ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gururaj Gantihole Column: ವಿಬಿ ಜಿ ರಾಮ್‌ ಜಿ: ಭಾರತದ ಗ್ರಾಮಾಭಿವೃದ್ಧಿಯ ಬೆನ್ನೆಲುಬು

ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ನೀಡುವುದು. ಬರಗಾಲ, ಆರ್ಥಿಕ ಕುಸಿತ, ವಲಸೆ ತಡೆ ಇವುಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸುವುದು ಮನರೇಗಾದ ಮೂಲ ಉದ್ದೇಶವಾಗಿತ್ತು. ಈ ಯೋಜನೆಯ ಪ್ರಮುಖ ವಿಚಾರಗಳೆಂದರೆ, ಗ್ರಾಮೀಣ ಬಡವರಿಗೆ ಕನಿಷ್ಠ ಆದಾಯ ಭದ್ರತೆ, ಮಹಿಳಾ ಕಾರ್ಮಿಕರ ಹೆಚ್ಚಿನ ಭಾಗವಹಿಸುವಿಕೆ, ಜಲ ಸಂರಕ್ಷಣೆ, ರಸ್ತೆ, ಕೆರೆ, ಭೂ ಅಭಿವೃದ್ಧಿ ಮುಂತಾದ ಆಸ್ತಿ ನಿರ್ಮಾಣ, ಪಂಚಾಯತ್ ರಾಜ್ ಸಂಸ್ಥೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಒಳಗೊಂಡಿತ್ತು.

ವಿಬಿ ಜಿ ರಾಮ್‌ ಜಿ: ಭಾರತದ ಗ್ರಾಮಾಭಿವೃದ್ಧಿಯ ಬೆನ್ನೆಲುಬು

-

ಗಂಟಾಘೋಷ

ಗ್ರಾಮೀಣ ಭಾರತವು ದೇಶದ ಸಾಮಾಜಿಕ ಆರ್ಥಿಕ ಅಡಿಪಾಯ. ಸ್ವಾತಂತ್ರ್ಯಾನಂತರ ಭಾರತ ಎದುರಿಸಿದ ದೊಡ್ಡ ಸವಾಲುಗಳಲ್ಲಿ ಪ್ರಮುಖವಾದುದು ಗ್ರಾಮೀಣ ದಾರಿದ್ರ್ಯ, ಉದ್ಯೋಗದ ಅಭಾವ, ಅಸಮಾನತೆ ಹಾಗೂ ವಲಸೆ. ಈ ಹಿನ್ನೆಲೆಯ 2005ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ (MGNREGA) ಜಾರಿಗೆ ಬಂದು, ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ 100 ದಿನಗಳ ವೇತನದ ಉದ್ಯೋಗವನ್ನು ಕಾನೂನಾತ್ಮಕ ಹಕ್ಕಾಗಿ ಒದಗಿಸುವ ಮೂಲಕ ಮಹತ್ವದ ಹೆಜ್ಜೆ ಇಡಲಾಯಿತು.

ಆದರೆ ಕಾಲಕ್ರಮೇಣ ಮನರೇಗಾ ತನ್ನ ಮಿತಿಗಳನ್ನು ತೋರಿಸಿದೆ. ಉದ್ಯೋಗವು ತಾತ್ಕಾ ಲಿಕ, ಕೌಶಲ್ಯ ವೃದ್ಧಿಯ ಕೊರತೆ, ಆಸ್ತಿ ನಿರ್ಮಾಣದ ಗುಣಮಟ್ಟ, ಹಾಗೂ ಉತ್ಪಾದಕತೆಯ ಪ್ರಶ್ನೆಗಳನ್ನು ಹುಟ್ಟುಹಾಕಿತು.

ಈ ಹಿನ್ನಲೆಯಲ್ಲಿ ವಿಬಿ-ರಾಮ್‌ಜಿ (VBG RAMG (Village Based Growth Resource Augmentation Management Governance ) ಎಂಬುದನ್ನು ಹೊಸ ಪರಿಕಲ್ಪನೆ, ಕ್ರಿಯಾ ಯೋಜನೆಯಾಗಿ ಪರಿಚಯಿಸಲಾಯಿತು. ಇದು ಕೇವಲ ಉದ್ಯೋಗ ಖಾತರಿ ಅಲ್ಲ; ಬದಲಾಗಿ ಗ್ರಾಮೀಣ ಆರ್ಥಿಕತೆಯ ಸ್ವಾವಲಂಬನೆ, ಸಂಪನ್ಮೂಲ ನಿರ್ವಹಣೆ, ಕೌಶಲ್ಯಾ ಧಾರಿತ ಉದ್ಯೋಗ ಮತ್ತು ಸ್ಥಳೀಯ ಆಡಳಿತದ ಬಲವರ್ಧನೆಗೆ ಒತ್ತುನೀಡುವ ಸಮಗ್ರ ಮಾದರಿಯನ್ನಾಗಿ ರೂಪಿಸಲು ಎಲ್ಲ ರೀತಿಯಿಂದಲೂ ಯತ್ನಿಸಲಾಗಿದೆ.

