Dr D C Nanjunda Column: ವಿವಿಗಳಲ್ಲಿ ಹಣವಿಲ್ಲ, ಆದರೂ ಭ್ರಷ್ಟಾಚಾರಕ್ಕೆ ಕೊರತೆಯಿಲ್ಲ..!
ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ ಹೆಚ್ಚಿನವು ರಾಜ್ಯ ಸರಕಾರಗಳ ಅನುದಾನಗಳ ಮೇಲೆ ಅವಲಂಬಿತವಾಗಿದ್ದು, ಹಲವಾರು ಕಡೆ ವೇತನ ಮತ್ತು ಪಿಂಚಣಿ ವೆಚ್ಚಗಳಿಗಾಗಿ ಒಟ್ಟು ಬಜೆಟ್‌ನ ಶೇ.70-80ರಷ್ಟು ಖರ್ಚಾಗುತ್ತಿದೆ. ಇದರ ಪರಿಣಾಮವಾಗಿ ಸಂಶೋಧನೆ, ಗ್ರಂಥಾ ಲಯ, ಪ್ರಯೋಗಾಲಯ, ಕ್ಷೇತ್ರ ಅಧ್ಯಯನ, ವಿದ್ಯಾರ್ಥಿ ಕಲ್ಯಾಣ ಸೇವೆಗಳು ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಬೇಕಾಗುವ ಹಣದಲ್ಲಿ ಕೊರತೆಯಾಗುತ್ತಿದೆ.
-
ವಿಪರ್ಯಾಸ
ಡಾ.ಡಿ.ಸಿ.ನಂಜುಂಡ
ಆರ್ಥಿಕ ಕೊರತೆಯ ಮಧ್ಯೆ ವಿವಿಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚುತ್ತಿರು ವುದು ಆತಂಕದ ಸಂಗತಿ. ನಿಯಮಿತ ನೇಮಕಾತಿಗಳಿಗೆ ಸರಕಾರದ ಅನುಮತಿ ಸಿಗದಿದ್ದಾಗ, ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಸಿಬ್ಬಂದಿ ಮತ್ತು ಒಪ್ಪಂದ ಆಧಾ ರಿತ ಹುದ್ದೆಗಳ ನೇಮಕಾತಿ ಪ್ರಮಾಣ ಹೆಚ್ಚುತ್ತದೆ. ಇದರಲ್ಲಿ ಭ್ರಷ್ಟಾಚಾರ ನಡೆಯು ತ್ತಿರುವುದು ವರದಿಯಾಗುತ್ತಿದೆ.
ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯು ಇಂದು ಗಂಭೀರ ಸ್ವರೂಪದ ‘ಆಡಳಿತಾತ್ಮಕ’ ಸವಾಲುಗಳನ್ನು ಎದುರಿಸುತ್ತಿದೆ. ಸುಮಾರು 140 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶ ದಲ್ಲಿ ಉನ್ನತ ಶಿಕ್ಷಣವು ಸಾಮಾಜಿಕ ಚಲನೆ, ಸಮಾನ ಅವಕಾಶ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಬಲವರ್ಧನೆಗೆ ಪ್ರಮುಖ ಸಾಧನವಾಗಿದೆ.
ಮಧ್ಯಮ ಮತ್ತು ಹಿಂದುಳಿದ ವರ್ಗಗಳಿಗೆ ಉನ್ನತ ಶಿಕ್ಷಣವೇ ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಯ ಮುಖ್ಯದಾರಿ. ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾದ ‘ವಿಶ್ವವಿದ್ಯಾಲಯ ಅನುದಾನ ಆಯೋಗ’ದ (ಯುಜಿಸಿ) ಪ್ರಕಾರ ಭಾರತದಲ್ಲಿ ಸುಮಾರು 1500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಸುಮಾರು 53000 ಕಾಲೇಜು ಗಳು ಕಾರ್ಯನಿರ್ವಹಿಸುತ್ತಿವೆ.
