ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ವೀರಶೈವ ಲಿಂಗಾಯತರೇ, ಉಳಿವಿಗಾಗಿ ಎದ್ದೇಳಿ, ಎಚ್ಚರಗೊಳ್ಳಿ !

ಇಂಥ ಪ್ರಬುದ್ಧ ಮತದಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಮತದಾರರನ್ನು ವಿಭಜಿಸ ಲೆಂದೇ ಸೃಷ್ಟಿಯಾದದ್ದು ‘ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿ ಉರ್ಫ್ ಅರಿವಳಿ!’ ಇದಕ್ಕೆ ರಾಜ ಕೀಯ ಪಕ್ಷವೊಂದು ತನ್ನ ಅಡುಗೆಮನೆ ಸಂಶೋಧಕ ಬುದ್ಧಿಜೀವಿಗಳ ಸಹಯೋಗದಲ್ಲಿ ಯಶಸ್ವಿಯಾಗಿ ಗೊಂದಲ ಸೃಷ್ಟಿಸಿತು

ವೀರಶೈವ ಲಿಂಗಾಯತರೇ, ಉಳಿವಿಗಾಗಿ ಎದ್ದೇಳಿ, ಎಚ್ಚರಗೊಳ್ಳಿ !

Profile Ashok Nayak May 19, 2025 8:02 AM

ಬಸವ ಮಂಟಪ

ರವಿ ಹಂಜ್

ಬಸವಣ್ಣನ ಶರಣಪಡೆಯ ಪ್ರಮುಖ ಸಕಳೇಶ ಮಾದರಸನ ಮೊಮ್ಮಗನಾದ ಕೆರೆಯ ಪದ್ಮರಸನು ಹೊಯ್ಸಳರ ಮಂತ್ರಿಯಾಗಿ ದ್ವಾರಸಮುದ್ರದಲ್ಲಿ ನೆಲೆಸಿದ್ದನು. ವೀರಶೈವ ಮತ ಮತ್ತು ಸಿದ್ಧಾಂತ ದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಇವನು ವೀರಶೈವದರ್ಶನದ ಕುರಿತಾಗಿ ‘ದೀಕ್ಷಾ ಬೋಧೆ’ ಕೃತಿಯನ್ನು ರಚಿಸಿದ್ದಾನೆ. ಈ ಕೃತಿಯಲ್ಲಿ ವೀರಶೈವವು ಹೇಗೆ ವೇದಾಗಮೋ ಪನಿಷತ್ತುಗಳ ಆಧಾರವಾಗಿದೆ ಮತ್ತು ಹೇಗೆ ವಿಭಿನ್ನವಾಗಿಯೂ ಇದೆ ಎಂದು ವಿಸ್ತೃತವಾಗಿ ತಿಳಿಸಿರುವುದಲ್ಲದೆ ವೀರಶೈವ ವಿಧಿ ವಿಧಾನಗಳನ್ನು ದಾಖಲಿಸಿದ್ದಾನೆ. ಬಸವಣ್ಣನ ಕಾಲಕ್ಕಿಂತ ಕೇವಲ ಐವತ್ತು ವರ್ಷ ಗಳ ಅಂತರದಲ್ಲಿದ್ದ ಮತ್ತು ವಚನಕಾರನೋರ್ವನ ನೇರ ವಂಶಜನೂ ಆದ ಪದ್ಮರಸನು ಇಡೀ ಗ್ರಂಥದಲ್ಲಿ ಎಲ್ಲಿಯೂ ಬಸವಣ್ಣನನ್ನಾಗಲಿ, ವಚನ ಗಳನ್ನಾಗಲಿ ಉಲ್ಲೇಖಿಸಿಲ್ಲ. ಇಡೀ ಗ್ರಂಥದಲ್ಲಿ ಅನಾದಿಯಾಗಿದ್ದ ವೀರಶೈವ ಪರಂಪರೆಯ ಕುರಿತಾಗಿ ಬರೆದಿzನೆ. ಅಲ್ಲಿಗೆ ವೀರಶೈವ ಲಿಂಗವಂತ ಮತವು ಅಧಿಕೃತವಾಗಿ ಅನಾದಿಯಿಂದಲೂ ಇದ್ದು ಬಸವಣ್ಣನು ಅದರ ಅನುಯಾಯಿಯಾ ಗಿದ್ದನೆಂದು ತಿಳಿದು ಬರುತ್ತದೆ.

ಅದೇ ರೀತಿ 1340ರ ಕಾಲಘಟ್ಟದ ಹೊಯ್ಸಳರ ಹರದನಹಳ್ಳಿ ಶಾಸನದಲ್ಲಿ ಮಹದೇಶ್ವರರನ್ನು ಒಳಗೊಂಡಂತೆ ಹಿರಿನಂಕಾಶ್ವೇರ, ಪಂದೇಶ್ವರ, ಸಿದ್ದೇಶ್ವರ, ಬ್ರಹ್ಮೇಶ್ವರ ಎಂಬುವವರಿಗೆ ಪ್ರಭು ಲಿಂಗಾ ರಾಧ್ಯರು ಲಿಂಗಧಾರಣೆಯನ್ನು ಮಾಡಿ ಐದು ಲಿಂಗಗಳಿಗೆ ಐದು ಮಠಗಳೆಂದು ಹೇಳಿ ಐವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದರು ಎನ್ನುತ್ತದೆಯೇ ಹೊರತು ಬಸವ ಸ್ಥಾಪಿತ ಎಂದು ಹೇಳಿಲ್ಲ.

