ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಮೌರ್ಯ ಸಾಮ್ರಾಜ್ಯದ ಕಲಿಗಳಾಗಿದ್ದ ವೀರ ಅಂಗರಕ್ಷಕಿಯರು

ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ಬರೆದ ‘ಇಂಡಿ ಕಾ’ ಗ್ರಂಥ ದಲ್ಲಿ ಈ ಬಗ್ಗೆ ವಿವರವಾಗಿ ದಾಖಲಿಸಿದ್ದಾನೆ. ಚಕ್ರವರ್ತಿಯು ರಾಜಪ್ರಸಾದದಿಂದ ಹೊರ ಬಂದು ಬೇಟೆಗೆ ತೆರಳುವಾಗ ಅಥವಾ ರಾಜಕಾರ್ಯಗಳಿಗೆ ಸಾಗುವಾಗ, ಆತನ ಸುತ್ತಲೂ ಬಿಲ್ಲು, ಬಾಣ, ಖಡ್ಗಗಳನ್ನು ಹಿಡಿದ ಮಹಿಳಾ ಯೋಧರ ದಂಡು ಕಾವಲು ಕಾಯುತ್ತಿತ್ತು.

ಮೌರ್ಯ ಸಾಮ್ರಾಜ್ಯದ ಕಲಿಗಳಾಗಿದ್ದ ವೀರ ಅಂಗರಕ್ಷಕಿಯರು

-

ಒಂದೊಳ್ಳೆ ಮಾತು

ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಆಡಳಿತ ಭಾರತೀಯ ಇತಿಹಾಸದ ಅತ್ಯಂತ ವೈಭವೋ ಪೇತ ಅಧ್ಯಾಯ. ಆರ್ಯ ಚಾಣಕ್ಯನ ಮಾರ್ಗ ದರ್ಶನದಲ್ಲಿ ಬೃಹತ್ ಸಾಮ್ರಾಜ್ಯ ಕಟ್ಟಿದ ಚಂದ್ರ ಗುಪ್ತನ ಶೌರ್ಯದ ಹಿಂದೆ, ಆತನ ಪ್ರಾಣರಕ್ಷಣೆಗಾಗಿ ಹಗಲಿರುಳು ಕಾವಲು ಕಾಯುತ್ತಿದ್ದ ಮಹಿಳಾ ಸಶಸ್ತ್ರ ಪಡೆಗಳ ಯೋಗದಾನವೂ ಹಿರಿದು. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರ ಸೇನಾ ಭಾಗವಹಿಸುವಿಕೆ ಮತ್ತು ಬಿಗಿ ಭದ್ರತೆಯ ಕುರಿತು ಚರ್ಚೆಗಳು ನಡೆಯುತ್ತಿದ್ದರೆ, ಕ್ರಿಸ್ತಪೂರ್ವ 4ನೇ ಶತಮಾನದ ಭಾರತೀಯ ಸಮಾಜವು ಮಹಿಳಾ ಶಕ್ತಿ, ಸಾಹಸ ಮತ್ತು ನಿಷ್ಠೆಗೆ ಅತ್ಯುನ್ನತ ಮನ್ನಣೆ ನೀಡಿತ್ತು ಎಂಬುದಕ್ಕೆ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸ್ತ್ರೀ ಅಂಗರಕ್ಷಕ ಪಡೆಯೇ ಸಾಕ್ಷಿ.

ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ಬರೆದ ‘ಇಂಡಿ ಕಾ’ ಗ್ರಂಥ ದಲ್ಲಿ ಈ ಬಗ್ಗೆ ವಿವರವಾಗಿ ದಾಖಲಿಸಿದ್ದಾನೆ. ಚಕ್ರವರ್ತಿಯು ರಾಜಪ್ರಸಾದದಿಂದ ಹೊರ ಬಂದು ಬೇಟೆಗೆ ತೆರಳುವಾಗ ಅಥವಾ ರಾಜಕಾರ್ಯಗಳಿಗೆ ಸಾಗುವಾಗ, ಆತನ ಸುತ್ತಲೂ ಬಿಲ್ಲು, ಬಾಣ, ಖಡ್ಗಗಳನ್ನು ಹಿಡಿದ ಮಹಿಳಾ ಯೋಧರ ದಂಡು ಕಾವಲು ಕಾಯುತ್ತಿತ್ತು. ರಥಗಳಲ್ಲಿ, ಆನೆಗಳ ಮೇಲೆ ಹಾಗೂ ಕುದುರೆ ಸವಾರರಾಗಿ ಈ ವೀರ ವನಿತೆಯರು ರಾಜನಿಗೆ ಪೂರ್ಣ ಭದ್ರತೆ ಒದಗಿಸುತ್ತಿದ್ದರು.