ಮನರೇಗಾದಿಂದ ವಿಕಸಿತ ಭಾರತಜಿ ರಾಮ್ ಜಿ ಪರಿವರ್ತನೆ ಎಂದರೆ, ಕೇವಲ ಕೂಲಿ ಕೊಡುವ ಕಾರ್ಯಕ್ರಮ ಎಂಬ ದಾರಿದ್ರ್ಯ ನಿವಾರಣೆಯ ಯೋಜನೆಯಿಂದ ಅಭಿವೃದ್ಧಿ-ಉತ್ಪಾದಕತೆ-ಸ್ವಾವಲಂಬನೆಗೆ ಕೇಂದ್ರೀಕೃತ ವ್ಯವಸ್ಥೆಯತ್ತ ಸಾಗುವ ಪ್ರಕ್ರಿಯೆಯಾಗಿದೆ ಈ ಯೋಜನೆ.

ಇದನ್ನೂ ಓದಿ: Gururaj Gantihole Column: ಕರಾವಳಿ ಸುರಕ್ಷತೆ: ಕರ್ನಾಟಕದ ಹೊಣೆಗಾರಿಕೆ, ಭಾರತದ ಭದ್ರತೆ

ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ನೀಡುವುದು. ಬರಗಾಲ, ಆರ್ಥಿಕ ಕುಸಿತ, ವಲಸೆ ತಡೆ ಇವುಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸುವುದು ಮನರೇಗಾದ ಮೂಲ ಉದ್ದೇಶವಾಗಿತ್ತು. ಈ ಯೋಜನೆಯ ಪ್ರಮುಖ ವಿಚಾರಗಳೆಂದರೆ, ಗ್ರಾಮೀಣ ಬಡವರಿಗೆ ಕನಿಷ್ಠ ಆದಾಯ ಭದ್ರತೆ, ಮಹಿಳಾ ಕಾರ್ಮಿಕರ ಹೆಚ್ಚಿನ ಭಾಗವಹಿಸುವಿಕೆ, ಜಲ ಸಂರಕ್ಷಣೆ, ರಸ್ತೆ, ಕೆರೆ, ಭೂ ಅಭಿವೃದ್ಧಿ ಮುಂತಾದ ಆಸ್ತಿ ನಿರ್ಮಾಣ, ಪಂಚಾಯತ್ ರಾಜ್ ಸಂಸ್ಥೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಒಳಗೊಂಡಿತ್ತು.

ಇದರೊಂದಿಗೆ, ಕೆಲವು ಮಿತಿಗಳು ಈ ಯೋಜನೆಯನ್ನು ಬಳಲುತ್ತ, ತೆವಳುತ್ತ ಸಾಗುವಂತೆ ಮಾಡಿದ್ದವು. ಅವುಗಳಲ್ಲಿ, ಉದ್ಯೋಗವು ತಾತ್ಕಾಲಿಕ; ದೀರ್ಘಕಾಲಿಕ ಜೀವನೋಪಾಯಕ್ಕೆ ಪರ್ಯಾಯವಲ್ಲ. ಕೌಶಲ್ಯಾಭಿವೃದ್ಧಿ ಮತ್ತು ಉತ್ಪಾದಕತೆ ಮೇಲೆ ಕಡಿಮೆ ಒತ್ತು. ಕೆಲಸಗಳ ಗುಣಮಟ್ಟ ಮತ್ತು ನಿರ್ವಹಣೆಯಲ್ಲಿ ಅಸಮರ್ಪಕತೆ.

ರಾಜಕೀಯ ಹಸ್ತಕ್ಷೇಪ, ಲೀಕಜ್, ವಿಳಂಬ ವೇತನ ಪಾವತಿ. ಗ್ರಾಮೀಣ ಉದ್ಯಮಶೀಲತೆಗೆ ಸಾಕಷ್ಟು ಉತ್ತೇಜನವಿಲ್ಲದಂತಹ ವಿವಿಧ ಕ್ರಿಯಾ ಯೋಜನೆಗಳು ಕಟ್ಟಿಹಾಕಿದಂತಾಗಿತ್ತು. ಉದ್ದೇಶ ಹಾಗೂ ಯೋಚನೆ ಸದುದ್ದೇಶದಿಂದ ಕೂಡಿದ್ದರೆ, ಮಿತಿಗಳೇ ಹೊಸದಾರಿಗಳನ್ನು ಹುಡುಕಿಕೊಡಬಲ್ಲವು ಎಂಬುದನ್ನು ವಿಕಸಿತ ಭಾರತ-ಜಿ ರಾಮ್‌ಜಿ ಪರಿಕಲ್ಪನೆ ಮತ್ತು ತತ್ವಾಧಾರ ತೋರಿಸಿಕೊಟ್ಟಿದೆ ಎನ್ನಬಹುದು.