ಶಾಸನದ ಪಾಠ ನಿಮಗಾಗಿ: “ಕುಲಾಂತರಮಿಗೆ ಕೂಟಪಾಲುಗಳು ವಿಂಗಡಿಸಿ ಮುನ್ನೂರು ಮೂವ ತ್ತೈದು ಪಂಗಡ (ಗ)ಳನಾಗಮಾಡಿ ತತ್ತವರಿಗೆ ಆರಾಧಕರಾಗಿಯು ಕೋವಿನಕೆರೆ ಸಾಸಲರಾಯ ನೆಂಬುವಗೆ ಲಿಂಗಧಾರಣೆಯಂ ಮಾಡಿ ನಟಗಾರ ರಾಯಣನಾಯ್ಕನಿಗೆ ಮಲೆನಾಡಿಗೆ ಪಟ್ಟವಂ ಕಟ್ಟಿ ಕುಳವಂದಕೆ ವಂಬತ್ತು ಪ್ರಯಪಣದಂತೆ ಯಲ್ಲರೊಳು ಕಟ್ಟು ಕಾಣಿಕೆಗಳನು ಪಡೆದು ಪಡಿಪತ್ತಿ ದೇಶಕ್ಕೆ ಪ್ರಯಾಣಮಾಡಿ ಸತ್ವ ದಷ್ಟನಾದ ರಾಜನ ಮಗನಂ ಬದುಕಿಸಿ ವಾದದಲ್ಲಿ ಗೆಲದು ನಾಮವನು ತೆಗಿತಿ ಭಸ್ಮವಂ ಇಡಿಸಿ ಲಿಂಗಧಾರಣೆಯಂ ಮಾಡಿ ತುಳುವ ದೇಶಕ್ಕೆ ಬಂದು ತುಲಕಾಣ್ಯ ರಿಗೆ ಮಹಿಮೆಯಂ ತೋರಿ ಶತಪವಾಡಮಹನೀಯರೆಂದು ಬಿರುದಂ ಪಡೆದ ಶ್ರೀಮದ್ಯೋಸಲಾ ರೈವರಸ್ವಾಮಿ ಸನ್ನಿಧಾನ ಸಂಕಾಶೆ | ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರೊತ್ರಿವಲ್ಲಭಶ್ರೀಪ್ರತಾಪ ಚಕ್ರವರ್ತಿ ಹೊಯ್ಸಳ ವೀರಬಳದೇವರು ಶ್ರೀವಿಜಯಾಭ್ಯುದಯ ಶಾಲಿವಾಹನಶಕ ವರ್ಷಂಗಳು 1246ನೆಯ ತಾರಣಸಂಬತ್ತರದ ಮಾಗ ಸುದ್ದ ತದಿಗೆಯಲು ದಕ್ಷಿಣದೇಶ ವಿಜಯಯಾತ್ರೆಯಲು ಬರಸಿಕೊಟ್ಟ ತಾಂಬ್ರಶಾಸನಕ್ರಮವೆಂತೆಂದೊಡೆ ||

ಇದನ್ನೂ ಓದಿ: Ravi Hunj Column: ಬಸವಣ್ಣ ಜಾಗತಿಕ ಸಾಂಸ್ಕೃತಿಕ ನಾಯಕನೇ ವಿನಾ, ಧರ್ಮಭಂಜಕ ಮತಸ್ಥಾಪಕನಲ್ಲ

1) ಹಿರಿ ಮಡಿವಾಳದ ಶಿವನಂಕಾರೇಶ್ವರರಿಗೆ ಚಂದ್ರಣಿಮಠದವರು 2) ಮಾದೇಶ್ವರರಿಗೆ ಕಂಚಿಕೆ ಲುಗಾಣ್ಯದ ಮಠ 3) ಸಂದೇಶ್ವರರಿಗೆ ಶ್ರೀವಾಣಿಜ್ಯ ಪುರಿಮಠ 4) ಸಿದ್ದೇಶ್ವರರಿಗೆ ಕೆಂಬಲ್ಲಮಕ 5) ಬ್ರಂಹ್ಮಶ್ವರರಿಗೆ ಮಹಲಿಂಗಿಮಠವೆಂತಲೂ ಈ ಪಂಚೈದು ಲಿಂಗಗಳಿಗೆ ಈ ಮಠಗಳೆಂದು ವಿಽಶಿ ತತ್ತದೇವಸ್ಥಾನಕೆ ಸೇರಿದ ತಂಮಡಿಗಳು ಶಿಷ್ಯರು ಬೇಡಗಂಪಣಗಳಿಗೆ ತತ್ತ್ವ ಮಠಾಧಿಪತಿಗಳೇ ಲಿಂಗ ಧಾರಣ ತೀರ್ಥ ಪ್ರಸಾದಗಳಂ ಕೊಟ್ಟು ಅವರಿಂ ಕಟ್ಟು ಕಾಣಿಕೆಗಳಂ ತೆಗೆದು ಆ ದೇವಾಲಯಂ ಗಳಲಿ ನಡೆಯುವ ಯ ಕಾರೈಗಳಂ ನಡೆಸತಕ್ಕುದೆಂದು ನೇಮಿಸಿರುತ್ತೇವೆ..." ಎಂದಿದೆ.