ಇಷ್ಟೊಂದು ವಿಶಾಲ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದು ಒಂದು ದೊಡ್ಡ ಆಡಳಿತಾತ್ಮಕ ಸವಾಲೇ ಸರಿ. ಆದರೆ ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ವೆಚ್ಚದಲ್ಲಿ ಉಂಟಾದ ಕಡಿತ, ಅನುದಾನ ಬಿಡುಗಡೆ ವಿಳಂಬ, ವೇತನ ಮತ್ತು ಪಿಂಚಣಿ ಬಾಧ್ಯತೆಗಳ ಏರಿಕೆ, ಮೂಲಸೌಕರ್ಯ ನಿರ್ವಹಣಾ ವೆಚ್ಚಗಳ ಹೆಚ್ಚಳದಿಂದಾಗಿ ಸರಕಾರಿ ವಿಶ್ವವಿದ್ಯಾಲಯಗಳು ತೀವ್ರವಾದ ಆರ್ಥಿಕ ಒತ್ತಡವನ್ನು ಅನುಭವಿಸುತ್ತಿವೆ.
ಶಿಕ್ಷಣ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಒಟ್ಟು ಶಿಕ್ಷಣ ವೆಚ್ಚವು ಜಿಡಿಪಿಯ ಸುಮಾರು ಶೇ.4ರಿಂದ 4.5ರ ಮಟ್ಟದಲ್ಲೇ ಉಳಿದಿದೆ; ದಶಕಗಳಿಂದ ಉಲ್ಲೇಖವಾಗುತ್ತಿರುವ ಶೇ.6ರ ಗುರಿ ಇನ್ನೂ ಸಾಧನೆಯಾಗಿಲ್ಲ.
ಇದನ್ನೂ ಓದಿ: Dr D C Nanjunda Column: ಭಾರತದಲ್ಲಿ ಹೊಸ ಮಾದರಿಯ ಆರ್ಥಿಕ ಕ್ರಾಂತಿ !
ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ ಹೆಚ್ಚಿನವು ರಾಜ್ಯ ಸರಕಾರಗಳ ಅನುದಾನಗಳ ಮೇಲೆ ಅವಲಂಬಿತವಾಗಿದ್ದು, ಹಲವಾರು ಕಡೆ ವೇತನ ಮತ್ತು ಪಿಂಚಣಿ ವೆಚ್ಚಗಳಿಗಾಗಿ ಒಟ್ಟು ಬಜೆಟ್‌ನ ಶೇ.70-80ರಷ್ಟು ಖರ್ಚಾಗುತ್ತಿದೆ. ಇದರ ಪರಿಣಾಮವಾಗಿ ಸಂಶೋಧನೆ, ಗ್ರಂಥಾ ಲಯ, ಪ್ರಯೋಗಾಲಯ, ಕ್ಷೇತ್ರ ಅಧ್ಯಯನ, ವಿದ್ಯಾರ್ಥಿ ಕಲ್ಯಾಣ ಸೇವೆಗಳು ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಬೇಕಾಗುವ ಹಣದಲ್ಲಿ ಕೊರತೆಯಾಗುತ್ತಿದೆ. ಅನುದಾನ ಬಿಡುಗಡೆ ವಿಳಂಬವಾಗುವುದರಿಂದ, ವಿವಿಧ ದೈನಂದಿನ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳೇ ಸಂಕಷ್ಟಕ್ಕೆ ಸಿಲುಕುತ್ತಿವೆ.
ಇಂಥ ತೀವ್ರ ಆರ್ಥಿಕ ಕೊರತೆಯ ವಾತಾವರಣದ ಮಧ್ಯೆ ವಿವಿಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚುತ್ತಿರುವುದು ಸೋಜಿಗದ/ಆತಂಕದ ಸಂಗತಿ. ವಿಶೇಷವಾಗಿ ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದೆ. ಕೆಲವು ವಿವಿಗಳಲ್ಲಿ ಶೇ.60 ರಿಂದ 70ರಷ್ಟು ಅಧ್ಯಾಪಕರ ಹುದ್ದೆಗಳು ಖಾಲಿ ಉಳಿದಿವೆ ಎಂದು ವರದಿಗಳು ಸೂಚಿಸುತ್ತಿವೆ.