ಇದನ್ನೂ ಓದಿ: Roopa Gururaj Column: ಜಂಬೂ ದ್ವೀಪದ ರಹಸ್ಯ: ಖಗೋಳ ವಿಜ್ಞಾನ, ಕಾಲಚಕ್ರದ ಅರಿವು

ಅಷ್ಟೇ ಅಲ್ಲದೆ, ಚಾಣಕ್ಯ ರಚಿಸಿದ ಸುಪ್ರಸಿದ್ಧ ‘ಅರ್ಥಶಾಸ್ತ್ರ’ ದಲ್ಲಿಯೂ ರಾಜನ ಆಂತರಿಕ ಭದ್ರತೆ ಯ ನಿಯಮಗಳನ್ನು ಉಲ್ಲೇಖಿಸುವಾಗ, ರಾಜನು ಬೆಳಿಗ್ಗೆ ಎದ್ದ ತಕ್ಷಣವೇ ಆತನನ್ನು ಸ್ತ್ರೀ ಗಣ ಅಂದರೆ ಅತ್ಯಂತ ನಂಬಿಕಸ್ಥ ಮತ್ತು ಸಶಸ್ತ್ರ ತರಬೇತಿ ಪಡೆದ ಮಹಿಳಾ ಸಿಬ್ಬಂದಿ ಸ್ವಾಗತಿಸ ಬೇಕು ಮತ್ತು ಕಾವಲು ಕಾಯಬೇಕು ಎಂದು ನಿರ್ದೇಶಿಸಲಾಗಿತ್ತು. ಆ ಕಾಲದಲ್ಲಿ ರಾಜರಿಗೆ ರಾಜಕೀಯ ಶತ್ರುಗಳಿಂದ, ವಿಷಕನ್ಯೆಯರ ಮೂಲಕ ಅಥವಾ ಅರಮನೆಯ ಆಂತರಿಕ ಸಂಚುಗಳ ಮೂಲಕ ಅಪಾಯಗಳು ಹೆಚ್ಚಾಗಿದ್ದವು.

ಇಂತಹ ಸೂಕ್ಷ್ಮ ಸನ್ನಿವೇಶಗಳಲ್ಲಿ, ರಾಜನ ಖಾಸಗಿ ಕೊಠಡಿಗಳು, ಶಸ್ತ್ರಾಗಾರ, ಹಾಗೂ ಊಟ-ಉಪಚಾರದ ಸ್ಥಳಗಳಿಗೆ ಯಾವುದೇ ಅಪರಿಚಿತ ವ್ಯಕ್ತಿಗಳು ಪ್ರವೇಶಿಸದಂತೆ ತಡೆಯಲು ಈ ಸಶಸ್ತ್ರ ಮಹಿಳಾ ಪಡೆಗಳನ್ನು ಬಳಸಲಾಗುತ್ತಿತ್ತು. ಈ ಯೋಧೆಯರು ಸಾಮಾನ್ಯ ಕಾವಲುಗಾರರಲ್ಲ. ಇವರಿಗೆ ಬಿಲ್ಲುವಿದ್ಯೆ, ಕತ್ತಿವರಸೆ, ಮಲ್ಲಯುದ್ಧ ಮತ್ತು ಅಶ್ವಸವಾರಿಯಲ್ಲಿ ಕಠಿಣ ತರಬೇತಿ ನೀಡಲಾಗುತ್ತಿತ್ತು. ರಾಜನ ಆಂತರಿಕ ಕೊಠಡಿಗಳಲ್ಲಿ ಪುರುಷ ಸಿಬ್ಬಂದಿಗಿಂತ ಮಹಿಳಾ ಪಡೆಗಳ ಮೇಲಿನ ನಂಬಿಕೆ ಹೆಚ್ಚಾಗಿತ್ತು.

