Rangaswamy Mookanahalli Column: ಯಾವುದು ವಿದ್ಯೆ ? ಮಂಗಳವಾರದ ಬೆಳಗಿನ ಜಿಜ್ಞಾಸೆ !
ಪರೀಕ್ಷೆಗೆ ಮುಂಚೆ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳದೆ ವಿಧಿಯಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಯಾವ ಕೋರ್ಸ್ ತೆಗೆದುಕೊಂಡರೆ ನಮ್ಮ ಮುಂದಿನ ಭವಿಷ್ಯ ಭಧ್ರವಾಗಿರುತ್ತದೆ ಎನ್ನುವ ಅರಿವು ಇಂದಿಗೆ ಸಮಾಜದಲ್ಲಿ ಇಲ್ಲವಾಗಿದೆ. ಅದಕ್ಕೆ ಕಾರಣ ಜಗತ್ತಿನಲ್ಲಿ ಮನೆಮಾಡಿರುವ ಅಸ್ಥಿರತೆ. ಯಾವಾಗ ಬೇಕಾದರೂ ‘ವಲ್ಡ ಆರ್ಡರ್’ ಬದಲಾಗಬಹುದು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ
ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ನಮ್ಮ ಕಾಲ ಮೇಲೆ ಯಾವುದು ನಮ್ಮನ್ನು ನಿಲ್ಲುವಂತೆ ಮಾಡುತ್ತದೆ ಅದೇ ವಿದ್ಯೆ. ಅಂದರೆ ಯಾವುದರ ಮೂಲಕ ನಾವು ಬದುಕನ್ನು ಕಟ್ಟಿಕೊಳ್ಳುತ್ತೇವೆ, ಯಾವುದು ನಮ್ಮನ್ನು ಸ್ವಾವ ಲಂಬಿ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ ಅದನ್ನು ನಾವು ವಿದ್ಯೆ ಎನ್ನಬಹುದು.
ಇದು ಪರೀಕ್ಷೆಯ ಸಮಯ. ಹಿಂದೆ ಏಪ್ರಿಲ್ ಕೊನೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಗಳು ಈಗ ಫೆಬ್ರವರಿ, ಮಾರ್ಚ್ ತಿಂಗಳಿಗೆ ಬಂದು ನಿಂತಿವೆ. ಫಲಿತಾಂಶ ಬಂದ ನಂತರ ಮುಂದೇನು? ಯಾವ ಕಾಲೇಜು, ಯಾವ ಕೋರ್ಸ್? ಎಂದು ಚಿಂತಿಸುತ್ತಿದ್ದ ಸಮಯ ಬದಲಾಗಿದೆ.
ಪರೀಕ್ಷೆಗೆ ಮುಂಚೆ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳದೆ ವಿಧಿಯಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಯಾವ ಕೋರ್ಸ್ ತೆಗೆದುಕೊಂಡರೆ ನಮ್ಮ ಮುಂದಿನ ಭವಿಷ್ಯ ಭಧ್ರವಾಗಿರುತ್ತದೆ ಎನ್ನುವ ಅರಿವು ಇಂದಿಗೆ ಸಮಾಜದಲ್ಲಿ ಇಲ್ಲವಾಗಿದೆ. ಅದಕ್ಕೆ ಕಾರಣ ಜಗತ್ತಿನಲ್ಲಿ ಮನೆಮಾಡಿರುವ ಅಸ್ಥಿರತೆ. ಯಾವಾಗ ಬೇಕಾದರೂ ‘ವಲ್ಡ ಆರ್ಡರ್’ ಬದಲಾಗಬಹುದು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ.