ನಿಯಮಿತ ನೇಮಕಾತಿಗಳಿಗೆ ಸರಕಾರದ ಅನುಮತಿ ಸಿಗದಿದ್ದಾಗ, ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಸಿಬ್ಬಂದಿ ಮತ್ತು ಒಪ್ಪಂದ ಆಧಾರಿತ ಹುದ್ದೆಗಳ ನೇಮಕಾತಿ ಪ್ರಮಾಣ ಹೆಚ್ಚು ತ್ತದೆ. ಇದರಲ್ಲಿ ಅತಿಯಾಗಿ ಭ್ರಷ್ಟಾಚಾರ ನಡೆಯುತ್ತಿರುವುದು ವರದಿಯಾಗುತ್ತಿದೆ. ಸರಕಾರ ದಲ್ಲಿ ಹಣವಿಲ್ಲದಿರುವುದರಿಂದ ಖಾಲಿ ಹುದ್ದೆಗಳಿದ್ದರೂ ನೇಮಕಾತಿ ಪ್ರಕ್ರಿಯೆ ನಡೆಯ ದಿರುವುದು ಮತ್ತು ನೇಮಕಾತಿಯಲ್ಲಿ ರಾಜಕೀಯ ಹಾಗೂ ಸ್ವಜನ ಪಕ್ಷಪಾತ ಕಂಡು ಬರುತ್ತದೆ ಎಂಬ ಆರೋಪಗಳು ವಿವಿಗಳ ನೈತಿಕ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತಿವೆ.
ವಿವಿಗಳಲ್ಲಿ ನಡೆಯವ ಖರೀದಿ, ದರಪಟ್ಟಿ ನಿಗದಿ ಮತ್ತು ಟೆಂಡರ್ ಪ್ರಕ್ರಿಯೆಗಳಲ್ಲೂ ಭ್ರಷ್ಟಾಚಾರ ಕಂಡುಬರುತ್ತಿದೆ. ಪ್ರಯೋಗಾಲಯ ಉಪಕರಣಗಳು, ಕಟ್ಟಡ ಕಾಮಗಾರಿಗಳು, ಮೂಲಸೌಕರ್ಯ ಸಂಬಂಧಿತ ಖರೀದಿಗಳಲ್ಲಿ ಹೆಚ್ಚುವರಿ ದರ ನಿಗದಿ, ಆಯ್ದ ಸರಬರಾಜು ದಾರರಿಗೆ ಅನುಕೂಲ ಕಲ್ಪಿಸುವಿಕೆ, ಬಳಕೆ ಪ್ರಮಾಣಪತ್ರಗಳ ಸಲ್ಲಿಕೆಯಲ್ಲಿನ ವಿಳಂಬ ಮುಂತಾದ ಸಮಸ್ಯೆಗಳು ಕೆಲವು ವಿವಿಗಳಲ್ಲಿ ಬೆಳಕಿಗೆ ಬಂದಿವೆ.
ಇ-ಟೆಂಡರಿಂಗ್ ವ್ಯವಸ್ಥೆ ಜಾರಿಯಲ್ಲಿದ್ದರೂ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಸಂಶೋ ಧನಾ ಅನುದಾನಗಳ ಮತ್ತು ವಿಚಾರ ಸಂಕಿರಣಗಳ ಹಣದ ವಿಚಾರದಲ್ಲೂ ಆಡಳಿತಾತ್ಮಕ ಜಟಿಲತೆಗಳು ಮತ್ತು ಅನವಶ್ಯಕ ವೆಚ್ಚಗಳ ಆರೋಪಗಳು ಇಂದು ಕೇಳಿ ಬರುತ್ತಿವೆ.