Screenshot_8 R

ವಿಕಸಿತ ಭಾರತ-ಜಿ ರಾಮ್‌ಜಿ ಒಂದು ಸಮಗ್ರ ಗ್ರಾಮೀಣ ಅಭಿವೃದ್ಧಿ ಮಾದರಿ. ಇದರ ಕೇಂದ್ರಬಿಂದು ಗ್ರಾಮವನ್ನು ಉತ್ಪಾದನಾ ಘಟಕವಾಗಿ ಪರಿವರ್ತಿಸುವುದಾಗಿದೆ. ಗ್ರಾಮಾ ಧಾರಿತ ಬೆಳವಣಿಗೆ (ವಿಲೇಜ್ ಬೇಸ್ಡ್ ಗ್ರೋಥ್) ಎಂದರ ಕೃಷಿ, ಪಶುಸಂಗೋಪನೆ, ಕೈಗಾರಿಕೆ, ಸೇವಾ ವಲಯ ಸೇರಿದಂತೆ ಆಲ್ ಇನ್ ಒನ್ ಗ್ರಾಮ ಆರ್ಥಿಕ ವ್ಯವಸ್ಥೆ. ರಿಸೋರ್ಸ್ ಆಗ್ಮೆಂಟೇಶನ್ ಮ್ಯಾನೇಜ್ ಮೆಂಟ್ (ರಾಮ್ ಆಂಡ್ ಜಿ ) ಜಲ, ಭೂಮಿ, ಅರಣ್ಯ, ಮಾನವ ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ಪ್ರಗತಿಗೆ ಸಂಬಂಧಿಸಿದ್ದು.

ಗವರ್ನೆನ್ಸ್ (ಜಿ): ಪಾರದರ್ಶಕ, ಹೊಣೆಗಾರ, ಡಿಜಿಟಲ್ ಪಂಚಾಯತ್ ಆಡಳಿತ ಸೇರಿದಂತೆ, ಗಾಂಧೀಜಿಯ ಗ್ರಾಮ ಸ್ವರಾಜ್ಯ, ಅಂಬೇಡ್ಕರರ ಸಾಮಾಜಿಕ ನ್ಯಾಯ, ಮತ್ತು ಆಧುನಿಕ ತಂತ್ರಜ್ಞಾನ ಆರ್ಥಿಕತೆಯ ಸಂಯೋಜನೆಗಳ ವಿಶಿಷ್ಟ ಸಮ್ಮಿಳನದ ನವೀನ ಕಾರ್ಯಕ್ರಮ ಇದಾಗಿದೆ. ಮನರೇಗಾ ಯೋಜನೆಯ ಪರಿವರ್ತನೆಯು ಈ ಸಂದರ್ಭಕ್ಕೆ ಅತ್ಯಂತ ಅಗತ್ಯ ವಾಗಿತ್ತು. ಈ ಯೋಜನೆಯು ಉದ್ಯೋಗ ಭದ್ರತೆಯ ‘ಸೇಫ್ಟಿ ನೆಟ್’ ಆಗಿದ್ದರೆ, ವಿಕಸಿತ ಭಾರತ-ಜಿ ರಾಮ್‌ಜಿ ಯನ್ನು ಗ್ರೋತ್ ಎಂಜಿನ್’ ಎಂದು ಪರಿಗಣಿಸಬಹುದು.

ದಾರಿದ್ರ್ಯದಿಂದ ಸ್ವಾವಲಂಬನೆಗೆ, ಸಹಾಯಧನದಿಂದ ಉತ್ಪಾದನೆಗೆ, ಕಾರ್ಮಿಕರಿಂದ ಕೌಶಲ್ಯಧಾರಿತ ಉದ್ಯಮಿಗಳಿಗೆ, ಕೇವಲ ಕೂಲಿಯಿಂದ ಮೌಲ್ಯ ಸೃಷ್ಟಿಗೆ, ತಾತ್ಕಾಲಿಕ ಉದ್ಯೋಗದಿಂದ ಶಾಶ್ವತ ಜೀವನೋಪಾಯಕ್ಕೆ, ಆಸ್ತಿ ನಿರ್ಮಾಣದಿಂದ ಆಸ್ತಿ ಬಳಕೆಲಾಭಕ್ಕೆ ಎಂಬಂತೆ ಈ ಯೋಜನೆ ಜನ್ಮ ತಳೆಯಿತು. ಪರಿವರ್ತನೆಯ ಯೋಜನೆ ಎನ್ನಬಹುದಾದ ಇದನ್ನು, ಹಲವು ಹಂತಗಳಲ್ಲಿ ಅವಲೋಕಿಸಬಹುದಾಗಿದೆ.