ಇಂತಹ ಸಮಯದಲ್ಲಿ ನಮ್ಮ ಮುಂದೆ ಬಂದು ನಿಲ್ಲುವ ಪ್ರಶ್ನೆ ಯಾವುದು ವಿದ್ಯೆ? ಅಂಕಗಳಿಗೆ, ಉತ್ತಮ ಗ್ರೇಡ್ ನಮ್ಮ ಭವಿಷ್ಯವನ್ನು ನಿರ್ಧರಿಸಬಲ್ಲದೆ? ನಮ್ಮ ಕಾಲ ಮೇಲೆ ಯಾವುದು ನಮ್ಮನ್ನು ನಿಲ್ಲುವಂತೆ ಮಾಡುತ್ತದೆ ಅದೇ ವಿದ್ಯೆ. ಅಂದರೆ ಯಾವುದರ ಮೂಲಕ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ, ಯಾವುದು ನಮ್ಮನ್ನು ಇತರರ ಮುಂದೆ ದೇಹಿ ಎಂದು ಕೈಚಾಚದಂತೆ ಸ್ವಾವ ಲಂಬಿ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ ಅದನ್ನು ನಾವು ವಿದ್ಯೆ ಎನ್ನಬ ಹುದು.
ಇದನ್ನೂ ಓದಿ: Rangaswamy Mookanahalli Column: ಅಕ್ರಮ ವಲಸೆ ಹಿಂದಿನ ದಾರುಣ ಕಥೆಗಳು ನೂರು !
ಉದಾಹರಣೆ ನೋಡೋಣ, ನಮ್ಮ ಮೈಸೂರಿನ ಅರುಣ್ ಯೋಗಿರಾಜ್ ಎಂಬಿಎ ಪದವಿಯನ್ನು ಪಡೆದವರು, ಕೆತ್ತನೆಯನ್ನು ಪೂರ್ಣ ವೃತ್ತಿಯನ್ನಾಗಿ ಆಯ್ದುಕೊಳ್ಳುವ ಮುಂಚೆ ಖಾಸಗಿ ಸಂಸ್ಥೆ ಯಲ್ಲಿ ದುಡಿದವರು. ಆದರೆ ಇಂದು ಅವರಿಗೆ ವಿಶ್ವಮಟ್ಟದ ಪ್ರಸಿದ್ಧಿ ತಂದುಕೊಟ್ಟದ್ದು ಯಾವುದು? ಅದು ಅವರ ಕುಲ ಕಸುಬು.ಬ್ರಿಟಿಷರು ಭಾರತಕ್ಕೆ ಬರುವ ಮುನ್ನ ನಮ್ಮಲ್ಲಿ ತಲೆತಲಾಂತರದಿಂದ ಬಂದ ವೃತ್ತಿಯನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ಮಾಡಿಕೊಂಡು ಬರುತ್ತಿದ್ದೆವು.
ಸಮಾಜದಲ್ಲಿ ಸಾಮರಸ್ಯವಿತ್ತು. ಜನರು ಮಾಡುವ ಕೆಲಸದಲ್ಲಿ ನಿಪುಣತೆ ಇತ್ತು. ಬೇಕೋ ಬೇಡವೋ ಮನೆಯ ವಾತಾವರಣ, ವಂಶವಾಹಿನಿಗಳ ಕೊಡುಗೆಯ ಕಾರಣ ಕೆಲಸದಲ್ಲಿ ಆ ಮಟ್ಟದ ವೃತ್ತಿ ಪರತೆ, ನೈಪುಣ್ಯತೆ ಕಾಣಲು ಸಿಗುತ್ತಿತ್ತು. ಒಂದು ತಲೆಯಿಂದ ಇನ್ನೊಂದು ತಲೆಮಾರಿಗೆ ಮನೆಯ ಹಿರಿಯರಾದವರು ಪ್ರೀತಿ ಮತ್ತು ಶ್ರದ್ಧೆಯಿಂದ ಕೆಲಸವನ್ನು ವರ್ಗಾಯಿಸುತ್ತಿದ್ದ ಕಾರಣ ಕಿರಿಯರು ಅದನ್ನು ಕಲಿಯುತ್ತಿದ್ದರು. ಈ ಕಾರಣ ಕೆಲಸದಲ್ಲಿ ಒತ್ತಡ, ಸ್ಪರ್ಧೆ ಇರುತ್ತಿರಲಿಲ್ಲ.