ಈ ಮಧ್ಯೆ ಕರ್ನಾಟಕದ ರಾಜ್ಯಪಾಲರು ರಾಜ್ಯದ ಹಲವಾರು ಸರಕಾರಿ ವಿವಿಗಳಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತಾದ ತನಿಖೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದಾರೆ; ಇದು ನಮ್ಮ ವಿವಿಗಳಲ್ಲಿ ನಡೆಯುವ ಭ್ರಷ್ಟಾಚಾರದ ತೀವ್ರತೆಯನ್ನು ಮತ್ತಷ್ಟು ಸ್ಪಷ್ಟ ಪಡಿಸಿದೆ ಎನ್ನಬಹುದು. 2025ರ ಅಂತ್ಯದಲ್ಲಿ, ರಾಣಿ ಚೆನ್ನಮ್ಮ ವಿವಿಯಲ್ಲಿನ ಪದವಿ ಪ್ರಮಾಣಪತ್ರಗಳ ಖರೀದಿ/ಟೆಂಡರ್ ಪ್ರಕ್ರಿಯೆಯಲ್ಲಿನ ಅಸಮರ್ಪಕತೆಗಳ ಕುರಿತು ಆರ್‌ಟಿಐ ಕಾರ್ಯಕರ್ತರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.
5.18 ಕೋಟಿ ರುಪಾಯಿಯಷ್ಟು ಮೂಲ ಅಂದಾಜುವೆಚ್ಚವನ್ನು ಹೊಂದಿದ್ದ ಟೆಂಡರ್ ಅನ್ನು ಅಂತಿಮವಾಗಿ 6.44 ಕೋಟಿಗೆ ನೀಡಲಾಗಿದೆ ಹಾಗೂ ಸುಮಾರು 2 ಕೋಟಿ ರುಪಾಯಿಯಷ್ಟು ಹೆಚ್ಚುವರಿ ವೆಚ್ಚವಾಗಿದೆ ಎಂಬ ಆರೋಪಗಳು ಕೇಳಿ ಬಂದವು. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ಮತ್ತು ರಾಜ್ಯಪಾಲರ ಸಮಿತಿಯ ತನಿಖೆ ಮುಂದು ವರಿಯುತ್ತಿದೆ.
ಹಿಂದಿನ ವರ್ಷಗಳಲ್ಲಿ, ಕರ್ನಾಟಕ ಮುಕ್ತ ವಿವಿಯಲ್ಲಿನ ದೂರಶಿಕ್ಷಣ ಕೇಂದ್ರಗಳ ವಿಷಯದಲ್ಲಿ ಹೊರರಾಜ್ಯಗಳ ಅಧ್ಯಯನ ಕೇಂದ್ರಗಳ ಮೂಲಕ ಅನಧಿಕೃತವಾಗಿ ಶುಲ್ಕ ಸಂಗ್ರಹಿಸಿದ ಆರೋಪಗಳು ಕೇಳಿಬಂದಿದ್ದು, 2010-15ರ ಅವಧಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಪರಿಶೀಲನೆಗೆ ಶಿಫಾರಸು ಮಾಡಲಾಗಿತ್ತು.
2019-10ರಿಂದ 2015-16ರ ಅವಽಯವರೆಗೆ ದೂರಶಿಕ್ಷಣ ಮತ್ತು ಸಹಯೋಗಿ ಸಂಸ್ಥೆಗಳ ಮೂಲಕ ಸಂಗ್ರಹಿಸಿದ ವಿದ್ಯಾರ್ಥಿ ಶುಲ್ಕದಲ್ಲಿ, 250-300 ಕೋಟಿ ರುಪಾಯಿಯಷ್ಟು ದುರುಪಯೋಗ ನಡೆದಿದೆ ಎಂಬ ಆರೋಪದ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡ ಸಿಬಿಐ ತನಿಖೆಯನ್ನು ಆರಂಭಿಸಿತ್ತು. ಇದರಿಂದ ಯುಜಿಸಿ ಮಾನ್ಯತೆ ರದ್ದಾಗಿತ್ತು.
ಇದೀಗ ಅನುಮತಿಯಿಲ್ಲದೆ ಮುಕ್ತ ವಿವಿಯಲ್ಲಿ ಹೆಚ್ಚುವರಿಯಾಗಿ ಹೊರಗುತ್ತಿಗೆ ನೌಕರ ರನ್ನು ನೇಮಕ ಮಾಡಿಕೊಂಡಿರುವುದರಿಂದಾಗಿ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಉತ್ತರ ವಿವಿಯಲ್ಲಿ ಕಂಡುಬಂದ ಭ್ರಷ್ಟಾಚಾರದ ಗಂಭೀರ ಪ್ರಕರಣ ವು ಅಂಕಿಗಳ ತಿದ್ದುಪಡಿ ಸಂಬಂಧ ಆಗಿದ್ದು, ಇದು ವಿದ್ಯಾರ್ಥಿಗಳ ಭರವಸೆ ಮತ್ತು ವಿಶ್ವವಿದ್ಯಾಲಯದ ಹೆಸರಿಗೆ ಕಳಂಕ ತಂದಿದೆ.
ಧಾರವಾಡದ ಕರ್ನಾಟಕ ವಿವಿಯಲ್ಲಿ ಭ್ರಷ್ಟಾಚಾರ, ಹಣಕಾಸು ದುರುಪಯೋಗ ಮತ್ತು ಅಧಿಕಾರದ ದುರುಪಯೋಗ ಕುರಿತು ಹಲವು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. 2014ರಲ್ಲಿ, ಕುಲಪತಿ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತವು ಪ್ರಕರಣವನ್ನು ದಾಖಲಿಸಿತ್ತು, ಕೆಲವರ ಬಂಧನವೂ ಆಗಿತ್ತು.
ಸೋಲಾರ್ ಯೋಜನೆ, ನಿಶ್ಚಿತ ನಿಽಗಳ ದುರುಪಯೋಗ, ನೇಮಕಾತಿ, ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಂಥ ಘಟನೆಗಳು ಈ ವಿವಿಗೆ ಕಪ್ಪುಚುಕ್ಕೆಯನ್ನು ತಂದಿವೆ. ಕುವೆಂಪು ವಿವಿಯಲ್ಲಿ ಕಳೆದ ಕೆಲ ವರ್ಷಗಳಲ್ಲಿ, ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ದುರುಪಯೋಗದ ಕುರಿತಾದ ಒಂದಿಷ್ಟು ಆರೋಪಗಳು ಹೊಮ್ಮಿವೆ.
ಮುಖ್ಯವಾಗಿ ಇಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ, ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಪರೀಕ್ಷಾ ನಿರ್ವಹಣೆಯಲ್ಲಿನ ಭ್ರಷ್ಟಾಚಾರ ಕುರಿತಾದ ದೂರುಗಳು ದಾಖಲಾಗಿದ್ದವು. ಸರಕಾರ ಮತ್ತು ರಾಜ್ಯಪಾಲರ ಮಟ್ಟದಲ್ಲಿ ಈಗಾಗಲೇ ತನಿಖಾ ಸಮಿತಿಗಳು ರಚಿಸಲ್ಪಟ್ಟಿದ್ದರೂ ಯಾವುದೂ ಉಪಯೋಗಕ್ಕೆ ಬಂದಿಲ್ಲ.
ಜನಪದ ವಿವಿಯಲ್ಲಿ ಲ್ಯಾಪ್‌ಟಾಪ್ ಹಂಚಿಕೆಯಲ್ಲಿನ ಭ್ರಷ್ಟಾಚಾರ, ಗುಲ್ಬರ್ಗಾ ವಿವಿ ಯಲ್ಲಿನ ಅಂಕಪಟ್ಟಿ ಅವ್ಯವಹಾರ, ತುಮಕೂರು ವಿವಿಯಲ್ಲಿ ನೇಮಕಾತಿ ಮತ್ತು ಬಡ್ತಿಗೆ ಸಂಬಂಧಿಸಿದಂತೆ ಅವ್ಯವಹಾರ, ಮಂಗಳೂರು ವಿವಿಯಲ್ಲಿ ಕಟ್ಟಡದ ನಿರ್ಮಾಣದಲ್ಲಿ ಉಂಟಾದ 11 ಕೋಟಿ ರುಪಾಯಿ ಅವ್ಯವಹಾರ ಮುಂತಾದವುಗಳ ಕುರಿತಾಗಿಯೂ ರಾಜ್ಯಪಾಲರು ತನಿಖಾ ಸಮಿತಿಗಳನ್ನು ರಚಿಸಿದ್ದಾರೆ.
