ಏಕಿಂಥ ಮನಸ್ಥಿತಿ?
ಭಾರತೀಯ ಸೈನಿಕರ ವಿಷಯದಲ್ಲಿ ಅವಮಾನಕರವಾಗಿ ಮಾತಾಡಿ ಅವರ ಮನೋಸ್ಥೈರ್ಯ ವನ್ನು ಕುಗ್ಗಿಸಲು ಯತ್ನಿಸಿದ್ದಕ್ಕೆ ರಾಹುಲ್‌ರಿಗೆ ನಮ್ಮ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ಛೀಮಾರಿ ಹಾಕಿದೆ. ಇಷ್ಟಾದರೂ ರಾಹುಲ್ ಮತ್ತು ಅವರ ಅನುಯಾಯಿಗಳು ಸುಧಾರಿಸಿಕೊಳ್ಳುವ ಹಾಗೂ ದೇಶ ಭಕ್ತರಾಗಿ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ.


ಅಭಿಮತ
ಎಚ್.ಆರ್.ಶ್ರೀಪಾದ ಭಾಗಿ
ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ-ನುಡಿಯನ್ನು ನೋಡಿದರೆ, 7 ಶತಮಾನಗಳ ಹಿಂದೆ ದೆಹಲಿಯ ಸುಲ್ತಾನನಾಗಿದ್ದ ಮುಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚುರಾಜನ ನೆನಪು ಪದೇಪದೆ ಬರುತ್ತದೆ.
ಟ್ರಂಪ್ ತಮ್ಮ ದೇಶವನ್ನು ಉದ್ಧಾರ ಮಾಡುವ ಹುಮ್ಮಸ್ಸಿನೊಂದಿಗೆ ದಿನಕ್ಕೊಂದು ನಿರ್ಧಾರವನ್ನು ಪ್ರಕಟಿಸುತ್ತಿದ್ದಾರೆ. ಪ್ರಪಂಚದಲ್ಲಿ ತಾವು ಮತ್ತು ತಮ್ಮ ದೇಶ ಮಾತ್ರವೇ ಸರಿ, ಮಿಕ್ಕವರೆಲ್ಲರೂ ಮುರ್ಖರು. ಈ ಮಿಕ್ಕವರು ತಮ್ಮ ಆದೇಶವನ್ನು ಪಾಲಿಸಬೇಕು ಎಂಬ ಹುಂಬತನವನ್ನು ತೋರು ತ್ತಿದ್ದಾರೆ. ಪ್ರಪಂಚದಲ್ಲಿ ಯಾವ ದೇಶಗಳ ನಡುವೆ ಸಮರ ಶುರುವಾದರೂ, ತಾವೊಬ್ಬರೇ ಪಂಚಾ ಯ್ತಿದಾರರು ಎಂಬ ಸ್ವಘೋಷಿತ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ ಟ್ರಂಪ್!
ಟ್ರಂಪ್ ತಾವು ‘ವಿಶ್ವನಾಯಕ’ ಎನಿಸಿಕೊಳ್ಳಬೇಕೆಂಬ ಹುಕಿಯಲ್ಲಿ ಹೀಗೆಲ್ಲಾ ವಿಚಿತ್ರವಾಗಿ ವರ್ತಿಸು ತ್ತಿರಬಹುದು. ಆದರೆ, ಭಾರತವೆಂಬ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಮುಖ ರಾಜಕೀಯ ಪಕ್ಷವೊಂದರ ನಾಯಕರೂ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಆಗಿರುವ ರಾಹುಲ್ ಗಾಂಧಿಯವರಿಗೆ ಏನಾಗಿದೆ? ದೇಶದ ಒಳಿತಿಗಾಗಿ, ಜನರ ಸುರಕ್ಷತೆಗಾಗಿ ಕೇಂದ್ರ ಸರಕಾರ ಮತ್ತು ಭಾರತದ ಸುರಕ್ಷಾ ಪಡೆಗಳು ಏನು ಮಾಡಿದರೂ ಅದನ್ನು ವಿರೋಧಿಸುವುದನ್ನೇ ತಮ್ಮ ಕಸುಬಾಗಿಸಿಕೊಂಡಿರುವ ರಾಹುಲ್, ಮಾಧ್ಯಮಗಳೊಂದಿಗೆ ಮಾತಾಡುವಾಗ ಮತ್ತು ಪರದೇಶಗಳಿಗೆ ಹೋದಾಗ, ಭಾರತವನ್ನು ಮತ್ತು ಕೇಂದ್ರ ಸರಕಾರವನ್ನು ದೂಷಿಸುವುದರಲ್ಲಿ ಮುಂಚೂಣಿ ಯಲ್ಲಿದ್ದಾರೆ.
ಇದನ್ನೂ ಓದಿ: Roopa Gururaj Column: ಬೇಟೆಗಾರನ ಅಚಲ ವಿಶ್ವಾಸಕ್ಕೆ ಒಲಿದ ಶ್ರೀ ಕೃಷ್ಣ
ಇದು ತರವೇ? ಮತ್ತೊಂದೆಡೆ, ರಾಹುಲರ ಮಾತುಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ, ಅವರಿ ಗಿಂತ ಹಲವು ಹೆಜ್ಜೆ ಮುಂದಿಟ್ಟು ನಮ್ಮ ಶತ್ರುರಾಷ್ಟ್ರವನ್ನು ಬೆಂಬಲಿಸುವ ಅವರದೇ ಪಕ್ಷದ ಒಂದಿಷ್ಟು ರಾಜಕಾರಣಿಗಳಿದ್ದಾರೆ!
ಭಾರತೀಯ ಸೈನಿಕರ ವಿಷಯದಲ್ಲಿ ಅವಮಾನಕರವಾಗಿ ಮಾತಾಡಿ ಅವರ ಮನೋ ಸ್ಥೈರ್ಯ ವನ್ನು ಕುಗ್ಗಿಸಲು ಯತ್ನಿಸಿದ್ದಕ್ಕೆ ರಾಹುಲ್‌ರಿಗೆ ನಮ್ಮ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ಛೀಮಾರಿ ಹಾಕಿದೆ. ಇಷ್ಟಾದರೂ ರಾಹುಲ್ ಮತ್ತು ಅವರ ಅನುಯಾಯಿಗಳು ಸುಧಾರಿಸಿಕೊಳ್ಳುವ ಹಾಗೂ ದೇಶಭಕ್ತರಾಗಿ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ.
‘ಕೇಂದ್ರ ಸರಕಾರವು ಸಂವಿಧಾನವನ್ನು ಅಗೌರವಿ ಸುತ್ತಿದೆ’ ಎಂದು ಪದೇಪದೆ ಹೇಳುತ್ತಿರುವ ರಾಹುಲ್ ಮತ್ತು ಇತರ ರಾಜಕೀಯ ಧುರೀಣರು, ತುರ್ತು ಪರಿಸ್ಥಿತಿಯ ಕಾಲಘಟ್ಟದ ಒಂದಿಷ್ಟು ಘಟನೆಗಳನ್ನು ಅವಲೋಕಿಸಿದರೆ, ಯಾವ ಪಕ್ಷದ ಯಾವ ವ್ಯಕ್ತಿಗಳು ಸಂವಿಧಾನವನ್ನು ಅತಿಹೆಚ್ಚು ದುರುಪಯೋಗಪ ಡಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ!
(ಲೇಖಕರು ಆರ್ಥಿಕ ತಜ್ಞರು)