ಸಹಜವಾಗಿಯೇ ಆರೋಗ್ಯ ಚನ್ನಾಗಿರುತಿತ್ತು. ಬಿಪಿ, ಶುಗರ್‌ಗಳನ್ನು ನಿಯಂತ್ರಣದಲ್ಲಿಡಲು ಯಾವು ದೇ ಮಾತ್ರೆ ಬೇಕಿರಲಿಲ್ಲ. ಏಕೆಂದರೆ ಈ ತರಹದ ಖಾಯಿಲೆಗಳು ಇದ್ದದು ಬ್ರಿಟಿಷರಿಗೆ ಮಾತ್ರ ಎನ್ನುವ ನಂಬಿಕೆ ನಮ್ಮ ಸಮಾಜದಲ್ಲಿತ್ತು. ಬಹುತೇಕ ಅದು ನಿಜವೂ ಆಗಿತ್ತು. ದೈಹಿಕ ಶ್ರಮ ವಹಿಸವರಿಗೆ ಅಂತಹ ಖಾಯಿಲೆಗಳು ಬರುತ್ತಿದ್ದವು.
ಮಾನಸಿಕ ಒತ್ತಡ ಇದನ್ನು ಇನ್ನಷ್ಟು ಹೆಚ್ಚು ಮಾಡುತ್ತಿತ್ತು. ಅಂದಿನ ಸಮಾಜದಲ್ಲಿ ಭಾರತೀಯ ರಲ್ಲಿದ್ದ ಈ ಮಟ್ಟದ ನೆಮ್ಮದಿಯ ಬದುಕನ್ನು ಕಂಡು ಬ್ರಿಟಿಷರಿಗೆ ತಲೆ ಕೆಟ್ಟು ಹೋಗುತ್ತದೆ. ಹೀಗೆ ಒಂದು ಹಳ್ಳಿ, ಒಂದು ಸಮುದಾಯ ಬದುಕಲು ಬೇಕಾದ ಎಲ್ಲ ಎಕೋ ಸಿಸ್ಟಮ್ ಕಟ್ಟಿಕೊಂಡು ನೆಮ್ಮದಿಯಾಗಿದ್ದ ಜನರನ್ನು ಕಂಡು ತಾವೇ ಶ್ರೇಷ್ಠ ಎನ್ನುವ ಅಹಮ್ಮಿನ ಬ್ರಿಟಿಷರಿಗೆ ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ.
ವ್ಯವಸ್ಥಿತವಾಗಿ ನಮ್ಮ ಸಮಾಜವನ್ನು, ನಮ್ಮ ವ್ಯವಸ್ಥೆಯನ್ನು ಒಡೆಯಲು ಶುರು ಮಾಡುತ್ತಾರೆ. ಅದೇಕೆ ಬಡಗಿ ಮಾತ್ರ ಮರದ ಕೆಲಸ ಮಾಡಬೇಕು? ಅದೇಕೆ ಚಮ್ಮಾರ ಮಾತ್ರ ಚಪ್ಪಲಿ ಹೊಲಿಯ ಬೇಕು? ಅದೇಕೆ ಪುರೋಹಿತ ಮಾತ್ರ ಪೂಜೆ ಮಾಡಬೇಕು? ಹೀಗೆ ಎಲ್ಲದಕ್ಕೂ ವಿತಂಡ ವಾದವನ್ನು, ನಿರೀಶ್ವರ ವಾದವನ್ನು ಬಿತ್ತಲು ಶುರು ಮಾಡಿದರು. ಇದು ಹೇಗಾಯ್ತು ಗೊತ್ತಾ? ಕೋಗಿಲೆಯೇ ಏಕೆ ಹಾಡಬೇಕು? ಅದೇನು ಹಾಡಲು ಪೆಟೆಂಟ್ ಪಡೆದಿದೆಯೇ? ಅದೇಕೆ ನವಿಲು ಮಾತ್ರ ನೃತ್ಯ ಮಾಡ ಬೇಕು? ನೃತ್ಯದ ಹಕ್ಕು ಅದಕ್ಕೆ ಮಾತ್ರ ಸೀಮಿತವೇ? ಅದೇಕೆ ಮಂಗ ಮಾತ್ರ ಮರದಿಂದ ಮರಕ್ಕೆ ಜಿಗಿಯಬೇಕು? ಆನೆಯೇಕೆ ಜಿಗಿಯಬಾರದು? ಜಿಂಕೆ, ಚಿರತೆ ಮಾತ್ರ ಏಕೆ ವೇಗವಾಗಿ ಓಡಬೇಕು? ಕರಡಿಯೂ ಪ್ರಯತ್ನಪಟ್ಟರೆ ಅವಕ್ಕಿಂತ ಹೆಚ್ಚು ವೇಗವಾಗಿ ಓಡಲು ಸಾಧ್ಯವಿಲ್ಲವೇ? ಇಂತಹ ಅಪ್ರಬುದ್ಧ ಚಿಂತನೆಗಳನ್ನು ಸಮಾಜದಲ್ಲಿ ಹರಡುವುದರ ಮೂಲಕ ಕಸುಬುಗಳಲ್ಲಿ ಜಾತಿಯನ್ನು, ಅದರಲ್ಲಿ ಶ್ರೇಷ್ಟ ಮತ್ತು ನಿಕೃಷ್ಟ ಎನ್ನುವ ಬೇಧವನ್ನು ಹುಟ್ಟುಹಾಕುತ್ತಾರೆ.
ಸಮಾಜದಲ್ಲಿನ ಶಾಂತಿ, ಸಾಮರಸ್ಯವನ್ನು ಕದಡುವುದರಲ್ಲಿ ಗೆಲ್ಲುತ್ತಾರೆ. ಅವರ ಮಂತ್ರ ಬಹಳ ಸಿಂಪಲ್ ‘ಡಿವೈಡ್ ಅಂಡ್ ರೂಲ್’. ಒಟ್ಟಾಗಿರುವ ಸಮಾಜದಿಂದ ಅವರ ಕಾಳು ಬೇಯುವುದಿಲ್ಲ ಎನ್ನುವುದನ್ನು ಅರಿತುಕೊಂಡರು. ಹೀಗಾಗಿ ಅವರು ನಮ್ಮನ್ನಾಳಲು ಸಾಧ್ಯವಾಯ್ತು. ನಾವು ಅವರು ತೇಲಿಬಿಟ್ಟ ನರೇಟಿವ್ ಒಪ್ಪಿಕೊಂಡೆವು. ಹೀಗಾಗಿ ನಮ್ಮ ಸಮಾಜ ಇಂದಿನ ಮಟ್ಟಕ್ಕೆ ಬಂದು ನಿಂತಿ ದೆ.
ಅತ್ತ ಪೂರ್ಣ ಪಾಶ್ಚಾತ್ಯ ಬದುಕನ್ನು ಅಪ್ಪಿಕೊಳ್ಳಲು ಆಗದೆ, ಇತ್ತ ಭಾರತೀಯತೆಯನ್ನು ಕೂಡ ಉಳಿಸಿಕೊಳ್ಳಲಾಗದ ಅಂತಂತ್ರ ಸ್ಥಿತಿ ನಮ್ಮದಾಗಿದೆ. ಈಗಲೂ ಕಾಲ ಮಿಂಚಿಲ್ಲ. ಬದಾಲಾವಣೆ ಮಾಡಿಕೊಳ್ಳುವುದು ನಮ್ಮ ಕೈಲಿದೆ. ಕಸುಬಿಗೆ ತಕ್ಕಂತೆ ಆ ಮನೆತನವನ್ನು ಗುರುತಿಸಲಾಗುತ್ತಿತ್ತು. ಮನೆತನಕ್ಕೆ ಆ ಕಸುಬಿನ ಹೆಸರು ಹಿಂದೆಯೋ ಮುಂದೆಯೋ ಸೇರಿಕೊಳ್ಳುತ್ತಿತ್ತು. ಸಾವಿರಾರು ವರ್ಷ ಗಳಿಂದ ಬಂದ ಈ ವ್ಯವಸ್ಥೆಯಲ್ಲಿ ಶಾಂತಿ ಇತ್ತು. ದುಗುಡಕ್ಕೆ, ಒತ್ತಡಕ್ಕೆ ಜಾಗವಿರಲಿಲ್ಲ.