ಮೈಸೂರು ವಿವಿಯಲ್ಲಿ ಕೆಲ ವರ್ಷಗಳ ಹಿಂದೆ ಭೂಮಿಯ ಹಂಚಿಕೆ, ಕಟ್ಟಡ ಕಾಮಗಾರಿ ಗಳ ಒಪ್ಪಂದಗಳು ಮತ್ತು ನೇಮಕಾತಿ ಸಂಬಂಧಿತ ವಿವಾದಗಳು ಸುದ್ದಿಯಾಗಿದ್ದವು. ಹಾಗೆಯೇ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಪರೀಕ್ಷಾ ಮೌಲ್ಯಮಾಪನ ಮತ್ತು ನೇಮಕಾತಿ ಪ್ರಕ್ರಿಯೆಗಳ ಕುರಿತು ಪ್ರಶ್ನೆಗಳು ಉದ್ಭವಿಸಿದ್ದವು.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಈ ಘಟನೆ ಗಳು ಸೂಚಿಸುತ್ತವೆ. ಭಾರತದ ಒಂದಿಷ್ಟು ವಿಶ್ವವಿದ್ಯಾಲಯಗಳಲ್ಲಿ ಹೀಗೆ ವ್ಯಾಪಕ ವಾಗಿರುವ ಭ್ರಷ್ಟಾಚಾರವು ಕೇವಲ ವ್ಯಕ್ತಿಗತ ನೈತಿಕ ಕುಸಿತದ ಪರಿಣಾಮವಲ್ಲ; ಅದು ಆಡಳಿತಾತ್ಮಕ, ರಚನಾತ್ಮಕ ಮತ್ತು ವ್ಯವಸ್ಥಾತ್ಮಕ ದುರ್ಬಲತೆಗಳ ಸಂಕೀರ್ಣ ಪರಿಣಾಮ ವಾಗಿದೆ.
ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ‘ಯುಜಿಸಿ’ ಮತ್ತು ‘ನ್ಯಾಕ್’ನಂಥ ಸಂಸ್ಥೆಗಳು ವ್ಯಾಪಕ ಜವಾಬ್ದಾರಿಗಳನ್ನು ಹೊಂದಿದ್ದರೂ, ನಿರಂತರ ಮೇಲ್ವಿಚಾರಣೆಗೆ ಅಗತ್ಯವಾದ ಮಾನವ ಸಂಪನ್ಮೂಲ, ಹಣಕಾಸು ಮತ್ತು ತಂತ್ರಜ್ಞಾನ ಮೂಲಸೌಕರ್ಯಗಳ ಕೊರತೆ ಇರುವುದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ.
ವಿವಿಗಳ ಉಪಕುಲಪತಿ, ಕುಲಸಚಿವ ಮತ್ತು ಸಿಂಡಿಕೇಟ್ ಸದಸ್ಯರ ನೇಮಕಾತಿಗಳಲ್ಲಿನ ರಾಜಕೀಯ ಹಸ್ತಕ್ಷೇಪವು ಕೆಲವೊಮ್ಮೆ ಅರ್ಹತೆಗಿಂತ ನಿಷ್ಠೆಗೆ ಆದ್ಯತೆ ನೀಡುವ ವಾತಾ ವರಣವನ್ನು ಸೃಷ್ಟಿಸುತ್ತಿದೆ. ಸರಕಾರದ ಅನುದಾನಗಳ ವಿಳಂಬ, ಆರ್ಥಿಕ ಕೊರತೆ, ಟೆಂಡರ್ ಅಕ್ರಮಗಳು ವ್ಯಾಪಕ ಭ್ರಷ್ಟಾಚಾರಕ್ಕೆ ದಾರಿಮಾಡಿಕೊಡುತ್ತವೆ.