ನೀತಿ ಮಟ್ಟದ ಪರಿವರ್ತನೆ: ಮನರೇಗಾ ಕಾನೂನಾತ್ಮಕ ಹಕ್ಕು ಉಳಿಸಿಕೊಂಡು, ಅದರೊಳಗೆ ವಿಬಿಜಿಆರ್ VB G RAM G ಘಟಕಗಳಾದ, ಕೌಶಲ್ಯಾಧಾರಿತ ಕೆಲಸಗಳಿಗೆ ಹೆಚ್ಚಿನ ವೇತನ, ಉತ್ಪಾದಕ ಆಸ್ತಿ ನಿರ್ಮಾಣಕ್ಕೆ ಆದ್ಯತೆ, ಗ್ರಾಮೀಣ ಉದ್ಯಮಗಳಿಗೆ ಸಂಪರ್ಕ ಗಳನ್ನು ಸೇರಿಸುವುದು.

ಸಂಸ್ಥಾತ್ಮಕ ಪರಿವರ್ತನೆ: ಪಂಚಾಯತ್ ರಾಜ ಸಂಸ್ಥೆಗಳ ಶಕ್ತೀಕರಣ, ಗ್ರಾಮ ಅಭಿವೃದ್ಧಿ ಸಮಿತಿಗಳು, ಸ್ವಸಹಾಯ ಸಂಘಎಫ್.ಪಿ.ಓ-ಸ್ಟಾರ್ಟ್‌ಅಪ್ ಸಂಪರ್ಕ ಮುಂತಾದವುಗಳನ್ನು ಒಳಗೊಳ್ಳುವುದು.

ಆರ್ಥಿಕ ಪರಿವರ್ತನೆ: ಕೃಷಿ ಮೌಲ್ಯ ಸರಪಳಿ, ಆಹಾರ ಸಂಸ್ಕರಣೆ, ಹಾಲು, ಮೀನುಗಾರಿಕೆ, ಗ್ರಾಮೀಣ ಪ್ರವಾಸೋದ್ಯಮ, ‌

ತಂತ್ರಜ್ಞಾನ ಪರಿವರ್ತನೆ: ಡಿಜಿಟಲ್ ಹಾಜರಾತಿ, ಜಿಯೋ ಟ್ಯಾಗಿಂಗ್, ಡೇಟಾ ಆಧಾರಿತ ಯೋಜನೆ, ಸ್ಮಾರ್ಟ್ ಗ್ರಾಮ ಪರಿಕಲ್ಪನೆ ಇತ್ಯಾದಿಗಳನ್ನು ಆಧುನಿಕತೆಗೆ ತರುವುದು. ಇಷ್ಟೆಲ್ಲ ವಿಚಾರಗಳನ್ನು ಒಳಗೊಂಡ ಈ ಯೋಜನೆಗೆ ಸಂಪನ್ಮೂಲ ನಿರ್ವಹಣೆಯೇ ಪ್ರಮುಖ ಜೀವಾಳ ಎನ್ನಬಹುದು.

ಗ್ರಾಮೀಣ ಸಂಪನ್ಮೂಲಗಳ ಸಮರ್ಥ ಬಕೆ ವಿಬಿಜಿ ರಾಮ್‌ಜಿ ಯೋಜನೆ ಮುಖ್ಯ ಉದ್ದೇಶ ವಾಗಿದ್ದು, ಜಲ ಸಂಪನ್ಮೂಲ, ಮಳೆನೀರು ಸಂಗ್ರಹ, ಸಣ್ಣ ನೀರಾವರಿ, ಭೂ ಸಂಪನ್ಮೂಲ, ಮಣ್ಣು ಆರೋಗ್ಯ ಕಾರ್ಡ್, ಸಮಗ್ರ ಭೂ ಅಭಿವೃದ್ಧಿ, ಮಾನವ ಸಂಪನ್ಮೂಲ, ಕೌಶಲ್ಯ ಮ್ಯಾಪಿಂಗ್, ತರಬೇತಿ, ಪ್ರಾಕೃತಿಕ ಸಂಪನ್ಮೂಲ, ಅರಣ್ಯ, ಜೀವ ವೈವಿಧ್ಯ ಸಂರಕ್ಷಣೆ ಮುಂತಾದವುಗಳು ಸೇರಿವೆ.