ರಾಜನಿಗೆ ಬಡಿಸುವ ಆಹಾರದ ಪರೀಕ್ಷೆಯಿಂದ ಹಿಡಿದು ಆತನ ಶಸ್ತ್ರಾಸ್ತ್ರಗಳ ಸುರಕ್ಷತೆಯವರೆಗೂ ಪ್ರತಿಯೊಂದು ಜವಾಬ್ದಾರಿಯನ್ನೂ ಇವರೇ ನಿಭಾಯಿಸುತ್ತಿದ್ದರು. ಮೌರ್ಯ ಕಾಲದಲ್ಲಿ ರಾಜನ ಪ್ರಾಣರಕ್ಷಣೆಗೆ ನಿಲ್ಲುತ್ತಿದ್ದ ಸಶಸ್ತ್ರ ಸ್ತ್ರೀ ಪಡೆಗಳಿಂದ ಹಿಡಿದು, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ, ಹಾಗೂ ಒನಕೆ ಓಬವ್ವನವರೆಗೆ ನಮ್ಮ ಸಂಸ್ಕೃತಿ ಯಲ್ಲಿ ನಾರಿಯನ್ನು ಕೇವಲ ಕೋಮ ಲತೆಯ ಸಂಕೇತವಾಗಿ ನೋಡಲಿಲ್ಲ.

ಅಗತ್ಯಬಿದ್ದಾಗ ದೇಶ ಮತ್ತು ಧರ್ಮವನ್ನು ರಕ್ಷಿಸುವ ಮಹಾಶಕ್ತಿಯಾಗಿ ಬೆಳೆಸಲಾಯಿತು. ಸನಾತನ ಪರಂಪರೆಯಲ್ಲಿ ಮಾತೃದೇವೋಭವ, ಪಿತೃದೇವೋಭವ ಎಂಬ ಗೌರವದ ಜೊತೆಗೆ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅಂದರೆ ಹೆತ್ತ ತಾಯಿ ಮತ್ತು ಹುಟ್ಟಿದ ಮಣ್ಣು ಸ್ವರ್ಗಕ್ಕಿಂತಲೂ ಮಿಗಿಲಾ ದದ್ದು ಎಂಬ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ಚಿಕ್ಕಂದಿನಿಂದಲೇ ಮನದಟ್ಟು ಮಾಡಿ ಕೊಡಲಾಗುತ್ತಿತ್ತು.

ನಮ್ಮ ಮಕ್ಕಳಿಗೆ ಕೇವಲ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳ ಗೀಳಿನಲ್ಲಿ ಬೆಳೆಯಲು ಬಿಡದೆ, ಭಾರತೀಯ ಸೇನೆಯ ತ್ಯಾಗ, ನಮ್ಮ ವೀರ ಯೋಧರ ಸಾಹಸ ಹಾಗೂ ದೇಶಕ್ಕಾಗಿ ಜೀವ ತೆತ್ತ ಇತಿಹಾಸ ವನ್ನು ತಿಳಿಸಿಕೊಡಬೇಕು. ಧರ್ಮ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ. ಅದು ನೈತಿಕತೆ, ಶಿಸ್ತು, ಮತ್ತು ಕರ್ತವ್ಯಪ್ರಜ್ಞೆ. ಗಂಡು ಮಗುವಾಗಲಿ ಅಥವಾ ಹೆಣ್ಣು ಮಗುವಾಗಲಿ- ಪ್ರತಿಯೊಬ್ಬರಿಗೂ ಸ್ವಯಂ-ಶಿಸ್ತು, ಹಿರಿಯರಿಗೆ ಗೌರವ ನೀಡುವ ಗುಣ ಮತ್ತು ರಾಷ್ಟ್ರದ ಆಸ್ತಿಪಾಸ್ತಿ ಹಾಗೂ ಸೇನೆಗೆ ಗೌರವ ಸಲ್ಲಿಸುವ ಸಂಸ್ಕಾರವನ್ನು ಮನೆಯ ಕಲಿಸಬೇಕು.

ವಾಕ್ ಸ್ವಾತಂತ್ರ್ಯ ಎಂದರೆ ದೇಶ ಕಾಯುವ ಯೋಧರನ್ನು ನಿಂದಿಸುವುದಲ್ಲ, ಬದಲಿಗೆ ದೇಶದ ಅಭಿವೃದ್ಧಿಗೆ ಧ್ವನಿಯಾಗುವುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ವಾಕ್ ಸ್ವಾತಂತ್ರ್ಯ ಎಂದರೆ ದೇಶ ಕಾಯುವ ಯೋಧರನ್ನು ನಿಂದಿಸುವುದಲ್ಲ, ಬದಲಿಗೆ ದೇಶದ ಅಭಿವೃದ್ಧಿ ಗೆ ಧ್ವನಿಯಾಗುವುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು.