ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ರಾಜಸ್ಥಾನದಲ್ಲಿ ದುಡ್ಡನ್ನ ನೀರಿನಂತೆ ಖರ್ಚು ಮಾಡಬೇಕು

ದುಡ್ಡು ಪೀಕುತ್ತಿರೋ ಇವರನ್ನು ನೋಡಿದ ಮೇಲೆ ಯಂಡಮೂರಿ ವೀರೇಂದ್ರನಾಥ್ ಅವರು ‘ದುಡ್ಡು ಮಾಡುವುದು ಹೇಗೆ’ ಎಂಬ ತಮ್ಮ ಪುಸ್ತಕದಲ್ಲಿ ಬರೆದ ಒಂದು ವಿಷಯ ನೆನಪಾಯಿತು

ಹರಿ ಪರಾಕ್‌ ಹರಿ ಪರಾಕ್‌ Dec 8, 2024 6:57 AM

ತುಂಟರಗಾಳಿ

ಸಿನಿಗನ್ನಡ

ಇತ್ತೀಚೆಗೆ ಕೆಲವರು ಸಿನಿಮಾ ಆಡಿಷನ್‌ಗೆ ಅಂತ ಕರೆದು ಅಲ್ಲಿಗೆ ಅವಕಾಶಕ್ಕಾಗಿ ಬರುವರನ್ನು ಬಕ್ರಾ ಮಾಡುತ್ತಿರುವ ಘಟನೆಗಳು ವರದಿಯಾಗಿವೆ. ಹಾಗೆ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕೆ ಅಂತ ಬಂದವರ ಬಳಿ, “ನೀವು ಕಲಾವಿದರ ಸಂಘದ ಕಾರ್ಡ್ ಮಾಡಿಸಿಕೊಳ್ಳಬೇಕು. ಅದಕ್ಕೆ ಇಷ್ಟು ಖರ್ಚಾ ಗುತ್ತೆ, ಅದೆ ನಾವೇ ಮಾಡಿಸಿಕೊಡ್ತೀವಿ" ಅಂತ ದುಡ್ಡುಪೀಕುತ್ತಿರೋ ಇವರನ್ನು ನೋಡಿದ ಮೇಲೆ ಯಂಡಮೂರಿ ವೀರೇಂದ್ರನಾಥ್ ಅವರು ‘ದುಡ್ಡು ಮಾಡುವುದು ಹೇಗೆ’ಎಂಬ ತಮ್ಮ ಪುಸ್ತಕದಲ್ಲಿ ಬರೆದ ಒಂದು ವಿಷಯ ನೆನಪಾಯಿತು.

ಯಂಡಮೂರಿ ಇದನ್ನ ಎಷ್ಟು ಜಾಣ್ಮೆಯಿಂದ ಬರೆದಿದ್ದಾರೆ ಅಂದ್ರೆ ಯಾರೂ ಈ ರೀತಿ ಮೋಸ ಮಾಡುವವರ ಮೇಲೆ ಕೇಸು ಹಾಕುವಂತಿಲ್ಲ. ಆ ಪ್ಲ್ಯಾನ್ ಏನಪ್ಪಾ ಅಂದ್ರೆ, ‘ನಾವು ಸಿನಿಮಾ ಮಾಡ್ತಾ ಇದ್ದೀವಿ, ಕಲಾವಿದರು ಬೇಕಾಗಿzರೆ’ಅಂತ ಕಾಲ್ ಮಾಡೋದು. ಅಲ್ಲಿಗೆ ಬರುವವರಿಗೆಲ್ಲ, “ನಿಮಗೆ ನಮ್ಮ ಸಿನಿಮಾದಲ್ಲಿ ಅಭಿನಯಿಸೋಕೆ ತರಬೇತಿಕೊಡ್ತೀವಿ, ತರಬೇತಿ ಮುಗಿದ ಮೇಲೆ ನಾವು ಸಿನಿಮಾ ಮಾಡುವಾಗ ನಿಮ್ಮನ್ನ ಕರೆದು 100 ಪರ್ಸೆಂಟ್ ಅವಕಾಶಕೊಡುತ್ತೇವೆ ಅಂತ ಅಗ್ರಿಮೆಂಟ್ ಮಾಡಿಕೊಡ್ತೀವಿ. ಆದ್ರೆ ತರಬೇತಿಗೆ ಅಂತ ನೀವು 25 ಸಾವಿರ ರುಪಾಯಿ ಕೊಡಬೇಕು" ಅಂತ ಎಲ್ಲರಿಂದ 25 ಸಾವಿರ ರುಪಾಯಿ ತಗೊಂಡು, ಅದರಲ್ಲಿ ಒಂದೆರಡು ಸಾವಿರ ಖರ್ಚು ಮಾಡಿ,ಯಾವುದೋ ಕೆಲಸಕ್ಕೆ ಬಾರದ ಕೆಲವು ತರಬೇತಿ ಕೊಟ್ಟಂತೆ ಮಾಡಿ ಕಳಿಸೋದು.