ಬೋಧಕರ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಳಲ್ಲಿ ಲಂಚಕ್ಕೆ ಮತ್ತು ಪ್ರಮಾಣಪತ್ರಗಳ ನೀಡಿಕೆಯ ವಿಚಾರದಲ್ಲಿ ಭ್ರಷ್ಟಾಚಾರಕ್ಕೆ ಹೆಚ್ಚಿನ ಅವಕಾಶವಿರುತ್ತದೆ. ಪ್ರವೇಶ ಮತ್ತು ಪರೀಕ್ಷಾ ವ್ಯವಸ್ಥೆಗಳಲ್ಲಿ ಅವ್ಯವಹಾರ, ಶುಲ್ಕಗಳ ದುರುಪಯೋಗ, ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಿ ಅಕ್ರಮ ತಿದ್ದುಪಾಟು ಮುಂತಾದ ಸಮಸ್ಯೆ ಗಳು ಪಾರದರ್ಶಕ ಡಿಜಿಟಲ್ ವ್ಯವಸ್ಥೆಗಳ ಕೊರತೆಯಿಂದಾಗಿ ಹೆಚ್ಚಾಗುತ್ತಿವೆ.
ಇವನ್ನೆಲ್ಲಾ ಪತ್ತೆ ಹಚ್ಚಲು ಯಾವ ಸಮಿತಿಗಳಿಗೂ ಸಾಧ್ಯವಿಲ್ಲ. ವಿವಿಗಳಲ್ಲಿನ ಬೌದ್ಧಿಕ ಭ್ರಷ್ಟಾಚಾರಕ್ಕೂ ಕೊನೆಯಿಲ್ಲ. ನಕಲಿ ಪ್ರಕಟಣೆಗಳು, ಅಕ್ರಮ ಮತ್ತು ಕಳಪೆ ಜರ್ನಲ್‌ಗಳು ವಿವಿಗಳ ಗುಣಮಟ್ಟವನ್ನು ಕುಗ್ಗಿಸುತ್ತಿವೆ. ಮಾನ್ಯತೆ ಮತ್ತು ರ‍್ಯಾಂಕಿಂಗ್ ಸ್ಪರ್ಧೆಯ ಒತ್ತಡ ದಲ್ಲಿ ಕೆಲವು ಸರಕಾರಿ ವಿವಿಗಳು ಮೂಲಸೌಕರ್ಯ, ಅಧ್ಯಾಪಕರ ಮಾಹಿತಿ ಮತ್ತು ವಿದ್ಯಾರ್ಥಿಗಳ ಅಂಕಿ-ಅಂಶಗಳನ್ನು ಕಾಗದದ ಮೇಲೆ ಮಾತ್ರವಷ್ಟೇ ಸುಧಾರಿಸುವ ಪ್ರಯತ್ನ ಮಾಡುತ್ತಿವೆ.
ಆಂತರಿಕ ಲೆಕ್ಕಪತ್ರ ಮತ್ತು ದೂರು ನಿವಾರಣಾ ವ್ಯವಸ್ಥೆಗಳು ಸ್ವತಂತ್ರವಾಗಿಲ್ಲದಿದ್ದರೆ ಅಥವಾ ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಿದ್ದರೆ, ಭ್ರಷ್ಟಾಚಾರ ಬಯಲಾಗದೆ ಉಳಿದುಬಿಡುತ್ತದೆ. ಶಿಕ್ಷಣದ ವ್ಯಾಪಾರೀಕರಣ ಇಂದು ಹೆಚ್ಚಾಗಿರುವುದರಿಂದ ಸರಕಾರಿ ವಿವಿಗಳು ಗುಣಮಟ್ಟಕ್ಕಿಂತ ಆದಾಯಕ್ಕೆ ಆದ್ಯತೆ ನೀಡುವ ಪರಿಸ್ಥಿತಿಯನ್ನು ಉಂಟು ಮಾಡುತ್ತಿವೆ.