ಒಟ್ಟಾರೆ ಇಳೆಯಗಲ ಮುಗಿಲಗಲ ಬಗೆದಷ್ಟೂ, ಮೊಗೆದಷ್ಟೂ ಐತಿಹಾಸಿಕ, ಭೌಗೋಳಿಕ, ಸಾಹಿತ್ಯಿಕ, ಮತ್ತು ಪುರಾತತ್ವ ಪುರಾವೆಗಳು ವೀರಶೈವ ಲಿಂಗಾಯತ ಒಂದೇ ಎಂದು ಧೃಢೀಕರಿಸುತ್ತವೆ. ಭಾರತದ ಹರಪ್ಪಾ ಮೊಹೆಂಜೋದಾರೋ ಇತಿಹಾಸದಿಂದ ವರ್ತಮಾನದವರೆಗಿನ ಈ ಪುರಾವೆಗಳು ಕಣ್ಣಿಗೆ ಢಾಳಾಗಿ ರಾಚುತ್ತವೆ. ಹೀಗಿzಗ ಶೂನ್ಯದಿಂದ ‘ಛೂಮಂತರ್’ ಎಂದು ಆಧುನಿಕ ಧರ್ಮ ಭಂಜಕರು ಸೃಷ್ಟಿಸಿರುವ ಪ್ರತ್ಯೇಕ ಧರ್ಮ ಎಂದಿನಿಂದಲೂ ನಿಶ್ಶೂನ್ಯವೇ ಆಗಿದೆ.

ಇದನ್ನು ಕೇವಲ ಜನರ ಗಮನಕ್ಕಾಗಿ ಕಾತರಿಸಿ, “ನನ್ನನ್ನು ಗಮನಿಸಿ, ನನ್ನನ್ನು ಗಮನಿಸಿ" ಎಂದು ಚೀತ್ಕರಿಸಿ ಪೂತ್ಕರಿಸಿ ಜಿಗಿಜಿಗಿದಾಡುವ Histrionic Personality Disorder (HBD) ಯಾನೆ “ನಾಟಕೀಯ ವ್ಯಕ್ತಿತ್ವದ ಅಸ್ವಸ್ಥತೆ"ಯ ರೋಗಿಗಳಂತೆ ಸಮಾಜವು ಈ ಭಂಜಕರನ್ನು ಉಪೇಕ್ಷಿಸಿ ಮುಂದುವರಿಯ ಬೇಕಿದೆ. ಇವರ ಶಬ್ದಮಾಲಿನ್ಯದ ಅಪಾನವಾಯುವಿನ ಈ ಉಬ್ಬರಕ್ಕೆ ಮತ್ತೊಂದು ಕಾರಣ, ಇವರು ತಮಗೆ ಹಾಲುಳಿಸಕ್ಕರೆ (ಲ್ಯಾಕ್ಟೋಸ್) ತಾಳುಗೇಡಿತನವಿದ್ದರೂ ಬಸವಣ್ಣನನ್ನು ನಂದಿನಿ ಮಾಡಿಕೊಂಡು ಹಾಲು ಹಿಂಡಿ ಹಿಗ್ಗುತ್ತಿರುವುದು! ಹಾಗಾಗಿ ವೀರಶೈವ ಲಿಂಗಾಯತ ಸಮಾಜ ಈ ಮನೋವ್ಯಾಧಿಗರ ಹಾಲುಳಿಸಕ್ಕರೆ ತಾಳುಗೇಡಿತನಕ್ಕೆ, ರಂಗಜಂಗಮಕ್ಕೆ ಮತ್ತು ನಿತ್ಯಕಲ್ಯಾಣಕ್ಕೆ ಸೂಕ್ತವಾಗಿ ಬಸವಣ್ಣನು ನಂದಿಯೆಂಬ ಗಣನೇ ಹೊರತು ನಂದಿನಿಯಲ್ಲ ಎಂದು ಎತ್ತಿ ತೋರಿಸಿಕೊಡಬೇಕಿದೆ.

ಏಕೆಂದರೆ, ಇಡೀ ದೇಶದಲ್ಲಿ ಕರ್ನಾಟಕದ ಮತದಾರರು ಪ್ರಬುದ್ಧ ಮತದಾರರೆಂಬ ಖ್ಯಾತಿ ಇದೆ. ಕರ್ನಾಟಕದ ಪ್ರಬುದ್ಧ ಮತದಾರರು ಯಾವುದೇ ಮುಲಾಜಿಲ್ಲದೆ ಆರು ತಿಂಗಳ ಅವಧಿಯ ವಿಧಾನ ಸಭೆಗೆ ಮತ್ತು ಲೋಕಸಭೆಗೆ ಬೇರೆ ಬೇರೆ ಪಕ್ಷಗಳನ್ನು ಚುನಾಯಿಸಿದ್ದಾರೆ.