ಯಾವಾಗ ಸಮಾಜದಲ್ಲಿ ವಿತಂಡ ವಾದವನ್ನು ಬಿತ್ತಲಾಯಿತೋ ಆಗ ಸಮಾಜ ಬದಲಾಯ್ತು. ಕಸುಬು ಜಾತಿಯ ರೂಪವನ್ನು, ಅದರಲ್ಲಿ ಮೇಲುಕೀಳುಗಳ ಆಟವನ್ನು ಪಡೆದುಕೊಂಡವು. ನಿಧಾನವಾಗಿ ನಾವು ಇಂದು ಕಾಣುತ್ತಿರುವ ಸಮಾಜವಾಗಿ ನಿಂತುಬಿಟ್ಟೆವು. ಇದು ತಪ್ಪು ಎಂದು ಹೇಳುವ ಕ್ಷಮತೆಯನ್ನು ನಾವು ಬೆಳಸಿಕೊಳ್ಳುತ್ತಿಲ್ಲ.
ಪುಟಾಣಿ ಮಗು, ಐದಾರು ವರ್ಷದ ಮಗು ಲತಾ ಮಂಗೇಶ್ಕರ್ ಮೀರಿಸುವಂತೆ ಹಾಡುತ್ತದೆ, ಆ ಮಗುವಿನಲ್ಲಿ ಆ ದೈವತ್ವ ಎಲ್ಲಿಂದ ಬಂತು? ಬ್ರಿಟಿಷರು ವಂಶಪಾರಂಪರಿಕವಾಗಿ ಬರುವುದು ಖಾಯಿಲೆ ಮಾತ್ರ ಎಂದು ಬುರುಡೆ ಬಿಟ್ಟರು, ನಾವು ಅದನ್ನು ನಂಬಿದೆವು. ಇಲ್ಲ ಸ್ವಾಮಿ ಅದು ಸುಳ್ಳು, ವಂಶಪಾರಂಪರಿಕವಾಗಿ ಮನೆಯಲ್ಲಿ ಇದ್ದ ಕಲೆ, ಸಾಹಿತ್ಯ, ಸಂಗೀತ ಅಥವಾ ಇನ್ನೇನೋ ಅದು ನಮ್ಮಲ್ಲಿ ಬಂದಿರುತ್ತದೆ.
ಆದರೆ ನಾವು ಅದನ್ನು ಗಮನಿಸದೆ ಎಂಬಿಎ ಮಾಡುವ ಆತುರಕ್ಕೆ ಬೀಳುತ್ತೇವೆ. ಎಂಬಿಎ ಪದವಿ ಪಡೆಯಬಾರದು ಎಂದಲ್ಲ. ನಮ್ಮ ಒಳಿತಿಗೆ, ಅಭಿವೃದ್ಧಿಗೆ ಮಾಡುವ ಕಲಿಕೆ ತಪ್ಪಲ್ಲ. ಎಂಬಿಎ ಅಂತಲ್ಲ ಯಾವುದೇ ಕೋರ್ಸ್ ಮಾಡುವ ಮುನ್ನ ಅದರ ಹಿಂದೆಮುಂದೆ ಅರಿತು ಮಾಡಬೇಕು ಎಂದು ಹೇಳುವುದು ಉದ್ದೇಶ. ತಪ್ಪು ಆಯ್ಕೆ ಅಥವಾ ಕೆಟ್ಟ ಆಯ್ಕೆ ನಮ್ಮ ಕಲಿಕೆಯ ಬದುಕಿನ ಮೂರ್ನಾಲ್ಕು ವರ್ಷಗಳನ್ನು ತಿನ್ನುವುದಲ್ಲದೆ ನಂತರದ ಬದುಕಿನ ನೆಮ್ಮದಿಯನ್ನು ಸಹ ಕಸಿದು ಕೊಳ್ಳುತ್ತದೆ.
ಪೋಷಕರ ಹಣ ಪೋಲಾಗುತ್ತದೆ ಜತೆಗೆ ಭವಿಷ್ಯದ ದುಡಿತಕ್ಕೂ ಕತ್ತರಿ ಬೀಳುತ್ತದೆ. ಹೀಗಾಗಿ ಸ್ವಲ್ಪ ಎಚ್ಚರವಿರಲಿ. ಒಂದು ಗೆರೆ ಎಳೆದು ಅಲ್ಲಿ ಹುಲಿ, ಸಿಂಹ, ಆನೆ, ಜಿಂಕೆ, ಕರಡಿ ಹೀಗೆ ಎಲ್ಲ ಪ್ರಾಣಿ ಗಳನ್ನೂ ಸಾಲಿನಲ್ಲಿ ನಿಲ್ಲಿಸಿ ವಿಷಲ್ ಹೊಡೆದು ಸ್ಟಾರ್ಟ್, ಓಡಲು ಶುರು ಮಾಡಿ ಎಂದರೆ ಹೇಗಿ ರುತ್ತೆ? ಇವತ್ತಿನ ನಮ್ಮ ಸಮಾಜ ಮಾಡುತ್ತಿರುವುದು ಇದನ್ನೇ!
ನಮ್ಮ ಶಿಕ್ಷಣ ವ್ಯವಸ್ಥೆ ಇರುವುದು ಹೀಗೆ. ಓಟದಲ್ಲಿ ಸೋತ ಆನೆಯ ಸಂಕಟವನ್ನು ಬಣ್ಣಿಸುವುದು ಹೇಗೆ? ಅದರ ಶಕ್ತಿಯ ಅರಿವು ಮೂಡಿಸುವುದರ ಬದಲು ಓಟದಲ್ಲಿ ನೀನು ನಪಾಸು ಎಂದರೆ ಅದು ಸಮ್ಮತವೆ? ೨೦೦೮ರಲ್ಲಿ ಅರುಣ್ ಯೋಗಿರಾಜ್ ತಮ್ಮ ಕೆಲಸಕ್ಕೆ ಗುಡ್ ಬಾಯ್ ಹೇಳಿ ಮೂಲವೃತ್ತಿ ಶಿಲ್ಪಿಯಾಗದಿದ್ದರೆ ಇಂದಿನ ಈ ದಿನವನ್ನು ಅವರು ಕಾಣಲು ಸಾಧ್ಯವಾಗುತ್ತಿತ್ತೇ? ನಮ್ಮ ಶಕ್ತಿ ಯೇನು? ನಮ್ಮ ಮೂಲ ಕಸುಬು ಯಾವುದು ಎನ್ನುವುದನ್ನು ನಾವು ಇಂದು ಮರೆತಿದ್ದೇವೆ.