ಇವರ ಪ್ಲ್ಯಾನ್ ಏನಪ್ಪಾ ಅಂದ್ರೆ ಕಥೆ ಅಲ್ಲಿಗೇ ಮುಗೀತು. ಅವರು ಯಾವತ್ತೂ ಸಿನಿಮಾ ಮಾಡೋದೇ ಇಲ್ಲ. ಅವರುಅಗ್ರಿಮೆಂಟ್‌ನಲ್ಲಿ ಹೇಳಿರೋದು “ನಾವು ಸಿನಿಮಾ ಮಾಡುವಾಗ 100 ಪರ್ಸೆಂಟ್ ನಿಮ್ಮನ್ನು ಕರೆದು ಅವಕಾಶ ಕೊಡ್ತೀವಿ" ಅಂತ. ಸಿನಿಮಾ ಮಾಡೇ ಮಾಡ್ತೀವಿ ಅಂತೇನೂ ಹೇಳಿಲ್ಲ. ಅಲ್ಲಿಗೆ ಅವರು ಸಿನಿಮಾ ಮಾಡಲ್ಲ, ಇವರಿಗೆ ಅವಕಾಶ ಸಿಗಲ್ಲ. ಆದರೆ, ಅವರಿಗೆ ಮಾತ್ರ ಪ್ರತಿಯೊಬ್ಬರಿಂದ ಕಮ್ಮಿ ಅಂದ್ರೂ 20 ಸಾವಿರ ರುಪಾಯಿ ಉಳಿಯುತ್ತೆ. ಪುಣ್ಯಕ್ಕೆ ಸ್ಯಾಂಡಲ್‌ವುಡ್‌ ನಲ್ಲಿ ಇಂಥ ಕೆಲಸ ಇನ್ನೂ ಯಾರೂ ಮಾಡಿಲ್ಲ.

ಲೂಸ್‌ ಟಾಕ್‌ -ಸ್ಯಾಂಡಲ್‌ವುಡ್ ಡೈರೆಕ್ಟರ್ಏನ್ ಸರ್, ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?

ಅಯ್ಯೋ ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀ

ರೀ ಅದು ಬರದಿಂದ ಅಲ್ಲ, ಭರದಿಂದ

ರೀ ಸ್ವಾಮಿ, ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ. ಅದಕ್ಕೇ ‘ಬರ’ದಿಂದ ಸಾಗುತ್ತಿದೆ ಅಂತ ಹೇಳಿದ್ದು

ಓ ಹಂಗೆ , ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ಥಾನಕ್ಕೆ ಹೋಗಿದ್ದಾಗ, ನಮ್ ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು ಮಾಡಿದ್ರು ಅಂತಿದ್ರಿ?

ಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ?

ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್‌ಡೈರೆಕ್ಟ್‌ ಆಗಿ ಮಾತಾಡ್ತಾ ಇದ್ದೀರ?

ಏನ್ ಮಾಡೋದು, ನಮ್ಮ ‘ನಿರ್ಮಾ’ಪಕರು ‘ಏರಿಯಲ್’ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ.. ಕಲೆ ಒಳ್ಳೆಯದೇ ನಿಜ, ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?

ಆದ್ರೂ 15 ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?

ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದಮೇಲೆ ಯಶಸ್ವಿ 10ನೇ ದಿನ, 15ನೇ ದಿನ ಅಂತ ಹಾಕ್ಕೊತಾರಲ್ಲ, ಹಂಗೇ ನಾವು ಅಮೋಘ 15 ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿದ್ದೀವಿ.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮುಗೆ ತಾನು ಗಳಿಸುತ್ತಿದ್ದ‌ ಸಂಬಳದಲ್ಲಿ ಅಷ್ಟೊಂದು ಸಮಾಧಾನ ಇರಲಿಲ್ಲ. ಹಾಗಾಗಿ ಏನಾದ ರೂ ಮಾಡಿ ಹೆಚ್ಚು ಆದಾಯ ಬರುವಂಥ ಕೆಲಸ ಮಾಡಬೇಕು ಅಂತ ಹೆಂಡತಿ ಖೇಮುಶ್ರೀ ಜತೆ ಡಿಸ್ಕಸ್ ಮಾಡಿದ. ಅದಕ್ಕೆ ಖೇಮುಶ್ರೀ ಒಂದು ಐಡಿಯಾ ಕೊಟ್ಟಳು. “ಹೇಗಿದ್ದರೂ ನಾವಿರುವ ಮನೆ ನಮ್ಮಿಬ್ಬರಿಗೆ ತೀರಾ ದೊಡ್ಡದು. ಹಾಗಾಗಿ ನಮ್ಮ ಮನೆಯಲ್ಲಿ ಪಿಜಿ ಅರೇಂಜ್ ಮಾಡಿದರೆ ಹೇಗೆ?" ಎಂಬುದು ಅವಳ ಐಡಿಯಾ, ಖೇಮುಗೂ ಆ ಐಡಿಯಾ ಹಿಡಿಸಿತು.

ಆದರೆ ಹುಡುಗರ ಪಿಜಿ ಮಾಡಿದರೆ ಅವರನ್ನು ಸಂಭಾಳಿಸುವುದು ಕಷ್ಟ. ಸೋ, ಹುಡುಗಿಯರ ಪಿಜಿ ಮಾಡೋಣ ಅಂತ ಇಬ್ಬರೂ ನಿರ್ಧಾರ ಮಾಡಿದರು. ಸರಿ, ಮನೆ ಮುಂದೆ ‘ಪಿಜಿ ವ್ಯವಸ್ಥೆ ಇದೆ’ ಅಂತ ಬೋರ್ಡ್ ಹಾಕಿದರು. ಕೆಲವೇ ದಿನಗಳಲ್ಲಿ ಖೇಮು ಮನೆ ಹುಡುಗಿಯರಿಂದ ತುಂಬಿಹೋಯಿತು. ಅವರೆಲ್ಲರೂ ಅಲ್ಲಿಯೇ ಸಮೀಪದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯರು. ಹಾಗಾಗಿ ಅವರು ತೀರಾ ಅಮಾಯಕರೇನಲ್ಲ, ಒಂದಷ್ಟು ತರಲೆ ತುಂಟಾಟ ಗಲಾಟೆ ಎಲ್ಲವೂ ಮನೆಯಲ್ಲಿ ಇತ್ತು. ಆದರೆ ಅದರಿಂದ ಯಾರಿಗೂ ತೊಂದರೆ ಆಗುತ್ತಿರಲಿಲ್ಲ.

ಹಾಗಾಗಿ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿತ್ತು. ಆದರೆ ಒಮ್ಮೆ ಒಂದು ಸಮಸ್ಯೆ ಶುರುವಾಯಿತು.ಮನೆಯ ಬಾತ್‌ರೂಮ್‌ನಲ್ಲಿದ್ದ ದೊಡ್ಡ ಮಿರರ್ ಮೇಲೆ ಲಿಪ್‌ಸ್ಟಿಕ್ ಗುರುತುಗಳು ಕಾಣಿಸಿದವು. ಅಲ್ಲಿ ಏನಾಗುತ್ತಿತ್ತುಎಂದರೆ, ಹುಡುಗಿಯರು ತಮ್ಮ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಮಿರರ್‌ಗೆ ಮುತ್ತು ಕೊಡುವುದರ ಮೂಲಕ ಅದರ ಮೇಲೆ ಲಿಪ್‌ಸ್ಟಿಕ್ ಮಾರ್ಕ್ ಬರುವಂತೆ ಮಾಡುತ್ತಿದ್ದರು. ಖೇಮು “ಯಾರಮ್ಮಾ ಆದು ಲಿಪ್‌ಸ್ಟಿಕ್ ಹಚ್ಚಿ ಕೊಂಡು ಮಿರರ್‌ಗೆ ಮುತ್ತು ಕೊಡ್ತಾ ಇರೋದು?" ಅಂತ ಎಲ್ಲರನ್ನೂ ಕರೆದು ಕೇಳಿದ. ಎಲ್ಲರೂ ನಾವಲ್ಲ ನಾವಲ್ಲ ಅಂದ್ರು. ಆದರೆ ಸಮಸ್ಯೆ ಮಾತ್ರ ಪ್ರತಿದಿನ ಹಾಗೆಯೇ ಮುಂದುವರಿಯಿತು. ಖೇಮುಗೂ ಖೇಮುಶ್ರೀಗೂ ಇದನ್ನು ನೋಡಿ ಸಾಕಾಯಿತು. ಅಲ್ಲದೆ ಖೇಮುಶ್ರೀಗೆ ಅದನ್ನು ಪ್ರತಿದಿನ ಕ್ಲೀನ್ ಮಾಡುವ ಎಕ್ಸ್‌ಟ್ರಾ ಕೆಲಸ ಬೇರೆ. ಸರಿ, ಒಂದು ದಿನ ಎಲ್ಲಾ ಹುಡುಗಿಯರನ್ನೂ ಬಾತ್‌ರೂಮ್‌ಗೆ ಕರೆದ ಖೇಮು.

ಎಲ್ಲರೂ ಬಂದಮೇಲೆ, “ನೋಡ್ರಮ್ಮಾ ದಿನಾ ನೀವು ಹೀಗೆ ಮಾಡುವುದರಿಂದ ಎಷ್ಟು ತೊಂದರೆ ಆಗುತ್ತೆ ಗೊತ್ತಾ, ಅಲ್ಲದೆ ನನ್ನ ಹೆಂಡತಿ ದಿನಾ ಕ್ಲೀನ್ ಮಾಡ್ಬೇಕು ಅದನ್ನ" ಅಂದ. ಅದಕ್ಕೆ ಹುಡುಗಿಯರು “ಅದನ್ನು ಕ್ಲೀನ್ ಮಾಡೋ ದೇನು ಮಹಾಕಷ್ಟ ಬಿಡಿ ಅಂಕಲ್" ಅಂದವು. ಅದಕ್ಕೆ ಖೇಮು “ಹೌದಾ, ಹಾಗಿದ್ರೆ ಅದು ಎಷ್ಟು ಕಷ್ಟ ಅಂತ ಈಗಲೇ ತೋರಿಸ್ತೀನಿ" ಅಂತ‌ ಖೇಮುಶ್ರೀಯನ್ನು ಕರೆದು, “ಈ ಮಿರರ್ ಕ್ಲೀನ್ ಮಾಡಮ್ಮಾ" ಅಂದ.