ಇಂಥ ಪ್ರಬುದ್ಧ ಮತದಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಮತದಾರರನ್ನು ವಿಭಜಿಸ ಲೆಂದೇ ಸೃಷ್ಟಿಯಾದದ್ದು ‘ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿ ಉರ್ಫ್ ಅರಿವಳಿ!’ ಇದಕ್ಕೆ ರಾಜಕೀಯ ಪಕ್ಷವೊಂದು ತನ್ನ ಅಡುಗೆಮನೆ ಸಂಶೋಧಕ ಬುದ್ಧಿಜೀವಿಗಳ ಸಹಯೋಗದಲ್ಲಿ ಯಶಸ್ವಿಯಾಗಿ ಗೊಂದಲ ಸೃಷ್ಟಿಸಿತು. ಎಡಪಂಥೀಯ ನಿವೃತ್ತ ನ್ಯಾಯಾಧೀಶರೊಟ್ಟಿಗೆ ಇನ್ನೊಂ ದಿಷ್ಟು ಅದೇ ಚಿಂತನೆಯ ಮತ್ತು ಅಖಂಡ ವೀರಶೈವ ಮತದ ತಲೆಬುಡ ಅರಿಯದ ಆದರೆ ಕೆಲವು ಸುಲಭ ವಚನಗಳನ್ನು ಕಮ್ಯುನಿ ಚಿಂತನೆಗೆ ಹೋಲಿಸುವ ‘ಜೀ ಹುಜೂರ್’ ಸದಸ್ಯರ ಕಮಿಟಿ ಆಯೋಜಿಸಲಾಯಿತು. ಈ ಜೀ ಹುಜೂರ್ ಕಮಿಟಿ ತಕ್ಷಣವೇ ಆಯೋಜಕರು ಬಯಸಿದಂತೆ ವರದಿ ಗೀಚಿ ಕೇಂದ್ರಕ್ಕೆ ಕಳಿಸಿತ್ತು.

ಅಂದ ಹಾಗೆ ಈ ಕಮಿಟಿಯ ಎಲ್ಲಾ ಸದಸ್ಯರೂ ‘ಗಂಜಿ ಗಿರಾಕಿಗಳು’ ಎಂದು ಸಾಮಾಜಿಕ ಮಾಧ್ಯಮ ದಲ್ಲಿ ಖ್ಯಾತಿ ಗಳಿಸಿದ್ದರು ಎಂಬುದು ಉಲ್ಲೇಖಾರ್ಹ. ಇತ್ತ ನಿವೃತ್ತರಾಗಿ ಅಧಿಕಾರಕ್ಕಾಗಿ ತಹತಹಿಸು ತ್ತಿದ್ದ ಐಎಎಸ್ ಅಧಿಕಾರಿಯನ್ನು ಸಾಮಾಜಿಕವಾಗಿ ಭಂಜಕ ಬಿತ್ತನೆ ರಂಗಕ್ಕೆ ಇಳಿಸಲಾಯಿತು. ಈ ನಿವೃತ್ತ ತಮ್ಮ ಗಾರ್ದಭಾನುಭವದ ಹಿನ್ನೆಲೆಯಲ್ಲಿ ಮೀಸಲಾತಿಯ ತುಪ್ಪವನ್ನು ಅಸಹಾಯಕ ಅಮಾಯಕರ ಮೂಗಿಗೆ ಹಚ್ಚಿ ಹುಚ್ಚೆಬ್ಬಿಸಿದರು. ಹುಚ್ಚು ಹೆಚ್ಚಾಗಿ ಈಗದು ‘ಬಸವ ತಾಲಿಬಾನಿ’ ಎಂದೇ ಖ್ಯಾತಿ ಗಳಿಸುತ್ತಿದೆ. ಹೀಗೆ ವೀರಶೈವ ಮತಬ್ಯಾಂಕ್ ಅನ್ನು ಒಡೆಯಲೆಂದೇ ಪ್ರಾಯೋಜಿತ ರಾಜಕೀಯ ಪಕ್ಷದ ಜನನಾಯಕರು ಜೀವದ್ರವ್ಯ ಹರಿಸಿದರು, ಹರಿಸುತ್ತಿದ್ದಾರೆ.

ಹೀಗೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಬಾಯಲ್ಲಿ ಪಠಿಸುವ ಗಂಜಿ ಗಿರಾಕಿಗಳಿಂದ ಬಸವ ತಾಲಿಬಾನಿಗಳ ಸೃಷ್ಟಿಯಾಯಿತು ಎಂಬುದು ಒತ್ತು ಹಾಕಿ ಗುರುತು ಮಾಡಿಕೊಳ್ಳಬೇಕಾದ ಅಂಶ! ಈ ಪ್ರಾಯೋಜಿತ ರಾಜಕೀಯ ಪಕ್ಷವು ಅಧಿಕಾರದಲ್ಲಿದ್ದಾಗ ನಡೆಸಿದ್ದ ಜಾತಿಗಣತಿಯ ಪ್ರಮುಖ ಒಳ ಉದ್ದೇಶವೇ ತಾವು ಜೀವದ್ರವ ಹರಿಸಿ ಬೆಳೆಸಿದ ‘ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿ ಉರ್ಫ್ ಅರಿವಳಿ’ ಹೇಗೆ ಫಲಶೃತಿ ನೀಡಿದೆ ಎಂದು ಕಂಡುಕೊಳ್ಳುವುದಾಗಿತ್ತು.

ಅದು ಭರ್ಜರಿ ಇಳುವರಿ ನೀಡಿ ಒಂದೂವರೆ ಕೋಟಿಯಷ್ಟಿದ್ದ ಅಖಂಡ ವೀರಶೈವ ಲಿಂಗಾಯತರ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿದೆ. ಇದಕ್ಕೆ ರಾಜ್ಯಾದ್ಯಂತ ಸಂಚರಿಸಿ ಶ್ರಮಿಸಿದವರಿಗೆ ತಕ್ಕನಾಗಿ ಪ್ರಶಸ್ತಿ, ಪ್ರಾಧಿಕಾರ, ಸರಕಾರಿ ಅನುದಾನಗಳ ಬೋನಸ್, ಇನ್‌ಕ್ರಿಮೆಂಟ್, ತುಟ್ಟಿಭತ್ಯೆ ಇತ್ಯಾದಿ ಸ್ಥಾವರಗಳನ್ನು ಕೊಡಲಾಗಿದೆ (ಏಕಸದಸ್ಯ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ, ಅನುಭವ ಮಂಟಪ ಸಮಿತಿ ಅಂಥ ಕೆಲವು ಉದಾಹರಣೆಗಳು).

ಆದರೆ ಪ್ರತ್ಯೇಕ ಧರ್ಮದ ನಶೆಯ ಲಿಂಗವಂತ ಶ್ರೀಸಾಮಾನ್ಯ ಮಾತ್ರ ನಿರ್ಲಿಂಗಿಯಾಗಿದ್ದಾನೆ. ಈ ಅಂಶಗಳನ್ನು ಅಖಂಡ ವೀರಶೈವ ಲಿಂಗವಂತ ಸಮಾಜ ಅರಿಯದಿದ್ದರೆ ಮುಂದೆ ಇನ್ನಷ್ಟು ವಿಚ್ಛಿದ್ರ‌ ಗೊಂಡು ನೆಲೆಯಿಲ್ಲದ ಸಮಾಜವಾಗುವುದು ನಿಶ್ಚಿತ ಎಂದು ಈಗಾಗಲೇ ಪ್ರಕಟಿಸಿರುವ ಜಾತಿಗಣತಿ ಯಲ್ಲಿ ಸಾಬೀತಾಗಿದೆ ಎಂಬುದು ವಾಸ್ತವಿಕ ಸಂಗತಿ.

ಈ ಹುನ್ನಾರದ ಸಂಕಥನವನ್ನು ಸಂಶೋಧನ ನೆಲೆ, ಐತಿಹಾಸಿಕ ಪುರಾವೆ, ಪುರಾತತ್ವ ಸಾಕ್ಷಿ ಮತ್ತು ತಾರ್ಕಿಕ ವಿಶ್ಲೇಷಣೆಯಿಂದ ಕಾಠಿಣ್ಯ ನಿಷ್ಠುರವಾಗಿ ಸುಳ್ಳೆಂದು ಸಾಬೀತುಪಡಿಸಿ ‘ಸತ್ಯಮೇವ ಜಯತೆ’ ಯನ್ನು ‘ವಿಶ್ವವಾಣಿ’ಯು ಎತ್ತಿ ಹಿಡಿದಿದೆ. ‘ವಿಶ್ವವಾಣಿ’ಯ ಅಂಕಣದಷ್ಟು ತಾರ್ಕಿಕವಾಗಿ ಭಂಜಕರು ತಮ್ಮದು ಸತ್ಯವೆಂದು ಮೊತ್ತ ಮೊದಲ ‘ಗೊರುಚ’ರಿಂದ ಕಟ್ಟಕಡೆಯ ‘ಬಿಟ್ಬಂದಪ್ಪ’ನವರೆಗೆ ಇನ್ನೂ ಏಳು ಜನ್ಮದಲ್ಲಿ ಸಾಕ್ಷಿ ಪುರಾವೆ ಕೊಡಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸ್ಫಟಿಕ-ಸದೃಶ ಸತ್ಯ.

ಹಾಗಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಎಂಬ ಮೂಗಿನ ತುಪ್ಪಕ್ಕೆ ಕಾಯುತ್ತಿರುವವರಿಗೆ ಮೂಗಿನ ಗೊಣ್ಣೆ ನಾಲಿಗೆಯ ಮೇಲೆ ಸುರಿದೀತೇ ಹೊರತು ತುಪ್ಪವಂತೂ ಅಲ್ಲವೇ ಅಲ್ಲ. ಹಾಗಾಗಿ ರೇಣುಕರೆನ್ನಿ ಬಸವನೆನ್ನಿ, ಪರಂಪರೆಯೆನ್ನಿ ಕ್ರಾಂತಿಯೆನ್ನಿ, ಸಂಸ್ಕೃತವೆನ್ನಿ ಕನ್ನಡವೆನ್ನಿ, ಆಚಾರ ವೆನ್ನಿ ವಿಚಾರವೆನ್ನಿ, ಸಂಸ್ಥಾಪಕನೆನ್ನಿ ಅನುಯಾಯಿಯೆನ್ನಿ ಒಟ್ಟಾರೆ ಲಿಂಗವಂತ ವೀರಶೈವರಾಗಿ ದ್ದೀರಿ.

ಧಾರ್ಮಿಕವಾಗಿ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲವನ್ನೇ ಆಚರಿಸುತ್ತೀರಿ. ಇದೇ ಅಂತಿಮ ತಾರ್ಕಿಕ, ಪಾರಂಪರಿಕ ಸತ್ಯ. ಒಪ್ಪಿದರೂ ಒಪ್ಪದಿದ್ದರೂ ಎಲ್ಲಾ ಭಿನ್ನಾಭಿಪ್ರಾಯ, ನಂಬಿಕೆಗಳನ್ನು ಆವರವರ ಮನೆಯ ದೇವರ ಕೋಣೆಗೆ ಸೀಮಿತಗೊಳಿಸಿ ಅಖಂಡ ವೀರಶೈವ ಲಿಂಗವಂತ ರಾಗಿರು ವುದೇ ಅಂತಿಮ ಸತ್ಯ! ಯಾವ ಜಾಮದಾರ, ನಿಜಗುಣ, ಸಾಣೆಹಳ್ಳಿ, ಬೆಲ್ದಾಳ, ದರ್ಗಾ, ಕಲಬುರ್ಗಿ ಏನೇ ಹೇಳಿದರೂ ಅವರೆಲ್ಲರ ಅಭಿಪ್ರಾಯಗಳು ಕೇವಲ ಕೇವಲ ಕೇವಲ ಅವರ ರಾಜಕಾರಣ ನೆಲೆಯಿಂದ ತಮ್ಮ ನೆಲೆ ಕಂಡುಕೊಳ್ಳಲು ವ್ಯವಸ್ಥಿತವಾಗಿ ಸೃಜಿಸಿದ ಜನಾಂಗೀಯ ದ್ವೇಷದ ಸಂಕಥನಗಳು.

ಚೀನಾದ ನರಮೇಧ ಸರ್ವಾಧಿಕಾರಿ ಮಾವೋನ ಪ್ರತಿಯೊಂದು ಸೂತ್ರಗಳೂ ಬೌದ್ಧ ಸೂತ್ರ ದಂತೆಯೇ ಇದ್ದರೂ ಅವುಗಳ ಅರ್ಥೈಸುವಿಕೆ ಮಾತ್ರ ವ್ಯತಿರಿಕ್ತವಾಗಿದ್ದ ರೀತಿಯಲ್ಲಿಯೇ ಈ ಅಧಮರ ವಚನಗಳ ವ್ಯಾಖ್ಯಾನವಾಗಿದೆ. ಇಂಥವರನ್ನು ಮನಗಂಡೇ ಅರಿವಿನ ಮಾರಿತಂದೆಯು ಹೀಗೆ ಹೇಳಿದ್ದಾನೆ: ‘ಖ್ಯಾತಿ ಲಾಭಕ್ಕೆ ಮಾಡುವಾತ ಭಕ್ತನಲ್ಲ. ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮವಲ್ಲ. ತನು ತಲೆ ಬತ್ತಲೆಯಾಗಿ, ಮನ ತ್ರಿವಿಧ ಆಸೆ ಉಳ್ಳನ್ನಕ್ಕ ವಿರಕ್ತನಲ್ಲ. ಇಂತೀ ಗುಣವ ಸಂಪಾದಿಸುವನ್ನಕ್ಕ, ಎನಗೆ ಮುಕ್ತಿಯೆಂಬ ಬಟ್ಟೆಯಿಲ್ಲ. ನೀ ಸತ್ತೆ, ನಾ ಕೆಟ್ಟೆ, ಮನಸಂದಿತ್ತು ಮಾರೇಶ್ವರಾ. (ಸಮಗ್ರ ವಚನ ಸಂಪುಟ 8, ವಚನ ಸಂಖ್ಯೆ 942).

ಮೂಲತಃ ಆಚಾರ ಮತ್ತು ವಿಚಾರಗಳನ್ನು ಪಾಲಿಸಲಾಗದ ಸೋಮಾರಿಗಳು ವಚನಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಕಾರಣ ಸಾಮಾನ್ಯರಿಗೆ ಭಂಜಕರ ಸಂಕಥನ ರುಚಿಸುತ್ತದೆ. “ಆಯ್ದಕ್ಕಿ ಮಾರಯ್ಯನು, ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.

ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು’ ಎಂದು ಹೇಳಿzನೆ. ಹಾಗಾಗಿ ಗುರುಲಿಂಗಜಂಗಮ ಬಿಟ್ಟು ಆರಾಮವಾಗಿ ಕೆಲಸ ಮಾಡಿಕೊಂಡು ಹೋಗಿ" ಎಂದರೆ ಅದು ಯಾರಿಗೆ ತಾನೇ ರುಚಿಸದು?! ‘ವೇದ, ಆಗಮ, ಉಪನಿಷತ್ತು, ತರ್ಕಗಳನ್ನು ಶರಣರು ತಿರಸ್ಕರಿಸಿzರೆ’ ಎಂದರೆ ಆಸಕ್ತರೂ ಅವುಗಳನ್ನು ‘ಓದುವುದು ತಪ್ಪಿತು’ ಎಂದು ನಿರಾಳವಾಗುತ್ತಾರೆ.

ಪ್ರೊ.ಕಲಬುರ್ಗಿಯವರು, “ಯಾವ ಧರ್ಮದಲ್ಲಿ ಕಡಿಮೆ ಪದಗಳಿರುತ್ತವೆಯೋ ಅದೇ ಜಗತ್ತಿನ ದೊಡ್ಡ ಧರ್ಮ. ಲಿಂಗಾಯತದಲ್ಲಿ ಗುರು, ಲಿಂಗ, ಜಂಗಮ, ಕಾಯಕ ಮತ್ತು ದಾಸೋಹ ಎಂಬ 5 ಪದಗಳಿವೆ. ಈ ಪದಗಳ ಆಧಾರದ ಮೇಲೆಯೇ 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಉದಯ ವಾಗಿದೆ" ಎಂದಿದ್ದಾರೆ.