ಗ್ರಾಮಕ್ಕೆ ನಾವು ಕೆಲಸ ಕೊಡುತ್ತಿದ್ದೇವೋ, ಅಥವಾ ಗ್ರಾಮವನ್ನೇ ನಿಧಾನವಾಗಿ ಖಾಲಿ ಮಾಡುತ್ತಿದ್ದೇವೋ? ಎಂಬುದನ್ನು ಗಂಭೀರವಾಗಿ ನಾವೆಲ್ಲ ಆತ್ಮವಿಮರ್ಶೆ ಮಾಡಿಕೊಳ್ಳ ಬೇಕಿದೆ.

ಗರೀಬೀ ಹಠಾವೋ ಎಂದು ಎಷ್ಟೆಲ್ಲ ಪ್ರಯತ್ನಪಟ್ಟರೂ, ಬಡತನ ನಮ್ಮ ಜನರನ್ನು ಇನ್ನೂ ಕಾಡುತ್ತಲೇ ಇದೆ. ಕೆಲಸ ಇದ್ದರೂ ಊರು ಖಾಲಿಯಾಗುತ್ತಿದೆ! ಇದು ವಿಚಿತ್ರವಾಗಿ ಕಾಣಬಹುದು. ಆದರೆ ಸತ್ಯ. ಗ್ರಾಮದಲ್ಲಿ ಕೆಲಸ ಇದೆ. ಯೋಜನೆಗಳಿವೆ. ಹಣ ಹರಿಯುತ್ತಿದೆ. ಆದರೂ ಯುವಕರು ಊರು ಬಿಟ್ಟು ಹೋಗುತ್ತಿದ್ದಾರೆ. ಕೃಷಿ ಲಾಭಕಾರಿಯಾಗುತ್ತಿಲ್ಲ.

ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದೆ. ಅಂದರೆ ಸಮಸ್ಯೆ ಕೆಲಸ ಇಲ್ಲ ದಿರುವುದಲ್ಲ. ಸಮಸ್ಯೆ ಕೆಲಸದ ದಿಕ್ಕು ಎಂದು ಅರಿವಾದಾಗ, ಯೋಜನೆಗಳು ಮರು ವಿಮರ್ಶೆಗೊಳಪಡುತ್ತವೆ, ಅದರ ತತ್ವಗಳು ಬದಲಾಗುತ್ತವೆ.

ಮನರೇಗಾ ಎಂಬುದು ಸಹಾನುಭೂತಿಯ ಯೋಜನೆ ಅಲ್ಲ, ಹಕ್ಕಿನ ಕಾನೂನು. ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಯಾವುದೇ ಸರಕಾರದ ದಾನ ವಲ್ಲ, ರಾಜಕೀಯ ಉಪಕಾರವಲ್ಲ. ಬದಲಾಗಿ, ದುಡಿಯುವವರ ಹಕ್ಕು. ಗ್ರಾಮೀಣ ಭಾರತದ ನಾಗರಿಕರಿಗೆ ನಾನು ಕೆಲಸ ಕೇಳಿದರೆ ಸರ್ಕಾರ ಕೆಲಸ ಕೊಡಲೇಬೇಕು ಎಂದು ಹೇಳುವ ವಿಶ್ವದ ಅತಿ ದೊಡ್ಡ ಕಾನೂನು.

ಕೆಲಸ ಕೇಳುವ ಹಕ್ಕು, 15 ದಿನಗಳಲ್ಲಿ ಕೆಲಸ ಕೊಡದಿದ್ದರೆ ನಿರುದ್ಯೋಗ ಭತ್ಯೆ, ಕೂಲಿ ನೇರ ಬ್ಯಾಂಕ್‌ಗೆ, ಮಹಿಳೆಯರಿಗೆ ಕನಿಷ್ಠ 33% ಪಾಲು, ಇವು ಸಣ್ಣ ವಿಷಯಗಳಲ್ಲ; ಇವು ಸಾಮಾಜಿಕ ನ್ಯಾಯದ ಕಂಬಗಳು. ಆದರೆ, ನಾವು ಈ ಯೋಜನೆಯ ಆತ್ಮವನ್ನು ಬದಿಗಿರಿಸಿ, ಕೇವಲ ಅದರ ಅಕ್ಷರಗಳನ್ನು ಪಾಲಿಸತೊಡಗುತ್ತಿದ್ದಂತೆ, ಇದು ನೆಪಮಾತ್ರ ಯೋಜನೆ ಯಾಗಿ ಬಿಟ್ಟಿತು.

ಜನರೇ ಇದನ್ನು ಕಾಲಹರಣದ ಕೆಲಸ ಎಂದು ಆರೋಪ, ಟೀಕೆ ಮಾಡತೊಡಗಿದರು. ಯಾಕೆಂದರೆ, ಕೆಲಸ ಇದೆ, ಆದರೆ ಆಸ್ತಿ ಉಳಿಯುವುದಿಲ್ಲ. ಹಣ ಖರ್ಚಾಗಿದೆ, ಆದರೆ ಫಲಿತಾಂಶ ಕಾಣುವುದಿಲ್ಲ. ದಾಖಲೆಗಳಿವೆ, ಆದರೆ ಗ್ರಾಮ ಬದಲಾಗಿಲ್ಲ. ಕೆಲಸ ಕೊಡು ವುದೇ ಸಾಕೆ? ಅಥವಾ ಕೆಲಸದ ಮೂಲಕ ಗ್ರಾಮ ಕಟ್ಟಬೇಕೆ? ಎಂಬ ಪ್ರಶ್ನೆ ಹುಟ್ಟಿದಾಗ, ಇಲ್ಲಿಂದಲೇ ರಾಮ್ ಜಿ ಹುಟ್ಟುತ್ತದೆ.

ರಾಮ್ ಇದು ಹೊಸ ಕಾನೂನು ಅಲ್ಲ. ಹೊಸ ಯೋಜನೆಯೂ ಅಲ್ಲ. ಮನರೇಗಾವನ್ನು ಮಿಷನ್ ಮೋಡ್‌ನಲ್ಲಿ ಆಸ್ತಿ ಕೇಂದ್ರಿತವಾಗಿ ಬಳಸುವ ದೃಷ್ಟಿಕೋನವಾಗಿದೆ.

ಕೆಲಸ-ಆಸ್ತಿ-ಭವಿಷ್ಯ ಎಂಬ ತತ್ವ ಇಟ್ಟುಕೊಂಡು, ರಾಮ್ ದೃಷ್ಟಿಯಲ್ಲಿ ಕೆಲಸ ಎಂದರೆ; ಚೆಕ್ ಡ್ಯಾಂ, ಕೆರೆ ಪುನಶ್ಚೇತನ, ಫಾರ್ಮ್ ಪಾಂಡ, ಮೇವು ಪ್ರದೇಶ, ಮಣ್ಣುನೀರು ಸಂರಕ್ಷಣೆ ಮುಂತಾದವು ಸೇರಿವೆ. ಇಲ್ಲಿ,

ಇಂತಹ ಆಸ್ತಿಯನ್ನು ಯಾರು ತೀರ್ಮಾನಿಸಬೇಕು ಎಂಬ ಪ್ರಶ್ನೆ ಬಂದಾಗ, Village Asset Plan (VAP) ಗ್ರಾಮ ತನ್ನ ಭವಿಷ್ಯವನ್ನು ಬರೆಯುವ ದಾಖಲೆಯಾಗಿಸುವ ನಿಟ್ಟಿನಲ್ಲಿ ಈ ಜವಾಬ್ಧಾರಿಯನ್ನು ಗ್ರಾಮಕ್ಕೆ, ಅದರ ಗ್ರಾಮಸಭೆಗೇ ನೀಡಲು ತೀರ್ಮಾನಿಸಲಾಯಿತು.

ಮುಂದಿನ 10 ವರ್ಷಗಳಲ್ಲಿ ನಮ್ಮ ಗ್ರಾಮ ಹೇಗಿರಬೇಕು ಎಂಬುದಕ್ಕೆ ಹಾಗೂ ನೀರಿನ ಭದ್ರತೆ ಬೇಕಾ? ಕೃಷಿ ಬಲವಾಗಬೇಕಾ? ಪಶುಸಂಗೋಪನೆ ಲಾಭಕರವಾಗಬೇಕಾ? ಯುವಕ ರು ಇಲ್ಲಿಯೇ ಉಳಿಯಬೇಕಾ? ಎಂಬೆಲ್ಲ ಪ್ರಶ್ನೆಗಳಿಗೆ ವಿಎಪಿ ಉತ್ತರವಾಗಬಲ್ಲದು! ಕೆಲಸದ ಮೂಲಕ ಗ್ರಾಮ ಕಟ್ಟಬೇಕು. ಗ್ರಾಮಸಭೆಯನ್ನು ಕೇವಲ ಸಭೆಯಾಗಿ ಅಲ್ಲ, ಭವಿಷ್ಯ ತೀರ್ಮಾನಿಸುವ ವೇದಿಕೆಯಾಗಿಸಬೇಕು. ಇದು ಸರ್ಕಾರದ ಕೆಲಸ ಮಾತ್ರವಲ್ಲ. ಇದು ನಮ್ಮೆಲ್ಲರ ಹೊಣೆ ಆಗಿದೆ.

ಗ್ರಾಮಸಭೆ ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆತ್ಮ. ಪ್ರತಿಯೊಬ್ಬ ನಾಗರಿಕನಿಗೂ ಮಾತಿನ ಹಕ್ಕು, ಯೋಜನೆ ರೂಪಿಸುವ ಹಕ್ಕು ಮತ್ತು ಲೆಕ್ಕ ಕೇಳುವ ಅಧಿಕಾರ ಗ್ರಾಮಸಭೆ ಯಲ್ಲಿ ಅಡಕವಾಗಿದೆ. MNREGA ಯ ಕೆಲಸಗಳ ಆಯ್ಕೆ, VAP ಅನುಮೋದನೆ, ರಾಮ್ ಆಸ್ತಿಗಳ ನಿರ್ವಹಣೆ ಸೇರಿದಂತೆ ಎಲ್ಲವೂ ಗ್ರಾಮಸಭೆಯ ಸಕ್ರಿಯ ಪಾತ್ರದಿಂದಲೇ ಪರಿಣಾಮಕಾರಿ ಆಗುತ್ತವೆ.

ಮಹಿಳೆಯರು, ದಲಿತರು, ಆದಿವಾಸಿಗಳು, ವೃದ್ಧರು ಮತ್ತು ಯುವಜನರ ಸಮಾನ ಭಾಗ ವಹಿಸುವಿಕೆ ಗ್ರಾಮಸಭೆಯನ್ನು ಬಲಪಡಿಸುತ್ತದೆ. ಸಾಮಾಜಿಕ ಲೆಕ್ಕಪರಿಶೋಧನೆ, ಸಾರ್ವ ಜನಿಕ ಮಾಹಿತಿ ಫಲಕಗಳು, ಓಪನ್ ಮೀಟಿಂಗ್‌ಗಳು ಇವು ಭ್ರಷ್ಟಾಚಾರ ವನ್ನು ತಗ್ಗಿಸಿ ವಿಶ್ವಾಸವನ್ನು ಹೆಚ್ಚಿಸುತ್ತವೆ. ಅಭಿವೃದ್ಧಿ ತತ್ತ್ವವು ಜಿಡಿಪಿಗೆ ಮಾತ್ರ ಸೀಮಿತವಾಗ ಬಾರದು; ಮಾನವ ಅಭಿವೃದ್ಧಿ ಸೂಚ್ಯಂಕ, ಪರಿಸರ ಸಮತೋಲನ ಮತ್ತು ಸಾಮಾಜಿಕ ಸಮಾನತೆ ಗಳನ್ನು ಒಳಗೊಳ್ಳಬೇಕು.

ಪರಿಸರಸ್ನೇಹಿ ಕೆಲಸಗಳು ನೀರಾವರಿ ಸಂರಕ್ಷಣೆ, ಅರಣ್ಯೋತ್ಪಾದನೆ, ಮಣ್ಣಿನ ಆರೋಗ್ಯ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ. ಮಹಿಳಾ ಸಬಲೀಕರಣ ಮತ್ತು ಯುವ ಕೌಶಲ್ಯಾಭಿವೃದ್ಧಿ ಗ್ರಾಮೀಣ ಸಮಾಜವನ್ನು ಸಚೇತನ ಗೊಳಿಸುತ್ತದೆ.

ಆಡಳಿತ ಮತ್ತು ಪಾರದರ್ಶಕತೆ ಸಂಪೂರ್ಣ ಅಳವಡಿಕೆಯ ಸ್ಪಷ್ಟ ಉದ್ದೇಶವನ್ನಿಟ್ಟು ಕೊಂಡು, ವಿಕಸಿತ ಭಾರತ-ಜಿ ರಾಮ್‌ಜಿ ಯಶಸ್ಸಿಗೆ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಉತ್ತಮ ಆಡಳಿತದ ಅವಶ್ಯಕತೆಯಿದೆ. ಪಂಚಾಯತ್‌ಗಳಿಗೆ ಆರ್ಥಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ, ಸಾಮಾಜಿಕ ಲೆಕ್ಕಪರಿಶೋಧನೆ, ಡಿಜಿಟಲ್ ಪ್ಲಾಟ್ ಫಾರ್ಮ್‌ಗಳು, ಜೊತೆಗೆ ನಾಗರಿಕರ ಭಾಗವಹಿಸುವಿಕೆಯು ಇದನ್ನು ಪೂರೈಸಬಲ್ಲದು.