ಖೇಮುಶ್ರೀ ಒಬಿಡಿಯೆಂಟಾಗಿ ಅಲ್ಲೇ ಇದ್ದ ಉದ್ದನೆ ಬಾತ್‌ರೂಮ್ ಬ್ರಷ್ ತೆಗೆದುಕೊಂಡು ಅದನ್ನು ಪಕ್ಕದ ಇದ್ದಟಾಯ್ಲೆಟ್ ಕಮೋಡ್‌ನಲ್ಲಿ ಅದ್ದಿ ಮಿರರ್ ಅನ್ನು ಕ್ಲೀನ್ ಮಾಡೋಕೆ ಶುರುಮಾಡಿದಳು. ಆವತ್ತೇ ಲಾಸ್ಟು, ಇನ್ಯಾ ವತ್ತೂ ಬಾತ್‌ರೂಮ್ ಮಿರರ್ ಮೇಲೆ ಲಿಪ್ ಸ್ಟಿಕ್ ಮಾರ್ಕುಗಳು ಮೂಡಲಿಲ್ಲ.

ಲೈನ್‌ ಮ್ಯಾನ್

ಮನುಷ್ಯರಿಗೂ ಅಂಗಡಿಯಲ್ಲಿ‌ ಸಿಗುವ ಸಾಮಾನುಗಳಿಗೂ ಇರುವ ವ್ಯತ್ಯಾಸ

ಸಾಮಾನುಗಳಿಗೆ ಎಕ್ಸ್‌ಪೈರಿ ಡೇಟ್ ಮುಂಚೆನೇ ಉಲ್ಲೇಖಿಸಿರುತ್ತೆ

ಮೆಣಸಿನ ಕಾಯಿಯ ರುಚಿಯ ಬಗೆಗಿನ ಅಭಿಪ್ರಾಯ

‘ಖಾರ’ದ ಪ್ರತಿಕ್ರಿಯ

ನೋ ಕಾಮೆಂಟ್ಸ್‌ಗೆ ಕನ್ನಡದಲ್ಲಿ ಏನೆನ್ನಬಹುದು?

‘ಕಾರದ’ ಪ್ರತಿಕ್ರಿಯೆರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕ

‘ಹಾದಿ’ ಮಾನವ

ಬೆಳಗಾವಿಗೆ ಹೊಸ ಹೆಸರಿಡಬೇಕು ಅಂದ್ರೆ ಏನಂತ ಇಡಬಹುದು?

‘ಕುಂದಾ’ಪುರಬರೆದ ಲೇಖನದಲ್ಲಿ ಮಧ್ಯದ ಒಂದು ಪ್ಯಾರಾ ಬೈ ಮಿಸ್ಟೇಕ್ ಎಗರಿ ಹೋದರೆ

ಪ್ಯಾರಾ-ಗಾನ್ಅರಬ್ ದೇಶದಲ್ಲಿರೋ ನಟೋರಿಯಸ್ ಕ್ರಿಮಿನಲ್

‘ಖತಾರ್’ನಾಕ್ಅರ್ಧ ರಾತ್ರಿಯಲ್ಲಿ ಹೆಂಡ್ತಿ ಮಕ್ಕಳನ್ನು ಬಿಟ್ಟು ಹೋದವನು

ಬುದ್ಧಹಾಗೆ ಚಾ ಸಿಕ್ಕರೂ ಹೋಗದೇ ಇರುವವನು ಬುದ್ದು ಹೃದಯದಲ್ಲಿ ಜ್ಞಾನದ ಬೆಳಕು ಇರುವವರನ್ನು ಏನಂತಾರೆ?

‘ಲೈಟ್’ ಹಾರ್ಟೆಡ್ಅರ್ಥ ಕ್ರಾಂತಿ ಸಂಪೂರ್ಣ ಯಶಸ್ವಿ ಆಗದಿದ್ದರೆ ಅದು

ಅರ್ಧ ಕ್ರಾಂತಿ

ಇದನ್ನೂ ಓದಿ: Hari Parak Column: ʼತುಪ್ಪʼ ತಿಂದು ಕೊಬ್ಬು ಜಾಸ್ತಿ ಆದವರು ʼಘೀʼಳಿಡುತ್ತಾರೆ