ಹಾಗಾಗಿ ನಮ್ಮದು ದೊಡ್ಡಧರ್ಮ ಎನ್ನುವ ಈ ನಾಟಕೀಯ ವ್ಯಕ್ತಿತ್ವದ ಅಸ್ವಸ್ಥರು ಪಂಚಾಚಾರ, ಅಷ್ಟಾವರಣ, ಷಟ್ಸ್ಥಲಗಳಲ್ಲಿ ಎಷ್ಟು ಪದಗಳಿವೆ. ಇವುಗಳಿಗನುಗುಣವಾಗಿ ಸಂಯೋಜನ ಗೊಂಡಿರುವ ವಚನಗಳೆಷ್ಟು ಸಾವಿರವಿವೆ ಎಂಬ ಕನಿಷ್ಠ ಅರಿವೂ ಇಲ್ಲದೆ ತಮ್ಮ ಸುಳ್ಳುಗಳನ್ನು ಸತ್ಯದ ನೆತ್ತಿಯ ಮೇಲೆ ಹೊಡೆದಂತೆ ಯಾವುದೇ ಅಳುಕಿಲ್ಲದೆ ಎಗ್ಗಿಲ್ಲದೇ ಕುಟ್ಟಿ ಕುಟ್ಟಿ ಹು(ಕೆ)ಚ್ಚಿ ನಿಂದ ಮಂಡಿಸುತ್ತಾರೆ.

ಅಂದ ಹಾಗೆ, ಕಡಿಮೆ ಪದವಿದ್ದರೆ ದೊಡ್ಡ ಧರ್ಮ ಎನ್ನುವುದು ಯಾವ ಶಾಸ್ತ್ರ, ತರ್ಕ, ಸೂತ್ರದ ಪ್ರಮೇಯವಾಗಿದೆ?! ಓರ್ವ ಅಧ್ಯಾತ್ಮಿ ತನ್ನ ಗುರುಗಳ ಬಳಿ ಹೋದನು. ಗುರುಗಳು, “ನನ್ನಿಂದ ಏನನ್ನು ಕಲಿಯಲು ಬಯಸುತ್ತೀ" ಎಂದರು. ಆಗ ಅಧ್ಯಾತ್ಮಿ ಉತ್ತರವಾಗಿ ತನ್ನ ಕೈಯಲ್ಲಿದ್ದ ಸೂಜಿ ಯೊಂದನ್ನು ಗುರುಗಳ ಕೈಯಲ್ಲಿದ್ದ ನೀರು ತುಂಬಿದ ಭಿಕ್ಷಾಪಾತ್ರೆಯಲ್ಲಿ ಹಾಕಿದನು. ಇದರ ಅರ್ಥ ತಮ್ಮ ಜ್ಞಾನದ ಆಳಕ್ಕಿಳಿಯುವ ಆಸೆ ಎಂದು ಅರ್ಥೈಸಿಕೊಂಡ ಗುರು ಅವನನ್ನು ಕೂಡಲೇ ಶಿಷ್ಯನಾಗಿ ಸ್ವೀಕರಿಸಿದನು.

ಇಂಥ ಮೌನ, ಕನಿಷ್ಠ ಮಾತು, ಮಾಂತ್ರಿಕ ಉದ್ಘೋಷಗಳ ಆದರೆ ಅತ್ಯಂತ ಆಳದ ಅತೀಂದ್ರಿಯ ಜ್ಞಾನದ ಸಾವಿರಾರು ಕತೆಗಳು ಜಗತ್ತಿ ನಾದ್ಯಂತದ ಆಧ್ಯಾತ್ಮಿಕತೆಯಲ್ಲಿ ಕಾಣಬರುತ್ತವೆ. ಸಾಲುಗಳ ನಡುವಿನ ಅರ್ಥದ ಆಳವನ್ನು ಗ್ರಹಿಸದೆ ದಿವಂಗತ ಪ್ರೊ-ಸರರು ಕಡಿಮೆ ಪದವಿರುವುದು ದೊಡ್ಡ ಧರ್ಮ ಎಂದಿದ್ದಾರೆ.

ಅದನ್ನೇ ಈ ಭಂಜಕರು ‘ಪುಟಕ್ಕೊಂದು ಅಂಕ’ ಎಂದು ಬಗೆದು ನೂರಾರು ಪುಟಗಳ ಪ್ರತ್ಯೇಕ ಧರ್ಮ ಚಳವಳಿ ಪುಸ್ತಕಗಳನ್ನು ಪುಂಖಾನುಪುಂಖವಾಗಿ ಸತ್ಯ-ಮಿಥ್ಯ, ಇತಿಹಾಸ ಇತ್ಯಾದಿ ಎಂದು ತಲೆ ತಿಕ್ಕುತ್ತಿದ್ದಾರೆ. ಇಂಥ ವ್ಯಾಖ್ಯಾನಗಳಿಂದ ಜನರಿಗೆ ಜನಪ್ರಿಯ ನಾಲ್ಕು ವಚನಗಳ ಇನ್‌ಸ್ಟಂಟ್ ನೂಡಲ್ಸ್ ಬಡಿಸಿ, ಖುದ್ದು ತಾವು‌ ಭೂರಿಭೋಜನ ಮೆದ್ದು ಹಣ, ಅಧಿಕಾರ ಹೊಂದುತ್ತಿದ್ದಾರೆ.