ವಾರ್ಷಿಕ ಮೂರು ಅಥವಾ ನಾಲ್ಕು ಲಕ್ಷ ವರಮಾನ ಇರುವ ಜನರು ಕೂಡ ತಮ್ಮ ಮಕ್ಕಳನ್ನು ಕಣ್ಣು ಮುಚ್ಚಿ ವಾರ್ಷಿಕ ಎರಡು ಅಥವಾ ಮೂರು ಲಕ್ಷ ಸುರಿದು ಕಾಲೇಜಿಗೆ ಸೇರಿಸುತ್ತಿದ್ದಾರೆ. ಶಿಕ್ಷಣ ವ್ಯಾಪಾರವಾಗಿಬಿಟ್ಟಿದೆ. ಹೋಗಲಿ ಆ ಮಗುವಿಗೆ ಈ ಕೋರ್ಸ್ ಏಕೆ ಸೇರಿದ್ದೇನೆ ಎನ್ನುವ ಕನಿಷ್ಠ ಪರಿಜ್ಞಾನವಿದೆಯೇ? ಅದೂ ಇಲ್ಲ. ‘ನನ್ನ ಫ್ರೆಂಡ್ ಸೇರಿದ್ದಾನೆ ಅಂಕಲ್ ಅದಕ್ಕೆ ಸೇರಿದೆ’ ಎನ್ನುವ ಸಿದ್ಧ ಉತ್ತರ ಸಿಗುತ್ತದೆ.
ಮೊನ್ನೆ ನಾನು ರಮ್ಯ ಒಂದು ಕಾಲೇಜಿಗೆ ಹೋಗಿದ್ದೆವು. ಒಬ್ಬ ಆಟೋ ಡ್ರೈವರ್ ತಮ್ಮ ಮಗಳ ಫೀಸ್ ಕಟ್ಟಲು ಬಂದಿದ್ದರು. ಮಗಳಿಗೆ ತಾನು ಬಂದಿರುವ ವಿಷಯ ತಿಳಿಸಿದ್ದಾರೆ ಅನ್ನಿಸುತ್ತದೆ, ಒಂದೆರೆಡು ನಿಮಿಷದಲ್ಲಿ ಒಳ್ಳೆ ಮಾಡಲ್ ತರಹ ಬಟ್ಟೆ ಧರಿಸಿದ್ದ 17/18 ರ ಪೋರಿಯೊಬ್ಬಳು ಬಂದಳು. ಬಂದವಳೇ ಅವರಪ್ಪನನ್ನು ಕೈ ಹಿಡಿದು ದರದರ ಹೊರಕ್ಕೆ ಎಳೆದೊಯ್ದಳು. ಅಪ್ಪ ಖಾಕಿ ಡ್ರೆಸ್‌ನಲ್ಲಿ ಬಂದಿರುವುದು ಅವಳಿಗೆ ಡೈಜೆ ಆಗಿರಲಿಲ್ಲ ಎನ್ನುವುದು ಬೇಡವೆಂದರೂ ಅವಳಾಡು ತ್ತಿದ್ದ ಮಾತಿನಿಂದ ತಿಳಿಯಿತು.
ಯಾವುದು ಶಿಕ್ಷಣ? ನಿಮಗೆ ಗೊತ್ತಿರಲಿ, ಇಂದಿಗೆ ಜರ್ಮನಿ ದೇಶದಲ್ಲಿ ಪದವಿ ಓದಬೇಕು ಎನ್ನುವ ಕಡ್ಡಾಯವಿಲ್ಲ. ಜನಸಾಮಾನ್ಯ ತನ್ನ ಅಭಿರುಚಿಗೆ ತಕ್ಕಂತೆ ಇಷ್ಟವಾದ ಕೋರ್ಸ್, ಜಾಬ್ ಓರಿ ಯೆಂಟೆಡ್ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾನೆ. ಒಂದೆರೆಡು ವರ್ಷ ಅದನ್ನು ಕಲಿಯುತ್ತಾನೆ ಅಷ್ಟೇ, ನಂತರದ್ದು ದುಡಿಮೆಯ ಜತೆಗೆ ಕಲಿಕೆ. ಪದವಿ ಪಡೆದ ಮಾತ್ರಕ್ಕೆ ಇಲ್ಲಿ ಉನ್ನತ ಹುದ್ದೆ ಸಿಕ್ಕುವುದಿಲ್ಲ.