ರಾಜಕೀಯ ವಿರೋಧ, ಆಡಳಿತಾತ್ಮಕ ಜಡತೆ, ಹಣಕಾಸಿನ ಮಿತಿಗಳು, ಕೌಶಲ್ಯ ಕೊರತೆ ಗಳಂತಹ ಸವಾಲುಗಳಿಗೆ ಹಂತ ಹಂತದ ಅನುಷ್ಠಾನ, ಪೈಲಟ್ ಯೋಜನೆಗಳು, ಸಾರ್ವ ಜನಿಕ ಖಾಸಗಿ ಸಹಭಾಗಿತ್ವ ಹಾಗೂ ನಿರಂತರ ತರಬೇತಿ ಕಾರ್ಯಕ್ರಮಗಳು ಉತ್ತರವಾಗಿ ನಿಲ್ಲಬಲ್ಲವು. ಈ ಯೋಜನೆಗೆ, ಕರ್ನಾಟಕದ ಗ್ರಾಮೀಣ ವೈವಿಧ್ಯ- ಕರಾವಳಿ, ಮಲೆನಾಡು, ಬಯಲುಸೀಮೆ ಈ ಮಾದರಿಗೆ ಸೂಕ್ತ ಪ್ರಯೋಗಶಾಲೆಯಾಗಿದೆ.

ಮನರೇಗಾ ಯೋಜನೆಯ ಹಿಂದಿನ ಸಾಧಕ-ಭಾದಕಗಳನ್ನು, ಅನುಭವಗಳನ್ನು ಬಳಸಿ ಕೊಂಡು ವಿಕಸಿತ ಭಾರತ-ಜಿ ರಾಮ್‌ಜಿ ಪೈಲಟ್ ಯೋಜನೆಗಳನ್ನು ಜಿಲ್ಲಾವಾರು ಜಾರಿಗೆ ತರುವುದು ಸಾಧ್ಯ ಎಂದು ಕೇಂದ್ರ ಕೃಷಿಮಂತ್ರಿಗಳು ದೃಢ ಆತ್ಮವಿಶ್ವಾಸದಿಂದ ಸದನದಲ್ಲಿ ಹೇಳಿದ್ದು, ಈ ಯೋಜನೆ ದೂರದೃಷ್ಟಿಯುಳ್ಳದ್ದಾಗಿದೆ ಎಂದು ನಾವು ಅನುಮೋದಿಸ ಬಹುದು.

ಇಂದಿನ ಅತ್ಯಾಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಕೂಲಿಗಾಗಿಯೋ, ಆ ಹೊತ್ತಿನ ಊಟಕ್ಕಾಗಿಯೋ ಯೋಜನೆಗಳನ್ನು ರೂಪಿಸಿ, ಜನರಿಗೆ ತಲುಪಿಸುವ ಬದಲಾಗಿ, ಭವ್ಯ ಭವಿಷ್ಯತ್ತನ್ನೂ ನಾವು ಗಮನಿಸಬೇಕಿದೆ.

ಮನರೇಗಾದಿಂದ ವಿಕಸಿತ ಭಾರತ-ಜಿ ರಾಮ್‌ಜಿ ಪರಿವರ್ತನೆ, ಕೇವಲ ಯೋಜನಾ ಬದಲಾವಣೆ ಅಲ್ಲ; ಅದು ಅಭಿವೃದ್ಧಿ ತತ್ವದ ಬದಲಾವಣೆ. ಉದ್ಯೋಗ ಖಾತರಿಯಿಂದ ಉದ್ಯೋಗ ಸೃಷ್ಟಿಗೆ, ಸಹಾಯಧನದಿಂದ ಸ್ವಾವಲಂಬನೆಗೆ, ಕೇಂದ್ರಿತ ಯೋಜನೆಯಿಂದ ಗ್ರಾಮಾಧಾರಿತ ಆಡಳಿತಕ್ಕೆ ಸಾಗುವ ಪಥ.

ಗ್ರಾಮೀಣ ಭಾರತದ ಭವಿಷ್ಯವು ಉತ್ಪಾದಕ, ಸ್ವಾವಲಂಬಿ, ಮತ್ತು ಗೌರವಯುತ ಜೀವನೋ ಪಾಯದಲ್ಲಿ ಅಡಗಿದೆ. ಮನರೇಗಾ, ಆ ದಿಕ್ಕಿನಲ್ಲಿ ಮೊದಲ ಹೆಜ್ಜೆ. ವಿಕಸಿತ ಭಾರತ-ಜಿ ರಾಮ್‌ಜಿ ಅದನ್ನು ಪೂರ್ಣಗೊಳಿಸುವ ಮುಂದಿನ ಹೆಜ್ಜೆ. ಈ ಪರಿವರ್ತನೆ ಯಶಸ್ವಿ