆ ಮೆಣಸಿನಕಾಯಿ), ಬೆಳ್ಳುಳ್ಳಿ ಮತ್ತು ಕೆಂಪಾದ ಟೊಮೆಟೊಗಳು. ಇದರಲ್ಲಿ ‘ಪಪ್ರಿಕಾ’ ಎಂಬ ಕೆಂಪು ಮೆಣಸಿನಪುಡಿ, ಜೀರಿಗೆ ಮತ್ತು ಸ್ವಲ್ಪ ಮೆಣಸಿನ ಕಾಯಿ ಬಳಕೆ ಮಾಡಲಾಗುತ್ತದೆ. ಈ ಮಸಾಲೆಗಳೇ ಶಾಕ್ಷುಕಕ್ಕೆ ಆ ವಿಶಿಷ್ಟ ಘಮವನ್ನು ನೀಡುತ್ತವೆ.

ಎಲ್ಲವನ್ನೂ ಒಂದು ಕಬ್ಬಿಣದ ಹಂಚಿನಲ್ಲಿ ದೀರ್ಘಕಾಲ ಬೇಯಿಸಲಾಗುತ್ತದೆ. ಗ್ರೇವಿ ದಪ್ಪವಾಗಿ ತಳ ಹಿಡಿಯುವ ಹಂತಕ್ಕೆ ಬಂದಾಗ ಅದರ ರುಚಿ ದುಪ್ಪಟ್ಟಾಗುತ್ತದೆ. ಶಾಕ್ಷುಕವನ್ನು ಚಮಚದಿಂದ ತಿನ್ನುವುದಿಲ್ಲ!

ಇದನ್ನು ತಿನ್ನಲು ಇಸ್ರೇಲ್‌ನ ಪ್ರಸಿದ್ಧ ‘ಪಿಟಾ ಬ್ರೆಡ್’ ಅಥವಾ ‘ಹಲ್ಲಾ’ ಎಂಬ ಮೃದುವಾದ ಬ್ರೆಡ್ ಅತ್ಯಗತ್ಯ. ಬ್ರೆಡ್‌ನ ಒಂದು ತುಂಡನ್ನು ಕತ್ತರಿಸಿ, ಅದನ್ನು ಬಿಸಿಯಾದ ಗ್ರೇವಿಯಲ್ಲಿ ಅದ್ದಿ ತಿನ್ನು ವುದೇ ಒಂದು ಸುಖ. ಅದರ ಜತೆಗೆ ಸಣ್ಣದಾಗಿ ಕತ್ತರಿಸಿದ ಇಸ್ರೇಲಿ ಸಲಾಡ್ (ಟೊಮೆಟೊ ಮತ್ತು ಸೌತೆಕಾಯಿ ಮಿಶ್ರಣ) ಇದ್ದರೆ ಅದು ಪರಿಪೂರ್ಣ ಊಟವಾಗುತ್ತದೆ.

ಸಸ್ಯಾಹಾರಿಗಳಿಗೆ ಇದೊಂದು ಉತ್ತಮ ಪ್ರೋಟೀನ್ ಮತ್ತು ವಿಟಮಿನ್‌ಯುಕ್ತ ಆಹಾರ. ಟೊಮೆಟೊ ದಲ್ಲಿರುವ ‘ಲೈಕೋಪೀನ್’ ಮತ್ತು ತರಕಾರಿಗಳಲ್ಲಿರುವ ನಾರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಸ್ರೇಲಿಗಳು ಇದನ್ನು ಉಪಾಹಾರಕ್ಕೆ ಮಾತ್ರವಲ್ಲದೆ, ರಾತ್ರಿಯ ಊಟಕ್ಕೂ ಇಷ್ಟಪಡುತ್ತಾರೆ. ಏಕೆಂದರೆ ಇದು ಹೊಟ್ಟೆಗೆ ಹಗುರ. ಇದು ಇಸ್ರೇಲಿಗಳ ‘ಬೆರೆತು ಬಾಳುವ’ ಗುಣಕ್ಕೆ ಸಾಕ್ಷಿಯಂತಿದೆ.

ಇಲ್ಲಿ ಪ್ಲಾಸ್ಟಿಕ್ ಸರ್ಜರಿ ಸಹಜ ಇಸ್ರೇಲಿಗರಿಗೆ ಪ್ಲಾಸ್ಟಿಕ್ ಸರ್ಜರಿ ಎಂಬುದು ಕೇವಲ ವೈದ್ಯಕೀಯ ಚಿಕಿತ್ಸಾ ಪ್ರಕ್ರಿಯೆಯಲ್ಲ, ಅದೊಂದು ಜೀವನಶೈಲಿ. ‘ಆಪರೇಷನ್ ಇಲ್ಲದ ಸುಂದರಿಯರಿಲ್ಲ’ ಎನ್ನುವ ಮಾತು ಸ್ವಲ್ಪ ತಮಾಷೆಯಾಗಿ ಕಂಡರೂ, ಅದರ ಹಿಂದೆ ಆಳವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ.

ಇಸ್ರೇಲ್‌ನ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದ ಟೆಲ್ ಅವಿವ್ ಅನ್ನು ಹೆಚ್ಚಾಗಿ ‘ಮಧ್ಯ ಪ್ರಾಚ್ಯದ ಪ್ಯಾರಿಸ್’ ಎಂದು ಕರೆಯಲಾಗುತ್ತದೆ. ಇಲ್ಲಿನ ಬೀದಿಗಳಲ್ಲಿ ನಡೆದರೆ ನಮಗೆ ಕಾಣುವುದು ಅತ್ಯಾಧುನಿಕ ಫ್ಯಾಷನ್ ಮತ್ತು ಅಷ್ಟೇ ಆಕರ್ಷಕವಾಗಿ ಕಾಣುವ ವ್ಯಕ್ತಿಗಳು. ಆದರೆ ಈ ಆಕರ್ಷಣೆ ಯ ಹಿಂದೆ ಕತ್ತರಿ-ಹೊಲಿಗೆಯ (ಸರ್ಜರಿ) ಕೈಚಳಕವಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ನಮ್ಮಲ್ಲಿ ಜನರು ಹೇರ್‌ಕಟ್ ಮಾಡಿಸಿಕೊಳ್ಳಲು ಅಥವಾ ಬ್ಯೂಟಿ ಪಾರ್ಲರ್‌ಗೆ ಹೋಗಲು ಎಷ್ಟು ಸಹಜವಾಗಿ ಯೋಚಿಸುತ್ತಾರೋ, ಟೆಲ್ ಅವಿವ್‌ನಲ್ಲಿ ‘ರೈನೋಪ್ಲ್ಯಾಸ್ಟಿ’ (ಮೂಗಿನ ಶಸ್ತ್ರಚಿಕಿತ್ಸೆ) ಮಾಡಿಸಿಕೊಳ್ಳುವುದನ್ನು ಅಷ್ಟೇ ಸಹಜವಾಗಿ ಪರಿಗಣಿಸುತ್ತಾರೆ. ಅಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡ ವಿಷಯವನ್ನು ಯಾರೂ ಮುಚ್ಚಿಡುವುದಿಲ್ಲ.

ಬದಲಿಗೆ, ‘ನಾನು ನನ್ನ ಮೂಗನ್ನು ತಿದ್ದಿಸಿಕೊಂಡಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದು ಅಲ್ಲಿನ ಸಾಮಾಜಿಕ ಗೌರವದ ಸಂಕೇತವೂ ಹೌದು. ಹದಿಹರೆಯದ ಹುಡುಗಿಯರು ತಮ್ಮ 16ನೇ ಅಥವಾ 18ನೇ ಹುಟ್ಟುಹಬ್ಬಕ್ಕೆ ಪೋಷಕರಲ್ಲಿ ಐಫೋನ್ ಅಥವಾ ಬೈಕ್ ಕೇಳುವ ಬದಲು, ‘ನನಗೆ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಡಿ’ ಎಂದು ಬೇಡಿಕೆ ಇಡುತ್ತಾರೆ.

ಪೋಷಕರು ಕೂಡ ಇದನ್ನು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಹೂಡಿಕೆ ಎಂದು ಭಾವಿಸಿ ಸಂತೋಷದಿಂದ ಒಪ್ಪುತ್ತಾರೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಜೀ ಅಥವಾ ದೈಹಿಕ ಲಕ್ಷಣಗಳು. ಯಹೂದಿ ಮೂಲದ ಅನೇಕ ಜನರಲ್ಲಿ ಮೂಗು ಸ್ವಲ್ಪ ದೊಡ್ಡದಾಗಿ ಅಥವಾ ಬಾಗಿದಂತೆ ಇರುತ್ತದೆ (ಇದನ್ನು ‘ರೋಮನ್ ನೋಸ್’ ಎನ್ನಲಾಗುತ್ತದೆ). ಸೌಂದರ್ಯದ ಇಂದಿನ ಮಾನದಂಡಗಳಿಗೆ ತಕ್ಕಂತೆ ತಮ್ಮನ್ನು ಬದಲಿಸಿಕೊಳ್ಳಲು ಅವರು ಈ ಹಾದಿ ತುಳಿಯುತ್ತಾರೆ. ಸೌಂದರ್ಯದ ಮೇಲಿನ ಅತಿಯಾದ ವ್ಯಾಮೋಹಕ್ಕೆ ಕಾರಣಗಳೇನು?