ನಿಮ್ಮ ಅನುಭವ ಮತ್ತು ನೈಪುಣ್ಯತೆಗೆ ಇಲ್ಲಿ ಹೆಚ್ಚು ಮಾನ್ಯತೆ. ಇದನ್ನೇ ಅಲ್ಲವೇ ನಾವು ಭಾರತ ದಲ್ಲಿ ಶತಮಾನಗಳಿಂದ ಮಾಡಿಕೊಂಡು ಬಂದದ್ದು. ಇಂದಿಗೆ ಯಾವುದೊ ಅಚಾನಕ್ಕಾಗಿ ಬದಲಾ ಗುವುದಿಲ್ಲ. ಬದಲಾವಣೆಗೆ ನಾವು ಪ್ರಯತ್ನ ಶುರು ಮಾಡಬೇಕು. ನೀರಿಳಿಯದ ಗಂಟಲಿನಲ್ಲಿ ಕಡು ಬು ತುರುಕುವ ಪ್ರಯತ್ನ ಬಿಡಬೇಕು. ಮಕ್ಕಳ ಬೇಕು-ಬೇಡ, ಅವರ ಇಷ್ಟ-ಅನಿಷ್ಟಗಳ ಲೆಕ್ಕಾ ಚಾರ ಹಾಕಿ ಅವರ ಮುಂದಿನ ಭವಿಷ್ಯದ ಬಗ್ಗೆ ನಿರ್ಧಾರ ಮಾಡಬೇಕು. ಇಲ್ಲದಿದ್ದರೆ ಕಾಡಿನ ಎಲ್ಲ ಪ್ರಾಣಿ ಗಳನ್ನು ಸಾಲಿನಲ್ಲಿ ನಿಲ್ಲಿಸಿ, ಒನ್, ಟು , ಥ್ರೀ .. ಗೋ ಎಂದು ಓಟಕ್ಕೆ ಹಚ್ಚಿದಂತೆ ಆಗುತ್ತದೆಯೇ ವಿನಃ ಅದರಿಂದ ಯಾವುದೇ ಪ್ರಯೋಜವಿಲ್ಲ.
ಕೊನೆ ಮಾತು: ಮೇಲಿನ ಎಲ್ಲ ಮಾತುಗಳ ಅರ್ಥ ಬಹಳ ಸರಳ. ಯಾವುದು ನಮ್ಮ ಗುಣಕ್ಕೆ, ವ್ಯಕ್ತಿ ತ್ವಕ್ಕೆ ಸರಳವಾಗಿ, ಸಹಜವಾಗಿ ಒಗ್ಗುತ್ತದೆ ಅದನ್ನು ನಾವು ಮಾಡಿಕೊಂಡು ಹೋಗಬೇಕು. ಕೆಲವರಿಗೆ ವಿಜ್ಞಾನ, ಗಣಿತ ಬಹಳ ಸುಲಭ. ಕೆಲವರಿಗೆ ಅದು ಕಬ್ಬಿಣದ ಕಡಲೆ. ಹಾಗೆಂದ ಮಾತ್ರಕ್ಕೆ ಗಣಿತ, ವಿಜ್ಞಾನ ಕಲಿಯದವರಿಗೆ ಬದುಕಿಲ್ಲ, ಭವಿಷ್ಯವಿಲ್ಲ ಎಂದರ್ಥವಲ್ಲ. ಈ ಸೃಷ್ಟಿ ಎಲ್ಲರಿಗೂ ಒಂದು ವಿಶೇಷ ಶಕ್ತಿ ಕೊಟ್ಟು ಕಳುಹಿಸಿರುತ್ತದೆ. ನಾವ್ಯಾರು? ನಮ್ಮ ಶಕ್ತಿಯೇನು? ಈ ಬದುಕಿನಿಂದ ನಮ್ಮ ನಿರೀಕ್ಷೆಗಳೇನು? ನಾವು ಮರಳಿ ಈ ಸಮಾಜಕ್ಕೆ ಏನು ಕೊಡಬವು? ಎನ್ನುವುದನ್ನು ಅರಿತು ಕೊಂಡರೆ ಅದು ನಿಜವಾದ ವಿದ್ಯೆ.