ಹೀಗಾಗಿ ಕಡಿಮೆ ಪಾರದರ್ಶಕತೆ, ದುರ್ಬಲ ಮೇಲ್ವಿಚಾರಣೆ ಮತ್ತು ವೈಯಕ್ತಿಕ ಹಿತಾಸಕ್ತಿ ಗಳು ಈ ಎಲ್ಲವೂ ಒಂದೇ ಸಮಯದಲ್ಲಿ ಸೇರಿಕೊಂಡು, ಸರಕಾರಿ ವಿಶ್ವ ವಿದ್ಯಾಲಯಗಳಲ್ಲಿ ಭ್ರಷ್ಟಾಚಾರ ಬೆಳೆಯುವಂತಾಗುವ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ಒಟ್ಟಾರೆ ಹೇಳುವುದಾದರೆ, ಸರಕಾರಿ ವಿಶ್ವವಿದ್ಯಾಲಯಗಳಲ್ಲಿನ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಬಿಂಬಿಸುವ ವಿವಿಧ ಘಟನೆಗಳು, ಉನ್ನತ ಶಿಕ್ಷಣ ವ್ಯವಸ್ಥೆ ಯಲ್ಲಿ ತಾಂಡವವಾಡುತ್ತಿರುವ ವ್ಯವಸ್ಥಾತ್ಮಕ ದುರ್ಬಲತೆಯನ್ನು ಸ್ಪಷ್ಟವಾಗಿ ತೋರಿಸು ತ್ತಿವೆ. ಈ ಪ್ರಕರಣಗಳು ಕೇವಲ ವ್ಯಕ್ತಿಗತ ದೋಷಗಳಲ್ಲ; ವಿವಿ ಅಧಿಕಾರಿಗಳಿಗೆ ಬದ್ಧತೆ ಇಲ್ಲದಿರುವಿಕೆ, ನಿಯಂತ್ರಣದ ಸಮಸ್ಯೆ, ಹಣಕಾಸು ಮೇಲ್ವಿಚಾರಣೆ ಮತ್ತು ಪಾರದರ್ಶಕ ಆಡಳಿತದ ಕೊರತೆಯನ್ನು ಅವು ಪ್ರತಿಬಿಂಬಿಸುತ್ತವೆ ಎನ್ನಬಹುದು.
ಆದ್ದರಿಂದ ಇಂಥ ವಿವಿಗಳಲ್ಲಿ ಪಾರದರ್ಶಕತೆ, ಹಣಕಾಸು ವ್ಯವಹಾರದಲ್ಲಿನ ಶಿಸ್ತು ಮತ್ತು ಉತ್ತರದಾಯಿತ್ವದ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಜತೆಗೆ, ಸ್ವತಂತ್ರ ಆಡಿಟ್ ವ್ಯವಸ್ಥೆ, ಇ-ಟೆಂಡರಿಂಗ್ ಪ್ರಕ್ರಿಯೆಯ ಅನುಸರಣೆ, ಡಿಜಿಟಲ್ ಭದ್ರತಾ ನಿಗಾ ವ್ಯವಸ್ಥೆ, ನೇಮಕಾತಿ ಮತ್ತು ಪರೀಕ್ಷಾ ಪ್ರಕ್ರಿಯೆಗಳ ಸ್ವಾಯತ್ತ ಮೇಲ್ವಿಚಾರಣೆ ಮುಂತಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಹೀಗೆ ಮಾಡಿದರಷ್ಟೇ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವು ಮರುಸ್ಥಾಪನೆಯಾಗಬಹುದು.
(ಲೇಖಕರು ಸಹ-ಪ್ರಾಧ್ಯಾಪಕರು)