ಇಸ್ರೇಲ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಕಡ್ಡಾಯ ಸೇನಾಸೇವೆ ಇರುತ್ತದೆ. ಚಿಕ್ಕ ವಯಸ್ಸಿನ ಸಮವಸ್ತ್ರ ಧರಿಸಿ ಕಠಿಣ ತರಬೇತಿ ಪಡೆಯುವ ಇವರಿಗೆ, ತಮ್ಮ ದೈಹಿಕ ವಿನ್ಯಾಸದ ಬಗ್ಗೆ ಹೆಚ್ಚಿನ ಅರಿವು ಮೂಡುತ್ತದೆ. ಸೇನೆಯಿಂದ ಹೊರಬಂದ ನಂತರ, ತಮ್ಮ ‘ಲುಕ್’ ಬದಲಿಸಿಕೊಳ್ಳಲು ಇವರು ಸರ್ಜರಿಯ ಮೊರೆಹೋಗುತ್ತಾರೆ.

ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್ ಯುಗದಲ್ಲಿ ‘ಫೊಟೋಜೆನಿಕ್’ ಆಗಿ ಕಾಣುವುದು ಅನಿವಾರ್ಯ ಎಂಬಂತಾಗಿದೆ. ಟೆಲ್ ಅವಿವ್ ಜಾಗತಿಕ ಟೆಕ್-ಹಬ್ ಆಗಿರುವುದರಿಂದ, ಅಲ್ಲಿನ ಯುವಜನತೆ ಡಿಜಿಟಲ್ ಜಗತ್ತಿಗೆ ಅತಿ ಬೇಗನೆ ತೆರೆದುಕೊಂಡಿzರೆ. ಇಸ್ರೇಲ್ ಜಗತ್ತಿನ ಅತ್ಯುತ್ತಮ ವೈದ್ಯಕೀಯ ತಂತ್ರeನವನ್ನು ಹೊಂದಿದೆ. ನುರಿತ ಸರ್ಜನ್‌ಗಳು ಇರುವುದರಿಂದ ಭಯವಿಲ್ಲದೆ ಜನರು ಈ ಚಿಕಿತ್ಸೆ ಪಡೆಯುತ್ತಾರೆ.

ಪ್ಲಾಸ್ಟಿಕ್ ಸರ್ಜರಿ ಕೇವಲ ಸುಂದರಿಯರ ಕಥೆಯಲ್ಲ, ಸುಂದರ ಪುರುಷರ ಕಥೆಯೂ ಹೌದು. ಇತ್ತೀಚಿನ ವರ್ಷಗಳಲ್ಲಿ ಟೆಲ್ ಅವಿವ್‌ನಲ್ಲಿ ಪುರುಷರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಿದ್ದಾರೆ. ಗಲ್ಲದ ವಿನ್ಯಾಸ (Jawline), ಹೊಟ್ಟೆಯ ಕೊಬ್ಬು ಕರಗಿಸುವುದು ಮತ್ತು ಕೂದಲು ಕಸಿ ಮಾಡಿಸಿಕೊಳ್ಳುವುದು ಅಲ್ಲಿನ ಪುರುಷರಲ್ಲಿ ಸಾಮಾನ್ಯವಾಗಿದೆ.

ಯಾವುದೇ ವಿಷಯಕ್ಕೆ ಎರಡು ಮುಖಗಳಿರುವಂತೆ, ಈ ಸರ್ಜರಿ ಕಲ್ಚರ್‌ಗೂ ಕೆಲವು ಟೀಕೆಗಳಿವೆ. ಅನೇಕರು ಸರ್ಜರಿಯ ನಂತರ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಹೆಚ್ಚು ಆತ್ಮ ವಿಶ್ವಾಸದಿಂದ ಇರುವುದಾಗಿ ಹೇಳುತ್ತಾರೆ. ಎಲ್ಲರೂ ಒಂದೇ ರೀತಿಯ ‘ಪರಿಪೂರ್ಣ’ ಮೂಗು ಅಥವಾ ಮುಖದ ವಿನ್ಯಾಸ ಹೊಂದಲು ಬಯಸುವುದರಿಂದ, ಮಾನವನ ಸಹಜ ವೈವಿಧ್ಯ ನಾಶವಾಗುತ್ತಿದೆ.

ಎಲ್ಲರೂ ಒಂದೇ ಫ್ಯಾಕ್ಟರಿಯಿಂದ ಬಂದ ಬೊಂಬೆಗಳಂತೆ ಕಾಣುತ್ತಿದ್ದಾರೆ ಎಂಬ ಆತಂಕವೂ ಇದೆ. ಸೌಂದರ್ಯ ಎಂಬುದು ಕೇವಲ ಬಾಹ್ಯರೂಪದಲ್ಲಿದೆ ಎಂದು ನಂಬುವ ಈ ಸಮಾಜದಲ್ಲಿ, ಶಸ್ತ್ರ ಚಿಕಿತ್ಸೆ ಎಂಬುದು ಒಂದು ಕಲೆಯಾಗಿ ಬೆಳೆದಿದೆ. ಅಲ್ಲಿನವರಿಗೆ ಇದು ‘ತಪ್ಪು’ ಅಥವಾ ‘ಕೃತಕ’ ಎನಿಸುವುದಿಲ್ಲ, ಬದಲಿಗೆ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳುವ ಒಂದು ಪ್ರಯತ್ನವಷ್ಟೇ.