ಹಾಗಾಗಿಯೇ ಇವರೆಲ್ಲರೂ ಹೇಳುವುದು ಅರ್ಥೈಸುವುದು ಕೇವಲ ಶಿಶುವಿಹಾರದ ಕೆಲವು ಸುಲಭದ ವಚನಗಳನ್ನು ಮಾತ್ರ. ಅದಕ್ಕಿಂತ ಹೆಚ್ಚು ತಿಳಿಯಲು ಸಾಧನೆ ಮುಖ್ಯ. ಸಾಧಕರಲ್ಲದ ಈ ಸಮಯ ಸಾಧಕರು ಇನ್ನೇನು ತಾನೇ ಸಾಧಿಸಿಯಾರು? ಇದರಲ್ಲಿ ಆದಿನ ಈದಿನ ಎನ್ನುವ ವಸೂಲಿ ಪತ್ರಿಕೆಗಳ ಕಟ್ಟಡದ ಮಾಲೀಕನೂ, ದಿವಂಗತ ವಾರಣಾಸೆಪ್ಪನವರನೆಂಬ ರಾಜಕಾರಣಿಯಿಂದ ನೆಲೆ ಕಂಡು ಕೊಂಡ ಮತ್ತು ಪ್ರೊ.ಕಲಬುರ್ಗಿಯಿಂದ ಭರಪೂರ ಡಿಟಿಪಿ ನೆಪದಲ್ಲಿ ಬಿಲ್ಲು ಮಾಡಿ ಲೂಟಿಸಿದ, ಥಾಯ್ಲೆಂಡ್ ತೊಡೆಗಳ ನಡುವೆ ‘ಬಸವಾ ಬಸವಾ’ ಎಂದ ಶೋಕಿವಾಲಾ ಕಂ ಚಳವಳಿ ಇತಿಹಾ ಸಜ್ಞನ ಇತ್ತೀಚಿನ ಪುಸ್ತಕ ಒಂದು ಉಲ್ಲೇಖನೀಯ ಪುರಾವೆ ಮಾತ್ರ.

ವೀರಶೈವ ಪಂಚಾಚಾರ್ಯರ ಕುರಿತಾಗಿ ಅಕ್ಕ ಮಹಾದೇವಿ ‘ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ...’, ಎಡೆಯೂರು ಸಿದ್ಧಲಿಂಗೇಶ್ವರರು ‘ರೇಣುಕನುದಯವಾಗ ದಿರ್ದಡೆ..’, ನಾಗಲಾಂಬಿಕೆ ‘ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ’, ಪ್ರಸಾದಿ ಭೋಗಣ್ಣನು ‘ಶ್ರೀಪತಿ ಶಿವಲೆಂಕ ಪಂಡಿತಾರಾಧ್ಯ ಏಕಾಂತದರಾಮ ಇಂತೀ ಪ್ರಥಮದ ಆಚಾರ್ಯರು...’, ಚೆನ್ನಬಸವಣ್ಣನು ‘ರೇವಣಸಿದ್ಧಯ್ಯದೇವರು ಸಾಕ್ಷಿಯಾಗಿ..’, ಎಂದು ಭಕ್ತಿಯಿಂದ ಸ್ಮರಿಸಿದ್ದಾರೆ.

ಅಲ್ಲದೇ ಸೌರಾಷ್ಟ್ರ ಸೋಮೇಶ್ವರ, ಹಾವಿನಹಾಳ ಕಲ್ಲಯ್ಯ, ಮೆರೆಮಿಂಡ ದೇವ ವಚನಕಾರರು, “ಏಕೋರಾಮಿತಂದೆ, ಪಂಡಿತಾರಾಧ್ಯ, ರೇವಣಸಿದ್ಧದೇವರು, ಸಿದ್ಧರಾಮೇಶ್ವರ ದೇವರು ಮತ್ತು ಮರುಳಸಿದ್ದೇಶ್ವರದೇವರು" ಎಂದು ಎ ಪಂಚಾಚಾರ್ಯರನ್ನು ಸ್ಮರಿಸಿzರೆ. ‘ಕಲ್ಲಿನಲ್ಲಿ ಹುಟ್ಟಿದ್ದರೆ?’ ಎಂದು ಪೌರಾಣಿಕ ಕಥೆಗಳ ಅರ್ಥವನ್ನೇ ಅರ್ಥಹೀನದಂತೆ ಜೋಕಿಸುವ ಇವರು ಈ ಎಲ್ಲಾ ವಚನಗಳಿಗೆ ಯಾವುದೇ ಉತ್ತರ ಕೊಡರು.

ಇದೆಲ್ಲ ಕಲ್ಬುರ್ಗಿಯವರು ಹೇಳಿದಂತೆ ಪ್ರಕ್ಷಿಪ್ತ ಎಂದು ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂಬ ಸಿದ್ಧಾಂತಕ್ಕೆ ಅಂಟಿಕೊಳ್ಳುತ್ತಾರೆ. ಇಂಥ ವಚನಗಳು ಇವರ ಗಮನಕ್ಕೆ ಬರುವುದೂ ಇಲ್ಲ, ಅವರಿಗೆ ಅವು ಅರ್ಥವಾಗುವುದೂ ಇಲ್ಲ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)