ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vote Chor Gaddi Chod: ಚಿಂತಾಮಣಿಯಲ್ಲಿ ಕಾಂಗ್ರೆಸ್ ಪಕ್ಷದಿಂದ “ವೋಟ್ ಚೋರ್ ಗದ್ದಿ ಚೋಡ್”ಪ್ರತಿಭಟನೆ ಸಹಿ ಸಂಗ್ರಹಣೆ

ಚುನಾವಣೆಯ ಸಮರ್ಪಕವಾಗಿ ನಡೆದಿದ್ದರೆ, ದೇಶದಲ್ಲಿ ಇಂದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ರಾಹುಲ್ ಗಾಂಧಿರವರ ದೇಶದ ಪ್ರಧಾನಿಯಾಗಿರುತ್ತಿದ್ದರೆಂದ ಅವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದು ಅಭಿವೃದ್ದಿ ಮಾಡಲಾಗುತ್ತಿದ್ದು, ನಮ್ಮ ವಿರೋಧ ಪಕ್ಷದವರು ಏನು ಅಭಿವೃದ್ದಿಯಾಗುತ್ತಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ

ಚಿಂತಾಮಣಿಯಲ್ಲಿ ಕಾಂಗ್ರೆಸ್ ಪಕ್ಷದಿಂದ “ವೋಟ್ ಚೋರ್ ಗದ್ದಿ ಚೋಡ್”ಪ್ರತಿಭಟನೆ

-

Ashok Nayak Ashok Nayak Oct 27, 2025 12:21 AM

ಬಿಜೆಪಿ ವೋಟ್ ಚೋರ್ ವಿರುದ್ದ ಸಚಿವ ಡಾ.ಎಂಸಿ ಸುಧಾಕರ್ ಹಾಗೂ ಎಐಸಿಸಿ ಪ್ರ. ಕಾರ್ಯದರ್ಶಿ ಅಭಿಷೇಕ್ ದತ್ ಆಕ್ರೋಶ

ಚಿಂತಾಮಣಿ: ಚಿಂತಾಮಣಿ ನಗರದಲ್ಲಿರುವ ಎಂ.ಸಿ ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ “ವೋಟ್ ಚೋರ್ ಗದ್ದಿ ಚೋಡ್”(Vote Chor Gaddi Chod) ಎಂಬ ಘೋಷಣೆಯಡಿ ಬಿಜೆಪಿ ಪಕ್ಷದ ಕರಾಳ ನಡೆ, ಸಂವಿ ಧಾನ ವಿರೋಧಿ ಮತಗಳ್ಳತನದ ವಿರುದ್ಧ ಭಾರೀ ಪ್ರತಿಭಟನೆ ಹಾಗೂ ಸಹಿ ಸಂಗ್ರಹಣಾ ಅಭಿಯಾನವು ಭಾನುವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ತ್( AICC General Secretary Abhishek Dutt) ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್(Higher Education Minister Dr. M.C. Sudhakar) ರವರು ಭಾಗವಹಿಸಿ, ಸಂವಿಧಾನ ವಿರೋಧಿ ಕ್ರಮಗಳನ್ನು ಖಂಡಿಸಿ ಸಹಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: Chinthamani News: ಕೈವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ಅಕ್ರಮ ಮತದಾರರು ಸೃಷ್ಟಿ

ಕಾರ್ಯಕ್ರಮವನ್ನುದ್ದೆಶಿಸಿ ಅಭಿಷೇಕ್ ದತ್ತ್ ಮಾತನಾಡಿ, ಜನತೆಯ ವಿಶ್ವಾಸದ ಮತವನ್ನು ಕದ್ದುಕೊಂಡು ಅಧಿಕಾರಕ್ಕೆ ಬರುವ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವದ ಆತ್ಮವನ್ನೇ ಹಾಳು ಮಾಡುತ್ತಿ ದೆ. ಮತದ ಮೌಲ್ಯವನ್ನು ಉಳಿಸುವ ಹೋರಾಟದಲ್ಲಿ ಜನತೆ ಕಾಂಗ್ರೆಸ್‌ನೊಂದಿಗೆ ನಿಲ್ಲಬೇಕು ಎಂದು ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರೆಂಟಿ ಯೋಜನೆ ಗಳಾದ ಉಚಿತ ಸಾರಿಗೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಯೋಜನೆ ಗಳು 1 ಕೋಟಿಗೂ ಹೆಚ್ಚಿನ ಸಂಖ್ಯೆಗೆ ಜನರಿಗೆ ಸಮರ್ಪಕವಾಗಿ ತಲುಪುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಇಡೀ ದೇಶವೇ ನೋಡಿದೆ ಎಂದರು. 

ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ಸಂವಿಧಾನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಜನರ ಹಕ್ಕು, ಜನರ ತೀರ್ಮಾನವನ್ನು ಕದಿಯುವ ಪ್ರಯತ್ನಗಳಿಗೆ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ, ಮತಗಳ್ಳತನ ಮಾಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ವಾಮಾ ಮಾರ್ಗದ ಮೂಲಕ ಆಧಿಕಾರಕ್ಕೆ ಬಂದಿದ್ದಾರೆ. ಚುನಾವಣೆಯ ಸಮರ್ಪಕವಾಗಿ ನಡೆದಿದ್ದರೆ, ದೇಶದಲ್ಲಿ ಇಂದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ರಾಹುಲ್ ಗಾಂಧಿರವರ ದೇಶದ ಪ್ರಧಾನಿಯಾಗಿರುತ್ತಿದ್ದರೆಂದ ಅವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದು ಅಭಿವೃದ್ದಿ ಮಾಡಲಾಗುತ್ತಿದ್ದು, ನಮ್ಮ ವಿರೋಧ ಪಕ್ಷದವರು ಏನು ಅಭಿವೃದ್ದಿಯಾಗುತ್ತಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ, ಇಂತಹ ಆಪಪ್ರಚಾರಗಳಿಗೆಲ್ಲಾ ನಮ್ಮ ಕಾರ್ಯಕರ್ತರು ದಾಖಲೆ ಸಮೇತ ತಕ್ಕ ಉತ್ತರಗಳನ್ನು ಕೊಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಸ್ತುವಾರಿ ಕೃಷ್ಣಂರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯ ಶಂಕರ್, ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಧ್ಯರ್ಥಿ ಗೌತಮ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಚಿಂತಾಮಣಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮುರುಗಮಲ್ಲ ಲಕ್ಷ್ಮೀ ನಾರಾಯಣರೆಡ್ಡಿ, ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರಾದ ಪುಟ್ಟುಆಂಜಿನಪ್ಪ, ಎಸ್ಸಿ ಘಟಕದ ಜಿಲ್ಲಾದ್ಯಕ್ಷ ಚಿನ್ನಸಂದ್ರ ನಾರಾಯಣಸ್ವಾಮಿ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಕೋನಪಲ್ಲಿ ಕೊದಂಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಬೇರ ಅಚ್ಚು, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಕಲ್ಯಾಣ್ ರೆಡ್ಡಿ, ನಗರ ಅದ್ಯಕ್ಷ ಸಾಯಿನಾಥ್, ನಗರಸಭೆ ಅಧ್ಯಕ್ಷ ಜಗನ್ನಾಥ್, ಉಪಾದ್ಯಕ್ಷೆ ರಾಣಿಯಮ್ಮ ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು, ತಾಲ್ಲೂಕು ಮಟ್ಟದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಮಹಿಳಾ ಘಟಕದ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಮತ್ತಿತರರು ಉಪಸ್ಥಿತರಿದ್ದರು.